Tag: ಯಶ್ ಶೆಟ್ಟಿ

  • ಯಶ್ ಶೆಟ್ಟಿ ಚಿತ್ರಕ್ಕೆ ಟೈಟಲ್ ಫಿಕ್ಸ್ : ಡೈರೆಕ್ಟರ್ ಸುನಿ ಅನಾವರಣ

    ಯಶ್ ಶೆಟ್ಟಿ ಚಿತ್ರಕ್ಕೆ ಟೈಟಲ್ ಫಿಕ್ಸ್ : ಡೈರೆಕ್ಟರ್ ಸುನಿ ಅನಾವರಣ

    ಮ್ಮ ಅಮೋಘ ಅಭಿನಯದ ಮೂಲಕ ಜನರಮನ ಗೆದ್ದಿರುವ ಯಶ್ ಶೆಟ್ಟಿ (Yash Shetty) ನಾಯಕರಾಗಿ ನಟಿಸಿರುವ ನೂತನ ಚಿತ್ರದ (Jungle Mangal) ಶೀರ್ಷಿಕೆಯನ್ನು ನಿರ್ದೇಶಕ ಸಿಂಪಲ್ ಸುನಿ ಅನಾವರಣ ಮಾಡಿದರು. ನಂತರ ಸುನಿ ಹಾಗೂ ಚಿತ್ರತಂಡದವರು ಮಾತನಾಡಿದರು.

    ಇದು ಅರೆ ಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆ. ಅರೆ ಮಲೆನಾಡು ಎಂದರೆ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎರಡು ಸಂಧಿಸುವ ಊರು. ಅಲ್ಲಿ ವಿವಿಧ ಸಂಸ್ಕೃತಿಯ ಜನರು ಇರುತ್ತಾರೆ. ಅಲ್ಲೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ನಡೆಯುವ ಪ್ರೇಮಕಥೆಯೂ ಈ ಚಿತ್ರದಲ್ಲಿದೆ‌. ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಸುಬ್ರಹ್ಮಣ್ಯದ ಬಳಿಯ ಕಾಡಿನಲ್ಲೇ ನಡೆದಿದೆ. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಹಾಗೂ ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತದೆ. ಇನ್ನು ನನಗೆ ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ನನಗಿರುವ ನಿರ್ದೇಶನದ ಆಸೆಗೆ ನನ್ನ ಸ್ನೇಹಿತರು ಆಸರೆಯಾದರು. ಸಹ್ಯಾದ್ರಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ಸಿಂಪಲ್ ಸುನಿ ನಮ್ಮ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ ಎಂದರು ಪುತ್ತೂರು ಮೂಲದ ನಿರ್ದೇಶಕ ರಕ್ಷಿತ್ ಕುಮಾರ್.

    ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ ಎಂದು ಮಾತನಾಡಿದ ಯಶ್ ಶೆಟ್ಟಿ, ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ವಿಭಿನ್ನ ಕಥೆ ಎನ್ನಬಹುದು. ಮೊದಲು ಉಗ್ರಂ ಮಂಜು ಅವರ ಪಾತ್ರ ನಾನು ಮಾಡಬೇಕಿತ್ತು. ಆನಂತರ ಬದಲಾಗಿ ನಿರ್ದೇಶಕರು ಈ ಪಾತ್ರ ನೀಡಿದರು. ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ತಂಡಕ್ಕೆ ಸಹಕಾರ ನೀಡುತ್ತಿರುವ ಸುನಿ ಅವರಿಗೆ ಧನ್ಯವಾದ ಎಂದರು. ದಿವ್ಯ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರ ನನ್ನದು. ಈ ಹುಡುಗಿಗೆ ಜವಾಬ್ದಾರಿ ಇಲ್ಲದ ಹುಡುಗನ ಜೊತೆ ಪ್ರೀತಿ. ಒಂದು ಕಡೆ ಕುಟುಂಬ, ಮತ್ತೊಂದು ಕಡೆ ಪ್ರೀತಿ. ಈ ಎರಡರಲ್ಲಿ ನನ್ನ ಆಯ್ಕೆ ಏನು? ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು ನಟಿ ಹರ್ಷಿತಾ ರಾಮಚಂದ್ರ.

    ನನ್ನ ಕೆಲವು ಚಿತ್ರಗಳಿಗೆ ಈ ಚಿತ್ರದ ಸಂಕಲನಕಾರ ಮಂಜು ಶೇಡ್ಗಾರ್ ಸಂಕಲನ ಮಾಡಿದ್ದಾರೆ. ಅವರಿಂದ ನನಗೆ ಈ ತಂಡದ ಪರಿಚಯವಾಯಿತು. ಈ ಚಿತ್ರಕ್ಕೆ ನಿಮ್ಮ ಸಹಕಾರವಿರಬೇಕು ಎಂದರು. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಸಿಂಪಲ್ ಸುನಿ ತಿಳಿಸಿದರು. ಸಂಕಲನಕಾರ ಮನು ಶೇಡ್ಗಾರ್ ಹಾಗೂ ಬಂಡವಾಳ ಹೂಡಿರುವ ಪ್ರಜೀತ್ ಹೆಗಡೆ ಅವರು “ಜಂಗಲ್ ಮಂಗಲ್” ಚಿತ್ರವನ್ನು ಬೆಂಬಲಿಸುವಂತೆ ಕೇಳಿಕೊಂಡರು.

  • ‘ಬೇರ’ ಮೂಲಕ ಹಿರಿತೆರೆಗೆ ಕಾಲಿಟ್ಟ ಕಿರುತೆರೆಯ ಫೇಮಸ್ ನಿರ್ದೇಶಕ ವಿನು ಬಳಂಜ

    ‘ಬೇರ’ ಮೂಲಕ ಹಿರಿತೆರೆಗೆ ಕಾಲಿಟ್ಟ ಕಿರುತೆರೆಯ ಫೇಮಸ್ ನಿರ್ದೇಶಕ ವಿನು ಬಳಂಜ

    ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ (Vinu Balanja) ‘ಬೇರ’ (Bera) ಚಿತ್ರ ನಿರ್ದೇಶಿಸುವ  ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಚಿತ್ರತಂಡದ ಸದಸ್ಯರು “ಬೇರ” ಚಿತ್ರದ ಕುರಿತು ಮಾತನಾಡಿದರು.

    ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂ ಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ ‘ಬೇರ’ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ‘ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು’ ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದು ನಿರ್ದೇಶಕ ವಿನು ಬಳಂಜ ತಿಳಿಸಿದರು.

    ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ ಎಲ್ ವಿ ಕಲರ್ಸ್  ಲಾಂಛನದಲ್ಲಿ “ಬೇರ” ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು ನಿರ್ಮಾಪಕ ದಿವಾಕರ ದಾಸ. ಇದನ್ನೂ ಓದಿ:ಬಿಗ್ ಆಫರ್ ನೀಡಿದ ಕಿರಣ್ ರಾಥೋಡ್ : ಫೋಟೋ, ವಿಡಿಯೋಗೆ ಇಂತಿಷ್ಟು ರೇಟು

    ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದ ಖುಷಿಯಿದೆ.  ನಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದರು ಚಿತ್ರದಲ್ಲಿ ನಟಿಸಿರುವ ದತ್ತಣ್ಣ (Duttanna), ಯಶ್ ಶೆಟ್ಟಿ (Yash Shetty), ಹರ್ಷಿಕಾ ಪೂಣಚ್ಛ (Harshika), ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್  ಮುಂತಾದವರು. ಛಾಯಾಗ್ರಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ಕೂಡ ‘ಬೇರ’ ಚಿತ್ರದ ಕುರಿತು ಮಾತನಾಡಿದರು.

  • ‘ಪೆಪೆ’ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಹೊಸ ಅವತಾರ

    ‘ಪೆಪೆ’ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಹೊಸ ಅವತಾರ

    ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೆಪೆ’. ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರದ ರಗಡ್ ಟೀಸರ್ ಝಲಕ್ ಸಿನಿ ರಸಿಕರಲ್ಲಿ ಒಂದಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಇದೀಗ ಚಿತ್ರತಂಡ ಹೊಸ ವರ್ಷಕ್ಕೆ ಮಾಸ್ ಫೀಲ್ ಇರೋ ರಗಡ್ ಪೋಸ್ಟರ್ ಬಿಡುಗಡೆ ಮಾಡಿದೆ. ವಿನಯ್ ರಾಜ್ ಕುಮಾರ್ ನಯಾ ಅವತಾರ, ಮಾಸ್ ಲುಕ್ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದೆ.

    ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ‘ಪೆಪೆ’ ಚಿತ್ರತಂಡ ನಿರತವಾಗಿದೆ. ಟೈಟಲ್ ಮೂಲಕವೇ ಕುತೂಹಲವನ್ನು ಹುಟ್ಟುಹಾಕಿರುವ ಈ ಚಿತ್ರ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಗ್ಯಾಂಗ್ ಸ್ಟಾರ್ ಸಿನಿಮಾ ಇದಾಗಿದ್ದು, ವಿನಯ್ ರಾಜ್ ಕುಮಾರ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಅವತಾರ ತಾಳಿದ್ದಾರೆ. ಒಂದೇ ಜಾನರ್ ಸಿನಿಮಾಗೆ ಒಗ್ಗಿ ಕೊಳ್ಳದೇ, ಪ್ರತಿ ಬಾರಿ ವಿಭಿನ್ನ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್ ಕುಮಾರ್ ಈ ಚಿತ್ರದಲ್ಲಿ ಕಂಪ್ಲೀಟ್ ಡಿಫ್ರೆಂಟ್ ಅವತಾರ ತಾಳಿದ್ದಾರೆ. ಗ್ಯಾಂಗ್ ಲೀಡರ್ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದು, ಟೀಸರ್ ಹಾಗೂ ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿವೆ. ದೊಡ್ಮನೆ ಅಭಿಮಾನಿ ಬಳಗ ವಿನಯ್ ಲುಕ್ ಕಂಡು ಥ್ರಿಲ್ ಆಗಿದ್ದು ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ನಾನಿ ಜೊತೆ ಡುಯೆಟ್ ಹಾಡಲು ರೆಡಿಯಾದ್ರು `ಸೀತಾರಾಮಂ’ ನಟಿ

    ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ‘ಪೆಪೆ’ ಸಿನಿಮಾವನ್ನು ಸೆರೆ ಹಿಡಿಯಾಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್ ನಡಿ ಉದಯ್ ಮತ್ತು ಶ್ರೀರಾಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಧರಣಿ ಮಂಡಲ ಮಧ್ಯದೊಳಗೆ’  ಚಿತ್ರ ತಂಡದಿಂದ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ

    ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರ ತಂಡದಿಂದ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ

    ಗಾಗಲೇ ಒಂದು ಹೊಸ ರೀತಿಯ ಸದಭಿರುಚಿಯ ಚಿತ್ರ ಧರಣಿ ಮಂಡಲ ಮಧ್ಯದೊಳಗೆ  ಚಿತ್ರ ತಂಡ ಈಗ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ ನೀಡುವ‌ ಮೂಲಕ    “K A” ಎಂಬ ಅರ್ಧ ಶೀರ್ಷಿಕೆಯನ್ನು ಅನಾವರಣ ಗೊಳಿಸಿ ಪ್ರಾರಂಭದಲ್ಲೇ  ಕುತೂಹಲವನ್ನು ಕಾಯ್ದಿರಿಸಿದ್ದಾರೆ.

    ವಿಜಯನಗರದ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶೀರ್ಷಿಕೆ ಅನಾವರಣದ ಕಾರ್ಯ ನೆಡೆದಿದೆ. ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ  ಸಂತೋಷ್ ಈಗ ಸ್ವತಂತ್ರ ನಿರ್ದೇಶಕನಾಗಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ನಾಯಕ ನಟರಾಗಿ ಯಶ್ ಶೆಟ್ಟಿ ಹಾಗೂ ಸಿದ್ದು ಮೂಲಿಮನಿ ಬಣ್ಣ ಹಚ್ಚಿದ್ದಾರೆ

    ಯಶ್ ಶೆಟ್ಟಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗೆಯೇ ಸಿದ್ದು ಮೂಲಿಮನಿ ಕೂಡ ತಮ್ಮ ಅಭಿನಯ ಚತುರತೆಯನ್ನು ಪ್ರೇಕ್ಷಕರ ಮುಂದಿಟ್ಟು ತಾನೊಬ್ಬ ಒಳ್ಳೆಯ ಕಲಾವಿದ ಎನ್ನುವುದನ್ನು ನಿರೂಪಿಸಿದ್ದಾರೆ. ತಾಂತ್ರಿಕವಾಗಿ “ಧರಣಿ ಮಂಡಲ ಮಧ್ಯದೊಳಗೆ” ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲಿ ಕೈ ಜೋಡಿಸಿದ್ದಾರೆ. ಇದನ್ನೂ ಓದಿ: ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

    ಛಾಯಾಗ್ರಾಹಕ ನಾಗಿ ಕೀರ್ತನ್ ಪೂಜಾರಿ, ಸಂಗೀತ ನಿರ್ದೇಶಕರಾಗಿ ರೋಣದ ಬಕ್ಕೇಷ್ ಹಾಗೂ ಕಾರ್ತೀಕ್‌ ಚಿನ್ನೋಜಿ ರಾವ್ ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ, ಗೀತ ರಚನೆ ಗೌಸ್ ಪೀರ್, ಸಂಕಲನಕಾರನಾಗಿ ಉಜ್ವಲ್ ಚಂದ್ರ,ಸಾಹಸ ನಿರ್ದೇಶಕನಾಗಿ ಚಂದ್ರು ಬಂಡೆ,ಪ್ರಶಾಂತ್ ಚಿತ್ರದ ಕಲೆಯ ಭಾಗದ ಜವಾಬ್ದಾರಿ ಹೊತ್ತಿದ್ದಾರೆ, ಸಂಭಾಷಣೆಗೆ  ಅಭಿನಂದನ್ ದೇಶ್ ಪ್ರಿಯ, ಪ್ರಶಾಂತ್, ಶಿವಕುಮಾರ್, ಕಡ್ಡಿಪುಡಿ ಕಾಂತರಾಜ್ ಜೊತೆಯಾಗಿದ್ದಾರೆ. ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು ಮುಂದಿನ ದಿನಗಳಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಮತ್ತಷ್ಟು  ಮಾಹಿತಿ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರೇಕ್ಷಕನ ತಲೆಗೆ ಕೆಲಸ ಕೊಟ್ಟ ‘ವಿರಾಟ ಪರ್ವ’ ತಂಡ

    ಪ್ರೇಕ್ಷಕನ ತಲೆಗೆ ಕೆಲಸ ಕೊಟ್ಟ ‘ವಿರಾಟ ಪರ್ವ’ ತಂಡ

    ಮುದ್ದು ಮನಸೇ ಖ್ಯಾತಿಯ ಅನಂತ್ ಶೈನ್ ನಿರ್ದೇಶನದ ಎರಡನೇ ಸಿನಿಮಾ ‘ವಿರಾಟ ಪರ್ವ’. ಸಿನಿಮಾ ಪೋಸ್ಟರ್ ನಿಂದ ಹುಟ್ಟಿಸಿದ್ದ ಕ್ಯೂರಿಯಾಸಿಟಿ ಒಂದು ರೀತಿಯಲ್ಲಿತ್ತು. ಸಿನಿಮಾ ಹೀಗಿರಬಹುದಾ ಎಂಬ ಪ್ರೇಕ್ಷಕರ ಅಂದಾಜುಗಳು ಅದಕ್ಕೆ ತಕ್ಕದಾಗಿತ್ತು. ಆದ್ರೆ ಚಿತ್ರತಂಡ ಇಂದು ಟೀಸರ್ ರಿಲೀಸ್ ಮಾಡಿದ್ದು, ಪ್ರೇಕ್ಷಕನ ತಲೆಯಲ್ಲಿದ್ದ ಊಹೆಯನ್ನು ಉಲ್ಟಾ ಮಾಡಿದೆ. ಕಥೆ ಕೇಳಿ ಸಾಫ್ಟ್ ಥಿಂಕಿಂಗ್ ಮಾಡಿದ್ದ ಪ್ರೇಕ್ಷಕ ಟೀಸರ್ ನೋಡಿ, ಈ ಲೆವೆಲ್ ಗೆ ಸಿನಿಮಾನ ಅಂತ ಆಶ್ಚರ್ಯಚಕಿತನಾಗುವಂತೆ ಮಾಡಿದೆ.

    ‘ವಿರಾಟ ಪರ್ವ’ ಟೀಸರ್ ಇಂದು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಟೀಸರ್ ನಲ್ಲಿ ಮೊದಲಿಗೆ ಧರ್ಮ-ಅಧರ್ಮದ ಬಗ್ಗೆ ಬರುವ ಶ್ಲೋಕವೇ ಜನರ ಕಿವಿಯನ್ನು, ಮನಸ್ಸನ್ನು ತನ್ನತ್ತ ಸೆಳೆಯುವಂತೆ ಮಾಡಿಕೊಳ್ಳುತ್ತಿದೆ. ಆ ನಂತರದಲ್ಲಿ ಬರುವ ನಮ್ಗೆ ಯಾರು ಕೇಡು ಬಗಿತಾರೋ ಅವ್ರಿಗೆ ಖೆಡ್ಡಾ  ತೋಡಿದ್ರೆ ಅದು ಅಧರ್ಮವೇ ಅಲ್ಲ ಎಂಬ ಮಾತು ಪ್ರೇಕ್ಷಕನ ಮನಸ್ಸು ಹೌದು ಎನ್ನುವಂತೆ ಮಾಡುತ್ತದೆ.

    ಆಕ್ಸಿಡೆಂಟ್, ಕೊಲೆ, ಗನ್ನು, ಹಾಸ್ಪಿಟಲ್, ಹೊಡೆದಾಟ, ಕಾಡಿನ ಚಿತ್ರಣ, ಭಯ ಪಡುವ ಮಗು, ಯಾರದ್ದೋ ಕೊಲೆ, ನಂಬಿಕೆ, ಸಂಬಂಧ, ಸಾವು ಎಲ್ಲವೂ ಟೀಸರ್ ನಲ್ಲಿ ಅಡಗಿದ್ದು ಕುತೂಹಲವನ್ನು ಕೆರಳಿಸಿದೆ. ನೈಜ ಘಟನೆಗಳ ಆಧಾರಿತ ಅಂತ ಸಬ್ ಟೈಟಲ್ ನಲ್ಲಿ ಹೇಳಿರುವಂತೆ ಯಾರ ಕಥೆಗಳು ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದು ಸಲ ಟೀಸರ್ ನೋಡಿದಾಗಲೇ ಎದೆ ಝಲ್ ಎನ್ನುತ್ತೆ. ಆದ್ರೂ ಆ ಟೀಸರ್ ನಲ್ಲಿ ಏನೋ ಇದೆ ಎಂಬುದು ಮನಸ್ಸಿಗೆ ನಾಟಿ ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದೆ. ಟೀಸರ್ ಇಷ್ಟರ ಮಟ್ಟಿಗೆ ಪ್ರೇಕ್ಷಕನ ಮನಸ್ಸೊಳಗೆ ಜಾಗ ಮಾಡಿಕೊಂಡು ಕುಳಿತಿರುವುದನ್ನು ನೊಡಿದ್ರೆ ಸಿನಿಮಾದ ನಿರೀಕ್ಷೆ ಈಗಿದ್ದಕ್ಕಿಂತ ಹೆಚ್ಚಾದಂತೆ ಕಾಣುತ್ತಿದೆ.

    ಎಸ್ ಆರ್ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ಸುನಿಲ್ ರಾಜ್ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಚಿತ್ರ ‘ವಿರಾಟಪರ್ವ’ಗೆ ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ, ಶಿವು ಬಿಕೆ ಶಿವಸೇನಾ ಛಾಯಾಗ್ರಹಣ ಮಾಡುತ್ತಿದ್ದಾರೆ. ಅರುಗೌಡ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ಹತ್ತು ಹಲವು ವಿಶೇಷತೆಗಳ ‘ವಿರಾಟಪರ್ವ’ ಟೀಸರ್ ಮಾರ್ಚ್ 14ಕ್ಕೆ?

    ಹತ್ತು ಹಲವು ವಿಶೇಷತೆಗಳ ‘ವಿರಾಟಪರ್ವ’ ಟೀಸರ್ ಮಾರ್ಚ್ 14ಕ್ಕೆ?

    ಇತ್ತೀಚೆಗೆ ಚಂದನವನದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಗಾಂಧಿನಗರದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡುತ್ತಿವೆ. ಅಂತಹ ಸಿನಿಮಾಗಳು ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿ ಕೂಡ ಆಗುತ್ತಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ತಂಡವೊಂದು ಸೇರ್ಪಡೆಗೊಂಡಿದೆ. ಆ ಚಿತ್ರತಂಡವೇ `ವಿರಾಟಪರ್ವ’. ಈಗಾಗಲೇ ಎರಡು ವಿಭಿನ್ನ ಪೋಸ್ಟರ್ ಗಳ ಮೂಲಕ ಈ ಚಿತ್ರ ಗಾಂಧಿನಗರ ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಇಂದೊಂದು ಹೈಪರ್ ಲಿಂಕ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈ ಹಿಂದೆ ಮುದ್ದು ಮನಸ್ಸೇ ಸಿನಿಮಾ ನಿರ್ದೇಶನ ಮಾಡಿದ್ದ ಅನಂತ್ ಶೈನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾವಾಗಿರೋ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಅರು ಗೌಡ, ಸಿದ್ದು, ಎಂ.ಜಿ. ಅಭಿನಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಮೂರು ವಿಭಿನ್ನ ಕ್ಯಾರೆಕ್ಟರ್ ಗಳ ಮನಸ್ಥಿತಿಗಳ ಸಮಾಗಮ ಚಿತ್ರದಲ್ಲಿದ್ದು, ಯಶ್ ಶೆಟ್ಟಿ ಚಿತ್ರದಲ್ಲಿ ಯೋಧನಾಗಿ ಬಣ್ಣಹಚ್ಚಿದ್ದು ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳಲ್ಲಿ ಒಂದಾಗಿದೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಹರಿವು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮಂಸೂರೆ ಈ ಚಿತ್ರದ ಪಾತ್ರವೊಂದಕ್ಕೆ ಮೊದಲ ಬಾರಿ ಬಣ್ಣಹಚ್ಚಿದ್ದಾರೆ. 130ಕ್ಕೂ ಹೆಚ್ಚು ಲೊಕೇಶನ್ ಗಳಲ್ಲಿ `ವಿರಾಟಪರ್ವ’ ಚಿತ್ರ ಚಿತ್ರಣಗೊಂಡಿದ್ದು ಹೀಗೆ ಹತ್ತು ಹಲವು ವಿಶೇಷತೆಗಳು ಚಿತ್ರದಲ್ಲಿದೆ.

    ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಚಿತ್ರಕ್ಕೆ ಸುನೀಲ್ ರಾಜ್ ಬಂಡವಾಳ ಹೂಡಿದ್ದಾರೆ. ವಿನೀತ್ ರಾಜ್ ಮೆನನ್ ಸಂಗೀತ ನಿರ್ದೇಶನ, ಶಿವ ಬಿ.ಕೆ ಹಾಗೂ ಶಿವಸೇನಾ ಇಬ್ಬರು ಕ್ಯಾಮೆರಾಮ್ಯಾನ್ ಗಳ ಕ್ಯಾಮೆರಾ ವರ್ಕ್ ವಿರಾಟಪರ್ವ ಚಿತ್ರಕ್ಕಿದೆ.