Tag: ಯಾಂಗೂನ್

  • ಮ್ಯಾನ್ಮಾರ್ ಸೇನಾ ದಂಗೆ, ಸೂಕಿ ಬಂಧನ – ತುರ್ತು ಪರಿಸ್ಥಿತಿ ಘೋಷಣೆ

    ಮ್ಯಾನ್ಮಾರ್ ಸೇನಾ ದಂಗೆ, ಸೂಕಿ ಬಂಧನ – ತುರ್ತು ಪರಿಸ್ಥಿತಿ ಘೋಷಣೆ

    ಯಾಂಗೂನ್:  ಮ್ಯಾನ್ಮಾರ್‌ನಲ್ಲಿ ಆಂತರಿಕ ದಂಗೆ ಆರಂಭವಾಗಿದ್ದು ಸೇನೆಯ ಯಾಂಗೂನ್ ನಗರ ಸರ್ಕಾರಿ ಕಟ್ಟಡದ ಮೇಲೆ ನಿಂತ್ರಣ ಸಾಧಿಸಿ ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಫೋಷಿಸಿದೆ.

    ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‍ಎಲ್‍ಡಿ) ಪಕ್ಷವು ಚುನಾವಣೆಯಲ್ಲಿ ಸರ್ಕಾರ ರಚಿಸಲು ಬೇಕಾದ ಬಹುಮತವನ್ನು ಪಡೆದಿತ್ತು. ಆದರೆ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಮಿಲಿಟಿರಿ ಆರೋಪ ಮಾಡಿತ್ತು. ತನ್ನ ಅಧಿಕಾರವನ್ನು ಮರಳಿ ವಶಪಡಿಕೊಳ್ಳುವ ಬಗ್ಗೆ ಕಳೆದವಾರ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದೆ. ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಅವರನ್ನು ನಾಯ್‍ಪಿಡಾವ್‍ನಲ್ಲಿ ಬಂಧಿಸಲಾಗಿದೆ ಎಂದು ಎನ್‍ಎಲ್‍ಡಿ ವಕ್ತಾರ ಮೈಯೋ ನ್ಯುಂಟ್ ತಿಳಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ದೇಶದಲ್ಲಿ ಒಂದು ವರ್ಷ ಎಮರ್ಜೆಸ್ಸಿ ಹೇರಿರುವುದು ಮಿಲಿಟಿರಿ ಡಿವಿಯಲ್ಲಿ ಘೋಷಿಸಲಾಗಿದೆ.

    ಯಾಂಗೂನ್ ನಗರದ ಸರ್ಕಾರಿ ಕಟ್ಟಡದ ಮೇಲೆ ಸಶಸ್ತ್ರ ಪಡೆಗಳು ಸೋಮವಾರ ನಿಯಂತ್ರಣ ಸಾಧಿಸಿದ್ದವು. ದೇಶದ ಪರಮೋಚ್ಚ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಸೇನೆಯು ಬಂಧಿಸಿದ ನಂತರ ಅಲ್ಲಿ ದಂಗೆಯ ಲಕ್ಷಣಗಳು ಗೋಚರಿಸಿದ್ದವು.

    2011ರಲ್ಲಿ ಪ್ರಜಾಪ್ರಭುತ್ವ ಸುಧಾರಣೆ ಬರುವವರೆಗೂ ಸುಮಾರು 5 ದಶಕಗಳಕಾಲ ಮಯನ್ಮಾರ್‍ನಲ್ಲಿ ಮಿಲಿಟರಿ ಆಡಳಿತ ನಡೆಸಿತ್ತು. ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ನಡೆದ ವಂಚನೆ ನಡೆದಿದೆ ಎಂದ ಆರೋಪ ಕೇಳಿ ಬಂದಿದೆ. ಹೀಗಾಗಿ ಮಿಲಿಟರಿ ಹಾಗೂ ದೇಶದ ನಾಗರಿಕ ಸರ್ಕಾರದ ನಡುವೆ ಉದ್ವಿಗ್ನತೆ ಏರ್ಪಟ್ಟಿದೆ.