Tag: ಯುಎಸ್‌ಏಡ್‌

  • ಯುಎಸ್‌ಏಡ್‌ ಉದ್ಯೋಗಿಗಳಿಗೆ ಟ್ರಂಪ್‌ ಶಾಕ್‌ – 1,600ಕ್ಕೂ ಹೆಚ್ಚು ಮಂದಿ ವಜಾ

    ಯುಎಸ್‌ಏಡ್‌ ಉದ್ಯೋಗಿಗಳಿಗೆ ಟ್ರಂಪ್‌ ಶಾಕ್‌ – 1,600ಕ್ಕೂ ಹೆಚ್ಚು ಮಂದಿ ವಜಾ

    ವಾಷಿಂಗ್ಟನ್‌: ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (USAID) ಮೂಲಕ ಭಾರತದ ಚುನಾವಣೆ (Indian Election) ಮೇಲೆ ಪ್ರಭಾವ ಬೀರಲು ಹಣ ಪಡೆಯಲಾಗಿದೆ ಎಂಬ ವಿವಾದ ಕೋಲಾಹಲ ಎಬ್ಬಿಸಿದ ಹೊತ್ತಿನಲ್ಲೇ ಟ್ರಂಪ್‌ (Donald Trump) ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದೆ. ಯುಎಸ್‌ಏಡ್‌ನ 1,600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಘೋಷಣೆ ಮಾಡಿದೆ.

    ಅಗತ್ಯ ಕೆಲಸಗಾರರನ್ನು ಹೊರತುಪಡಿಸಿ ಅಮೆರಿಕದಿಂದ ಹೊರಗೆ ಕೆಲಸ ಮಾಡುವ ಯುಎಸ್‌ಏಡ್‌ನ ಇತರ ಸಿಬ್ಬಂದಿಯನ್ನ ವೇತನ ಸಹಿತ ರಜೆಯಲ್ಲಿರಿಸಲಾಗಿದೆ ಎಂದು ತನ್ನ ವೆಬ್‌ಸೈಟ್ಸ್‌ನಲ್ಲಿ ಪ್ರಕಟಿಸಿದೆ. ಇದನ್ನೂ ಓದಿ: ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

    ಈ ಸಂಬಂಧ ಕೆಲವರಿಗೆ ಇ-ಮೇಲ್‌ಗಳನ್ನು ಕಳುಹಿಸಲಾಗಿದೆ. ಈ ಸೂಚನೆ ಪಡೆದುಕೊಂಡ ಎಲ್ಲರನ್ನು ಏಪ್ರಿಲ್‌ 24ರಿಂದ ಫೆಡರಲ್‌ ಸೇವೆಯಿಂದ ಕೈಬಿಡಲಾಗುವುದು ಎಂದು ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಇದು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವ ಸಲುವಾಗಿ ಎಲಾನ್‌ ಮಸ್ಕ್‌ ನೇತೃತ್ವದ ದಕ್ಷತೆಯ ಇಲಾಖೆಯು, ಯುಎಸ್‌ಏಡ್‌ ತೆಗೆದುಹಾಕುವ ಪ್ರಯತ್ನದ ಭಾಗವಾಗಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಶ್ವೇತಭವದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ

  • ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

    ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

    ನವದೆಹಲಿ: ಭಾರತದ ಚುನಾವಣೆ (Indian Election) ಮೇಲೆ ಪ್ರಭಾವ ಬೀರಲು ಅಮೆರಿಕ ʻಯುಎಸ್‌ಏಡ್‌ʼ (USAID ಮೂಲಕ ಹಣ ಪಡೆಯಲಾಗಿದೆ ಎಂಬ ವಿವಾದ ಕೋಲಾಹಲ ಎಬ್ಬಿಸಿದೆ. ಈ ನಡುವೆ 2023-24ನೇ ಸಾಲಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಉದ್ದೇಶಕ್ಕೆ ಅಮೆರಿಕದಿಂದ ಯಾವುದೇ ಹಣಕಾಸು ನೆರವು ಬಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ (Finance Ministry) ಪ್ರಕಟಿಸಿರುವ ವರದಿಯಲ್ಲಿ ಬೆಳಕಿಗೆ ಬಂದಿದೆ.

    ʻಯುಎಸ್‌ಏಡ್‌ʼ ಮೂಲಕ ಭಾರತಕ್ಕೆ ಹರಿದು ಬಂದ ಹಣದ ವಿವರಗಳನ್ನು ಕೇಂದ್ರ ಹಣಕಾಸು ಸಚಿವಾಲಯವನ್ನು ಭಾನುವಾರ ಪ್ರಕಟಿಸಿದೆ. ಇದರಿಂದ ಅಮೆರಿಕದ ವರದಿ ಮಾತ್ರವಲ್ಲ, ಭಾರತದ ಹಣಕಾಸು ಇಲಾಖೆಯ ವರದಿಯಲ್ಲೂ ಚುನಾವಣೆಗಾಗಿ ಅಮೆರಿಕ ಭಾರತಕ್ಕೆ ಯಾವುದೇ ದೇಣಿಗೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

    ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿತ್ತ ಸಚಿವಾಲಯವು, ಭಾರತದಲ್ಲಿ 6,498 ಕೋಟಿ ರೂ. (750 ದಶಲಕ್ಷ ಡಾಲರ್) ವೆಚ್ಚದ 7 ಯೋಜನೆಗಳಿಗೆ ಅಮೆರಿಕದ ನೆರವು ಬಳಕೆಯಾಗುತ್ತಿದೆ. ಆದರೆ, ಈ ದೇಣಿಗೆಯಲ್ಲಿ ಯಾವುದೂ, ಚುನಾವಣೆ ಅಥವಾ ಮತದಾನಕ್ಕೆ ಸಂಬಂಧಿಸಿ ಬಳಕೆಯಾಗುತ್ತಿಲ್ಲ ಎಂದು ಹೇಳಿದೆ. ಅಲ್ಲದೇ ಭಾರತ ಸರ್ಕಾರ ಮತ್ತು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (ಯುಎಸ್‌ಏಡ್‌) ಸಹಯೋಗದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 2023-24ರಲ್ಲಿ 825 ಕೋಟಿ ರೂ. (97 ದಶಲಕ್ಷ ಡಾಲರ್) ಅಮೆರಿಕದ ನೆರವು ಬಂದಿದೆ ಎಂದು ಎತ್ತ ಇಲಾಖೆಯ ವಾರ್ಷಿಕ ವರದಿ ತಿಳಿಸಿದೆ. ಇದು ರಾಜಕೀಯ ಬಿರುಗಾಳಿ ಎಬ್ಬಿಸಿದೆ.

    ಕೃಷಿ, ಆಹಾರ ಭದ್ರತೆ, ನೀರು, ನೈರ್ಮಲ್ಯ ರಕ್ಷಣೆ, ಮರುಬಳಕೆಯ ಇಂಧನ ಅಭಿವೃದ್ಧಿ, ವಿಪತ್ತು ನಿರ್ವಹಣೆ ಯೋಜನೆಗಳಿಗೆ ‘ಯುಎಸ್‌ಏಡ್‌’ ಮೂಲಕ ನೆರವು ಪಡೆಯಲಾಗಿದೆ. ಇದಲ್ಲದೇ ಸುಸ್ಥಿರ ಅರಣ್ಯ ಅಭಿವೃದ್ಧಿ, ಹವಾಮಾನ ಬದಲಾವಣೆ, ಇಂಧನ ದಕ್ಷತೆ, ತಂತ್ರಜ್ಞಾನ ಸೇರಿ ಹಲವು ಯೋಜನೆಗಳಿಗೆ ಹಣಕಾಸು ನೆರವು ಪಡೆಯಲಾಗಿದೆ ಎಂಬ ಮಾಹಿತಿಯನ್ನು ಹಣಕಾಸು ಸಚಿವಾಲಯ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

    ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದದಂತೆ 1951 ರಿಂದ ʻಯುಎಸ್‌ಏಡ್‌ʼ ಮೂಲಕ ಭಾರತಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕಳೆದ 70 ವರ್ಷದಲ್ಲಿ ಸುಮಾರು 555 ಯೋಜನೆಗಳಿಗೆ 17 ಬಿಲಿಯನ್‌ ಡಾಲರ್‌ ಹಣದ ನೆರವು ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.

    https://youtu.be/9aRZwimkiN0?si=1pIJY_bEtIdzMSF8