Tag: ಯುಕೆ

  • ಮಂಕಿಪಾಕ್ಸ್ ತಡೆಯಬೇಕಾದ್ರೆ ಸೆಕ್ಸ್ ಮಾಡೋದು ನಿಲ್ಲಿಸಿ, ಇಲ್ಲವೇ 8 ವಾರ ಕಾಂಡೋಮ್ ಬಳಸಿ – UK

    ಮಂಕಿಪಾಕ್ಸ್ ತಡೆಯಬೇಕಾದ್ರೆ ಸೆಕ್ಸ್ ಮಾಡೋದು ನಿಲ್ಲಿಸಿ, ಇಲ್ಲವೇ 8 ವಾರ ಕಾಂಡೋಮ್ ಬಳಸಿ – UK

    ಲಂಡನ್: ಮಂಕಿಪಾಕ್ಸ್ ರೋಗ ನಿಯಂತ್ರಣ ಮಾಡಬೇಕಾದರೆ ಸೋಂಕಿನ ಲಕ್ಷಣ ಇರುವವರೊಂದಿಗೆ ಸೆಕ್ಸ್ ಮಾಡುವುದನ್ನು ನಿಲ್ಲಿಸಬೇಕು, ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ 8 ವಾರಗಳ ಕಾಲ ಕಾಂಡೋಮ್ ಬಳಸಬೇಕು ಎಂದು ಇಂಗ್ಲೆಂಡ್‌ನ ಆರೋಗ್ಯ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

    ಇಂಗ್ಲೆಂಡ್ ಕಳದೆ ಒಂದೇ ವಾರದಲ್ಲಿ 71 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ವಿಶ್ವದಾದ್ಯಂತ ಒಟ್ಟು 55 ಪ್ರಕರಣಗಳಿರುವುದು ಕಂಡುಬಂದಿದೆ. ಇದರಿಂದ ಸ್ಕಾಟ್‌ಲ್ಯಾಂಡ್, ಉತ್ತರ ಐರ್ಲೆಂಡ್ ಮತ್ತು ವೆಲ್ಸ್ ಗಳ ಆರೋಗ್ಯ ಪ್ರಾಧಿಕಾರಗಳೊಂದಿಗೆ ಯುಕೆ ಆರೋಗ್ಯ ಸುರಕ್ಷತಾ ಏಜೆನ್ಸಿ ಚರ್ಚಿಸಿದ್ದು, ರೋಗ ನಿಯಂತ್ರಣ ತಡೆಗೆ ಹೊಸ ಮಾರ್ಗಸೂಚಿಯನ್ನೂ ಹೊರಡಿಸಿದೆ.

    ಮಂಕಿಪಾಕ್ಸ್ ಸೋಂಕಿತರು ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ಸಹ ನಿಲ್ಲಿಸುವಂತೆ ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಜನರ ಮುಂದೆಯೇ ಬೆತ್ತಲೆ ಫೋಟೋ ಶೂಟ್ : ನಟಿ ಪೂನಂ ಪಾಂಡೆಗೆ ಸಂಕಷ್ಟ

    ಮಂಕಿಪಾಕ್ಸ್ ಸಾಮಾನ್ಯವಾಗಿ ಜನರ ನಡುವೆ ಸುಲಭವಾಗಿ ಹರಡುವುದಿಲ್ಲ ಎಂಬುದರ ಬಗ್ಗೆ ಜನರಿಗೆ ಭರವಸೆ ನೀಡುತ್ತೇವೆ. ಒಟ್ಟಾರೆ ಸಾಮಾನ್ಯ ಜನರಿಗೆ ತೊಂದರೆ ಕಡಿಮೆಯಾಗಿದೆ ಎಂದು ವೆಲ್ಸ್ ನ ಹೆಲ್ತ್ ಪ್ರೊಟೆಕ್ಷನ್ ಫಾರ್ ಪಬ್ಲಿಕ್ ಹೆಲ್ತ್ ವಿಭಾಗದ ನಿರ್ದೇಶಕ ಅನಿವಾಸಿ ಭಾರತೀಯ ಡಾ.ಗಿರಿ ಶಂಕರ್ ಹೇಳಿದ್ದಾರೆ.

    ಈ ಮಾರ್ಗಸೂಚಿ ಅಭಿವೃದ್ಧಿಗೆ ಸ್ಕಾಟ್‌ಲ್ಯಾಂಡ್, ಉತ್ತರ ಐರ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಏಜೆನ್ಸಿ ಹಾಗೂ ಯುಕೆ ಹೆಲ್ತ್ ಸುರಕ್ಷತಾ ಏಜೆನ್ಸಿಯೊಂದಿಗೆ ಕಾರ್ಯೋನ್ಮುಖರಾಗಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

    ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ಮಂಕಿಪಾಕ್ಸ್ ಪ್ರಕರಣವೂ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಿದೆ. ಕೋವಿಡ್-19 ಹಾಗೂ ಎಬೋಲಾ ವೈರಸ್ ಹರಡಿದ ಸಂದರ್ಭದಲ್ಲೂ ಇಂತಹ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಹೇಳಿದೆ.

    MONKEY

    ಮಾರ್ಗಸೂಚಿಯಲ್ಲಿ ಏನಿದೆ?

    • ಮಂಕಿಪಾಕ್ಸ್ ದೃಢಪಟ್ಟ ಜನರು 21 ದಿನಗಳ ಕಾಲ ಮನೆಯಲ್ಲಿಯೇ ಐಸೋಲೆಟೆಡ್ ಆಗಬೇಕು.
    • ತಮ್ಮ ದೇಹದ ಯಾವುದೇ ಭಾಗದಲ್ಲಾದರೂ ಗಾಯ ಅಥವಾ ಗಾಯದ ಕಲೆಗಳು ಕಾಣಿಸಿಕೊಂಡರೆ ಕೂಡಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು.
    • ಸೆಕ್ಸ್ ಮೂಲಕವೂ ಮಂಕಿಪಾಕ್ಸ್ ಹರಡುವ ಬಗ್ಗೆ ಪುರಾವೆಗಳು ದೂರೆತಿರುವುದರಿಂದ ಆದಷ್ಟು ಅದನ್ನು ತಡೆಯಬೇಕು.
    • ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ 8 ವಾರಗಳ ಕಾಲ ಕಾಂಡೋಮ್ ಬಳಸಬೇಕು.

  • ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

    ಮಾಸ್ಕೋ: ಕಳೆದ 2 ತಿಂಗಳಿಗೂ ಅಧಿಕ ಸಮಯದಿಂದ ಉಕ್ರೇನ್ ವಿರುದ್ಧ ಯುದ್ಧ ಸಾರಿಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಮತ್ತೊಂದು ಆತಂಕ ಶುರುವಾಗಿದೆ. ಈಗಾಗಲೇ ಕ್ಯಾನ್ಸರ್ ಕಾಯಿಲೆಯಿಂದ ನಿರಂತರ ಆರೋಗ್ಯ ಸಮಸ್ಯೆಯಲ್ಲಿರುವ ಪುಟಿನ್‌ಗೆ ಡೆಡ್‌ಲೈನ್ ಫಿಕ್ಸ್ ಆಗಿದೆ.

    ಏಕೆಂದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಿರಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಹೇಳಿದೆ.

    69 ವರ್ಷದ ರಷ್ಯಾದ ಅಧ್ಯಕ್ಷ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿವೆ.

    ಗುಪ್ತಚರ ಸಂಸ್ಥೆಯ ವರದಿಯನ್ನು ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ. ತನ್ನ ಕೆಳಗೆ ಕೆಲಸ ಮಾಡುವವರ ವಿರುದ್ಧ ಅವರು ಇತ್ತೀಚೆಗೆ ಅನಿಯಂತ್ರಿತ ಕೋಪದಿಂದ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪುಟಿನ್ ಇದೇ ತಿಂಗಳಲ್ಲಿ ಕ್ಯಾನ್ಸರ್ ಸರ್ಜರಿಗೆ ಒಳಗಾಗಿದ್ದರು. ವೈದರ ಸಲಹೆ, ಚಿಕಿತ್ಸೆಯಿಂದ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ರಷ್ಯಾದ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.

  • ಮೊದಲ ಮಹಾಯುದ್ಧದಲ್ಲಿ ತಯಾರಿಸಿದ್ದ ಸಜೀವ ಬಾಂಬ್ ಪತ್ತೆ – ಮುಂದೇನಾಯ್ತು?

    ಮೊದಲ ಮಹಾಯುದ್ಧದಲ್ಲಿ ತಯಾರಿಸಿದ್ದ ಸಜೀವ ಬಾಂಬ್ ಪತ್ತೆ – ಮುಂದೇನಾಯ್ತು?

    ಲಂಡನ್: ಮೊದಲ ಮಹಾಯುದ್ಧದ ವೇಳೆ ತಯಾರಿಸಿದ್ದ ಮಿಲ್ಸ್ ಗ್ರೆನೇಡ್ ಸಜೀವ ಬಾಂಬ್ ಅನ್ನು ಯುಕೆಯ ಉತ್ತರ ಐರ್ಲೆಂಡ್ ಕಡಲತೀರದಲ್ಲಿ ಚಿಕ್ಕ ಹುಡುಗನೊಬ್ಬ ಪತ್ತೆ ಮಾಡಿದ್ದಾನೆ.

    ಕಲ್ಟ್ರಾ ಬೀಚ್ ಬಳಿ ಬಾಂಬ್ ಪತ್ತೆಯಾದ ಬಳಿಕ ಹುಡುಗ ಉತ್ತರ ಐರ್ಲೆಂಡ್‌ನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸೇನೆಯ ತಾಂತ್ರಿಕ ಅಧಿಕಾರಿಯೊಬ್ಬರು ಇದು ಸಜೀವ WW-1 `ಮಿಲ್ಸ್ ಬಾಂಬ್’ ಹ್ಯಾಂಡ್ ಗ್ರೆನೇಡ್ (ಕೈಯಲ್ಲಿ ಹಿಡಿದು ಎಸೆಯುವ ಬಾಂಬ್) ಎಂದು ದೃಢಪಡಿಸಿದರು.

    ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಹುಡುಗನ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಇದು ಮೊದಲ ಮಹಾಯುದ್ಧದಲ್ಲಿ ಬಳಸಲಾಗಿದ್ದ ಹ್ಯಾಂಡ್ ಗ್ರೆನೇಡ್ ಎಂದು ತಿಳಿಯಿತು. ಬಳಿಕ ಬಾಂಬ್ ಅನ್ನು ಕ್ರಾಫೋರ್ಡ್ಸ್ ಬರ್ನ್ ಕಂಟ್ರಿ ಪಾರ್ಕ್‌ಗೆ ಕೊಂಡೊಯ್ದು ಸ್ಫೋಟಿಸಲಾಯಿತು ಎಂದು ಹೇಳಿದರು. ಬಾಂಬ್ ಬಗ್ಗೆ ಸುಳಿವುಕೊಟ್ಟ ಯುವಕನಿಗೆ ಅಭಿನಂದನೆ ಸಲ್ಲಿಸಿದರು.

    ಮಿಲ್ಸ್ ಬಾಂಬ್ ಗ್ರೆನೇಡ್ ಅನ್ನು 1915 ರಲ್ಲಿ ಅಭಿವೃದ್ಧಿಪಡಿಸಿದಾಗ ಬ್ರಿಟನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿತು. 2019 ರಲ್ಲಿಯೂ 7 ಅಡಿ ಅಷ್ಟು ಎತ್ತರದ ಎಲ್‌ಆಫ್‌ವೈಟ್ ಜರ್ಮನ್ ಸ್ಫೋಟಕ ಕರಾವಳಿಯ ಮೀನುಗಾರಿಕಾ ಪ್ರದೇಶದಲ್ಲಿ ಪತ್ತೆಯಾಗಿತ್ತು. ಅನಂತರ 2020ರಲ್ಲಿ ಡಬ್ಲ್ಯೂಡಬ್ಲ್ಯೂ-2 ಲಂಡನ್‌ನ ಸೊಹೊದ ಭಾಗದಲ್ಲಿ ಪತ್ತೆಯಾಗಿತ್ತು.

  • ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ

    ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ

    ಲಂಡನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಅಥವಾ ಕ್ಯಾನ್ಸರ್‌ಗೆ ನೀಡುವ ಸ್ಟೀರಾಯ್ಡ್ ಚಿಕಿತ್ಸೆಯಿಂದ ಉಂಟಾಗುವ `ರಾಯ್ಡ್ ರೇಜ್’ನಿಂದ ಮೆದುಳಿನ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

    ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಯುಕೆ ಮತ್ತು ಯುಎಸ್ ಅನ್ನು ಒಳಗೊಂಡಿರುವ ಐದು ದೇಶಗಳ ಗುಪ್ತಚರ ಒಕ್ಕೂಟ ರಷ್ಯಾದ ಮೂಲಗಳನ್ನು ಆಧರಿಸಿ ಡೈಲಿ ಮೇಲ್ ವರದಿ ಪ್ರಕಟಿಸಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ಪುಟಿನ್ ಅವರ ಇತ್ತೀಚಿನ ಭಾವಚಿತ್ರಗಳ ದೃಶ್ಯಗಳನ್ನು ಗಮನಿಸಿದರೆ ಅವರ ಕಣ್ಣು ಉಬ್ಬಿರುವುದನ್ನು ಕಾಣಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸಿಗಿಂತ ಪ್ರಾಕ್ಟಿಕಲ್ ಕ್ಲಾಸ್‍ಗಳು ಮುಖ್ಯವಾಗಿರುತ್ತದೆ: ವಿದ್ಯಾರ್ಥಿಗಳು

    ಕಳೆದ ಐದು ವರ್ಷಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಪುಟಿನ್ ಅವರು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರಗಳಿಂದ ಅವರ ನಡತೆಯೂ ಬದಲಾಗಿದೆ ಎಂದು ಹೇಳಿದೆ.

  • 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    ಲಂಡನ್: ಇಂಗ್ಲೆಂಡ್ ಸಂಶೋಧಕರು 180 ಮಿಲಿಯನ್ ವರ್ಷಗಳಷ್ಟು ಹಳೆಯದಾದ ‘ಸೀ ಡ್ರ್ಯಾಗನ್’ ಪಳೆಯುಳಿಕೆಯನ್ನು ಕಂಡುಹಿಡಿದಿದ್ದಾರೆ.

    ಯುಕೆ ಸಂಶೋಧಕರು ಇಚ್ಥಿಯೋಸಾರ್‍ನ ಬೃಹತ್ ಪಳೆಯುಳಿಕೆ ಅವಶೇಷವನ್ನು ಕಂಡುಹಿಡಿದಿದ್ದಾರೆ. ಇದನ್ನು ಆಡುಮಾತಿನಲ್ಲಿ ‘ಸಮುದ್ರ(ಸೀ) ಡ್ರ್ಯಾಗನ್’ ಎಂದು ಕರೆಯಲಾಗುತ್ತದೆ. ಈ ಪಳೆಯುಳಿಕೆಯು ಅತ್ಯಂತ ದೊಡ್ಡದಾಗಿದ್ದು, ಇದರ ದೇಹವು ಸಂಪೂರ್ಣ ಅಸ್ಥಿಪಂಜರವಾಗಿರುವುದರಿಂದ ಸಂಶೋಧಕರು ಇದನ್ನು ಈ ಪ್ರದೇಶದಲ್ಲಿನ ಅತ್ಯಂತ ಮಹತ್ವದ ಸಂಶೋಧನೆಯಲ್ಲಿ ಒಂದಾಗಿದೆ ಎಂದು ವಿವರಿಸುತ್ತಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ಇಚ್ಥಿಯೋಸಾರ್‍ಗಳ ದೇಹದ ಆಕಾರ ಡಾಲ್ಫಿನ್‍ಗಳನ್ನು ಹೋಲುತ್ತವೆ. ಈ ತಳಿಯು 250 ದಶಲಕ್ಷ ವರ್ಷಗಳ ಹಿಂದೆ ಮೊದಲು ಕಾಣಿಸಿಕೊಂಡಿದ್ದು, ನಂತರ ಸುಮಾರು 90 ದಶಲಕ್ಷ ವರ್ಷಗಳ ಹಿಂದೆಯೇ ಅಳಿದುಹೋದವು ಎಂದು ಸಂಶೋಧಕರು ವಿವರಿಸಿದ್ದಾರೆ.

    ಲೀಸೆಸ್ಟರ್‌ಶೈರ್ ಮತ್ತು ರಟ್‌ಲ್ಯಾಂಡ್ ವೈಲ್ಡ್ ಲೈಫ್ ಟ್ರಸ್ಟ್ ನ ಸಂರಕ್ಷಣಾ ತಂಡದ ನಾಯಕ ಜೋ ಡೇವಿಸ್, ಮಾಲೀಕ ಆಂಗ್ಲಿಯನ್ ವಾಟರ್ ಸಹಭಾಗಿತ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ. ರಟ್ಲ್ಯಾಂಡ್ ಕೌಂಟಿಯ ಜಲಾಶಯದಲ್ಲಿ ಸುಮಾರು 10 ಮೀಟರ್ ಉದ್ದದ ಅಸ್ಥಿಪಂಜರ ಪತ್ತೆಯಾಗಿದೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್ 

    ತಮ್ಮ ಸಂಶೋಧನೆ ಕುರಿತು ಮಾತನಾಡಿದ ಡೇವಿಸ್, ಈ ಸಂಶೋಧನೆಯು ನನ್ನ ವೃತ್ತಿಜೀವನದ ಪ್ರಮುಖ ಅಂಶವಾಗಿದೆ. ಈ ಜೀವಿ ಸಮುದ್ರದಲ್ಲಿ ಈಜಿದೆ ಎಂದು ಯೋಚಿಸಿದರೆ ರೋಮಾಂಚನವಾಗುತ್ತೆ. ಇದು ಅಸಾಧಾರಣವಾದ ದೇಹದ ಗಾತ್ರವನ್ನು ಹೊಂದಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  • ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ

    ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ

    ಬ್ರಿಟನ್: ಅಮೆರಿಕದ ಮೆರ್ಕ್ಸ್‌ ಮತ್ತು ರಿಡ್ಜ್‌ಬ್ಯಾಕ್‌ ಬಯೋಥೆರಪಿಟಿಕ್ಸ್‌ ಅಭಿವೃದ್ಧಿಪಡಿಸಿರುವ ಕೋವಿಡ್‌-19 ಆ್ಯಂಟಿವೈರಲ್‌ ಮಾತ್ರೆಗೆ ಬ್ರಿಟನ್‌ ಅನುಮೋದನೆ ನೀಡಿದೆ. ವಿಶ್ವದಲ್ಲೇ ಕೋವಿಡ್‌ ಮಾತ್ರೆಗೆ ಅನುಮೋದನೆ ನೀಡಿದ ಮೊದಲ ದೇಶ ಇದಾಗಿದೆ.

    ಮೊಲ್ನುಪಿರವಿರ್‌ (molnupiravir) ಎಂಬ ಔಷಧಿಯನ್ನು ಕೋವಿಡ್‌-19 ಪಾಸಿಟಿವ್‌ ದೃಢಪಟ್ಟ ನಂತರ ಸಾಧ್ಯವಾದಷ್ಟು ಬೇಗ ಅಥವಾ ರೋಗಲಕ್ಷಣಗಳು ಆರಂಭವಾದ ಐದು ದಿನಗಳ ಒಳಗೆ ವೈದ್ಯಕೀಯ ದತ್ತಾಂಶ ಆಧರಿಸಿ ಬಳಸಬಹುದು ಎಂದು ಉಲ್ಲೇಖಿಸಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಬಿಹಾರ್‌: ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!

    ವಿಶ್ವಾದ್ಯಂತ 5.2 ಮಿಲಿಯನ್‌ಗಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೋವಿಡ್‌ ಸಾಂಕ್ರಾಮಿಕ ನಿಯಂತ್ರಣ ಚಿಕಿತ್ಸೆಯು ಮುಖ್ಯವಾಗಿ ಲಸಿಕೆಗಳ ಮೇಲಷ್ಟೇ ಕೇಂದ್ರೀಕೃತವಾಗಿತ್ತು. ರೆಮ್‌ಡಿಸಿವಿರ್‌, ಜೆನೆರಿಕ್‌ ಸ್ಟಿರಾಯಿಡ್‌ ಅನ್ನು ರೋಗಿ ಆಸ್ಪತ್ರೆಗೆ ಸೇರಿದ ನಂತರ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕೋವಿಡ್‌ ವಿರುದ್ಧ ಹೋರಾಟಕ್ಕೆ ಮಾತ್ರೆ ಬಳಕೆಗೆ ವೇದಿಕೆ ಸಜ್ಜಾಗಿದೆ. ಇದನ್ನೂ ಓದಿ: ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    COVID

    ರೋಗಿಗಳಿಗೆ ಮೊಲ್ನುಪಿರಾವಿರ್‌ ಅನ್ನು ಒದಗಿಸಲು ಪೂರಕ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಮತ್ತು ಎನ್‌ಎಚ್‌ಎಸ್‌ನೊಂದಿಗೆ ತ್ವರಿತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಆರೋಗ್ಯ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ತಿಳಿಸಿದ್ದಾರೆ.

  • ಯುಕೆ ಮಾರ್ಗಸೂಚಿ ಬದಲಾವಣೆ – ಅ.11ರಿಂದ ಲಸಿಕೆ ಪಡೆದ ಭಾರತೀಯರಿಗಿಲ್ಲ ಕ್ವಾರಂಟೈನ್

    ಯುಕೆ ಮಾರ್ಗಸೂಚಿ ಬದಲಾವಣೆ – ಅ.11ರಿಂದ ಲಸಿಕೆ ಪಡೆದ ಭಾರತೀಯರಿಗಿಲ್ಲ ಕ್ವಾರಂಟೈನ್

    ಲಂಡನ್: ಭಾರತದಿಂದ ಬ್ರಿಟನ್‍ಗೆ ಹೋಗುವ ಆಗಮಿಸುವ ನಾಗರಿಕರು ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಲಸಿಕೆ ಪಡೆದುಕೊಂಡಿದ್ದರೆ ಅಕ್ಟೋಬರ್ 11ರಿಂದ ಅವರನ್ನು ನಿರ್ಬಂಧಿಸಲಾಗುವುದಿಲ್ಲ ಎಂದು ಎಂದು ಬ್ರಿಟಿಷ್ ಹೈ ಕಮೀಷನರ್ ಅಲೆಕ್ಸ್ ಎಲ್ಲಿಸ್ ತಿಳಿಸಿದ್ದಾರೆ.

    ಇಷ್ಟು ದಿನ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರು ಬ್ರಿಟನ್‌ಗೆ ಹೋದಾಗ ೧೦ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಸೂಚಿಸಲಾಗಿತ್ತು. ಹೀಗಾಗಿ ರೊಚ್ಚಿಗೆದ್ದ ಭಾರತ ಬ್ರಿಟನ್ ಪ್ರಜೆಗಳಿಗೂ ಇದೇ ರೀತಿಯ ನಿರ್ಬಂಧ ಹೇರಿದ್ದರಿಂದ ಬೆದರಿದ ಬ್ರಿಟನ್ ಇದೀಗ ಈ ನಿಯಮಗಳನ್ನು ಹಿಂತೆಗೆದುಕೊಂಡಿದೆ. ಇದನ್ನೂ ಓದಿ: ಸಿಮ್ ಕಾರ್ಡ್‍ನಲ್ಲಿ ಸೋನು ಸೂದ್ – ಅಭಿಮಾನಿ ಪ್ರೀತಿಗೆ ರಿಯಲ್ ಹೀರೋ ಹೇಳಿದ್ದೇನು ಗೊತ್ತಾ?

    passengers

    ಈ ಕುರಿತಂತೆ ಬ್ರಿಟಿಷ್ ಹೈ ಕಮೀಷನರ್ ಅಲೆಕ್ಸ್ ಎಲ್ಲಿಸ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ  ಮಾಹಿತಿ ನೀಡಿದ್ದು, ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಸಂಪೂರ್ಣ ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಅಕ್ಟೋಬರ್ 11ರಿಂದ ನಿರ್ಬಂಧಿಸಲಾಗುವುದಿಲ್ಲ. ಕಳೆದ ತಿಂಗಳು ನಿಕಟ ಸಹಕಾರಕ್ಕಾಗಿ ಭಾರತೀಯ ಸರ್ಕಾರಕ್ಕೆ ಧನ್ಯವಾಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಶಬರಿಮಲೆ ಪ್ರತಿದಿನ 25 ಸಾವಿರ ಭಕ್ತರ ದರ್ಶನಕ್ಕೆ ಅವಕಾಶ

    ಅಕ್ಟೋಬರ್ 11ಕ್ಕಿಂತ ಮುನ್ನ ಯುಕೆಗೆ ಆಗಮಿಸುವ ಸಂಪೂರ್ಣ ಲಸಿಕೆ ಹಾಕಿಸಿಕೊಳ್ಳದ ಪ್ರಯಾಣಿಕರು ಇರುವ ನಿಯಮವನ್ನು ಪಾಲಿಸಬೇಕಾಗುತ್ತದೆ. ಆದರೆ ಕ್ಟೋಬರ್ 11ರ ಬಳಿಕ ಆಗಮಿಸುವವರು ಸಂಪೂರ್ಣ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದು. ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಚಿವಾಲಯಗಳ ನಡುವಿನ ನಿಕಟ ತಾಂತ್ರಿಕ ಸಹಕಾರದ ನಂತರ ಈ ನಿರ್ಧಾರವಮನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

  • ಜನವರಿ 7ರವರೆಗೆ ಬ್ರಿಟನ್ ವಿಮಾನ ಸಂಚಾರ ರದ್ದು

    ಜನವರಿ 7ರವರೆಗೆ ಬ್ರಿಟನ್ ವಿಮಾನ ಸಂಚಾರ ರದ್ದು

    ನವದೆಹಲಿ: ಕೊರೊನಾ ರೂಪಾಂತರಿ ವೈರಸ್ ಹಿನ್ನೆಲೆ ಇಂಗ್ಲೆಂಡ್ ನಿಂದ ಆಗಮಿಸುವ ಎಲ್ಲ ವಿಮಾನ ಸೇವೆಯ ಜನವರಿ 7, 2021ರವರೆಗೆ ರದ್ದು ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‍ದೀಪ್ ಸಿಂಗ್ ಹೇಳಿದ್ದಾರೆ. ಈ ಮೊದಲು ಡಿಸೆಂಬರ್ 31ರವರೆಗೆ ವಿಮಾನ ಹಾರಾಟ ಬಂದು ಮಾಡಲಾಗಿತ್ತು. ಇದೀಗ ಆದೇಶವನ್ನ ಜನವರಿ 7ರವರೆಗೆ ವಿಸ್ತರಿಸಲಾಗಿದೆ.

    ದೇಶದಲ್ಲಿ ಕೊರೊನಾ ರೂಪಾಂತರಿ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮಂಗಳವಾರ ಏಳು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತೆ 13 ಜನರಲ್ಲಿ ಹೊಸ ಸೋಂಕು ತಗುಲಿರೋದು ದೃಢವಾಗಿದೆ. ಉತ್ತರ ಪ್ರದೇಶ 1, ತೆಲಂಗಾಣ 2, ಕರ್ನಾಟಕ 7, ದೆಹಲಿ 9 ಮತ್ತು ಪಶ್ಚಿಮ ಬಂಗಾಳದ ಓರ್ವರಲ್ಲಿ ಬ್ರಿಟನ್ ವೈರಸ್ ಕಂಡು ಬಂದಿದೆ.

    ನವೆಂಬರ್ 22ರಿಂದ ಡಿಸೆಂಬರ್ 22ರೊಳಗೆ ಸುಮಾರು 33 ಸಾವಿರ ಪ್ರಯಾಣಿಕರು ಭಾರತಕ್ಕೆ ಬಂದಿದ್ದಾರೆ. ಈ ಪ್ರಯಾಣಿಕರಲ್ಲಿ 114 ಜನರಿಗೆ ಕೊರೊನಾ ಸೋಂಕು ತಗುಲಿದೆ. ಎಲ್ಲರ ಸ್ಯಾಂಪಲ್ ಗಳನ್ನ ಜೀನೊಮ್ ಸೀಕ್ವೆನ್ಸ್ ಗೆ ರವಾನಿಸಲಾಗಿದೆ. ಪಾಸಿಟಿವ್ ಬಂದಿರೋ ಸೋಂಕಿತರು ಮತ್ತು ಅವರ ಸಂಪರ್ಕಿತರನ್ನ ಕ್ವಾರಂಟೈನ್ ಮಾಡಲಾಗಿದೆ.

  • ಯುಕೆಯಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಸೋಂಕು

    ಯುಕೆಯಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಸೋಂಕು

    ಬೆಂಗಳೂರು: ಯುಕೆಯಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರದ ಕುರಿತು ಭಯ ಶುರುವಾಗಿರುವಾಗಲೇ ಇಂಗ್ಲೆಂಡ್‍ನಿಂದ ಮರಳಿರುವ ಪ್ರಯಾಣಿಕರ ಪೈಕಿ ಮೂವರಲ್ಲಿ ಸೋಂಕು ಪತ್ತೆಯಾಗಿದೆ.

    ಯುಕೆಯಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 3 ಜನ ಸಹ ಮೂರು ವಲಯದವರಾಗಿದ್ದು, ಮಹಾದೇವಪುರ, ಬಿಬಿಎಂಪಿ ಪೂರ್ವ ವಲಯ ಹಾಗೂ ರಾಜರಾಜೇಶ್ವರಿ ನಗರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಮಹದೇವಪುರದ 40 ವರ್ಷದ ವ್ಯಕ್ತಿ 5 ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಪೂರ್ವ ವಲಯದವರು ಸಹ ಐದು ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇನ್ನು ಬೆಂಗಳೂರು ಪಶ್ಚಿಮ ವಲಯದಲ್ಲಿ ಸಹ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ನಾಳೆ ಇವರ ಸ್ವಾಬ್ ನ್ನು ಜೆನೆಟಿಕ್ ಸೀಕ್ವೆನ್ಸ್ ಟೆಸ್ಟ್ ಗೆ ರವಾನೆ ಮಾಡಲಾಗುತ್ತದೆ.

    ಡಿಸೆಂಬರ್ 1ರಿಂದ ಡಿಸೆಂಬರ್ 21 ರವರೆಗೆ ಯುಕೆಯಿಂದ ಬೆಂಗಳೂರಿಗೆ ಬಂದವರ ಸಂಖ್ಯೆ 1,768 ಇದ್ದು. 1,489 ಜನ ಕೊರೊನಾ ಪರೀಕ್ಷೆ ಮಾಡಿಸಲು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇದರಲ್ಲಿ 902 ಜನರ ಕೋವಿಡ್ ಟೆಸ್ಟ್ ಆಗಿದೆ. ಇನ್ನು 587 ಜನರನ್ನು ಟೆಸ್ಟ್ ಗೆ ಒಳಪಡಿಸಬೇಕಿದೆ. 902 ರಲ್ಲಿ ಒಟ್ಟು 590 ಜನರ ಪರೀಕ್ಷಾ ವರದಿ ಲಭ್ಯವಾಗಿದೆ. 576 ಜನರಿಗೆ ನೆಗೆಟಿವ್, 14 ಜನರಿಗೆ ಪಾಸಿಟಿವ್ ಬಂದಿದೆ. ಪರಿಕ್ಷೆಗೆ ಒಳಪಟ್ಟು ಫಲಿತಾಂಶ ಬಾಕಿ ಇರುವವರ ಸಂಖ್ಯೆ 312 ಇದೆ.

    ಬೆಂಗಳೂರಿನ ಒಟ್ಟು 14 ಜನ ಯುಕೆ ಯಿಂದ ವಾಪಸ್ ಆದವರಿಗೆ ಸೋಂಕು ತಗುಲಿದ್ದು, 220 ಜನ ಸಂಪರ್ಕಕ್ಕೆ ಸಿಗದೆ ನಾಪತ್ತೆ ಆಗಿದ್ದಾರೆ. 14 ಜನರಿಗೆ ಪಾಸಿಟಿವ್ ಬಂದಿರುವುದು ಒಂದೆಡೆಯಾದರೆ, ಇನ್ನೂ 220 ಜನ ಸಂಪರ್ಕಕ್ಕೆ ಸಿಗದಿರುವುದು ಆತಂಕಕ್ಕೀಡು ಮಾಡಿದೆ.

  • ವಿಜಯನಗರ ಕಾಲದ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಿದ ಬ್ರಿಟನ್

    ವಿಜಯನಗರ ಕಾಲದ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಿದ ಬ್ರಿಟನ್

    ನವದೆಹಲಿ: 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದು ಎನ್ನಲಾದ ರಾಮ, ಸೀತಾ, ಲಕ್ಷ್ಮಣ ವಿಗ್ರಹಗಳನ್ನು ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಹಿಂದಿರುಗಿಸಿದ್ದಾರೆ. ಈ ವಿಗ್ರಹಗಳು ತಮಿಳುನಾಡಿನ ದೇವಸ್ಥಾನದಲ್ಲಿ ಕಳವು ಮಾಡಿ ಬ್ರಿಟನ್‍ಗೆ ರವಾನಿಸಲಾಗಿತ್ತು ಎನ್ನಲಾಗಿದೆ.

    ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಯುನೈಟೆಡ್ ಕಿಂಗ್‍ಡಮ್ ಅಧಿಕಾರಿಗಳು ವಿಗ್ರಹಗಳನ್ನು ಹಿಂದಿರುಗಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ವಿಗ್ರಹಗಳು ಭಾರತಕ್ಕೆ ಸೇರಿದ್ದು, 1978ರಲ್ಲಿ ತಮಿಳುನಾಡಿನ ದೇವಾಲಯವೊಂದರಿಂದ ಕಳವು ಮಾಡಲಾಗಿತ್ತು. ಈ ವಿಗ್ರಹಗಳು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದಿಂದ ಬಂದಿದೆ. ಇತ್ತೀಚಿಗೆ ಯುಕೆ ಅಧಿಕಾರಿಗಳು ಇದೇ ರೀತಿಯ ಎರಡು ವಿಗ್ರಹಗಳು ಮತ್ತು ಒಂದು ಸ್ತಂಭವನ್ನು ಹಸ್ತಾಂತರಿಸಿದ್ದರು ಎಂದು ಪಟೇಲ್ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಗ್ರಹಗಳನ್ನು ಹಿಂದಿರುಗಿಸಿದ ಯುಕೆ ಸರ್ಕಾರ ಮತ್ತು ಲಂಡನ್‍ನ ಭಾರತೀಯ ಹೈಕಮಿಷನ್‍ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಈ ನಿಟ್ಟನಲ್ಲಿ ಮೋದಿ ಸರ್ಕಾರದ ಸಾಧನೆಗಳ ಕುರಿತು ಮಾಹಿತಿ ನೀಡಿದ ಸಚಿವರು, 2014 ರಿಂದ ಈವರೆಗೂ ಇಂತಹ 40ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಸರ್ಕಾರ ಸಂಗ್ರಹಿಸಿದೆ. ಸ್ವಾತಂತ್ರ್ಯ ನಂತರ 2013ರವರೆಗೂ ಕೇವಲ 13 ಪ್ರಾಚೀನ ವಸ್ತು ಮತ್ತು ಕಲಾಕೃತಿಗಳನ್ನು ಭಾರತ ಸರ್ಕಾರ ಮರಳಿ ತಂದಿತ್ತು ಎಂದು ಅವರು ವಿವರಿಸಿದರು.