Tag: ಯುಜುವೇಂದ್ರ ಚಹಲ್

  • ಭಾವಿ ಪತ್ನಿ ಜೊತೆಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ಚಹಲ್ – ಧನಶ್ರೀ ಕಮೆಂಟ್

    ಭಾವಿ ಪತ್ನಿ ಜೊತೆಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ಚಹಲ್ – ಧನಶ್ರೀ ಕಮೆಂಟ್

    ನವದೆಹಲಿ: ಕ್ರಿಕೆಟಿಗ ಯುಜುವೇಂದ್ರ ಚಹಲ್ ಭಾವಿ ಪತ್ನಿ ಧನಶ್ರೀ ಜೊತೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಫೋಟೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಯುಜುವೇಂದ್ರ ಚಹಲ್ ಭಾವಿ ಬಾಳ ಸಂಗಾತಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಚಹಲ್, ಕ್ಯಾಪ್ಷನ್ ನೀಡಿಲ್ಲ. ಆದ್ರೆ ಧನಶ್ರೀ, ವಾಟ್ ಎ ಸೆಲ್ಫಿ, ಸಚ್ ಎ ಪ್ರೋ ಎಂದು ಬರೆದು ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಸೋತಿದೆ. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿರುವ ಆಸೀಸ್ ಬಳಗ ಸರಣಿಯನ್ನ ತನ್ನದಾಗಿಸಿಕೊಂಡಿದೆ. ಎರಡೂ ಪಂದ್ಯಗಳಲ್ಲಿ ಆಡಿರುವ ಚಹಲ್ ಕೇವಲ ಒಂದು ವಿಕೆಟ್ ಪಡೆದಿದ್ದಾರೆ.

     

    View this post on Instagram

     

    A post shared by Yuzvendra Chahal (@yuzi_chahal23)

  • ನಮ್ಮಿಬ್ಬರ ಎಲ್ಲ ಸಮಸ್ಯೆಗಳಿಗೆ ಧೋನಿಯೇ ಪರಿಹಾರ: ಚಹಲ್

    ನಮ್ಮಿಬ್ಬರ ಎಲ್ಲ ಸಮಸ್ಯೆಗಳಿಗೆ ಧೋನಿಯೇ ಪರಿಹಾರ: ಚಹಲ್

    – ಧೋನಿ ಬಗ್ಗೆ ಚಹಲ್ ಮನದಾಳದ ಮಾತು

    ನವದೆಹಲಿ: ನನ್ನ ಮತ್ತು ಕುಲ್ದೀಪ್ ಯಾದವ್ ಸಮಸ್ಯೆಗಳಿಗೆ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಳಿ ಪರಿಹಾರ ಸಿಗುತ್ತೆ ಎಂದು ಸ್ಪಿನ್ನರ್ ಯುಜುವೇಂದ್ರ ಚಹಲ್ ಹೇಳಿದ್ದಾರೆ.

    ರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಚಹಲ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಧೋನಿ ನಮ್ಮ ಪ್ರಾಬ್ಲಂ ಸಾಲ್ವರ್. ಹಲವು ಬಾರಿ ಮೈದಾನದಲ್ಲಿ ಧೋನಿ ನಮ್ಮ ಸಮಸ್ಯೆಯನ್ನ ಪರಿಹರಿಸಿದ್ದಾರೆ. ಇಂತಹ ಘಟನೆಗಳು ಹಲವು ಬಾರಿ ನಡೆದಿವೆ. ಪಂದ್ಯದ ವೇಳೆ ಧೋನಿ ನೀಡುವ ಸಲಹೆಗಳಿಂದಲೇ ವಿಕೆಟ್ ಪಡೆದಿದ್ದೇನೆ. ಯಾರಿಗೆ, ಯಾವಾಗ, ಹೇಗೆ ಬೌಲಿಂಗ್ ಮಾಡಬೇಕೆಂಬುದರ ಕುರಿತು ಧೋನಿ ನೀಡುವ ಸಲಹೆಗಳು ತಂಡದ ಗೆಲುವಿಗೆ ಕಾರಣವಾಗಿರುತ್ತೆ ಎಂದಿದ್ದಾರೆ.

    ಭಾರತ ಮಹೇಂದ್ರ ಸಿಂಗ್ ಧೋನಿ ಎಂಬ ಅದ್ಭುತ ಕ್ರೀಡಾಪಟುವನ್ನು ನೀಡಿದೆ. ಪಂದ್ಯದ ವೇಳೆ ನನಗೆ ಮತ್ತು ಕುಲ್ದೀಪ್ ಗೆ ಸಲಹೆ ನೀಡುತ್ತಿರುತ್ತಾರೆ. ಬ್ಯಾಟ್ಸಮನ್ ಗಳು ನಮ್ಮ ಬೌಲಿಂಗ್ ನಲ್ಲಿ ಸಿಕ್ಸ್ ಮತ್ತು ಫೋರ್ ಬಾರಿಸುತ್ತಿದ್ರೆ, ನಮ್ಮ ಬಳಿ ಬಂದು ಹೆಗಲ ಮೇಲೆ ಕೈ ಇಟ್ಟು, ಗೂಗ್ಲಿ ಎಸೆ, ಈತನಿಗೆ ಆಡಲು ಆಗಲ್ಲ ಅಂತಾ ಹೇಳ್ತಾರೆ. ಧೋನಿ ಸಲಹೆಯಂತೆ ಗೂಗ್ಲಿ ಎಸೆದಾಗ ನಾನು ವಿಕೆಟ್ ಪಡೆದಿದ್ದೇನೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

    ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಸಲಹೆಯಂತೆ ಬೌಲಿಂಗ್ ಮಾಡಿದ್ದರಿಂದ 5 ವಿಕೆಟ್ ಪಡೆಯಲು ಸಾಧ್ಯವಾಯ್ತು. ಜೆಪಿ ಡುಮಿನಿ ಬಹಳ ಸಮಯದವರೆಗೆ ಕ್ರಿಸ್ ನಲ್ಲಿದ್ದರು. ಅವರ ವಿಕೆಟ್ ಪಡೆಯಬೇಕೆಂದು ಕಾಯುತ್ತಿದ್ದೆ. ಆ ವೇಳೆ ಧೋನಿ, ನೇರವಾಗಿ ಸ್ಟಂಪ್ ಗುರಿಯಾಗಿಸಿ ಬಾಲ್ ಎಸೆಯಲು ಹೇಳಿದ್ರು. ಅವರ ಮಾತು ಕೇಳಿ ಸ್ಟಂಪ್‍ಗೆ ಬಾಲ್ ಎಸೆದಾಗ ಡುಮಿನಿ ಎಲ್‍ಬಿಡಬ್ಲ್ಯೂ ಆಗಿ ಔಟಾದರು ಎಂದು ಹೇಳಿದರು.

  • ಜಾತಿ ನಿಂದನೆ ಆರೋಪ- ಯುವರಾಜ್ ಸಿಂಗ್ ವಿರುದ್ಧ ದೂರು ದಾಖಲು

    ಜಾತಿ ನಿಂದನೆ ಆರೋಪ- ಯುವರಾಜ್ ಸಿಂಗ್ ವಿರುದ್ಧ ದೂರು ದಾಖಲು

    -ರೋಹಿತ್ ಶರ್ಮಾ ಕೂಡ ಟಾರ್ಗೆಟ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಬಗ್ಗೆ ತಮಾಷೆಯಾಗಿ ಮಾಡಿದ್ದ ಕಾಮೆಂಟ್ ಸದ್ಯ ಅವರಿಗೆ ಹೊಸ ತಲೆನೋವು ತಂದಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.

    ಯುವರಾಜ್ ಸಿಂಗ್ ವಿರುದ್ಧ ಹರಿಯಾಣ ದಲಿತ ಹಕ್ಕು ಸೇನೆಯ ಮುಖಂಡ, ವಕೀಲ ರಜತ್ ಕಲ್ಸನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ರೋಹಿತ್ ಶರ್ಮಾರೊಂದಿಗೆ ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿದ್ದ ಯುವಿ, ಚಹಲ್, ಜಡೇಜಾರ ಟಿಕ್‍ಟಾಕ್ ವಿಡಿಯೋಗಳ ಕುರಿತು ಪ್ರತಿಕ್ರಿಯೆ ನೀಡಿದ್ದರು. ‘ಈ ಭಂಗಿ ಜನರಿಗೆ ಮಾಡಲು ಬೇರೆ ಕೆಲಸವಿಲ್ಲ ಎನಿಸುತ್ತಿದೆ. ಆದ್ದರಿಂದಲೇ ಕುಟುಂಬ ಸದಸ್ಯರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದಾರೆ’ ಎಂದಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಆಕ್ರೋಶ ವ್ಯಕ್ತಪಡಿಸಿದ್ದ ನೆಟ್ಟಿಗರು ಯುವಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದರು.

    ಸದ್ಯ ಹರಿಯಾಣದ ಹನ್ಸಿ ಪ್ರದೇಶದ ಪೊಲೀಸ್ ಯುವರಾಜ್ ಸಿಂಗ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ ರೋಹಿತ್ ಶರ್ಮಾರನ್ನು ಟಾರ್ಗೆಟ್ ಮಾಡಿದ್ದಾರೆ. ಯುವಿ ಹೇಳಿಕೆಯನ್ನು ರೋಹಿತ್ ಏಕೆ ತಡೆಯಲಿಲ್ಲ ಎಂದು ರಜತ್ ಪ್ರಶ್ನಿಸಿದ್ದು, ಅವರ ಈ ಹೇಳಿಕೆಯಿಂದ ದಲಿತ ಸಮುದಾಯದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂದಿದ್ದಾರೆ. ಅಲ್ಲದೇ ಯುವಿ ಮಾತನಾಡಿದ್ದ ವಿಡಿಯೋ ಸಂಬಂಧಿತ ದಾಖಲೆಗಳನ್ನು ಪೊಲೀಸರಿಗೆ ದೂರಿನೊಂದಿಗೆ ಸಲ್ಲಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಹನ್ಸಿ ಎಸ್‍ಪಿ ಲೋಕೇಂದ್ರ ಸಿಂಗ್, ಈ ಕುರಿತ ವಿಚಾರಣೆಗೆ ಸಂಬಂಧಿಸಿದ ಮಾಹಿತಿಯನ್ನು ಡಿಜಿಪಿಐ ಅವರಿಗೆ ನೀಡಲಾಗಿದೆ. ಯುವಿ ತಪ್ಪು ಮಾಡಿರುವುದು ಸ್ಪಷ್ಟವಾದರೆ ಕಾನೂನಿನ ಅನ್ವಯ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.