Tag: ಯುಕೆ

  • ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು

    ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು

    ಲಂಡನ್: ಭಾರತ ಮೂಲದ ವಿದ್ಯಾರ್ಥಿಯೊಬ್ಬ (Indian Student) ಬ್ರಿಟನ್‌ನಲ್ಲಿ (Britain) ಕ್ಲಬ್ ಒಂದರಲ್ಲಿ ಭೇಟಿಯಾಗಿದ್ದ ಪಾನಮತ್ತ ಯುವತಿಯನ್ನು ತನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

    20 ವರ್ಷದ ಪ್ರೀತ್ ವಿಕಲ್ ಕಳೆದ ವರ್ಷ ಜೂನ್‌ನಲ್ಲಿ ಪಾನಮತ್ತಳಾಗಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಡಿಫ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಯುವತಿಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

    ಯುವತಿ ಪ್ರಜ್ಞಾ ಸ್ಥಿತಿಗೆ ಬಂದ ಬಳಿಕ ಆಕೆಗೆ ತನ್ನ ಮೇಲೆ ಅತ್ಯಾಚಾರವಾಗಿರುವುದು ತಿಳಿದುಬಂದಿದೆ. ಆಕೆ ಬಳಿಕ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾಳೆ. ಅದೇ ದಿನ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ಯುವತಿ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದ್ದಾಗಿ ತಿಳಿಸಿ, ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿದ್ದ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮರಕ್ಕೆ ಕಟ್ಟಿ ಹಾಕಿ ಮುಸ್ಲಿಂ ವ್ಯಕ್ತಿಗೆ ಥಳಿತ

    ವಿಕಲ್‌ನನ್ನು ಮೊದಲಿಗೆ ನಿರ್ದೋಷಿ ಎಂದು ಒಪ್ಪಿಕೊಳ್ಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಂತ್ರಸ್ತೆ ಸಮ್ಮತಿಸಲು ಸಾಧ್ಯವಾಗದಷ್ಟು ಕುಡಿದಿರುವುದು ಸ್ಪಷ್ಟವಾಗಿ ತೋರಿದೆ. ಕೊನೆಗೆ ವಿಕಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ವಿಕಲ್‌ಗೆ 6 ವರ್ಷ, 9 ತಿಂಗಳು ಶಿಕ್ಷೆ ವಿಧಿಸಲಾಗಿದೆ. ಮಾತ್ರವಲ್ಲದೇ ಕಾರ್ಡಿಫ್‌ನಲ್ಲಿ ಇಂತಹ ಅಪರಾಧಗಳು ಅಸಾಮಾನ್ಯ ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ವಿಕಲ್ ದೆಹಲಿಯ ಸಣ್ಣ ಹಳ್ಳಿಯವ ಹಾಗೂ ಬಡತನದ ಕುಟುಂಬದವನಾಗಿದ್ದಾನೆ. ಆತ ವಿದ್ಯಾರ್ಥಿ ವೇತನವನ್ನು ಪಡೆದು ಅಧ್ಯಯನವನ್ನು ಮುಂದುವರಿಸಲು ಬ್ರಿಟನ್‌ಗೆ ತೆರಳಿದ್ದ. ಆತ ತನ್ನ ಕುಟುಂಬದಲ್ಲಿ ಹಾಗೂ ತನ್ನ ಹಳ್ಳಿಯಲ್ಲಿಯೇ ಉನ್ನತ ವಿಶ್ವವಿದ್ಯಾಲಯ ಪ್ರವೇಶ ಮಾಡಿದವರಲ್ಲಿ ಮೊದಲಿಗನಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ತುಂಗಾನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಇಬ್ಬರು ಉಪನ್ಯಾಸಕರು

  • ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ

    ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ

    ಲಂಡನ್‌: ಸಾಮಾನ್ಯವಾಗಿ ಕಂಡ ಕಂಡಲ್ಲಿ ಉಗಿಯುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿರುತ್ತೆ. ಇದನ್ನ ನೋಡಿದ್ರೆ ಕೆಲವರಿಗೆ ಅಸಹ್ಯ ಎನಿಸಬಹುದು. ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ಎಂಜಲು ರಸವನ್ನೇ (ಲಾಲಾ ರಸ) ಮಾರಾಟ (Spit Selling) ಮಾಡಿ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ. ಅಸಾಧ್ಯವೆನಿಸಿದರೂ ನೀವು ಇದನ್ನ ನಂಬಲೇಬೇಕು.

    ಹೌದು.. ವೈದ್ಯೆ ಆಗಬೇಕೆಂದುಕೊಂಡಿದ್ದ UKನ ಮ್ಯಾಂಚೆಸ್ಟರ್‌ನ ನಿವಾಸಿ ಲತೀಶಾ ಜೋನ್ಸ್‌ (Latiesha Jones) ಇದೀಗ ತನ್ನ ಎಂಜಲು ರಸವನ್ನ ಮಾರಾಟ ಮಾಡಿ ತಿಂಗಳಿಗೆ 40 ಲಕ್ಷ ಸಂಪಾದಿಸುತ್ತಿದ್ದಾಳೆ. ಅದು ಹೇಗೆ ಅಂತೀರಾ ಮುಂದೆ ನೋಡಿ…

    ವೈದ್ಯೆ (Doctor) ಆಗಬೇಕೆಂದು ಬಯಸಿದ್ದ ಲತೀಶಾ ಜೋನ್ಸ್‌ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗ ಟೆಸ್ಕೊ ಎಂಬ ಕಿರಾಣಿ ಅಂಗಡಿಯಲ್ಲಿ ಪಾರ್ಟ್‌ಟೈಮ್‌ ಕೆಲಸಕ್ಕೆ ಹೋಗುತ್ತಿದ್ದಳು. ಅದೂ ಸಾಕಾಗದೇ ಇದ್ದಾಗ, ಆಕೆ ಜಾಲತಾಣದಲ್ಲಿ ಓನ್ಲಿ ಫ್ಯಾನ್ಸ್‌ ಖಾತೆಯೊಂದನ್ನ ತೆರೆದು ವೀಡಿಯೋ ಮಾಡಲು ಪ್ರಾರಂಭಿಸಿದ್ದಳು. ಆಗ ವೀಕ್ಷಕರು ಆಕೆಗೆ ವಿಚಿತ್ರವಾದ ಬೇಡಿಕೆಗಳನ್ನ ಮುಂದಿಟ್ಟರು. ಇದೇ ಅವಳನ್ನು ಉಗುಳು ಮಾರಾಟ ಮಾಡಲು ದಾರಿ ಮಾಡಿಕೊಟ್ಟಿತು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್‌, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?

    ಈ ಬಗ್ಗೆ ಇಂಟರೆಸ್ಟಿಂಗ್‌ ಸಂಗತಿಯೊಂದನ್ನ ಹೇಳಿಕೊಡಿರುವ ಲತೀಶಾ ಅದು ಹೇಗೆ ಪ್ರಾರಂಭವಾಯಿತು ಎಂಬುದನ್ನ ತಿಳಿಸಿದ್ದಾರೆ. ಒಮ್ಮೆ ಯಾರೋ ಒಬ್ಬರು ತನ್ನ ಉಗುಳನ್ನು ಕಳುಹಿಸಿಕೊಡುವಂತೆ ಕೇಳಿದ್ದರು. ತಕ್ಷಣಕ್ಕೆ ನಾನು ಇದು ಜೋಕ್‌ ಇರಬೇಕು ಅಂದುಕೊಂಡು 30 ಸಾವಿರ ರೂ. (372 ಡಾಲರ್‌) ಕಳುಹಿಸುವಂತೆ ಕೇಳಿದೆ. ನನ್ನ ಬ್ಯಾಂಕ್‌ ಡಿಟೇಲ್ಸ್‌ ಪಡೆದ ಆ ವ್ಯಕ್ತಿ ತಕ್ಷಣವೇ ಹಣ ಹಾಕಿಬಿಟ್ಟ. ನನಗೆ ಒಂದು ಕ್ಷಣ ನಂಬೋದಕ್ಕೆ ಸಾಧ್ಯವಾಲಿಲ್ಲ ಎಂದು ಲತೀಶಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ



    ಆ ನಂತರ ಅದೇ ವೃತ್ತಿಯನ್ನ ಲತೀಶಾ ಮುಂದುವರಿಸಿದ್ದಾಳೆ. ಕಳೆದ 4 ವರ್ಷಗಳಿಂದಲೂ ಎಂಜಲು ರಸ ಮಾರಾಟ ಮಾಡುತ್ತಿದ್ದು, ತನಗಿದ್ದ 9.10 ಲಕ್ಷ ರೂ. (11,000 ಸಾವಿರ ಡಾಲರ್‌) ಸಾಲವನ್ನೂ ಮರುಪಾವತಿ ಮಾಡಿದ್ದಾಳೆ. ಜೊತೆಗೆ ಪಾರ್ಟ್‌ಟೈಮ್‌ ಕೆಲಸವನ್ನೂ ತೊರೆದಿದ್ದಾಳೆ. ಅಂದು ಹಣವಿಲ್ಲದೇ ಪಾರ್ಟ್‌ಟೈಮ್‌ ಕೆಲಸ ಮಾಡುತ್ತಿದ್ದ ಈಕೆ ಎಂಜಲು ರಸ ಮಾರಾಟದಿಂದಲೇ ಆಸ್ತಿಯನ್ನೂ ಖರೀದಿ ಮಾಡಿದ್ದು, ಪೂರ್ಣ ಹಣವನ್ನೂ ನಗದು ರೂಪದಲ್ಲೇ ಪಾವತಿಸಿದ್ದಾಳೆ. ಲತೀಶಾ ತನ್ನ ಉಗುಳು ಮಾತ್ರವಲ್ಲ, ತನ್ನ ವಾರದ ಬೆಡ್‌ಶೀಟ್‌ಗಳು, ಬೆವರು ಒರೆಸಿದ ಜಿಮ್ ಬಟ್ಟೆಗಳು, ಕೊಳಕು ಟೂತ್ ಬ್ರಷ್‌ಗಳು ಮತ್ತು ಕಾಲ್ಬೆರಳ ಉಗುರುಗಳನ್ನೂ ಅಭಿಮಾನಿ ಗ್ರಾಹಕರಿಗೆ ಮಾರಾಟ ಮಾಡುತ್ತಾ, ಸಿಕ್ಕಾಪಟ್ಟೆ ಹಣ ಗಳಿಸುತ್ತಿದ್ದಾಳೆ.

    ಎರಡೇ ವರ್ಷದಲ್ಲಿ ವೈದ್ಯಕೀಯ ಶಿಕ್ಷಣ ತೊರೆದು ಈಗ ರಾಣಿಯಂತೆ ಮೆರೆಯುತ್ತಿದ್ದಾಳೆ. ಮೊದಲು ದಿನಕ್ಕೆ 30 ಸಾವಿರ ರೂ. ಪಡೆಯುತ್ತಿದ್ದ ಲತೀಶಾ ಈಗ ಒಂದು ಸಣ್ಣ ಬಾಟಲಿಯಷ್ಟು ಎಂಜಲು ರಸಕ್ಕೆ 1.50 ಲಕ್ಷ ರೂ.ಗಳಿಗಿಂತ ಕಡಿಮೆ ಮುಟ್ಟೋದೇ ಇಲ್ಲ ಅಂತಿದ್ದಾಳೆ. ಈಕೆಯ ಎಂಜಲು ರಸಕ್ಕೆ ಇಷ್ಟೊಂಡು ಡಿಮ್ಯಾಂಡ್‌ ಇದೆಯಾ ಅಂತಾ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

  • ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಲಂಡನ್: ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ ಸೇರಿದಂತೆ ಹಲವಾರು ಡೇಟಾ ರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಚೀನಾ (China) ಒಡೆತನದ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ಗೆ (TikTok) ಬ್ರಿಟನ್ (Britain) ಸುಮಾರು 16 ಮಿಲಿಯನ್ ಡಾಲರ್ (ಸುಮಾರು 130 ಕೋಟಿ ರೂ.) ದಂಡವನ್ನು ವಿಧಿಸಿದೆ.

    ವರದಿಗಳ ಪ್ರಕಾರ ಟಿಕ್‌ಟಾಕ್ ನಿಯಮಗಳನ್ನು ಉಲ್ಲಂಘಿಸಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 10 ಲಕ್ಷ ಮಕ್ಕಳಿಗೆ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಅವಕಾಶ ನೀಡಿದೆ.

    ಮಂಗಳವಾರ ಮಾಹಿತಿ ಆಯುಕ್ತರ ಕಚೇರಿ (ಐಸಿಒ), ಟಿಕ್‌ಟಾಕ್ ಯಾರು, ಯಾವ ವಯಸ್ಸಿನಲ್ಲಿ ತನ್ನ ಪ್ಲಾಟ್‌ಫಾರ್ಮ್ಅನ್ನು ಬಳಸುತ್ತಾರೆ ಎಂಬುದರ ಬಗ್ಗೆ ಸರಿಯಾಗಿ ಗಮನಹರಿಸಿಲ್ಲ. ಮಾತ್ರವಲ್ಲದೇ ಅಪ್ರಾಪ್ತ ಮಕ್ಕಳನ್ನು ನಿರ್ಬಂಧಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಅದು ವಿಫಲವಾಗಿದೆ. ಬಳಕೆದಾರರ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಹಾಗೂ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಒದಗಿಸಿಲ್ಲ. ಇದೀಗ ದಂಡವನ್ನು 2018ರ ಮೇ ಯಿಂದ 2020ರ ಜುಲೈ ನಡುವಿನ ನಿಯಮ ಉಲ್ಲಂಘನೆಗೆ ವಿಧಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ಮಕ್ಕಳು ಭೌತಿಕ ಜಗತ್ತಿನಲ್ಲಿರುವಂತೆಯೇ ಡಿಜಿಟಲ್ ಜಗತ್ತಿನಲ್ಲಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಾನೂನುಗಳಿವೆ. ಆದರೆ ಟಿಕ್‌ಟಾಕ್ ಆ ಕಾನೂನುಗಳಿಗೆ ಬದ್ಧವಾಗಿಲ್ಲ. ಟಿಕ್‌ಟಾಕ್ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ, ಉತ್ತಮವಾಗಿ ಕಾರ್ಯನಿರ್ವಹಿಸಬೇಕಿತ್ತು ಎಂದು ಬ್ರಿಟನ್‌ನ ಮಾಹಿತಿ ಆಯುಕ್ತ ಜಾನ್ ಎಡ್ವರ್ಡ್ಸ್ ಹೇಳಿದ್ದಾರೆ.

    ಈಗಾಗಲೇ ಟಿಕ್‌ಟಾಕ್ ಅನ್ನು ಭದ್ರತಾ ದೃಷ್ಟಿಯಿಂದ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಅವುಗಳಲ್ಲಿ ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್, ಬ್ರಿಟನ್, ಕೆನಡಾ, ನ್ಯೂಜಿಲೆಂಡ್ ದೇಶಗಳು ಸೇರಿವೆ. ಇದನ್ನೂ ಓದಿ: Twitter logo: ಟ್ವಿಟ್ಟರ್‌ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!

  • 14 ತಿಂಗಳಿಂದ ಮೂತ್ರ ಮಾಡದೇ ಒದ್ದಾಡಿದ ಮಹಿಳೆ – ಮುಂದೇನಾಯ್ತು ನೋಡಿ..

    14 ತಿಂಗಳಿಂದ ಮೂತ್ರ ಮಾಡದೇ ಒದ್ದಾಡಿದ ಮಹಿಳೆ – ಮುಂದೇನಾಯ್ತು ನೋಡಿ..

    – ಯುವತಿಯರಲ್ಲೇ ಹೆಚ್ಚಾಗಿ ಕಂಡುಬರುತ್ತಂತೆ ಈ ಕಾಯಿಲೆ

    ಲಂಡನ್‌: ಮೂತ್ರವನ್ನು ಆಗಾಗ್ಗೆ ದೇಹದಿಂದ ಹೊರ ಹಾಕುವುದು ಬಹಳ ಮುಖ್ಯ. ಮೂತ್ರ ಕಟ್ಟಿಕೊಂಡರೆ ಆರೋಗ್ಯದಲ್ಲಿ (Health) ಸಮಸ್ಯೆ ಉಂಟಾಗುತ್ತದೆ. ಕೆಲವರು ಹಗಲಿನಲ್ಲಿ ಪದೇ-ಪದೇ ಮೂತ್ರ ವಿಸರ್ಜನೆ ಮಾಡಿದರೆ, ಕೆಲವರು ರಾತ್ರಿ ವೇಳೆ ಈ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ (UK Woman) ಬರೋಬ್ಬರಿ 1 ವರ್ಷ 2 ತಿಂಗಳ ಕಾಲ ಮೂತ್ರ ವಿಸರ್ಜನೆಗೇ ಹೋಗಿಲ್ಲವಂತೆ.

     

    View this post on Instagram

     

    A post shared by Elle Adams ???? (@ellenextdoor)

    ಹೌದು… ಇಂಗ್ಲೆಂಡ್‌ನ (England) ಮಹಿಳೆಯೊಬ್ಬಳು ಬರೋಬ್ಬರಿ 14 ತಿಂಗಳ ಕಾಲ ಮೂತ್ರ ವಿಸರ್ಜನೆಗೇ ಹೋಗಿಲ್ಲವಂತೆ. ತಪಾಸಣೆಯ ಬಳಿಕ ಯುಕೆ ವೈದ್ಯರು (UK Doctors) ಇದಕ್ಕೆ ಕಾರಣವೇನೆಂಬುದನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?

    ಹೌದು.. 30 ವರ್ಷ ವಯಸ್ಸಿನ ಮಹಿಳೆ ಎಲ್ಲೆ ಆಡಮ್ಸ್‌ಗೆ 2020ರ ಅಕ್ಟೋಬರ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಫೌಲರ್ಸ್ ಸಿಂಡ್ರೋಮ್ (Fowlers Syndrome) ಎಂದು ಕರೆಯುತ್ತಾರೆ. ಈ ಕಾಯಿಲೆ ಮೂತ್ರಕೋಶವನ್ನು ಖಾಲಿ ಮಾಡಲಾಗದ ಅಸಮರ್ಥತೆ ಉಂಟುಮಾಡುತ್ತದೆ. ಈ ಕಾಯಿಲೆ ಯುವತಿಯರಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ಈ ಸಿಂಡ್ರೋಮ್‌ನಿಂದಾಗಿ ಆಡಮ್ಸ್‌ ಎಷ್ಟೇ ನೀರು ಅಥವಾ ಇತರ ದ್ರವ ಕುಡಿದರೂ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಸ್ಲಿಮರಿಗೆ ತೊಂದರೆಕೊಡುವ ಉದ್ದೇಶದಿಂದ ಮೀಸಲಾತಿಯಲ್ಲಿ ದ್ರೋಹ – ಸಿದ್ದು ಸಿಡಿಮಿಡಿ

    ನಂತರ ಆಡಮ್ಸ್ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ರೋಗಲಕ್ಷಣಗಳನ್ನು ವಿವರಿಸಿ ಚಿಕಿತ್ಸೆ ಪಡೆಯಲು ನಿರ್ಧರಿಸಿದರು. ವೈದ್ಯರು ಆಕೆಯ ದೇಹವನ್ನು ಕೂಲಕುಂಷವಾಗಿ ಪರಿಶೀಲನೆ ನಡೆಸಿ, ಆಕೆಯ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಹೀಗಾಗಿ ವೈದ್ಯರ ತಂಡ ತಕ್ಷಣ ಟ್ಯೂಬ್‌ ಮೂಲಕ ಮೂತ್ರವನ್ನು ಹೊರತೆಗೆಯುವ ಕೆಲಸ ಮಾಡಿತು.

    ಒಂದು ವಾರದ ನಂತರ ಮೂತ್ರಶಾಸ್ತ್ರ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆಡಮ್ಸ್ ಅವರಿಗೆ ಸ್ವಯಂ-ಟ್ಯೂಬ್ ಮೂಲಕ ಮೂತ್ರ ತೆಗೆಯುವುದು ಹೇಗೆಂದು ಕಲಿಸಿ ಮನೆಗೆ ಕಳುಹಿಸಲಾಯಿತು. ಇದೀಗ ಮಹೀಳೆ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

    ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಡಮ್ಸ್‌, ನನಗೆ ಮೊದಲು ಮೂತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಂತರದ ದಿನಗಳಲ್ಲಿ ಎಷ್ಟು ನೀರು ಕುಡಿದರೂ ಮೂತ್ರ ಬರುವ ಅನುಭವ ಆಗುವುದೇ ನಿಂತು ಹೋಯಿತು. ಬಳಿಕ ನಾನು ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದುಕೊಂಡೆ. ಇದೀಗ ನಾನು ಅತ್ಯಂತ ಆರೋಗ್ಯವಂತಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

  • ನನ್ನ ಫೋನ್‌ನಲ್ಲೂ ಪೆಗಾಸಸ್‌ ಇತ್ತು, ಕಾಲ್‌ಗಳು ರೆಕಾರ್ಡ್‌ ಆಗ್ತಿತ್ತು – ರಾಹುಲ್‌ ಗಾಂಧಿ

    ನನ್ನ ಫೋನ್‌ನಲ್ಲೂ ಪೆಗಾಸಸ್‌ ಇತ್ತು, ಕಾಲ್‌ಗಳು ರೆಕಾರ್ಡ್‌ ಆಗ್ತಿತ್ತು – ರಾಹುಲ್‌ ಗಾಂಧಿ

    ಲಂಡನ್: ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದಲ್ಲಿ (Cambridge) ಉಪನ್ಯಾಸದ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿ ನಡೆಯುತ್ತಿದೆ. ಇಸ್ರೇಲ್‌ ಸ್ಪೈವೇರ್‌ ಪೆಗಾಸಸ್‌ (Pegasus) ನನ್ನ ಫೋನ್‌ನಲ್ಲೂ ಇದೆ ಎಂದು ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.

    ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಸಲಹೆಗಾರ ಸ್ಯಾಮ್ ಪಿತ್ರೋಡಾ, ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿ ಮಾಡಿದ ಭಾಷಣದ ಯೂಟ್ಯೂಬ್ ಲಿಂಕ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮ ಫೋನ್‌ ಕರೆಗಳು ರೆಕಾರ್ಡ್‌ ಆಗಿತ್ತಿದೆ. ಫೋನ್‌ನಲ್ಲಿ ಮಾತನಾಡುವಾಗ ಜಾಗರೂಕರಾಗಿರಿ ಎಂದು ಗುಪ್ತಚರ ಅಧಿಕಾರಿಗಳು ನನಗೆ ಎಚ್ಚರಿಕೆ ನೀಡಿದ್ದಾರೆ” ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತು ಶೀಘ್ರದಲ್ಲಿ ವಿಚಾರಣೆ – ಸಿಜೆಐ

    “ನಾನೇ ನನ್ನ ಫೋನ್‌ನಲ್ಲಿ ಪೆಗಾಸಸ್ ಹೊಂದಿದ್ದೇನೆ. ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳ ಫೋನ್‌ಗಳಲ್ಲಿ ಪೆಗಾಸಸ್ ಇತ್ತು. ಜಾಗರೂಕರಾಗಿರಿ ಎಂದು ಗುಪ್ತಚರ ಅಧಿಕಾರಿಗಳು ನನಗೆ ಎಚ್ಚರಿಸಿದ್ದಾರೆ” ಎಂದು ಹೇಳಿದ್ದಾರೆ.

    ಭಾರತೀಯ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟಾದ ಸಂಸತ್ತು, ಮಾಧ್ಯಮ, ನ್ಯಾಯಾಂಗವನ್ನೂ ನಿರ್ಬಂಧಿಸಲಾಗುತ್ತಿದೆ. ಹಾಗಾಗಿ, ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿ ನಡೆಯುತ್ತಿದೆ ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: 40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

    ಕೆಲ ವಿಷಯಗಳ ಬಗ್ಗೆ ವಿರೋಧ ಪಕ್ಷದ ನಾಯಕರು ಮಾತನಾಡಿದರೆ ಜೈಲಿಗೆ ಹಾಕುತ್ತಾರೆ. ಮೂರ್ನಾಲ್ಕು ಬಾರಿ ಈ ರೀತಿ ಆಗಿದೆ. ಅಲ್ಪಸಂಖ್ಯಾತರು ಮತ್ತು ಮಾಧ್ಯಮದವರ ಮೇಲಿನ ಹಲ್ಲೆಯ ಬಗ್ಗೆಯೂ ನೀವು ಕೇಳಿದ್ದೀರಿ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

  • UK ನಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ- ಬೆಂಗ್ಳೂರಲ್ಲಿ ನೈಜೀರಿಯಾ ಪ್ರಜೆ ಅರೆಸ್ಟ್

    UK ನಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ- ಬೆಂಗ್ಳೂರಲ್ಲಿ ನೈಜೀರಿಯಾ ಪ್ರಜೆ ಅರೆಸ್ಟ್

    ಬೆಂಗಳೂರು: ಯುಕೆ (UK) ದೇಶದಲ್ಲಿ ಕೆಲಸ ಕೊಡಿಸೋದಾಗಿ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ನೈಜೀರಿಯಾ (Nigeria) ಪ್ರಜೆ ನೋಕೋಚಾ ಕಾಸ್ಮೀರ್‌ನ ಬಂಧನವಾಗಿದೆ.

    ಕಾಸ್ಮೀರ್ ಶೆಲ್ ಆಯಿಲ್ ಕಂಪನಿಗಳಲ್ಲಿ ಮ್ಯಾನೆಜ್ಮೆಂಟ್ ಹುದ್ದೆ, ಸ್ಟಾಫ್ ನರ್ಸ್ (Nurse), ಮುಂತಾದ ಹುದ್ದೆ ಕೊಡಿಸುವುದಾಗಿ ಮೋಸ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: ಮಹಿಳಾ ಪಿಎಸ್‌ಐ ಜೊತೆ ಅಸಭ್ಯ ವರ್ತನೆ – ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಬಂಧನ

    ಆರೋಪಿ ದೊಡ್ಡಗುಬ್ಬಿ ಮೂಲದ ಮಹಿಳೆಗೆ ಯುಕೆ ನಲ್ಲಿ ಸ್ಟಾಫ್ ನರ್ಸ್ ಕೆಲಸ ಕೊಡಿಸುವುದಾಗಿ ಇ-ಮೇಲ್ ಕಳಿಸಿದ್ದಾನೆ. ನಂತರ ಆ ಮಹಿಳೆಯಿಂದ ವಿವಿಧ ಶುಲ್ಕ ಹಾಗೂ ಕ್ಲಿಯರೆನ್ಸ್ ಶುಲ್ಕ ಅಂತಾ 35 ಲಕ್ಷ ಹಣವನ್ನ ಪೀಕಿದ್ದಾನೆ. ಹಣ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.

    ಈ ಬಗ್ಗೆ ಈಶ್ಯಾನ ವಿಭಾಗದ ಸೈಬರ್ ಕ್ರೈಂ (Cyber Crime) ಪೊಲೀಸ್ ಠಾಣೆಗೆ ದೂರು ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ. ತನಿಖೆ ವೇಳೆ ಆರೋಪಿ ಹೈದರಾಬಾದ್ ಮತ್ತು ತಮಿಳುನಾಡಿನ ಕರೂರಿನಲ್ಲೂ ಇದೇ ರೀತಿ ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಾವಿರಾರು ಮೈಲಿ ದೂರವಿದ್ದರೂ ಸಿಗುತ್ತೆ ನೈಜ ಮುತ್ತಿನ ಗಮ್ಮತ್ತು – ಏನಿದು ಕಿಸ್ಸಿಂಗ್ ಡಿವೈಸ್ ಕರಾಮತ್ತು?

    ಸದ್ಯ ಆರೋಪಿಯನ್ನ ಬಂಧಿಸಿ ಲ್ಯಾಪ್‌ಟಾಪ್, ಪಾಸ್ ಪೋರ್ಟ್, ಸಿಮ್‌ಕಾರ್ಡ್ಗಳನ್ನ ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.

  • ಬ್ರಿಟನ್ ರಾಣಿ ಎಲಿಜಬೆತ್ ನಿಧನ – ನಾಳೆ ಕರ್ನಾಟಕದಲ್ಲೂ ಶೋಕಾಚರಣೆ

    ಬ್ರಿಟನ್ ರಾಣಿ ಎಲಿಜಬೆತ್ ನಿಧನ – ನಾಳೆ ಕರ್ನಾಟಕದಲ್ಲೂ ಶೋಕಾಚರಣೆ

    ಬೆಂಗಳೂರು: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ (Elizabeth II) ನಿಧನರಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ 11 ರಂದು ಕರ್ನಾಟಕದಲ್ಲೂ ಶೋಕಾಚರಣೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

    ಸೆ.11 ರಂದು ಶೋಕಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮ ಇರುವುದಿಲ್ಲ. ನಿಯಮಿತವಾಗಿ ಎಲ್ಲಾ ಸರ್ಕಾರಿ ಇಲಾಖೆಯ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: 3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕೃತ ಘೋಷಣೆ

    ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ (Britain Queen) ಎಲಿಜಬೆತ್ (96) ಅನಾರೋಗ್ಯದಿಂದ ಸೆ.8ರಂದು ಸ್ಕಾಟ್ಲೆಂಡ್ ಅರಮನೆಯಲ್ಲಿ ನಿಧನರಾದರು. ಇವರು 1923ರಿಂದ ಬ್ರಿಟನ್‌ನ ರಾಣಿಯಾಗಿದ್ದರು.  ಇದನ್ನೂ ಓದಿ: ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು

    ರಾಣಿ 2ನೇ ಎಲಿಜಬೆತ್ ಸುದೀರ್ಘ 70 ವರ್ಷಗಳ ಆಳ್ವಿಕೆಯನ್ನು ಪೂರೈಸಿ ನಿಧನ ಹೊಂದಿದ ಬಳಿಕ ಇದೀಗ ಎಲಿಜಬೆತ್ ಅವರ ಹಿರಿಯ ಪುತ್ರ 3ನೇ ಚಾರ್ಲ್ಸ್ (Charles III) ಅವರನ್ನು ಅಧಿಕೃತವಾಗಿ ಬ್ರಿಟನ್ ರಾಜ ಎಂದು ಘೋಷಿಸಲಾಗಿದೆ. ಇಂದು ಅವರು ಪೀಠ ಅಲಂಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ಲಂಡನ್: ಪ್ರತಿ ತಂದೆ ತಾಯಿಯು ತಮ್ಮ ಮಗುವಿನ ಹೆಸರಿನ ಬಗ್ಗೆ ವಿವಿಧ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಸ್ಥಳ, ಪ್ರಸಿದ್ಧ ವ್ಯಕ್ತಿ, ಅಥವಾ ತಮಗೆ ಪ್ರೇರಣೆಯಾಗಿರುವವರ ಹೆಸರನ್ನು ಇಡುತ್ತಾರೆ. ಆದರೆ ಇಲ್ಲಿನ ದಂಪತಿ ತಮ್ಮ ಮಗುವಿಗೆ ಭಾರತ ಖಾದ್ಯದ ಹೆಸರನ್ನು ಇಟ್ಟಿದ್ದಾರೆ.

    ಹೌದು.. ಈ ಘಟನೆ ಐರ್ಲೆಂಡ್‍ನಲ್ಲಿ ನಡೆದಿದೆ. ಐರ್ಲೆಂಡ್‍ನ ನಾಬ್ಬೆಯಲ್ಲಿರುವ ಭಾರತೀಯ ರೆಸ್ಟೋರೆಂಟ್‍ಗೆ ಅಲ್ಲಿರುವ ದಂಪತಿ ಆಗಾಗ ಭೇಟಿ ನೀಡುತ್ತಿದ್ದರು. ಇಲ್ಲಿನ ತಿಂಡಿಯು ಅವರಿಗೆ ಬಹಳ ಇಷ್ಟವಾದ್ದರಿಂದ ತಮ್ಮ ಮಗುವಿಗೂ ಪಕೋರಾ(ಪಕೋಡಾ) ಎಂದು ಹೆಸರಿಟ್ಟಿದ್ದಾರೆ.

    ಈ ಬಗ್ಗೆ ಅಲ್ಲಿನ ರೆಸ್ಟೋರೆಂಟ್ ಮಗುವಿನ ಹೆಸರನ್ನು ಹಂಚಿಕೊಂಡಿದ್ದು, ನಿಮ್ಮನ್ನು ಭೇಟಿ ಮಾಡಲು ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದೆ. ಅಷ್ಟೇ ಅಲ್ಲದೇ ರೆಸ್ಟೋರೆಂಟ್ ಬಿಲ್‍ನ ಪ್ರತಿಯನ್ನು ಶೇರ್ ಮಾಡಿಕೊಂಡಿದ್ದು, ಪಕೋರಾದಲ್ಲಿನ ವಿವಿಧ ಬಗೆಯ ಖಾದ್ಯವನ್ನು ಗಮನಿಸಬಹುದಾಗಿದೆ.

    ಇದಕ್ಕೆ ಅನೇಕ ನಟ್ಟಿಗರು ಕಾಮೆಂಟ್ ಮಾಡಿದ್ದು, ಅನೇಕರು ಈ ಹೆಸರನ್ನು ಇಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದರೇ, ಇನ್ನೊಬ್ಬರು ನನ್ನ ಇಬ್ಬರು ಹದಿಹರೆಯದವರು ಚಿಕನ್ ಮತ್ತು ಟಿಕ್ಕಾ ಎಂದು ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಸೈಕಿಯಾ ಈಗ ಅಸ್ಸಾಂನಲ್ಲಿ ಡಿಎಸ್‌ಪಿ ಆಫೀಸರ್‌

    ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ನಾನು ಗರ್ಭಿಣಿಯಾಗಿದ್ದಾಗ ನಾನು ಹೆಚ್ಚಾಗಿ ಬಾಳೆ ಹಣ್ಣು, ಕಲ್ಲಂಗಡಿಯನ್ನು ತಿನ್ನುತ್ತಿದ್ದೆ. ಆದರೆ ದೇವರ ದಯೆಯಿಂದ ನಾನು ನನ್ನ ಮಕ್ಕಳಿಗೆ ಹೆಸರನ್ನು ಇಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶನ ಜೊತೆಗೆ ಗಾಲ್ಫ್ ಮೈದಾನದ ಚಿರತೆಗೂ ನಿತ್ಯ ಪೂಜೆ

    Live Tv
    [brid partner=56869869 player=32851 video=960834 autoplay=true]

  • 2029ರ ವೇಳೆ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಭಾರತ: SBI ವರದಿ

    2029ರ ವೇಳೆ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಭಾರತ: SBI ವರದಿ

    ನವದೆಹಲಿ: 2029ರ ವೇಳೆಗೆ ಭಾರತ ದೇಶ ಆರ್ಥಿಕತೆಯಲ್ಲಿ ಪ್ರಗತಿ ಕಂಡುಬಂದು ವಿಶ್ವದ 3ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡೆಸಿದ ಸಂಶೋಧನಾ ವರದಿಯೊಂದರಲ್ಲಿ ತಿಳಿಸಿದೆ.

    ಎಸ್‍ಬಿಐ ನಡೆಸಿದ ಸಂಶೋಧನಾ ವರದಿಯಲ್ಲಿ ಉಲ್ಲೇಖವಾಗಿರುವಂತೆ ಭಾರತದ ಆರ್ಥಿಕತೆ ವೇಗವಾಗಿ ಪ್ರಗತಿ ಕಾಣುತ್ತಿದೆ. ಈಗಾಗಲೇ ಭಾರತದ ಆರ್ಥಿಕತೆ 2014 ರಿಂದ 7 ಸ್ಥಾನ ಮೇಲೇರಿದೆ. ಭಾರತದ ಜಿಡಿಪಿ Q1FY23ಯು 13.5 ಏರಿಕೆ ಕಂಡಿದ್ದು, ಇದು ಪ್ರಸಕ್ತ ಅತ್ಯಂತ ವೇಗವಾಗಿ ಏರಿಕೆ ಕಂಡ ಆರ್ಥಿಕತೆಯಾಗಿದೆ. ಇದನ್ನೂ ಓದಿ: ಯುಕೆ ಹಿಂದಿಕ್ಕಿದ ಭಾರತ – ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ

    ಈಗಾಗಲೇ ಯುನೈಟೆಡ್ ಕಿಂಗ್‍ಡಮ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. 2021ರ ಹಣಕಾಸು ವರ್ಷದ ಕೊನೆಯ ಮೂರು ತೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಇದನ್ನೂ ಓದಿ: ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು 4 ಲಕ್ಷ ರೂ. ಖರ್ಚು!

    ಯುಕೆ ಎರಡನೇ ತ್ರೈಮಾಸಿಕದಲ್ಲಿ ಶೇ.1 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದೆ. ಮುಂದಿನ ತ್ರೈಮಾಸಿಕದಲ್ಲಿ ಇದು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ. ಭಾರತದ ರೂಪಾಯಿ ಮುಂದೆ ಪೌಂಡ್ ಮೌಲ್ಯ ಈ ವರ್ಷ ಶೇ.8ರಷ್ಟು ಕುಸಿತ ಕಂಡಿದೆ. ದಶಕಗಳ ಹಿಂದೆ ವಿಶ್ವದ ದೊಡ್ಡ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದ್ದರೆ ಯುಕೆ 5ನೇ ಸ್ಥಾನ ಪಡೆದಿತ್ತು. ಪ್ರಸ್ತುತ ವಿಶ್ವ ದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪೈಕಿ ಅಮೆರಿಕ, ಚೀನಾ, ಜಪಾನ್, ಜರ್ಮನಿ ನಂತರದ ಸ್ಥಾನವನ್ನು ಭಾರತ ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಯುಕೆ ಹಿಂದಿಕ್ಕಿದ ಭಾರತ – ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ

    ಯುಕೆ ಹಿಂದಿಕ್ಕಿದ ಭಾರತ – ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ

    ವಾಷಿಂಗ್ಟನ್‌: ಯುನೈಟೆಡ್‌ ಕಿಂಗ್‌ಡಮ್‌ ಹಿಂದಿಕ್ಕಿದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ.

    2021ರ ಹಣಕಾಸು ವರ್ಷದ ಕೊನೆಯ ಮೂರು ತೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಹೇಳಿದೆ. ಇದನ್ನೂ ಓದಿ: ಏಪ್ರಿಲ್‌- ಜೂನ್‌ GDP ಬೆಳವಣಿಗೆ 13.5% ರಷ್ಟು ಏರಿಕೆ

     

    ಈಗಾಗಲೇ ಕೋವಿಡ್‌ ನೀಡಿದ ಹೊಡೆತದಿಂದ ಪಾರಾಗಲು ಹೆಣಗಾಡುತ್ತಿರುವ ಇಂಗ್ಲೆಂಡ್‌ಗೆ ಈ ವರದಿ ಮತ್ತಷ್ಟು ಹೊಡೆತ ನೀಡಿದೆ. ಇದನ್ನೂ ಓದಿ: ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು: ಮೋದಿ

    ಡಾಲರ್‌ ವಿನಿಮಯ ದರವನ್ನು ಲೆಕ್ಕ ಹಾಕಿದಾಗ ಭಾರತೀಯ ಆರ್ಥಿಕತೆಯ ಗಾತ್ರವು 854.7 ಬಿಲಿಯನ್ ಡಾಲರ್‌ ಆಗಿದ್ದರೆ ಯುಕೆ ಆರ್ಥಿಕತೆ 816 ಬಿಲಿಯನ್ ಡಾಲರ್‌ ಆಗಿದೆ ಎಂದು ವರದಿ ತಿಳಿಸಿದೆ.

    ಯುಕೆ ಎರಡನೇ ತ್ರೈಮಾಸಿಕದಲ್ಲಿ ಶೇ.1 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದೆ. ಮುಂದಿನ ತ್ರೈಮಾಸಿಕದಲ್ಲಿ ಇದು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ. ಭಾರತದ ರೂಪಾಯಿ ಮುಂದೆ ಪೌಂಡ್‌ ಮೌಲ್ಯ ಈ ವರ್ಷ ಶೇ.8ರಷ್ಟು ಕುಸಿತ ಕಂಡಿದೆ.

    ದಶಕಗಳ ಹಿಂದೆ ವಿಶ್ವದ ದೊಡ್ಡ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದ್ದರೆ ಯುಕೆ 5ನೇ ಸ್ಥಾನ ಪಡೆದಿತ್ತು. ಪ್ರಸ್ತುತ ವಿಶ್ವ ದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪೈಕಿ ಅಮೆರಿಕ, ಚೀನಾ, ಜಪಾನ್‌, ಜರ್ಮನಿ ನಂತರದ ಸ್ಥಾನವನ್ನು ಭಾರತ ಪಡೆದಿದೆ.

    Live Tv
    [brid partner=56869869 player=32851 video=960834 autoplay=true]