Tag: ಯುದ್ಧ ನೌಕೆ

  • ಇನ್ಮುಂದೆ ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ: ರಾಜನಾಥ್ ಸಿಂಗ್

    ಇನ್ಮುಂದೆ ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ: ರಾಜನಾಥ್ ಸಿಂಗ್

    ನವದೆಹಲಿ: ಇನ್ನುಮುಂದೆ ಎಲ್ಲ ಯುದ್ಧ ನೌಕೆಗಳನ್ನು (Warships) ಭಾರತದಲ್ಲೇ ತಯಾರಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ರಕ್ಷಣಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ಯುದ್ಧನೌಕೆಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಹೇಳಿದರು. ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ನಡುವೆ ದೇಶದ ಮಿಲಿಟರಿ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೆಚ್ಚಿಸಲು ‘ಆತ್ಮನಿರ್ಭರ ಭಾರತ’ದತ್ತ ನವೀಕೃತ ಒತ್ತಡವನ್ನು ಒತ್ತಿ ಹೇಳಿದರು. ಈ ಮಟ್ಟದ ಸ್ಥಳೀಯ ಅಭಿವೃದ್ಧಿ ಹೊಸ ಯುದ್ಧನೌಕೆಗಳಲ್ಲಿ ಪ್ರತಿಯೊಂದರಲ್ಲೂ 75%ನಷ್ಟು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದ ಕಾರ್ಯತಂತ್ರದ ಸ್ವಾಯತ್ತತೆಯನ್ನು ಮಾತ್ರ ಬಲಪಡಿಸಬಹುದು. ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಜಗತ್ತು ಸಾಕ್ಷಿಯಾಗಿದೆ ಎಂದರು. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

    ನಮ್ಮ ಪಡೆಗಳು, ಸ್ಥಳೀಯ ಉಪಕರಣಗಳೊಂದಿಗೆ, ತಮ್ಮ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ ರೀತಿ, ಯಾವುದೇ ಕಾರ್ಯಾಚರಣೆಯು ದೂರದೃಷ್ಟಿ, ದೀರ್ಘಾವಧಿಯ ಸಿದ್ಧತೆ ಮತ್ತು ಸಮನ್ವಯವಿಲ್ಲದೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ ಎಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಹೇಳಿದರು. ಅದು ಸುಮಾರು 24,000 ಕೋಟಿ ರೂ.ಗಳಿಗೆ ಏರಿದೆ. ದಾಖಲೆಯ ಮಟ್ಟವನ್ನು ತಲುಪಿದೆ. ಇದು ಭಾರತ ಇನ್ನು ಮುಂದೆ ಕೇವಲ ಖರೀದಿದಾರನಲ್ಲ. ಅದು ರಫ್ತುದಾರನಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಈ ವಿಧಾನವು ಮುಂಬರುವ ದಿನಗಳಲ್ಲಿ ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ವಿಶ್ವದ ಉದಯೋನ್ಮುಖ ಶಕ್ತಿಗಳಲ್ಲಿ ನಮಗೆ ಪ್ರಮುಖ ಸ್ಥಾನವನ್ನು ನೀಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

    ಇದೇ ವೇಳೆ ಭಾರತದ ರಕ್ಷಣಾ ರಚನೆಯು ಯಾವುದೇ ಅನಿಶ್ಚಿತ ವಿದೇಶಿ ಹಸ್ತಕ್ಷೇಪವನ್ನು ಅವಲಂಬಿಸಿರಬಾರದು ಮತ್ತು ಅದು ತನ್ನದೇ ಆದ ಸಾಮರ್ಥ್ಯಗಳನ್ನು ಆಧರಿಸಿರಬೇಕು. ಮುಂದಿನ 10 ವರ್ಷಗಳಲ್ಲಿ ಪ್ರಸ್ತಾವಿತ ಸುದರ್ಶನ ಚಕ್ರ ವಾಯು ರಕ್ಷಣಾ ವ್ಯವಸ್ಥೆಯಡಿಯಲ್ಲಿ ದೇಶಾದ್ಯಂತದ ಎಲ್ಲಾ ಪ್ರಮುಖ ಸ್ಥಾಪನೆಗಳಿಗೆ ಸಂಪೂರ್ಣ ವೈಮಾನಿಕ ಭದ್ರತೆಯನ್ನು ಒದಗಿಸಲು ಸರ್ಕಾರ ಯೋಚಿಸಿದೆ ಎಂದರು. ಇದನ್ನೂ ಓದಿ: ಜಪಾನ್‌ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್‌ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?

  • ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!

    ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!

    – ಇಬ್ಬರು ನೌಕಾ ನೆಲೆಯ ಸಿಬ್ಬಂದಿಗೆ ಕರೆ

    ಕಾರವಾರ: ಪಹಲ್ಗಾಮ್‌ ದಾಳಿಯ (Pahalgam Terrorist Attack) ಬಳಿಕ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದೆ. ಆದರೀಗ ಕುತಂತ್ರಿ ಪಾಕಿಸ್ತಾನ ತನ್ನ ಬೇಹುಗಾರಿಕಾ ಏಜಂಟರನ್ನು ಬಳಸಿ ಕಾರವಾರದ ಕದಂಬ ನೌಕಾನೆಲೆಯ (Kadamba Naval Base) ಯುದ್ಧ ನೌಕೆಗಳು ಹಾಗೂ ವಿಶಾಖಪಟ್ಟಣಂ ನಲ್ಲಿರುವ ನೌಕೆಗಳ ಮಾಹಿತಿ ಪಡೆಯಲು ಯತ್ನಿಸಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

    ಭಾರತೀಯ ನೌಕಾದಳದ ಅಧಿಕಾರಿಗಳ ಹೆಸರು ಬಳಸಿ ಕರೆ ಮಾಡುವ ಮೂಲಕ ಐಎನ್‌ಎಸ್ ವಿಕ್ರಾಂತ್ (INS Vikrant) ಹಾಗೂ ಇತರ ಯುದ್ಧನೌಕೆಯ ಮಾಹಿತಿ ಪಡೆಯಲು ಯತ್ನ ನಡೆಸುತ್ತಿರುವುದು ಉನ್ನತ ಮೂಲಗಳಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು

    ಕಾರವಾರ (Karwar) ಹಾಗೂ ವಿಶಾಖಪಟ್ಟಣಂ ನಲ್ಲಿ ಕೆಲಸ ಮಾಡುವ ಇಬ್ಬರು ನೌಕಾದಳದ ಸಿಬ್ಬಂದಿಗೆ ಪಾಕಿಸ್ತಾನದ ಏಜೆಂಟರು (Pakistan Agent) ಕರೆ ಮಾಡಿ ತಾವು ನೌಕಾದಳದ ಅಧಿಕಾರಿಗಳು ಎಂದು ಹೇಳಿ ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ವಿಕ್ರಮಾದಿತ್ಯ, ಐಎನ್‌ಎಸ್ ಸುಭದ್ರ ಮುಂತಾದವುಗಳ ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಈ ಬಗ್ಗೆ ನೌಕಾದಳದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಇನ್ನೂ ಕೆಲ ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಮಾಡಲು ಸಹ ಪ್ರಯತ್ನ ಪಟ್ಟಿರುವುದು ಬೆಳಕಿಗೆ ಬಂದಿದೆ. ಎಚ್ಚೆತ್ತ ಅಧಿಕಾರಿಗಳು ನೌಕಾದಳದ ಯಾವ ಮಾಹಿತಿಯನ್ನೂ ನೀಡದಂತೆ ಸಂಬಂಧಪಟ್ಟ ನೌಕಾ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಕಾರವಾರದ ನೌಕಾದಳದ ಅಧಿಕಾರಿಗಳ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.

    2024ರ ಆಗಸ್ಟ್‌ನಲ್ಲಿ ಹಣಕ್ಕಾಗಿ ಕದಂಬ ನೌಕಾನೆಲೆಯ ಹಾಗೂ ವಿಕ್ರಮಾಧಿತ್ಯ ನೌಕೆಯ ಮಾಹಿತಿ ಹಾಗೂ ಫೋಟೋ ಹಂಚಿಕೊಂಡಿದ್ದ ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದ್ಗಾ ಗ್ರಾಮದ ವೇತನ್ ರಂಡೇಲ್ ಮತ್ತು ಹಳವಳ್ಳಿ ಗ್ರಾಮದ ಅಕ್ಷಯ್ ರವಿ ನಾಯ್ಕ್ ಎಂಬ ಮೂರು ಜನರನ್ನು ಎನ್‌ಐಎ ಬಂಧಿಸಿತ್ತು. ಇದನ್ನೂ ಓದಿ: ವಿದೇಶಿ ಕಂಪನಿಗಳಿಂದಲೂ ಶಾಕ್‌ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್‌!

    ಈ ಘಟನೆ ನಂತರ ಕದಂಬ ನೌಕಾನೆಲೆಯ ವ್ಯಾಪ್ತಿಯೊಳಗೆ ಮೊಬೈಲ್ ನನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.

  • ಇರಾನ್‌ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

    ಇರಾನ್‌ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

    ವಾಷಿಂಗ್ಟನ್‌: ಇಸ್ರೇಲ್‌ (Israel) ಮೇಲೆ ಇರಾನ್‌ (Iran) ದಾಳಿ ಮಾಡುವ ಸಾಧ್ಯತೆ ಇರುವ ಕಾರಣ ಅಮೆರಿಕ ಈಗ ತನ್ನ ಯುದ್ಧ ನೌಕೆಯನ್ನು (War Ship) ಇಸ್ರೇಲ್‌ಗೆ ಕಳುಹಿಸಿದೆ.

    ಸಂಭವನೀಯ ಇರಾನ್ ದಾಳಿಯನ್ನು ಎದುರಿಸಲು ಅಮೆರಿಕ (USA) ಸನ್ನದ್ಧವಾಗಿದೆ. ಇಸ್ರೇಲ್ ಹಾಗೂ ಅಮೆರಿಕದ ಪಡೆಗಳ ರಕ್ಷಣೆಗಾಗಿ ಯುದ್ಧ ನೌಕೆಗಳು ಧಾವಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಇಸ್ರೇಲ್ ಮತ್ತು ಅಮೆರಿಕನ್ ಪಡೆಗಳನ್ನು ರಕ್ಷಿಸಲು ಯುಎಸ್ ಹೆಚ್ಚುವರಿ ಮಿಲಿಟರಿ ಸೇನೆಯ ಜೊತೆ ಎರಡು ಯುದ್ಧ ನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ ಸಮುದ್ರಕ್ಕೆ ಕಳುಹಿಸಿದೆ.

    ಕ್ಷಿಪಣಿ (Missile) ಮತ್ತು ಡ್ರೋನ್‌ (Drone) ಮೂಲಕ ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಇರಾನ್‌ ಬಳಿ ಬ್ಯಾಲಿಸ್ಟಿಕ್‌ (Ballistic) ಮತ್ತು ಕ್ರೂಸ್‌ (Cruise Missiles) ಕ್ಷಿಪಣಿಗಳಿವೆ. ಇವು 2 ಸಾವಿರ ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.  ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

    ಶುಕ್ರವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅತೀ ಶೀಘ್ರದಲ್ಲಿ ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದ್ದರು.

     

    ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದ್ದವು.  ಇದನ್ನೂ ಓದಿ: 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ

    ಏಪ್ರಿಲ್‌ 1 ರಂದು ಸಿರಿಯಾದಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಸೇರಿದಂತೆ 7 ಮಂದಿ ಇರಾನ್‌ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು. ಈ ಏರ್‌ ಸ್ಟ್ರೈಕ್‌ ಅನ್ನು ಇಸ್ರೇಲ್‌ ಮಾಡಿದೆ ಎಂದು ಇರಾನ್‌ ದೂರಿದರೆ ಇಸ್ರೇಲ್‌ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

     

  • ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಟೆಲ್ ಅವಿವ್: ಇಸ್ರೇಲ್ ಹಮಾಸ್ ಯುದ್ಧದಲ್ಲಿ (Israel Hamas war) ಈವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 3,800 ಪ್ಯಾಲೆಸ್ತೀನಿಯರು (Palestinians) ಹಾಗೂ 1,400 ಇಸ್ರೇಲಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಇಸ್ರೇಲ್-ಹಮಾಸ್ ಕದನ ಪಶ್ಚಿಮ ಏಷ್ಯಾದ ಶಾಂತಿ ಕದಡುವಂತೆ ಕಾಣ್ತಿದೆ. ಇಸ್ರೇಲ್ ಬೆಂಬಲಕ್ಕೆ ನಿಂತ ಅಮೆರಿಕ ವಿರುದ್ಧ ಅರಬ್ ದೇಶಗಳು ಸಿಡಿದೇಳುತ್ತಿವೆ. ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಮೆರಿಕ ಸೇನಾ ಶಿಬಿರದ ಮೇಲೆ ರಾಕೆಟ್‌ಗಳು ಹಾರಿವೆ.

    ಸಿರಿಯಾದ ಆಲ್-ತನ್ಫ್ ಸೇನಾ ನೆಲೆ ಮೇಲೆಯೂ ಡ್ರೋನ್ ದಾಳಿ ನಡೆದಿದೆ. ಯೆಮೆನ್ ತೀರದಿಂದ ಇರಾನ್ ಬೆಂಬಲಿತ ಹುತಿ ಉಗ್ರರು ಇಸ್ರೇಲ್ ಮೇಲೆ ಪ್ರಯೋಗಿಸಿದ ಕ್ಷಿಪಣಿಗಳು ಯುಎಸ್ ಕಾರ್ನಿ ಹೆಸರಿನ ಅಮೆರಿಕ ಯುದ್ಧ ನೌಕೆಯನ್ನು ನಾಶ ಮಾಡಿದೆ. ನಾವು ಎಂತಹದೇ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

    ಈ ಮಧ್ಯೆ, ಬಾಯ್ಕಾಟ್ ಇಸ್ರೇಲ್ ಕ್ಯಾಂಪೇನ್ ಎನ್ನುವ ಪೋಸ್ಟರ್ ಬೆಂಗಳೂರಿನ ಎಲೆಕ್ಟಾçನಿಕ್ ಸಿಟಿಯ ಮಸೀದಿಯೊಂದರ ಗೋಡೆ ಮೇಲೆ ಕಾಣಿಸಿಕೊಂಡಿದೆ. ಆಕ್ರೋಶ ವ್ಯಕ್ತವಾಗುತ್ತಲೇ ಪೋಸ್ಟರ್ ತೆರವು ಮಾಡಲಾಗಿದೆ. ಇನ್ನೂ ಹೈದ್ರಾಬಾದ್‌ನ ಮಸೀದಿಯೊಂದರ ಆವರಣದಲ್ಲಿ ಇಸ್ರೇಲ್-ಅಮೆರಿಕ ಧ್ವಜವನ್ನು ಬರೆದು ಅದರ ಮೇಲೆ ಓಡಾಡುವ ಮೂಲಕ ಮುಸ್ಲಿಮರು ಆಕ್ರೋಶ ಹೊರಹಾಕ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ

    ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ

    ಬೀಜಿಂಗ್/ವಾಷಿಂಗ್ಟನ್: ತೈವಾನ್ ವಿಚಾರದಲ್ಲಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರುವ ಚೀನಾ, ಕಂಡಕಂಡವರ ಮೇಲೆಲ್ಲಾ ಎಗರಾಡುತ್ತಿದೆ. ಜಿ-7 ರಾಷ್ಟ್ರಗಳು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಕೆನಡಾ ಕೂಡ ಪಾಲ್ಗೊಂಡಿದ್ದಕ್ಕೆ ಚೀನಾ ಗರಂ ಆಗಿದೆ. ಕೆನಡಾ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದೆ. ತೈವಾನ್ ವಿಚಾರದಲ್ಲಿ ಕೆನಡಾ ತನ್ನ ತಪ್ಪು ಸರಿ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದೆ.

    ಇಂದು ಬೆಳಗ್ಗೆ ಚೀನಾ ತನ್ನ ಪ್ರಮುಖ ದ್ವೀಪದ ಮೇಲೆ ದಾಳಿಯನ್ನು ಅನುಕರಿಸುತ್ತದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದನ್ನೂ ಓದಿ: ಅಮೆರಿಕ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾದಿಂದ ತಡೆಯಲು ಸಾಧ್ಯವೇ ಇಲ್ಲ: ನ್ಯಾನ್ಸಿ ಪೆಲೋಸಿ

    ಅಮೆರಿಕದ ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಫೆಲೊಸಿ ಅವರ ಭೇಟಿ ವಿರುದ್ಧ ತನ್ನ ಆಕ್ರೋಶ ಮುಂದುವರಿಸಿರುವ ಚೀನಾ, ಇದೀಗ ನ್ಯಾನ್ಸಿ ಫೆಲೊಸಿ ವಿರುದ್ಧ ನಿರ್ಬಂಧ ವಿಧಿಸಿದೆ. ನಿನ್ನೆಯಷ್ಟೇ `ಅಮೆರಿಕದ ಅಧಿಕಾರಿಗಳು ತೈವಾನ್‌ಗೆ ಭೇಟಿ ನೀಡುವುದನ್ನು ತಡೆಯಲು, ನಮ್ಮಮ್ಮು ಪ್ರತ್ಯೇಕಿಸಲು ಸಾಧ್ಯವೇ ಇಲ್ಲ’ ಎಂದು ವಾದಿಸಿದ್ದರು.

    ಅಲ್ಲದೇ ಅಮೆರಿಕದ ಜೊತೆಗಿನ ರಕ್ಷಣಾ, ಹವಾಮಾನ ಬದಲಾವಣೆ ಕುರಿತ ಮಾತುಕತೆ ರದ್ದುಪಡಿಸಿರುವುದಾಗಿಯೂ ಚೀನಾ ಘೋಷಿಸಿದೆ. ಜೊತೆಗೆ ತೈವಾನ್ ಸುತ್ತಲೂ ತನ್ನ ಸೇನೆ ನಡೆಸುತ್ತಿರುವ ಸೇನಾ ಕವಾಯತ್ತಿಗೆ ಮತ್ತೆ 100 ಯುದ್ಧ ವಿಮಾನಗಳನ್ನು ರವಾನಿಸುವ ಮೂಲಕ ತೈವಾನ್ ವಿರುದ್ಧ ತನ್ನ ಕಪಿಮುಷ್ಠಿ ಬಿಗಿಗೊಳಿಸುವ ಪ್ರಯತ್ನ ಮುಂದುವರಿಸಿದೆ. ಈ ಬಗ್ಗೆ ತೈವಾನ್ ಕಿಡಿ ಕಾರಿದ್ದು 10 ಯುದ್ಧ ನೌಕೆಗಳು ಕೊಲ್ಲಿಯಲ್ಲಿ ಸಂಚರಿಸಿವೆ. ಇದಕ್ಕೆ ಪ್ರತಿಯಾಗಿ 63 ಚೀನಾ ಯುದ್ಧ ವಿಮಾನಗಳು ಹಾರಾಡಿ ತೈವಾನ್ ಅನ್ನು ಯುದ್ಧಕ್ಕೆ ಪ್ರಚೋದಿಸಿವೆ. ಇದನ್ನೂ ಓದಿ: ಶ್ರೀಲಂಕಾದತ್ತ ಸಾಗುತ್ತಿದೆ ಪತ್ತೇದಾರಿ, ಬ್ಯಾಲಿಸ್ಟಿಕ್‌ ಕ್ಷಿಪಣಿ ಹೊತ್ತ ಚೀನಿ ಹಡಗು

    ಹಲವು ನಿರ್ಬಂಧ: ತನ್ನ ಎಚ್ಚರಿಕೆ ಹೊರತಾಗಿಯೂ ತೈವಾನ್‌ಗೆ ಭೇಟಿ ನೀಡಿದ್ದಕ್ಕೆ ಶಿಸ್ತುಕ್ರಮ ಮುಂದುವರಿಸಿರುವ ಚೀನಾ ನ್ಯಾನ್ಸಿ ಫೆಲೊಸಿ ಮತ್ತು ಅವರ ಕುಟುಂಬದ ವಿರುದ್ಧ ನಿರ್ಬಂಧಗಳನ್ನು ಹೇರಿದ್ದು, ಇದು ಸಾಂಕೇತಿಕ ಪ್ರತಿಭಟನೆಯ ಸಂಕೇತ ಎಂದು ಹೇಳಿದೆ.

    ಚಾಕ್ಲೇಟ್ ಸಂಸ್ಥೆಯಿಂದ ಸಾರಿ ಕೇಳಿಸಿಕೊಂಡ ಚೀನಾ: ಇನ್ನು ಸ್ನೀಕರ್ ಚಾಕ್ಲೆಟ್ ಸಂಸ್ಥೆಯಿಂದ ಸಾರಿ ಹೇಳಿಸಿಕೊಂಡಿದೆ. ಆ ಚಾಕ್ಲೆಟ್ ಸಂಸ್ಥೆ ಪ್ರಮೋಷನ್ ಭಾಗವಾಗಿ ಇತ್ತೀಚಿಗೆ ಒಂದು ವೀಡಿಯೋ ಬಿಡುಗಡೆ ಮಾಡಿತ್ತು. ಈ ಸ್ನೀಕರ್ ಕ್ಯಾಂಡಿಗಳು ಕೇವಲ ತೈವಾನ್, ಮಲೇಷ್ಯಾ, ದಕ್ಷಿಣ ಕೋರಿಯಾ ದೇಶಗಳಲ್ಲಷ್ಟೇ ಲಭಿಸುತ್ತೆ ಎಂದು ಆ ವೀಡಿಯೋದಲ್ಲಿ ಹೇಳಿಕೊಂಡಿತ್ತು. ಇದು ಚೀನಾದ ಸೋಶಿಯಲ್ ಮೀಡಿಯಾ ವಿಬೋದಲ್ಲಿ ವೈರಲ್ ಆಗಿತ್ತು. ಚೀನಿಯರೆಲ್ಲಾ ಗರಂ ಆಗಿ ತೈವಾನ್ ಒಂದು ದೇಶನಾ ಎಂದು ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ಸ್ನೀಕರ್ ತಯಾರಿ ಸಂಸ್ಥೆ ಮಾರ್ಸ್ ರಿಗ್ಲಿ ಕ್ಷಮೆ ಕೇಳಿದೆ. ತೈವಾನ್ ಟೆನ್ಶನ್ ನಡ್ವೆಯೂ ಲಡಾಖ್ ಪ್ರಾಂತ್ಯದಲ್ಲಿ ಭಾರತದ ವಾಯುಪಡೆಯ ಅಧಿಕಾರಿಗಳ ಜೊತೆ ಚೀನಾದ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ

    INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ

    ಕಾರವಾರ: ನಗರದ ಕದಂಬ ನೌಕಾನೆಲೆಯಿಂದ ಅರಬ್ಬಿ ಸಮುದ್ರದ ಮಾರ್ಗವಾಗಿ ಮುಂಬೈ ಕಡೆ ತೆರಳುತ್ತಿದ್ದ INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯುದ್ಧ ನೌಕೆಯಲ್ಲಿರುವ ಅಗ್ನಿನಿರೋಧಕ ವಸ್ತುಗಳನ್ನು ಬಳಸಿ ಬೆಂಕಿ ನಂದಿಸಲಾಗಿದೆ.

    ಕ್ಯಾಪ್ಟನ್ ಸುಶೀಲ್ ಮೆನನ್ ವಿಕ್ರಮಾದಿತ್ಯದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ತಿಂಗಳಿಂದ ಕಾರವಾರದ ಕದಂಬ ನೌಕಾನೆಲೆಯಲ್ಲಿ ಹಡಗಿನ ದುರಸ್ತಿ ಕಾರ್ಯ ಸಹ ನಡೆಸಲಾಗಿತ್ತು. ಆದರೆ ಬುಧವಾರ ಕಾರವಾರದ ಕದಂಬ ನೌಕಾ ನೆಲೆಯಿಂದ ಮುಂಬೈಗೆ ಹೋಗುವ ಮಾರ್ಗದ ಆಳ ಸಮುದ್ರದಲ್ಲಿ ಹಡಗಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಬೆಂಬಲ, ವ್ಯಕ್ತಿ ಮೇಲೆ ಹಲ್ಲೆ- ಇಬ್ಬರ ಬಂಧನ

    ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದು, ಬೆಂಕಿ ನಂದಿಸಲಾಗಿದೆ. ಈ ಹಿಂದೆ ಸಹ ಕಾರವಾರದ ನೌಕಾನೆಲೆಯಲ್ಲಿದ್ದ ಈ ಹಡಗಿನಲ್ಲಿ ಸಿಲೆಂಡರ್ ಸ್ಫೋಟಗೊಂಡು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ಮೂರು ವರ್ಷದ ಬಳಿಕ ಇದೀಗ ಮತ್ತೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌- ಇಂದು ಇಡಿ ಮುಂದೆ ಹಾಜರಾಗಲಿದ್ದಾರೆ ಸೋನಿಯಾ

    Live Tv
    [brid partner=56869869 player=32851 video=960834 autoplay=true]