Tag: ಯಶ್ ಧುಲ್

  • Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಮುಂಬೈ: ಟೀಂ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದ ನಾಯಕ ಯಶ್ ಧುಲ್ ಡೆಲ್ಲಿ ಪರ ರಣಜಿಯಲ್ಲಿ ಪಾದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ.

    ವೆಸ್ಟ್ ಇಂಡೀಸ್‍ನಲ್ಲಿ ನಡೆದ ಅಂಡರ್-19 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದ ಯಶ್ ಧುಲ್ ಇಂದು ಡೆಲ್ಲಿ ಪರ ರಣಜಿ ಕ್ರಿಕೆಟ್ ಆಡಲು ಮೈದಾನಕ್ಕಿಳಿದಿದ್ದಾರೆ. ಡೆಲ್ಲಿ ಮತ್ತು ತಮಿಳುನಾಡು ನಡುವಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಡಿದ ಯಶ್ ಧುಲ್ 113 ರನ್ (150 ಎಸೆತ, 18 ಬೌಂಡರಿ) ಸಿಡಿಸಿ ಆಡಿದ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

    ವೆಸ್ಟ್ ಇಂಡೀಸ್‍ನಲ್ಲಿ ನಡೆದ ಅಂಡರ್-19 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದ ಯಶ್ ಧುಲ್ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಜೊತೆ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸಿದ್ದರು. ಅಂಡರ್-19 ವಿಶ್ವಕಪ್‍ನಲ್ಲಿ ಒಟ್ಟು 6 ಪಂದ್ಯದಲ್ಲಿ ಯಶ್ ಧುಲ್ 1 ಶತಕ 3 ಅರ್ಧಶತಕ ಸಹಿತ 331 ರನ್ ಸಿಡಿಸಿದ್ದಾರೆ. ಅಲ್ಲದೇ ಐಪಿಎಲ್ ಮೆಗಾ ಹರಾಜಿನಲ್ಲಿ 50 ಲಕ್ಷ ರೂ.ಗೆ ಡೆಲ್ಲಿ ಕಾಪಿಟಲ್ಸ್ ತಂಡ ಖರೀದಿಸಿದೆ.

  • U19 World Cup 2022 semifinal: ಯಶ್ ಧುಲ್ ಶತಕ – ಆಸ್ಟ್ರೇಲಿಯಾಗೆ 291 ರನ್ ಟಾರ್ಗೆಟ್

    U19 World Cup 2022 semifinal: ಯಶ್ ಧುಲ್ ಶತಕ – ಆಸ್ಟ್ರೇಲಿಯಾಗೆ 291 ರನ್ ಟಾರ್ಗೆಟ್

    ಆಂಟಿಗುವ: ಅಂಡರ್-19 ಸೆಮಿಫೈನಲ್‍ನಲ್ಲಿ ಭಾರತ ತಂಡದ ನಾಯಕ ಯಶ್ ಧುಲ್ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾಗೆ 291 ರನ್‍ಗಳ ಬೃಹತ್ ಟಾರ್ಗೆಟ್ ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಭಾರತ ತಂಡದ ಆರಂಭಿಕ ಆಟಗಾರರಾದ ಆಂಕ್ರಿಶ್ ರಘುವಂಶಿ 6 ರನ್ (30 ಎಸೆತ) ಮತ್ತು ಹರ್ನೂರ್ ಸಿಂಗ್ 16 ರನ್ (28 ಎಸೆತ, 3 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಒಂದಾದ ಶೇಕ್ ರಶೀದ್ ಮತ್ತು ಯಶ್ ಧುಲ್ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

    ಇಬ್ಬರು ಆಟಗಾರರು ಕೂಡ ಆಸ್ಟ್ರೇಲಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ರಶೀದ್ 94 ರನ್ (108 ಎಸೆತ, 8 ಬೌಂಡರಿ, 1 ಸಿಕ್ಸ್) ಬಾರಿಸಿ ಶತಕ ವಂಚಿತರಾದರೆ, ಯಶ್ ಧುಲ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು.

    ಯಶ್ ಧುಲ್ 110 ರನ್ (110 ಎಸೆತ, 10 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ರಾಜವರ್ಧನ್ ಹಂಗರಗೇಕರ್ 13 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಕಡೆಯಲ್ಲಿ ಭರ್ಜರಿಯಾಗಿ ಬ್ಯಾಟ್‍ಬೀಸಿದ ದಿನೇಶ್ ಬಣ ಅಜೇಯ 20 ರನ್ (4 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ನಿಶಾಂತ್ ಸಿಂಧು 12 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಮೊತ್ತ 280ರ ಗಡಿದಾಟಿಸಿದರು. ಆಸ್ಟ್ರೇಲಿಯಾ ಪರ ಜಾಕ್ ನಿಬ್ಬೆಟ್ ಮತ್ತು ವಿಲಿಯಂ ಸಾಲ್ಜ್‍ಮನ್ ತಲಾ 2 ವಿಕೆಟ್ ಪಡೆದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಪಿಎಲ್ ಹರಾಜು – 590 ಆಟಗಾರರಿಗೆ ಫೈನಲ್‌ ಪಟ್ಟಿಯಲ್ಲಿ ಸ್ಥಾನ

    ಅಂತಿಮವಾಗಿ ಭಾರತ 50 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 290 ರನ್ ಬಾರಿಸಿ, ಆಸ್ಟ್ರೇಲಿಯಾಗೆ 291 ರನ್ ಟಾರ್ಗೆಟ್ ನೀಡಿದೆ.