Tag: ಯುದ್ಧ

  • ಹಮಾಸ್‌ ಸೆರೆಯಲ್ಲಿದ್ದ ನೇಪಾಳ ವಿದ್ಯಾರ್ಥಿ ಸಾವು ದೃಢ – ಇಸ್ರೇಲ್‌ಗೆ ಮೃತದೇಹ ಹಸ್ತಾಂತರ

    ಹಮಾಸ್‌ ಸೆರೆಯಲ್ಲಿದ್ದ ನೇಪಾಳ ವಿದ್ಯಾರ್ಥಿ ಸಾವು ದೃಢ – ಇಸ್ರೇಲ್‌ಗೆ ಮೃತದೇಹ ಹಸ್ತಾಂತರ

    – ಸುಧಾರಿತ ಕೃಷಿ ತಂತ್ರಗಳ ಅಧ್ಯಯನಕ್ಕೆ ಹಿಂದೂ ವಿದ್ಯಾರ್ಥಿ
    – ಸೆರೆಯಾಗುವ ಮುನ್ನ ಹತ್ತಾರು ಜೀವಗಳನ್ನ ಉಳಿಸಿದ್ದರಂತೆ ಬಿಪಿನ್‌

    ಜೆರುಸಲೇಮ್‌/ಟೆಲ್‌ ಅವಿವ್: 2023ರ ಅಕ್ಟೋಬರ್‌ 7ರಂದು ಹಮಾಸ್‌ ದಾಳಿ ನಡೆಸುವ 3 ವಾರಗಳಿಗೆ ಮೊದಲೇ ಇಸ್ರೇಲ್‌ಗೆ ತೆರಳಿದ್ದ ನೇಪಾಳದ ಕೃಷಿ ವಿದ್ಯಾರ್ಥಿ (Nepalese Student) ಬಿಪಿನ್‌ ಜೋಶಿ (Bipin Joshi) ಮೃತಪಟ್ಟಿದ್ದಾರೆ ಎಂದು ಹಮಾಸ್‌ ದೃಢಪಡಿಸಿದೆ. ಬದುಕುಳಿದ ಎಲ್ಲರನ್ನ ಇಸ್ರೇಲ್‌ಗೆ ಹಸ್ತಾಂತರಿಸಿದೆ. ಇದರೊಂದಿಗೆ ಬಿಪಿನ್‌ ಜೋಶಿ ಮೃತಪಟ್ಟ ವಿಷಯ ಖಚಿತಪಡಿಸಿದ್ದು, ಮೃತದೇಹವನ್ನ ಇಸ್ರೇಲ್‌ಗೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಹೌದು. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್‌ನಲ್ಲಿ ನಡೆದ ಶಾಂತಿ ಒಪ್ಪಂದದ ನಂತರ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಎರಡು ವರ್ಷಗಳ ಸುದೀರ್ಘ ಯುದ್ಧ ಅಧಿಕೃತವಾಗಿ ಅಂತ್ಯಗೊಂಡಿದೆ. ಹೀಗಾಗಿ ಎಲ್ಲ 20 ಒತ್ತೆಯಾಳುಗಳನ್ನ (Hamas Hostage) ಹಮಾಸ್‌ ಬಿಡುಗಡೆ ಮಾಡಿದೆ.

    ಇದೇ ವೇಳೆ 2 ವರ್ಷಗಳ ಹಿಂದೆ ಹಮಾಸ್ ಅಪಹರಿಸಿದ್ದ ನೇಪಾಳದ ಹಿಂದೂ ವಿದ್ಯಾರ್ಥಿ (Nepal Hindu Student) ಬಿಪಿನ್ ಜೋಶಿ ಅವರ ದೇಹವನ್ನ ಇಸ್ರೇಲ್‌ಗೆ ಹಿಂತಿರುಗಿಸಲಾಗಿದೆ. ಈ ಕುರಿತು ಇಸ್ರೇಲ್‌ನಲ್ಲಿರುವ ನೇಪಾಳದ ರಾಯಭಾರಿ ಧನ ಪ್ರಸಾದ್ ಪಂಡಿತ್ ಮಾಹಿತಿ ನೀಡಿದ್ದಾರೆ. ಬಿಪಿನ್ ಜೋಶಿಯವರ ಮೃತದೇಹವನ್ನ ಹಮಾಸ್ ಇಸ್ರೇಲಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅದನ್ನು ಟೆಲ್ ಅವೀವ್‌ಗೆ ಕೊಂಡೊಯ್ಯಲಾಗುತ್ತಿದೆ ಎಂದಿದ್ದಾರೆ.

    ನೇಪಾಳಕ್ಕೆ ಹಸ್ತಾಂತರಕ್ಕೂ ಮುನ್ನ ಡಿಎನ್‌ಎ ಟೆಸ್ಟ್‌
    ಜೋಶಿಯವರ ಮೃತದೇಹವನ್ನ ನೇಪಾಳಕ್ಕೆ ವಾಪಸ್ ಕಳುಹಿಸುವ ಮೊದಲು ಡಿಎನ್‌ಎ (DNA) ಪರೀಕ್ಷೆ ನಡೆಸಿ, ನೇಪಾಳಿ ರಾಯಭಾರ ಕಚೇರಿಯ ಸಮನ್ವಯದೊಂದಿಗೆ ಇಸ್ರೇಲ್‌ನಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುವುದು ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ.

    ನೂರಾರು ಕನಸು ಹೊತ್ತು ಬಂದಿದ್ದ ಜೋಶಿ
    ಅಕ್ಟೋಬರ್‌ನಲ್ಲಿ ಯುದ್ಧ ಶುರುವಾಗ 3 ವಾರಗಳಿಗೂ ಮೊದಲೇ ಬಿಪಿನ್‌ ಜೋಶಿ ಇಸ್ರೇಲ್‌ಗೆ ತೆರಳಿದ್ದರು. ಗಾಜಾ ಗಡಿಯ ಬಳಿಯ ಕಿಬ್ಬುಟ್ಜ್ ಅಲುಮಿಮ್‌ನಲ್ಲಿ ಸುಧಾರಿತ ಕೃಷಿ ತಂತ್ರಗಳ ಅಧ್ಯಯನಕ್ಕೆ ತೆರಳಿದ್ದ 16 ವಿದ್ಯಾರ್ಥಿಗಳಲ್ಲಿ ಜೋಶಿ ಒಬ್ಬರಾಗಿದ್ದರು. ಆದರೆ ಅಕ್ಟೋಬರ್ 7, 2023 ರಂದು ಹಮಾಸ್ ದಕ್ಷಿಣ ಇಸ್ರೇಲ್ ನಡೆಸಿದ ಅನಿರೀಕ್ಷಿತ ದಾಳಿಯಿಂದಾಗಿ ವಿದ್ಯಾರ್ಥಿಗಳು ಬಾಂಬ್ ಶೆಲ್ಟರ್‌ನಲ್ಲಿ ಆಶ್ರಯ ಪಡೆದಿದ್ದರು. ಆ ವೇಳೆ ಹಮಾಸ್‌ ಉಗ್ರರು ಇಸ್ರೇಲ್‌ನ ಕಿಬ್ಬುಟ್ಜ್‌ ಶೆಲ್ಟರ್‌ಗೆ ಗ್ರೆನೇಡ್‌ಗಳನ್ನು ಎಸೆದು ನುಗ್ಗಿದರು. ಅದರಲ್ಲಿ ಒಂದು ಗ್ರೆನೇಡ್ ಸ್ಫೋಟಿಸಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು, ಆದರೆ ಜೋಶಿ ತಕ್ಷಣವೇ ಕಾರ್ಯ ನಿರ್ವಹಿಸಿ, 2ನೇ ಗ್ರೆನೇಡ್ ಅನ್ನು ಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಹೊರಗೆ ಎಸೆದು ಜೀವಗಳನ್ನು ಉಳಿಸಿದರು ಎಂದು ಬದುಕುಳಿದ ನೇಪಾಳದ ಏಕೈಕ ವಿದ್ಯಾರ್ಥಿ ಹಿಮಾಂಚಲ್ ಕಟ್ಟೆಲ್ ಹೇಳಿದ್ದಾರೆ.

    ನಂತರ ಅವರನ್ನು ಹಮಾಸ್‌ ಬಂದೂಕುಧಾರಿಗಳು ಸೆರೆ ಹಿಡಿದು ಗಾಜಾಗೆ ಕರೆದೊಯ್ದರು. ನಂತರದ ದಿನಗಳಲ್ಲಿ, ಇಸ್ರೇಲಿ ಮಿಲಿಟರಿ ಬಿಡುಗಡೆ ಮಾಡಿದ ವೀಡಿಯೊ ದೃಶ್ಯಗಳಲ್ಲಿ ಜೋಶಿಯನ್ನು ಗಾಜಾದ ಶಿಫಾ ಆಸ್ಪತ್ರೆಗೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿತ್ತು. ಥಾಯ್ ಕಾರ್ಮಿಕರೊಂದಿಗೆ ಕೂಡಿಹಾಕಿದ್ದು, ಅವರ ಕೊನೆಯ ಜೀವಂತ ದೃಶ್ಯವಾಗಿತ್ತು.

  • ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

    ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

    – ಹೆಣ್ಣಿನ ಭಾವನೆಯನ್ನ ನಿರ್ಲಕ್ಷ್ಯ ಮಾಡಬಾರದು ಎಂದಿದ್ದ ಖಮೇನಿ

    ಟೆಹ್ರಾನ್‌: ಇಸ್ರೇಲ್ ಮತ್ತು ಇರಾನ್ (Israel Iran Conflict) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಸ್ಪರ ದಾಳಿ ನಡೆಸುತ್ತಿದ್ದು, ಎರಡೂ ದೇಶಗಳಲ್ಲಿ ನೂರಾರು ಮಂಧಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಪ್ರಾಣ ಭಯದಿಂದ ದೇಶವನ್ನೇ ಬಿಟ್ಟು ಹೋಗ್ತಿದ್ದಾರೆ. ಆದ್ರೆ ಯಾರ ಮಾತನ್ನೂ ಕೇಳುವಂತಹ ಪರಿಸ್ಥಿತಿಯಲ್ಲಿ ಈ ದೇಶಗಳು ಇದ್ದಂತೆ ಕಾಣ್ತಿಲ್ಲ. ದಿನೇ ದಿನೇ ದಾಳಿಯ ಸ್ವರೂಪವನ್ನು ತೀವ್ರಗೊಳಿಸಿವೆ. ಈ ನಡುವೆ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯ (Ayatollah Ali Khamenei) ಹಳೆಯ ಟ್ವೀಟ್‌ಗಳು ವೈರಲ್‌ ಆಗಿವೆ.

    ಕೆಲವೊಂದು ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳು (Social Media Posts) ಖಮೇನಿಗೆ ಮಹಿಳೆಯರ ಮೇಲಿನ ಗೌರವನ್ನು ಸೂಚಿಸಿವೆ. ಅಲ್ಲದೇ ಮಹಿಳಾ ಹಕ್ಕುಗಳ ಬಗ್ಗೆ ಖಮೇನಿ ಚಿಂತಿಸುತ್ತಿದ್ದದ್ದು, ಕವಿತೆಗಳನ್ನು ಇಷ್ಟಪಡುವುದು, ಬಾಲ್ಯದ ತುಂಟತನ, ಹಾಸ್ಯಪ್ರಜ್ಞೆ ಎಲ್ಲವೂ ಅನಾವರಣಗೊಂಡಿದೆ.

    ಈ ಪೋಸ್ಟ್‌ಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಖಮೇನಿ ತೀವ್ರವಾದಿ ಎಂದು ಕಿಡಿ ಕಾರಿದ್ದರೆ, ಇನ್ನೂ ಕೆಲವರು ಹೀಗೂ ಇದ್ದರಾ? ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅದೇನೆಂಬುದನ್ನು ಮುಂದೆ ನೋಡೋಣ….

    ಪೋಸ್ಟ್-1
    ಪುರುಷನು ಮಹಿಳೆಯ ಅಗತ್ಯತೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾನೆ. ಅವಳ ಭಾವನಾತ್ಮಕ ಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು.

    ಪೋಸ್ಟ್‌-2
    ಮಹಿಳೆಯರು ಪುರುಷರಿಗಿಂತ ಬಲಶಾಲಿಗಳು. ಮಹಿಳೆಯರು ತಮ್ಮ ಬುದ್ಧಿವಂತಿಕೆ ಮತ್ತು ಸೂಕ್ಷ್ಮತೆಯಿಂದ ಪುರುಷರನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಮತ್ತು ಪ್ರಭಾವಿಸಬಹುದು.

    ಪೋಸ್ಟ್‌-3‌
    ಮಹಿಳೆಯರು ಗುಲಾಮಗಿರಿ ನಿರ್ಮೂಲನೆಗಾಗಿ ಒಂದು ದಿನವನ್ನು ಆಚರಿಸುತ್ತಾರೆ. ಆದ್ರೆ ಅಂತಹ ಅಪರಾಧಗಳು ಕರಿಯರ ವಿರುದ್ಧ ನಡೆಯುತ್ತವೆ.

    ಪೋಸ್ಟ್‌-4
    ನನಗೆ ಸಿನಿಮಾ ಮತ್ತು ದೃಶ್ಯಕಲೆಗಳಲ್ಲಿ ಆಸಕ್ತಿ ಇಲ್ಲ. ಆದ್ರೆ ಕಾವ್ಯ, ಕಾದಂಬರಿಗಳ ವಿಷಯಕ್ಕೆ ಬಂದಾಗ ಯಾರಿಗೇನು ಕಡಿಮೆ ಇರಲಿಲ್ಲ.

  • Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    – ಇರಾನ್‌ನ 170ಕ್ಕೂ ಹೆಚ್ಚು ಸ್ಥಳ, 720 ಮಿಲಿಟರಿ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌

    ಟೆಲ್‌ ಅವಿವ್‌/ಟೆಹ್ರಾನ್‌: ಆಪರೇಷನ್‌ ʻರೈಸಿಂಗ್‌ ಲಯನ್‌ʼ ಬಳಿಕ ಇಸ್ರೇಲ್‌-ಇರಾನ್‌ ನಡುವಿನ ಸಂಘರ್ಷ (Israel-Iran Conflict) ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್‌ ಮಿಸೈಲ್‌ ದಾಳಿಗೆ ಇಸ್ರೇಲ್‌ (Israel) ಕೂಡ ಮಿಸೈಲ್‌ಗಳ ಸುರಿಮಳೆಯನ್ನೇ ಸುರಿಸಿದೆ.

    ಅಣ್ವಸ್ತ್ರ (Nuclear Site), ಮಿಲಿಟರಿ ನೆಲೆಗಳ ಬಳಿಕ ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈವರೆಗಿನ ದಾಳಿಯಲ್ಲಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅಣ್ವಸ್ತ್ರ ವಿಜ್ಞಾನಿಗಳು ಸೇರಿದಂತೆ ಈವರೆಗೆ 14 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅತ್ತ ಇರಾನ್‌ ಕೂಡ ಇಸ್ರೇಲ್‌ ಮೇಲೆ 200 ಖಂಡಾಂತರ ಕ್ಷಿಪಣಿಗಳು ಹಾಗೂ 100 ಡ್ರೋನ್‌ಗಳಿಂದ ಭೀಕರ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಟೆಲ್‌ ಅವಿವ್‌, ಜೆರುಸಲೆಮ್‌ ಸೇರಿದಂತೆ ಮಿಲಿಟರಿ ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ 4ನೇ ದಿನವೂ ಮುಂದುವರಿದಿದೆ. ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

    ಕದನ ವಿರಾಮ ಮಾತುಕತೆ ತಿರಸ್ಕಾರ
    ಇತ್ತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಟೆಹ್ರಾನ್‌ ಹೊತ್ತಿ ಉರಿಯಯತ್ತೆ, ನಿರಂತರ ದಾಳಿ ಇರಾನ್‌ ಮೇಲೆ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅತ್ತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್‌ ಮೇಲೆ ಬೃಹತ್‌ ದಾಳಿ ನಡೆಸುವ ಸೂಚನೆ ಕೊಟ್ಟಿದೆ. ಜೊತೆಗೆ ಇಸ್ರೇಲ್‌ನಿಂದ ದಾಳಿ ಮುಂದುವರಿಯುವವರೆಗೂ ನಾವು ಕದನ ವಿರಾಮದ ಬಗ್ಗೆ ಮಾತನಾಡುವುದಿಲ್ಲ ಎಂದು ಒಮನ್ ಮತ್ತು ಕತಾರ್‌ನ ಮಧ್ಯಸ್ಥಿಕೆಯನ್ನು ಇರಾನ್‌ ತಿರಸ್ಕರಿಸಿದೆ.

    ಇಸ್ರೇಲ್‌ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದು, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್‌ ನಡೆಸಿದ ದಾಳಿಯಲ್ಲಿ 14 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉತ್ತರಾಖಂಡ್‌ ಹೆಲಿಕಾಪ್ಟರ್‌ ಪತನ – 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್‌ಗಿತ್ತು ಅಪಾರ ಅನುಭವ

  • ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿದ ಭಾರತ

    ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿದ ಭಾರತ

    ನವದೆಹಲಿ: ಭಯೋತ್ಪಾದನೆಯ ವಿರುದ್ಧ ಭಾರತ ಸಮರ ಸಾರಿದೆ. ಯಾವುದೇ ಭಯೋತ್ಪಾದನೆಯನ್ನು ಭಾರತ ಯುದ್ಧ ಎಂದೇ ಪರಿಗಣಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

    ಸರಣಿ ಸಭೆಯನ್ನು ನಡೆಸಿದ ಮೋದಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಮೂಲಕ ಭಯೋತ್ಪಾದಕರನ್ನು ಛೂ ಬಿಡುತ್ತಿದ್ದ ಪಾಕಿಸ್ತಾನಕ್ಕೆ ಕಟು ಸಂದೇಶವನ್ನು ಮೋದಿ ರವಾನಿಸಿದ್ದಾರೆ.

    ಪಾಕಿಸ್ತಾನಲ್ಲಿ ಮಿಲಿಟರಿ ಸೈನಿಕರ ಸಂಖ್ಯೆ ಕಡಿಮೆಯಿದ್ದು ಉಗ್ರರ ಬಳಸಿಕೊಂಡು ಪ್ರತಿದಾಳಿ ನಡೆಸುತ್ತದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.

  • ಪಾಕ್‌ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದ್ದೇವೆ – ಭಾರತೀಯ ಸೇನೆ ಅಭಯ

    ಪಾಕ್‌ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದ್ದೇವೆ – ಭಾರತೀಯ ಸೇನೆ ಅಭಯ

    – 15 ನಗರಗಳ ಮೇಲಿನ ದಾಳಿಗಳನ್ನೂ ಹತ್ತಿಕ್ಕಿದ ಸೇನೆ

    ನವದೆಹಲಿ: ಪಾಕಿಸ್ತಾನ ಸಶಸ್ತ್ರಪಡೆಗಳು (Pakistan Armed Forces) ಮೇ 8 ಮತ್ತು 9ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ನಡೆಸಿದ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿರುವುದಾಗಿ ಭಾರತೀಯ ಸೇನೆ (Indian Army) ಅಧಿಕೃತ ಹೇಳಿಕೆ ನೀಡಿದೆ.

    ಈ ಕುರಿತು ಇಂಡಿಯನ್‌ ಆರ್ಮಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಪಾಕಿಸ್ತಾನ ಸಶಸ್ತ್ರ ಪಡೆಗಳು ಇದೇ ಮೇ 08 ಮತ್ತು 09ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು (Drones) ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ (Jammu and Kashmir) ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆ ಮಾಡಿವೆ. ಆದ್ರೆ ಪಾಕ್‌ನ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿ, ಸಿಎಫ್‌ವಿಗಳಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಸೇನೆ ಹೇಳಿದೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

    ಅಲ್ಲದೇ ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ವಿನ್ಯಾಸಗಳಿಗೆ ಬಲದಿಂದ ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ

    15 ನಗರಗಳ ಮೇಲಿನ ದಾಳಿ ಹತ್ತಿಕ್ಕಿದ ಸೈನ್ಯ:
    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಒಂದು ದಿನದ ನಂತರ ನಿನ್ನೆ ರಾತ್ರಿ (ಮೇ 8) ಮತ್ತು ಇಂದು ಬೆಳಿಗ್ಗೆ (ಮೇ 9) ಪಾಕಿಸ್ತಾನವು ಭಾರತದ ಮೇಲೆ ಮತ್ತೆ ದಾಳಿ ಮಾಡಲು ಪ್ರಯತ್ನಿಸಿದೆ. ಇದನ್ನೂ ಓದಿ: ಜಮ್ಮುವಿನ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಮಟಾಶ್‌

    ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ 15 ನಗರಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಉದ್ವಿಗ್ನತೆ ಹೆಚ್ಚಿಸಲು ಪಾಕ್ ಪ್ರಯತ್ನಿಸಿತು. ಆದರೆ, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

  • ನನಗೆ ನಮ್ಮ ದೇಶ ಮುಖ್ಯ, ಅದಕ್ಕೆ ಯುದ್ಧಕ್ಕೆ ಹೋಗ್ತೀನಿ ಎಂದಿದ್ದೆ: ಸಚಿವ ಜಮೀರ್

    ನನಗೆ ನಮ್ಮ ದೇಶ ಮುಖ್ಯ, ಅದಕ್ಕೆ ಯುದ್ಧಕ್ಕೆ ಹೋಗ್ತೀನಿ ಎಂದಿದ್ದೆ: ಸಚಿವ ಜಮೀರ್

    ಕಲಬುರಗಿ: ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ. ದೇಶಕ್ಕಾಗಿ ಬಲಿಯಾಗಲು ನಾನು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಖಾನ್(Zameer Ahmed Khan) ಪುನರುಚ್ಚರಿಸಿದರು.

    ಕಲಬುರಗಿಯಲ್ಲಿ(Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ(Pakistan) ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ. ನಮ್ಮ ಪಕ್ಷದಿಂದ ಬೆಂಬಲವಿದೆ ಎಂದು ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ನಾಳೆ ರಾಜ್ಯದ 2 ಕಡೆ ನಡೆಯಲಿದೆ ಯುದ್ಧದ ಡ್ರಿಲ್‌!

    ಜಮೀರ್ ಯುದ್ದಕ್ಕೆ ಹೋಗೋದು ಬೇಡ, ಇಲ್ಲಿರೋ ಕುನ್ನಿಗಳನ್ನ ಕೊಲ್ಲಲಿ ಎಂದ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗ್ತೇನೆ. ಸಿ.ಟಿ.ರವಿಗೆ(C T Ravi) ಏನು ಕೆಲಸ ಇಲ್ಲ. ಅದಕ್ಕಾಗಿ ಮಾತನಾಡ್ತಾರೆ. ನಮಗೆ ನಮ್ಮ ದೇಶ ಮುಖ್ಯ. ಅದಕ್ಕಾಗಿ ನಾನು ಯುದ್ಧಕ್ಕೆ ಹೋಗ್ತೇನೆ ಅಂದಿದ್ದೆ ಎಂದು ಹೇಳಿದರು.

  • ನಾಳೆ ರಾಜ್ಯದ 2 ಕಡೆ ನಡೆಯಲಿದೆ ಯುದ್ಧದ ಡ್ರಿಲ್‌!

    ನಾಳೆ ರಾಜ್ಯದ 2 ಕಡೆ ನಡೆಯಲಿದೆ ಯುದ್ಧದ ಡ್ರಿಲ್‌!

    ಬೆಂಗಳೂರು: ನಾಳೆ(ಮೇ 7) ಕರ್ನಾಟಕದ ಎರಡು ಕಡೆ ಯುದ್ಧದ ಸೈರನ್‌ ಮೊಳಗಲಿದೆ. ಬೆಂಗಳೂರು (Bengaluru) ಮತ್ತು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಇರುವ ರಾಯಚೂರಿನ (Raichuru) ಶಕ್ತಿ ನಗರದಲ್ಲಿ ಸಂಜೆ 4 ಗಂಟೆಗೆ ಮಾಕ್‌ ಡ್ರಿಲ್‌ ನಡೆಯಲಿದೆ.

    ಮಾಕ್‌ ಡ್ರಿಲ್‌ನಲ್ಲಿ ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.

    ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.

    ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ.  ಇದನ್ನೂ ಓದಿ: ದಿಢೀರ್‌ 35 ಸಾವಿರದಿಂದ 3 ಸಾವಿರ ಕ್ಯುಸೆಕ್‌ಗೆ ಇಳಿಕೆಯಾಯ್ತು ನೀರು – ಭಾರತದ ʼಜಲ ಬಾಂಬ್‌ʼಗೆ ಪಾಕ್‌ ತತ್ತರ

    ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.

    1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ವೇಳೆ ಈ ರೀತಿಯ ಮಾಕ್‌ ಡ್ರಿಲ್‌ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್‌ ಡ್ರಿಲ್‌ ಮಾಡಲು ಸಮಯ ಸಿಕ್ಕಿರಲಿಲ್ಲ.

     

    54 ವರ್ಷದ ಬಳಿಕ ಮಾಕ್‌ ಡ್ರಿಲ್‌:
    ಬರೋಬ್ಬರಿ 54 ವರ್ಷದ ಬಳಿಕ ಭಾರತದಲ್ಲಿ ಮಾಕ್‌ ಡ್ರಿಲ್‌ ನಡೆಯಲಿದೆ. ಪಹಲ್ಗಾಮ್‌ ಪ್ರತೀಕಾರಕ್ಕೆ (Pahalgam Terror Attack) ಭಾರತ (India) ಸನ್ನದ್ಧವಾಗುತ್ತಿದ್ದಂತೆ ದೇಶದ 244 ಸಿವಿಲ್‌ ಡಿಫೆನ್ಸ್‌ ಜಿಲ್ಲೆಗಳಲ್ಲಿ (Civil Defence District) ನಾಳೆ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ.

    ಯುದ್ಧದ (War) ದಾಳಿ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಣಕು ತಾಲೀಮಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರ ರಕ್ಷಣೆಗಾಗಿ ಪ್ರಾತ್ಯಕ್ಷಿಕೆ ಕೊಡುವಂತೆ ಸಿವಿಲ್ ಡಿಫೆನ್ಸ್‌ಗಳಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಭಾರತದ ವಿರುದ್ಧ ಸುಳ್ಳು ಆರೋಪ – ಪಾಕ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ವಿಶ್ವಸಂಸ್ಥೆ

    ಸಾಧಾರಣವಾಗಿ ಒಂದು ದೇಶ ಯುದ್ಧಕ್ಕೆ ಸಿದ್ಧಗೊಳ್ಳುತ್ತಿದ್ದಾಗ ಮಾಕ್‌ ಡ್ರಿಲ್‌ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಕಳೆದ ಭಾನುವಾರ ಪಂಜಾಬ್‌ನ ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ರಾತ್ರಿ 9 ರಿಂದ 9:30ರವರೆಗೆ ವಿದ್ಯುತ್‌ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

    1971ರ ಸಂದರ್ಭದಲ್ಲೂ ಮೊದಲಿಗೆ ಪಂಜಾಬ್‌ನಲ್ಲೇ ಮೊದಲ ಬಾರಿ ಮಾಕ್ ಡ್ರಿಲ್ ಮಾಡಲಾಗಿತ್ತು. ಈ ಬಾರಿಯೂ ಮೊದಲು ಪಂಜಾಬ್ ನಲ್ಲಿ ನಡೆಸಿ ಬಳಿಕ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿರುವುದು ವಿಶೇಷ. ಹೀಗಾಗಿ 1971 ರೀತಿ ಮತ್ತೊಮ್ಮೆ ಭಾರತ ಪಾಕ್‌ ಮಧ್ಯೆ ಯುದ್ಧ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ.

  • 1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್‌! – ಮಾಕ್‌ ಡ್ರಿಲ್‌ ಹೇಗಿರಲಿದೆ?

    1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್‌! – ಮಾಕ್‌ ಡ್ರಿಲ್‌ ಹೇಗಿರಲಿದೆ?

    – 244 ಜಿಲ್ಲೆಗಳಲ್ಲಿ ವಿದ್ಯುತ್‌ ದೀಪ ಬಂದ್‌
    – ಯುದ್ಧದ ವೇಳೆ ಜನರ ರಕ್ಷಣೆಯ ಅಣಕು ಪ್ರದರ್ಶನ

    ನವದೆಹಲಿ: ಬರೋಬ್ಬರಿ 54 ವರ್ಷದ ಬಳಿಕ ಭಾರತದಲ್ಲಿ ಮಾಕ್‌ ಡ್ರಿಲ್‌ ನಡೆಯಲಿದೆ. ಪಹಲ್ಗಾಮ್‌ ಪ್ರತೀಕಾರಕ್ಕೆ (Pahalgam Terror Attack) ಭಾರತ (India) ಸನ್ನದ್ಧವಾಗುತ್ತಿದ್ದಂತೆ ದೇಶದ 244 ಸಿವಿಲ್‌ ಡಿಫೆನ್ಸ್‌ ಜಿಲ್ಲೆಗಳಲ್ಲಿ (Civil Defence District) ನಾಳೆ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ.

    ಯುದ್ಧದ (War) ದಾಳಿ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಣಕು ತಾಲೀಮಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರ ರಕ್ಷಣೆಗಾಗಿ ಪ್ರಾತ್ಯಕ್ಷಿಕೆ ಕೊಡುವಂತೆ ಸಿವಿಲ್ ಡಿಫೆನ್ಸ್‌ಗಳಿಗೆ ಸೂಚನೆ ನೀಡಲಾಗಿದೆ.

    ಸಾಧಾರಣವಾಗಿ ಒಂದು ದೇಶ ಯುದ್ಧಕ್ಕೆ ಸಿದ್ಧಗೊಳ್ಳುತ್ತಿದ್ದಾಗ ಮಾಕ್‌ ಡ್ರಿಲ್‌ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಕಳೆದ ಭಾನುವಾರ ಪಂಜಾಬ್‌ನ ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ರಾತ್ರಿ 9 ರಿಂದ 9:30ರವರೆಗೆ ವಿದ್ಯುತ್‌ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

    1971ರ ಸಂದರ್ಭದಲ್ಲೂ ಮೊದಲಿಗೆ ಪಂಜಾಬ್‌ನಲ್ಲೇ ಮೊದಲ ಬಾರಿ ಮಾಕ್ ಡ್ರಿಲ್ ಮಾಡಲಾಗಿತ್ತು. ಈ ಬಾರಿಯೂ ಮೊದಲು ಪಂಜಾಬ್ ನಲ್ಲಿ ನಡೆಸಿ ಬಳಿಕ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿರುವುದು ವಿಶೇಷ. ಹೀಗಾಗಿ 1971 ರೀತಿ ಮತ್ತೊಮ್ಮೆ ಭಾರತ ಪಾಕ್‌ ಮಧ್ಯೆ ಯುದ್ಧ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

     

    ಮಾಕ್ ಡ್ರಿಲ್ ಎಂದರೇನು?
    ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.

    ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ.

    ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.

    1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ವೇಳೆ ಈ ರೀತಿಯ ಮಾಕ್‌ ಡ್ರಿಲ್‌ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್‌ ಡ್ರಿಲ್‌ ಮಾಡಲು ಸಮಯ ಸಿಕ್ಕಿರಲಿಲ್ಲ.

  • ಯುದ್ಧ ಭೀತಿ – ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 10 ದಿನ ಮದರಸಾ ಬಂದ್!

    ಯುದ್ಧ ಭೀತಿ – ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 10 ದಿನ ಮದರಸಾ ಬಂದ್!

    ಇಸ್ಲಾಮಾಬಾದ್: ಪಹಲ್ಗಾಮ್ ಪ್ರವಾಸಿಗರ ದಾಳಿಯ (Pahalgam Terror Attack) ಬಳಿಕ ಯುದ್ಧದ ಭೀತಿಯಲ್ಲಿರುವ ಪಾಕಿಸ್ತಾನವು (Pakistan) ಮುಂಜಾಗ್ರತಾ ಕ್ರಮವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) 10 ದಿನಗಳ ಕಾಲ ಮದರಸಾ ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ.

    ಭಾರತವು ಎಲ್ಲಾ ಮದರಸಾಗಳನ್ನು ಗುರಿಯಾಗಿರಿಸಿಕೊಳ್ಳುವ ಭಯವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸರ್ಕಾರವು ಗುರುವಾರ ತಿಳಿಸಿದೆ. ಅಲ್ಲದೇ ಭಾರತ ಶೀಘ್ರದಲ್ಲೇ ಮಿಲಿಟರಿ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ ಎಂದು ಗುಪ್ತಚರ ಮಾಹಿತಿ ಇದೆ ಎಂದು ಹೇಳಿದೆ. ಇದನ್ನೂ ಓದಿ: ರಕ್ಷಣೆಗೆ ಅಮೆರಿಕ, ಚೀನಾಗೆ ಪಾಕ್ ಮೊರೆ – ಪ್ರತೀಕಾರ ಕಟ್ಟಿಟ್ಟಬುತ್ತಿ: ಭಾರತ ಗುಡುಗು

    ಭಾರತೀಯ ಪಡೆಗಳು ಮದರಸಾಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ಭಯೋತ್ಪಾದಕ ತರಬೇತಿ ಕೇಂದ್ರಗಳೆಂದು ದಾಳಿ ಮಾಡಬಹುದು ಎಂದು ಭದ್ರತಾ ಅಧಿಕಾರಿಗಳು ಭಯಪಡುತ್ತಿದ್ದಾರೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಧಾರ್ಮಿಕ ವ್ಯವಹಾರಗಳ ಇಲಾಖೆಯ ನಿರ್ದೇಶಕ ಹಫೀಜ್ ನಜೀರ್ ಅಹ್ಮದ್ ಏಜೆನ್ಸಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 445 ನೋಂದಾಯಿತ ಮದರಸಾಗಳಿದ್ದು, 26,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ನಾವು ಬುಧವಾರ ಸಭೆ ನಡೆಸಿದ್ದು, ಮುಗ್ಧ ಮಕ್ಕಳನ್ನು ಅಪಾಯದಿಂದ ಕಾಪಾಡಲು ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ, ಬುಡ ಸಮೇತ ಕಿತ್ತುಹಾಕ್ತೀವಿ: ಅಮಿತ್‌ ಶಾ ಗುಡುಗು

    ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಕೇಂದ್ರ ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಪಾಕ್ ಪತರುಗುಟ್ಟಿದೆ.

  • ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

    ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

    ಶ್ರೀನಗರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pehalgam Terrorist Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LOC) ಬಳಿಯಿರುವ ಗ್ರಾಮಗಳ ಜನರು ಸ್ವಯಂ ಜಾಗರೂಕರಾಗ್ತಿದ್ದಾರೆ. ಒಂದು ವೇಳೆ ಭಾರತ-ಪಾಕ್‌ ನಡುವೆ ಯುದ್ಧ ಸಂಭವಿಸಿದ್ರೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್‌ಗಳನ್ನ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಬೆಳೆಯನ್ನು ಅವಧಿಗೆ ಮುಂಚಿತವಾಗಿಯೇ ಕೊಯ್ಲು ಮಾಡ್ತಿದ್ದಾರೆ.

    ಬಂಕರ್‌ಗಳನ್ನ ಶುಚಿಗೊಳಿಸುವ ಕೆಲಸ ಶುರು:
    ಭಾರತ ಸರ್ಕಾರದ ಒಂದೊಂದು ಕಠಿಣ ನಿರ್ಧಾರಗಳು ಶತ್ರುರಾಷ್ಟ್ರ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಜನ ಯಾವುದೇ ಕ್ಷಣದಲ್ಲೂ ಯುದ್ಧ ಸಂಭವಿಸಬಹುದು ಎನ್ನುವ ಆತಂಕದಲ್ಲಿದ್ದಾರೆ. ಒಂದು ವೇಳೆ ಯುದ್ಧ ಸಂಭವಿಸಿದ್ರೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ಬಂಕರ್‌ಗಳನ್ನು ಶುಚಿಗೊಳಿಸುವ ಕೆಲಸ ಶುರು ಮಾಡಿದ್ದಾರೆ. ಸರ್ಕಾರ ಈ ಹಿಂದೆಯೇ ಸಾವಿರಾರು ವೈಯಕ್ತಿಕ ಮತ್ತು ಸಮುದಾಯ ಬಂಕರ್‌ಗಳನ್ನು (Community Bunkers) ನಿರ್ಮಿಸಿತ್ತು, ಈಗ ಅವುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

    ಈ ಕುರಿತು ಮಾತನಾಡಿರುವ ಆರ್‌ಎಸ್ ಪುರ ವಲಯದ ಟ್ರೆವಾ ಗ್ರಾಮದ ಮಾಜಿ ಸರಪಂಚ್ ಬಲ್ಬೀರ್ ಕೌರ್, ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಗಡಿಯಾಚೆಯಿಂದ ಶೆಲ್ ದಾಳಿ ಅಥವಾ ಗುಂಡಿನ ದಾಳಿ ನಡೆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭೂಗತ ಬಂಕರ್‌ಗಳನ್ನು ಸಿದ್ಧಪಡಿಸಲು ನಾವು ನಿರ್ಧರಿಸಿದ್ದೇವೆ. ಮಾಜಿ ಸರಪಂಚ್‌ಗಳು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದು, ಸೇನೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದು ತಿಳಿಸಿದ್ದಾರೆ.

    4,000ಕ್ಕೂ ಹೆಚ್ಚು ಬಂಕರ್‌ಗಳಿಗೆ ಅನುಮೋದನೆ
    ಪಾಕಿಸ್ತಾನದ ಶೆಲ್ ದಾಳಿಯಿಂದ ಗಡಿಯಲ್ಲಿ ವಾಸಿಸುವ ಜನರನ್ನು ರಕ್ಷಿಸಲು, ಕೇಂದ್ರ ಸರ್ಕಾರವು ಡಿಸೆಂಬರ್ 2017 ರಲ್ಲಿ ಜಮ್ಮು, ಕಥುವಾ ಮತ್ತು ಸಾಂಬಾದ ಐದು ಜಿಲ್ಲೆಗಳಲ್ಲಿ 14,460 ವೈಯಕ್ತಿಕ ಮತ್ತು ಸಮುದಾಯ ಬಂಕರ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಈ ಬಂಕರ್‌ಗಳು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಹಳ್ಳಿಗಳು ಮತ್ತು ನಿಯಂತ್ರಣ ರೇಖೆಯಲ್ಲಿರುವ ಪೂಂಚ್ ಮತ್ತು ರಾಜೌರಿ ಹಳ್ಳಿಗಳನ್ನು ಒಳಗೊಂಡಿವೆ. ನಂತರ, ಸರ್ಕಾರವು ದುರ್ಬಲ ಜನಸಂಖ್ಯೆಗಾಗಿ 4,000ಕ್ಕೂ ಹೆಚ್ಚು ಬಂಕರ್‌ಗಳನ್ನು ಅನುಮೋದಿಸಿತು.

    3,323 ಕಿಮೀ ಉದ್ದದ ಗಡಿ ಹಂಚಿಕೆ
    ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ 221 ಕಿ.ಮೀ ಅಂತಾರಾಷ್ಟ್ರೀಯ ಗಡಿಯಾಗಿದ್ದು, 744 ಕಿಮೀ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಾಗಿದೆ. 2021 ರಿಂದ ಕದನ ವಿರಾಮ ಉಲ್ಲಂಘನೆಗಳು ಕಡಿಮೆಯಾಗಿದ್ದರೂ, ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

    2020ರಲ್ಲಿ 5,000ಕ್ಕೂ ಹೆಚ್ಚು ಉಲ್ಲಂಘನೆಗಳು
    ಭಾರತ ಮತ್ತು ಪಾಕಿಸ್ತಾನ ಆರಂಭದಲ್ಲಿ 2003 ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು, ಆದರೆ ಪಾಕಿಸ್ತಾನ ಪದೇ ಪದೇ ಒಪ್ಪಂದ ಉಲ್ಲಂಘಿಸುತ್ತಾ ಬಂದಿದೆ. 2020 ರಲ್ಲಿ 5,000ಕ್ಕೂ ಹೆಚ್ಚು ಬಾರಿ ಒಪ್ಪಂದ ಉಲ್ಲಂಘನೆ ಮಾಡಿರುವುದಾಗಿ ವರದಿಗಳು ತಿಳಿಸಿವೆ.