ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ UI ಸಿನಿಮಾ ದೇಶ- ವಿದೇಶದಲ್ಲಿ ಹವಾ ಜೋರಾಗಿದೆ. ಇದೀಗ ಯುಎಸ್‌ನ ಡಲ್ಲಾಸ್‌ನಲ್ಲಿ ನೆಲೆಸಿರುವ ಕನ್ನಡಿಗರು UI ಸಿನಿಮಾ ನೋಡಿ ಮೆಚ್ಚುಗೆ ಗಳಿಸಿದ್ದಾರೆ. ಉಪೇಂದ್ರ ನಟನೆ ಮತ್ತು ನಿರ್ದೇಶನಕ್ಕೆ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ:ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ತೆಲಂಗಾಣ ಸಿಎಂ ಆರೋಪಕ್ಕೆ ಅಲ್ಲು ಅರ್ಜುನ್ ಬೇಸರ

ಈಗಾಗಲೇ ಬಿಡುಗಡೆಯಾದ 2 ದಿನಗಳಲ್ಲಿ 37 ಕೋಟಿ ರೂ. ಬಾಚಿ ಮುನ್ನುಗ್ಗುತ್ತಿದೆ. ಇಂದು (ಡಿ.22) ಮೂರನೇ ದಿನವೂ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಹೀಗಿರುವಾಗ ಯುಸ್‌ನ ಡಲ್ಲಾಸ್ ನೆಲೆಸಿರುವ ಕನ್ನಡಿಗರು ಯುಐ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಭಿನ್ನವಾಗಿ ಮೂಡಿ ಬಂದಿರುವ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ನೀವು ಕೂಡ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

ಡಿ.20ರಂದು ರಿಲೀಸ್ ಯುಐ ಕೋಟಿಗಟ್ಟಲೇ ಕಲೆಕ್ಷನ್ ಮಾಡಿ ಬೇರೇ ಸಿನಿಮಾಗಳಿಗೆ ಠಕ್ಕರ್ ಕೊಡುತ್ತಿದೆ. UI ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ನಟ ಕೊಟ್ಟಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ UI ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.











‘ಯುಐ’ ವಾರ್ನರ್‌ಗೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಉಪೇಂದ್ರ ಅವರು ತುಂಬಾ ಕಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಅವರು 24/7 ಕೆಲಸ ಮಾಡಿದ್ದಾರೆ. ನಾನು ಮತ್ತು ಉಪೇಂದ್ರ ಒಟ್ಟಿಗೆ ಒಂದೇ ಸ್ಕೂಲ್‌ನಲ್ಲಿ ಓದಿದವರು. ಇಬ್ಬರೂ ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗಕ್ಕೆ ಬಂದಿದ್ದೇವೆ. ಅವರು ಉಪೇಂದ್ರ ಆಗುತ್ತಾರೆ, ನಾನು ಲಹರಿ ವೇಲು ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ.
ಇಂದು (ಡಿ.2) ನಡೆದ UI ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಮಾತನಾಡಿ, ‘ಕೂಲಿ’ (Coolie) ಸಿನಿಮಾದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಯುಐ ವಾರ್ನರ್ ಸಿದ್ಧವಾಗಿರಲಿಲ್ಲ. ಮುಂದಿನ ಶೆಡ್ಯೂಲ್‌ಗಾಗಿ ಸೆಟ್ ಹೋದಾಗ ರಜನಿಕಾಂತ್‌ಗೆ ‘ಯುಐ’ ವಾರ್ನರ್, ಗ್ಲಿಂಪ್ಸ್ ತೋರಿಸುತ್ತೇನೆ ಎಂದು ಉಪೇಂದ್ರ ಮಾತನಾಡಿದ್ದಾರೆ. ಇನ್ನೂ ಕೂಲಿ ಸಿನಿಮಾದಲ್ಲಿ ಉಪೇಂದ್ರಗೆ ಉತ್ತಮ ಪಾತ್ರ ಸಿಕ್ಕಿದೆ. ಪವರ್‌ಫುಲ್ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ.





