Tag: ಯುಪಿಎ

  • ಯುಪಿಎ Vs ಎನ್‌ಡಿಎ – ಯಾರ ಅವಧಿಯಲ್ಲಿ ಎಷ್ಟು ಸಾಧನೆ? ಶ್ವೇತ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಖ್ಯಾ ಮಾಹಿತಿಗಳು

    ಯುಪಿಎ Vs ಎನ್‌ಡಿಎ – ಯಾರ ಅವಧಿಯಲ್ಲಿ ಎಷ್ಟು ಸಾಧನೆ? ಶ್ವೇತ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಖ್ಯಾ ಮಾಹಿತಿಗಳು

    ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಸನಿಹದಲ್ಲಿ ಬಿಜೆಪಿ-ಕಾಂಗ್ರೆಸ್ (BJP-Congress) ಮಧ್ಯೆ ತೆರಿಗೆ ವಾರ್ ನಡೆಯುತ್ತಿರುವ ಹೊತ್ತಲ್ಲಿಯೇ ವೈಟ್‌ಪೇಪರ್-ಬ್ಲಾಕ್ ಪೇಪರ್ ಪಾಲಿಟಿಕ್ಸ್ ಕೂಡ ಶುರುವಾಗಿದೆ. ದೇಶದ ಆರ್ಥಿಕತೆ (India Economy) ಕುರಿತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಲೋಕಸಭೆಯಲ್ಲಿ ಶ್ವೇತಪತ್ರ (White Paper) ಮಂಡಿಸಿ ರಾಜಕೀಯವಾಗಿ, ನೀತಿ ನಿರೂಪಣೆ ವಿಚಾರವಾಗಿ ಎನ್‌ಡಿಎ ಸರ್ಕಾರ ಸ್ಥಿರವಾಗಿದೆ. ಆರ್ಥಿಕ ಸ್ಥಿತಿಯ ಬಲವರ್ಧನೆಗಾಗಿ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

    ನಿರ್ಮಲಾ ಸೀತಾರಾಮನ್‌ ಹೇಳಿದ್ದೇನು?
    ವಾಜಪೇಯಿ ಸರ್ಕಾರದ (Atal Bihari Vajpayee) ಉತ್ತಮ ಆರ್ಥಿಕ ನೀತಿಯಿಂದ ಮನಮೋಹನ್‌ ಸಿಂಗ್‌ ಸರ್ಕಾರಕ್ಕೆ (Manmohan Singh) ಆರಂಭದಲ್ಲಿ ಲಾಭವಾಗಿತ್ತು. ಆದರೆ ಯುಪಿಎ ಅವಧಿಯಲ್ಲಿ ಸರ್ಕಾರದ ಖಜಾನೆ ಮತ್ತು ಹಣಕಾಸಿನ ಆದಾಯಕ್ಕೆ ಬೃಹತ್ ನಷ್ಟವನ್ನು ಉಂಟುಮಾಡುವ 15 ಹಗರಣ ನಡೆದಿತ್ತು. ಬ್ಯಾಂಕಿಂಗ್ ಕ್ಷೇತ್ರವನ್ನು ಮನಮೋಹನ್ ಸಿಂಗ್‌‌ ಅವರ ಯುಪಿಎ ಸರ್ಕಾರದ ನಾಶ ಮಾಡಿತ್ತು. ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸಲು ಯುಪಿಎ ಸರ್ಕಾರ ಸೋತಿತ್ತು.  ಇದನ್ನೂ ಓದಿ: ಮತ್ತೆ ಮೋದಿ ಸರ್ಕಾರ; ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166

    2004 ರಲ್ಲಿ ವಾಜಪೇಯಿ ನಿರ್ಗಮಿಸಿದಾಗ ಜಿಡಿಪಿ 8.8% ಇತ್ತು. 2014ರಲ್ಲಿ ಯುಪಿಎ ಸರ್ಕಾರ ಪತನವಾದಾಗಲೂ 8.2% ಇತ್ತು. 10 ವರ್ಷದಲ್ಲಿ ಭಾರತದ ಆರ್ಥಿಕತೆ ಹೆಚ್ಚು ಬೆಳವಣಿಗೆ ಆಗಲಿಲ್ಲ ಎಂಬುದರ ಸಂಕೇತ ಇದು. ದೇಶಕ್ಕೆ ನಾಯಕತ್ವ ಕೊರತೆ ಇತ್ತು. ಇದರಿಂದ ರಕ್ಷಣಾ ಕ್ಷೇತ್ರ ದುರ್ಬಲಗೊಂಡಿತ್ತು.

    ಯುಪಿಎ ವೇಳೆ ಎರಡಂಕಿಗೆ ಏರಿದ್ದ ಹಣದುಬ್ಬರವನ್ನು ಮೋದಿ ಸರ್ಕಾರ 5%-6% ತಂದಿದೆ. ಮೇಕ್ ಇನ್ ಇಂಡಿಯಾ ಮೂಲಕ ಎನ್‌ಡಿಎ ಔದ್ಯಮಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮಾಡಿದೆ. ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರ ನೀಡಿದ ಸವಾಲುಗಳನ್ನು ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ಎದುರಿಸಿದೆ. 2014ರಲ್ಲಿ ಯುಪಿಎ ಅವಧಿ ಮುಗಿಯುವ ಹೊತ್ತಿಗೆ ಆರ್ಥಿಕತೆ ಅಚೇತನ ಸ್ಥಿತಿಯಲ್ಲಿತ್ತು. ಎನ್‌ಡಿಎ ಸರ್ಕಾರದಿಂದ ಕಠಿಣ ಕ್ರಮದಿಂದ ದೇಶದ ಆರ್ಥಿಕತೆ ಚೇತರಿಸಿದೆ.  ಇದನ್ನೂ ಓದಿ: ಈ ಬಾರಿ SSLC, PUC ಪರೀಕ್ಷೆ ವೇಳೆ ಹಿಜಬ್‍ಗೆ ಇರುತ್ತಾ ಅವಕಾಶ?

    ಶ್ವೇತ ಪ್ರತದಲ್ಲಿರುವ ಅಂಕಿ ಸಂಖ್ಯೆಯಲ್ಲಿ ಏನಿದೆ?
    ಹಣದುಬ್ಬರ
    ಯುಪಿಎ – 8.2%
    ಎನ್‌ಡಿಎ -5.0%

    ಬಂಡವಾಳ ವೆಚ್ಚ
    ಯುಪಿಎ – 1.7%
    ಎನ್‌ಡಿಎ – 3.2%

    ಹೆದ್ದಾರಿ ನಿರ್ಮಾಣ – ಪ್ರತಿ ದಿನ/ ಕಿ.ಮೀ
    ಯುಪಿಎ – 12
    ಎನ್‌ಡಿಎ – 28.3

    ಜಾಗತಿಕ ಆರ್ಥಿಕತೆಯಲ್ಲಿ ಸ್ಥಾನ
    ಯುಪಿಎ – 10
    ಎನ್‌ಡಿಎ – 5

     

    ಟೋಲ್‌ನಲ್ಲಿ ಕಾಯುವ ಸಮಯ
    ಯುಪಿಎ – 12.2 ನಿಮಿಷ
    ಎನ್‌ಡಿಎ – 47 ಸೆಕೆಂಡ್‌

    ಒಟ್ಟು ವಿಮಾನ ನಿಲ್ದಾಣಗಳು
    ಯುಪಿಎ -74
    ಎನ್‌ಡಿಎ -149

    ಒಟ್ಟು ಬ್ರಾಡ್‌ಬ್ಯಾಂಡ್‌ ಸಬ್‌ಸ್ಕ್ರೈಬರ್ಸ್‌
    ಯುಪಿಎ – 6 ಕೋಟಿ
    ಎನ್‌ಡಿಎ – 90 ಕೋಟಿ

    ವಯರ್‌ಲೆಸ್‌ ಡೇಟಾ ಟ್ಯಾರಿಫ್‌ – 1 ಜಿಬಿ ದರ
    ಯುಪಿಎ – 269 ರೂ.
    ಎನ್‌ಡಿಎ – 10.1 ರೂ.

     

    ವೈದ್ಯಕೀಯ ಕಾಲೇಜ್‌
    ಯುಪಿಎ – 387
    ಎನ್‌ಡಿಎ – 706

    ವೈದ್ಯಕೀಯ ಸೀಟುಗಳು
    ಯುಪಿಎ – 51,348
    ಎನ್‌ಡಿಎ – 1,08,940

    ವಿಶ್ವವಿದ್ಯಾಲಯಗಳು
    ಯುಪಿಎ – 676
    ಎನ್‌ಡಿಎ – 1168

    ಎಲೆಕ್ಟ್ರಾನಿಕ್‌ ರಫ್ತು
    ಯುಪಿಎ‌ – 7.6 ಶತಕೋಟಿ ಡಾಲರ್
    ಎನ್‌ಡಿಎ – 22.7 ಶತಕೋಟಿ ಡಾಲರ್‌

    ವಿದೇಶಿ ನೇರ ಹೂಡಿಕೆ
    ಯುಪಿಎ – 305 ಶತಕೋಟಿ ಡಾಲರ್‌
    ಎನ್‌ಡಿಎ – 596 ಶತಕೋಟಿ ಡಾಲರ್‌

    ರೈಲು ಅಪಘಾತ – ಅಪಘಾತದ ಸರಾಸರಿ ಸಂಖ್ಯೆ
    ಯುಪಿಎ – 233
    ಎನ್‌ಡಿಎ – 34

    ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯ
    ಯುಪಿಎ – 249 ಗಿಗಾವ್ಯಾಟ್‌
    ಎನ್‌ಡಿಎ – 429 ಗಿಗಾವ್ಯಾಟ್‌

    ಒಟ್ಟು ಸ್ಥಾಪಿತ ನವೀಕರಿಸಬಹುದಾದ ಶಕ್ತಿ
    ಯುಪಿಎ – 76 ಗಿಗಾವ್ಯಾಟ್‌
    ಎನ್‌ಡಿಎ – 181 ಗಿಗಾವ್ಯಾಟ್‌

    ಪರೋಕ್ಷ ತೆರಿಗೆ ದರ
    ಯುಪಿಎ – 15%
    ಎನ್‌ಡಿಎ -12.2%

    ಬಡತನ ಪ್ರಮಾಣ
    ಯುಪಿಎ – 29%
    ಎನ್‌ಡಿಎ -11%

    ಸ್ಟಾರ್ಟಪ್‌ ಸಂಖ್ಯೆ
    ಯುಪಿಎ – 350
    ಎನ್‌ಡಿಎ -1,17,257

    ಎಲ್‌ಪಿಜಿ ಸಂಪರ್ಕ
    ಯುಪಿಎ -14.5 ಕೋಟಿ
    ಎನ್‌ಡಿಎ – 31.4 ಕೋಟಿ

    ಜಾಗತಿಕ ನಾವಿನ್ಯ ಸೂಚ್ಯಂಕ
    ಯುಪಿಎ – 81
    ಎನ್‌ಡಿಎ – 40

    ಮೆಟ್ರೋ ರೈಲು
    ಯುಪಿಎ – 5 ನಗರ
    ಎನ್‌ಡಿಎ – 20 ನಗರ

  • ಹಿಂದಿನ ತಪ್ಪು ಮರೆಮಾಚಲು UPAಯಿಂದ INDIA ಅಂತ ಬದಲಾಯಿಸಿಕೊಂಡಿದ್ದಾರೆ: ಮೋದಿ ವಾಗ್ದಾಳಿ

    ಹಿಂದಿನ ತಪ್ಪು ಮರೆಮಾಚಲು UPAಯಿಂದ INDIA ಅಂತ ಬದಲಾಯಿಸಿಕೊಂಡಿದ್ದಾರೆ: ಮೋದಿ ವಾಗ್ದಾಳಿ

    ಜೈಪುರ: ತಮ್ಮ ಹಿಂದಿನ ತಪ್ಪುಗಳನ್ನು ಮರೆಮಾಚಲು ಹೆಸರನ್ನು ಯುಪಿಎ ಯಿಂದ I.N.D.I.A ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವಿಪಕ್ಷಗಳ ಒಕ್ಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಕಿಡಿಕಾರಿದ್ದಾರೆ.

    ರಾಜಸ್ಥಾನದ ಸಿಕಾರ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ನೀವು ಬಡವರ ವಿರುದ್ಧ ಹೇಗೆ ಸಂಚು ರೂಪಿಸಿದ್ದೀರಿ ಎಂಬುದನ್ನು ಮರೆಮಾಚಲು ಅವರು (ವಿರೋಧ) ತಮ್ಮ ಹೆಸರನ್ನು ಯುಪಿಎಯಿಂದ INDIA ಅಂತ ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಹೊಸ ಸಂಘರ್ಷ – ಎರಡು ಸಮುದಾಯಗಳ ನಡುವೆ ಗುಂಡಿನ ಚಕಮಕಿ

    ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಹಿಂದಿನ ವಂಚನೆ ಕಂಪನಿಗಳಂತೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿವೆ. ಅವರು ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ಭಯೋತ್ಪಾದನೆಯ ಮುಂದೆ ಶರಣಾಗುವ ಕಳಂಕವನ್ನು ತೆಗೆದುಹಾಕಲು ಅವರು ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ಅವರ ಮಾರ್ಗಗಳು ದೇಶದ ಶತ್ರುಗಳಂತೆಯೇ ಇವೆ. INDIA ಎಂಬ ಹೆಸರು ತಮ್ಮ ದೇಶಭಕ್ತಿಯನ್ನು ತೋರಿಸಲು ಅಲ್ಲ. ದೇಶವನ್ನು ದೋಚುವ ಉದ್ದೇಶದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕೇಂದ್ರ ಸರ್ಕಾರ ಯುವಕರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ರಾಜಸ್ಥಾನದಲ್ಲಿ ಏನಾಗುತ್ತಿದೆ? ರಾಜಸ್ಥಾನದಲ್ಲಿ ಯುವಕರ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ. ರಾಜ್ಯದ ಯುವಕರು ಸಮರ್ಥರಿದ್ದಾರೆ. ಆದರೆ ಇಲ್ಲಿನ ಸರ್ಕಾರ ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 12 ತಿಂಗಳು ಹೆರಿಗೆ ರಜೆ – ಸಿಕ್ಕಿಂ ಸಿಎಂ ಘೋಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಲ್ಲಿ ನಡೀತಿರೋದು ಕಡು ಭ್ರಷ್ಟರ ಸಮ್ಮೇಳನ, ಹೆಚ್ಚು ಭ್ರಷ್ಟರಿಗೆ ಹೆಚ್ಚು ಗೌರವ – ಮಹಾಘಟಬಂಧನ್‌ ವಿರುದ್ಧ ಮೋದಿ ವಾಗ್ದಾಳಿ

    ಬೆಂಗ್ಳೂರಲ್ಲಿ ನಡೀತಿರೋದು ಕಡು ಭ್ರಷ್ಟರ ಸಮ್ಮೇಳನ, ಹೆಚ್ಚು ಭ್ರಷ್ಟರಿಗೆ ಹೆಚ್ಚು ಗೌರವ – ಮಹಾಘಟಬಂಧನ್‌ ವಿರುದ್ಧ ಮೋದಿ ವಾಗ್ದಾಳಿ

    ನವದೆಹಲಿ: ಬೆಂಗಳೂರಿನಲ್ಲಿ (Bengaluru) ನಡೆಯುತ್ತಿರುವ ವಿರೋಧ ಪಕ್ಷಗಳ ನಾಯಕರ ಸಭೆ ‘ಕಡು ಭ್ರಷ್ಟರ ಸಮ್ಮೇಳನ’. ಅತಿ ಹೆಚ್ಚು ಭ್ರಷ್ಟಚಾರ ಮಾಡಿದ ವ್ಯಕ್ತಿಗೆ ಇಲ್ಲಿ ಹೆಚ್ಚು ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಉದ್ಘಾಟನೆ ಬಳಿಕ ಮಾತನಾಡಿದ ಅವರು ಪ್ರತಿಪಕ್ಷಗಳ ಸಭೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ಕಟ್ಟಿಹಾಕಲು ಮಹಾಘಟಬಂಧನ್ – ಇಂದು ಬೆಂಗ್ಳೂರಲ್ಲಿ ವಿಪಕ್ಷಗಳ ಶಕ್ತಿಪ್ರದರ್ಶನ!

    ಕಡು ಭ್ರಷ್ಟರು ಎಲ್ಲ ಒಟ್ಟಾಗಿ ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಜನರಿಂದ, ಜನರಿಗಾಗಿ, ಜನರಿಸ್ಕೋರ ಇದೆ. ಆದರೆ ರಾಜವಂಶದ ರಾಜಕೀಯ ಪಕ್ಷಗಳ ಧ್ಯೇಯ ವಾಕ್ಯ ಕುಟುಂಬದಿಂದ ಕುಟುಂಬಕ್ಕಾಗಿ, ಕುಟುಂಬಸ್ಕೋರ. ಇವರಿಗೆ ಕುಟುಂಬ ಮೊದಲಾದ್ರೆ ರಾಷ್ಟ್ರ ಏನು? ಅಲ್ಲಿ ದ್ವೇಷ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ರಾಜಕಾರಣವಿದೆ. ದೇಶವು ವಂಶಾಡಳಿತದ ಬೆಂಕಿಗೆ ಬಲಿಯಾಗಿದೆ. ಅವರಿಗೆ ದೇಶದ ಬಡವರ ಬೆಳವಣಿಗೆ ಮುಖ್ಯವಲ್ಲ ಕೇವಲ ಕುಟುಂಬದ ಬೆಳವಣಿಗೆ ಮಾತ್ರ ಮುಖ್ಯ ಎಂದು ಕಿಡಿ ಕಾರಿದರು.

    ಈ ಸಭೆಯ ಮತ್ತೊಂದು ವಿಶೇಷತೆ ಏನಂದ್ರೆ, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಯಾರಾದರೂ ಜಾಮೀನಿನ ಮೇಲೆ ಹೊರಗಿದ್ದರೆ ಅವರನ್ನ ಗೌರವದಿಂದ ಕಾಣುತ್ತಾರೆ. ಇಡೀ ಕುಟುಂಬ ಜಾಮೀನಿನ ಮೇಲೆ ಹೊರಗಿದ್ದರೆ ಅವರಿಗೆ ಹೆಚ್ಚು ಗೌರವ, ಯಾರಾದರೂ ಒಂದು ಸಮುದಾಯವನ್ನ ಅವಮಾನಿಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದರೆ ಅವರಿಗೆ ವಿಶೇಷ ಗೌರವ ನೀಡಲಾಗುತ್ತೆ ಎಂದು ಲೇವಡಿ ಮಾಡಿದರು.

    ಕಳೆದ 9 ವರ್ಷಗಳಲ್ಲಿ ನಾವು ಹಳೆಯ ಸರ್ಕಾರಗಳ ತಪ್ಪುಗಳನ್ನ ಸರಿಪಡಿಸಿದ್ದೇವೆ, ಜನರಿಗೆ ಹೊಸ ಸೌಲಭ್ಯಗಳನ್ನ ನೀಡಿದ್ದೇವೆ. ಭಾರತದಲ್ಲಿ ಹೊಸ ಮಾದರಿಯ ಅಭಿವೃದ್ಧಿ ಕಂಡುಬಂದಿದೆ ಇದು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಾದರಿಯಾಗಿದೆ ಎಂದು ತಮ್ಮ ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ವಿರೋಧಿಗಳ ರಣಕಹಳೆ – ಯಾವೆಲ್ಲ ಪಕ್ಷಗಳು ಭಾಗಿ ಆಗುತ್ತಿವೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎನ್‌ಡಿಎ ಜೊತೆ ಮೈತ್ರಿಗೆ ಜೆಡಿಎಸ್ ರೆಡಿ – ಬಿಜೆಪಿ ಪ್ಲಾನ್‌ ಏನು?

    ಎನ್‌ಡಿಎ ಜೊತೆ ಮೈತ್ರಿಗೆ ಜೆಡಿಎಸ್ ರೆಡಿ – ಬಿಜೆಪಿ ಪ್ಲಾನ್‌ ಏನು?

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಸಂಬಂಧ ಎನ್‍ಡಿಎ ಮೈತ್ರಿಕೂಟದ (NDA Alliance) ಸಭೆ ಮಂಗಳವಾರ ನಡೆಯಲಿದ್ದು, ಈ ಸಭೆಯಲ್ಲಿ ಜೆಡಿಎಸ್ (JDS) ಭಾಗಿಯಾಗಲಿದ್ಯಾ ಇಲ್ವಾ ಎಂಬ ಪ್ರಶ್ನೆಗೆ ಈ ಕ್ಷಣದವರೆಗೂ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ.

    ಬೆಂಗಳೂರಿನಲ್ಲಿ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ಎನ್‍ಡಿಎ ಸಭೆಗೂ ಆಹ್ವಾನ ಬಂದಿಲ್ಲ. ಯುಪಿಎ (UPA) ಸಭೆಗೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ಹೋಗುವುದಿಲ್ಲ. ಆದರೆ ಎನ್‍ಡಿಎ ಸಭೆಗೆ ಆಹ್ವಾನ ಬಂದರೆ ಭಾಗಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಮೂಲಗಳ ಪ್ರಕಾರ ಎನ್‍ಡಿಎ ಸಭೆಯಲ್ಲಿ ಜೆಡಿಎಸ್ ಭಾಗಿಯಾಗುವುದು ಬಹುತೇಕ ಅನುಮಾನ. ಮೈತ್ರಿ ಸಂಬಂಧ ಕೆಲವೊಂದಿಷ್ಟು ವಿಚಾರಗಳಲ್ಲಿ ಇನ್ನಷ್ಟು ಸ್ಪಷ್ಟತೆ ಸಿಗಬೇಕಿದೆ. ಒಂದಿಷ್ಟು ಗೊಂದಲಗಳು, ಅನುಮಾನಗಳು ಬಗೆಹರಿದ ನಂತರ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ವಿರೋಧಿಗಳ ರಣಕಹಳೆ – ಯಾವೆಲ್ಲ ಪಕ್ಷಗಳು ಭಾಗಿ ಆಗುತ್ತಿವೆ?

    ಬಿಜೆಪಿ ಪ್ಲಾನ್ ಏನು?
    ಲೋಕಸಮರದಲ್ಲಿ ತ್ರಿಕೋನ ಸ್ಪರ್ಧೆಯಾದರೆ ಕಾಂಗ್ರೆಸ್‍ಗೆ ಲಾಭವಾಗುವ ಸಾಧ್ಯತೆಯಿದೆ. ಜೆಡಿಎಸ್ ಜೊತೆ ಹೋದಲ್ಲಿ ಬಿಜೆಪಿಗೆ ಲಾಭವಾಗಬಹುದು. ಒಂಟಿ ಹೋರಾಟಕ್ಕಿಂತಲೂ ಜಂಟಿ ಹೋರಾಟಕ್ಕೆ ಒಲವು ವ್ಯಕ್ತವಾಗಿದೆ. ಗ್ಯಾರಂಟಿಗಳ ಬಲ ಕುಗ್ಗಿಸಲು ಜೆಡಿಎಸ್ ಸ್ನೇಹ ಈಗ ಅಗತ್ಯವಾಗಿದೆ. ಮಾಸ್ ಲೀಡರ್‌ಶಿಪ್‌ ಕೊರತೆ ತುಂಬಲು ಕುಮಾರಸ್ವಾಮಿ (Kumaraswamy) ಅನಿವಾರ್ಯವಾಗಿದ್ದು, ಜೆಡಿಎಸ್ ಜೊತೆಯಾದಲ್ಲಿ ಬಿಜೆಪಿ 22+ ಕ್ಷೇತ್ರ ಗೆಲ್ಲಬಹುದು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಬ್ಯಾಂಕ್ ಸೆಳೆಯಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

    ಜೆಡಿಎಸ್ ಪ್ಲಾನ್ ಏನು?
    ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಏಕಾಂಗಿ ಸೆಣೆಸಾಟ ಕಷ್ಟಸಾಧ್ಯ. ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಹೋದರೆ ಉತ್ತಮ. ಹಳೇ ಮೈಸೂರಿನ 8 ಸಂಸತ್ ಕ್ಷೇತ್ರಗಳಿಗೆ ಹೆಚ್‍ಡಿಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹಾಸನ, ಮಂಡ್ಯ, ಮೈಸೂರು, ಬೆಂಗಳೂರು(ಗ್ರಾ), ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಾಮರಾಜನಗರ ಕ್ಷೇತ್ರದ ಮೇಲೆ ಜೆಡಿಎಸ್‌ ಕಣ್ಣಿಟ್ಟಿದೆ. ರಾಷ್ಟ್ರ ರಾಜಕೀಯದಲ್ಲಿ ಸದ್ದು ಮಾಡಿ ಪಕ್ಷದ ಅಸ್ತಿತ್ವ ಗಟ್ಟಿಗೊಳಿಸಲು, ವಿಸ್ತರಿಸಲು ತಂತ್ರ ಮಾಡಿದೆ.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • UPA ಬದಲು PDA – ಮೈತ್ರಿಕೂಟದ ಹೆಸರು ಬದಲಾವಣೆ ಆಗುತ್ತಾ?

    UPA ಬದಲು PDA – ಮೈತ್ರಿಕೂಟದ ಹೆಸರು ಬದಲಾವಣೆ ಆಗುತ್ತಾ?

    ಬೆಂಗಳೂರು: ಸದ್ಯ ದೇಶದ ಏಳು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಮುಂದಿನ ದಿನಗಳಲ್ಲಿ ತನ್ನ ಹೆಸರು ಬದಲಿಸಿಕೊಳ್ಳಲು ಸಿದ್ದತೆ ನಡೆಸಿದೆ. ಯುಪಿಎ ಬದಲು ಬೇರೊಂದು ಹೆಸರಿನಲ್ಲಿ ಬಿಜೆಪಿ (BJP) ವಿರುದ್ಧದ ಹೋರಾಟವನ್ನು ಜನರ ನಡುವೆ ಕೊಂಡೊಯ್ಯಲು ಕಾಂಗ್ರೆಸ್ (Congress) ನೇತೃತ್ವದ ಪಕ್ಷಗಳು ಚಿಂತನೆ ನಡೆಸಿವೆ.

    ಮೈತ್ರಿಕೂಟದ ಹೆಸರು ಬದಲಾವಣೆಗೆ ಟಿಎಂಸಿ, ಎಎಪಿ ಸೇರಿ ಬಹುತೇಕ ಪಕ್ಷಗಳು ಒಲವು ತೋರಿಸಿವೆ. ಮಂಗಳವಾರ ಬೆಂಗಳೂರಿನಲ್ಲಿ (Bengaluuru) ನಡೆಯಲಿರುವ ಮಹಾಮೈತ್ರಿ ಸಭೆಯಲ್ಲಿ ಈ ಬಗ್ಗೆಯೇ ಪ್ರಮುಖ ಚರ್ಚೆ ನಡೆಯಲಿದೆ. ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (UPA) ಬದಲಿಗೆ ಪಿಡಿಎ (PDA) ಪ್ರೊಗ್ರೆಸ್ಸಿವ್ ಡೆಮಾಕ್ರಾಟಿಕ್ ಅಲಯನ್ಸ್ ಎಂಬುದಾಗಿ ಮರುನಾಮಕರಣ ಮಾಡುವ ಸಂಭವ ಹೆಚ್ಚಿದೆ.

     

    ಇದೇ ವೇಳೆ ಕಾಮನ್ ಮಿನಿಮಮ್ ಪ್ರೋಗ್ರಾಂ, ಸೀಟ್ ಶೇರಿಂಗ್ ಮತ್ತಿತ್ತರ ವಿಚಾರಗಳು ಕೂಡ ಚರ್ಚೆಗೆ ಬರಲಿವೆ. ಸಿಎಂಪಿ ಅಂಶಗಳನ್ನು ರೂಪಿಸುವ ಸಲುವಾಗಿ ಉಪಸಮಿತಿಯೊಂದನ್ನು ರಚಿಸುವ ಸಂಭವ ಇದೆ. ಇವಿಎಂ ಬಗ್ಗೆ ಚುನಾವಣಾ ಆಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸುವ ಸಂಬಂಧ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇದನ್ನೂ ಓದಿ: NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ

    ಯುಪಿಎ ಹೆಸರು ಏಕೆ ಬೇಡ?
    2 ಬಾರಿ ಅಧಿಕಾರ ನಡೆಸಿದ ಯುಪಿಎ ಬಗ್ಗೆ ನೆಗೆಟಿವ್ ಟಾಕ್ ಇದೆ. ಯುಪಿಎ ಕಾಲದ ಹಗರಣಗಳು ಈಗಲೂ ಜನರ ಮನಸ್ಸಿನಲ್ಲಿ ಅಚ್ಚು ಒತ್ತಿದೆ. ಹೀಗಾಗಿ ಹೆಸರು ಬದಲಿಸಿಕೊಂಡು ಜನರ ಮುಂದೆ ಹೋಗುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಯುಪಿಎ ಮೈತ್ರಿಕೂಟವನ್ನು ಹಲವು ಪಕ್ಷಗಳು ಹೊಸದಾಗಿ ಸೇರುತ್ತಿವೆ. ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯ ಹೆಸರಿನೊಂದಿಗೆ ಹೋಗುವುದು ಉತ್ತಮ ಎಂಬ ಸಲಹೆ ವ್ಯಕ್ತವಾಗಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ

    NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ

    – ಕೇಂದ್ರ ಸಚಿವ ಸ್ಥಾನ, ವಿಪಕ್ಷ ಸ್ಥಾನ ನನಗೆ ಬೇಡ ಎಂದ ಹೆಚ್‌ಡಿಕೆ

    ಬೆಂಗಳೂರು: ಎನ್‌ಡಿಎ (NDA) ಸಭೆಗೆ ಆಹ್ವಾನ ನೀಡಿದರೆ ನಾನು ಸಭೆಗೆ ಹೋಗುತ್ತೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

    ಬಿಜೆಪಿ (BJP) ಜೊತೆ ದೋಸ್ತಿ ಬಗ್ಗೆ ಮೊದಲ ಬಾರಿಗೆ ‘ಪಬ್ಲಿಕ್ ಟಿವಿ’ ಜೊತೆ ಮುಕ್ತವಾಗಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಎನ್‌ಡಿಎ ಮತ್ತು ಯುಪಿಎ (UPA) ಸಭೆಗೆ ಇನ್ನೂ ನನಗೆ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ನಾವು ಹೋಗಲ್ಲ. ಎನ್‌ಡಿಎ ಸಭೆಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡಿ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: PTCL ಕಾಯ್ದೆ ತಿದ್ದುಪಡಿಗೆ ಬದ್ಧ; ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ

    ಕುಮಾರಸ್ವಾಮಿ ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡರೆ ಕೇಂದ್ರ ಸಚಿವ ಸ್ಥಾನ, ವಿರೋಧ ಪಕ್ಷದ ಸ್ಥಾನ ನೀಡಬಹುದು ಎಂಬ ಚರ್ಚೆಗೆ ಉತ್ತರ ನೀಡಿದ ಅವರು, ನನಗೆ ಕೇಂದ್ರ ಸಚಿವ ಸ್ಥಾನ ಅಥವಾ ವಿಪಕ್ಷ ಸ್ಥಾನದ ಅವಶ್ಯಕತೆ ಇಲ್ಲ. ಅದರ ಚರ್ಚೆಯೂ ಮಾಡಲ್ಲ. ಬಿಜೆಪಿಯಲ್ಲಿ ಸಮರ್ಥರು ಇದ್ದಾರೆ. ಅವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿ ಎಂದು ಕೇಂದ್ರದ ನಾಯಕರಿಗೆ ಹೇಳುತ್ತೇನೆ ಎಂದರು. ಇದನ್ನೂ ಓದಿ: ಸರ್ವಾಧಿಕಾರ ವಿರೋಧಿಸೋರು ಬನ್ನಿ- ಹೆಚ್‍ಡಿಕೆ ವಿರುದ್ಧ ವೇಣುಗೋಪಾಲ್ ಕಿಡಿ

    ನನಗೆ ವಿಪಕ್ಷ ನಾಯಕನ ಆಸೆ ಇಲ್ಲ. ಜನರ ಕೊಟ್ಟ ಸ್ಥಾನದಲ್ಲಿ ಕೂರಲು ನಾನು ಸಿದ್ಧ ಎಂದು ತಿಳಿಸಿದ ಅವರು, ಕೇಂದ್ರದ ಬಿಜೆಪಿ ನಾಯಕರು ಕರೆದರೆ ಹೋಗಿ ಮಾತನಾಡುತ್ತೇನೆ. ಲೋಕಸಭೆಗೆ ಜೊತೆಗೆ ಹೋಗುವ ಬಗ್ಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್

    ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್

    – ಲೋಕಸಭೆಗೆ ಬಿಜೆಪಿ ದೋಸ್ತಿ ಬಗ್ಗೆ ಹೆಚ್‌ಡಿಕೆ ಮುಕ್ತ ಮಾತು

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಮೆರೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್‌ನಿಂದ ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬಹಿರಂಗ ಸವಾಲ್ ಹಾಕಿದ್ದಾರೆ.

    ನಗರದಲ್ಲಿಂದು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಾಕತ್ತಿದ್ದರೆ ಕಾಂಗ್ರೆಸ್‌ನಿಂದ (Congress) ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಒಗ್ಗಟ್ಟಿನ ರಣಕಹಳೆ- ಇಂದಿನಿಂದ 2 ದಿನ ವಿಪಕ್ಷಗಳ ಒಕ್ಕೂಟ ಸಭೆ

    ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ವಿರುದ್ಧ ಮಾತನಾಡಿದ್ದಾರೆ. 123 ಸೀಟು ಬಂದ್ರೆ ಪಕ್ಷ ವಿಸರ್ಜನೆ ಮಾಡೋದಾಗಿ ಹೇಳಿದ್ರು. ಇನ್ನೂ ಮಾಡಿಲ್ಲ ಅಂತ ಮಾತಾಡಿದ್ದಾರೆ. ಕನ್ನಡದ ಬಗ್ಗೆ ಪಾಠ ಮಾಡೋ ಸಿದ್ದರಾಮಯ್ಯ ಅವರಿಗೆ ಕನ್ನಡ ಗೊತ್ತಿದೆಯಾ? ವಿಧಾನಸಭೆಯಲ್ಲಿ ಮಾತಾಡಿದ್ರೆ ಆಗ ಉತ್ತರ ಕೊಡ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    ನಾನು ಸ್ಪಷ್ಟವಾಗಿ ಹೇಳಿದ್ದೇನೆ. 123 ಸ್ಥಾನ ಕೊಟ್ಟು ಪಂಚರತ್ನ ಯೋಜನೆ ಜಾರಿ ಮಾಡದೇ ಹೋದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತಾ ಹೇಳಿದ್ದೆ. 123 ಬಂದಿಲ್ಲ ವಿಸರ್ಜನೆ ಮಾಡಿಲ್ಲ ಅಂತ ಅಲ್ಲಿ ಟೇಂಕಾರದ ಮಾತು ಆಡ್ತಾರೆ. ಇದೇ ಮನುಷ್ಯ 58 ಸ್ಥಾನ ನನ್ನಿಂದ ಬಂತು ಅಂತಾ ಹೇಳಿದ್ದರು. 1999ರಲ್ಲಿ ಇದೇ ಮನುಷ್ಯ ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 10 ಸ್ಥಾನಕ್ಕೆ ಬಂದಿದ್ವಿ. ಅವರೂ ಸೋತಿದ್ದರು. ಆದ್ರೆ ನಾನು ಒಬ್ಬ ಏಕಾಂಗಿಯಾಗಿ 40 ಸ್ಥಾನಕ್ಕೆ ರೀಚ್ ಆಗಿದ್ದೇನೆ. ಸಿದ್ದರಾಮಯ್ಯರಿಂದ ಪಕ್ಷ ಕಟ್ಟೋದು ಹೇಳಿಸಿಕೊಳ್ಳಬೇಕಾಗಿಲ್ಲ. ಇವರು ಹಲವು ಭಾಗ್ಯ ಕೊಟ್ಟು ಸಾಧನೆ ಮಾಡಿದ್ದಾರೆ ಅಲ್ಲವೇ? ತಾಕತ್ತಿದ್ದರೆ ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ? ಎಂದು ಗುಡುಗಿದ್ದಾರೆ.

    ಬಿಜೆಪಿಯವರೇ ವಿರೋಧ ಪಕ್ಷ ನಾಯಕರಾಗಲಿ:
    ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ವಿಪಕ್ಷ ಸ್ಥಾನ ಕೊಡಿ ಅಂತ ಕೇಳಲ್ಲ. ಬಿಜೆಪಿಯಲ್ಲಿ (BJP) ಅನೇಕ ನಾಯಕರು ಸಮರ್ಥರಿದ್ದಾರೆ. ಅವರಲ್ಲಿ ಒಬ್ಬರನ್ನ ವಿಪಕ್ಷ ನಾಯಕ ಮಾಡಿ ಅಂತ ಸಲಹೆ ಕೊಡ್ತೀನಿ. ಬಿಜೆಪಿ ನಾಯಕರೇ ವಿರೋಧ ಪಕ್ಷದ ನಾಯಕ ಆಗಲಿ. ಈ ಬಗ್ಗೆ ನಾನೇ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.

    ಎನ್‌ಡಿಎ ಜೊತೆಗಿನ ಮೈತ್ರಿ ವಿಚಾರ ಮಾತನಾಡಿದ ಹೆಚ್‌ಡಿಕೆ, ಎನ್‌ಡಿಎ ಸಭೆಗೆ ಕರೆದರೆ ಹೋಗ್ತೀನಿ. ನಾನು ಕೇಂದ್ರದ ಸ್ಥಾನವನ್ನು ಕೇಳಿಲ್ಲ. ಕೇಂದ್ರ ಸಚಿವ ಸ್ಥಾನ, ವಿರೋಧ ಪಕ್ಷದ ಸ್ಥಾನ ನನಗೆ ಅವಶ್ಯಕತೆ ಇಲ್ಲ. ಅದರ ಚರ್ಚೆಯೂ ಮಾಡೋದಿಲ್ಲ. ಸೀಟಿನ ಬಗ್ಗೆ ಡಿಮ್ಯಾಂಡ್ ಆಗಿಲ್ಲ. ಸಭೆಗೆ ಕರೆದರೆ ಗೌರವ ಕೊಟ್ಟು ಹೋಗಿ ಚರ್ಚೆ ಮಾಡ್ತೀನಿ ಎಂದು ಹೇಳಿದ್ದಾರೆ.

    ನನಗೆ ವಿಪಕ್ಷ ನಾಯಕನ ಆಸೆ ಇಲ್ಲ. ಜನರು ಕೊಟ್ಟ ಸ್ಥಾನದಲ್ಲಿ ಕೂರಲು ನಾನು ಸಿದ್ದ. ಕೇಂದ್ರದ ಬಿಜೆಪಿ ನಾಯಕರು ಕರೆದರೆ ಹೋಗಿ ಮಾತನಾಡುತ್ತೇನೆ. ಲೋಕಸಭೆಗೆ ಜೊತೆಗೆ ಹೋಗೋ ಬಗ್ಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡ್ತೀವಿ ಎಂದು ಮೈತ್ರಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ಅಲ್ಲದೇ ಎನ್‌ಡಿಎ ಸಭೆಗೆ ಇನ್ನೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ಹೋಗೋದಿಲ್ಲ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • UPA ಮೈತ್ರಿ ಕೂಟದ ಮಹತ್ವದ ಸಭೆಗೆ ಬೆಂಗಳೂರಿನಲ್ಲಿ ಮುಹೂರ್ತ

    UPA ಮೈತ್ರಿ ಕೂಟದ ಮಹತ್ವದ ಸಭೆಗೆ ಬೆಂಗಳೂರಿನಲ್ಲಿ ಮುಹೂರ್ತ

    ನವದೆಹಲಿ/ಬೆಂಗಳೂರು: UPA ಮೈತ್ರಿಕೂಟದ ಮಹತ್ವದ ಸಭೆ ಜುಲೈ 17 ಹಾಗೂ 18 ರಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ.

    ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಕಳೆದ ಬಾರಿ ಪಾಟ್ನಾದಲ್ಲಿ ನಡೆದ ಸಭೆ 6 ಜನ ಮುಖ್ಯಮಂತ್ರಿಗಳೂ ಸೇರಿ 15 ಪಕ್ಷಗಳ 32 ನಾಯಕರನ್ನ ಒಳಗೊಂಡಿತ್ತು. ಈ ಬಾರಿ 24 ಪಕ್ಷದ 40ಕ್ಕೂ ಹೆಚ್ಚು ನಾಯಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಪ್ರಮುಖ ನಾಯಕರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಯುಪಿಎ ಮೈತ್ರಿಕೂಟದ ನಾಯಕರಿಗೆ ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಔತಣಕೂಟ ಏರ್ಪಡಿಸಿದ್ದಾರೆ. ಅಲ್ಲಿ ಮೈತ್ರಿಕೂಟದ ಮೊದಲ ಅನೌಪಚಾರಿಕ ಸಭೆ ನಡೆಯಲಿದೆ. ಜುಲೈ 18 ರಂದು ಯುಪಿಎ ಮೈತ್ರಿ ಕೂಟದ ಅಧಿಕೃತ ಮಹತ್ವದ ಸಭೆ ನಡೆಯಲಿದೆ.

    ಭಾಗವಹಿಸುವ ಪಕ್ಷಗಳು:
    ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐಎಂ, ಸಿಪಿಐ, ಆರ್‌ಜೆಡಿ, ಜೆಡಿಯು, ಡಿಎಂಕೆ, ಸಮಾಜವಾದಿ ಪಾರ್ಟಿ, ಶಿವಸೇನೆ ಉದ್ದವ್ ಠಾಕ್ರೆ, ಎಎಪಿ, ಜೆಎಂಎಂ, ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರೆಟಿಕ್‌ ಪಾರ್ಟಿ, ಸಿಪಿಐಎಂಎಲ್‌, ಎಂಡಿಕೆ, ಆರ್‌ಎಸ್‌ಪಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್‌ನ ಎರಡೂ ಬಣಗಳು (ಜೋಸೇಫ್ ಮತ್ತು ಮಣಿ) ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ ಎನ್ನಲಾಗಿದೆ. ಇದನ್ನೂ ಓದಿ: ನಿಯಮ ಮೀರಿ ಹುದ್ದೆ ನೀಡಿದ ಆರೋಪ- ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಂದ ಸರ್ಕಾರಕ್ಕೆ ಪತ್ರ

    ಸಭೆಯಲ್ಲಿ ಪಾಲ್ಗೊಳ್ಳುವ ಪ್ರಮುಖ ನಾಯಕರು:
    ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಉದ್ಧವ್‌ ಠಾಕ್ರೆ, ಆದಿತ್ಯ ಠಾಕ್ರೆ, ಹೇಮಂತ್ ಸೊರೇನ್, ಎಂ.ಕೆ ಸ್ಟಾಲಿನ್‌, ನಿತೀಶ್ ಕುಮಾರ್, ಶರದ್ ಪವಾರ್, ಸುಪ್ರಿಯಾ ಸುಳೆ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಮೆಹಬೂಬಾ ಮುಫ್ತಿ, ಲಾಲು ಪ್ರಸಾದ್ ಯಾದವ್, ಡಿ. ರಾಜಾ, ಸೀತಾರಾಂ ಯೆಚೂರಿ, ಒಮರ್ ಅಬ್ದುಲ್ಲಾ ಮೊದಲಾದ ನಾಯಕರು ಬೆಂಗಳೂರಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಲೋಕಸಮರಕ್ಕಾಗಿ BJP- JDS ದೋಸ್ತಿ- NDA ಸಭೆಯಲ್ಲಿ ಭಾಗಿಯಾಗ್ತಾರಾ ಹೆಚ್‍ಡಿಕೆ?

    ಸಭೆಯ ಪ್ರಮುಖ ಅಜೆಂಡ ಏನು….?
    * 24 ಪಕ್ಷಗಳು ಸೇರಿ ಒಟ್ಟು 150 ಲೋಕಸಭಾ ಸದಸ್ಯರನ್ನ ಹೊಂದಿವೆ ಅದನ್ನ ಹೆಚ್ಚಿಸಿಕೊಳ್ಳುವುದು ಮೈತ್ರಿ ಕೂಟದ ಲೆಕ್ಕಾಚಾರ..
    * ಈ ಸಭೆಯಲ್ಲಿ ಮೈತ್ರಿಕೂಟಕ್ಕೆ ಅಧಿಕೃತ ಹೆಸರು ಘೋಷಣೆ ಸಾಧ್ಯತೆ
    * ಲೋಕಸಭಾ ಸೀಟು ಹಂಚಿಕೆ ಸಂಬಂಧವೂ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ.
    * 150 ಸ್ಥಾನಕ್ಕಿಂತ ಹೆಚ್ಚುವರಿ ಎಷ್ಟು ಸ್ಥಾನ ಗಳಿಸಬಹುದು ಎಂಬುದನ್ನ ಸಭೆಯಲ್ಲಿ ಹೆಚ್ಚು ಒತ್ತು ಕೊಟ್ಟು ಚರ್ಚೆ ಮಾಡಲು ನಿರ್ಧಾರ
    * ಮೈತ್ರಿಕೂಟದ ನಾಯಕತ್ವ ಯಾರದ್ದು ಎಂಬುದು ಸಹಾ ತೀರ್ಮಾನ ಆಗುವ ಸಾಧ್ಯತೆ
    * ಪಾಟ್ನಾ ಸಭೆಯಲ್ಲಿ 15 ಪಕ್ಷಗಳು ಭಾಗವಹಿಸಿದ್ದು. ಈ ಬಾರಿ 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಎಂದಿಗೂ ಉದ್ಧಾರವಾಗದು: ಗುಲಾಂ ನಬಿ ಆಜಾದ್

    ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಎಂದಿಗೂ ಉದ್ಧಾರವಾಗದು: ಗುಲಾಂ ನಬಿ ಆಜಾದ್

    ನವದೆಹಲಿ: ರಾಹುಲ್‌ ಗಾಂಧಿ (Rahul Gandhi) ನಾಯಕತ್ವದಲ್ಲಿ ಕಾಂಗ್ರೆಸ್ (Congress) ಪಕ್ಷ ಎಂದಿಗೂ ಉದ್ಧಾರವಾಗದು ಎಂದು ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad ) ಹೇಳಿದ್ದಾರೆ.

    ಗುಲಾಂ ನಬಿ ಆಜಾದ್ ತಮ್ಮ ರಾಜಕೀಯ ಜೀವನದ ಬಗ್ಗೆ ಬರೆದಿರುವ ‘ಆಜಾದ್’ ಕೃತಿಯಲ್ಲಿಯೂ ರಾಹುಲ್ ಗಾಂಧಿ ನಾಯಕತ್ವವನ್ನು ಟೀಕಿಸಿದ್ದಾರೆ.ರಾಹುಲ್ ಗಾಂಧಿ ನಾಯಕನೇ ಅಲ್ಲ. ಅವರಿಗೆ ಜನ ಬೆಂಬಲವಿಲ್ಲ. ಬಾಯಿ ಮುಚ್ಚಿ ಕುಳಿತವರಿಗೆ ಮಾತ್ರ ಪಕ್ಷದಲ್ಲಿ ಸ್ಥಾನ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ಫೋಟೋವಿದ್ದ ಅಂಬುಲೆನ್ಸ್ ಸೀಜ್ – ಕೇಸ್ ದಾಖಲು

    ನಾನು ಸೇರಿದಂತೆ ಇಂದು ಹಲವು ಹಿರಿಯ ಮತ್ತು ಯುವ ರಾಜಕಾರಣಿಗಳು ಕಾಂಗ್ರೆಸ್‌ನಲ್ಲಿ ಇಲ್ಲದಿರುವುದಕ್ಕೆ ರಾಹುಲ್ ಗಾಂಧಿಯೇ ಮುಖ್ಯ ಕಾರಣ. 2013ರಲ್ಲಿ ಯುಪಿಎ ಸರ್ಕಾರ (UPA Government) ತಂದಿದ್ದ ಸುಗ್ರೀವಾಜ್ಞೆಯನ್ನು (Oridance) ರಾಹುಲ್ ಗಾಂಧಿ ವಿರೋಧಿಸದೇ ಇದ್ದಿದ್ದರೆ ಅವರು ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರ ಆಡಳಿತವನ್ನು ಮೆಚ್ಚಿಕೊಂಡ ಅಜಾದ್‌, ಇಂದಿರಾ, ರಾಜೀವ್‌ ಅವರು ಮಾಡಿದ ಕೆಲಸಗಳ ಪೈಕಿ 1/50 ಮಾಡಿದರೆ ರಾಹುಲ್‌ ಗಾಂಧಿ ಉದ್ಧರವಾಗಬಹುದು ಎಂದು ಹೇಳಿದರು.

    ತನಿಖಾ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಪಕ್ಷದ ಹಿರಿಯ ನಾಯಕರು ಹಾಜರಾಗುವಾಗ ಸ್ವಯಂಪ್ರೇರಿತವಾಗಿ ನಾಯಕರು ಬರಬೇಕೇ ಹೊರತು ಕಡ್ಡಾಯವಾಗಿ ಹಾಜರಾಗಬೇಕೆಂದು ವಿಪ್‌ ಹೊರಡಿಸಬಾರದು. ಆದರೆ ಸೂರತ್‌ ನ್ಯಾಯಾಲಯಕ್ಕೆ ರಾಹುಲ್‌ ಹಾಜರಾಗುವಾಗ ನಾಯಕರು ಕಡ್ಡಾಯವಾಗಿ ಬರಬೇಕೆಂದು ವಿಪ್‌ ಜಾರಿಗೊಳಿಸಲಾಗಿತ್ತು. ಬೆನ್ನುಮೂಳೆ ಇಲ್ಲದ ಕಾಂಗ್ರೆಸ್‌ ನಾಯಕರಿಗೆ ಚಿಕಿತ್ಸೆ ನೀಡಲು ಮೂಳೆ ಚಿಕಿತ್ಸಕರ ಅಗತ್ಯವಿದೆ ಎಂದು ಗುಲಾಂ ನಬಿ ಆಜಾದ್ ಟಾಂಗ್‌ ನೀಡಿದರು.

  • ಅಂದು ಸುಗ್ರೀವಾಜ್ಞೆ ಹರಿದು ಎಸೆಯದೇ ಇದ್ದಿದ್ದರೆ ರಾಹುಲ್‌ ಅನರ್ಹರಾಗುತ್ತಿರಲಿಲ್ಲ!

    ಅಂದು ಸುಗ್ರೀವಾಜ್ಞೆ ಹರಿದು ಎಸೆಯದೇ ಇದ್ದಿದ್ದರೆ ರಾಹುಲ್‌ ಅನರ್ಹರಾಗುತ್ತಿರಲಿಲ್ಲ!

    ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ (Rahul Gandhi) ಜೈಲು ಶಿಕ್ಷೆಯಾಗಿ ಸಂಸದ ಸ್ಥಾನದಿಂದ ಅನರ್ಹವಾಗುತ್ತಿದ್ದಂತೆ (Disqualification) 2013ರಲ್ಲಿ ಯುಪಿಎ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ (Ordinance) ವಿಚಾರ ಈಗ ಚರ್ಚೆ ಆಗುತ್ತಿದೆ.

    ಈ ಚರ್ಚೆಯಾಗಲು ಕಾರಣ 2013ರಲ್ಲಿ ನಡೆದ ಘಟನೆ. ಅಂದು ಸುಗ್ರೀವಾಜ್ಞೆಯನ್ನು ಹರಿದು ಎಸೆಯದೇ ಇದ್ದಿದ್ದರೆ ರಾಹುಲ್‌ ಗಾಂಧಿ ಅನರ್ಹರಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    2013ರಲ್ಲಿ ಏನಾಗಿತ್ತು?
    ಯಾವುದೇ ಜನಪ್ರತಿನಿಧಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಅವರು ತನಗೆ ಲಭ್ಯವಿರುವ ಎಲ್ಲಾ ಕಾನೂನಿನ ಅವಕಾಶ ಬಳಸಿಕೊಳ್ಳುವ ತನಕವೂ ಹುದ್ದೆಯಿಂದ ಅನರ್ಹವಾಗದಂತೆ ರಕ್ಷಣೆ ನೀಡುವ ಕಾಯ್ದೆಯನ್ನು 2013ರ ಜುಲೈ 10ರಂದು ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು.

     

    ಕಳಂಕಿತ ಸಂಸದರು ಮತ್ತು ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಸಂಬಂಧವಾಗಿ ಸುಪ್ರೀಂ ಕೋರ್ಟ್‌ (Supreme Court) ಪ್ರಕಟಿಸಿದ ತೀರ್ಪು ರಾಜಕೀಯ ಪಕ್ಷಗಳಿಗೆ ಸಂಕಷ್ಟ ತಂದಿಟ್ಟಿತ್ತು. ಈ ತೀರ್ಪನ್ನು ಜಾರಿಗೊಳಿಸದೇ ಇರಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಯುಪಿಎ ಬೆಂಬಲಿತ ಪಕ್ಷಗಳಿಂದಲೇ ವಿಪರೀತ ಒತ್ತಡ ಬಂದಿತ್ತು.

    ಈ ಒತ್ತಡಕ್ಕೆ ಮಣಿದ ಪ್ರಧಾನಿ ಮನಮೋಹನ್‌ಸಿಂಗ್‌ ನೇತೃತ್ವದ ಸರ್ಕಾರ (Manmohan Singh’s Government) ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಯಾವುದೇ ಜನಪ್ರತಿನಿಧಿಗೆ ಶಿಕ್ಷೆಯಾದರೆ ಅವರು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನಗಳ ಅವಕಾಶ ಕಲ್ಪಿಸಿತ್ತು.  ಇದನ್ನೂ ಓದಿ: ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ – ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿಪಕ್ಷಗಳು

    ಸುಗ್ರೀವಾಜ್ಞೆ ಹೊರಡಿಸುತ್ತಿದ್ದಂತೆ ಕಳಂಕಿತ ಸಂಸದರ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂಬ ಟೀಕೆ ವ್ಯಕ್ತವಾಯಿತು. ಸರ್ಕಾರದ ಆತುರದ ಕ್ರಮವನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಪ್ರಶ್ನಿಸಿದರು. ದೇಶದೆಲ್ಲೆಡೆ ಭಾರೀ ಚರ್ಚೆ ಆಗುತ್ತಿದ್ದಂತೆ ರಾಹುಲ್‌ ಗಾಂಧಿ ಮಧ್ಯ ಪ್ರವೇಶ ಮಾಡಿದರು.

    ಸುಗ್ರೀವಾಜ್ಞೆ ಸಂಬಂಧ ರಾಷ್ಟ್ರಪತಿ ಬಳಿಗೆ ಹೋಗಿದ್ದ ವೇಳೆ ದಿಢೀರನೆ ಪತ್ರಿಕಾಗೋಷ್ಠಿ ಕರೆದ ರಾಹುಲ್‌ ಗಾಂಧಿ, ಈ ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿ ಅದರ ಪ್ರತಿಗಳನ್ನು ಎಲ್ಲಾ ನಾಯಕರ ಎದುರೇ ಹರಿದು ಹಾಕಿದ್ದರು. ಇದು ಶುದ್ಧ ಅವಿವೇಕದ ಕೆಲಸ. ಸುಗ್ರೀವಾಜ್ಞೆ ಹರಿದು ಬಿಸಾಡಲು ಯೋಗ್ಯ ಎಂದು ಕಿಡಿಕಾರಿದ್ದರು.

    ರಾಹುಲ್‌ ಹರಿದು ಎಸೆದ ಪರಿಣಾಮ ಸುಗ್ರೀವಾಜ್ಞೆ ಜಾರಿಗೆ ಬಂದಿರಲಿಲ್ಲ. ಆದರೆ ಪತ್ರಿಕಾಗೋಷ್ಠಿಯಲ್ಲಿ ಹರಿದು ಹಾಕಿ ತಮ್ಮದೇ ಸರ್ಕಾರಕ್ಕೆ ಮುಜುಗರ ತಂದ ವರ್ತನೆಗೆ ಕಾಂಗ್ರೆಸ್‌ ನಾಯಕರು ಮತ್ತು ಯುಪಿಎ ಬೆಂಬಲಿತ ಪಕ್ಷಗಳಿಂದಲೇ ಭಾರೀ ಟೀಕೆ ವ್ಯಕ್ತವಾಗಿತ್ತು.

    ಜನಪ್ರತಿನಿಧಿಗಳ ಕಾಯ್ದೆ ಏನು ಹೇಳುತ್ತದೆ?
    ಜನಪ್ರತಿನಿಧಿಗಳ ಕಾಯ್ದೆಯಂತೆ ಶಾಸಕರು/ ಸಂಸದರು ಎರಡು ನಿದರ್ಶನಗಳಲ್ಲಿ ತಮ್ಮ ಸ್ಥಾನದಿಂದ ಅನರ್ಹರಾಗಬಹುದು. ಮೊದಲು ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧ ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಅಥವಾ ಸೆಕ್ಷನ್ 171E (ಲಂಚ ತೆಗೆದುಕೊಳ್ಳುವುದು)ನಂತಹ ಪ್ರಕರಣ ಅಥವಾ ಸೆಕ್ಷನ್ 171F (ಚುನಾವಣೆಯಲ್ಲಿ ಅನಗತ್ಯ ಪ್ರಭಾವದ) ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾದರೆ ತಮ್ಮ ಸ್ಥಾನವನ್ನು ಸಂಸದರು ಕಳೆದುಕೊಳ್ಳಲಿದ್ದಾರೆ.

    ಶಾಸಕರು ಅಥವಾ ಸಂಸದರು ಯಾವುದೇ ಇತರ ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗಿದ್ದಾರೆ ಅವರನ್ನು ಶಾಸಕ/ ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. ರಾಹುಲ್‌ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯಾದ ಕಾರಣ ಈಗ ಈ ಕಾಯ್ದೆಯ ಅಡಿ ಲೋಕಸಭಾ ಸಚಿವಾಲಯ ಅನರ್ಹ ಮಾಡಿದೆ.