Tag: ಯಶ್‌ ಚೋಪ್ರಾ

  • ಕಾಣೆಯಾದ ನಟಿ ಊರ್ವಶಿ ರೌಟೇಲ್ ಖರೀದಿಸಿದ ₹190 ಕೋಟಿ ಬಂಗ್ಲೆ

    ಕಾಣೆಯಾದ ನಟಿ ಊರ್ವಶಿ ರೌಟೇಲ್ ಖರೀದಿಸಿದ ₹190 ಕೋಟಿ ಬಂಗ್ಲೆ

    ಬಾಲಿವುಡ್ ನಟಿ ಊರ್ವಶಿ ರೌಟೇಲ್ (Urvashi Rautela) ಮುಂಬೈನಲ್ಲಿ (Mumbai) 190 ಕೋಟಿ ರೂಪಾಯಿ ಬೆಲೆ ಬಾಳುವ ಬಂಗ್ಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ದುಬಾರಿ ಬೆಲೆಯ ಬಂಗ್ಲೆಯನ್ನು ನಟಿಗೆ ಖರೀದಿಸಲು ಹೇಗೆ ಸಾಧ್ಯವಾಯಿತು ಎಂದು ಜನರು ಮಾತನಾಡಿಕೊಂಡರು. ಅದರಲ್ಲೂ ಪ್ರತಿಷ್ಠಿತ ಏರಿಯಾದಲ್ಲಿ ಬಂಗ್ಲೆ ಹೇಗೆ ಸಿಕ್ಕಿತು ಎನ್ನುವ ಮಾತು ಕೇಳಿ ಬಂತು. ಇದೆಲ್ಲದಕ್ಕೂ ಊರ್ವಶಿ ತಾಯಿ ಮೀರಾ ರೌಟೇಲ್ (Meera Rautela) ಉತ್ತರಿಸಿದ್ದಾರೆ.

    ನನ್ನ ಮಗಳು 190 ಕೋಟಿ ರೂಪಾಯಿ ಬಂಗ್ಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಅಚ್ಚರಿ ಆಯಿತು. ದಯವಿಟ್ಟು ಆ ಮನೆ ಎಲ್ಲಿದೆ ಎಂದು ಹುಡುಕಿಕೊಡಿ. ಅಲ್ಲದೇ, ನನ್ನ ಮಗಳು ಅಷ್ಟು ದುಬಾರಿ ಮನೆ ಖರೀದಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು ಕಪೋಕಲ್ಪಿತ ಸುದ್ದಿ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ:ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೇಟ್ ಡೇಟ್ ಫಿಕ್ಸ್

    ಮುಂಬೈನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜುಹು ಪ್ರದೇಶದಲ್ಲಿ ಊರ್ವಶಿ ಮನೆ ಖರೀದಿಸಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು. ಅದರಲ್ಲೂ ಖ್ಯಾತ ನಿರ್ಮಾಪಕ ಯಶ್ ಚೋಪ್ರಾ (Yash Chopra) ಅವರ ಮನೆಯ ಹಿಂದೆಯೇ ಆ ಬಂಗ್ಲೆ ಇದೆ ಎಂದು ಸುದ್ದಿ ಹರಿಬಿಡಲಾಗಿತ್ತು. ಆ ಮನೆಗೆ ದುಬಾರಿ ಬೆಲೆಯನ್ನೂ ನಿಗದಿ ಮಾಡಲಾಗಿತ್ತು. ಇದೆಲ್ಲವೂ ಸುಳ್ಳು ಸುದ್ದಿ ಎಂದು ಊರ್ವಶಿ ತಾಯಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ನಿರ್ಮಾಪಕ ಯಶ್ ಚೋಪ್ರಾ ಪತ್ನಿ ಪಮೇಲಾ ನಿಧನ

    ನಿರ್ಮಾಪಕ ಯಶ್ ಚೋಪ್ರಾ ಪತ್ನಿ ಪಮೇಲಾ ನಿಧನ

    ಬಾಲಿವುಡ್ (Bollywood) ನಿರ್ಮಾಪಕ- ನಿರ್ದೇಶಕ ದಿವಂಗತ ಯಶ್ ಚೋಪ್ರಾ (Yash Chopra) ಮಡದಿ ಪಮೇಲಾ ಚೋಪ್ರಾ (Pamela Chopra) ಅವರು ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಗಾಯಕಿಯಾಗಿ ಪಮೇಲಾ ಚೋಪ್ರಾ ಗುರುತಿಸಿಕೊಂಡಿದ್ದರು. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ 15 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಏಪ್ರಿಲ್ 20) ಬೆಳಗ್ಗೆ ಪಮೇಲಾ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್

    1970ರಲ್ಲಿ ಯಶ್ ಚೋಪ್ರಾ ಜೊತೆ ಪಮೇಲಾ ಚೋಪ್ರಾ ಮದುವೆ ನಡೆದಿತ್ತು. ಈ ದಂಪತಿಗೆ ಆದಿತ್ಯ- ಉದಯ್ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯಕಿಯಾಗಿದ್ದ ಪಮೇಲಾ ಪತಿ ಯಶ್ ಚೋಪ್ರಾ ಸಿನಿಮಾಗಳಿಗೆ ಹಾಡಿದ್ದರು. ‘ಕಬಿ ಕಬೀ’ ಚಿತ್ರದಿಂದ ‘ಮುಜ್‌ಸೇ ದೋಸ್ತಿ ಕರೊಗೆ’ ಚಿತ್ರಗಳವರೆಗೆ ಪಮೇಲಾ ಹಾಡಿದ್ದರು.

    ಇದೀಗ ಮುಂಬೈನ ಪಮೇಲಾ ನಿವಾಸದಲ್ಲಿ ಪಮೇಲಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಚಿತ್ರರಂಗದ ಸ್ನೇಹಿತರು, ಆಪ್ತರು ಗಾಯಕಿ ಪಮೇಲಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.