Tag: ಯುಎಸ್ ಅಧ್ಯಕ್ಷ

  • ದೇವರು ನನ್ನನ್ನು ಕಾಪಾಡಿದ: ಹಂತಕನ ಗುಂಡೇಟಿನಿಂದ ಬಚಾವಾದ ಟ್ರಂಪ್‌ ಮಾತು

    ದೇವರು ನನ್ನನ್ನು ಕಾಪಾಡಿದ: ಹಂತಕನ ಗುಂಡೇಟಿನಿಂದ ಬಚಾವಾದ ಟ್ರಂಪ್‌ ಮಾತು

    ವಾಷಿಂಗ್ಟನ್‌: ದೇವರು ನನ್ನನ್ನು ಕಾಪಾಡಿದ ಎಂದು ತಮ್ಮ ಹತ್ಯೆ ಯತ್ನದ ಕುರಿತು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

    ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದರು. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ದುಷ್ಕರ್ಮಿಯ ಗುಂಡೇಟಿನಿಂದ ಪೆಟ್ಟಾಗಿದ್ದ ಬಲ ಕಿವಿಯ ಮೇಲೆ ಬ್ಯಾಂಡೇಜ್ ಧರಿಸಿದ ಟ್ರಂಪ್ ಆಗಮಿಸಿದ್ದರು. ಗಾಡ್ ಬ್ಲೆಸ್ ಅಮೆರಿಕಾ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ‘ಯುಎಸ್‌ಎ, ಯುಎಸ್‌ಎ’ ಎಂಬ ಘೋಷಣೆಯೊಂದಿಗೆ ಟ್ರಂಪ್‌ ವೇದಿಕೆ ಪ್ರವೇಶಿಸಿದರು.

    ಯುನೈಟೆಡ್‌ ಸ್ಟೇಟ್ಸ್‌ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. 4 ತಿಂಗಳಲ್ಲಿ ನಾವು ನಂಬಲಾಗದ ವಿಜಯವನ್ನು ಸಾಧಿಸುತ್ತೇವೆ. ಎಲ್ಲಾ ಧರ್ಮಗಳು, ಜನರು ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುತ್ತೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

    ರ‍್ಯಾಲಿಯಲ್ಲಿ ಹತ್ಯೆಯ ಪ್ರಯತ್ನದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತು ಪ್ರೀತಿ ತೋರಿದ ಅಮೆರಿಕದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇವರು ಇದ್ದುದರಿಂದ ನಾನು ಸುರಕ್ಷಿತವಾಗಿರುತ್ತೇನೆ. ಗುಂಡುಗಳು ನಮ್ಮ ಮೇಲೆ ಹಾರುತ್ತಿದ್ದವು. ಆದರೆ ಸಾರ್ವಜನಿಕರು ನನ್ನನ್ನು ಪ್ರೀತಿಸುತ್ತಾರೆ. ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ. ನಾನು ಈ ರಾಷ್ಟ್ರದ ಅಭಿವೃದ್ಧಿಗೆ ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್

    ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್

    ವಾಷಿಂಗ್ಟನ್: ಯುಎಸ್‌ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಯಾವುದೇ ರೋಗ ಲಕ್ಷಣಗಳಿಲ್ಲದೇ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

    pm modi kamala harris

    ಕಮಲಾ ಹ್ಯಾರಿಸ್ ಇಂದು ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೂ ಅವರು ತನ್ನ ಪ್ರತ್ಯೇಕ ನಿವಾಸದಲ್ಲಿ ವಾಸವಿದ್ದು, ದೂರದಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ನಂತರವೇ ಶ್ವೇತ ಭವನಕ್ಕೆ ಮರಳುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಚೀನಿಯರನ್ನು ಗುರಿಯಾಗಿಸಿ ಕರಾಚಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು

    Kamala Harris 3

    ಹ್ಯಾರಿಸ್(57) ಅಧಿಕಾರ ವಹಿಸಿಕೊಳ್ಳುವ ಕೆಲ ವಾರಗಳ ಮುನ್ನ ಮೊಡೆರ್ನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಅಧಿಕಾರ ಪಡೆದ ನಂತರ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದರು. 2021ರ ಅಕ್ಟೋಬರ್ ಅಂತ್ಯದಲ್ಲಿ ಬೂಸ್ಟರ್ ಡೋಸ್ ಮತ್ತು ಏಪ್ರಿಲ್ 1 ರಂದು ಹೆಚ್ಚುವರಿ ಬೂಸ್ಟರ್ ಅನ್ನು ಪಡೆದುಕೊಂಡಿದ್ದರು. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ಯುಎಸ್ ಅಧ್ಯಕ್ಷ ಜೋ ಬೈಡನ್ ಇತ್ತೀಚಿನ ದಿನಗಳಲ್ಲಿ ಹ್ಯಾರಿಸ್‌ನ ಹತ್ತಿರದ ಸಂಪರ್ಕದಲ್ಲಿದ್ದರು ಎಂದು ಶ್ವೇತಭವನ ಹೇಳಿದೆ.

  • ಮೋದಿಗೆ ಭರ್ಜರಿ ಗೆಲುವು – ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್

    ಮೋದಿಗೆ ಭರ್ಜರಿ ಗೆಲುವು – ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್

    ಒಸಾಕಾ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಲ್ಲಿ ಅದ್ಭುತ ಕೆಲಸ ಮಾಡಿದ್ದೀರಿ ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.

    ಜಿ-20 ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರು ಕಾರ್ಯಸೂಚಿ ರೂಪಿಸುವುದಕ್ಕೂ ಮೊದಲು ಭೇಟಿಯಾಗಿ ಮಾಧ್ಯಮದವರ ಮುಂದೆ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಮಾತನಾಡಿದ ಟ್ರಂಪ್, ಆಡಳೀತಾರೂಢ ಸರ್ಕಾರದ ಗೆಲುವು ತುಂಬಾ ದೊಡ್ಡದು ಎಂದು ಬಣ್ಣಿಸಿದ್ದಾರೆ. ಶೇ.72ರಷ್ಟನ್ನು ಮಾತ್ರ ನಾನು ತಿಳಿದಿದ್ದೇನೆ. ಆದರೆ, ಯುನೈಟೈಡ್ ಸ್ಟೇಟ್ಸ್(ಯುಎಸ್)ನಲ್ಲಿ ಇದನ್ನು ಅಭೂತಪೂರ್ವ ಗೆಲುವು ಎಂದು ಬಣ್ಣಿಸಲಾಗಿದೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆಯ ಗೆಲುವು ಪ್ರಧಾನಿ ಮೋದಿ ಅವರ ಬಣಗಳನ್ನು ಒಗ್ಗೂಡಿಸುವ ತಂತ್ರಕ್ಕೆ ಸಂದ ಜಯ. ನಾನು ಕಂಡಂತೆ ನೀವು ಅನೇಕ ಬಣಗಳನ್ನು ಹೊಂದಿದ್ದೀರಿ. ಮೊದಲ ಅಧಿಕಾರಾವಧಿಯಲ್ಲಿ ಅವರು ಪರಸ್ಪರ ಕಿತ್ತಾಡುತ್ತಿದ್ದರು. ಆದರೆ ಇದೀಗ ಎಲ್ಲರೂ ಜೊತೆಯಾಗಿದ್ದಾರೆ. ಅವರನ್ನು ಒಟ್ಟಾಗಿ ತರುವಲ್ಲಿ ಶ್ರಮಿಸಿದ್ದೀರಿ. ಇದು ನಿಮಗೆ ಹಾಗೂ ನಿಮ್ಮ ಸಾಮಥ್ರ್ಯಕ್ಕೆ ಸಂದ ಅದ್ಭುತ ಗೌರವ ಎಂದು ಟ್ರಂಪ್ ಬಣ್ಣಿಸಿದ್ದಾರೆ.

    ಭಾರತ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಹಕಾರವನ್ನು ನೋಡಿದಾಗ ಉಭಯ ದೇಶಗಳು ‘ಉತ್ತಮ ಸ್ನೇಹ’ ಹೊಂದಿದ್ದು, ಎರಡೂ ದೇಶಗಳು ಎಂದೂ ಇಷ್ಟು ಹತ್ತಿರವಾಗಿರಲಿಲ್ಲ. ವ್ಯಾಪಾರದಲ್ಲಿಯೂ ಸಹ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದ್ದು, ಈ ಕುರಿತು ಇಂದು ಚರ್ಚಿಸಬೇಕಿದೆ. ವಿಶೇಷವಾಗಿ ಎರಡೂ ದೇಶಗಳ ನಡುವಿನ ಸುಂಕದ ಕುರಿತು ಮಾತನಾಡಬೇಕಿದೆ ಎಂದು ತಿಳಿಸಿದರು.

    ಪ್ರತಿಯಾಗಿ ಪ್ರಧಾನಿ ಮೋದಿ ಶುಭಾಶಯ ಕೋರಿದ್ದು, ಟ್ರಂಪ್ ಅವರ ಅಭಿನಂದನೆಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಇದೇ ವಾರದಲ್ಲಿ ಭಾರತದ ಪ್ರವಾಸದಲ್ಲಿದ್ದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರ ಹೃದಯ ಮುಟ್ಟುವ ಸಾಲುಗಳ ಪತ್ರದ ಕುರಿತು ಸಹ ಧನ್ಯವಾದ ತಿಳಿಸಿದರು.

    ಪರಸ್ಪರ ಸ್ನೇಹ ವಿನಿಮಯದ ನಂತರ ಮಾತನಾಡಿದ ಟ್ರಂಪ್, ದೊಡ್ಡ ವಿಷಯವನ್ನು ಘೋಷಿಸುವುದು ಬಾಕಿ ಇದೆ. ಬಹುದೊಡ್ಡ ವ್ಯಾಪಾರ, ವ್ಯವಹಾರ ಹಾಗೂ ಉತ್ಪಾದನೆ ನಿಯಮಗಳ ಕುರಿತು ಭಾರತದೊಂದಿಗೆ ಹಂಚಿಕೊಳ್ಳಬೇಕಿದೆ ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ 542 ಲೋಕಸಭಾ ಸ್ಥಾನಗಳ ಪೈಕಿ ಎನ್‍ಡಿಎ ಒಟ್ಟು 353 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 303 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಈ ಮೂಲಕ ಎನ್‍ಡಿಎ ಗೆಲುವಿನ ಪ್ರಮಾಣ ಶೇ.65ರಷ್ಟಾಗಿದೆ.