Tag: ಯುದ್ಧವಿಮಾನ

  • ವಾಯುಪಡೆ ಸೇರಿದ ತೇಜಸ್ ಟ್ವಿನ್ ಸೀಟರ್ ವಿಮಾನ

    ವಾಯುಪಡೆ ಸೇರಿದ ತೇಜಸ್ ಟ್ವಿನ್ ಸೀಟರ್ ವಿಮಾನ

    ಬೆಂಗಳೂರು: ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದೊಂದಿಗೆ ಬೆಂಗಳೂರಿನ ಹೆಚ್‍ಎಎಲ್ (HAL) ಅಭಿವೃದ್ಧಿಪಡಿಸಿದ ಹಗುರ ಯುದ್ಧ ವಿಮಾನ (Fighter Jet) ತೇಜಸ್‍ನ ಮೊದಲ ಟ್ವಿನ್ ಸೀಟರ್ ವಾಯುಪಡೆ ಸೇರಿದೆ.

    ಬೆಂಗಳೂರಿನ ಹೆಚ್‍ಎಎಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಖಾತೆಯ ಸಹಾಯಕ ಸಚಿವ ಅಜಯ್ ಭಟ್, ಏರ್ ಮಾರ್ಷಲ್ ವಿಆರ್ ಚೌಧರಿಗೆ ತೇಜಸ್ ಟ್ವಿನ್ ಸೀಟರ್ (Tejas Twin Seater) ವಿಮಾನವನ್ನು ಹಸ್ತಾಂತರಿಸಲಾಯ್ತು. ಇದನ್ನೂ ಓದಿ: ಇದು ಪ್ರಿ ಅರೇಂಜ್ ಮ್ಯಾರೇಜ್- ಬಿಜೆಪಿ ದೋಸ್ತಿಗೆ ಮತ್ತೆ ಸಿಎಂ ಇಬ್ರಾಹಿಂ ವಿರೋಧ

    ವಾಯುಸೇನೆಯ ತರಬೇತಿ ಅಗತ್ಯಗಳಿಗೆ ಅನುಗುಣವಾಗಿ ಇಬ್ಬರು ಕುಳಿತುಕೊಳ್ಳುವಂತೆ ತೇಜಸ್ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಯುದ್ಧ ವಿಮಾನವಾಗಿ ಕೆಲಸ ಮಾಡುವ ಸಾಮಥ್ರ್ಯ ಇದಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್

    ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್

    ನವದೆಹಲಿ: ಭಾರತದ ಸಿಂಗಲ್ ಎಂಜಿನ್ ಫೈಟರ್ ಜೆಟ್ ತೇಜಸ್ ಮಲೇಷ್ಯಾದ ಮೊದಲ ಆದ್ಯತೆಯಾಗಿದ್ದು, ಅದು ತನ್ನ ಹಳೆಯ ಮಿಗ್-29 ಅನ್ನು ಬದಲಿಸಲು ಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಧ್ಯಕ್ಷ ಆರ್. ಮಾಧವನ್ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಮಾಧವನ್, ಮಲೇಷ್ಯಾದೊಂದಿಗಿನ ಒಪ್ಪಂದದ ಬಗ್ಗೆ ನನಗೆ ವಿಶ್ವಾಸವಿದೆ. ಇದರ ಬಗೆಗಿನ ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ. ರಷ್ಯಾವನ್ನು ಹೊರತುಪಡಿಸಿ ಮಲೇಷ್ಯಾದ ಎಸ್‌ಯು-30 ವಿಮಾನಗಳಿಗೆ ಬೆಂಬಲವನ್ನು ನೀಡುತ್ತಿರುವ ಏಕೈಕ ದೇಶವೆಂದರೆ ಅದು ಭಾರತ ಮಾತ್ರ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಕಂಪ್ಯೂಟರ್‌ ಕಳವು- ತಾಕತ್ತಿದ್ರೆ ನಮ್ಮನ್ನ ಹಿಡೀರಿ ಎಂದು ನಂಬರ್ ಬರೆದಿಟ್ಟ ಕಳ್ಳರು

    Fighter jet

    ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯ ಪ್ರತೀಕಾರವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ವಿಧಿಸಿವೆ. ಹೀಗಾಗಿ ಮಲೇಷ್ಯಾ ತನ್ನ ಸುಖೋಯ್ -30 ಯುದ್ಧವಿಮಾನಗಳಿಗೆ ಬಿಡಿಭಾಗಗಳನ್ನು ಸಂಗ್ರಹಿಸುವಲ್ಲಿ ತೊಂದರೆಯನ್ನು ಎದುರಿಸುತ್ತಿದೆ. ಇದೀಗ ಭಾರತ ಪ್ಯಾಕೇಜ್‌ನ ಭಾಗವಾಗಿ ಮಲೇಷ್ಯಾಗೆ ರಷ್ಯಾ ಮೂಲದ ಎಸ್‌ಯು-30 ಯುದ್ಧವಿಮಾನಗಳಿಗೆ ನಿರ್ವಹಣೆ, ದುರಸ್ತಿ ಹಾಗೂ ಪರೀಕ್ಷೆಯ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಈ ಹಿನ್ನೆಲೆ ಕೌಲಾಲಂಪುರದ ತಂಡ ಶೀಘ್ರವೇ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

    ತೇಜಸ್‌ಗೇಕೆ ಮೊದಲ ಆದ್ಯತೆ?
    ಮಲೇಷ್ಯಾ ಸರ್ಕಾರ ಈಗಾಗಲೇ ಚೀನಾದ ಜೆಎಫ್-17, ದಕ್ಷಿಣ ಕೊರಿಯಾದ ಎಫ್‌ಎ-50, ರಷ್ಯಾದ ಎಂಐಜಿ-35 ಹಾಗೂ ಯಾಕ್-130 ಜೆಟ್‌ಗಳನ್ನು ನೋಡಿದೆ. ಆದರೂ ಮಲೇಷ್ಯಾ ಭಾರತದ ತೇಜಸ್‌ಅನ್ನೇ ಉತ್ತಮ ವಿಮಾನ ಎಂದು ಬಣ್ಣಿಸಿದೆ ಎಂದು ಮಾಧವನ್ ತಿಳಿಸಿದ್ದಾರೆ.

    ಚೀನಾದ ಜೆಎಫ್-17 ಅಗ್ಗವಾಗಿದ್ದರೂ ತೇಜಸ್‌ನ ಎಂಕೆ-ಐಎ ವೇರಿಯಂಟ್‌ನೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಎಸ್‌ಯು-30ಯ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ತೇಜಸ್ ವಿಶೇಷತೆ:
    ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ(ಎಡಿಎ) ವಿನ್ಯಾಸಗೊಳಿಸಿರುವ ತೇಜಸ್ ಅನ್ನು ಬೆಂಗಳೂರು ಮೂಲದ ಹೆಚ್‌ಎಎಲ್ ತಯಾರಿಸಿದೆ. ಇದು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್(ಎಲ್‌ಸಿಎ) ಕಾರ್ಯವನ್ನು ಆಧರಿಸಿದ್ದು, ಇದು ಅಪಾಯಕಾರಿ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

    ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

    ನವದೆಹಲಿ: ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದು ಸುದೀರ್ಘ ಮಾತುಕತೆ ನಡೆಸಿದರು. ರಕ್ಷಣಾ ಕ್ಷೇತ್ರ, ವ್ಯಾಪಾರ ಹಾಗೂ ಸ್ವಚ್ಛ ಇಂಧನದಲ್ಲಿ ಸಹಕಾರ ವಿಸ್ತರಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.

    ಇದೇ ವೇಳೆ ಮಾತನಾಡಿರುವ ಅವರು, ನನ್ನ ಕೈಯ್ಯಲ್ಲಿ ಭಾರತದ ಲಸಿಕೆಯಿದೆ. ಅದು ನನಗೆ ಒಳ್ಳೆಯದನ್ನು ಮಾಡಿದೆ. ನಾನು ಭಾರತಕ್ಕೆ ಧನ್ಯವಾದ ಹೇಳುತ್ತೇನೆ. ನನ್ನ ವಿಶೇಷ ಗೆಳಯ ಪ್ರಧಾನಿ ನರೇಂದ್ರಮೋದಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಹೊಸ ಆತಂಕ ಹುಟ್ಟಿಸಿದ ಓಮಿಕ್ರಾನ್ BA.2.12 ತಳಿ

    MODI MET BORIS

    ನಾವು ರಕ್ಷಣಾ ಪಾಲುದಾರಿಕೆಯೊಂದಿಗೆ ಆರೋಗ್ಯ ಪಾಲುದಾರಿಕೆಯ ಬಗ್ಗೆಯೂ ಚರ್ಚಿಸಿದ್ದೇವೆ. ಉದಾಹರಣೆಗೆ ಅಸ್ಟ್ರಾಜೆನಿಕಾ ಸೀರಂ ಸಂಸ್ಥೆಯು ಕೋವಿಡ್ ವಿರುದ್ಧ ಹೋರಾಡಲು ಶತಕೋಟಿ ಜನರಿಗೆ ಲಸಿಕೆ ನೀಡಿದೆ. ಅಲ್ಲದೆ, ಅದು ಭಾರತಕ್ಕೂ ಸಹಾಯ ಮಾಡಿದೆ. ಅದಕ್ಕಾಗಿ ವಿಶ್ವದ ಅತಿದೊಡ್ಡ ಲಸಿಕಾ ತಯಾರಕರಾದ ಸೀರಂ ಇನ್‌ಸ್ಟಿಟ್ಯೂಟ್ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸ್ವೀಡಿಷ್ ಅಸ್ಟ್ರಾಜೆನಿಕ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮ ಸಂಸತ್‍ನಲ್ಲಿ ದ್ವೇಷ ಭಾಷಣ – ದೆಹಲಿ ಪೊಲೀಸ್ ಸಲ್ಲಿಸಿದ್ದ ಅಫಿಡವಿಟ್‍ಗೆ ಸುಪ್ರೀಂ ಅಸಮಾಧಾನ

    PM MEET

    ಅಲ್ಲದೆ, ದೇಶೀಯವಾಗಿ ಯುದ್ಧ ವಿಮಾನಗಳ ತಯಾರಿಕೆ ಸಾಮಗ್ರಿಗಳ ಕ್ಷಿಪ್ರ ಪೂರೈಕೆ ಸೇರಿದಂತೆ ರಕ್ಷಣಾ ವ್ಯವಸ್ಥೆಯಲ್ಲಿ ಭಾರತಕ್ಕೆ ಸಹಕಾರ ನೀಡಲು ಬ್ರಿಟನ್ ಮುಂದಾಗಿದೆ. ಪ್ರಸ್ತುತ ಭಾರತಕ್ಕೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ರಷ್ಯಾದಿಂದ ಪೂರೈಕೆಯಾಗುತ್ತಿದೆ. ಹಿಂದೂ ಮಹಾಸಾಗರದಲ್ಲಿ ಅಪಾಯಗಳನ್ನು ಎದುರಿಸಲು ಅಗತ್ಯವಿರುವ ಹೊಸ ತಂತ್ರಜ್ಞಾನ ಹಾಗೂ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಬ್ರಿಟಿಷ್ ಹೈ ಕಮಿಷನ್ ಹೇಳಿದೆ ಎನ್ನಲಾಗಿದೆ.

    ಕ್ಷಿಪ್ರಗತಿಯಲ್ಲಿ ರಕ್ಷಣಾ ಸಾಮಗ್ರಿಗಳ ಸಾಗಣೆಗೆ ಅನುವಾಗುವ ನಿಟ್ಟಿನಲ್ಲಿ ಭಾರತಕ್ಕೆ ಬ್ರಿಟನ್ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿ (OGEL) ಒದಗಿಸುವುದಾಗಿ ತಿಳಿಸಿದೆ. ಇದರಿಂದಾಗಿ ರಕ್ಷಣಾ ಸಾಮಗ್ರಿಗಳ ಪೂರೈಕೆ ಅವಧಿ ಕಡಿತಗೊಳ್ಳಲಿದೆ. ಇದನ್ನೂ ಓದಿ: ಮೇವು ಹಗರಣ – ಲಾಲೂ ಪ್ರಸಾದ್‌ ಯಾದವ್‌ಗೆ ಜಾಮೀನು

    ‘ಹವಾಮಾನ ಬದಲಾವಣೆಯಿಂದ ಹಿಡಿದು ಇಂಧನ, ಭದ್ರತೆ ಹಾಗೂ ರಕ್ಷಣಾ ವಲಯಗಳಲ್ಲಿ ನಮ್ಮ ಪಾಲುದಾರಿಗೆ ಉಭಯ ರಾಷ್ಟ್ರಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಗೆಳೆಯ ನಿಮ್ಮನ್ನು ಭಾರತದಲ್ಲಿ ಕಂಡು ಪುಳಕಿತನಾಗಿರುವೆ…’ ಎಂದು ಪ್ರಧಾನಿ ಮೋದಿ ಅವರು ಬೋರಿಸ್ ಅವರನ್ನು ಭೇಟಿಯಾದ ಚಿತ್ರದೊಂದಿ ಟ್ವೀಟ್ ಮಾಡಿದ್ದಾರೆ.

  • ತರಬೇತಿ ವೇಳೆ ಸಮುದ್ರಕ್ಕಪ್ಪಳಿಸಿದ ಯುದ್ಧ ವಿಮಾನ – ಪೈಲಟ್ ಕಣ್ಮರೆ

    ತರಬೇತಿ ವೇಳೆ ಸಮುದ್ರಕ್ಕಪ್ಪಳಿಸಿದ ಯುದ್ಧ ವಿಮಾನ – ಪೈಲಟ್ ಕಣ್ಮರೆ

    ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್-29ಕೆ ತರಬೇತುದಾರ ವಿಮಾನವು ಅರಬ್ಬಿ ಸಮುದ್ರದಲ್ಲಿ ಗುರುವಾರ ಅಪಘಾತಕ್ಕೀಡಾಗಿದ್ದು, ಓರ್ವ ಪೈಲಟ್ ಕಾಣೆಯಾಗಿದ್ದಾರೆ.

    ಭಾರತೀಯ ನೌಕಾಪಡೆಯ ಮಾಹಿತಿ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಐಎನ್‍ಎಸ್ ವಿಕ್ರಮಾದಿತ್ಯ ನೌಕೆಯಿಂದ ಕಾರ್ಯನಿರ್ವಹಿಸುತ್ತಿರುವ ಮಿಗ್-29ಕೆ ತರಬೇತುದಾರ ವಿಮಾನವು ನವೆಂಬರ್ 26ರಂದು ಸಂಜೆ 5 ಗಂಟೆಗೆ ಅಪಘಾತಕ್ಕೀಡಾಗಿದೆ. ಈ ಯುದ್ಧವಿಮಾನದಲ್ಲಿದ್ದ ಇಬ್ಬರು ಪೈಲಟ್‍ಗಳ ಪೈಕಿ ಒಬ್ಬರು ಸಿಕ್ಕಿದ್ದು, ಇನ್ನೊಬ್ಬರು ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದೆ.

    ಈ ಅಪಘಾತದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ. ಕಳೆದ ವರ್ಷ ನವೆಂಬರಿನಲ್ಲಿ ಪಕ್ಷಿಯೊಂದು ವಿಮಾನಕ್ಕೆ ಬಡಿದ ಕಾರಣ ಗೋವಾದಲ್ಲಿ ನೌಕಾಪಡೆಯ ಮಿಗ್-29ಕೆ ಯುದ್ಧವಿಮಾನ ಸಮುದ್ರಕ್ಕೆ ಅಪ್ಪಳಿಸಿತ್ತು. ಭಾರತೀಯ ನೌಕಪಡೆಯು 40 ಮಿಗ್-29ಕೆ ಯುದ್ಧ ವಿಮಾನಗಳನ್ನು ಹೊಂದಿದ್ದು, ಅವು ಗೋವಾ ಮತ್ತು ಅರಬ್ಬಿ ಸಮುದ್ರದಲ್ಲಿ ಐಎನ್‍ಎಸ್ ವಿಕ್ರಮಾದಿತ್ಯ ನೌಕೆಯ ಜೊತೆ ಕಾರ್ಯನಿರ್ವಹಿಸುತ್ತವೆ.

  • ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

    ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

    ಬೆಂಗಳೂರು: ಏರ್ ಶೋ ಆರಂಭಗೊಳ್ಳುವ ಮುನ್ನ ದಿನವೇ ಭಾರತೀಯ ವಾಯುಸೇನೆಗೆ ಸೇರಿದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿವೆ.

    ನಗರದ ಯಲಹಂಕದಲ್ಲಿ ಎರಡು ಸೂರ್ಯ ಕಿರಣ್ ವಿಮಾನಗಳು ಹಾರಾಟ ನಡೆಸುತ್ತಿದ್ದಾಗ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದು ಬಳಿಕ ನೆಲಕ್ಕೆ ವಿಮಾನಗಳು ಬಿದ್ದಿದ್ದು, ವಿಮಾನದಲ್ಲಿದ್ದ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಳೆದ 1 ವಾರದಿಂದ ವಿಮಾನಗಳು ತಾಲೀಮುಗಳನ್ನು ನಡೆಸುತ್ತಿದ್ದು, ನಾಳೆ ಏರೋ ಇಂಡಿಯಾ ಶೋ ಅಧಿಕೃತವಾಗಿ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುದ್ಧ ವಿಮಾನ ಪತನ- ಭಾರೀ ದುರಂತವನ್ನೇ ತಡೆದು ಅಮರರಾದ ಪೈಲಟ್‍ಗಳು..!

    ಯುದ್ಧ ವಿಮಾನ ಪತನ- ಭಾರೀ ದುರಂತವನ್ನೇ ತಡೆದು ಅಮರರಾದ ಪೈಲಟ್‍ಗಳು..!

    ಬೆಂಗಳೂರು: ತಾಂತ್ರಿಕ ದೋಷದಿಂದ ವಾಯುಪಡೆಯ ಮಿರಾಜ್-2000 ನಂಬರ್‍ನ ಯುದ್ಧ ವಿಮಾನ ಬೆಂಗಳೂರಿನ ಎಚ್‍ಎಎಲ್‍ನ ಯಮಲೂರು ಬಳಿ ಪತನಗೊಂಡು ಇಬ್ಬರು ಪೈಲಟ್‍ಗಳು ಶುಕ್ರವಾರ ಸಾವನ್ನಪ್ಪಿದ್ದರು. ಆದರೆ ಪೈಲಟ್ ಗಳು ತಮ್ಮ ಜೀವತೆತ್ತು ಸಂಭವಿಸಬಹುದಾದ ಭಾರೀ ಅವಘಡವನ್ನು ತಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪ್ರಾಯೋಗಿಕ ಹಾರಾಟ ವೇಳೆ ಈ ಅವಘಡ ಸಂಭವಿಸಿದ್ದು, ರನ್‍ವೇಯಲ್ಲಿ ಹಾರಾಟ ನಡೆಸಿದ್ದ ವಿಮಾನ ಟೇಕಾಫ್ ಆಗಿದ್ದರೆ ವಸತಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೀಳುವ ಸಾಧ್ಯತೆ ಇತ್ತು. ಆದರೆ ಇದನ್ನು ಮನಗಂಡ ಫೈಲಟ್‍ಗಳು ವಿಮಾನ ಎತ್ತರಕ್ಕೆ ಟೇಕಾಫ್ ಮಾಡದಿರಲು ನಿರ್ಧರಿಸಿ ಹೊರ ಬರಲು ಪ್ರಯತ್ನಿಸಿದ್ದರು.

    ಅಂತಿಮ ಕ್ಷಣದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಪೈಲಟ್ ಗಳು ಪ್ಯಾರಚೂಟ್ ಬಳಸಿ ಹಾರಲು ಯತ್ನಿಸಿದ್ದರು. ಆದರೆ ಆ ವೇಳೆಗೆ ವಿಮಾನ ಸ್ಫೋಟಗೊಂಡಿತ್ತು. ಪರಿಣಾಮ ಸಿದ್ದಾರ್ಥ್ ನೇಗಿ (31), ಸಮೀರ್ ಅಬ್ರೋಲ್(33) ಜೀವ ಕಳೆದುಕೊಂಡಿದ್ದಾರೆ. ಸಮೀರ್ ಬೆಂಕಿ ಹೊತ್ತಿಕೊಂಡಿದ್ದ ಪ್ಯಾರಚೂಟ್ ಮೇಲೆಯೇ ಬಿದ್ದ ಪರಿಣಾಮ ಸುಟ್ಟು ಕರಕಲಾದರೆ, ತೀವ್ರ ಗಾಯಗೊಂಡಿದ್ದ ನೇಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.

    ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಒಂದೊಮ್ಮೆ ವಿಮಾನ ಜನ ವಸತಿ ಪ್ರದೇಶದಲ್ಲಿ ಪತನವಾಗಿದ್ದರೆ ಭಾರೀ ಅವಘಡ ಸಂಭವಿಸುತ್ತಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಮಾಹಿತಿ ನೀಡಿರುವ ಎಚ್‍ಎಎಲ್ ಅಧಿಕಾರಿಯೊಬ್ಬರು ರನ್‍ವೇಯಲ್ಲಿಯೇ ವಿಮಾನದ ಟೈರ್ ಕಳಚಿ ಬಿದ್ದ ಪರಿಣಾಮ ಮುಂಭಾಗ ರನ್ ವೇಗೆ ಉಜ್ಜಿ ಬೆಂಕಿ ಕಿಡಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ವಿವರಿಸಿದ್ದಾರೆ.

    ವಿಮಾನ ಸ್ಫೋಟಗೊಂಡ ಅಲ್ಪ ದೂರದಲ್ಲೇ ಜನ ವಸತಿ ಪ್ರದೇಶಗಳಿದ್ದು, ಶಾಲೆ, ಟೆಕ್ ಪಾರ್ಕ್, ರಸ್ತೆ ಸೇರಿದಂತೆ ಹಲವು ಪ್ರದೇಶಗಳಿದೆ. ಒಂದೊಮ್ಮೆ ಪೈಟಲ್‍ಗಳು ವಿಮಾನವನ್ನು ರನ್ ವೇಯಿಂದ ಟೇಕಾಫ್ ಆಗಿದ್ದರೆ ವಸತಿ ಪ್ರದೇಶದಲ್ಲಿ ಉರುಳುವ ಸಾಧ್ಯತೆ ಇತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಎಚ್‍ಎಎಲ್ ಬಳಿ ಯುದ್ಧವಿಮಾನ ಪತನ- ಪೈಲಟ್ ದುರ್ಮರಣ

    ಎಚ್‍ಎಎಲ್ ಬಳಿ ಯುದ್ಧವಿಮಾನ ಪತನ- ಪೈಲಟ್ ದುರ್ಮರಣ

    ಬೆಂಗಳೂರು: ಇಲ್ಲಿ ಎಚ್‍ಎಎಲ್ ಏರ್ ಪೋರ್ಟ್  ಬಳಿ ಯುದ್ಧ ವಿಮಾನವೊಂದು ಪತನವಾಗಿದ್ದು, ಪೈಲಟ್ ಮೃತಪಟ್ಟಿರುವ ಘಟನೆ  ಇಂದು ನಡೆದಿದೆ.

    ಸಿದ್ದಾರ್ಥ್ ಮೃತ ದುರ್ದೈವಿ ಪೈಲಟ್ ಆಗಿದ್ದು, ಮಿರಾಜ್ ಎನ್ನುವ ಯುದ್ಧ ವಿಮಾನ ಪತನವಾಗಿದೆ. ಮಿರಾಜ್ ಭಾರೀ ಸ್ಫೋಟಗೊಂಡ ಪರಿಣಾಮ ದಟ್ಟವಾದ ಹೊಗೆ ಅಲ್ಲಿ ಆವರಿಸಿದೆ. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ.

    ಎಚ್ ಎ ಎಲ್ ನಿಂದ ಹೊರಭಾಗದಲ್ಲಿ ಮನೆಗಳ ಮೇಲೆ ಪತನವಾಗುವ ಸಾಧ್ಯತೆ ಇತ್ತು. ಪೈಲಟ್ ಗಳ ಸಮಯ ಪ್ರಜ್ಞೆಯಿಂದ ಎಚ್ ಎ ಎಲ್ ಕಂಪೌಂಡ್ ಒಳಗೆ ಬಿದ್ದಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿ ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿಯಿಂದ ಇತಿಹಾಸ ಸೃಷ್ಟಿ!

    ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿ ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿಯಿಂದ ಇತಿಹಾಸ ಸೃಷ್ಟಿ!

    ನವದೆಹಲಿ: ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿ ಅವನಿ ಚತುರ್ವೇದಿ ಸೋಮವಾರದಂದು ಇತಿಹಾಸ ಸೃಷ್ಟಿಸಿದ್ದಾರೆ. ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸುವ ಮೂಲಕ ಈವರೆಗೆ ಭಾರತದಲ್ಲಿ ಪುರುಷರಿಗೆ ಮಾತ್ರ ತೆರೆದುಕೊಂಡಿದ್ದ ಸಾಮ್ರಾಜ್ಯಕ್ಕೆ ಅವನಿ ಕಾಲಿಟ್ಟಿದ್ದಾರೆ.

    ಅವನಿ ಚತುರ್ವೇದಿ ಗುಜರಾತ್‍ನ ಜಮ್‍ನಗರ್‍ನಿಂದ ಎಮ್‍ಐಜಿ-21 ಬೈಸನ್ ವಿಮಾನವೇರಿ ಹಾರಾಟ ಶುರು ಮಾಡಿದ್ರು. ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಯಶ್ವಿಯಾಗಿ ಹಾರಾಟ ನಡೆಸಿದ್ರು. ಈ ಮೂಲಕ ಅವನಿ, ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡ್ರು.

    ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಅವನಿ ಕುಟುಂಬದಲ್ಲಿ ಸೇನೆಗೆ ಸೇರ್ಪಡೆಯಾಗಿರುವುದು ಅವರೇ ಮೊದಲೇನಲ್ಲ. ಅವನಿ ಅವರ ಸಹೋದರ ಸೈನಿಕರಾಗಿದ್ದು, ಅವರಿಂದಲೇ ಸ್ಫೂರ್ತಿ ಪಡೆದಿದ್ದಾರೆ. ಅವನಿ ಹುಟ್ಟಿದ್ದು 1993ರ ಅಕ್ಟೋಬರ್ 24ರಂದು. 24 ವರ್ಷ ವಯಸ್ಸಿನ ಅವನಿಗೆ ಚೆಸ್, ಟೇಬಲ್ ಟೆನ್ನಿಸ್ ಹಾಗೂ ಚಿತ್ರಕಲೆಯಲ್ಲೂ ಪರಿಣಿತಿ ಇದೆ.

    ಅವನಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನ ಡಿಯೋಲ್ಯಾಂಡ್‍ನಲ್ಲಿ ಮುಗಿಸಿದ್ರು. ನಂತರ 2014ರಲ್ಲಿ ಬನಸ್ತಲಿ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪೂರೈಸಿದ್ರು. ಭಾರತೀಯ ವಾಯು ಪಡೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಹೈದರಾಬಾದ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.

     

     

    2016ರ ಜೂನ್ 18ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರಾನ್‍ಗೆ ಸೇರ್ಪಡೆಯಾದ ಮೂವರು ಮಹಿಳೆಯರಲ್ಲಿ ಅವನಿ ಕೂಡ ಒಬ್ಬರಾಗಿದ್ದರು. ಇವರೊಂದಿಗೆ ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಸೇರ್ಪಡೆಯಾಗಿದ್ದರು.

    43 ಪುರುಷರ ಜೊತೆಯಲ್ಲಿ ಈ ಮೂವರು ಮಹಿಳೆಯರು ತರಬೇತಿ ಪಡೆದಿದ್ದು, ಇವರಿಗೆ ಮದುವೆ ಹಾಗೂ ಗರ್ಭಧಾರಣೆಯನ್ನ ಮುಂದೂಡುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಕೂಡ ತರಬೇತಿ ಪೂರೈಸಿದ್ದು, ಶೀಘ್ರದಲ್ಲೇ ಅವರೂ ಕೂಡ ಯುದ್ಧವಿಮಾನ ಹಾರಾಟ ನಡೆಸಲಿದ್ದಾರೆ.

    ಅವನಿ ಚತುರ್ವೇದಿ ಎಮ್‍ಐಜಿ-21 ಬೈಸನ್ ಗೂ ಮೊದಲು ಏಕಾಂಗಿಯಾಗಿ ಪೈಲಾಟಸ್ ಪಿಸಿ-7 ಟರ್ಬೊಪ್ರಾಪ್ಸ್, ಕಿರಣ್ ಹಾಗೂ ಹಾವ್ಕ್ ವಿಮಾನಗಳ ಹಾರಾಟ ನಡೆಸಿದ್ದರು. ಚತುರ್ವೇದಿ ಅವರು ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿರುವುದು ಭಾರತವದ ಕಿರೀಟಕ್ಕೆ ಮತ್ತೊಂದು ಗರಿ ತಂದುಕೊಟ್ಟಂತಾಗಿದೆ. ಬ್ರಿಟನ್, ಅಮೆರಿಕ, ಇಸ್ರೇಲ್ ಹಾಗು ಪಾಕಿಸ್ತಾನದಲ್ಲಿ ಈಗಾಗಲೇ ಮಹಿಳೆಯರು ಯುದ್ಧವಿಮಾನ ಹಾರಾಟ ನಡೆಸುತ್ತಿದ್ದು, ಇದೀಗ ಆ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ.