Tag: ಯುದ್ಧಕಾಂಡ

  • ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರಿಂದ ಅಜಯ್‌ ರಾವ್‌ ಬಾಳಲ್ಲಿ ಬಿರುಗಾಳಿ!

    ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರಿಂದ ಅಜಯ್‌ ರಾವ್‌ ಬಾಳಲ್ಲಿ ಬಿರುಗಾಳಿ!

    ಬೆಂಗಳೂರು: ನಟ ಅಜಯ್ ರಾವ್ (Ajay Rao) ಸಿನಿಮಾ ನಿರ್ಮಾಣಕ್ಕೆ (Cinema Production) ಕೈ ಹಾಕಿದ್ದರಿಂದ ಬದುಕಿನಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗುತ್ತಿದೆ.

    ಪತ್ನಿ ಸ್ವಪ್ನಾ ಅವರನ್ನು ಮದುವೆಯಾದ ನಂತರ ಅಜಯ್‌ ರಾವ್‌ ಶ್ರೀ ಕೃಷ್ಣ ಆರ್ಟ್ ಅಂಡ್ ಕ್ರಿಯೇಷನ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು.

    ಪತ್ನಿ ಸ್ವಪ್ನಾ ಅವರು ಸಿನಿಮಾ ನಿರ್ಮಾಣಕ್ಕೆ ಇಳಿಯಬೇಡಿ ಎಂದು ಪದೇ ಪದೇ ಗಂಡನಿಗೆ ಎಚ್ಚರಿಸುತ್ತಿದ್ದರು. ಹೀಗಿದ್ದರೂ ಕೃಷ್ಣಲೀಲಾ, ಯುದ್ಧಕಾಂಡ (Yuddha Kaanda) ಸೇರಿದಂತೆ ಹಲವು ಚಿತ್ರಗಳನ್ನು ಅಜಯ್ ರಾವ್ ನಿರ್ಮಾಣ ಮಾಡಿದ್ದರು.  ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ ಹೆಸರೇನು ಗೊತ್ತಾ?

    ಯುದ್ಧಕಾಂಡ ಸಿನಿಮಾಗಾಗಿ ಅಜಯ್ ರಾವ್ ಭಾರೀ ಸಾಲ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಯುದ್ಧಕಾಂಡ ಚಿತ್ರಕ್ಕಾಗಿ ನೆಚ್ಚಿನ ದುಬಾರಿ ಕಾರನ್ನೂ (Car) ಮಾರಾಟ ಮಾಡಿದ್ದರು.

    ಯುದ್ಧಕಾಂಡ ಬಿಡುಗಡೆಯ ನಂತವೂ ಕೌಟುಂಬದಲ್ಲಿ ಪದೇ ಪದೇ ಕಲಹ ನಡೆಯುತ್ತಿತ್ತು. ವಿಪರೀತ ಸಾಲ ಮಾಡಿಕೊಂಡಿದ್ದೇ ದಾಂಪತ್ಯದಲ್ಲಿ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ. ಕಲಹಕ್ಕೆ ಬೇಸತ್ತು ವಿಚ್ಚೇದನಕ್ಕೆ ಸ್ವಪ್ನಾ ಅರ್ಜಿ ಸಲ್ಲಿಸಿದ್ದಾರೆ.

    ಯುದ್ಧಕಾಂಡ ಸಿನಿಮಾ ಸಂದರ್ಭದಲ್ಲಿ ಅಜಯ್‌ ರಾವ್‌ ತಮ್ಮ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಿದ್ದರು. ಈ ವೇಳೆ ಅವರ ಪುತ್ರಿ ಕಾರನ್ನು ಮಾರಾಟ ಮಾಡಬೇಡಿ ಎಂದು ಹೇಳಿ ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

  • ‘ಯುದ್ಧಕಾಂಡ’ ಚಿತ್ರದ ಫಸ್ಟ್ ಲುಕ್ ರಿಲೀಸ್: ಅಜಯ್ ರಾವ್ ಹುಟ್ಟುಹಬ್ಬಕ್ಕೆ ಗಿಫ್ಟ್

    ‘ಯುದ್ಧಕಾಂಡ’ ಚಿತ್ರದ ಫಸ್ಟ್ ಲುಕ್ ರಿಲೀಸ್: ಅಜಯ್ ರಾವ್ ಹುಟ್ಟುಹಬ್ಬಕ್ಕೆ ಗಿಫ್ಟ್

    ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ಕನ್ನಡ ಚಿತ್ರರಂಗದಲ್ಲಿದ್ದು ದಶಕಗಳ ಮೇಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸಾಕಷ್ಟು ಸಿನಿಮಾಗಳಲ್ಲಿ ಅಜಯ್‌ ನಟಿಸಿದ್ದಾರೆ. ಹೊಸ ಹೊಸ ಪ್ರಯೋಗಕ್ಕೂ ತಮ್ಮನ್ನು ಒಡ್ಡಿಕೊಂಡಿದ್ದಾರೆ. ನಟನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅವರಿಗಿಂದು ಜನ್ಮದಿನದ ಸಂಭ್ರಮ. ಅಜಯ್ ರಾವ್ ಹುಟ್ಟುಹಬ್ಬದ ವಿಶೇಷವಾಗಿ  ಯುದ್ಧಕಾಂಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಕೋರಲಾಗಿದೆ.

    ಕರಿಕೋಟು ತೊಟ್ಟು ಕೈಯಲ್ಲಿ ಪುಸ್ತಕ ಹಿಡಿದು ಲಾಯರ್ ಅವತಾರದಲ್ಲಿ ಕೃಷ್ಣ ಅಜಯ್ ರಾವ್ ಕಾಣಿಸಿಕೊಂಡಿದ್ದಾರೆ.‌ ಯುದ್ಧಕಾಂಡ ಚಿತ್ರವನ್ನು  ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ‘ಕೃಷ್ಣ ಲೀಲಾ’ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ.

    ಅಂದಹಾಗೇ ಚಿತ್ರಕ್ಕೆ  ಪವನ್ ಭಟ್ ಆಕ್ಷನ್‌ ಕಟ್‌ ಹೇಳುತ್ತಿದ್ದು ಕಾರ್ತಿಕ್ ಶರ್ಮಾ ಕ್ಯಾಮೆರಾ ಕೈಚಳಕವಿದೆ. ಬಹುಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ತಾರಾಬಳಗವಿರಲಿದೆ.

    ಸದ್ಯ ಯುದ್ಧಕಾಂಡ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಮತ್ತೊಂದು ಅಪ್ಡೇಟ್ ನೊಂದಿಗೆ ಚಿತ್ರತಂಡ ನಿಮ್ಮ ಮುಂದೆ ಹಾಜರಾಗಲಿದೆ.

  • ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ

    ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ

    ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ (Ajay Rao) ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ಕೆಜಿಎಫ್ (KGF 2) ಖ್ಯಾತಿಯ ನಟಿ ಅರ್ಚನಾ ಜೋಯಿಸ್ (Archana Jois) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದ್ದು, ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ.

    ‘ಯುದ್ಧಕಾಂಡ’ (Yudhkanda) ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ರಾವ್ ಮಾಹಿತಿ ನೀಡುತ್ತಾರೆ.

    ‘ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಾಡಿದ್ದೇನೆ. ಕೃಷ್ಣ ಲೀಲಾ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎನ್ನುವುದು ಅಜಯ್ ರಾವ್ ಮಾತು. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ‘ಯುದ್ಧಕಾಂಡ’ ಸಿನಿಮಾವನ್ನು ಕಟಿಂಗ್ ಶಾಪ್ ಸಿನಿಮಾ ಖ್ಯಾತಿಯ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮಾ ಕ್ಯಾಮೆರಾ ವರ್ಕ್, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ‘ಯುದ್ಧಕಾಂಡ’ ಸಿನಿಮಾ ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಕೂಡ ಆಗಿದೆ.

  • ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ ಫಿಕ್ಸ್

    ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ ಫಿಕ್ಸ್

    ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದೆ. ಸಖತ್ ಇಂಟ್ರಸ್ಟಿಂಗ್ ಆಗಿರೋ ಟೈಟಲ್ ಟೀಸರ್ ಸಿನಿರಸಿಕರ ಗಮನ ಸೆಳೆಯುತ್ತಿದೆ.

    ಈ ಚಿತ್ರವನ್ನು ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ರಾವ್ ಸಿನಿಮಾವನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ರಾವ್ ಮಾಹಿತಿ ಹಂಚಿಕೊಂಡ್ರು.

    ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಾಡಿದ್ದೇನೆ. ಕೃಷ್ಣ ಲೀಲಾ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಚಿತ್ರರಂಗದ ಜರ್ನಿಯನ್ನು ಮೆಲುಕು ಹಾಕಿದ್ರು ಅಜಯ್ ರಾವ್.

    ‘ಯುದ್ಧಕಾಂಡ’ ಸಿನಿಮಾವನ್ನು ಕಟಿಂಗ್ ಶಾಪ್ ಸಿನಿಮಾ ಖ್ಯಾತಿಯ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮಾ ಕ್ಯಾಮೆರಾ ವರ್ಕ್, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ‘ಯುದ್ಧಕಾಂಡ’ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]