Tag: ಯಾಮಿ ಗೌತಮಿ

  • ವಧು ಯಾಮಿಯನ್ನ ರಾಧೆ ಮಾಗೆ ಹೋಲಿಸಿದ ನಟ – ಚಪ್ಪಲಿ ಕೇಳಿದ ಕಂಗನಾ

    ವಧು ಯಾಮಿಯನ್ನ ರಾಧೆ ಮಾಗೆ ಹೋಲಿಸಿದ ನಟ – ಚಪ್ಪಲಿ ಕೇಳಿದ ಕಂಗನಾ

    ಮುಂಬೈ: ವಧು ಯಾಮಿ ಗೌತಮಿಯನ್ನ ರಾಧೆ ಮಾಗೆ ನಟ ವಿಕ್ರಾಂತ್ ಮೆಸ್ಸಿ ಹೋಲಿಕೆ ಮಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಕೆಂಡಾಮಂಡಲವಾಗಿದ್ದಾರೆ. ನಟನ ಕಮೆಂಟ್ ಗೆ ರಿಪ್ಲೈ ಮಾಡಿರುವ ಕಂಗನಾ, ನನ್ನ ಚಪ್ಪಲಿ ಕೊಡು ಎಂದು ಕಮೆಂಟ್ ಮಾಡಿದ್ದಾರೆ.

    ಜೂನ್ 4ರಂದು ಯಾಮಿ ಹಿಮಾಚಲ ಪ್ರದೇಶದಲ್ಲಿ ಉರಿ ಚಿತ್ರದ ನಿರ್ದೇಶಕ, ರೈಟರ್ ಆದಿತ್ಯ ಅವರ ಜೊತೆ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು. ಕೊರೊನಾ ಹಿನ್ನೆಲೆ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಫೋಟೋಗಳು ವೈರಲ್ ಬಳಿಕ ಅಭಿಮಾನಿಗಳಿಗೆ ಮದುವೆ ವಿಷಯ ತಿಳಿದಿತ್ತು. ಅಭಿಮಾನಿಗಳು ಸೇರಿದಂತೆ ಸ್ಟಾರ್ ಗಳು ಸೋಶಿಯಲ್ ಮೀಡಿಯಾ ಮೂಲಕವೇ ನಟಿಗೆ ಮದುವೆ ವಿಷಯ ತಿಳಿಸಿದ್ದರು.

    ಅದೇ ರೀತಿ ಕಂಗನಾ ರಣಾವತ್, ಹಿಮಾಚಲ ಪ್ರದೇಶದ ವಧು ಗಾರ್ಜಿಯಸ್ ಮತ್ತು ನೋಡಲು ದೇವಿಯ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಯಾಮಿ ಫೋಟೋಗೆ ಕಮೆಂಟ್ ಮಾಡಿದ್ದರು. ಇದೇ ಫೋಟೋಗೆ ವಿಕ್ರಾಂತ್ ಮೆಸ್ಸಿ, ಶುದ್ಧ ಮತ್ತು ಪವಿತ್ರ, ನೋಡಲು ಅಚ್ಚು ರಾಧೆ ಮಾ.. ಎಂದು ಬರೆದುಕೊಂಡಿದ್ದರು. ಈ ಕಮೆಂಟ್ ಗೆ ಪ್ರತಿಕ್ರಿಯಿಸಿರುವ ಕಂಗನಾ, ಎಲ್ಲಿಂದ ಬಂತು ಈ ಜಿರಳೆ, ನನ್ನ ಚಪ್ಪಲಿಯನ್ನ ಕೊಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್ ಗನ್ ಮ್ಯಾನ್ ಮಂಡ್ಯದಲ್ಲಿ ಅರೆಸ್ಟ್

    ರಾಧೆ ಮಾ ಸ್ವಯಂ ಘೋಷಿತ ದೇವತೆ. ಹಲವು ವಿವಾದಗಳಿಂದಲೇ ರಾಧೆ ಮಾ ಸುದ್ದಿಯಲ್ಲಿದ್ದರು. ರಾಧೆ ಮಾ ಸಹ ಕೆಂಪು ಬಣ್ಣದ ಸೀರೆ ಧರಿಸಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಯಾಮಿ ಸಹ ಕೆಂಪು ಬಣ್ಣದ ಸೀರೆ ಧರಿಸಿ, ಸಿಂಧೂರವಿಟ್ಟ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ‘ದುಡ್ಡಿಗಾಗಿ ವಂಚನೆ’ – ಸೋನು ಸೂದ್ ವಿರುದ್ಧದ ಪೋಸ್ಟ್‌ಗೆ ಲೈಕ್ ಕೊಟ್ಟ ಕಂಗನಾ

  • ಪೋಲ್ ಡ್ಯಾನ್ಸ್ ಮಾಡಿ ಸುದ್ದಿಯಾದ ಗಣೇಶ್ ಜೊತೆ ನಟಿಸಿದ್ದ ನಟಿ – ವಿಡಿಯೋ ವೈರಲ್

    ಪೋಲ್ ಡ್ಯಾನ್ಸ್ ಮಾಡಿ ಸುದ್ದಿಯಾದ ಗಣೇಶ್ ಜೊತೆ ನಟಿಸಿದ್ದ ನಟಿ – ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮಿ ಪೋಲ್ ಡ್ಯಾನ್ಸ್ ಮಾಡಿದ್ದು, ಈಗ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಯಾಮಿ ಗೌತಮಿ ಆರಿಫಾ ಬಿಂದ್ರೆವಾಲಾ ಅವರ ಪೋಲ್ ನೃತ್ಯ ತರಗತಿಗೆ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗೌತಮಿ ಪೋಲ್ ಡ್ಯಾನ್ಸ್ ವಿಡಿಯೋ ಹರಿದಾಡುತ್ತಿದೆ. ಈ ಪೋಲ್ ಡ್ಯಾನ್ಸ್ ನೋಡಿ ಎಲ್ಲರೂ ಬೆರಗಾಗಿದ್ದು, ಎಲ್ಲರೂ ತಾವು ನೋಡಿ ಆ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

    ತನ್ನ ಪೋಲ್ ಡ್ಯಾನ್ಸ್ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು 5 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ. ಫಿಟ್ನೆಸ್ ಮತ್ತು ನೃತ್ಯವನ್ನು ನಾನು ತುಂಬಾ ಪ್ರೀತಿಸುತ್ತೀನಿ. ಡ್ಯಾನ್ಸ್ ಅನ್ನು ಯಾವಾಗಲೂ ಆನಂದಿಸುತ್ತೇನೆ. ಪೋಲ್ ಡ್ಯಾನ್ಸ್ ನಮ್ಮ ಫಿಟ್ನೆಸ್ ಸಾಮರ್ಥ್ಯ ಮತ್ತು ನೃತ್ಯದ ಮೇಲೆ ಕಾರ್ಯನಿರ್ವಹಿಸುವ ಉತ್ತಮ ಮಾರ್ಗವಾಗಿದೆ. ಅಷ್ಟೇ ಅಲ್ಲದೇ ಪೋಲ್ ಡ್ಯಾನ್ಸ್ ಮಾಡಿ ತನ್ನ ನೃತ್ಯ ಸಾಮರ್ಥ್ಯ ವನ್ನು ತೋರಿಸಿದ್ದಾರೆ. ಪೋಲ್ ಡ್ಯಾನ್ಸ್ ಮಾಡುವುದರಿಂದ ತುಂಬ ಫಿಟ್ ಆಗಿ ಇರಬಹುದು ಎಂದು ಯಾಮಿ ಗೌತಮಿ ಹೇಳಿದ್ದಾರೆ.

    ಯಾಮಿ ಗೌತಮಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ತಮ್ಮ ದೇಹದ ಬಗ್ಗೆ ಹೆಚ್ಚು ಕೇರ್ ತಗೆದುಕೊಳ್ಳುವ ಈ ನಟಿ ಆದಷ್ಟು ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ. ಜಿಮ್ ನಲ್ಲಿ ವರ್ಕೌಟ್ ಮಾಡಿ ಫಿಟ್ನೆಸ್ ಆಗಿರುವ ಯಾಮಿ ಇದೀಗ ಪೋಲ್ ಡ್ಯಾನ್ಸ್ ಮಾಡಿದ್ದಾರೆ.

    ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಯಾಮಿ ಗೌತಮಿ ಕನ್ನಡದಲ್ಲಿ ಗಣೇಶ್ ಜೊತೆಗೆ ‘ಉಲ್ಲಾಸ ಉತ್ಸಾಹ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    https://www.instagram.com/p/Bg6FAaznX_M/?taken-by=yamigautam