Tag: ಯಾತ್ರಿಕರು

  • Uttar Pradesh | ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ – 8 ಯಾತ್ರಿಕರು ದುರ್ಮರಣ, 43 ಮಂದಿಗೆ ಗಾಯ

    Uttar Pradesh | ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ – 8 ಯಾತ್ರಿಕರು ದುರ್ಮರಣ, 43 ಮಂದಿಗೆ ಗಾಯ

    ಲಕ್ನೋ: ಯಾತ್ರಿಕರನ್ನು (Pilgrims) ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ (Tractor-Trolley) ಟ್ರಕ್ (Truck) ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಯಾತ್ರಿಕರು ಸಾವನ್ನಪ್ಪಿದ್ದು, 43 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್ (Bulandshahr) ಜಿಲ್ಲೆಯಲ್ಲಿ ನಡೆದಿದೆ.

    ಅರ್ನಿಯಾ ಬೈಪಾಸ್ ಬಳಿಯ ಬುಲಂದ್‌ಶಹರ್-ಅಲಿಗಢ ಗಡಿಯಲ್ಲಿ ಸೋಮವಾರ ನಸುಕಿನ ಜಾವ 2:10ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡಿರುವ ಯಾತ್ರಿಕರ ಪೈಕಿ 12 ಮಂದಿ ಅಪ್ರಾಪ್ತರಾಗಿದ್ದಾರೆ. ಕ್ಯಾಂಟರ್ ಟ್ರಕ್ ಹಿಂದಿನಿಂದ ಟ್ರ‍್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಪಲ್ಟಿಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: Shivamogga | ತಾನೇ ಜನ್ಮ ನೀಡಿದ ನವಜಾತ ಶಿಶುವಿನ ಕತ್ತು ಕೊಯ್ದು ಕೊಂದಿದ್ದ ಲೇಡಿ ಅರೆಸ್ಟ್

    ಟ್ರಾಕ್ಟರ್ ಟ್ರಾಲಿಯಲ್ಲಿ 61 ಜನರು ಇದ್ದರು. ಯಾತ್ರಿಕರು ಕಾಸ್ಗಂಜ್ ಜಿಲ್ಲೆಯ ರಫತ್‌ಪುರ ಗ್ರಾಮದಿಂದ ರಾಜಸ್ಥಾನದ ಜಹರ್‌ಪೀರ್‌ಗೆ ತೀರ್ಥಯಾತ್ರೆಗಾಗಿ ಪ್ರಯಾಣಿಸುತ್ತಿದ್ದರು. 10 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 10 ಮಂದಿ ಗಾಯಾಳುಗಳನ್ನು ಅಲಿಘರ್ ವೈದ್ಯಕೀಯ ಕಾಲೇಜಿಗೆ, ಇನ್ನೂ 10 ಜನರನ್ನು ಬುಲಂದ್‌ಶಹರ್ ಜಿಲ್ಲಾ ಆಸ್ಪತ್ರೆಗೆ ಮತ್ತು 23 ಮಂದಿಯನ್ನು ಖುರ್ಜಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಮೃತರನ್ನು ಟ್ರ‍್ಯಾಕ್ಟರ್ ಚಾಲಕ ಇ.ಯು. ಬಾಬು (40), ರಾಂಬೆಟಿ (65), ಚಾಂದನಿ (12), ಘನಿರಾಮ್ (40), ಮೋಕ್ಷಿ (40), ಶಿವಾಂಶ್ (6), ಯೋಗೇಶ್ (50) ಮತ್ತು ವಿನೋದ್ (45) ಎಂದು ಗುರುತಿಸಲಾಗಿದ್ದು, ಎಲ್ಲರೂ ಕಾಸ್ಗಂಜ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರುತಿ, ಎಸ್‌ಎಸ್‌ಪಿ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

  • J&K | ಮೂರು ಬಸ್‌ಗಳ ನಡುವೆ ಅಪಘಾತ – 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರಿಗೆ ಗಾಯ

    J&K | ಮೂರು ಬಸ್‌ಗಳ ನಡುವೆ ಅಪಘಾತ – 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರಿಗೆ ಗಾಯ

    ಶ್ರೀನಗರ: ಮೂರು ಬಸ್‌ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು (Amarnath Yatra) ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ (Jammu And Kashmir) ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ನಡೆದಿದೆ.

    ಗಾಯಾಳು ಯಾತ್ರಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲ್ಲಾ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರು | ಕಸ ವಿಲೇವಾರಿ ವಾಹನಗಳನ್ನು ಕದ್ದೊಯ್ದ ಕಳ್ಳರು

    ಅಮರನಾಥ ಯಾತ್ರೆಗಾಗಿ ಬೇಸ್ ಕ್ಯಾಂಪ್‌ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂರು ಬಸ್‌ಗಳು ಹಾನಿಗೊಳಗಾಗಿವೆ. ಬಸ್ಸಿನಲ್ಲಿದ್ದ ಉಳಿದ ಯಾತ್ರಿಕರಿಗೆ ಮೀಸಲು ಬಸ್ ವ್ಯವಸ್ಥೆ ಮಾಡಲಾಗಿದ್ದು, ಯಾತ್ರಿಕರು ಪ್ರಯಾಣ ಮುಂದುವರಿಸಿದ್ದಾರೆ. ಇದನ್ನೂ ಓದಿ: ಜಸ್ಟ್‌ 5 ಸಾವಿರಕ್ಕೆ ಸ್ನೇಹಿತರಿಂದಲೇ ಉತ್ತರ ಕರ್ನಾಟಕದ ಯುವ ಗಾಯಕ ಮಾರುತಿ ಲಠ್ಠೆ ಬರ್ಬರ ಕೊಲೆ

  • ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ

    ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ

    ಡೆಹ್ರಾಡೂನ್: ಕೇದಾರನಾಥ (Kedarnath) ದೇಗುಲಕ್ಕೆ ಪಾದಯಾತ್ರೆ ಮೂಲಕ ತೆರಳುವ ಮಾರ್ಗದಲ್ಲಿ ಬುಧವಾರ ಭೂಕುಸಿತ (Landslide) ಉಂಟಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

    ಜಂಗಲ್‌ಚಟ್ಟಿ (Junglechatti) ಘಾಟ್ ಬಳಿ ಬೆಳಿಗ್ಗೆ 11:20ರ ಸುಮಾರಿಗೆ ಗುಡ್ಡ ಕುಸಿತ ಸಂಭವಿಸಿದ್ದು, ಬಂಡೆಗಳು ಉರುಳಿ ಬಿದ್ದ ಪರಿಣಾಮ ಪಲ್ಲಕ್ಕಿಯಲ್ಲಿ ಯಾತ್ರಿಕರನ್ನು ಹೊತ್ತು ಸಾಗುತ್ತಿದ್ದ ಪೋರ್ಟರ್ ನಿರ್ವಾಹಕರು ಇದರಡಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ರುದ್ರಪ್ರಯಾಗ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಗೋವಾಕ್ಕೆ ತೆರಳಿದ್ದ ಜೋಡಿ – ಗಂಟಲು ಸೀಳಿ ಪ್ರೇಯಸಿಯ ಕೊಲೆ

    ತಕ್ಷಣವೇ ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ಹಗ್ಗಗಳ ಸಹಾಯದಿಂದ ಕಮರಿಗೆ ಬಿದ್ದಿದ್ದ ಮೃತರನ್ನು ಮತ್ತು ಗಾಯಾಳುಗಳನ್ನು ಹೊರತೆಗೆಯಲು ಹರಸಾಹಸಪಟ್ಟರು. ಇದನ್ನೂ ಓದಿ: ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ – ಕಾರ್ಮಿಕ ಸಂಘಟನೆಗಳ ವಿರೋಧ

    ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೇ, ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡ ಪುರುಷರನ್ನು ಗೌರಿಕುಂಡ್‌ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಅರೆಸ್ಟ್

  • Odisha | ಪುರಿ ಜಗನ್ನಾಥ ದೇವಾಲಯಕ್ಕೆ ತೆರಳುತ್ತಿದ್ದ ಬೆಂಗಳೂರಿನ 20 ಯಾತ್ರಿಕರು ಅಸ್ವಸ್ಥ

    Odisha | ಪುರಿ ಜಗನ್ನಾಥ ದೇವಾಲಯಕ್ಕೆ ತೆರಳುತ್ತಿದ್ದ ಬೆಂಗಳೂರಿನ 20 ಯಾತ್ರಿಕರು ಅಸ್ವಸ್ಥ

    – 10 ಮಂದಿಯ ಸ್ಥಿತಿ ಗಂಭೀರ

    ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ (Puri Jagannath Temple) ತೆರಳುತ್ತಿದ್ದ ಬೆಂಗಳೂರಿನ 20 ಯಾತ್ರಿಕರು (Bengaluru Pilgrims) ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೆಂಗಳೂರಿನ ಯಾತ್ರಿಕರ ತಂಡವೊಂದು ಏ.26ರಂದು 24 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದರು. ಬುಧವಾರ ಉತ್ತರ ಪ್ರದೇಶದ ಅಯೋಧ್ಯೆ ಹಾಗೂ ಕಾಶಿಗೆ ಭೇಟಿ ನೀಡಿದ ಯಾತ್ರಿಕರು ತಾವೇ ತಯಾರಿಸಿದ ಅನ್ನ ಸಾಂಬಾರ್‌ ತಿಂದು ಗುರುವಾರ ಮುಂಜಾನೆ ಒಡಿಶಾದ ಪುರಿ ಜಗನ್ನಾಥನ ಸನ್ನಿಧಿಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಅತಿಸಾರ (Diarrhea) ಹಾಗೂ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆ ಅಸ್ವಸ್ಥ ಯಾತ್ರಿಕರನ್ನು ಬಾಲಾಸೋರ್ (Balasore) ಜಿಲ್ಲೆಯ ಸೊರೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ 20 ಮಂದಿಯ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ತಮಿಳುನಾಡು ಮಸೂದೆಗಳ ವಿಚಾರದಲ್ಲಿ ಗಡುವು – ರಾಷ್ಟ್ರಪತಿಗಳಿಂದ ಸುಪ್ರೀಂಗೆ 14 ಪ್ರಶ್ನೆ

    ಬಿಸಿಗಾಳಿ ಹಾಗೂ ಬಿಸಿಲಿನ ತಾಪದಿಂದ ಯಾತ್ರಿಕರಲ್ಲಿ ಅತಿಸಾರ ಹಾಗೂ ವಾಂತಿ ಕಾಣಿಸಿಕೊಂಡು ಅಸ್ವಸ್ಥಗೊಂಡಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಹುಟ್ಟುಹಬ್ಬ – ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

  • ಕೊಳಕ್ಕೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ- ಗಂಗಾ ನದಿ ಪವಿತ್ರ ಸ್ನಾನಕ್ಕೆ ತೆರಳುತ್ತಿದ್ದ 15 ಯಾತ್ರಿಕರು ಸಾವು

    ಕೊಳಕ್ಕೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ- ಗಂಗಾ ನದಿ ಪವಿತ್ರ ಸ್ನಾನಕ್ಕೆ ತೆರಳುತ್ತಿದ್ದ 15 ಯಾತ್ರಿಕರು ಸಾವು

    ಲಕ್ನೋ: ಮಾಘ ಪೂರ್ಣಿಮೆಯ (Magh Purnima) ಪ್ರಯುಕ್ತ ಗಂಗಾ ನದಿಯಲ್ಲಿ (Ganga River) ಪವಿತ್ರ ಸ್ನಾನ ಮಾಡಲು ಹೊರಟಿದ್ದ ಯಾತ್ರಿಕರನ್ನು (Pilgrims) ಒಳಗೊಂಡ ಟ್ರ್ಯಾಕ್ಟರ್ ಟ್ರಾಲಿ (Tractor Trolley) ಕೊಳಕ್ಕೆ ಬಿದ್ದ ಪರಿಣಾಮ 7 ಮಂದಿ ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಉತ್ತರಪ್ರದೇಶದ (Uttar Pradesh) ಕಾಸ್‌ಗಂಜ್‌ನಲ್ಲಿ (Kasganj) ನಡೆದಿದೆ.

    ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಾಘ ಪೂರ್ಣಿಮೆ; ಪುಣ್ಯಸ್ನಾನಕ್ಕಾಗಿ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಜನಸಾಗರ

    ಘಟನೆಯ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡ ಯಾತ್ರಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ಬೆಂಬಲಿಗರಿಗೆ ಬಾಂಬ್ ದಾಳಿ ಬೆದರಿಕೆ

  • ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿ 5 ಕನ್ವರ್ ಯಾತ್ರಿಗಳು ಸಾವು

    ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿ 5 ಕನ್ವರ್ ಯಾತ್ರಿಗಳು ಸಾವು

    ಲಕ್ನೋ: ಕನ್ವರ್ ಯಾತ್ರಿಗಳನ್ನು (Kanwariya Pilgrims) ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ 5 ಯಾತ್ರಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಭಾವನ್‌ಪುರದಲ್ಲಿ ನಡೆದಿದೆ.

    ಯಾತ್ರಾರ್ಥಿಗಳು ಕನ್ವರ್ ಯಾತ್ರೆ ಮುಗಿಸಿ, ಪವಿತ್ರ ಜಲವನ್ನು ಸಂಗ್ರಹಿಸಿ ಹರಿದ್ವಾರಕ್ಕೆ ಹಿಂತಿರುಗುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಅಪಘಾತದಿಂದ ಆಕ್ರೋಶಗೊಂಡ ಇತರ ಕನ್ವರ್ ಯಾತ್ರಿಗಳು ರಸ್ತೆ ತಡೆದು ಗಲಾಟೆ ನಡೆಸಿದ್ದಾರೆ. ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್‌ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

    ಕನ್ವರ್ ಯಾತ್ರಿಗಳು ಶನಿವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ತಮ್ಮ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ದುರ್ಘಟನೆ ನಡೆದಿದೆ. ಗಾಯಗೊಂಡ ಎಲ್ಲಾ ಯಾತ್ರಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆ ಐವರು ಸಾವನ್ನಪ್ಪಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ರೂಪಾಯಿ, ದಿರ್ಹಾಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ

    ಘಟನೆ ಬಳಿ ಗ್ರಾಮಸ್ಥರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿ ವಿಚಾರಕ್ಕೆ ಯುವಕರ ಮಧ್ಯೆ ಕಿರಿಕ್- ಎಣ್ಣೆ ಏಟಲ್ಲಿ ಗೆಳೆಯನ ತಲೆ ಒಡೆದ್ರು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

    ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

    ಡೆಹ್ರಾಡೂನ್: ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಭಾರೀ ಮಳೆ (Rain) ಮತ್ತು ಹಿಮಪಾತವಾಗುವ (Snowfall) ಸಾಧ್ಯತೆಯ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಮುಂದಿನ 2-3 ದಿನಗಳವರೆಗೆ ಎಚ್ಚರಿಕೆಯನ್ನು ನೀಡಿದೆ. ಹವಾಮಾನ ಉತ್ತಮವಾಗುವವರೆಗೆ ತಂಗಿರುವ ಸ್ಥಳದಲ್ಲಿಯೇ ಇರುವಂತೆ ಕೇದಾರನಾಥ (Kedarnath) ಯಾತ್ರಾರ್ಥಿಗಳಿಗೆ (Pilgrims) ತಿಳಿಸಲಾಗಿದೆ.

    ಕೇದಾರನಾಥಕ್ಕೆ ಭೇಟಿ ನಿಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗುತ್ತಿದೆ. ಹವಾಮಾನ ಉತ್ತಮವಾಗುವವರೆಗೆ ಪ್ರಯಾಣಿಕರು ಅದೇ ಸ್ಥಳದಲ್ಲಿ ಇರಿ. ಮುಂಜಾಗೃತ ಕ್ರಮಗಳನ್ನು ಅನುಸರಿಸಿಯೇ ಯಾತ್ರೆಯನ್ನು ಮುಂದುವರಿಸಿ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದರು.

    ಕೇದಾರನಾಥ ಧಾಮದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಯಾತ್ರೆಯನ್ನು ನಿಯಂತ್ರಿಸಲಾಗುತ್ತಿದೆ. ಸೋನ್‌ಪ್ರಯಾಗದಿಂದ ಬೆಳಗ್ಗೆ 10:30ರ ಬಳಿಕ ಕೇದಾರನಾಥಕ್ಕೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

    ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಹವಾಮಾನ ಉತ್ತಮವಾದ ಬಳಿಕ ಮಾತ್ರ ಎಲ್ಲಾ ಯಾತ್ರಾರ್ಥಿಗಳು ಕೇದಾರನಾಥಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.

    ಏಪ್ರಿಲ್ 25 ರಂದು ಯಾತ್ರಾರ್ಥಿಗಳಿಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಯಿತು. ಆದರೆ ಯಾತ್ರೆಯ ಮಾರ್ಗದಲ್ಲಿ ಹಿಮಪಾತ ಹಾಗೂ ಹವಾಮಾನ ಪ್ರತಿಕೂಲತೆಯ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ಕೇದಾರನಾಥ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

  • ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಮಲೆನಾಡಿಗರಿಗೆ ಮಹಾ ದೋಖಾ

    ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಮಲೆನಾಡಿಗರಿಗೆ ಮಹಾ ದೋಖಾ

    ಶಿವಮೊಗ್ಗ: ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ನೂರಾರು ಮಂದಿ ಮಲೆನಾಡಿಗರಿಗೆ ತೂಬ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ಮಾಲೀಕನೋರ್ವ ಮಹಾ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಹಗಲು ರಾತ್ರಿ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಬಡವರ ಹಣವನ್ನು ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಟ್ರಾವೆಲ್ಸ್ ಮಾಲೀಕ ಮುಜಾಕೀರ್ ಲೂಟಿ ಮಾಡಿದ್ದಾನೆ. ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಅಮಾಯಕರಿಂದ ಲಕ್ಷಾಂತರ ರೂ. ಪಡೆದು ಪಂಗನಾಮ ಹಾಕಿದ್ದಾನೆ. ಆದರೆ ಇದೀಗ ಹಣ ಕಳೆದುಕೊಂಡವರು ಅತ್ತ ಹಜ್ ಯಾತ್ರೆಗೂ ಹೋಗಲಾರದೆ, ಇತ್ತ ಹಣ ಕಳೆದುಕೊಂಡು ಮೋಸ ಹೋಗಿ ಧರ್ಮ ಸಂಕಟಕ್ಕೆ ಸಿಲುಕಿಕೊಂಡಿದ್ದಾರೆ.

    ವಯಸ್ಸಾದ ಅಮಾಯಕರನ್ನು ಹಜ್ ಯಾತ್ರೆಗೆ ಕಳುಹಿಸುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂ. ಪೀಕಿರುವ ಖದೀಮ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡಿದ್ದಾನೆ. ಹಜ್ ಯಾತ್ರಿಕರಿಗೆ ಮೋಸ ಎಸಗಿದ್ದಾನೆ. ಈ ಬಗ್ಗೆ ಮೋಸ ಹೋದವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.

    ದೂರಿನ ಆಧಾರದ ಮೇಲೆ ಪೊಲೀಸರು ಮುಜಾಕ್ಕೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತ ಕೇವಲ ಶಿವಮೊಗ್ಗದಲ್ಲಷ್ಟೇ ಅಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಮೋಸ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

  • ಮನ್ಸೂರ್ ಖಾನ್ ಭಾರತಕ್ಕೆ ಹಿಂದಿರುಗಲೆಂದು ಪ್ರಾರ್ಥಿಸಿ: ಹಜ್ ಯಾತ್ರಿಕರಿಗೆ ಜಮೀರ್ ಮನವಿ

    ಮನ್ಸೂರ್ ಖಾನ್ ಭಾರತಕ್ಕೆ ಹಿಂದಿರುಗಲೆಂದು ಪ್ರಾರ್ಥಿಸಿ: ಹಜ್ ಯಾತ್ರಿಕರಿಗೆ ಜಮೀರ್ ಮನವಿ

    ಬೆಂಗಳೂರು: ಐಎಂಎ ಪ್ರಕರಣ ಆರೋಪಿ ಮನ್ಸೂರ್ ಖಾನ್ ಭಾರತಕ್ಕೆ ಹಿಂದಿರುಗಲಿ ಅಂತ ಪ್ರಾರ್ಥಿಸಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಜ್ ಯಾತ್ರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನಾಗವಾರದ ತಿರುಮೇನಹಳ್ಳಿಯ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ್ದರು. ಮಾಜಿ ಸಚಿವ ರೋಷನ್ ಬೇಗ್ ಅವರು ಕೂಡ ಆಗಮಿಸಿ, ಕಾರ್ಯಕ್ರಮ ಉದ್ಘಾಟನೆ ಮಾಡಿದರು.

    ಈ ವೇಳೆ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಅವರು, ಮನ್ಸೂರ್ ಖಾನ್ ನೀವು ಭಾರತಕ್ಕೆ ಬನ್ನಿ. ನಿಮ್ಮ ಜೊತೆ ಸರ್ಕಾರವಿದೆ. ನಾನು ಕೂಡ ನಿಮ್ಮೊಂದಿಗೆ ಇದ್ದೇನೆ. ಅದು ಬಡವರ ಹಣ. ಬಡವರು ಕಷ್ಟು ಪಟ್ಟು ಕೂಡಿಟ್ಟ ಹಣವನ್ನು ನಿಮಗೆ ಕೊಟ್ಟಿದ್ದಾರೆ. ಕೂಡಲೇ ನೀವು ಭಾರತಕ್ಕೆ ಬನ್ನಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.

    ಈ ಮಧ್ಯೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಸಚಿವರು, ಕೇವಲ ರಾಜಕೀಯ ಸುದ್ದಿಗಳನ್ನು ತೋರಿಸುವುದಲ್ಲ ಹಜ್ ಭವನದ ಸಮಸ್ಯೆ, ಭವನಗಳ ಬಗ್ಗೆಯೂ ಸುದ್ದಿ ಮಾಡಿ. ಎಲ್ಲೆಲ್ಲಿ ಸಮಸ್ಯೆ ಇದೆ ಅದನ್ನು ತೋರಿಸಿ. ಅದು ಬಿಟ್ಟು ಕೇವಲ ರಾಜಕೀಯ ಸುದ್ದಿನೇ ತೋರಿಸಬೇಡಿ ಎಂದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಏನು ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮೋದಿಯಿಂದ ಟ್ರೆಂಡ್ ಸೃಷ್ಟಿ – ಕೇದಾರನಾಥ ಗುಹೆಯಲ್ಲಿ ಧ್ಯಾನಕ್ಕೆ ಮುಗಿಬಿದ್ದ ಯಾತ್ರಿಕರು

    ಮೋದಿಯಿಂದ ಟ್ರೆಂಡ್ ಸೃಷ್ಟಿ – ಕೇದಾರನಾಥ ಗುಹೆಯಲ್ಲಿ ಧ್ಯಾನಕ್ಕೆ ಮುಗಿಬಿದ್ದ ಯಾತ್ರಿಕರು

    ನವದೆಹಲಿ: ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಈಗ ಪ್ರಧಾನಿ ಅವರ ನಡೆಯನ್ನೇ ಇಲ್ಲಿಗೆ ಬರುವ ಯಾತ್ರಿಕರು ಅನುಸರಿಸುತ್ತಿದ್ದಾರೆ.

    ಹೌದು, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೂ ಮೊದಲು ಮೇ 18ರಂದು ಮೋದಿ ಅವರು ಕೇದಾರನಾಥದಲ್ಲಿರುವ ಗುಹೆಯಲ್ಲಿ 24 ಗಂಟೆಗಳು ಸುದೀರ್ಘ ಧ್ಯಾನ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ಹಾಗೆಯೇ ಹಲವರ ಗಮನ ಸೆಳೆದಿದ್ದರು. ಈಗ ಈ ಗುಹೆಯಲ್ಲಿ ಧ್ಯಾನ ಮಾಡಲು ಯಾತ್ರಿಕರು ತಾ ಮುಂದು ನಾ ಮುಂದು ಅಂತ ಮುಗಿಬಿದ್ದಿದ್ದಾರೆ.

    ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಲು ಯಾತ್ರಿಕರು www.gmvnl.in ಮೂಲಕ 1,500 ರೂ. ಪಾವತಿಸಿ ಬುಕ್ ಮಾಡಬೇಕು. ಬಳಿಕ ಗುಪ್ತಾಕ್ಷಿ ಹಾಗೂ ಕೇದಾರನಾಥದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ತದನಂತರ ಯಾತ್ರಿಕರು ಆರೋಗ್ಯವಾಗಿದ್ದರೆ ಮಾತ್ರ ಅವರಿಗೆ ಗುಹೆಯಲ್ಲಿ 24 ಗಂಟೆಗಳ ಕಾಲ ಏಕಾಂಗಿಯಾಗಿ ಧ್ಯಾನ ಮಾಡಲು ಅವಕಾಶ ನೀಡಲಾಗುತ್ತದೆ. ಸದ್ಯ ಮುಂದಿನ 10 ದಿನಗಳ ತನಕ ಕೇದಾರನಾಥ ಗುಹೆ ಯಾತ್ರಿಕರ ಧ್ಯಾನಕ್ಕೆ ಬುಕ್ ಆಗಿದೆ.

    ಪ್ರಧಾನಿ ಅವರು ಬಂದು ಹೋದ ಬಳಿಕ ಈ ಗುಹೆಯಲ್ಲಿ ಧ್ಯಾನ ಮಾಡಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಸುಮಾರು 20 ಮಂದಿ ಇಲ್ಲಿ ಧ್ಯಾನ ಮಾಡಿದ್ದಾರೆ. ಅಲ್ಲದೆ ಆನ್‍ಲೈನ್ ಮೂಲಕ ನಾವು ಗುಹೆಯನ್ನು ಬುಕ್ ಮಾಡುವ ಸೌಲಭ್ಯ ಒದಗಿಸಿದ್ದೇವೆ. ಹೀಗಾಗಿ ದೇಶದೆಲ್ಲೆಡೆಯಿಂದ ಯಾತ್ರಿಕರು ಆನ್‍ಲೈನ್ ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಗರ್ವಾಲ್ ಮಂಡಲ್ ವಿಕಾಸ ನಿಗಮ(ಜಿಎಂವಿಎನ್) ಜನರೆಲ್ ಮ್ಯಾನೇಜರ್ ಬಿ.ಎಲ್ ರಾಣಾ ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಎರಡನೇ ಧ್ಯಾನ ಗುಹೆಯನ್ನು ಕೂಡ ಕೇದಾರನಾಥದಲ್ಲಿ ನಿರ್ಮಿಸಲಾಗುತ್ತಿದೆ. ಇದು ನೈಸರ್ಗಿಕವಾಗಿ ಆದ ಗುಹೆಯಲ್ಲ. ಬದಲಾಗಿ ಬಂಡೆಯಲ್ಲಿ ಕೊರೆದು ಕೃತಕ ಗುಹೆಯನ್ನು ನಿರ್ಮಿಸುತ್ತಿದ್ದೇವೆ. ಆದರೆ ಇದು ಕಾರ್ಯ ರೂಪಕ್ಕೆ ಬರಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಕೇದಾರನಾಥ ದೇಗುಲದಿಂದ ಎಡಕ್ಕೆ ಸುಮಾರು 1 ಕಿ.ಮೀ ಅಂತರದಲ್ಲಿ ರುದ್ರಾ ಧ್ಯಾನ ಗುಹೆ ಇದ್ದು, ಇದರಲ್ಲಿ ಮೋದಿ ಅವರೇ ಮೊದಲು ಧ್ಯಾನ ಮಾಡಿದ್ದು ಎಂದು ರಾಣಾ ಅವರು ತಿಳಿಸಿದ್ದಾರೆ.

    ರುದ್ರಾ ಗುಹೆಯಲ್ಲಿ ಧ್ಯಾನ ಮಾಡಲು ಆನ್‍ಲೈನ್‍ನಲ್ಲಿ ಬುಕ್ ಮಾಡಿದ ಯಾತ್ರಿಕರು ತಾವು ಬುಕ್ಕಿಂಗ್ ಮಾಡಿದ ದಿನಾಂಕಕ್ಕಿಂತ ಎರಡು ದಿನಗಳ ಮೊದಲೇ ಕೇದಾರನಾಥದ ಬೇಸ್ ಕ್ಯಾಂಪ್ ಆಗಿರುವ ಗುಪ್ತಾಕ್ಷಿಗೆ ತಲುಪಬೇಕು. ಅಲ್ಲಿ ಕೇದಾರನಾಥ ದೇಗುಲಕ್ಕೆ ಹೋದುವ ಎಲ್ಲಾ ಯಾತ್ರಿಕರಿಗೂ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಬಳಿಕ ಯಾತ್ರಿಕರು ಗುಪ್ತಾಕ್ಷಿಯಿಂದ ಕೇದಾರನಾಥ ದೇಗುಲ ತಲುಪಿದ ಬಳಿಕ ಮತ್ತೆ ಅಲ್ಲಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆ ನಂತರ ಯಾತ್ರಿಕರು ಆರೋಗ್ಯವಾಗಿದ್ದರೆ ಮಾತ್ರ ಅವರಿಗೆ ಗುಹೆ ಒಳಗೆ ಕಳುಹಿಸಲಾಗುತ್ತದೆ.

    ಹಾಗೆಯೇ ಮೂರು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಗುಹೆ ಬುಕ್ ಮಾಡುವಂತಿಲ್ಲ. ಒಂದು ಬಾರಿಗೆ ಕೇವಲ ಓರ್ವ ಯಾತ್ರಿಕರಿಗೆ ಮಾತ್ರ ಗುಹೆಗೆ ಪ್ರವೇಶ ನೀಡಲಾಗುತ್ತದೆ. ಜೊತೆಗೆ ಗುಹೆಯಲ್ಲಿ ಫೋನ್ ವ್ಯವಸ್ಥೆ ಕೂಡ ಇದೆ. ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾದರೆ ಫೋನ್ ಮೂಲಕ ಜಿಎಂವಿಎನ್ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಇದೇ ರೀತಿ ಆಧುನಿಕ ಗುಹೆಗಳು ಕೂಡ ಕೇದಾರನಾಥ ಹಾಗೂ ಬದರಿನಾಥ ದೇಗುಲದ ಅಕ್ಕಪಕ್ಕದ ಪರ್ವತಗಳಲ್ಲಿ ನಿರ್ಮಾಣ ಮಾಡಲಾಗಿದೆ.

    ಗುಹೆಗೆ ಬಂದ ಯಾತ್ರಿಕರಿಗೆ ಜಿಎಂವಿಎನ್ ಕುಡಿಯುವ ನೀರಿನ ವ್ಯವಸ್ಥೆ, ಊಟ, ಶೌಚಾಲಯ, ವಿದ್ಯುತ್ ಸಂಪರ್ಕ ಹಾಗೂ ಮಲಗಲು ಹಾಸಿಗೆ ಹೀಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡುತ್ತದೆ. ಆದರೆ ಒಂದು ಸಲ ಗುಹೆಯನ್ನು ಆನ್‍ಲೈನ್ ಬುಕ್ ಮಾಡಿದ ಬಳಿಕ ಬುಕ್ಕಿಂಗ್ ಅನ್ನು ರದ್ದು ಮಾಡಿದರೆ ಅಥವಾ ಕಾರಣಾಂತರಗಳಿಂದ ಗುಹೆಯಲ್ಲಿ ಇರಲು ಯಾತ್ರಿಕರು ನಿರಾಕರಿಸಿದರೆ ಪಾವತಿಸಿದ ಹಣವನ್ನು ವಾಪಸ್ ನೀಡುವುದಿಲ್ಲ. ಹಾಗೆಯೇ ಒಂದು ವೇಳೆ ಮಾಡಿದ್ದ ಬುಕ್ಕಿಂಗ್ ರದ್ದಾದಲ್ಲಿ ಆ ದಿನ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸ್ಥಳದಲ್ಲಿದ್ದ ಯಾತ್ರಿಕರಿಗೆ 990 ರೂಪಾಯಿಯಲ್ಲಿ ಗುಹೆಯಲ್ಲಿ ಧ್ಯಾನ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಅಲ್ಲಿನ ಆಡಳಿತ ಮಂಡಳಿ ತಿಳಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]