Tag: ಯುನೈಟೆಡ್‌ ಕಿಂಗ್‌ಡಮ್‌

  • ಬ್ರಿಟನ್‌ನಲ್ಲಿ ಸ್ಥಳೀಯರು Vs ವಲಸಿಗ ಮುಸ್ಲಿಮರ ಮಧ್ಯೆ ಸಂಘರ್ಷ – 148 ಮಂದಿ ಬಂಧನ

    ಬ್ರಿಟನ್‌ನಲ್ಲಿ ಸ್ಥಳೀಯರು Vs ವಲಸಿಗ ಮುಸ್ಲಿಮರ ಮಧ್ಯೆ ಸಂಘರ್ಷ – 148 ಮಂದಿ ಬಂಧನ

    ಲಂಡನ್‌: ಬ್ರಿಟನ್‌ನಲ್ಲಿ (Great Britain) ಸ್ಥಳೀಯರು, ಬಲಪಂಥೀಯರು ಮತ್ತು ವಲಸಿಗ ಮುಸ್ಲಿಮರ (Migrant Muslims) ನಡುವೆ ನಡೆಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರಕ್ಕೆ ತಾರಕಕ್ಕೆ ಏರಿದ್ದು ಇಲ್ಲಿಯವರೆಗೆ ಯುಕೆ ಪೊಲೀಸರು (UK Police) ಸುಮಾರು 148 ಮಂದಿಯನ್ನು ಬಂಧಿಸಿದ್ದಾರೆ.

    4 ದಿನಗಳ ಹಿಂದೆ ಸಣ್ಣದಾಗಿ ಆರಂಭವಾಗಿದ್ದ ಪ್ರತಿಭಟನೆ, ಹಿಂಸಾಚಾರ ಇದೀಗ ದೇಶದ ಹಲವು ನಗರಗಳಿಗೆ ಹರಡಿದ್ದು ಹೋಟೆಲ್‌, ಅಂಗಡಿಗಳ ಮೇಲೆ ದಾಳಿಯಾಗುತ್ತಿದೆ.

     

    ಪ್ರತಿಭಟನೆ ಯಾಕೆ?
    ನೃತ್ಯ ತರಗತಿ ವೇಳೆ ಮೂವರು ಬ್ರಿಟಿಷ್‌ ಬಾಲಕಿಯರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ಬಳಿಕ ಕೃತ್ಯ ಎಸಗಿದ ಆಕ್ಸೆಲ್ ರುಡಕುಬಾನಾ 17 ವರ್ಷದ ಯುವಕನನ್ನು ಬಂಧಿಸಲಾಗಿತ್ತು. ಹಂತಕ ಮುಸ್ಲಿಂ ವಲಸಿಗ ಎಂಬ ವದಂತಿ ಹರಡಿದ್ದರಿಂದ ಈಗ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಪ್ರತಿಭಟನೆಗಳು ಇಳಿದಿವೆ. ಆದರೆ ಹಂತಕ ಕ್ರಿಶ್ಚಿಯನ್‌ ಎಂದು ವರದಿಯಾಗಿದೆ. ಇದನ್ನೂ ಓದಿ: ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ದಿಢೀರ್‌ ರದ್ದು

    ಇತ್ತೀಚಿಗೆ ಮುಕ್ತಾಯಗೊಂಡ ಸಂಸತ್‌ ಚುನಾವಣೆ ವೇಳೆ ಮುಸ್ಲಿಮರಿಗೆ ಹಲವು ಭರವಸೆ ನೀಡಿ ಕೀರ್ ಸ್ಟಾರ್ಮರ್‌ (Keir Starmer) ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಮುಸ್ಲಿಮರಿಗೆ ನೀಡಿದ ಭರವಸೆಗಳಿಗೆ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈಗ ಮೂವರು ಬಾಲಕಿಯರ ಮೇಲೆ ಹತ್ಯೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆ ಪ್ರತಿಭಟನೆ ಈಗ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಪ್ರಧಾನಿ ಕೀರ್ ಸ್ಟಾರ್ಮರ್‌ ಅವರು ಈಗ ಪ್ರತಿಭಟನಾಕರರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

     

     

     

    ಲಿವರ್‌ಪೂಲ್, ಹಲ್, ಬ್ರಿಸ್ಟಲ್, ಲೀಡ್ಸ್‌ನಲ್ಲಿ ನಡೆದ ಘರ್ಷಣೆಗಳಲ್ಲಿ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿವೆ. ಇದನ್ನೂ ಓದಿ: ಬಿಹಾರದಲ್ಲಿ ಕನ್ವರ್ ಯಾತ್ರೆ ವೇಳೆ ಡಿಜೆ ವಾಹನಕ್ಕೆ ವಿದ್ಯುತ್ ಸ್ಪರ್ಶ – 9 ಮಂದಿ ದುರ್ಮರಣ

    ಲೀಡ್ಸ್‌ನಲ್ಲಿ ಸರಿಸುಮಾರು 150 ಜನರು ಇಂಗ್ಲಿಷ್ ಧ್ವಜಗಳನ್ನು ಹಿಡಿದುಕೊಂಡು, ನೀವು ಇನ್ನು ಮುಂದೆ ಇಂಗ್ಲಿಷ್ ಪ್ರಜೆಗಳಲ್ಲ ಎಂದು ಎಂದು ವಲಸಿಗರ ವಿರುದ್ಧ ಘೋಷಣೆ ಕೂಗಿದ್ದಾರೆ. ಮುಸ್ಲಿಮರು ಅಲ್ಲಾ ಹು ಅಕ್ಬರ್‌ ಕೂಗುತ್ತಾ ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದ್ದರಿಂದ ಹೋಟೆಲ್‌, ಮಾಲ್‌ಗಳ ಮೇಲೂ ದಾಳಿ ನಡೆಯುತ್ತಿದೆ.

     

  • ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಲಂಡನ್‌ನಲ್ಲಾದ (London) ಸೋಂಕಿತರ ರಕ್ತದ ಹಗರಣಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಈ ಹಗರಣಕ್ಕೆ ಬಲಿಯಾದವರು ಒಬ್ಬರು ಇಬ್ಬರಲ್ಲ. ಬರೋಬ್ಬರಿ 3,000 ಮಂದಿ. ವೈದ್ಯಕೀಯ ಲೋಕದ ನಿರ್ಲಕ್ಷ್ಯಕ್ಕೆ ಸಾವಿರಾರು ಜನರ ಬದುಕು ಬರಡಾಯಿತು. ಇನ್ನೂ ಬಾಳಬೇಕಿದ್ದ ನೂರಾರು ಮಕ್ಕಳ ಬದುಕು ಕಮರಿತು. ಹೌದು, 70-80 ರ ದಶಕದಲ್ಲಿ ಲಂಡನ್‌ನಲ್ಲಾದ ಈ ಹಗರಣವು ಈಗ ಬೆಳಕಿಗೆ ಬಂದಿದೆ. ಈ ಹಗರಣದಿಂದ ವೈದ್ಯಲೋಕದ ವೈಫಲ್ಯ ಜಗಜ್ಜಾಹೀರಾಗಿದೆ.

    ತನಿಖಾ ವರದಿಯಲ್ಲೇನಿದೆ?
    ಮೇ 20 ರಂದು ಯುನೈಟೆಡ್ ಕಿಂಗ್‌ಡಮ್‌ನ (United Kingdom) ಸೋಂಕಿತ ರಕ್ತದ ಹಗರಣದ ತನಿಖಾ ವರದಿ ಬಿಡುಗಡೆಯಾಯಿತು. ಸಾವಿರಾರು ಜನರು ಹೆಚ್‌ಐವಿ (HIV) ಅಥವಾ ಹೆಪಟೈಟಿಸ್‌ಗೆ (Hepatitis C) ತುತ್ತಾಗಲು ಕಾರಣವಾದ ಹಗರಣ ಇದು ಎಂಬುದು ಬಯಲಾಯಿತು. ಈ ಹಗರಣವು ರಾಜ್ಯ-ನಿಧಿಯ ರಾಷ್ಟ್ರೀಯ ಆರೋಗ್ಯ ಸೇವೆಯ (NHS) ಇತಿಹಾಸದಲ್ಲಿ ಮಾರಣಾಂತಿಕ ಚಿಕಿತ್ಸಾ ವಿಪತ್ತುಗಳಲ್ಲಿ ಒಂದು ಎಂಬ ಕೆಟ್ಟ ದಾಖಲೆ ಬರೆಯಿತು. ಬ್ರಿಯಾನ್ ಲ್ಯಾಂಗ್‌ಸ್ಟಾಫ್ ನೇತೃತ್ವದಲ್ಲಿ ತನಿಖೆ ನಡೆಯಿತು. ಹಗರಣವು 30,000 ಮಂದಿ ಆರೋಗ್ಯ ಸಮಸ್ಯೆ ಹಾಗೂ 3,000 ಮಂದಿ ಸಾವಿಗೆ ಕಾರಣವಾಯಿತು ಎಂಬುದನ್ನು ವರದಿ ಬಹಿರಂಗಪಡಿಸಿದೆ. ಇಂತಹ ದೊಡ್ಡ ದುರಂತವನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸಿತು ಎಂದು ಸಹ ದೂರಲಾಗಿದೆ. ‘ಸತ್ಯವನ್ನು ಮರೆಮಾಚುವುದು ಸಂಯೋಜಿತ ಪಿತೂರಿಗಿಂತ ಹೆಚ್ಚು ಅಪಾಯಕಾರಿ’ ಎಂದು ಬ್ರಿಯಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?

    ಏನಿದು ಸೋಂಕಿತ ರಕ್ತ ಹಗರಣ?
    1970 ಮತ್ತು 1980 ರ ದಶಕಗಳಲ್ಲಿ ಬ್ರಿಟನ್‌ನಲ್ಲಿ ಸೋಂಕಿತ ರಕ್ತ ವರ್ಗಾವಣೆ ಹಗರಣ (Infected Blood Scandal) ನಡೆಯಿತು. ಆಗಿನ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವ ಹಿಮೋಫಿಲಿಯಾ ಸಮಸ್ಯೆ ಬ್ರಿಟನ್‌ನಾದ್ಯಂತ ಜನರನ್ನು ಭಾದಿಸಿತು. ಈ ಸಮಸ್ಯೆ ವೈದ್ಯಲೋಕವನ್ನು ಕಂಗೆಡಿಸಿತು. ಆಗ ಬ್ರಿಟನ್‌ನ ಆರೋಗ್ಯ ಸಂಸ್ಥೆ (ಎನ್‌ಹೆಚ್‌ಎಸ್) ‘ಫ್ಯಾಕ್ಟರ್ 8’ ಎಂಬ ಎಂಬ ವಿಧಾನದ ಮೂಲಕ ಚಿಕಿತ್ಸೆ ನೀಡಲು ಮುಂದಾಯಿತು. ಚಿಕಿತ್ಸೆ ಪ್ರಕಾರ, ಹತ್ತಾರು ದಾನಿಗಳಿಂದ ಪ್ಲಾಸ್ಮಾಗಳನ್ನು ಒಟ್ಟುಗೂಡಿಸಿ ರೋಗಿಗೆ ನಿಡಲಾಗುತ್ತಿತ್ತು. ಹಿಂದಿನ ಚಿಕಿತ್ಸೆಗಳಿಗಿಂತ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಹಾಗಾಗಿ, ಇದನ್ನ ‘ವಂಡರ್ ಡ್ರಗ್’ ಚಿಕಿತ್ಸೆ ಎಂದು ಬ್ರಿಟನ್ ವೈದ್ಯರು ಕರೆದರು.

    ಏನಿದು ಹಿಮೋಫೀಲಿಯಾ?
    ಇದೊಂದು ಅಪರೂಪದ ಆನುವಂಶಿಕ ಸಮಸ್ಯೆ. ಹಿಮೋಫೀಲಿಯಾಗೆ ಒಳಗಾದವರಲ್ಲಿ ರಕ್ತ ಹೆಪ್ಪುಗಟ್ಟಲು ಕಷ್ಟವಾಗುತ್ತದೆ. ರಕ್ತ ತೆಳುವಾಗುವ ಸಮಸ್ಯೆ ಇರುತ್ತದೆ. ಹಿಮೋಫೀಲಿಯಾದಲ್ಲಿ ಎರಡು ರೀತಿ ಇದೆ. ಹಿಮೋಫೀಲಿಯಾ-ಎ ಹೊಂದಿರುವವರ ರಕ್ತದಲ್ಲಿ ಹೆಪ್ಪುಗಟ್ಟುವ ಅಂಶವಾದ ಫ್ಯಾಕ್ಟರ್-8 ರ ಕೊರತೆ ಇರುತ್ತದೆ. ಹಿಮೋಫೀಲಿಯಾ-ಬಿ ಸಮಸ್ಯೆ ಇರುವವರಿಗೆ ಫ್ಯಾಕ್ಟರ್-9 ರ ಕೊರತೆ ಇರುತ್ತದೆ. ಇದನ್ನೂ ಓದಿ: ನಿಮ್ಮ ಡಿಜಿಟಲ್‌ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?

    ರೋಗಿಗಳಿಗೆ ಫ್ಯಾಕ್ಟರ್-8 ಚಿಕಿತ್ಸೆ ನೀಡಲು ಸಾಕಷ್ಟು ಪ್ರಮಾಣದ ರಕ್ತದ ಅಗತ್ಯವಿತ್ತು. ಆಗ ಅಮೆರಿಕದಿಂದ ಬ್ರಿಟನ್ ರಕ್ತ ತರಿಸಿಕೊಳ್ಳಲು ಮುಂದಾಯಿತು. ದಾನ ಮಾಡಿದ್ದರಲ್ಲಿ ಮಾದಕ ವ್ಯಸನಿಗಳು, ಕೈದಿಗಳು, ಅಪಾಯಕಾರಿ ಸೋಂಕು ಹೊಂದಿದ ವ್ಯಕ್ತಿಗಳ ರಕ್ತವೇ ಹೆಚ್ಚಿನ ಪ್ರಮಾಣದಲ್ಲಿತ್ತು. ಪರೀಕ್ಷೆ ಮಾಡದೇ ಇದೇ ರಕ್ತವನ್ನು ಬಳಸಿ ಜನರಿಗೆ ಚಿಕಿತ್ಸೆ ನೀಡಲಾಯಿತು. ಒಬ್ಬ ದಾನಿ ನೀಡಿದ ರಕ್ತದಲ್ಲಿ ಸೋಂಕು ಇದ್ದರೆ, ಅದು ಇಡೀ ಬ್ಯಾಚ್ ಅನ್ನು ಕಲುಷಿತಗೊಳಿಸುವ ಅಪಾಯವಿತ್ತು. ಇಂತಹ ರಕ್ತ ಪಡೆದ ಸಾವಿರಾರು ಮಂದಿ ಸೋಂಕಿಗೆ ತುತ್ತಾದರು.

    ಸೋಂಕಿತ ರಕ್ತ ಪಡೆದವರಿಗೆ ಹೆಚ್‌ಐವಿ, ಹೆಪಟೈಟಿಸ್
    ತನಿಖಾ ವರದಿಯ ಪ್ರಕಾರ 30,000 ಜನರು ಹೆಚ್‌ಐವಿ, ಹೆಪಟೈಟಿಸ್ ಸಿ ಗೆ ತುತ್ತಾದರು. ರಕ್ತ ದಾನ ಮಾಡಿದವರಲ್ಲಿ ಹೆಚ್ಚಾಗಿ ಹೆಪಟೈಟಿಸ್ ಸಿ ಸೋಂಕು ಇತ್ತು. 380 ಮಕ್ಕಳು ಹೆಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ. ಹೆರಿಗೆ ಅಥವಾ ಶಸ್ತ್ರಚಿಕಿತ್ಸೆಗಾಗಿ ರಕ್ತದ ಅಗತ್ಯವಿರುವ ಜನರಿಗೂ ಸೋಂಕಿತ ರಕ್ತವನ್ನೇ ನೀಡಲಾಗಿತ್ತು.

    ಹೆಚ್‌ಐವಿ ಸೋಂಕಿಗೆ ಒಳಗಾದವರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಮರಣ ಹೊಂದಿದರು. ಬದುಕಿದ್ದಾಗ ಇವರ ಸಂಪರ್ಕ ಹೊಂದಿದವರಿಗೂ ಸೋಂಕು ವರ್ಗಾವಣೆಯಾಗಿದೆ. ಆ ಸಂಖ್ಯೆ ಎಷ್ಟು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಇದನ್ನೂ ಓದಿ: ಫಸ್ಟ್‌ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್‌ ಸೂಟ್‌ ಫ್ಯಾಶನ್‌ ಶೋ!

    ಬ್ರಿಟನ್ ದೇಶವನ್ನೇ ಹೆಚ್ಚು ಕಾಡಿದ್ದೇಕೆ?
    70 ರ ದಶಕದಲ್ಲಿ ಹಿಮೋಫೀಲಿಯಾ ಬ್ರಿಟನ್ ದೇಶವನ್ನು ಹೆಚ್ಚು ಕಾಡಿತ್ತು. ಜಪಾನ್, ಸ್ಪೇನ್ ದೇಶಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡರೂ, ಸೋಂಕು ತಗುಲುವ ಪ್ರಮಾಣ ಕಡಿಮೆಯಿತ್ತು. ಅಲ್ಲದೇ ಬ್ರಿಟನ್ ಫ್ಯಾಕ್ಟರ್-8 ಎಂಬ ಹೊಸ ಚಿಕಿತ್ಸಾ ವಿಧಾನವನ್ನು ಪರಿಚಯಿಸಿದ್ದು, ದೊಡ್ಡ ದುರಂತಕ್ಕೆ ಕಾರಣವಾಯಿತು. ಆದರೆ ಜಪಾನ್, ಸ್ಪೇನ್ ದೇಶಗಳು ಹಳೆ ಚಿಕಿತ್ಸಾ ವಿಧಾನವನ್ನೇ ಮುಂದುವರಿಸಿದ್ದರಿಂದ ಹೆಚ್ಚಿನ ಸಮಸ್ಯೆ ಆಗಲಿಲ್ಲ. 90 ರ ದಶಕಕದವರೆಗೂ ಬ್ರಿಟನ್‌ನಲ್ಲಿ ಹೆಪಟೈಟಿಸ್-ಸಿ ಪತ್ತೆಗಾಗಿ ಸೋಂಕಿಗೆ ಸ್ಕ್ರೀನಿಂಗ್ ಪರೀಕ್ಷೆ ಕೂಡ ಲಭ್ಯವಿರಲಿಲ್ಲ. ಇದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಲು ಕಾರಣವಾಗಿತ್ತು.

    ಸರ್ಕಾರದ ಪ್ರತಿಕ್ರಿಯೆ ಏನು?
    ಯುಕೆನಲ್ಲಿ ದೊಡ್ಡ ದುರಂತಕ್ಕೆ ಕಾರಣವಾದ ಹಗರಣದ ವಿಚಾರವಾಗಿ ಬ್ರಿಟನ್‌ನ ಪ್ರಧಾನಿ ರಿಷಿ ಸುನಾಕ್ ದೇಶದ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ. ವೈದ್ಯಕೀಯ ಲೋಕದ ಅತಿ ದೊಡ್ಡ ಹಗರಣ ಇದಾಗಿದ್ದು, ಬ್ರಿಟನ್ ಸರ್ಕಾರ ಇದರಿಂದ ತಲೆ ತಗ್ಗಿಸುವಂತಾಗಿದೆ. ಈ ಘಟನೆಗೆ ನಾನು ಪೂರ್ಣ ಹೃದಯದಿಂದ ನಿಸ್ಸಂದಿಗ್ಧವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದಿದ್ದಾರೆ.

    ಅಂದಿನಿಂದ ಇಲ್ಲಿವರೆಗೆ ಏನಾಗಿದೆ?
    1980 ರ ದಶಕದ ಉತ್ತರಾರ್ಧದಲ್ಲಿ ಸಂತ್ರಸ್ತರು ಮತ್ತು ಅವರ ಕುಟುಂಬಗಳು ವೈದ್ಯಕೀಯ ನಿರ್ಲಕ್ಷ್ಯದ ಆಧಾರದ ಮೇಲೆ ಪರಿಹಾರ ನೀಡಬೇಕು ಎಂದು ಬ್ರಿಟನ್‌ನಾದ್ಯಂತ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. 1990 ರ ದಶಕದ ಆರಂಭದಲ್ಲಿ ಹೆಚ್‌ಐವಿ ಸೋಂಕಿತರಿಗೆ ಏಕಕಾಲದಲ್ಲಿ ಪರಿಹಾರ ನೀಡಲು ಸರ್ಕಾರವು ಚಾರಿಟಿಯನ್ನು ಸ್ಥಾಪಿಸಿತು. ಆದರೆ ಸಮಸ್ಯೆ ಅಲ್ಲಿಗೆ ಬಗೆಹರಿಯಲಿಲ್ಲ. ಸರ್ಕಾರದ ವಿರುದ್ಧ ಅಭಿಯಾನಗಳು ಪ್ರಾರಂಭವಾದವು.

    ಪ್ರಕರಣ ಸಂಸತ್ ಮೆಟ್ಟಿಲೇರಿ ತನಿಖೆಯ ಒತ್ತಾಯ ಕೇಳಿಬಂತು. ಕೊನೆಗೆ 2018 ರ ಫೆಬ್ರವರಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಸರ್ ಬ್ರಿಯಾನ್ ಲ್ಯಾಂಗ್‌ಸ್ಟಾಫ್ ಅವರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಲಾಯಿತು. 2018 ರ ಜುಲೈ ತಿಂಗಳಿಂದ ತನಿಖೆ ಪ್ರಾರಂಭವಾಯಿತು. 2019 ರ ಏಪ್ರಿಲ್‌ನಿಂದ 2022 ರ ಡಿಸೆಂಬರ್ ವರೆಗೆ ಸೋಂಕಿತ ಮತ್ತು ಬಾಧಿತರಿಂದ ಸಾರ್ವಜನಿಕ ಸಾಕ್ಷ್ಯವನ್ನು ತನಿಖಾ ತಂಡ ಸಂಗ್ರಹಿಸಿತು. 2023 ರ ಫೆಬ್ರವರಿ 3 ರಲ್ಲಿ ಮೌಖಿಕವಾಗಿ ವರದಿ ಒಪ್ಪಿಸಲಾಯಿತು.