ಲಂಡನ್: ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement) ಭಾರತ ಮತ್ತು ಯುನೈಟೆಟ್ ಕಿಂಗ್‌ಡಮ್ (UK) ಸಹಿ ಹಾಕಿದೆ. ಈ ಒಪ್ಪಂದದಿಂದ ಎರಡು ದೇಶಗಳ ಮಧ್ಯೆ ವಾರ್ಷಿಕವಾಗಿ ಸುಮಾರು 34 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರ ಹೆಚ್ಚಾಗಲಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ (India) ಮಾರುಕಟ್ಟೆ ಪ್ರವೇಶಿಸಲು ಅಮೆರಿಕ (USA) ಸುಂಕದ ಬೆದರಿಕೆ ಹಾಕುತ್ತಿರುವ ಸಮಯದಲ್ಲೇ ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಜವಳಿ, ಜೆನೆರಿಕ್ ಔಷಧಗಳು ಮತ್ತು ವೈದ್ಯಕೀಯ ಸಾಧನಗಳು, ಚರ್ಮದ ಸರಕುಗಳು ಮತ್ತು ಕೃಷಿ ಮತ್ತು ರಾಸಾಯನಿಕ ಉತ್ಪನ್ನಗಳು ಸೇರಿದಂತೆ ಯುಕೆಗೆ ಹೋಗುವ ಭಾರತದ 99% ವಸ್ತುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂಓದಿ: ತಾಂತ್ರಿಕದೋಷದಿಂದರಷ್ಯಾವಿಮಾನಪತನ– 48 ಮಂದಿಸಾವು
A landmark deal with India means jobs, investment and growth here in the UK.
It creates thousands of British jobs, unlocks new opportunities for businesses and puts money in the pockets of working people.
ಒಪ್ಪಂದದ ಭಾಗವಾಗಿ, ಭಾರತವು ತನ್ನ ಸುಂಕದ 90% ರಷ್ಟು ಕಡಿತಗೊಳಿಸಲಿದೆ ಮತ್ತು ಯುಕೆ ಉತ್ಪನ್ನಗಳ ಮೇಲಿನ ಸರಾಸರಿ ಸುಂಕವು 15% ರಿಂದ 3% ಕ್ಕೆ ಇಳಿಯಲಿದೆ. ಬ್ರಿಟನ್ ಸ್ಕಾಚ್ ವಿಸ್ಕಿ, ಕಾರು ಮತ್ತು ಕೆಲ ಆಹಾರ ಪದಾರ್ಥಗಳ ಮೇಲಿನ ಆಮದು ಸುಂಕವನ್ನು ಭಾರತ ಕಡಿತಗೊಳಿಸಲಿದೆ. ವಿಸ್ಕಿಯ ಮೇಲಿನ ಸುಂಕವನ್ನುಅರ್ಧದಷ್ಟು ಅಂದರೆ 75% ಕ್ಕೆ ಇಳಿಕೆಯಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೂ ಪರಿಣಾಮ ಬೀರಲಿದ್ದು 110% ರಿಂದ 10% ಕ್ಕೆ ಸುಂಕ ಇಳಿಯಲಿದೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತದ ಚರ್ಮ ವಲಯವು ಯುಕೆಯಲ್ಲಿ 5% ಹೆಚ್ಚುವರಿ ಮಾರುಕಟ್ಟೆ ಪಾಲನ್ನು ಪಡೆಯುವ ನಿರೀಕ್ಷೆಯಿದೆ. ಅದೇ ರೀತಿ 2030 ರ ವೇಳೆಗೆ ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ರಫ್ತುಗಳು ದ್ವಿಗುಣಗೊಳ್ಳುವ ಸಾಧ್ಯತೆಯಿದೆ.
ಮುಂದಿನ ಹಣಕಾಸು ವರ್ಷದಲ್ಲಿ ರಾಸಾಯನಿಕಗಳ ರಫ್ತು 30%-40% ರಷ್ಟು ಹೆಚ್ಚಾಗಬಹುದು. ರತ್ನಗಳು ಮತ್ತು ಆಭರಣ ರಫ್ತಿನ ಮೌಲ್ಯ ಪ್ರಸ್ತುತ 941 ಮಿಲಿಯನ್ ಡಾಲರ್ ಇದ್ದು ಮುಂದಿನ ಮೂರು ವರ್ಷಗಳಲ್ಲಿ ಇದು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
ವ್ಯಾಪಾರ ಒಪ್ಪಂದ ಜಾರಿಗೆ ಬಂದ ನಂತರ ಸಾಫ್ಟ್‌ವೇರ್ ಸೇವೆಗಳ ರಫ್ತು ವಾರ್ಷಿಕವಾಗಿ ಸುಮಾರು 20% ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ಒಪ್ಪಂದವು ಗ್ರಾಹಕರಿಗೆ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಬ್ರಿಟಿಷ್ ಅಧಿಕಾರಿಗಳು ಹೇಳಿದ್ದಾರೆ.
– ವಾಣಿಜ್ಯ ಒಪ್ಪಂದ, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದಿನಿಂದ ಜುಲೈ 26 ರವರೆಗೆ ವಿದೇಶ ಪ್ರವಾಸದಲ್ಲಿರಲಿದ್ದಾರೆ. ಈ ಬಾರಿ ಬ್ರಿಟನ್ (Britain) ಮತ್ತು ಮಾಲ್ಡೀವ್ಸ್‌ಗೆ (Maldives) ಭೇಟಿ ನೀಡಲಿದ್ದು, ಭೇಟಿಯಲ್ಲಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಪ್ರಮುಖ ಗುರಿಯಾಗಿದೆ.
ಇಂದು ಮತ್ತು ನಾಳೆ ಪ್ರಧಾನಿ ಮೋದಿ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯಲ್ಲಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ (ಎಫ್‌ಟಿಎ) ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ. ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99 ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಇದರಿಂದ ಬ್ರಿಟಿಷ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಳೆ ಆರ್ಭಟ; ಪ್ರಮುಖ ರಸ್ತೆಗಳು ಜಲಾವೃತ – ಸಂಚಾರ ಅಸ್ತವ್ಯಸ್ತ
ಎಸ್ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಈ ಒಪ್ಪಂದವು ಭಾರತಕ್ಕೆ ಗಣನೀಯ ಆರ್ಥಿಕ ಉತ್ತೇಜನ ನೀಡಲಿದೆ. 2024ರಲ್ಲಿ ಯುಕೆಯಿಂದ ಭಾರತಕ್ಕೆ 130 ಬಿಲಿಯನ್ ಡಾಲರ್‌ನಷ್ಟು (ಭಾರತದ ಜಿಡಿಪಿಯ 3.3%) ವಿದೇಶಿ ವಿನಿಮಯ ಹರಿವು ದಾಖಲಾಗಿದ್ದು, ಈ ಒಪ್ಪಂದದಿಂದ ಈ ಹರಿವು ಮತ್ತಷ್ಟು ಹೆಚ್ಚಲಿದೆ. ವಿಶೇಷವಾಗಿ, ಯುಕೆಯಲ್ಲಿ ಕೆಲಸ ಮಾಡುವ ಭಾರತೀಯ ಐಟಿ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ವಿಮೆಯಿಂದ ವಿನಾಯಿತಿ ನೀಡುವ ನಿಬಂಧನೆಯು ಅವರ ಉಳಿತಾಯ ಮತ್ತು ವಿದೇಶಿ ವಿನಿಮಯ ಹರಿವನ್ನು ಹೆಚ್ಚಿಸಲಿದೆ. 2024ರಲ್ಲಿ 56.7 ಬಿಲಿಯನ್ ಡಾಲರ್ ಆಗಿರುವ ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.
ಬ್ರಿಟನ್ ಭೇಟಿಯ ಬಳಿಕ, ಪ್ರಧಾನಿ ಮೋದಿ ಜುಲೈ 25-26ರಂದು ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಮಾಲ್ಡೀವ್ಸ್‌ನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಡೀವ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಡೀವ್ಸ್‌ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ
ಕಳೆದ ಕೆಲವು ವರ್ಷಗಳಲ್ಲಿ ಭಾರತ-ಮಾಲ್ಡೀವ್ಸ್ ಸಂಬಂಧಗಳು ಕೆಲವು ಏರಿಳಿತಗಳನ್ನು ಕಂಡಿವೆ. 2023ರಲ್ಲಿ ಮುಯಿಝು ಅವರು ‘ಇಂಡಿಯಾ ಔಟ್’ ಚುನಾವಣಾ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಕಾರ್ಯನಿರ್ವಹಿಸಿವೆ. ಭಾರತವು ಮಾಲ್ಡೀವ್ಸ್‌ಗೆ 2024-25ರಲ್ಲಿ 470 ಕೋಟಿ ರೂ.ನಿಂದ 600 ಕೋಟಿ ರೂ.ಗೆ ಹೆಚ್ಚಳವಾದ ಲೈನ್ ಆಫ್ ಕ್ರೆಡಿಟ್ ಮತ್ತು ಕರೆನ್ಸಿ ಸ್ವಾಪ್ ಸೌಲಭ್ಯವನ್ನು ವಿಸ್ತರಿಸಿದೆ. ಇದರಿಂದ ಮಾಲ್ಡೀವ್ಸ್‌ನ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ನೆರವಾಗಿದೆ.
ಲಂಡನ್: ಸೈಬರ್ ದಾಳಿಯಿಂದ (Cyber Attack) 158 ವರ್ಷದ ಯುಕೆಯ (UK) ಹಳೆಯ ಸಾರಿಗೆ ಕಂಪನಿ ಬಂದ್ ಆಗಿ 700 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಕೆಎನ್‌ಪಿಯ ಲಾಜಿಸ್ಟಿಕ್ಸ್ (KNP Logistics) ಕಂಪನಿ 500 ಲಾರಿಗಳನ್ನು ನಿರ್ವಹಣೆ ಮಾಡುತ್ತಿತ್ತು. ಹ್ಯಾಕರ್‌ಗಳು ಉದ್ಯೋಗಿಯೊಬ್ಬನ ಪಾಸ್‌ವರ್ಡ್ ಊಹಿಸಿ ಸೈಟ್ ಪ್ರವೇಶಿಸಿದ್ದಾರೆ. ನಂತರ ರಾನ್ಸಮ್‌ವೇರ್ (Ransomware) ಮಾಲ್ವೇರ್ ಕಳುಹಿಸಿ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿ ಆಂತರಿಕ ವ್ಯವಸ್ಥೆಗಳನ್ನು ಲಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂಓದಿ: ಬಿಎಸ್‌ಎನ್‌ಎಲ್ 4ಜಿಯಿಂದ 5ಜಿ ಸಿಮ್ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್ ಮಾಡೋದು ಹೇಗೆ?
ಹ್ಯಾಕ್ ಮಾಡಿದ ಬಳಿಕ ಉದ್ಯೋಗಿಗಳಿಗೆ ವೆಬ್‌ಸೈಟ್ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಹ್ಯಾಕರ್‌ಗಳು 5 ಮಿಲಿಯನ್ ಪೌಂಡ್‌ಗೆ (ಅಂದಾಜು 58. 40 ಕೋಟಿ ರೂ) ಬೇಡಿಕೆ ಇಟ್ಟಿದ್ದರು. ಆದರೆ ಇಷ್ಟೊಂದು ಮೊತ್ತವನ್ನು ಪಾವತಿ ಮಾಡಲು ಕಂಪನಿಗೆ ಸಾಧ್ಯವಾಗಲಿಲ್ಲ. ಇದರಿಂದ ಸಂಪೂರ್ಣ ಡೇಟಾ ನಷ್ಟಕ್ಕೆ ಕಾರಣವಾಯಿತು. ಅಂತಿಮವಾಗಿ ಕಂಪನಿಯ ಪತನಕ್ಕೆ ಕಾರಣವಾಯಿತು.
M&S, Co-op ಮತ್ತು Harrods ನಂತಹ ಇತರ ಪ್ರಮುಖ UK ಕಂಪನಿಗಳು ಸಹ ಇದೇ ರೀತಿಯ ದಾಳಿಗೆ ಬಲಿಯಾಗಿವೆ. Co-op ಪ್ರಕರಣದಲ್ಲಿ, 65 ಲಕ್ಷ ಸದಸ್ಯರ ಡೇಟಾವನ್ನು ಕಳವು ಮಾಡಲಾಗಿತ್ತು.
ತಾಂತ್ರಿಕ ದೋಷದಿಂದಾಗಿ ಜೂ.14ರಂದು ತಿರುವನಂತಪುರ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಬ್ರಿಟನ್, ಭಾರತದ ಅನುಮತಿ ಕೇಳಿತ್ತು. ಭಾರತವು ತಕ್ಷಣವೇ ಅನುಮತಿ ನೀಡಿದ್ದರಿಂದ ತಿರುವನಂತಪುರ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿತ್ತು. ಆದರೆ, ತಕ್ಷಣಕ್ಕೆ ವಿಮಾನವನ್ನು ರಿಪೇರಿ ಮಾಡಲು ಬ್ರಿಟನ್ ಇಂಜಿನಿಯರ್‌ಗಳಿಗೆ, ತಜ್ಞರಿಗೆ ಸಾಧ್ಯವಾಗಿರಲಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇದ್ದ ಯುದ್ಧ ವಿಮಾನದ ದುರಸ್ತಿ ಕಾರ್ಯ ಕೊನೆಗೂ ಯಶಸ್ವಿಯಾಗಿದೆ.
ಮೂಲಗಳ ಪ್ರಕಾರ, ತಾಂತ್ರಿಕ ದೋಷವನ್ನು ಸದ್ಯ ಸರಿಪಡಿಸಲಾಗಿದ್ದು, ಪ್ರಾಯೋಗಿಕ ಹಾರಾಟಕ್ಕಾಗಿ ಫೈಟರ್ ಜೆಟ್‌ನ್ನು ಹ್ಯಾಂಗರ್‌ನಿಂದ ಹೊರಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಈ ಪ್ರಯೋಗದ ಫಲಿತಾಂಶದ ಆಧಾರದ ಮೇಲೆ ನಾಳೆ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದೆ. ಜುಲೈ ತಿಂಗಳ ಆರಂಭದಲ್ಲಿ ವಿಮಾನದ ದುರಸ್ತಿಗಾಗಿ ಆರ್‌ಎಎಫ್‌ಎ 400ಎಂ ಅಟ್ಲಾಸ್‌ನಲ್ಲಿ ಬಂದ ತಂತ್ರಜ್ಞರ ತಂಡವು ವಿಮಾನವು ಹಾರಾಟಕ್ಕೆ ಅರ್ಹವಾಗಿದೆ ಎಂದು ತಿಳಿಸಿದ್ದರು.
ಎಫ್-35 ವಿಶ್ವದ ಅತ್ಯಂತ ದುಬಾರಿ ಫೈಟರ್ ಜೆಟ್‌ಗಳಲ್ಲಿ ಒಂದಾಗಿದ್ದು, ಇದರ ಬೆಲೆ 115 ದಶಲಕ್ಷ ಡಾಲರ್‌ಗಿಂತ ಅಧಿಕವಾಗಿದೆ. ಇದನ್ನು ಕಡಿಮೆ ದೂರದ ಟೇಕ್-ಆಫ್ ಹಾಗೂ ಹೆಚ್ಚು ದೂರದ ಲ್ಯಾಂಡಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ನ್ಯಾಟೋ ವಾಯುಪಡೆಯ ಮೂಲಾಧಾರವಾಗಿದೆ.ಇದನ್ನೂ ಓದಿ: ಪತ್ನಿ ವಿರುದ್ಧ ಅಪಪ್ರಚಾರ ಮಾಡಿದ ವಿಪಕ್ಷಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು: ಸಿಎಂ
ಅತ್ತ ಬದುಕಲೂ ಆಗದೆ, ಇತ್ತ ಸಾಯುವ ಹಾದಿಯೂ ಸಿಗದೆ ಪರಿತಪಿಸುವ ಜೀವಗಳು ಕೊನೆಗೆ ‘ದಯಾಮರಣ’ (Euthanasia) ಎಂಬ ಕನ್ನಡಿಯೊಳಗಿನ ಗಂಟನ್ನು ಹುಡುಕುತ್ತಾ ಹೊರಡುತ್ತವೆ. ‘ಸಾವಿನ ಭಿಕ್ಷೆ’ ಬೇಡುತ್ತಾ ಹೊರಟವರಿಗೆ ಗೌರವಯುತ ಸಾವು ಸಿಗುವುದು ಭಾರತ ಸಹಿತ ಹಲವು ದೇಶಗಳ ಕಾನೂನಿನಲ್ಲಿ (Law) ಸಾಧ್ಯವೇ ಇಲ್ಲ. ಆದಾಗ್ಯೂ ಕೆಲ ದೇಶಗಳಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸಲಾಗಿದೆ. ವೈದ್ಯರ ನೆರವಿನೊಂದಿಗೆ ನೋವಿಲ್ಲದ ಸಾವು ಹೊಂದುವವರಿಗೆ ಇದು ರಹದಾರಿಯಾಗಿದೆ.
ಹೌದು. ಇತ್ತೀಚೆಗೆ ಯುಕೆನಲ್ಲಿ ದಯಾಮರಣಕ್ಕಾಗಿ ಹೊಸ ಕಾನೂನು ಪರಿಚಯಿಸಲು ಅಲ್ಲಿನ ಸರ್ಕಾರ (England Government) ಮುಂದಾಗಿದೆ. ಇತ್ತೀಚೆಗಷ್ಟೇ ಸಂಸತ್‌ನಲ್ಲಿ ಹೊಸ ಮಸೂದೆ ಮಂಡನೆ ಮಾಡಿದ್ದು, ಅದನ್ನ ಆತ್ಮಸಾಕ್ಷಿ ಮತಗಳ ಮೂಲಕ ಅಂಗೀಕರಿಸಲಾಯಿತು. ಬಳಿಕ ಅದರಲ್ಲಿನ ಅಂಶಗಳನ್ನ ಪರಿಶೀಲಿಸಲು ಸಾರ್ವಜನಿಕ ಮಸೂದೆ ಸಮಿತಿಗೆ ಕಳುಹಿಸಲಾಗಿದೆ. ಮತ್ತೊಮ್ಮೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಸೂದೆಗೆ ತಿದ್ದುಪಡಿ ತರುವ ಕುರಿತು ಮತಚಲಾವಣೆ ಮಾಡಲಾಗುತ್ತದೆ. ಬಳಿಕ ಅದನ್ನು ಹೌಸ್ ಆಫ್ ಲಾರ್ಡ್ಸ್‌ಗೆ ಕಳುಹಿಸಲಾಗುತ್ತದೆ, ಅಲ್ಲಿ ಮಸೂದೆ ಕುರಿತು ಚರ್ಚೆ ನಡೆಸಿದ ಬಳಿಕ ಕಾನೂನು ರೂಪ ನೀಡಲಾಗುತ್ತದೆ. ಅಷ್ಟಕ್ಕೂ ಈ ʻಅಸಿಸ್ಟೆಡ್ ಡೈಯಿಂಗ್ ಬಿಲ್ʼ (Assisted Dying Bill) ಪರಿಚಯಿಸಲು ಕಾರಣವೇನು? ಅನ್ನೋದನ್ನ ತಿಳಿಯೋದಕ್ಕೂ ಮುನ್ನ ದಯಾಮರಣ ಎಂದರೇನು ಎಂಬುದನ್ನು ತಿಳಿಯೋಣ.
ʻದಯಾಮರಣʼ ಎಂದರೇನು?
ಘೋರ ನೋವಿನಿಂದ ನರಳುತ್ತಿರುವ ವ್ಯಕ್ತಿಯ ಇಚ್ಛೆಯ ಅನುಸಾರ ನೀಡಲಾಗುವ ‘ಸಾವು’. ಅಂದ್ರೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಇನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಸಲ್ಲಿಸುತ್ತಾರೆ. ಕಾನೂನಿನ ಅಡಿಯಲ್ಲಿಯೇ ಅವರಿಗೆ ಸಾವನ್ನು ‘ಕರುಣಿಸಲಾಗುತ್ತದೆ’. ಆದರೆ, ಭಾರತ ಸಹಿತ ಹಲವು ದೇಶಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ಇದಕ್ಕೆ ಯುಥೆನೇಸಿಯಾ ಎಂಬ ಗ್ರೀಕ್ ಪದವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದರ ಅರ್ಥ ಒಳ್ಳೆಯ ಸಾವು ಎಂದು. 2013 ರಿಂದ, ಯುಕೆಯಲ್ಲಿ ದಯಾಮರಣ ಅನುಮತಿಸಲು ಕನಿಷ್ಠ ಮೂರು ಮಸೂದೆಗಳನ್ನು ಪರಿಚಯಿಸಲಾಗಿದೆ. ಆದ್ರೆ ಕಾನೂನಾಗಿ ಅಧಿಕೃತಗೊಂಡಿಲ್ಲ. ಒಂದು ವೇಳೆ ಮತ್ತೊಬ್ಬರ ಸಹಾಯದಿಂದ ದಯಾಮರಣ ಹೊಂದಿದರೆ, ಸಹಾಯ ಮಾಡಿದವರಿಗೆ 14 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿಗೆ ಇದೆ.
ಮಸೂದೆ ಏನು ಹೇಳುತ್ತದೆ?
ಸ್ವಂತ ಮರಣಕ್ಕೆ ಇಚ್ಚಿಸುವ ಯಾವುದೇ ವ್ಯಕ್ತಿ 18 ವರ್ಷಕ್ಕಿಂತ ಮೇಲ್ಪಟ್ಟು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದು, ತನ್ನಿಂದ ಬದುಕಲು ಸಾಧ್ಯವಾಗುವುದೇ ಇಲ್ಲ ಅನ್ನೂ ಹಂತಕ್ಕೆ ತಲುಪಿರಬೇಕು. ಅಲ್ಲದೇ ದೇಶದಲ್ಲಿ ದಯಾಮರಣ ಬಯಸುವವರು ಇಂಗ್ಲೆಂಡ್ ಅಥವಾ ವೇಲ್ಸ್‌ನಲ್ಲಿ ಕನಿಷ್ಠ 1 ವರ್ಷ ವಾಸವಿರಬೇಕು.
ಪ್ರಕ್ರಿಯೆ ಹೇಗೆ ನಡೆಯುತ್ತೆ?
ಮೊದಲು ವೈದ್ಯರ ಷರತ್ತುಗಳಿಗೆ ಒಪ್ಪಿ ಆತ ಸಹಿ ಹಾಕಬೇಕು. ಷರತ್ತುಗಳನ್ನು ಪೂರ್ಣಗೊಳಿಸಿದ ನಂತರ ವೈದ್ಯರು ಆತನ ದೇಹಸ್ಥಿತಿ ಪರಿಶೀಲಿಸುತ್ತಾರೆ. ಒಂದು ವೇಳೆ ವೈದ್ಯರು ದಯಾಮರಣಕ್ಕೆ ನಿರಾಕರಿಸಿದ್ರೆ ಮತ್ತೊಬ್ಬ ವೈದ್ಯರಿಗೆ ಸಂತ್ರಸ್ತನು ತನ್ನ ಮನವಿ ಸಲ್ಲಿಸಬಹುದು. ಇಷ್ಟಕ್ಕೆ ಮುಗಿಯುವುದಿಲ್ಲ, ವೈದ್ಯರು ದಯಾಮರಣಕ್ಕೆ ಸಂಪೂರ್ಣ ಒಪ್ಪಿ ದೃಢೀಕರಿಸಿದ ನಂತರ ಅದನ್ನು ಲಂಡನ್‌ನಲ್ಲಿನ ಹೈಕೋರ್ಟ್‌ಗೆ ಕಳುಹಿಸಲಾಗುತ್ತದೆ. ರೋಗಿಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದು ಕೋರ್ಟ್ ದೃಢೀಕರಿಸಿದ ನಂತರವಷ್ಟೇ ಮುಂದಿನ 7 ಅಥವಾ 14 ದಿನಗಳಲ್ಲಿ ರೋಗಿಯ ಇಚ್ಛೆಯನ್ನು ಪೂರೈಸಲಾಗುತ್ತದೆ.
ವಿರೋಧ ಏಕೆ?
ಯುಕೆ ನಲ್ಲಿ ದಯಾಮರಣ ಕಾನೂನು ಪರಿಚಯಿಸಲು ಕೆಲವರಿಂದ ವಿರೋಧವೂ ಇದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಯುವಕರ ಸಂಖ್ಯೆಗಿಂತ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. ಹಾಗಾಗಿ ಇಂತಹ ಕಾನೂನನ್ನು ಜಾರಿಗೊಳಿಸಿದ್ರೆ ದುರ್ಬಲರಾದವರು, ವಯಸ್ಸಾದ ವ್ಯಕ್ತಿಗಳಿಗೆ ಒತ್ತಾಯಪೂರ್ವಕವಾಗಿ ದಯಾಮರಣಕ್ಕೆ ಸಹಿ ಮಾಡಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಮಸೂದೆ ಜಾರಿಗೆ ಬೇಡ ಎಂದು ಕೆಲವರು ವಿರೋಧಿಸಿದ್ದಾರೆ.
ಭಾರತದಲ್ಲಿ ಮೊದಲ ದಯಾಮರಣ ಯಾವಾಗ?
ಅರುಣಾ ಶಾನುಬಾಗ್ ಅವರದ್ದು ಭಾರತದ ಮೊದಲ ದಯಾಮರಣ ಪ್ರಕರಣ. 1973ರಲ್ಲಿ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾದ ಅರುಣಾ ಅವರು 42 ವರ್ಷ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. 2015ರಲ್ಲಿ ಅವರು ಮೃತಪಟ್ಟರು. ಅರುಣಾ ಅವರಿಗೆ ಬಲವಂತವಾಗಿ ಆಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು 2011ರಲ್ಲಿ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಬಳಿಕ ದಯಾಮರಣಕ್ಕೆ ಅವಕಾಶ ಕೊಟ್ಟಿತ್ತು. ಜೀವನಕ್ಕೆ ಮರಳುವುದು ಸಾಧ್ಯವೇ ಇಲ್ಲ ಎಂಬಂತಹ ರೋಗಿಗಳಿಗೆ ದಯಾಮರಣದ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಒರೆಗಾನ್‌ನಲ್ಲಿ ವಿಷ ಔಷಧಿ:
ಅಮೆರಿಕದ ಒರೆಗಾನ್ ರಾಜ್ಯದಲ್ಲಿ ‘ಒರೆಗಾನ್‌ನ ಘನತೆವೆತ್ತ ಸಾವು ಕಾಯ್ದೆ’ (ಡಿಡಬ್ಲ್ಯೂಡಿಎ)ಯನ್ನು 1997ರಲ್ಲಿ ಶಾಸನಬದ್ಧಗೊಳಿಸಲಾಯಿತು. ಈ ಕಾಯಿದೆಯ ಪ್ರಕಾರ, ಮಾರಕ ಅನಾರೋಗ್ಯಕ್ಕೆ ತುತ್ತಾದ ಒರೆಗಾನ್‌ನ ಮಂದಿ ತಮ್ಮ ವೈದ್ಯರಿಂದ ವಿಷಕಾರಿ ಔಷಧ ಪಡೆದು, ಅದನ್ನು ಸ್ವಯಂ ನುಂಗಿ ಸಾಯುವುದಕ್ಕೆ ಅವಕಾಶ ನೀಡಲಾಯಿತು. ಈ ಕಾನೂನು ಜಾರಿಗೆ ಬಂದ ದಿನದಿಂದ ಇದುವರೆಗೆ ಈ ರಾಜ್ಯದಲ್ಲಿ 1,173 ಮಂದಿ ಡಿಡಬ್ಲ್ಯೂಡಿಎ ಅಡಿ ವಿಷಯುಕ್ತ ಔಷಧಗಳನ್ನು ತಮ್ಮ ವೈದ್ಯರಿಂದ ಬರೆಸಿಕೊಂಡಿದ್ದಾರೆ. ಇವರಲ್ಲಿ ಈ ಔಷಧಗಳನ್ನು ಚುಚ್ಚಿಕೊಂಡು 752 ಸತ್ತಿದ್ದಾರೆ. 2013ನೇ ಇಸವಿಯೊಂದರಲ್ಲೇ 122 ಮಂದಿ ವಿಷ ಔಷಧಿ ಚೀಟಿ ಬರೆಸಿಕೊಂಡಿದ್ದಾರೆ. 2014ರ ಜ.22ರವರೆಗೆ ಇವರಲ್ಲಿ 71 ಜನರು ಈ ಔಷಧಗಳನ್ನು ನುಂಗಿ ಮರಣ ಹೊಂದಿದ್ದಾರೆ. ಅಧ್ಯಕ್ಷ ಜಾರ್ಜ್ ಬುಷ್ ವಿರೋಧದ ನಡುವೆಯೂ ಈ ಕಾಯ್ದೆಯನ್ನು ಅಮೆರಿಕದ ಸುಪ್ರೀಂ ಕೊರ್ಟ್ 2006ರಲ್ಲಿ ಎತ್ತಿ ಹಿಡಿದಿತ್ತು. ಇದೇ ರೀತಿಯ ಕಾಯ್ದೆ ಒರೆಗಾನ್‌ನ ಪಕ್ಕದ ರಾಜ್ಯ ವಾಷಿಂಗ್ಟನ್‌ನಲ್ಲೂ 2008ರಲ್ಲಿ ಅನುಷ್ಠಾನಗೊಂಡಿತು.
ಬೇರೆ ಬೇರೆ ದೇಶಗಳ ಕಾನೂನು ಹೇಗಿದೆ?
ನೆದರ್‌ಲ್ಯಾಂಡ್ಸ್‌ನಲ್ಲಿ ಒಬ್ಬ ರೋಗಿಯ ಮನವಿಯನ್ನು ಆಧರಿಸಿ ಆತನ ಬದುಕನ್ನು ಕೊನೆಗೊಳಿಸುವ ಅಧಿಕಾರ ವೈದ್ಯರಿಗೆ ಇದೆ. ಇದರಲ್ಲಿ ಸ್ವ ಪ್ರೇರಿತ, ಸ್ವಪ್ರೇರಿತವಲ್ಲದ ಹಾಗೂ ಸ್ವಪ್ರೇರಣೆಗೆ ವಿರುದ್ಧವಾದ ಎಂಬ ಮೂರು ಪ್ರತ್ಯೇಕ ವಿಭಾಗಗಳಿವೆ. ಸ್ವಪ್ರೇರಿತ ದಯಾಮರಣಕ್ಕೆ ಅಮೆರಿಕ ಹಾಗೂ ಕೆನಡಾದ ಕೆಲವು ಭಾಗಗಳಲ್ಲಿ ಅವಕಾಶ ಇದೆ. ಬೆಲ್ಜಿಯಂ. ಲಕ್ಸಂಬರ್ಗ್, ಸ್ವಿಜರ್‌ಲೆಂಡ್, ಎಸ್ಟೋನಿಯ, ಅಲ್ಬೇನಿಯಾ ಮುಂತಾದೆಡೆ ದಯಾಮರಣಕ್ಕೆ ಕಾನೂನಿನ ಮನ್ನಣೆ ಇದೆ.
ಲಂಡನ್: ಪತಿಯೊಂದಿಗೆ ಯುಕೆಯಲ್ಲಿ ನೆಲೆಸಿದ್ದ ದೆಹಲಿಯ ಭಾರತೀಯ ಮಹಿಳೆ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಬಗ್ಗೆ ಮಹಿಳೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದು, ಪತಿ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ.
ಹರ್ಷಿತಾ ಬ್ರೆಲ್ಲಾ ಕೊಲೆಯಾದ ಮಹಿಳೆ. ಈ ವರ್ಷ ಮಾರ್ಚ್ 22 ರಂದು ಪಂಕಜ್ ಲಾಂಬಾ ಎಂಬಾತನನ್ನು ವಿವಾಹವಾಗಿದ್ದರು. ‘ಮದುವೆ ಸಂದರ್ಭದಲ್ಲಿ ಲಾಂಬಾ ಕುಟುಂಬಕ್ಕೆ ಚಿನ್ನ ಮತ್ತು ಹಣ ನೀಡಿದ್ದರೂ ವರದಕ್ಷಿಣೆಗಾಗಿ ಹರ್ಷಿತಾಗೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆಂದು’ ಎಂದು ಆಕೆಯ ಅಕ್ಕ ಸೋನಿಯಾ ಬ್ರೆಲ್ಲಾ ಆರೋಪಿಸಿದ್ದಾರೆ.
ನ.10 ರಂದು ಹರ್ಷಿತಾ ಕೊಲೆಯಾಗಿದೆ. ಅದೇ ದಿನ, ಆಕೆ ಕಾರ್ಬಿಯ ಬೋಟಿಂಗ್ ಸರೋವರದ ಬಳಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ ಎಂದು ನಾರ್ಥಾಂಪ್ಟನ್‌ಶೈರ್ ಪೋಲೀಸರು ತಿಳಿಸಿದ್ದಾರೆ.
ಈ ಹಿಂದೆ ಆಕೆಯ ತಂದೆ ಸಬೀರ್ ಬ್ರೆಲ್ಲಾ ಕೂಡ, ಲಂಬಾ ಮತ್ತು ಆತನ ಕುಟುಂಬ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು. ಆಕೆಗೆ ಥಳಿಸಿ ಹಣ ತರುವಂತೆ ಪೀಡಿಸುತ್ತಿದ್ದ. ನಿತ್ಯ ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆಕೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಹೀಗಿದ್ದರೂ, ನನ್ನ ಪುತ್ರಿಯ ಬ್ಯಾಂಕ್ ಖಾತೆಗಳನ್ನು ಆತನೇ ನಿರ್ವಹಿಸುತ್ತಿದ್ದ ಎಂದು ಅಳಿಯನ ವಿರುದ್ಧ ಸಬೀರ್ ಆರೋಪ ಮಾಡಿದ್ದಾರೆ.
ಹರ್ಷಿತಾ ಅವರೊಂದಿಗಿನ ತನ್ನ ಕೊನೆಯ ವೀಡಿಯೊ ಕರೆಯನ್ನು ನೆನಪಿಸಿಕೊಂಡ ಆಕೆ ಸಹೋದರಿ, ‘ನ.10 ರಂದು ನಾವು ಹರ್ಷಿತಾಳೊಂದಿಗೆ ಕೊನೆಯ ವೀಡಿಯೊ ಕರೆ ಮಾಡಿದ್ದು. ಪತಿಗಾಗಿ ಅಡುಗೆ ಮಾಡ್ತಿದ್ದೇನೆ ಅಂತ ಹೇಳಿದ್ದಳೆಂದು’ ನೆನಪಿಸಿಕೊಂಡಿದ್ದಾರೆ.
ನವದೆಹಲಿ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರಿಗೆ ಯುಕೆ (United Kingdom) ರಾಜಾಶ್ರಯ ನೀಡಲು ಒಪ್ಪುವರೆಗೂ ಅವರಿಗೆ ಭಾರತ (India) ಮಧ್ಯಂತರ ರಾಜಾಶ್ರಯ ನೀಡಲಿದೆ.
ಸೋಮವಾರ ಸಂಜೆ ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುನೆಲೆಗೆ ಹಸೀನಾ ಬಂದಿಳಿದಿದ್ದಾರೆ. ಹಿಂಡನ್ ವಾಯುನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಅವರು ಶೇಖ್ ಹಸೀನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದನ್ನೂ ಓದಿ: ದೇಶ ತೊರೆದ ಶೇಖ್ ಹಸೀನಾಗೆ ಭಾರತ ಆಶ್ರಯ – ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತರಿಂದ ಸಂಭ್ರಮಾಚರಣೆ
ಸದ್ಯ ಬಾಂಗ್ಲಾದೇಶ ಏರ್‌ಫೋರ್ಸ್ ಸಿ-130 ಮಿಲಿಟರಿ ಟ್ರಾನ್ಸ್‌ಪೋರ್ಟ್ ವಿಮಾನ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ. ಯಾವಾಗ ಶೇಖ್ ಹಸೀನಾ ಯುಕೆಗೆ ತೆರಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಇಂದು ಮಧ್ಯಾಹ್ನದ ನಂತರ ಯುಕೆಗೆ ಹೋಗಲಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೆ ಇನ್ನೂ ರಾಜಾಶ್ರಯ ನೀಡುವ ಬಗ್ಗೆ ಯುಕೆ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಯುಕೆ ಅನುಮತಿ ನೀಡುವವರೆಗೂ ಹಸೀನಾ ಭಾರತದಲ್ಲೇ ಇರಲಿದ್ದಾರೆ.
ಯುಕೆಗೆ ರಾಜಾಶ್ರಯ ಹೇಗೆ?
ಬಾಂಗ್ಲಾದೇಶ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಇಬ್ಬರು ಹಸೀನಾ ಮತ್ತು ರೆಹನಾ ಇಬ್ಬರು ಪುತ್ರಿಯರು. ರೆಹನಾ ಅವರ ಪುತ್ರಿ ಟುಲಿಪ್ ಸಿದ್ದಿಕಿ ಲೇಬರ್ ಪಕ್ಷದ ನಾಯಕಿ ಮತ್ತು ಸಂಸತ್ ಸದಸ್ಯರಾಗಿದ್ದಾರೆ. ಈ ಕಾರಣಕ್ಕೆ ಹಸೀನಾ ಬ್ರಿಟನ್‌ಗೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಪರಿಸ್ಥಿತಿಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ವಿವರಿಸಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿ ಮಾಡುತ್ತಾರೆಯೇ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಕೂಡ ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. ಸಂಸತ್ತಿನ ಹೊರಭಾಗದಲ್ಲಿ ಇಬ್ಬರೂ ಸಂಕ್ಷಿಪ್ತವಾಗಿ ಮಾತನಾಡಿದರು ಎಂದು ಕಾಂಗ್ರೆಸ್ ತಿಳಿಸಿದೆ.
ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಕಾರಣ ಏನು?
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ 56% ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ಶೇ.30 ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸೇನೆ, ವಿಪಕ್ಷಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದರಿಂದ ಆಕ್ರೋಶ ಕಟ್ಟೆಯೊಡೆದಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.
ಲಂಡನ್‌ನಲ್ಲಾದ (London) ಸೋಂಕಿತರ ರಕ್ತದ ಹಗರಣಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಈ ಹಗರಣಕ್ಕೆ ಬಲಿಯಾದವರು ಒಬ್ಬರು ಇಬ್ಬರಲ್ಲ. ಬರೋಬ್ಬರಿ 3,000 ಮಂದಿ. ವೈದ್ಯಕೀಯ ಲೋಕದ ನಿರ್ಲಕ್ಷ್ಯಕ್ಕೆ ಸಾವಿರಾರು ಜನರ ಬದುಕು ಬರಡಾಯಿತು. ಇನ್ನೂ ಬಾಳಬೇಕಿದ್ದ ನೂರಾರು ಮಕ್ಕಳ ಬದುಕು ಕಮರಿತು. ಹೌದು, 70-80 ರ ದಶಕದಲ್ಲಿ ಲಂಡನ್‌ನಲ್ಲಾದ ಈ ಹಗರಣವು ಈಗ ಬೆಳಕಿಗೆ ಬಂದಿದೆ. ಈ ಹಗರಣದಿಂದ ವೈದ್ಯಲೋಕದ ವೈಫಲ್ಯ ಜಗಜ್ಜಾಹೀರಾಗಿದೆ.
ತನಿಖಾ ವರದಿಯಲ್ಲೇನಿದೆ?
ಮೇ 20 ರಂದು ಯುನೈಟೆಡ್ ಕಿಂಗ್‌ಡಮ್‌ನ (United Kingdom) ಸೋಂಕಿತ ರಕ್ತದ ಹಗರಣದ ತನಿಖಾ ವರದಿ ಬಿಡುಗಡೆಯಾಯಿತು. ಸಾವಿರಾರು ಜನರು ಹೆಚ್‌ಐವಿ (HIV) ಅಥವಾ ಹೆಪಟೈಟಿಸ್‌ಗೆ (Hepatitis C) ತುತ್ತಾಗಲು ಕಾರಣವಾದ ಹಗರಣ ಇದು ಎಂಬುದು ಬಯಲಾಯಿತು. ಈ ಹಗರಣವು ರಾಜ್ಯ-ನಿಧಿಯ ರಾಷ್ಟ್ರೀಯ ಆರೋಗ್ಯ ಸೇವೆಯ (NHS) ಇತಿಹಾಸದಲ್ಲಿ ಮಾರಣಾಂತಿಕ ಚಿಕಿತ್ಸಾ ವಿಪತ್ತುಗಳಲ್ಲಿ ಒಂದು ಎಂಬ ಕೆಟ್ಟ ದಾಖಲೆ ಬರೆಯಿತು. ಬ್ರಿಯಾನ್ ಲ್ಯಾಂಗ್‌ಸ್ಟಾಫ್ ನೇತೃತ್ವದಲ್ಲಿ ತನಿಖೆ ನಡೆಯಿತು. ಹಗರಣವು 30,000 ಮಂದಿ ಆರೋಗ್ಯ ಸಮಸ್ಯೆ ಹಾಗೂ 3,000 ಮಂದಿ ಸಾವಿಗೆ ಕಾರಣವಾಯಿತು ಎಂಬುದನ್ನು ವರದಿ ಬಹಿರಂಗಪಡಿಸಿದೆ. ಇಂತಹ ದೊಡ್ಡ ದುರಂತವನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸಿತು ಎಂದು ಸಹ ದೂರಲಾಗಿದೆ. ‘ಸತ್ಯವನ್ನು ಮರೆಮಾಚುವುದು ಸಂಯೋಜಿತ ಪಿತೂರಿಗಿಂತ ಹೆಚ್ಚು ಅಪಾಯಕಾರಿ’ ಎಂದು ಬ್ರಿಯಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?
ಏನಿದು ಸೋಂಕಿತ ರಕ್ತ ಹಗರಣ?
1970 ಮತ್ತು 1980 ರ ದಶಕಗಳಲ್ಲಿ ಬ್ರಿಟನ್‌ನಲ್ಲಿ ಸೋಂಕಿತ ರಕ್ತ ವರ್ಗಾವಣೆ ಹಗರಣ (Infected Blood Scandal) ನಡೆಯಿತು. ಆಗಿನ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವ ಹಿಮೋಫಿಲಿಯಾ ಸಮಸ್ಯೆ ಬ್ರಿಟನ್‌ನಾದ್ಯಂತ ಜನರನ್ನು ಭಾದಿಸಿತು. ಈ ಸಮಸ್ಯೆ ವೈದ್ಯಲೋಕವನ್ನು ಕಂಗೆಡಿಸಿತು. ಆಗ ಬ್ರಿಟನ್‌ನ ಆರೋಗ್ಯ ಸಂಸ್ಥೆ (ಎನ್‌ಹೆಚ್‌ಎಸ್) ‘ಫ್ಯಾಕ್ಟರ್ 8’ ಎಂಬ ಎಂಬ ವಿಧಾನದ ಮೂಲಕ ಚಿಕಿತ್ಸೆ ನೀಡಲು ಮುಂದಾಯಿತು. ಚಿಕಿತ್ಸೆ ಪ್ರಕಾರ, ಹತ್ತಾರು ದಾನಿಗಳಿಂದ ಪ್ಲಾಸ್ಮಾಗಳನ್ನು ಒಟ್ಟುಗೂಡಿಸಿ ರೋಗಿಗೆ ನಿಡಲಾಗುತ್ತಿತ್ತು. ಹಿಂದಿನ ಚಿಕಿತ್ಸೆಗಳಿಗಿಂತ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಹಾಗಾಗಿ, ಇದನ್ನ ‘ವಂಡರ್ ಡ್ರಗ್’ ಚಿಕಿತ್ಸೆ ಎಂದು ಬ್ರಿಟನ್ ವೈದ್ಯರು ಕರೆದರು.
ಏನಿದು ಹಿಮೋಫೀಲಿಯಾ?
ಇದೊಂದು ಅಪರೂಪದ ಆನುವಂಶಿಕ ಸಮಸ್ಯೆ. ಹಿಮೋಫೀಲಿಯಾಗೆ ಒಳಗಾದವರಲ್ಲಿ ರಕ್ತ ಹೆಪ್ಪುಗಟ್ಟಲು ಕಷ್ಟವಾಗುತ್ತದೆ. ರಕ್ತ ತೆಳುವಾಗುವ ಸಮಸ್ಯೆ ಇರುತ್ತದೆ. ಹಿಮೋಫೀಲಿಯಾದಲ್ಲಿ ಎರಡು ರೀತಿ ಇದೆ. ಹಿಮೋಫೀಲಿಯಾ-ಎ ಹೊಂದಿರುವವರ ರಕ್ತದಲ್ಲಿ ಹೆಪ್ಪುಗಟ್ಟುವ ಅಂಶವಾದ ಫ್ಯಾಕ್ಟರ್-8 ರ ಕೊರತೆ ಇರುತ್ತದೆ. ಹಿಮೋಫೀಲಿಯಾ-ಬಿ ಸಮಸ್ಯೆ ಇರುವವರಿಗೆ ಫ್ಯಾಕ್ಟರ್-9 ರ ಕೊರತೆ ಇರುತ್ತದೆ. ಇದನ್ನೂ ಓದಿ: ನಿಮ್ಮ ಡಿಜಿಟಲ್ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?
ರೋಗಿಗಳಿಗೆ ಫ್ಯಾಕ್ಟರ್-8 ಚಿಕಿತ್ಸೆ ನೀಡಲು ಸಾಕಷ್ಟು ಪ್ರಮಾಣದ ರಕ್ತದ ಅಗತ್ಯವಿತ್ತು. ಆಗ ಅಮೆರಿಕದಿಂದ ಬ್ರಿಟನ್ ರಕ್ತ ತರಿಸಿಕೊಳ್ಳಲು ಮುಂದಾಯಿತು. ದಾನ ಮಾಡಿದ್ದರಲ್ಲಿ ಮಾದಕ ವ್ಯಸನಿಗಳು, ಕೈದಿಗಳು, ಅಪಾಯಕಾರಿ ಸೋಂಕು ಹೊಂದಿದ ವ್ಯಕ್ತಿಗಳ ರಕ್ತವೇ ಹೆಚ್ಚಿನ ಪ್ರಮಾಣದಲ್ಲಿತ್ತು. ಪರೀಕ್ಷೆ ಮಾಡದೇ ಇದೇ ರಕ್ತವನ್ನು ಬಳಸಿ ಜನರಿಗೆ ಚಿಕಿತ್ಸೆ ನೀಡಲಾಯಿತು. ಒಬ್ಬ ದಾನಿ ನೀಡಿದ ರಕ್ತದಲ್ಲಿ ಸೋಂಕು ಇದ್ದರೆ, ಅದು ಇಡೀ ಬ್ಯಾಚ್ ಅನ್ನು ಕಲುಷಿತಗೊಳಿಸುವ ಅಪಾಯವಿತ್ತು. ಇಂತಹ ರಕ್ತ ಪಡೆದ ಸಾವಿರಾರು ಮಂದಿ ಸೋಂಕಿಗೆ ತುತ್ತಾದರು.
ಸೋಂಕಿತ ರಕ್ತ ಪಡೆದವರಿಗೆ ಹೆಚ್‌ಐವಿ, ಹೆಪಟೈಟಿಸ್
ತನಿಖಾ ವರದಿಯ ಪ್ರಕಾರ 30,000 ಜನರು ಹೆಚ್‌ಐವಿ, ಹೆಪಟೈಟಿಸ್ ಸಿ ಗೆ ತುತ್ತಾದರು. ರಕ್ತ ದಾನ ಮಾಡಿದವರಲ್ಲಿ ಹೆಚ್ಚಾಗಿ ಹೆಪಟೈಟಿಸ್ ಸಿ ಸೋಂಕು ಇತ್ತು. 380 ಮಕ್ಕಳು ಹೆಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ. ಹೆರಿಗೆ ಅಥವಾ ಶಸ್ತ್ರಚಿಕಿತ್ಸೆಗಾಗಿ ರಕ್ತದ ಅಗತ್ಯವಿರುವ ಜನರಿಗೂ ಸೋಂಕಿತ ರಕ್ತವನ್ನೇ ನೀಡಲಾಗಿತ್ತು.
ಹೆಚ್‌ಐವಿ ಸೋಂಕಿಗೆ ಒಳಗಾದವರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಮರಣ ಹೊಂದಿದರು. ಬದುಕಿದ್ದಾಗ ಇವರ ಸಂಪರ್ಕ ಹೊಂದಿದವರಿಗೂ ಸೋಂಕು ವರ್ಗಾವಣೆಯಾಗಿದೆ. ಆ ಸಂಖ್ಯೆ ಎಷ್ಟು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಇದನ್ನೂ ಓದಿ: ಫಸ್ಟ್ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್ ಸೂಟ್ ಫ್ಯಾಶನ್ ಶೋ!
ಬ್ರಿಟನ್ ದೇಶವನ್ನೇ ಹೆಚ್ಚು ಕಾಡಿದ್ದೇಕೆ?
70 ರ ದಶಕದಲ್ಲಿ ಹಿಮೋಫೀಲಿಯಾ ಬ್ರಿಟನ್ ದೇಶವನ್ನು ಹೆಚ್ಚು ಕಾಡಿತ್ತು. ಜಪಾನ್, ಸ್ಪೇನ್ ದೇಶಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡರೂ, ಸೋಂಕು ತಗುಲುವ ಪ್ರಮಾಣ ಕಡಿಮೆಯಿತ್ತು. ಅಲ್ಲದೇ ಬ್ರಿಟನ್ ಫ್ಯಾಕ್ಟರ್-8 ಎಂಬ ಹೊಸ ಚಿಕಿತ್ಸಾ ವಿಧಾನವನ್ನು ಪರಿಚಯಿಸಿದ್ದು, ದೊಡ್ಡ ದುರಂತಕ್ಕೆ ಕಾರಣವಾಯಿತು. ಆದರೆ ಜಪಾನ್, ಸ್ಪೇನ್ ದೇಶಗಳು ಹಳೆ ಚಿಕಿತ್ಸಾ ವಿಧಾನವನ್ನೇ ಮುಂದುವರಿಸಿದ್ದರಿಂದ ಹೆಚ್ಚಿನ ಸಮಸ್ಯೆ ಆಗಲಿಲ್ಲ. 90 ರ ದಶಕಕದವರೆಗೂ ಬ್ರಿಟನ್‌ನಲ್ಲಿ ಹೆಪಟೈಟಿಸ್-ಸಿ ಪತ್ತೆಗಾಗಿ ಸೋಂಕಿಗೆ ಸ್ಕ್ರೀನಿಂಗ್ ಪರೀಕ್ಷೆ ಕೂಡ ಲಭ್ಯವಿರಲಿಲ್ಲ. ಇದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಲು ಕಾರಣವಾಗಿತ್ತು.
ಸರ್ಕಾರದ ಪ್ರತಿಕ್ರಿಯೆ ಏನು?
ಯುಕೆನಲ್ಲಿ ದೊಡ್ಡ ದುರಂತಕ್ಕೆ ಕಾರಣವಾದ ಹಗರಣದ ವಿಚಾರವಾಗಿ ಬ್ರಿಟನ್‌ನ ಪ್ರಧಾನಿ ರಿಷಿ ಸುನಾಕ್ ದೇಶದ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ. ವೈದ್ಯಕೀಯ ಲೋಕದ ಅತಿ ದೊಡ್ಡ ಹಗರಣ ಇದಾಗಿದ್ದು, ಬ್ರಿಟನ್ ಸರ್ಕಾರ ಇದರಿಂದ ತಲೆ ತಗ್ಗಿಸುವಂತಾಗಿದೆ. ಈ ಘಟನೆಗೆ ನಾನು ಪೂರ್ಣ ಹೃದಯದಿಂದ ನಿಸ್ಸಂದಿಗ್ಧವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದಿದ್ದಾರೆ.
ಅಂದಿನಿಂದ ಇಲ್ಲಿವರೆಗೆ ಏನಾಗಿದೆ?
1980 ರ ದಶಕದ ಉತ್ತರಾರ್ಧದಲ್ಲಿ ಸಂತ್ರಸ್ತರು ಮತ್ತು ಅವರ ಕುಟುಂಬಗಳು ವೈದ್ಯಕೀಯ ನಿರ್ಲಕ್ಷ್ಯದ ಆಧಾರದ ಮೇಲೆ ಪರಿಹಾರ ನೀಡಬೇಕು ಎಂದು ಬ್ರಿಟನ್‌ನಾದ್ಯಂತ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. 1990 ರ ದಶಕದ ಆರಂಭದಲ್ಲಿ ಹೆಚ್‌ಐವಿ ಸೋಂಕಿತರಿಗೆ ಏಕಕಾಲದಲ್ಲಿ ಪರಿಹಾರ ನೀಡಲು ಸರ್ಕಾರವು ಚಾರಿಟಿಯನ್ನು ಸ್ಥಾಪಿಸಿತು. ಆದರೆ ಸಮಸ್ಯೆ ಅಲ್ಲಿಗೆ ಬಗೆಹರಿಯಲಿಲ್ಲ. ಸರ್ಕಾರದ ವಿರುದ್ಧ ಅಭಿಯಾನಗಳು ಪ್ರಾರಂಭವಾದವು.
ಪ್ರಕರಣ ಸಂಸತ್ ಮೆಟ್ಟಿಲೇರಿ ತನಿಖೆಯ ಒತ್ತಾಯ ಕೇಳಿಬಂತು. ಕೊನೆಗೆ 2018 ರ ಫೆಬ್ರವರಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಸರ್ ಬ್ರಿಯಾನ್ ಲ್ಯಾಂಗ್‌ಸ್ಟಾಫ್ ಅವರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಲಾಯಿತು. 2018 ರ ಜುಲೈ ತಿಂಗಳಿಂದ ತನಿಖೆ ಪ್ರಾರಂಭವಾಯಿತು. 2019 ರ ಏಪ್ರಿಲ್‌ನಿಂದ 2022 ರ ಡಿಸೆಂಬರ್ ವರೆಗೆ ಸೋಂಕಿತ ಮತ್ತು ಬಾಧಿತರಿಂದ ಸಾರ್ವಜನಿಕ ಸಾಕ್ಷ್ಯವನ್ನು ತನಿಖಾ ತಂಡ ಸಂಗ್ರಹಿಸಿತು. 2023 ರ ಫೆಬ್ರವರಿ 3 ರಲ್ಲಿ ಮೌಖಿಕವಾಗಿ ವರದಿ ಒಪ್ಪಿಸಲಾಯಿತು.
ಲಂಡನ್: 20 ವರ್ಷದಿಂದ ಸರಿಯಾದ ಸಂಗಾತಿ (Partner) ಸಿಗದ ಹಿನ್ನೆಲೆ ಮಹಿಳೆಯೊಬ್ಬರು (Woman) ಸುಮಾರು 10 ಲಕ್ಷ ರೂ. ಖರ್ಚು ಮಾಡಿ ತನ್ನನ್ನು ತಾನೇ ಮದುವೆಯಾದ (Marriage) ಘಟನೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ (UK) ನಡೆದಿದೆ.
ಸಾರಾ ವಿಲ್ಕಿನ್ಸನ್ (42) ತನ್ನನ್ನು ತಾನು ಮದುವೆಯಾಗಿ (Self Marriage) ಸಂಗಾತಿಗಾಗಿ ಕಾಯುವ ಜೀವನವನ್ನು ಕೊನೆಗಾಣಿಸಿದ್ದಾರೆ. ತನ್ನ ವಿವಾಹದಿಂದ ತುಂಬಾ ಸಂತೋಷವಾಗಿದ್ದು, ಅದ್ಧೂರಿ ಮದುವೆಯ ಬಯಕೆ ಈಡೇರಿದೆ ಎಂದು ಸಾರಾ ತಿಳಿಸಿದ್ದಾರೆ. ತಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಾರಾ ತನ್ನನ್ನು ಮದುವೆಯಾಗಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ಇಬ್ಬರು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಸುಮಾರು 40 ಬಂಧುಮಿತ್ರರ ಸಮ್ಮುಖದಲ್ಲಿ 14 ವ್ರತಗಳನ್ನು ಮಾಡಿ ಸಾರಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಅಲ್ಲದೇ ತನಗಾಗಿ ನಿಶ್ಚಿತಾರ್ಥದ ಉಂಗುರವನ್ನು (Engagement Ring) ಸಹಾ ಖರೀದಿಸಿದ್ದಾರೆ. ಈಕೆ ಸುಮಾರು 2 ದಶಕಗಳಿಂದ ಈ ದಿನಕ್ಕಾಗಿ ತಯಾರಿ ನಡೆಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್
ಕೋವಿಡ್ ಸಮಯದಲ್ಲಿ ಸಾರಾ 40ನೇ ವರ್ಷಕ್ಕೆ ಕಾಲಿಟ್ಟಿದ್ದು, ತನ್ನ ನಿಶ್ಚಿತಾರ್ಥಕ್ಕಾಗಿ ಡೈಮಂಡ್ ರಿಂಗ್ ಅನ್ನು ಖರೀದಿಸಿದ್ದರು. ಈ ವೇಳೆ ಸರಿಯಾದ ಸಂಗಾತಿಗಾಗಿ ಕಾಯುವ ಬದಲು ತನ್ನನ್ನು ತಾನು ಮದುವೆಯಾಗುವ ಆಲೋಚನೆಯನ್ನು ಸಾರಾ ಮಾಡಿದ್ದರು. ಇದನ್ನೂ ಓದಿ: 26ನೇ ವರ್ಷಕ್ಕೆ ಬದುಕು ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ!
ಈ ಸಮಾರಂಭವು ಅಧಿಕೃತ ವಿವಾಹವಾಗಿರಲಿಲ್ಲ. ಆದರೆ ನಾನು ನನ್ನ ಮದುವೆಯ ದಿನವನ್ನು ಹೊಂದಿದ್ದೇನೆ. ನನ್ನ ಪಕ್ಕದಲ್ಲಿ ನನ್ನ ಸಂಗಾತಿ ಇಲ್ಲದಿರಬಹುದು. ಆದರೆ ವಿವಾಹವನ್ನು ಯಾಕೆ ತಪ್ಪಿಸಿಕೊಳ್ಳಲಿ? ಈ ಹಣ ನನ್ನ ಮದುವೆಗೆಂದು ಕೂಡಿಟ್ಟಿದ್ದೆ. ಇಂದು ನನ್ನ ಬಯಕೆ ಈಡೇರಿದೆ ಎಂದು ಸಾರಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: 10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು
ಲಂಡನ್: ಪ್ರಯಾಣಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲಿ ಸೆಕ್ಸ್ ಮಾಡುತ್ತಿದ್ದ ವೇಳೆ ಜೋಡಿಯೊಂದು ಕ್ಯಾಬಿನ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಈಸಿಜೆಟ್ ವಿಮಾನದಲ್ಲಿ (EasyJet Flight) ಘಟನೆ ನಡೆದಿದ್ದು, ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಏನಿದೆ?
ವಿಮಾನದ ಸಿಬ್ಬಂದಿಯೊಬ್ಬರು ಶೌಚಾಲಯದ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಒಳಗಡೆಯಿಂದ ಬಾಗಿಲು ಲಾಕ್ ಆಗದ ಕಾರಣ ಅದು ಓಪನ್ ಆಗಿದೆ. ಆಗ ಒಳಗೆ ಒಬ್ಬ ಪುರುಷ ಮತ್ತು ಮಹಿಳೆ ವಿವಸ್ತ್ರಗೊಂಡ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ದೃಶ್ಯವನ್ನು ನೋಡಿ ಮುಜುಗರದಿಂದ ಸಿಬ್ಬಂದಿ ಪಕ್ಕಕ್ಕೆ ಸರಿಯುತ್ತಾರೆ. ಇತರೆ ಸಹ ಪ್ರಯಾಣಿಕರು ಸಹ ದೃಶ್ಯವನ್ನು ಕಂಡು ನಗುತ್ತಾರೆ. ಇದನ್ನೂ ಓದಿ: ಲಿಬಿಯಾದಲ್ಲಿ ಭೀಕರ ಪ್ರವಾಹಕ್ಕೆ 2,000ಕ್ಕೂ ಹೆಚ್ಚು ಮಂದಿ ಬಲಿ – 5 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ
ಸೆ.8 ರಂದು ಲುಟನ್‌ನಿಂದ ಇಬಿಜಾಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಹೀಗೆ ವರ್ತಿಸಿದ ಈ ಪ್ರಯಾಣಿಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ವಿಮಾನ ಪ್ರಯಾಣದ ವೇಳೆ ಲೈಂಗಿಕ ಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮದ ಬಗ್ಗೆ ಯುಕೆ ಕಾನೂನಿನಲ್ಲಿ ಉಲ್ಲೇಖವಿಲ್ಲ. ಆದರೆ ಲೈಂಗಿಕ ಅಪರಾಧಗಳ ಕಾಯಿದೆ 2004 ರ ಸೆಕ್ಷನ್ 71 ರ ಅಡಿಯಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಉದ್ದೇಶಪೂರ್ವಕವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಾಗಿದೆ. ಇದನ್ನೂ ಓದಿ: ರಸ್ತೆಯಲ್ಲಿ ನದಿಯಂತೆ ಉಕ್ಕಿ ಹರಿದ 22 ಲಕ್ಷ ಲೀಟರ್ ರೆಡ್ ವೈನ್