Tag: ಯಶಸ್ವಿನಿ

  • ಚಿತ್ರನಟ ಮಾಸ್ಟರ್ ಆನಂದ್‌ಗೆ ವಂಚನೆ : ದೂರು ದಾಖಲು

    ಚಿತ್ರನಟ ಮಾಸ್ಟರ್ ಆನಂದ್‌ಗೆ ವಂಚನೆ : ದೂರು ದಾಖಲು

    ಟ, ನಿರ್ಮಾಪಕ, ನಿರ್ದೇಶಕ ಮಾಸ್ಟರ್ ಆನಂದ್‌ಗೆ (Master Anand) ವಂಚನೆಯಾಗಿದೆ. ನಿವೇಶನ ನೀಡೋದಾಗಿ ಮಲ್ಟಿ ಲೀಪ್ ವೆಂಚರ್ಸ್ (Multi Leap Ventures )ಹೆಸರಿನ ಕಂಪನಿಯು ಆನಂದ್ ಅವರಿಗೆ 18.50 ಲಕ್ಷ ರೂಪಾಯಿ ವಂಚನೆ  (Fraud) ಮಾಡಿದೆ ಎಂದು ಕಂಪನಿ ವಿರುದ್ದ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.

    ಬೆಂಗಳೂರಿನ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ನೀಡುವುದಾಗಿ ಕಂಪೆನಿಯು ಹೇಳಿತ್ತು. ಮನಿಕಾ ಕೆಂ.ಎಂ ಇಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ಅದು ಹೇಳಿತ್ತು. ಕಂಪನಿ ಮಾತು ಕೇಳಿಕೊಂಡು ಮಾಸ್ಟರ್ ಆನಂದ್ ಸೈಟ್ ಖರೀದಿಸಿದ್ದರು. ಆದರೆ, 2020 ರ ಸೆಪ್ಟಂಬರ್ ನಿಂದ 2021 ರ ಅಕ್ಟೋಬರ್ ನ ಅವಧಿಯಲ್ಲಿ ಕಂಪನಿ ತನ್ನನ್ನು ವಂಚಿಸಿದೆ ಎಂದು ಗೊತ್ತಾಗಿದೆ. ಇದನ್ನೂ ಓದಿ: ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಎಂಟ್ರಿ

    ಮನಿಕಾ ಕೆಂ ಎಂ ಇಂದ ನಿವೇಶನ (Site) ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ದರಿಂದ ಮಾಸ್ಟರ್ ಆನಂದ್ ಆ ಬಳಿಕ ರಾಮಸಂದ್ರದ 2000 ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ನಿವೇಶನವನ್ನು ಖರೀದಿಸಿದ್ದರು. ಮೊದಲು 70 ಲಕ್ಷ ರೂಪಾಯಿಗೆ ಸೈಟ್ ಖರೀದಿ ಒಪ್ಪಂದವಾಗಿ ಹಂತ ಹಂತವಾಗಿ 18.5 ಲಕ್ಷ ರೂಪಾಯಿ ಮುಂಗಡ ಹಣ ಮಾಸ್ಟರ್ ಆನಂದ ಕಂಪನಿಗೆ ನೀಡಿದ್ದರು.

     

    ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ (Yashasvin) ಹೆಸರಲ್ಲಿ ಖರೀದಿ ಖರಾರು ಪತ್ರವನ್ನೂ ಕಂಪನಿ ಮಾಡಿಕೊಟ್ಟಿತ್ತು. ಈ ನಡುವೆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿತ್ತು ಕಂಪನಿ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಿರಲಿಲ್ಲ ಎಂದು ವಂಚನೆ ಬಗ್ಗೆ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ. ಬಿಯುಡಿಎಸ್ (ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ ಕಾಯ್ದೆ ) ಕಾಯ್ದೆ 2019 ರ ಅಡಿ ಆರೋಪಿಗಳ ವಿರುದ್ದ ಎಫ್ ಐ ಆರ್ ದಾಖಲು ಮಾಡಲಾಗಿದೆ.

  • ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ನ್ನಡದ ಜನಪ್ರಿಯ ರಿಯಾಲಿಟ ಶೋ ‘ನನ್ನಮ್ಮ ಸೂಪರ್ ಸ್ಟಾರ್’ಗೆ ಅದ್ಧೂರಿ ತೆರೆಬಿದ್ದಿದೆ. ನವೆಂಬರ್ 27 ರಂದು ಅದ್ಧೂರಿಯಾಗಿ ಪ್ರಾರಂಭವಾಗಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ನಾಲ್ಕು ತಿಂಗಳು ಪ್ರದರ್ಶನಗೊಂಡ ಬಳಿಕ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆದಿದೆ. ಆನಂದ್ ಹಾಗೂ ಯಶಸ್ವಿನಿ ದಂಪತಿ ಪುತ್ರಿ ವಂಶಿಕಾ ಅಂಜನಿ ಕಶ್ಯಪ್ ವಿಜೇತರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಕಿರುತೆರೆ ಕಲಾವಿದೆ ಪುನೀತಾ ಹಾಗೂ ಮಗಳು ಆರ್ಯ ಪಾಲಿಗೆ ಹೋಗಿದೆ, ಮೂರನೇ ಸ್ಥಾನವನ್ನ ವಿಂಧ್ಯಾ – ರೋಹಿತ್ ಮುಡಿಗೇರಿಸಿಕೊಂಡಿದ್ದಾರೆ.

    ಹನ್ನೆರಡು ಅಮ್ಮಂದಿರು ಅವರ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ರು. ಕನ್ನಡದ ಖಾಸಗಿ ವಾಹಿನಿಯ ಈ ವಿನೂತನ ರಿಯಾಲಿಟಿ ಶೋ ಕಳೆದ ನಾಲ್ಕು ತಿಂಗಳಿಂದ ಕರುನಾಡ ಅಮ್ಮ ಮಕ್ಕಳನ್ನ ರಂಜಿಸಿತ್ತು. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ಈ ಶೋಗೆ 12 ಅಮ್ಮ-ಮಕ್ಕಳ ಜೋಡಿ ಆಯ್ಕೆಯಾಗಿದ್ದು, ಕಿರುತೆರೆ ಲೋಕದಲ್ಲಿ ಮಿಂಚಿದ್ದ ಅಮ್ಮಂದಿರು ಹಾಗೂ ಅವರ ಪುಟಾಣಿ ಮಕ್ಕಳ ಟ್ಯಾಲೆಂಟ್ ಹಂಟಿಂಗ್ ಶೋ ಇದಾಗಿತ್ತು. ಮೊದಲ ಎಂಟ್ರಿಯಲ್ಲೇ ವಂಶಿಕಾ ಕರುನಾಡ ಜನಮನ ಗೆದ್ದುಬಿಟ್ಟಿದ್ರು. ಪಟಾ ಪಟಾ ಅಂತ ಮಾತನಾಡುವ ಪೋರಿ, ಗೊಂಬೆಯಂತೆ ಮುದ್ದಾಗಿ ಕುಣಿಯುವ ವಂಶಿಕ ತಂದೆಯಂತೆಯೇ ಮಾತಿನಲ್ಲೇ ಮೋಡಿ ಮಾಡಿದ ಬಾಲ ಪ್ರತಿಭೆ. ಇದೀಗ ಅಮ್ಮ ಯಶಸ್ವಿನಿ ಜೊತೆ ವಂಶಿಕಾ ಬಂಗಾರದ ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಗೆದ್ದಿದ್ದಾಳೆ.

    ವಂಶಿಕಾಗೆ ಟಫ್ ಫೈಟ್ ಕೊಟ್ಟಿದ್ದು ಬೇಬಿ ಆರ್ಯ. ಅಮ್ಮ ಪುನೀತಾ ಜೊತೆ ಸೈಲೆಂಟಾಗೇ ಎಂಟ್ರಿ ಕೊಟ್ಟ ಆರ್ಯ ಕೊನೆಗೆ ಜಬರ್ದಸ್ತ್ ಮನರಂಜನೆ ಕೊಟ್ಟ ಪುಟಾಣಿ, ಇದೀಗ ಎರಡನೇ ಸ್ಥಾನದಲ್ಲಿ ಗೆದ್ದಿದ್ದಾಳೆ.

    ಮೂರನೇ ಸ್ಥಾನ ಮಾಸ್ ಬೇಬಿ ಎಂದೇ ಹೆಸರು ಪಡೆದುಕೊಂಡಿದ್ದ ರೋಹಿತ್ ಮುಡಿಗೇರಿದೆ. ಅಮ್ಮ ವಿಂಧ್ಯಾ ಜೊತೆ ಮಸ್ತ್ ಎಂಟರ್ಟೈನ್ಮೆಂಟ್ ಕೊಟ್ಟ ಈ ಪುಟಾಣಿ ಮೊದಲನೆ ಎಪಿಸೋಡ್‍ನಲ್ಲೇ ರಂಜಿಸಿ ಕನ್ನಡಿಗರ ಮನ ಗೆದ್ದಿದ್ದಳು. ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ

    ಅನುಪಮ ಗೌಡ ನಿರೂಪಣೆ, ತಾರಾ ಅನೂರಾಧ, ಸೃಜನ್ ಲೋಕೇಶ್ ಹಾಗೂ ಅನುಪ್ರಭಾಕರ್ ನಿರ್ಣಾಯಕರ ಸ್ಥಾನದಲ್ಲಿದ್ದು ಕಾರ್ಯಕ್ರಮವನ್ನು ಅಂದಗೊಳಿಸಿದ್ದರು. ಇದೀಗ ಕರುನಾಡ ಏಕೈಕ ಅಮ್ಮ ಮಕ್ಕಳ ಮಮತೆಯ ಶೋ ಸಕ್ಸಸ್‍ಫುಲ್ ಆಗಿ ತೆರೆಬಿದ್ದಿದೆ.

  • ಕೆಪಿಸಿಸಿ ಕಚೇರಿಯಲ್ಲಿ ಇಣುಕಿದ ರೌಡಿಶೀಟರ್ – ಇಸ್ತಿಯಾಕ್ ಜೊತೆ ವೇಣುಗೋಪಾಲ್ ಚರ್ಚೆ

    ಕೆಪಿಸಿಸಿ ಕಚೇರಿಯಲ್ಲಿ ಇಣುಕಿದ ರೌಡಿಶೀಟರ್ – ಇಸ್ತಿಯಾಕ್ ಜೊತೆ ವೇಣುಗೋಪಾಲ್ ಚರ್ಚೆ

    – ಉಪಚುನಾವಣೆಗಾಗಿ ರೌಡಿಶೀಟರ್ ಮೊರೆ ಹೋಯ್ತಾ ಕಾಂಗ್ರೆಸ್?

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ರೌಡಿಶೀಟರ್ ಯಶಸ್ವಿನಿ ಸನ್ಮಾನ ಮಾಡಿದ್ರೆ, ಇತ್ತ ಕಾಂಗ್ರೆಸ್ ಕಚೇರಿಯಲ್ಲಿ ರೌಡಿಶೀಟರ್ ಕಾಣಿಸಿಕೊಂಡಿದ್ದಾನೆ.

    ಹೌದು. ಐಎಂಎ ಪ್ರಕರಣದಲ್ಲಿಯೂ ಆರೋಪಿಯಾಗಿರುವ ರೌಡಿ ಶೀಟರ್ ಇಸ್ತಿಯಾಕ್ ಪೈಲ್ವಾನ್ ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ ಮಾಡಿದ್ದಾನೆ. ಅಲ್ಲದೆ ಕೆಲ ಹೊತ್ತು ಮಾತುಕತೆ ಕೂಡ ನಡೆಸಿದ್ದಾನೆ. ಈ ಮೂಲಕ ಕಾಂಗ್ರೆಸ್ ನಾಯಕರು ಶಿವಾಜಿನಗರ ಉಪಚುನಾವಣೆ ಕುರಿತು ಚರ್ಚೆಗೆ ಇಸ್ತಿಯಾಕ್ ಕರೆಸಿಕೊಂಡ್ರಾ ಅನ್ನೋ ಅನುಮಾನ ಮೂಡಿದೆ.

    ಯಾರು ಈ ಇಸ್ತಿಯಾಕ್?
    ಇಸ್ತಿಯಾಕ್ ಪೈಲ್ವಾನ್ ವಿರುದ್ಧ ಕೊಲೆ, ಬೆದರಿಕೆ, ಕೊಲೆಯತ್ನ ಸೇರಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಇತ್ತೀಚೆಗೆ ಗಲಾಟೆ ಕೇಸ್ ಕೂಡ ದಾಖಲಾಗಿದೆ. ಐಎಂಎ ಕೇಸ್ ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಈತನ ಮೇಲಿದ್ದು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಇಸ್ತಿಯಾಕ್ ಪತ್ನಿ ಫರೀದಾ ಇಸ್ತಿಯಾಕ್ ಹಾಲಿ ಕಾರ್ಪೊರೇಟರ್ ಆಗಿದ್ದು, ಇಸ್ತಿಯಾಕ್ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದಾನೆ.

    ಕಮಿಷನರ್‍ಗೆ ಸನ್ಮಾನ:
    ಇತ್ತ ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ ಕಾಲಿನಲ್ಲೇ ಒದೀತಿದ್ದಾಕೆ ಇದೀಗ ಸಾಮಾಜಿಕ ಕಾರ್ಯಕರ್ತೆ ವೇಷ ಹಾಕಿ ಈಗ ಕಮಿಷನರ್ ಅವರಿಗೇ ಸನ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ. ರೌಡಿ ಯಶಸ್ವಿನಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ಸನ್ಮಾನ ಮಾಡಿದ್ದಾರೆ. ಶ್ರೀರಾಮಸೇನೆಯ ಮುತಾಲಿಕ್ ಜೊತೆ ನಿಂತು ಭಾಸ್ಕರ್ ರಾವ್ ಅವರಿಗೆ ಶಾಲು ಹೊದಿಸಿ, ಗಂಧದ ಹಾರ ಹಾಕಿದ್ದಾರೆ. ಯಶಶ್ವಿನಿ ಮತ್ತು ಈಕೆಯ ಪತಿ ದಡಿಯಾ ಮಹೇಶ್ ಅವರ ಸನ್ಮಾನವನ್ನು ನಗುಮೊಗದಿಂದಲೇ ಭಾಸ್ಕರ್ ರಾವ್ ಸ್ವೀಕರಿಸಿದ್ದಾರೆ.

    ಸದ್ಯ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿರುವ ಯಶಸ್ವಿನಿ, ಈಗ ಕಮಿಷನರ್ ಗೆ ಸನ್ಮಾನ ಮಾಡಿದ ಫೊಟೊಗಳು ವೈರಲ್ ಆಗುತ್ತಿವೆ. ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡ ಕಮೀಷನರ್ ಭಾಸ್ಕರ್ ರಾವ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

  • ಪೊಲೀಸ್ ಕಮಿಷನರ್‌ಗೆ ರೌಡಿ ಯಶಸ್ವಿನಿಯಿಂದ ಸನ್ಮಾನ

    ಪೊಲೀಸ್ ಕಮಿಷನರ್‌ಗೆ ರೌಡಿ ಯಶಸ್ವಿನಿಯಿಂದ ಸನ್ಮಾನ

    ಬೆಂಗಳೂರು: ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು, ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ ಕಾಲಿನಲ್ಲೇ ಒದೀತಿದ್ದಾಕೆ ಇದೀಗ ಸಾಮಾಜಿಕ ಕಾರ್ಯಕರ್ತೆ ವೇಷ ಹಾಕಿ ಕಮಿಷನರ್ ಅವರಿಗೇ ಸನ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ.

    ಹೌದು, ರೌಡಿ ಯಶಸ್ವಿನಿ ಬೆಂಗಳೂರು ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್‍ಗೆ ಸನ್ಮಾನ ಮಾಡಿದ್ದಾರೆ. ಶ್ರೀರಾಮಸೇನೆಯ ಮುತಾಲಿಕ್ ಜೊತೆ ನಿಂತು ಭಾಸ್ಕರ್ ರಾವ್ ಅವರಿಗೆ ಶಾಲು ಹೊದಿಸಿ, ಗಂಧದ ಹಾರ ಹಾಕಿದ್ದಾರೆ. ಯಶಸ್ವಿನಿ ಮತ್ತು ಈಕೆಯ ಪತಿ ದಡಿಯಾ ಮಹೇಶ್ ಅವರ ಸನ್ಮಾನವನ್ನು ನಗುಮೊಗದಿಂದಲೇ ಭಾಸ್ಕರ್ ರಾವ್ ಸ್ವೀಕರಿಸಿದ್ದಾರೆ.

    ಅಂದಹಾಗೆ, ನಿನ್ ಹೆಂಡತಿಯದ್ದು ಜಾಸ್ತಿ ಆಯ್ತು, ಬುದ್ಧಿ ಕಲಿಸೋಕೆ ಆಗಲ್ವ ಅವಳಿಗೆ ಎಂದು ಸಿಸಿಬಿ ಡಿಸಿಪಿಯಾಗಿದ್ದ ಗಿರೀಶ್ ಈ ಹಿಂದೆ ಅವಾಜ್ ಹಾಕಿದ್ದರು. ಈ ವೇಳೆ, ನನ್ ಮಾತು ಕೇಳಲ್ಲ ಸರ್ ಅವಳು, ನೀವೇ ಬುದ್ಧಿ ಕಲಿಸಿ ಅಂತ ರೌಡಿ ದಡಿಯಾ ಮಹೇಶ್ ಹೇಳಿದ್ದನು. ಅಂದು ಗಢ ಗಢ ನಡುಗಿದ್ದ ರೌಡಿಶೀಟರ್‍ಗಳು ಇಂದು ಪೊಲೀಸರಿಗೆ ಫುಲ್ ಕ್ಲೋಸ್ ಆಗಿದ್ದಾರೆ.

    ಅಲೋಕ್ ಕುಮಾರ್, ಗಿರೀಶ್ ರಂತಹ ಅಧಿಕಾರಿಗಳು ಎತ್ತಂಗಡಿಯಾಗಿದ್ದೇ ತಡ, ಕಮಿಷನರ್‌ ಗೆ ಸನ್ಮಾನ ಮಾಡೋವಷ್ಟು ಬೆಳೆದು ಬಿಟ್ಟಿದ್ದಾರೆ. ಸದ್ಯ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿರುವ ಯಶಸ್ವಿನಿ, ಈಗ ಕಮಿಷನರ್ ಗೆ ಸನ್ಮಾನ ಮಾಡಿದ ಫೊಟೊಗಳು ವೈರಲ್ ಆಗುತ್ತಿವೆ. ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡ ಕಮಿಷನರ್‌ ಭಾಸ್ಕರ್ ರಾವ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

  • ಮತ್ತೊಮ್ಮೆ ರೌಡಿಶೀಟರ್ ಯಶಸ್ವಿನಿ ಅಟ್ಟಹಾಸ – ಮಾರ್ಗ ಮಧ್ಯೆ ಅಡ್ಡಗಟ್ಟಿ ಮಹಿಳೆಗೆ ಥಳಿತ

    ಮತ್ತೊಮ್ಮೆ ರೌಡಿಶೀಟರ್ ಯಶಸ್ವಿನಿ ಅಟ್ಟಹಾಸ – ಮಾರ್ಗ ಮಧ್ಯೆ ಅಡ್ಡಗಟ್ಟಿ ಮಹಿಳೆಗೆ ಥಳಿತ

    ಬೆಂಗಳೂರು: ಶ್ರೀರಾಮಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ರೌಡಿಶೀಟರ್ ಯಶಸ್ವಿನಿ ಮತ್ತೊಮ್ಮೆ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದೀಗ ಲಲಿತಾ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ಗಂಗಮ್ಮನಗುಡಿ ನೀಲಗಿರಿ ತೊಪ್ಪಿನಲ್ಲಿ ಈ ಘಟನೆ ನಡೆದಿದೆ. ಲಲಿತಾ ಅವರು ದಾರಿಯಲ್ಲಿ ಹೋಗುವಾಗ ಮಾರ್ಗ ಮಧ್ಯೆ ಅಡ್ಡಗಟ್ಟಿ ಯಶಸ್ವಿನಿ ಹಾಗೂ 8 ಜನ ಮಹಿಳೆಯರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಪರಿಣಾಮ ಗಾಯಗೊಂಡಿರುವ ಲಲಿತಾ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

    ಹಲ್ಲೆ ಯಾಕೆ..?
    ಯಶಸ್ವಿನಿ ವಿರುದ್ಧ ಲಲಿತಾ ದೂರು ನೀಡಿದ್ದು, ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಶುಕ್ರವಾರ ನ್ಯಾಯಾಲಯದಲ್ಲಿ ತೀರ್ಪು ಬರೋದಿತ್ತು. ನ್ಯಾಯಾಲಯಕ್ಕೆ ಲಲಿತಾ ಹಾಜರಾಗಬಾರದೆಂದು ಲಲಿತಾರ ಮೇಲೆ ಯಶಸ್ವಿನಿ & ಟೀಂ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇದನ್ನೂ ಓದಿ: ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ಬನಶಂಕರಿ ಠಾಣೆಯ ರೌಡಿಶೀಟರ್ ಆಗಿರುವ ಯಶಸ್ವಿನಿಗಾಗಿ ಗಂಗಮ್ಮನಗುಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv