Tag: ಯಾತ್ರಾ

  • ಮೊದಲ ಬಾರಿಗೆ ಮಕ್ಕಳೊಂದಿಗೆ ಕಾಣಿಸಿಕೊಂಡ ಧನುಷ್

    ಮೊದಲ ಬಾರಿಗೆ ಮಕ್ಕಳೊಂದಿಗೆ ಕಾಣಿಸಿಕೊಂಡ ಧನುಷ್

    ಜನಿಕಾಂತ್ ಅಳಿಯ ಖ್ಯಾತ ನಟ ಧನುಷ್, ವಿಚ್ಛೇಧನದ ಬಳಿಕೆ ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರೀತಿ ಹಂಚಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಅವರು ಪತ್ನಿ ಐಶ್ವರ್ಯ ರಜನಿಕಾಂತ್ ಅವರ ವಿಡಿಯೋ ಆಲ್ಬಂಗೆ ಶುಭ  ಹಾರೈಸಿ ಟ್ವಿಟ್ ಮಾಡಿದ್ದರು. ಇದೀಗ ತಮ್ಮ ಇಬ್ಬರು ಮಕ್ಕಳ ಜತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಪುನೀತ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

    ನೆನ್ನೆಯಷ್ಟೇ ನಡೆದ ‘ರಾಕ್ ವಿತ್ ರಾಜಾ’ ಸಂಗೀತ ಕಾರ್ಯಕ್ರಮಕ್ಕೆ ತಮ್ಮಿಬ್ಬರ ಮಕ್ಕಳಾದ ಯಾತ್ರಾ ಮತ್ತು ಲಿಂಗ ಅವರನ್ನು ತಮ್ಮ ಜತೆಗೆ ಕರೆತಂದಿದ್ದರು ಧನುಷ್. ಹೀಗೆ ಮೊದಲ ಬಾರಿಗೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮ ಮುಗಿಯುವ ತನಕವೂ ಅಪ್ಪನ ಅಕ್ಕಪಕ್ಕದಲ್ಲಿ ಮಕ್ಕಳು ಕೂತು ಕಾರ್ಯಕ್ರಮ ವೀಕ್ಷಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಕೆಲವು ತಿಂಗಳ ಹಿಂದೆಯಷ್ಟೇ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳುವ ದಿನಗಳು ಬಂದಿವೆ ಎಂದು ಐಶ್ವರ್ಯ ಜತೆಗೆ ವಿಚ್ಛೇಧನ ಪಡೆಯುತ್ತಿರುವುದಾಗಿ ನಟ ಧನುಷ್ ಘೋಷಣೆ ಮಾಡಿದ್ದರು. ತಾವಿಬ್ಬರೂ ಗೌರವಯುತವಾಗಿಯೇ ದೂರವಾಗುತ್ತಿದ್ದೇವೆ ಎಂದು ಐಶ್ವರ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ, ಮತ್ತೆ ಮತ್ತೆ ಅವರು ತಮ್ಮ ನಡುವಿನ ಬಾಂಧವ್ಯದ ಕುರಿತಾಗಿ ಕುರುಹುಗಳನ್ನು ಬಿಟ್ಟುಕೊಡುತ್ತಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಐಶ್ವರ್ಯ ಮತ್ತು ಧನುಷ್ ದಾಂಪತ್ಯ ಜೀವನಕ್ಕೆ ದಶಕದ ಸಂಭ್ರಮ. ಅಷ್ಟರಲ್ಲಿ ಡಿವೋರ್ಸ್ ವಿಚಾರ ಬಂದು ರಜನಿಕಾಂತ್ ಕುಟುಂಬವನ್ನೇ ನೋವಿಗೆ ತಳ್ಳಿತ್ತು. ಮಗಳು ಮತ್ತೆ ಧನುಷ್ ಜತೆಯೇ ಬದುಕಲಿ ಎಂದು ರಜನಿಕಾಂತ್ ಕೂಡ ಆಸೆಪಟ್ಟು, ಮತ್ತೆ ಒಂದು ಮಾಡಲು ನೋಡಿದರು. ಅದು ಸರಿ ಹೋದಂತೆ ಕಾಣುತ್ತಿಲ್ಲ. ಹೀಗಾಗಿ ಆಗಲೇ ಇಬ್ಬರೂ ದೂರ ದೂರವೇ ವಾಸಿಸುತ್ತಿದ್ದಾರೆ. ಮಕ್ಕಳು ಮಾತ್ರ ಎರಡೂ ಮನೆಯಲ್ಲಿ ಇರುತ್ತಾರೆ ಎನ್ನುವ ಮಾಹಿತಿ ಇದೆ.