Tag: ಯುಜ್ವೇಂದ್ರ ಚಹಲ್

  • ಅಂತರಾಷ್ಟ್ರೀಯ ಟಿ-20ಯಲ್ಲಿ ಬುಮ್ರಾನನ್ನು ಹಿಂದಿಕ್ಕುವ ತವಕದಲ್ಲಿ ಚಹಲ್

    ಅಂತರಾಷ್ಟ್ರೀಯ ಟಿ-20ಯಲ್ಲಿ ಬುಮ್ರಾನನ್ನು ಹಿಂದಿಕ್ಕುವ ತವಕದಲ್ಲಿ ಚಹಲ್

    ಮುಂಬೈ: ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಜಸ್ಪ್ರಿತ್ ಬುಮ್ರಾ ಅವರನ್ನು ಹಿಂದಿಕ್ಕುವ ಸನಿಹದಲ್ಲಿ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿದ್ದು, ಈ ಸಾಧನೆ ಮಾಡಲು ಅವರಿಗೆ ಎರಡು ವಿಕೆಟ್ ಬೇಕಿದೆ.

    ಭಾರತದ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‍ನಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ಅವರು ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯದಲ್ಲಿ ಸೂಪರ್ ಆಗಿ ಸ್ಪಿನ್ ಮಾಡಿದ ಚಹಲ್ ಅವರು ಬುಮ್ರಾ ಅವರನ್ನು ಹಿಂದಿಕ್ಕಲು ಕೇವಲ ಎರಡು ವಿಕೆಟ್‍ಗಳ ಅಂತರವನ್ನು ಹೊಂದಿದ್ದಾರೆ.

    ಭಾರತದ ಪರ ಒಟ್ಟು 50 ಟಿ-20 ಪಂದ್ಯಗಳನ್ನು ಆಡಿರುವ ಜಸ್ಪ್ರಿತ್ ಬುಮ್ರಾ 59 ವಿಕೆಟ್ ಪಡೆದು ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಬದಲಿ ಆಟಗಾರನಾಗಿ ಬಂದು ಮೂರು ವಿಕೆಟ್ ಪಡೆದು ಮಿಂಚಿದ ಚಹಲ್, 43 ಪಂದ್ಯಗಳನ್ನಾಡಿ 58 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿ ಇದ್ದಾರೆ. ಇನ್ನೆರೆಡು ವಿಕೆಟ್ ಪಡೆದರೆ ಚಹಲ್ ಬುಮ್ರಾ ಅವರನ್ನು ಹಿಂದಿಕ್ಕಲಿದ್ದಾರೆ.

    ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಬುಮ್ರಾ ಮತ್ತು ಚಹಲ್ ಇದ್ದರೆ, 46 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿರುವ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನದಲ್ಲಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ 43 ಪಂದ್ಯಗಳಿಗೆ 41 ವಿಕೆಟ್ ಪಡೆದಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್, 43 ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ಲೆಗ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಅವರು ಐದನೇ ಸ್ಥಾನದಲ್ಲಿ ಇದ್ದಾರೆ.

    ಶುಕ್ರವಾರ ಕ್ಯಾನ್ಬೆರಾದಲ್ಲಿ ನಡೆದ ಮೊದಲನೇ ಟಿ-20 ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬ್ಯಾಟಿಂಗ್ ವೇಳೆ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ತುತ್ತಾದ ಕಾರಣ ಆಡುವ 11ರ ಬಳಗಕ್ಕೆ ಬಂದ ಚಹಲ್, ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದ ಕೇವಲ 25 ರನ್ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

  • ಮ್ಯಾಚಿಗೂ ಮುನ್ನ ರೂಮಿಗೆ ಬಂದು ಸರ್ಪ್ರೈಸ್ ಕೊಟ್ಟ ಚಹಲ್ ಭಾವಿ ಪತ್ನಿ

    ಮ್ಯಾಚಿಗೂ ಮುನ್ನ ರೂಮಿಗೆ ಬಂದು ಸರ್ಪ್ರೈಸ್ ಕೊಟ್ಟ ಚಹಲ್ ಭಾವಿ ಪತ್ನಿ

    ಅಬುಧಾಬಿ: ಯುಜ್ವೇಂದ್ರ ಚಹಲ್ ಅವರ ಭಾವಿ ಪತ್ನಿ ಧನಶ್ರೀ ವರ್ಮಾ ಪಂದ್ಯಕ್ಕೂ ಮುನ್ನ ಚಹಲ್ ಅವರ ರೂಮಿಗೆ ಬಂದು ಆರ್‌ಸಿಬಿ ಸ್ಪಿನ್ನರ್ ಗೆ ಸರ್ಪ್ರೈಸ್ ನೀಡಿರುವ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಯೂಟ್ಯೂಬ್ ಖಾತೆಯನ್ನು ಹಂಚಿಕೊಂಡಿದೆ.

    ಯುಜ್ವೇಂದ್ರ ಚಹಲ್ ಅವರು ಈ ಬಾರಿಯ ಐಪಿಎಲ್‍ನಲ್ಲಿ ಆಡಿರುವ 10 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಮಿಂಚುತ್ತಿದ್ದಾರೆ. ಅಕ್ಟೋಬರ್ 17ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಡೆದ ಲೀಗ್ ಪಂದ್ಯದ ಮೊದಲು ಧನಶ್ರೀ ವರ್ಮಾ ಚಹಲ್‍ಗೆ ತಿಳಿಯದಂತೆ ಅವರ ರೂಮ್ ಬಳಿ ಬಂದಿದ್ದು, ಈ ವೇಳೆ ಚಹಲ್ ಶಾಕ್ ಆಗಿರುವ ಹಳೆಯ ವೀಡಿಯೋವನ್ನು ಆರ್‌ಸಿಬಿ ತನ್ನ ಬೋಲ್ಡ್ ಡೈರೀಸ್‍ನಲ್ಲಿ ಹಂಚಿಕೊಂಡಿದೆ.

    ಈ ವೀಡಿಯೋವನ್ನು ಶುಕ್ರವಾರ ಶೇರ್ ಮಾಡಿರುವ ಆರ್‌ಸಿಬಿ ತಂಡ ಯುಜಿಯ ಖುಷಿಗೆ ಇದೇ ದೊಡ್ಡ ಕಾರಣ ಎಂಬ ಕ್ಯಾಪ್ಶನ್ ನೀಡಿದೆ. ಈ ವೀಡಿಯೋದಲ್ಲಿ ಮೊದಲು ಚಹಲ್ ಹ್ಯಾಪಿ ಆಗಿ ಕುಣಿಯುತ್ತಾ ಹೋಗುತ್ತಿರುತ್ತಾರೆ. ನಂತರ ಈ ಖುಷಿಗೆ ಕಾರಣ ಏನು ಗೊತ್ತೆ ಎಂಬ ಪ್ರಶ್ನೆ ಬರುತ್ತೆ. ನಂತರ ಚಹಲ್‍ಗೆ ತಿಳಿಯದಂತೆ ಧನಶ್ರೀ ವರ್ಮಾ ಅವರು ಅವರ ರೂಮಿಗೆ ಬಂದು ಸರ್ಪ್ರೈಸ್ ನೀಡಿರುವ ವೀಡಿಯೋವನ್ನು ಹಾಕಲಾಗಿದೆ.

    ಈ ವೀಡಿಯೋದಲ್ಲಿ ಮಾತನಾಡಿರುವ ಧನಶ್ರೀ, ನಾನು ನಿಮ್ಮೆಲ್ಲರ ಪ್ರೀತಿಯ ಚಹಲ್ ಗೆಳತಿ ಧನಶ್ರೀ ವರ್ಮಾ, ನಾನು ಅಕ್ಟೋಬರ್ 11ರಂದೇ ದುಬೈಗೆ ಬಂದಿದ್ದೆ. ಅದು ಚಹಲ್‍ಗೆ ಗೊತ್ತಿತ್ತು. ಆದರೆ ಇಂದು ನಾನು ಪಂದ್ಯಕ್ಕೂ ಮುನ್ನವೇ ರೂಮಿಗೆ ಬರುತ್ತೇನೆ ಎಂದು ಆತನಿಗೆ ತಿಳಿದಿಲ್ಲ. ನಾನು ಸರ್ಪ್ರೈಸ್ ನೀಡಲು ಹೋಗುತ್ತಿದ್ದೇನೆ. ಬನ್ನಿ ಚಹಲ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ನೋಡೋಣ ಎಂದು ರೂಮಿನ ಕಡೆಗೆ ಹೋಗುತ್ತಾರೆ.

    ರೂಮಿನ ಬಳಿ ಹೋಗಿ ಧನಶ್ರೀ ವರ್ಮಾ ಡೂರ್ ತಟ್ಟಿದಾಗ ಚಹಲ್ ಬಂದು ಓಪನ್ ಮಾಡಿ, ನೀನು ಪಂದ್ಯ ಮುಗಿದ ನಂತರ ಬರಬೇಕು ಎಂದು ಕೇಳುತ್ತಾರೆ. ಅದಕ್ಕೆ ಧನಶ್ರೀ ಇದು ಸರ್ಪ್ರೈಸ್ ಎಂದು ಹೇಳಿ ಅಪ್ಪಿಕೊಳ್ಳುತ್ತಾರೆ. ಜೊತೆಗೆ ಚಹಲ್ ಧನುಶ್ರೀಯನ್ನು ಬಹಳ ಮಿಸ್ ಮಾಡುತ್ತಿದ್ದೆ ಎಂದು ಹೇಳುತ್ತಾರೆ. ಅಕ್ಟೋಬರ್ 11ರಂದು ದುಬೈಗೆ ಬಂದಿದ್ದ ಧನಶ್ರೀ ವರ್ಮಾ ಅಕ್ಟೋಬರ್ 17ರವರೆಗೆ ಕ್ವಾಂರಟೈನ್ ಆಗಿದ್ದರು. ಇದನ್ನು ಓದಿ: ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ಅಂದಹಾಗೇ ಚಹಲ್ ಹಾಗೂ ಧನುಶ್ರೀ ಅವರ ನಿಶ್ಚಿತಾರ್ಥ ಎರಡು ಕುಟುಂಬಗಳ ಸಮ್ಮುಖದಲ್ಲಿ ಆಗಸ್ಟ್ 8 ರಂದು ನಡೆದಿತ್ತು. ಈ ವಿಚಾರವನ್ನು ಸ್ವತಃ ಚಹಲ್ ತಮ್ಮ ಇನ್‍ಸ್ಟಾದಲ್ಲಿ ಘೋಷಿಸಿದ್ದರು. ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದಾರೆ. ಅಲ್ಲದೇ ಡಾಕ್ಟರ್ ಕೊರಿಯೋಗ್ರಾಫರ್, ಯೂಟ್ಯೂಬರ್ ಮತ್ತು ಧನಶ್ರೀ ವರ್ಮಾ ಕಂಪನಿಯ ಸ್ಥಾಪಕಿಯಾಗಿದ್ದಾರೆ. ಚಹಲ್ ಮದುವೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

  • ಚಹಲ್‍ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡ್ಬೇಕಿತ್ತು: ಬೆನ್ ಸ್ಟೋಕ್ಸ್

    ಚಹಲ್‍ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡ್ಬೇಕಿತ್ತು: ಬೆನ್ ಸ್ಟೋಕ್ಸ್

    ನವದೆಹಲಿ: ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ  ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡಬೇಕಿತ್ತು ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

    ಸೋಮವಾರ ನಡೆದ ಐಪಿಎಲ್-2020ಯ 28ನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 87 ರನ್‍ಗಳಿಂದ ಗೆದ್ದು ಬೀಗಿದೆ. ಎಬಿಡಿ ವಿಲಿಯರ್ಸ್ ಅವರು ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದರೆ, ಬೆಂಗಳೂರು ತಂಡದ ಬೌಲರ್ ಗಳು ಬೌಲಿಂಗ್‍ನಲ್ಲಿ ಮ್ಯಾಜಿಕ್ ಮಾಡಿ ತಂಡ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    ಸೋಮವಾರದ ಆರ್‌ಸಿಬಿ  ಮತ್ತು ಕೆಕೆಆರ್ ಮ್ಯಾಚ್ ಮುಗಿದ ನಂತರ ಟ್ವೀಟ್ ಮಾಡಿರುವ ಬೆನ್ ಸ್ಟೋಕ್ಸ್, ಬ್ಯಾಟ್ಸ್ ಮ್ಯಾನ್‍ಗಳ ಗೇಮಿನಲ್ಲಿ ಇಂದು ಯಜೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಿತ್ತು. ಏಕೆಂದರೆ ಶಾರ್ಜಾದಂತ ಮೈದಾನದಲ್ಲಿ ಆತ ಉತ್ತಮವಾಗಿ ಬೌಲ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ನಿನ್ನೆಯ ಪಂದ್ಯದಲ್ಲಿ 33 ಬಾಲಿಗೆ 73 ರನ್ ಹೊಡೆದ ಎಬಿಡಿ ವಿಲಿಯರ್ಸ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಲಾಗಿದೆ.

    ಐಪಿಎಲ್‍ನಲ್ಲಿ ಕಳೆದ ಕೆಲ ಆವೃತ್ತಿಗಳಿಂದ ಆರ್‌ಸಿಬಿ ತಂಡದಲ್ಲಿ ಬೌಲಿಂಗ್ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈ ಆವೃತ್ತಿಯಲ್ಲಿ ಬೆಂಗಳೂರು ಬೌಲರ್ಸ್ ಗಳು ಮ್ಯಾಚಿಕ್ ಮೇಲೆ ಮ್ಯಾಜಿಕ್ ಮಾಡುತ್ತಿದ್ದಾರೆ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಯುಜ್ವೇಂದ್ರ ಚಹಲ್, ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 12 ರನ್ ನೀಡಿ ಒಂದು ವಿಕೆಟ್ ಕಿತ್ತು ಮಿಂಚಿದ್ದಾರೆ.

    ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಎಬಿಡಿಯವರ ಸ್ಫೋಟಕ ಆಟದಿಂದ ಆರ್‌ಸಿಬಿ ತಂಡ ಕೆಕೆಆರ್ ತಂಡಕ್ಕೆ 195 ರನ್‍ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡಕ್ಕೆ ಬೆಂಗಳೂರು ಬೌಲರ್ ಗಳು ಆರಂಭಿಕ ಆಘಾತ ನೀಡಿದರು. ಚಹಲ್ ಮತ್ತು ಸುಂದರ್ ಅವರ ಸ್ಪಿನ್ ದಾಳಿಗೆ ಕೆಕೆಆರ್ ಬ್ಯಾಟ್ಸ್ ಮ್ಯಾನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು. ಜೊತೆಗೆ ನಿಗದಿ 20 ಓವರಿನಲ್ಲಿ ಕೇವಲ 112 ರನ್ ಸಿಡಿಸಿ 87 ರನ್‍ಗಳಿಂದ ಕೋಲ್ಕತ್ತಾ ಸೋತಿತು.

  • ಚಹಲ್, ಉದಾನಾ ಬೌಲಿಂಗ್ ಮೋಡಿಗೆ ಮಂಕಾದ ರಾಯಲ್ಸ್ – ಆರ್‌ಸಿಬಿಗೆ 155 ರನ್‍ಗಳ ಗುರಿ

    ಚಹಲ್, ಉದಾನಾ ಬೌಲಿಂಗ್ ಮೋಡಿಗೆ ಮಂಕಾದ ರಾಯಲ್ಸ್ – ಆರ್‌ಸಿಬಿಗೆ 155 ರನ್‍ಗಳ ಗುರಿ

    – 21 ಬಾಲಿಗೆ 40 ರನ್, ಕೊನೆಯಲ್ಲಿ ಆರ್ಚರ್, ತೇವಟಿಯಾ ಅಬ್ಬರ

    ಅಬುಧಾಬಿ: ಆರ್‌ಸಿಬಿ ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಹಲ್ ಮತ್ತು ವೇಗಿ ಇಸುರು ಉದಾನಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 155 ರನ್‍ಗಳ ಟಾರ್ಗೆಟ್ ನೀಡಿದೆ.

    ಇಂದು ವಿಕೇಂಡ್ ಧಮಾಕದ ಮೊದಲನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಅಬುಧಾಬಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಬಂದ ರಾಜಸ್ಥಾನ್ ತಂಡ ಆರಂಭಿಕ ಕುಸಿತದ ನಂತರ ಕೊಂಚ ಚೇತರಿಕೊಂಡು ಬೆಂಗಳೂರು ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

    ಚಹಲ್ ಸ್ಪಿನ್ ಮೋಡಿ
    ಆರ್‌ಸಿಬಿ ಪರವಾಗಿ ಮ್ಯಾಜಿಕಲ್ ಸ್ಪಿನ್ ಮಾಡಿದ ಯುಜ್ವೇಂದ್ರ ಚಹಲ್ ಅವರು ತಮ್ಮ ಕೋಟದ ನಾಲ್ಕು ಓವರ್ ಬೌಲ್ ಮಾಡಿ ಮೂರು ಪ್ರಮುಖ ವಿಕೆಟ್ ಕಿತ್ತು ಕೇವಲ 24 ರನ್ ಕೊಟ್ಟು ಮಿಂಚಿದರು. ಇದೇ ವೇಳೆ ಇವರಿಗೆ ಉತ್ತಮ ಸಾಥ್ ಕೊಟ್ಟ ಇಸುರು ಉದಾನಾ ಅವರು, ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 41 ರನ್ ಬಿಟ್ಟುಕೊಟ್ಟು ದುಬಾರಿಯಾದರು. ನವದೀಪ್ ಸೈನಿಯವರ ಕೂಡ ಒಂದು ವಿಕೆಟ್ ಪಡೆದು ಮಿಂಚಿದರು.

    ರಾಜಸ್ಥಾನ್ ರಾಯಲ್ಸ್ ಕಡೆಯಿಂದ ಆರಂಭಿಕ ಜೋಸ್ ಬಟ್ಲರ್ ಅವರು ಆರಂಭದ ಓವರಿನಲ್ಲೇ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಪಂದ್ಯದ 2ನೇ ಓವರಿನ ನಾಲ್ಕನೇ ಬಾಲಿನಲ್ಲಿ ನಾಯಕ ಸ್ಟೀವ್ ಸ್ಮಿತ್ ಅವರು ಕೇವಲ 5 ರನ್ ಗಳಿಸಿ ಇಸುರು ಉದಾನಾ ಅವರಿಗೆ ಬೌಲ್ಡ್ ಆದರು. ನಂತರ ಬಂದ ನವದೀಪ್ ಸೈನಿ ಅವರು 12 ಬಾಲಿಗೆ 22 ರನ್ ಸಿಡಿಸಿ ಅಬ್ಬರಿಸುವ ಮನ್ಸೂಚನೆ ನೀಡಿದ್ದ ಬಟ್ಲರ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು.

    ನಾಲ್ಕನೇ ಓವರ್ ಬೌಲಿಂಗ್‍ಗೆ ಬಂದು ತಂಡಕ್ಕೆ ಟ್ವಿಸ್ಟ್ ಕೊಟ್ಟ ಯುಜ್ವೇಂದ್ರ ಚಾಹಲ್ ಅವರು, ಉತ್ತಮ ಲಯದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದರು. ಈ ಮೂಲಕ ಆರಂಭದಲ್ಲೇ ಟಾಪ್ ಆರ್ಡರ್ ಬ್ಯಾಟ್ಸ್ ಮ್ಯಾನ್ ಕಳೆದುಕೊಂಡು ಕುಸಿದ ರಾಜಸ್ಥಾನ್ ರಾಯಲ್ಸ್ ತಂಡ ಪವರ್ ಪ್ಲೇ ಮುಕ್ತಾಯದ ವೇಳೆಗೆ 38 ರನ್ ಸೇರಿಸಿತ್ತು. ನಂತರ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಮಹಿಪಾಲ್ ಲೊಮರ್ ಉತ್ತಮವಾಗಿ ಬ್ಯಾಟ್ ಬೀಸಿದರು. ಹೀಗಾಗಿ 10 ಓವರ್ ಮುಕ್ತಾಯಕ್ಕೆ ರಾಜಸ್ಥಾನ್ 70 ಪೇರಿಸಿತು.

    ನಂತರ ಚಹಲ್ ಓವರಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಾಬಿನ್ ಉತ್ತಪ್ಪ 17 ರನ್ ಸಿಡಿಸಿ ಹೊರನಡೆದರು. ನಂತರ ಒಂದಾದ ಯುವ ಆಟಗಾರಾದ ರಿಯಾನ್ ಪರಾಗ್ ಮತ್ತು ಮಹಿಪಾಲ್ ಲೊಮರ್ ಅವರು ತಾಳ್ಮೆಯಿಂದ ಬ್ಯಾಟ್ ಬೀಸಿ ರನ್ ಕಲೆ ಹಾಕಿದರು. ಪರಿಣಾಮ 15ನೇ ಓವರಿನ ಮೊದಲನೇ ಬಾಲಿನಲ್ಲೇ ರಾಜಸ್ಥಾನ್ 100ರ ಗಡಿದಾಟಿತು. ನಂತರ ರಿಯಾನ್ ಪರಾಗ್ ಅವರು ಉದಾನ ಅವರ ಬೌಲಿಂಗ್‍ನಲ್ಲಿ ಫಿಂಚ್ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.

    ನಂತರ ಉತ್ತಮವಾಗಿ ಆಡಿಕೊಂಡು ಬಂದಿದ್ದ ಯುವ ಆಟಗಾರ ಮಹಿಪಾಲ್ ಲೊಮರ್ ಅವರು 39 ಬಾಲಿಗೆ 47 ರನ್ ಹೊಡೆದ ಚಹಲ್ ಅವರ ಸ್ಪನ್ ಬಲೆಗೆ ಬಿದ್ದರು. ಆದರೆ ಕೊನೆಯಲ್ಲಿ ಹೊಂದಾಗಿ ಸ್ಫೋಟಕ ಬ್ಯಾಟಿಂಗ್ ಆಡಿದ ರಾಹುಲ್ ತೇವಟಿಯಾ ಮತ್ತು ಜೋಫ್ರಾ ಆರ್ಚರ್ ಅವರು, 6ನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದರು. ಕೊನೆಯ 21 ಬಾಲಿಗೆ ಈ ಜೋಡಿ ಬರೋಬ್ಬರಿ 40 ರನ್ ಚಚ್ಚಿದರು.

  • ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಅಬುಧಾಬಿ: ಪಂದ್ಯಕ್ಕೂ ಮುನ್ನ ಒತ್ತಡದಲ್ಲಿ ಇದ್ದೆ. ಆದರೆ ಎರಡು ಬಾಲ್ ಆಡಿದ ನಂತರ ವಿಶ್ವಾಸ ಜಾಸ್ತಿ ಆಯ್ತು ಎಂದು ಆರ್‍ಸಿಬಿ ತಂಡ ಉದಯೋನ್ಮುಖ ಆಟಗಾರ ದೇವದತ್ ಪಡಿಕಲ್ ಹೇಳಿದ್ದಾರೆ.

    ಸೋಮವಾರ ರಾತ್ರಿ ನಡೆದ ಐಪಿಎಲ್ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಕನ್ನಡಿಗ ದೇವದತ್ ಪಡಿಕಲ್ ಒಂದು ಮ್ಯಾಚಿನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಅವರು ಪಂದ್ಯಕ್ಕೂ ಮುನ್ನ ಬಹಳ ನರ್ವಸ್ ಆಗಿದ್ದೆ ಎಂದು ಚಹಲ್ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

    ಪಂದ್ಯ ಮುಗಿದ ಬಳಿಕ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಜೊತೆ ಪಡಿಕಲ್ ಮಾತನಾಡಿದ್ದಾರೆ. ಈ ವೇಳೆ ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ. ಸಂಜೆ ಊಟದ ನಂತರ ರೂಮಿನಲ್ಲೂ ಕೂಡ ತುಂಬ ಗೊಂದಲದಲ್ಲಿ ಓಡಾಡುತ್ತಿದ್ದೆ. ಆದರೆ ಬ್ಯಾಟಿಂಗ್ ಮಾಡಲು ಬಂದಾಗ ಎರಡು ಬಾಲ್ ಆಡಿದ ನಂತರ ವಿಶ್ವಾಸ ಹೆಚ್ಚಾಯ್ತು. ಇದಾದ ನಂತರ ಚೆನ್ನಾಗಿ ಆಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಓದಿ: ಆರ್‌ಸಿಬಿ ಡೆಬ್ಯು ಗೆಲುವಿನೊಂದಿಗೆ ಎಲೈಟ್ ಪಟ್ಟಿಗೆ ಕೊಹ್ಲಿ ಸೇರ್ಪಡೆ

    ಇದೇ ವೇಳೆ ವಿರಾಟ್, ಫಿಂಚ್ ಮತ್ತು ಎಬಿಡಿ ಜೊತೆ ಆಟವಾಡುತ್ತಿರುವ ಅನುಭವ ಹಂಚಿಕೊಂಡಿರುವ ಪಡಿಕಲ್, ಕಳೆದ ಒಂದು ತಿಂಗಳಿನಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಈ ವೇಳೆ ವಿರಾಟ್ ಬಹಳ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರು. ಅಲ್ಲಿ ನಮಗೆ ಕಲಿಯುವುದಕ್ಕೆ ಬಹಳ ಇತ್ತು. ಕೊಹ್ಲಿ ಅವರನ್ನು ನಾನು ಪ್ರಶ್ನೆ ಮಾಡುತ್ತಲೇ ಇರುತ್ತಿದ್ದೆ. ಈ ಪಂದ್ಯದಲ್ಲಿ ನಾನು ಫಿಂಚ್ ಅವರ ಜೊತೆ ಆಟವಾಡಿದೆ. ಈ ವೇಳೆ ಅವರು ನನಗೆ ಸ್ಟ್ರೈಕ್ ನೀಡುತ್ತಿದ್ದರು. ಇದರಿಂದ ನನಗೆ ಬಹಳ ಖುಷಿ ಆಯ್ತು ಎಂದು ಪಡಿಕಲ್ ತಿಳಿಸಿದ್ದಾರೆ.

    ಸೋಮವಾರ ದುಬೈ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 20 ವರ್ಷದ ಯುವ ಆರ್‍ಸಿಬಿ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್ ಹೊಡೆದು ಔಟಾಗಿದ್ದರು. 42 ಎಸೆತ ಎದುರಿಸಿದ ಇನ್ನಿಂಗ್ಸ್‍ನಲ್ಲಿ 8 ಬೌಂಡರಿ ಸಿಡಿಸಿದ್ದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‍ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ದೇವದತ್ ಪಡಿಕಲ್ ಪಾತ್ರವಾಗಿದ್ದಾರೆ.

  • ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    – ನಿಜ ನೀನು ತುಂಬ ಕಿರಿಕಿರಿ ಮಾಡ್ತಿಯಾ

    ನವದೆಹಲಿ: ನೀನು ತುಂಬ ಕಿರಿಕಿರಿ ಮಾಡುತ್ತೀಯಾ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಟೀಕಿಸಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿರುವ ಚಹಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುತ್ತಾರೆ. ಎಲ್ಲರನ್ನೂ ಕಾಲೆಳೆಯುವ ಕೆಲಸ ಮಾಡುತ್ತಾರೆ. ಹೀಗಾಗಿ ಗೇಲ್ ನೀನು ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ ಮಾಡುತ್ತಿದ್ದೀಯ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ಚಹಲ್‍ಗೆ ವ್ಯಂಗ್ಯವಾಡಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಕುಳಿತಿರುವ ಕ್ರಿಕೆಟ್ ಆಟಗಾರರು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಒಂದು ಕಾಲದ ಆರ್.ಸಿ.ಬಿ ಸಹ ಆಟಗಾರರಾದ ಚಹಲ್ ಮತ್ತು ಗೇಲ್ ಲೈವ್ ಬಂದು ಮಾತನಾಡಿದ್ದಾರೆ.

    https://www.instagram.com/p/B_HyhuGhfbn/

    ಈ ವೇಳೆ ಗೇಲ್, ನಾನು ಟಿಕ್‍ಟಾಕ್ ಕಂಪನಿಯವರಿಗೆ ನಿನ್ನನ್ನು ಬ್ಲಾಕ್ ಮಾಡಲು ಮನವಿ ಮಾಡುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ನೀನು ಸಖತ್ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದೀಯಾ. ನೀನು ಈಗಲೇ ಸಾಮಾಜಿಕ ಜಾಲತಾಣದಿಂದ ಹೊರಗೆ ಹೋಗಬೇಕು. ನಮಗೆ ಸಾಕಾಗಿದೆ ಚಹಲ್ ಮತ್ತೆ ನಿನ್ನನ್ನು ನನ್ನ ಜೀವನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೋಡಲು ಇಷ್ಟವಿಲ್ಲ. ನಾನು ನಿನ್ನನ್ನು ಬ್ಲಾಕ್ ಮಾಡುತ್ತೇನೆ ಎಂದು ಚಹಲ್ ಅವರನ್ನು ಟೀಕಿಸಿದ್ದಾರೆ.

    ಕ್ರಿಸ್ ಗೇಲ್ ಮತ್ತು ಚಹಲ್ ಅವರು ಒಂದು ಕಾಲದಲ್ಲಿ ಆರ್.ಸಿ.ಬಿ ಸಹ ಆಟಗಾರಗಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ಮತ್ತು ಮೈದಾನದಿಂದ ಆಚೆಗೆ ಫನ್ನಿಯಾಗಿ ಆಡುತ್ತಿದ್ದ ಗೇಲ್ ಮತ್ತು ಚಹಲ್ ಜೋಡಿ ನೋಡುಗರಿಗೆ ಉತ್ತಮ ಮನರಂಜನೆ ನೀಡುತ್ತಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸದಾ ಸಕ್ರಿಯವಾಗಿ ಇರುತ್ತಿದ್ದರು.

  • ಮನೆಮುಂದೆ ಹಸಿವಿನಿಂದ ಮೂರ್ಛೆ ಬಿದ್ದಿದ್ದ ಕಾರ್ಮಿಕನ ನೆರವಿಗೆ ಬಂದ ಶಮಿ

    ಮನೆಮುಂದೆ ಹಸಿವಿನಿಂದ ಮೂರ್ಛೆ ಬಿದ್ದಿದ್ದ ಕಾರ್ಮಿಕನ ನೆರವಿಗೆ ಬಂದ ಶಮಿ

    ಮುಂಬೈ: ಮನೆಯ ಮುಂದೆ ಹಸಿವಿನಿಂದ ಮೂರ್ಛೆ ಬಿದ್ದ ಬಿಹಾರದ ಕೂಲಿ ಕಾರ್ಮಿಕನಿಗೆ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಸಹಾಯ ಮಾಡಿದ್ದಾರೆ.

    ಕೊರೊನಾ ಭಯದಿಂದ ದೇಶ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ ದಿನಗೂಲಿ ಕಾರ್ಮಿಕರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಡಲು ಕೆಲಸವಿಲ್ಲದೇ, ಹೊಟ್ಟೆಗೆ ಊಟವಿಲ್ಲದೇ, ಊರಿಗೆ ವಾಪಸ್ ಹೋಗಲು ಪರಾದಡುತ್ತಿದ್ದಾರೆ. ಇನ್ನೂ ಕೆಲವರು ಹಸಿವಿನ ನಡುವೆಯೂ ತಮ್ಮ ಗ್ರಾಮಗಳಿಗೆ ನಡೆದುಕೊಂಡು ಹೋಗುವ ಸಾಹಸ ಮಾಡುತ್ತಿದ್ದಾರೆ.

    https://www.instagram.com/p/B-7vtuXJlDR/

    ಲಾಕ್‍ಡೌನ್ ಸಮಯದಲ್ಲಿ ಎಲ್ಲ ಸೆಲೆಬ್ರಿಟಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಹಾಗೆಯೇ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಮೊಹಮ್ಮದ್ ಶಮಿ ಇನ್‍ಸ್ಟಾ ಲೈವ್ ಬಂದಿದ್ದು, ಈ ವೇಳೆ ಶಮಿ ಅವರು ಈ ಕೂಲಿ ಕಾರ್ಮಿಕನ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಹಸಿವಿನಿಂದ ಕುಸಿದು ಬಿದ್ದ ಆತನಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

    ಆ ಕೂಲಿ ಕಾರ್ಮಿಕ ರಾಜಸ್ಥಾನದಿಂದ ಬಿಹಾರಕ್ಕೆ ನಡೆದುಕೊಂಡು ಹೋಗುತ್ತಿದ್ದ. ಆತನಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಅವನು ನಡೆದುಕೊಂಡು ಹೋಗುತ್ತಾನೆ ಎಂದರೆ ನನಗೆ ಊಹಿಸಲು ಆಗುತ್ತಿಲ್ಲ. ಆದರೆ ಅವನು ನನ್ನ ಮನೆಯ ಬಾಗಿಲ ಬಳಿ ಊಟವಿಲ್ಲದೇ ಮೂರ್ಛೆ ತಪ್ಪಿಬಿದ್ದಿರುವುದನ್ನು ನಾನು ನನ್ನ ಮನೆಯ ಸಿಸಿಟಿವಿಯಲ್ಲಿ ನೋಡಿದೆ. ತಕ್ಷಣ ಹೋಗಿ ಅವನಿಗೆ ಊಟ ನೀಡಿ ಸಹಾಯ ಮಾಡಿದೆ ಎಂದು ಶಮಿ ಲೈವ್‍ನಲ್ಲಿ ಹೇಳಿದ್ದಾರೆ.

    ನಾನು ನನ್ನ ಕೈಯಲ್ಲಿ ಆದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೂಲಿ ಕಾರ್ಮಿಕರು ಅವರ ಗ್ರಾಮಗಳಿಗೆ ಹೋಗಲು ತುಂಬ ಕಷ್ಟಪಡುತ್ತಿದ್ದಾರೆ. ನನ್ನ ಮನೆ ಹೆದ್ದಾರಿಗೆ ಸಮೀಪವೇ ಇದೆ ಹಾಗಾಗಿ ನಾನು ಜನರು ಬಹಳ ಕಷ್ಟ ಪಡುತ್ತಿರುವುದನ್ನು ತೀರ ಹತ್ತಿರದಿಂದ ನೋಡುತ್ತಿದ್ದೇನೆ. ನನಗೆ ಅವರನ್ನು ನೋಡಿದರೆ ಸಹಾಯ ಮಾಡಬೇಕು ಎನಿಸುತ್ತದೆ. ಹಾಗಾಗಿ ನನಗೆ ಆದಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ.

    ಈ ನಡುವೆ ಶಮಿ ಮತ್ತು ಚಹಲ್ ನಡುವೆ ಕೆಲ ಫನ್ನಿ ಮಾತಕತೆಗಳು ನಡೆದಿದ್ದು, ಈ ಲಾಕ್‍ಡೌನ್ ಸಮಯ ಕ್ರಿಕೆಟಿಗರಿಗೆ ಅಡುಗೆ ಮಾಡುವುದನ್ನು ಕಲಿಯಲು ಸಹಾಯವಾಗಲಿದೆ. ನಾನು ಕೂಡ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ. ಅಡುಗೆ ಕೋಣೆಗೆ ಹೋಗಿ ಅಮ್ಮನಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ.

    https://www.instagram.com/p/B9Duh2fpS2T/

    ಲೈವ್‍ನಲ್ಲಿ ಚಹಲ್ ಶಮಿ ಅವನ್ನು ನಿಮ್ಮ ಕ್ರಿಕೆಟ್ ವೃತ್ತಿಜೀವನದ ಮರೆಯಲಾಗದ ಕ್ಷಣವನ್ನು ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಶಮಿ 2013 ರಲ್ಲಿ ಈಡನ್ ಗಾರ್ಡನ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಶಮಿ ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್‍ಗಳನ್ನು ಪಡೆದಿದ್ದರು.