Tag: ಯಶೋಧಾ

  • ಅಕ್ಕನ ಸಾವನ್ನು ಕಣ್ಣಾರೆ ನೋಡಿದ್ರಿಂದ ಆತ್ಮಹತ್ಯೆ ನಿರ್ಧಾರ ಮಾಡಿದ್ದೆ: ಮೃತ ಅಂಜಲಿ ಸಹೋದರಿ

    ಅಕ್ಕನ ಸಾವನ್ನು ಕಣ್ಣಾರೆ ನೋಡಿದ್ರಿಂದ ಆತ್ಮಹತ್ಯೆ ನಿರ್ಧಾರ ಮಾಡಿದ್ದೆ: ಮೃತ ಅಂಜಲಿ ಸಹೋದರಿ

    ಹುಬ್ಬಳ್ಳಿ: ಅಕ್ಕ ಅಂಜಲಿ ಅಂಬಿಗೇರ ಸಾವನ್ನು ಕಣ್ಣಾರೆ ಕಂಡು ಮನಸ್ಸಿಗೆ ಘಾಸಿಯಾಗಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರುವುದಾಗಿ ಸಹೋದರಿ ಯಶೋಧಾ ಹೇಳಿದ್ದಾರೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಬಳಿಕ ಪ್ರತಿಕ್ರಿಯಿಸಿದ ಅವರು, ನನಗೆ ಪೊಲಿಸರ ಮೇಲೆ ನಂಬಿಕೆಗಿಂತ ನಿರಂಜನ ಹಾಗೂ ಅನೂಪ ಅಂಕಲ್ ಅವರ ಮೇಲೆ ಇದೆ. ಈಗಾಗಲೇ ಕೋರ್ಟ್ ಆರ್ಡರ್ ಬಂದಿದೆ ಅಂತ ಅವನಿಗೆ ಚಿಕಿತ್ಸೆ ಕೊಡ್ತಿದ್ದಾರಂತೆ. ಅವನು ನಮ್ಮ ಅಕ್ಕನ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡ್ತಿದ್ದಾನೆ. ಹಾಗಾಗಿ ಮನಸ್ಸಿಗೆ ನೋವಾಗಿದೆ. ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ. ಅವನಿಗೆ ಗಲ್ಲು ಶಿಕ್ಷೆ ಕೊಡಿ ಇಲ್ಲವೇ ಎನ್ ಕೌಂಟರ್ ಮಾಡಿ ಎಂದು ಆಗ್ರಹಿಸಿದರು.

    ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ. ಘಟನೆ ಸಂಬಂಧ ಶನಿವಾರ (ಮೇ 18) ಅಂಜಲಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಜಲಿ ಸಹೋದರಿ ಯಶೋಧಾ, ಮನೆಗೆ ಮರಳಿದ ಬಳಿಕ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯಶೋಧಾ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎನ್ನಲಾಗಿತ್ತು.

  • ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

    ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

    ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಅವರ ಆರೋಗ್ಯದ ಬಗ್ಗೆ ಹಲವು ದಿನಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸಮಂತಾ ಅವರ ಮ್ಯಾನೇಜರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಅವರ ಆರೋಗ್ಯ ಚೆನ್ನಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದೂ ತಿಳಿಸಿದ್ದಾರೆ. ಆದರೂ, ಸಮಂತಾ ಅವರ ಆರೋಗ್ಯದ (Health) ಬಗ್ಗೆ ಅನುಮಾನ ಮೂಡುವುದು ನಿಂತಿಲ್ಲ. ಕಾರಣ, ಸಮಂತಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತು ಅವರ ಸಿನಿಮಾಗಳ ಕೆಲಸಗಳು ಅಲ್ಲಲ್ಲೇ ನಿಂತಿವೆ.

    ಸಮಂತಾ ನಟನೆಯ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಎರಡೂ ಸಿನಿಮಾಗಳಲ್ಲೂ ಇವರೇ ಹೀರೋ, ಇವರೇ ಹಿರೋಯಿನ್. ಶಾಕುಂತಲಾ (Shakuntala) ಮತ್ತು ಯಶೋಧಾ (Yashodha) ಚಿತ್ರಗಳನ್ನು ಮುಗಿಸಿರುವ ಸಮಂತಾ, ಅದರ ಬಿಡುಗಡೆಗಾಗಿ ಕಾಯುತ್ತಿದ್ದರು. ಆದರೆ, ಎರಡೂ ಚಿತ್ರಗಳ ರಿಲೀಸ್ ಮುಂದಕ್ಕೆ ಹೋಗುತ್ತಿವೆ. ಈಗಾಗಲೇ ಚಿತ್ರದ ಪೋಸ್ಟರ್, ಫಸ್ಟ್ ಲುಕ್ ಹೀಗೆ ಏನೆಲ್ಲ ರಿಲೀಸ್ ಆಗುತ್ತಿವೆ. ಒಂದಕ್ಕೂ ಸಮಂತಾ ರಿಯ್ಯಾಕ್ಟ್ ಮಾಡಿಲ್ಲ. ಆಯಾ ಪೋಸ್ಟರ್ ಅನ್ನು  ಅವರು ಹಂಚಿಕೊಂಡಿಲ್ಲ.

    ಅಂದುಕೊಂಡಂತೆ ಆಗಿದ್ದರೆ, ಶಾಕುಂತಲಾ ಸಿನಿಮಾ ರಿಲೀಸ್ ಇನ್ನಷ್ಟೇ ಆಗಬೇಕಿತ್ತು. ಆದರೆ, ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಮುಂದಕ್ಕೆ ಹಾಕಿದ್ದಾರೆ. ಕಾರಣವನ್ನು ಮಾತ್ರ  ಅವರು ನೀಡಿಲ್ಲ. ಹಾಗಾಗಿ ಸಮಂತಾ ಅವರ ಅನಾರೋಗ್ಯವೇ ಚಿತ್ರ ಮುಂದೂಡಲು ಕಾರಣ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಲ್ಲಿ (Fans) ಆತಂಕವೂ ಹೆಚ್ಚಾಗಿದೆ. ಈ ಕುರಿತು ಸ್ಪಷ್ಟನೆ ಸಿಗಬೇಕಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ:ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ಸಮಂತಾ ಚರ್ಮರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಅಮೆರಿಕಾಗೆ (America) ತೆರಳಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹೀಗಾಗಿಯೇ ಅವರು ಯಾವುದೇ ಶೂಟಿಂಗ್ ಮತ್ತು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲದಕ್ಕೂ ಸಮಂತಾ ಅವರು ಉತ್ತರ ಕೊಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಸಮಂತಾ ಆರೋಗ್ಯ ಹೇಗಿದೆ? ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದ ಮ್ಯಾನೇಜರ್

    ನಟಿ ಸಮಂತಾ ಆರೋಗ್ಯ ಹೇಗಿದೆ? ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದ ಮ್ಯಾನೇಜರ್

    ಮಿಳಿನ ಖ್ಯಾತ ನಟಿ ಸಮಂತಾ (Samantha) ಅವರ ಆರೋಗ್ಯದ ಕುರಿತು ವಾರದಿಂದ ನಾನಾ ರೀತಿಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವರು ಅನಾರೋಗ್ಯದಿಂದ ಇರುವ ಕಾರಣಕ್ಕಾಗಿಯೇ ಸಾರ್ವಜನಿಕವಾಗಿ ಸಮಂತಾ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು. ಆರೋಗ್ಯ ಏರುಪೇರಿನ ಹಿನ್ನೆಲೆಯಲ್ಲಿ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ನಡುವೆ ಅಮೆರಿಕಾಗೆ ಅವರು ಹಾರಲಿದ್ದಾರೆ ಎನ್ನುವ ಮಾಹಿತಿಯೂ ಇತ್ತು.

    ಅಂದಹಾಗೆ ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಮಂತಾ ಚರ್ಮ ರೋಗದಿಂದ ನರಳುತ್ತಿದ್ದಾರೆ ಎಂದಾಗಿತ್ತು. ಅಮೆರಿಕಾಗೆ (America) ತೆರಳಿ, ಅವರು ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೆಲ್ಲವಕ್ಕೂ ಸಮಂತಾ ಮ್ಯಾನೇಜರ್ ಉತ್ತರಿಸಿದ್ದಾರೆ. ಹರಿದಾಡುತ್ತಿರುವುದು ಗಾಸಿಪ್ ಎಂದು ಹೇಳಿದ್ದಾರೆ. ಸಮಂತಾ ಆರೋಗ್ಯವಾಗಿದ್ದು (Health), ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

    ಸಮಂತಾ ಆರೋಗ್ಯವಾಗಿದ್ದಾರೆ, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಹೇಳಿರುವ ಮ್ಯಾನೇಜರ್ (Manager), ಸಮಂತಾ ಅಮೆರಿಕಾಗೆ ಚಿಕಿತ್ಸೆಗಾಗಿ ತೆರಳುತ್ತಿರುವ ವಿಚಾರವನ್ನು ಮಾತ್ರ ಹೇಳಿಲ್ಲ. ಆ ಕುರಿತು ಅವರು ಪ್ರತಿಕ್ರಿಯೆ ಕೂಡ ನೀಡಿಲ್ಲ. ಆದರೆ, ಸಮಂತಾಗೆ ಏನೂ ಆಗಿಲ್ಲ. ಈ ರೀತಿಯಲ್ಲಿ ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸಮಂತಾ ತಿಳಿಸಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    ಪುಷ್ಪಾ (Pushpa) ಸಿನಿಮಾದ ನಂತರ ಸಮಂತ್ ಸಖತ್ ಬ್ಯುಸಿ ಆಗಿ ಹೋದರು. ಸದ್ಯ ಅವರು ಪ್ರಮುಖವಾಗಿ ನಟಿಸಿರುವ ಎರಡು ಚಿತ್ರಗಳು ಶೂಟಿಂಗ್ ಮುಗಿಸಿವೆ. ಯಶೋಧಾ (Yashodha) ಮತ್ತು ಶಾಕುಂತಲೆ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಎರಡೂ ಸಿನಿಮಾಗಳ ಕುತೂಹಲ ಮೂಡಿಸಿದ್ದು, ಸದ್ಯದಲ್ಲೇ ಬಿಡುಗಡೆ ಆಗುವ ಕುರಿತು ಸುದ್ದಿಯಿದೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಹಲವು ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರ ನಟನೆಯ ಶಾಕುಂತಲಾ ಮತ್ತು ಯಶೋಧಾ (Yashodha) ಸಿನಿಮಾಗಳ ಹಲವು ಕಾರ್ಯಕ್ರಮಗಳು ಜರುಗಿದ್ದರೂ, ಅವರು ಒಂದಕ್ಕೂ ಪ್ರತಿಕ್ರಿಯಿಸಿಲ್ಲ. ಅಲ್ಲದೇ ಹಲವು ದಿನಗಳಿಂದ ಯಾವುದೇ ಶೂಟಿಂಗ್ ನಲ್ಲೂ ಅವರು ಪಾಲ್ಗೊಳ್ಳದೇ ಇರುವ ಕಾರಣಕ್ಕಾಗಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಮಂತಾ ಈಗ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದಾರೆ.

    ತಮಿಳು ಮಾಧ್ಯಮಗಳು ವರದಿ ಮಾಡಿದಂತೆ ಸಮಂತಾ ಅವರು ಗಂಭೀರ (Serious) ಆರೋಗ್ಯ (Health) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅತೀ ಶೀಘ್ರದಲ್ಲೇ ಅವರು ವಿದೇಶಕ್ಕೂ ಹಾರಿ, ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿ ಮಾಡಿವೆ. ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತಹ ಸಮಸ್ಯೆ ಏನಾಗಿದೆ ಎನ್ನುವ ಕುರಿತು ಸರಿಯಾದ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಅವರು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಕೆಲ ಮಾಧ್ಯಮಗಳು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದರೆ, ಕೆಲವರು ಬೇರೆ ಸಮಸ್ಯೆಗಳ ಕುರಿತು  ಬರೆದಿದ್ದಾರೆ. ಹಾಗಾಗಿ ಸಮಂತಾಗೆ ಇಂಥದ್ದೆ ಸಮಸ್ಯೆ ಇದೆ ಎಂದು ಗೊತ್ತಾಗಿಲ್ಲ. ಅವರು ಕೂಡ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಸಮಂತಾ ಆಪ್ತರ ಪ್ರಕಾರ, ನಟಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು ನಿಜ. ಚಿಕಿತ್ಸೆಗಾಗಿ (Treatment) ವಿದೇಶಕ್ಕೂ (Abroad) ಹೋಗುತ್ತಾರೆ ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.

    ಸಮಂತಾ ನಟನೆಯ ಯಶೋಧಾ ಮತ್ತು ಶಾಂಕುತಲಾ (Shakuntala) ಸಿನಿಮಾಗಳು ಬಹುತೇಕ ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಮೊನ್ನೆಯಷ್ಟೇ ಎರಡು ಸಿನಿಮಾಗಳ ಲುಕ್ ರಿಲೀಸ್ ಆಗಿದೆ. ಟ್ರೈಲರ್ ಕೂಡ ಬಿಡುಗಡೆ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಸಮಂತಾ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ನಟನೆಯ ‘ಯಶೋದಾ’ ಸಿನಿಮಾ ಟೀಸರ್ ಸೆ.09ಕ್ಕೆ  ರಿಲೀಸ್

    ಸಮಂತಾ ನಟನೆಯ ‘ಯಶೋದಾ’ ಸಿನಿಮಾ ಟೀಸರ್ ಸೆ.09ಕ್ಕೆ ರಿಲೀಸ್

    ಮಂತಾ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರವಾದ ‘ಯಶೋದಾ’ದ ಟೀಸರ್ ಸೆ. 09ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದಕ್ಕೂ ಮುನ್ನ, ಬಿಡುಗಡೆಯಾದ ಚಿತ್ರದ ಸ್ನೀಕ್ ಪೀಕ್, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಈಗ ನಿರ್ದೇಶಕರಾದ ಹರಿ-ಹರೀಶ್ ಈ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ಎದೆಬಡಿತ ಹೆಚ್ಚಿಸುವುದಕ್ಕೆ ಸಿದ್ಧರಾಗಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಘೋಷಣೆ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ವೀಕ್ಷಕರ ಗಮನಸೆಳೆದಿದೆ.

    ‘ಯಶೋದಾ’ ಚಿತ್ರವು ಮೂಡಿಬಂದಿರುವ ಬಗ್ಗೆ ಖುಷಿಯಾಗಿರುವ ಶ್ರೀದೇವಿ ಮೂವೀಸ್ನ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್, ಈ ಚಿತ್ರವನ್ನು ಐದು ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

    ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ‘ಯಶೋದಾ’ ಚಿತ್ರಕ್ಕೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದು, ಎಂ. ಸುಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಪುಲಗಂ ಚಿನ್ನಾರಾಯಣ ಮತ್ತು ಡಾ ಚಲ್ಲ ಭಾಗ್ಯಲಕ್ಷ್ಮೀ ಅವರ ಸಂಭಾಷಣೆ, ಚಂದ್ರಬೋಸ್ ಮತ್ತು ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.’ ಯಶೋದಾ’ ಚಿತ್ರವು ಸದ್ಯದಲ್ಲೇ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಯಶೋದ’ ಚಿತ್ರದ ಶೂಟಿಂಗ್ ಮುಗಿಸಿದ ಸಮಂತಾ : ಐದು ಭಾಷೆಗಳಿಗೆ ಡಬ್

    ‘ಯಶೋದ’ ಚಿತ್ರದ ಶೂಟಿಂಗ್ ಮುಗಿಸಿದ ಸಮಂತಾ : ಐದು ಭಾಷೆಗಳಿಗೆ ಡಬ್

    ಖ್ಯಾತ ನಟಿ ಸಮಂತಾ ನಟನೆಯ “ಯಶೋದ” ಸಿನಿಮಾ ತಂಡ ಇತ್ತೀಚೆಗಷ್ಟೇ ಸಣ್ಣ ವಿಡಿಯೋ ತುಣುಕನ್ನು ಹೊರತಂದಿತ್ತು. ಇದೀಗ ಸದ್ದಿಲ್ಲದೆ ಚಿತ್ರದ ಶೂಟಿಂಗ್‌ ಮುಗಿಸಿ, ಹಾಡಿನ ಚಿತ್ರೀಕರಣವೊಂದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ನಾಯಕಿ ಪ್ರಧಾನ ಈ ಸಿನಿಮಾದಲ್ಲಿ ಸಮಂತಾ ರುತ್‌ಪ್ರಭು “ಯಶೋದ” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಶ್ರೀದೇವಿ ಪ್ರೊಡಕ್ಷನ್‌ನ ೧೪ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಶಿವಲೆಂಕಾ, ” ಸರಿಸುಮಾರು 100 ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. ಒಂದೇ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬಜೆಟ್‌ ವಿಚಾರವಾಗಿ ಎಲ್ಲಿಯೂ ಕಾಂಪ್ರಮೈಸ್‌ ಆಗದೆ, ಕಥೆ ಬೇಡಿದಷ್ಟು ಹೂಡಿಕೆ ಮಾಡಿದ್ದೇವೆ. ಇತ್ತ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಚಾಲ್ತಿಯಲ್ಲಿದ್ದು, ಸಿಜೆ ಕೆಲಸಗಳು ನಡೆಯುತ್ತಿವೆ. ಇದೇ ತಿಂಗಳ 15ರಿಂದ ಡಬ್ಬಿಂಗ್‌ ಕೆಲಸ ಶುರುವಾಗಲಿದೆ. ಇದರ ಜತೆಗೆ ಬೇರೆ ಭಾಷೆಯ ಡಬ್ಬಿಂಗ್‌ ಸಹ ಮುಗಿಸಿಕೊಳ್ಳುವ ಪ್ಲಾನ್‌ ಇದೆ. ಇದೆಲ್ಲದರ ಜತೆಗೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ರಚಾರ ಕೆಲಸಕ್ಕೂ ಚಾಲನೆ ನೀಡಲಿದ್ದೇವೆ. ಇದನ್ನೂ ಓದಿ:`ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಸಾಥ್

    “ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯ ಸಿನಿಮಾ ಇದಾಗಿದ್ದು, ಜಗತ್ತಿನಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಸಮಂತಾ ಅವರು ಚಿತ್ರದಲ್ಲಿ ಟೈಟಲ್‌ ರೋಲ್‌ ಪಾತ್ರ ನಿಭಾಯಿಸಿದ್ದಾರೆ. ಅಷ್ಟೇ ಪ್ರಮಾಣದ ಸಾಹಸ ದೃಶ್ಯಗಳೂ ಈ ಚಿತ್ರದಲ್ಲಿವೆ. ಈ ನಮ್ಮ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್‌ ಮತ್ತು ಹಾಡನ್ನು ಬಿಡುಗಡೆ ಮಾಡಲಿದ್ದೇವೆ” ಎಂದಿದ್ದಾರೆ.

    ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್‌ ೧೨ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ.

    Live Tv
    [brid partner=56869869 player=32851 video=960834 autoplay=true]