Tag: ಯುತ್ ಕಾಂಗ್ರೆಸ್

  • ಯತ್ನಾಳ್ ಸತ್ತಿದ್ದಾರೆ, ಅದಕ್ಕಾಗಿ ಶವಯಾತ್ರೆ ಮಾಡ್ತಿದ್ದೇವೆ: ಮೊಹಮ್ಮದ್ ನಲಪಾಡ್

    ಯತ್ನಾಳ್ ಸತ್ತಿದ್ದಾರೆ, ಅದಕ್ಕಾಗಿ ಶವಯಾತ್ರೆ ಮಾಡ್ತಿದ್ದೇವೆ: ಮೊಹಮ್ಮದ್ ನಲಪಾಡ್

    ಬೆಂಗಳೂರು: ಬಿಜೆಪಿ ಪಕ್ಷದವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ಅದಕ್ಕಾಗಿ ಬಾಯಿಂಗೆ ಬಂದ ಹಾಗೆ ಮಾತಾನಾಡುತ್ತಾರೆ. ಯತ್ನಾಳ್ ಈಗಾಗಲೇ ಸತ್ತಿದ್ದು ಅವರ ಶವಯಾತ್ರೆಯನ್ನು ಯುತ್ ಕಾಂಗ್ರೆಸ್ ಮಾಡಿದೆ ಎಂದು ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

    ಇಂದು ಮೌರ್ಯ ಸರ್ಕಲ್‍ನಲ್ಲಿ ಯುತ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡಿದರು. ನಿನ್ನೆ ಯತ್ನಾಳ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನದ ಎಜೆಂಟ್ ಅಂತ ಕರೆದಿದ್ದಾರೆ. ಯಾವ ಆಧಾರದ ಮೇಲೆ ಅವರು ಹೀಗೆ ಕರೆಯುತ್ತಾರೆ. ಅವರಿಗೆ ನೈತಿಕತೆ ಇಲ್ಲ. ಯತ್ನಾಳ್ ಅಫ್ಘಾನಿಸ್ತಾನದ ಎಜೆಂಟ್ ಅಂತ ನಾನು ಹೇಳುತ್ತೇನೆ. ಅವರು ಈಗಾಗಲೇ ಸತ್ತಿದ್ದಾರೆ. ಅದಕ್ಕಾಗಿ ನಾವೂ ಶವಯಾತ್ರೆ ಮಾಡುತ್ತಿದ್ದೇವೆ. ಇದು ಕೊಳಕು ಬಿಜೆಪಿ ಪಕ್ಷ ಜನ ಇದನ್ನು ಕಿತ್ತು ಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಸೈನ್ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ರಚಿಸಿದ 20 ವರ್ಷದ ಯುವತಿ

    nalapad

    ಬಿಜೆಪಿಗೆ ಧಿಕ್ಕಾರ ಕೂಗಿ ಶವಯಾತ್ರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಯತ್ನಾಳ್ ಭಾವಚಿತ್ರವನ್ನು ಚಟ್ಟದ ಮೇಲೆ ಹಾಕಿ ಶವಯಾತ್ರೆ ಮಾಡಿ ಚಿತೆಗೆ ಬೆಂಕಿ ಹಚ್ಚಿ ಸಂಸ್ಕಾರ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಯತ್ನಾಳ್ ದೇಶದ್ರೋಹಿ ಕೋಮುವಾದಿ ಅಂತ ಕೂಗಿ ಬಾಯಿ ಬಡೆದುಕೊಂಡು ಅಂತ್ಯಸಂಸ್ಕಾರ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

  • ಛಪಾಕ್ ಶೋನ ಚಿತ್ರಮಂದಿರದ ಎಲ್ಲಾ ಟಿಕೆಟ್ ಬುಕ್ ಮಾಡಿದ ಕಲಬುರಗಿ ಯೂತ್ ಕಾಂಗ್ರೆಸ್

    ಛಪಾಕ್ ಶೋನ ಚಿತ್ರಮಂದಿರದ ಎಲ್ಲಾ ಟಿಕೆಟ್ ಬುಕ್ ಮಾಡಿದ ಕಲಬುರಗಿ ಯೂತ್ ಕಾಂಗ್ರೆಸ್

    ಕಲಬುರಗಿ: ಜೆಎನ್‍ಯು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟನೆ ‘ಛಪಾಕ್’ ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ. ಆದರೆ ಇದಕ್ಕೆ ಕಲಬುರಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕೌಂಟರ್ ನೀಡಿದ್ದಾರೆ.

    ಈ ಹಿನ್ನೆಲೆ ಶನಿವಾರ ಕಲಬುರಗಿಯ ಮಿರಜ್ ಚಿತ್ರಮಂದಿರದಲ್ಲಿ ಮಧ್ಯಾಹ್ನ 1 ಗಂಟೆಯ ಹಿಂದಿ ಸಿನಿಮಾ ‘ಛಾಪಕ್’ ಶೋನ ಎಲ್ಲಾ ಟಿಕೆಟ್‍ಗಳನ್ನು ಬುಕ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಸಾಧ್ಯವಾದರೆ ಶಾಸಕ ಪ್ರಿಯಾಂಕ್ ಖರ್ಗೆ ಸಹ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ: ರೀಲ್, ರಿಯಲ್‍ನಲ್ಲಿಯೂ ನೀವು ಬೋಲ್ಡ್: ದೀಪಿಕಾಗೆ ಧನ್ಯವಾದ ಹೇಳಿದ ಪ್ರಕಾಶ್ ರೈ

    ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದು, ಕಾಂಗ್ರೆಸ್ಸಿನ ಈ ಪ್ರಯತ್ನ ಆ್ಯಸಿಡ್ ಸಂತ್ರಸ್ತೆಯ ಜೊತೆಗೆ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ಕೊಡುತ್ತದೆ. ಅಲ್ಲದೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಪ್ರದರ್ಶನವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಶನಿವಾರ ಮಧ್ಯಾಹ್ನ 12:30ರ ಸುಮಾರಿಗೆ 1 ಗಂಟೆಯ ಶೋ ಮುನ್ನ ಶಾಸಕರು ಉಪಸ್ಥಿತರಿರಲಿದ್ದಾರೆ. ಅಲ್ಲದೇ ಜೆಎನ್‍ಯು ಗಾಯಾಳು ವಿದ್ಯಾರ್ಥಿಗಳನ್ನು ಭೇಟಿಯಾಗಿರುವುದಕ್ಕೆ ತೀವ್ರ ಟೀಕೆಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಶುಭಹಾರೈಸಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.

  • ವಿಕೆಟ್‍ಗಳಿಂದ ಬಡಿದಾಡಿಕೊಂಡ ಯೂತ್ ಕಾಂಗ್ರೆಸ್ ಕಾರ್ಯದರ್ಶಿ, ವಾರ್ಡ್ ಅಧ್ಯಕ್ಷ

    ವಿಕೆಟ್‍ಗಳಿಂದ ಬಡಿದಾಡಿಕೊಂಡ ಯೂತ್ ಕಾಂಗ್ರೆಸ್ ಕಾರ್ಯದರ್ಶಿ, ವಾರ್ಡ್ ಅಧ್ಯಕ್ಷ

    ಬೆಂಗಳೂರು: ಹಣದ ವಿಚಾರವಾಗಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹಾಗೂ ಬಾಗಲಗುಂಟೆ ವಾರ್ಡ್ ಅಧ್ಯಕ್ಷರಿಬ್ಬರೂ ಕ್ರಿಕೆಟ್ ವಿಕೆಟ್‍ಗಳಿಂದ ಬಡಿದಾಡಿಕೊಂಡಿದ್ದಾರೆ.

    ನಗರದ ಹೆಗ್ಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ರಾಜ್ಯ ಯೂತ್ ಕಾರ್ಯದರ್ಶಿ ಉಮೇಶ್ ಬೈರೇಗೌಡ ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಉಮೇಶ್ ಬೈರೇಗೌಡ ಹೆಗ್ಗನಹಳ್ಳಿಯಲ್ಲಿ ಅಕ್ಷಯ ಶ್ರೀ ಫೈನಾನ್ಸ್ ನಡೆಸುತ್ತಿದ್ದಾರೆ. ಫೈನಾನ್ಸ್ ಕಂಪನಿ ಮೂಲಕ ಚೀಟಿ ರೂಪದಲ್ಲಿ ಪ್ರತಿ ತಿಂಗಳು 30 ಸಾವಿರ ರೂಗಳಂತೆ 2 ವರ್ಷಗಳ ವರೆಗೆ ಜಗದೀಶ್ ಹಣ ಹೂಡಿಕೆ ಮಾಡಿದ್ದರು. 3 ವರ್ಷಗಳಿಂದ 30 ಸಾವಿರ ಪಾವತಿಸಿ ಚೀಟಿ ಮುಗಿದ ಬಳಿಕ ಒಟ್ಟು 9 ಲಕ್ಷ ರೂ. ಹಣ ಕೊಡುವಂತೆ ಜಗದೀಶ್ ಫೈನಾನ್ಸ್ ಕಛೇರಿ ಬಳಿ ತೆರಳಿದ್ದಾರೆ. ಈ ವೇಳೆ ವಾಗ್ವಾದ ನಡೆದು ಹಲ್ಲೆಗೆ ತಿರುಗಿದೆ.

    ಚೀಟಿ ಕೊನೆಗೊಂಡು ಒಂದು ವರ್ಷ ಕಳೆದರೂ ಹಣ ಕೊಡದ್ದಕ್ಕೆ ಜಗದೀಶ್ ಸಿಟ್ಟಾಗಿದ್ದಾರೆ. ಈ ವೇಳೆ ವಾಗ್ವಾದ ನಡೆದಿದ್ದು, ಇಬ್ಬರೂ ಕ್ರಿಕೆಟ್ ವಿಕೆಟ್‍ಗಳಿಂದ ಬಡಿದಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಜಗದೀಶ್ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ರಾಜಗೋಪಾಲನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

  • ದಿಗ್ಬಂಧನದಲ್ಲಿರೋ ಶಾಸಕರನ್ನು ಬಿಡಿಸಿಕೊಡಿ: ಸ್ಪೀಕರ್‌ಗೆ ಯೂತ್ ಕಾಂಗ್ರೆಸ್‍ನಿಂದ ಮನವಿ

    ದಿಗ್ಬಂಧನದಲ್ಲಿರೋ ಶಾಸಕರನ್ನು ಬಿಡಿಸಿಕೊಡಿ: ಸ್ಪೀಕರ್‌ಗೆ ಯೂತ್ ಕಾಂಗ್ರೆಸ್‍ನಿಂದ ಮನವಿ

    – ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯ

    ಬೆಂಗಳೂರು: ದಿಗ್ಬಂಧನದಲ್ಲಿರುವ ನಮ್ಮ ಶಾಸಕರನ್ನು ಬಿಡಿಸಿಕೊಡಿ ಎಂದು ಯೂತ್ ಕಾಂಗ್ರೆಸ್ ಹಾಗೂ ಕ್ಷೇತ್ರದ ಜನರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    ಶಾಸಕ ಮಹೇಶ್ ಕುಮಟಳ್ಳಿ ಅವರಿಗಾಗಿ ಅಥಣಿ ಯೂತ್ ಕಾಂಗ್ರೆಸ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪತ್ತೆಗಾಗಿ ಕ್ಷೇತ್ರದ ಜನರು ಮನವಿ ಸಲ್ಲಿಸಿದ್ದಾರೆ. ಶಾಸಕರು ಕ್ಷೇತ್ರಕ್ಕೆ ಬರುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಪತ್ರದ ಮೂಲಕ ಸ್ಪೀಕರ್ ಅವರಿಗೆ ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿರುವ ರಮೇಶ್ ಕುಮಾರ್ ಅವರು, ಗೃಹ ಇಲಾಖೆಗೆ ಪ್ರಕರಣ ವರ್ಗಾವಯಿಸಿದ್ದು, ಶಾಸಕರ ಪತ್ತೆ ಮಾಡುವಂತೆ ತಿಳಿಸಿದ್ದಾರಂತೆ. ಇದನ್ನು ಓದು: ಬಂಡಾಯ ಶಾಸಕರ ಅನರ್ಹತೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ ಕಾಂಗ್ರೆಸ್

    ಪತ್ರದಲ್ಲಿ ಏನಿದೆ?:
    ಅಥಣಿ ಮತ ಕ್ಷೇತ್ರದ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ವಕೀಲ ಪ್ರಮೋದ್ ಹಿರೇಮನಿ ಅವರು ಈ ಪತ್ರವನ್ನು ಬರೆದಿದ್ದಾರೆ. ಶಾಸಕ ಮಹೇಶ್ ಕಮಟಳ್ಳಿ ಅವರ ಗೆಲುವಿಗೆ ನಾನು ಪ್ರಮುಖ ಪಾತ್ರವಹಿಸಿದ್ದೇನೆ. ಕಳೆದ ಕೆಲವು ತಿಂಗಳಿಂದ ಶಾಸಕರು ಕ್ಷೇತ್ರಕ್ಕೆ ಬರದೆ ತಮ್ಮ ಕಚೇರಿಗೆ ಬೀಗ ಹಾಕಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನು ಓದು: ಬಂಡಾಯ ಶಾಸಕರ ರೂಮ್ ಮುಂದೇ ‘ಡು ನಾಟ್ ಡಿಸ್ಟ್ರಬ್’ ಬೋರ್ಡ್

    ಈ ಎಲ್ಲ ಬೆಳವಣಿಗೆಯನ್ನು ನೋಡಿದರೆ ಶಾಸಕರನ್ನು ಯಾರೋ ಅಪಹರಿಸಿ ಗೃಹ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಈ ಸಂಬಂಧ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದೇವೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದರೂ ಶಾಸಕರು ಕ್ಷೇತ್ರ ಅಥವಾ ಅಧಿವೇಶನಕ್ಕೆ ಬರುತ್ತಿಲ್ಲ. ಇದರಿಂದಾಗಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಅಥಣಿ ಯೂತ್ ಕಾಂಗ್ರೆಸ್ ಕೇಳಿಕೊಂಡಿದೆ.

    ಗೋಕಾಕ ಕ್ಷೇತ್ರದಿಂದ ಕಳೆದ ಐದು ಬಾರಿ ಆಯ್ಕೆಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನಾಪತ್ತೆಯಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಬೆರೆಳೆಣಿಕೆಯಷ್ಟು ದಿನಗಳು ಮಾತ್ರ ಕ್ಷೇತ್ರಕ್ಕೆ ಬಂದಿದ್ದಾರೆ. ಕ್ಷೇತ್ರದ ಜನತೆಯ ಕುಂದುಕೊರತೆ ಆಲಿಸುತ್ತಿಲ್ಲ. ಅವರ ಮನೆ ಹಾಗೂ ಕಾರ್ಯಾಲಯದಲ್ಲಿ ವಿಚಾರಿಸಿದರೆ ಮಾಜಿ ಸಚಿವರು ಮುಂಬೈನಲ್ಲಿ ಇರುವುದಾಗಿ ಹೇಳುತ್ತಿದ್ದಾರೆ. ಕ್ಷೇತ್ರ ಅಭಿವೃದ್ಧಿಯ ವಿಚಾರವಾಗಿ ಮಾತನಾಡಲು ಮಾಜಿ ಸಚಿವರು ಕಲಾಪದಲ್ಲಿ ಭಾಗವಹಿಸಿಲ್ಲ ಎಂದು ಜನರು ಆರೋಪಿಸಿದ್ದಾರೆ.

    ಕ್ಷೇತ್ರಕ್ಕೆ ಆದಷ್ಟು ಬೇಗ ಭೇಟಿ ನೀಡಿ, ಜನರ ಕುಂದುಕೊರತೆ ಆಲಿಸುವಂತೆ ರಮೇಶ್ ಜಾರಕಿಹೊಳಿ ಅವರಿಗೆ ಸೂಚನೆ ನೀಡಬೇಕು. ಒಂದು ವೇಳೆ ಅವರು ಒಪ್ಪದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಸ್ಪೀಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv