Tag: ಯಶಸ್ ಸೂರ್ಯ

  • ಯಶಸ್ಸಿಗಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡರಾ ಯಶಸ್ ಸೂರ್ಯ

    ಯಶಸ್ಸಿಗಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡರಾ ಯಶಸ್ ಸೂರ್ಯ

    ನ್ನಡ ಸಿನಿಮಾ ರಂಗದಲ್ಲಿ ಅದ್ಭುತವಾದ ಒಂದು ಯಶಸ್ಸಿಗಾಗಿ ಕಾಯುತ್ತಿರುವ ಯಶಸ್ ಸೂರ್ಯ (Yashas Surya) , ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಗರಡಿ ಸಿನಿಮಾದಿಂದ ಅವರು ಕೇವಲ ಸೂರ್ಯನಾಗಿ ಉಳಿಯಲಿದ್ದಾರೆ. ಅಷ್ಟಕ್ಕೂ ಈ ಹೆಸರನ್ನು ಬದಲಾಯಿಸಿದ್ದು ನಟ ದರ್ಶನ್ ಎನ್ನುವುದು ವಿಶೇಷ.

    ಗರಡಿ ಸಿನಿಮಾದಲ್ಲಿ ಸೂರ್ಯ, ಗರಡಿ ಸೂರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಅವರನ್ನು ಎಲ್ಲರೂ ಗರಡಿ ಸೂರಿ ಅಂತಾನೇ ಕರೆಯುತ್ತಾರಂತೆ. ಸಿನಿಮಾದಾಚೆಯೂ ತಮಗೆ ಗರಡಿ ಸೂರ್ಯ ಎಂದು ಕರೆಯಿಸಿಕೊಳ್ಳಲು ಇಷ್ಟವೆಂದು ಅವರು ಹೇಳಿಕೊಂಡಿದ್ದಾರೆ. ಇನ್ಮುಂದೆ ತಮ್ಮ ಹೆಸರಿನ ಮುಂದೆ ಯಶಸ್ ಎನ್ನುವ ಪದವು ಇರುವುದಿಲ್ಲವೆಂದು ನಟ ತಿಳಿಸಿದ್ದಾರೆ.

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗರಡಿ (Garadi) ಸಿನಿಮಾದಲ್ಲಿ ಸೂರ್ಯ (Surya), ಪ್ರಮುಖವಾದ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ದರ್ಶನ್ (Darshan), ಬಿ.ಸಿ.ಪಾಟೀಲ್ ಸೇರಿದಂತೆ ಹಲವಾರು ಹೆಸರಾಂತ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಹೊಸ ಹುಡುಗರನ್ನು ಗೆಲ್ಲಿಸಿದ ಯೋಗರಾಜ್ ಭಟ್ಟರು, ಸೂರ್ಯಗೂ ಯಶಸ್ಸು ತಂದು ಕೊಡುತ್ತಾರಾ ಕಾದು ನೋಡಬೇಕು.

     

    ಯುಗ ಯುಗಗಳೇ ಸಾಗಲಿ ಸಿನಿಮಾದಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಸೂರ್ಯ, ಆನಂತರ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ದಕ್ಕಿಲ್ಲ. ಗರಡಿ ಮೂಲಕ ಮತ್ತೊಮ್ಮೆ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive Photos – ಗರಡಿಗಾಗಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

    Exclusive Photos – ಗರಡಿಗಾಗಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗರಡಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್. ಮತ್ತೋರ್ವ ಸಚಿವ ಬಿ.ಸಿ. ಪಾಟೀಲ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಗೆಳೆಯನಿಗಾಗಿ ಪಾತ್ರ ಮಾಡಿದೆ ಎಂದಿದ್ದಾರೆ ಸೋಮಶೇಖರ್. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    “ನನಗೆ ನಟನೆಯ ಗಂಧಗಾಳಿ ಗೊತ್ತಿಲ್ಲ. ಗೆಳೆಯ ಪಾಟೀಲರು ಅವರ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಗೆಳೆಯನ ಪ್ರೀತಿಗಾಗಿ ಬಣ್ಣ ಹಚ್ಚಿದೆ. ನಾನು ಪಾತ್ರ ಮಾಡುತ್ತಿರುವುದರಿಂದ ಬೇರೊಬ್ಬ ನಟನ ಅವಕಾಶ ಕಸಿದುಕೊಂಡೆ ಅನಿಸುತ್ತಿದೆ’ ಎಂದಿದ್ದಾರೆ ಸಚಿವರು. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ಈ ಸಿನಿಮಾದಲ್ಲಿ ಅವರು ಸೋಮಣ್ಣ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ. ಅದು ಬಿ.ಸಿ. ಪಾಟೀಲ್ ಗೆಳೆಯನ ಪಾತ್ರವೇ ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಪಾಟೀಲ್ ರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ

    “ಬೆಳಗ್ಗೆ ನಿರ್ದೇಶಕ ಯೋಗರಾಜ್ ಭಟ್ಟರು ನನ್ನ ಪಾತ್ರವನ್ನು ವಿವರಿಸಿದರೆ, ಡೈಲಾಗ್ ಹೇಳಿದರು. ಅವರು ಏನು ಹೇಳಿದರೋ ಅಷ್ಟನ್ನು ಮಾಡಿದ್ದೇನೆ. ಅದರಾಚೆ ನನಗೆ ನಟನೆ ಬಾರದು. ಪ್ರೇಕ್ಷಕರು ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ’ ಎನ್ನುವುದು ಸೋಮಶೇಖರ್ ಮಾತು. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ಬೆಂಗಳೂರಿನ ಜಿ.ವಿ ಅಯ್ಯರ್ ಸ್ಟುಡಿಯೋದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಬಿ.ಸಿ.ಪಾಟೀಲ್, ಸೋಮಶೇಖರ್, ಚಿತ್ರದ ನಾಯಕ ಯಶಸ್ ಸೂರ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಅಂದಹಾಗೆ ಗಾಳಿಪಟ 2 ಸಿನಿಮಾದ ನಂತರ ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ಚಿತ್ರವಿದು. ಹಳ್ಳಿ ಸೊಗಡಿನಲ್ಲಿ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು. ಇಂತಹ ಕಥೆಯನ್ನು ಅವರು ಇದೇ ಮೊದಲ ಬಾರಿಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ಯೋಗರಾಜ್ ಭಟ್.

  • ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ಬೆಂಗಳೂರು: ತಂದೆ ಎಸ್ ನಾರಾಯಣ್ ಗರಡಿಯಲ್ಲಿ ನಟನಾಗಿ, ನಿರ್ದೇಶಕ ವಿಭಾಗದಲ್ಲಿಯೂ ಪಳಗಿಕೊಂಡಿರುವವರು ಪಂಕಜ್ ನಾರಾಯಣ್. ಇದೀಗ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮನಾಗಿ ನಟಿಸಲು ಪಂಕಜ್ ತಯಾರಾಗಿದ್ದಾರೆ!

    ಚಿತ್ರತಂಡದ ಅಧಿಕೃತ ಮೂಲಗಳೇ ಈ ಸುದ್ದಿಯನ್ನು ಹೊರ ಹಾಕಿವೆ. ಅದರನ್ವಯ ದರ್ಶನ್ ಅವರ ತಮ್ಮನಾಗಿ ಪಂಕಜ್ ನಟಿಸಲಿರೋದು ಪಕ್ಕಾ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ಇಬ್ಬರು ಸಹೋದರರಿರಲಿದ್ದಾರಂತೆ. ಅದರಲ್ಲೊಬ್ಬರಾಗಿ ಪಂಕಜ್ ನಟಿಸಿದರೆ, ಮತ್ತೋರ್ವ ಸಹೋದರನಾಗಿ ಯಶಸ್ ಸೂರ್ಯ ಅಭಿನಯಿಸಲಿದ್ದಾರೆ.

    ಚೆಲುವಿನ ಚಿಲಿಪಿಲಿ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ್ದ ಪಂಕಜ್ ಒಂದು ಚಿತ್ರದಲ್ಲಿ ನಾರಾಯಣ್ ಅವರಿಗೆ ನಿರ್ದೇಶನ ವಿಭಾಗದಲ್ಲಿಯೂ ಸಾಥ್ ನೀಡಿದ್ದರು. ಇದೀಗ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಒಡೆಯ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶವನ್ನೇ ಗಿಟ್ಟಿಸಿಕೊಂಡಿದ್ದಾರೆ.

    ಒಡೆಯ ಚಿತ್ರ ಇದೇ ತಿಂಗಳ ಹತ್ತನೇ ತಾರೀಕಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ದರ್ಶನ್ ತಮ್ಮಂದಿರ ಪಾತ್ರಗಳಿಗೂ ಮಹತ್ವ ಇದೆಯಂತೆ. ಅಂಥಾ ಪಾತ್ರದಲ್ಲಿ ಮಿಂಚಲು ಪಂಕಜ್ ರೆಡಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv