Tag: ಯಶವಂತಪುರ ಪೊಲೀಸ್‌

  • ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ – ಜಮೀನಿನಲ್ಲೇ ನರಳಿ ಪ್ರಾಣ ಬಿಟ್ಟ ಹಸು

    ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ – ಜಮೀನಿನಲ್ಲೇ ನರಳಿ ಪ್ರಾಣ ಬಿಟ್ಟ ಹಸು

    – ಹಳೇ ವೈಷಮ್ಯಕ್ಕೆ ಕೃತ್ಯ ಎಸಗಿರೋ ಶಂಕೆ

    ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿ (Chamarajpet) ಹಸುವಿನ (Cow) ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಚಿಕ್ಕನಾಯಕನಹಳ್ಳಿ ಗ್ರಾಮ ಪಂಚಾಯ್ತಿಯ ಸೂಲಿವಾರ ಗ್ರಾಮದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.

    ತನ್ನ ಜಮೀನಿನಲ್ಲಿ ಹಸು ಮೇಯಲು ಬಂದಿದೆ ಅನ್ನೋ ಕಾರಣಕ್ಕೆ ಹಳೆಯ ದ್ವೇಷದಿಂದ ಗುರುಸಿದ್ದಪ್ಪ ಅನ್ನೋರು ಸುವಿನ ಕೆಚ್ಚಲು ಕತ್ತರಿಸಿದ್ದಾರೆ ಅನ್ನೋ ಅನುಮಾನವಿದೆ. ಅವ್ರೇ ಈ ಕೃತ್ಯವನ್ನ ಮಾಡಿರಬಹುದು ಅಂತ ಹಸುವಿನ ಮಾಲೀಕ ಮರಿ ಬಸವಯ್ಯ ಆರೋಪಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಹಸು ನಿನ್ನೆ ಜಮೀನಿನಲ್ಲೇ ಮೃತಪಟ್ಟಿದೆ. ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

    ಮರಿ ಬಸವಯ್ಯ ಹಾಗೂ ಗುರು ಸಿದ್ದಪ್ಪ ಅವ್ರ ಜಮೀನುಗಳು ಅಕ್ಕಪಕ್ಕದಲ್ಲೇ ಇವೆ. ಹಲವು ವರ್ಷಗಳಿಂದ ಇವರಿಬ್ಬರ ನಡ್ವೆ ಹಳೆಯ ದ್ವೇಷ ಇತ್ತಂತೆ. ಮರಿ ಬಸವಯ್ಯ, ಸೂಲಿವಾರ ಗ್ರಾಮದ ಹಾಲು ಉತ್ಪಾದಕ ಸಂಘದ ಅಧ್ಯಕ್ಷನಾಗಿದ್ದನಂತೆ. ಒಂದು ತಿಂಗಳ ಹಿಂದೆ ನಡೆದ KMF ಚುನಾವಣೆಗೆ ಹನುಮಂತಯ್ಯ ಅನ್ನೋ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದ್ರು. ಅವ್ರ ಆಪ್ತನೇ ಈ ಗುರುಸಿದ್ದಪ್ಪ. ಹನುಮಂತಯ್ಯನವ್ರಿಗೆ ಮತ ಹಾಕಿಲ್ಲ ಅನ್ನೋ ದ್ವೇಷದಿಂದಲೂ ಈ ಕೃತ್ಯ ನಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಏನೇ ಸಿಟ್ಟು, ಕೋಪ ಇದ್ರೂ ನಮ್ಮ ಜೊತೆ ಮಾತನಾಡಬೇಕು ಹೊರತು, ಹಸುವನ್ನ ಸಾಯಿಸೋದಲ್ಲ ಅಂತ ಮರಿ ಬಸವಯ್ಯ ಅವ್ರ ಪತ್ನಿ ಭಾಗ್ಯಮ್ಮ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್‌ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!

    ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವನ್ನ ಯಾರು ನಡೆಸಿದ್ರೂ, ಯಾರ ಮೇಲೆ ಅನುಮಾನವಿದೆ ಅಂತ ಮರಿ ಬಸವಯ್ಯನವ್ರಿಂದ ಮಾಹಿತಿಯನ್ನ ಪಡೆದಿದ್ದಾರೆ. ಮರಿ ಬಸವಯ್ಯನವ್ರ ಜಮೀನಿನಲ್ಲಿಯೇ ಹಸುವಿನ ಅಂತ್ಯ ಸಂಸ್ಕಾರ ಮಾಡಲಾಗಿದೆ. ದೂರು ದಾಖಲಿಸಿಕೊಂಡಿರೋ ಪೊಲೀಸರು, ಈ ಕೃತ್ಯವೆಸಗಿದವ್ರ ವಿರುದ್ಧ ಏನ್ ಕ್ರಮ ಕೈಗೊಳ್ತಾರೆ ಕಾದು ನೋಡಬೇಕಿದೆ. ಇದನ್ನೂ ಓದಿ: `ಮನಿ’ ಕೊಟ್ಟರಷ್ಟೇ ಸರ್ಕಾರಿ `ಮನೆ’ – ಜಮೀರ್‌ಗೆ ಗೊತ್ತಿಲ್ಲ ಅಂದ್ರೆ ತನಿಖೆ ಮಾಡಿಸಲಿ: ಬಿ.ಆರ್ ಪಾಟೀಲ್ ಬಾಂಬ್‌

  • RCB vs CSK ಪಂದ್ಯದ ಟಿಕೆಟ್‌ ಬ್ಲಾಕ್‌ನಲ್ಲಿ ಮಾರಾಟ – ನಾಲ್ವರು ಅರೆಸ್ಟ್‌

    RCB vs CSK ಪಂದ್ಯದ ಟಿಕೆಟ್‌ ಬ್ಲಾಕ್‌ನಲ್ಲಿ ಮಾರಾಟ – ನಾಲ್ವರು ಅರೆಸ್ಟ್‌

    – 32 ಟಿಕೆಟ್‌, 1 ಲಕ್ಷ ನಗದು ಸೀಜ್‌

    ಬೆಂಗಳೂರು: ಐಸಿಸಿ ಕ್ರಿಕೆಟ್‌ ಟೂರ್ನಿಗಳಲ್ಲಿ ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಹೇಗೋ, ಹಾಗೆಯೇ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಬಿಸಿಸಿಐ ಹಾಗೂ ಐಪಿಎಲ್‌ ಮಂಡಳಿ ಪಾಲಿಗೆ ಚಿನ್ನದ ಮೊಟ್ಟೆ. ಉಭಯ ತಂಡಗಳ ನಡುವಿನ ರೋಚಕ ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ದುಪ್ಪಟ್ಟು ಬೆಲೆಯಾದರೂ ಯೋಚಿಸದೇ ಟಿಕೆಟ್‌ ಖರೀದಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಬ್ಲಾಕ್‌ನಲ್ಲಿ ಟಿಕೆಟ್‌ (Black Ticket) ಮಾರಾಟ ಮಾಡ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಚರಣ್ ರಾಜ್, ಹರ್ಷವರ್ಧನ ಸಕ್ಲೇಚ, ವಿನಯ್, ವೆಂಕಟಸಾಯಿ ಬಂಧಿತ ಆರೋಪಿಗಳು. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುವ ಆರ್‌ಸಿಬಿ vs ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್‌ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 32 ಟಿಕೆಟ್‌ಗಳು ಹಾಗೂ 1 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

    ಪ್ರೇಕ್ಷಕರ ಅಗತ್ಯತೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಿಂತು 1,200 ರೂ. ಬೆಲೆಯ ಟಿಕೆಟ್‌ ಅನ್ನು 10,000 ರೂ.ಗೆ ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದ ಸಿಸಿಬಿ ವಿಶೇಷ ತಂಡ ಟಿಕೆಟ್‌ ಖರೀದಿಸುವ ನೆಪದಲ್ಲಿ ಬಂದು ದಂಧೆಕೋರರನ್ನ ಬಂಧಿಸಿದ್ದಾರೆ.

    ಇಂದು ರಾತ್ರಿ 7:30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯ ಶುರುವಾಗಲಿದೆ. ಆರ್‌ಸಿಬಿ ಚಿನ್ನಸ್ವಾಮಿಯಲ್ಲಿ ಆಡುತ್ತಿರುವ 100ನೇ ಪಂದ್ಯವೂ ಇದಾಗಿದೆ.

  • Bengaluru | ಐಐಎಸ್‌ಸಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ನಾಪತ್ತೆ

    Bengaluru | ಐಐಎಸ್‌ಸಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ನಾಪತ್ತೆ

    ಬೆಂಗಳೂರು: ಐಐಎಸ್‌ಸಿನ (ಭಾರತೀಯ ವಿಜ್ಞಾನ ಸಂಸ್ಥೆ – IISc) ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅನ್ಮೋಲ್ ಗಿಲ್ ನಾಪತ್ತೆಯಾಗಿರುವ ವಿದ್ಯಾರ್ಥಿ (IISc Student). ಕೊನೆಯಾದ್ದಾಗಿ ಅನ್ಮೋಲ್‌ ಹೋಗುತ್ತಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರಿಗೆ ಲಭ್ಯವಾಗಿದೆ. ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಅಸಮಾಧಾನ – ಉಸ್ತುವಾರಿ ಮಲ್ಲಿಕಾರ್ಜುನ್‌ ಬದಲಾಯಿಸುವಂತೆ ಶಿವಗಂಗಾ ಬಸವರಾಜ್ ಪತ್ರ

    ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ (Yeshwanthpur Police Station) ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: Chikkaballapura | ಕೀಟನಾಶಕ ಮಿಶ್ರಿತ ಅನಧಿಕೃತ ಬಯೋ ಎಂಜೈಮ್ಸ್‌ ಮಾರಾಟ – ರೈತರಿಗೆ ವಂಚನೆ 

  • ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಯುವಕರ ದುರ್ಮರಣ

    ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಯುವಕರ ದುರ್ಮರಣ

    ಬೆಂಗಳೂರು: ಇಲ್ಲಿನ ಯಶವಂತಪುರ (Yeshwantpur) ಯಾರ್ಡ್ ಬಳಿ ನಡೆದ ಬಿಎಂಡಬ್ಲ್ಯೂ ಬೈಕ್ ಅಪಘಾತದಲ್ಲಿ (Bike Accident) ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ.

    ಮನಮೋಹನ್ (31) ನಿಖಿಲ್ (25) ಮೃತ ದುರ್ದೈವಿಗಳು. ಮುಂಜಾನೆ 3:30ರ ಸಮಯದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಐತಿಹಾಸಿಕ ನಿರ್ಣಯ – ಸರ್ವಾನುಮತದಿಂದ ಮಹಿಳಾ ಮೀಸಲಾತಿ ಬಿಲ್‌ ಪಾಸ್‌

    ಅತಿವೇಗವಾಗಿ ಬಿಎಂಡಬ್ಲೂ ಬೈಕ್ (BMW Bike) ಚಾಲನೆ ಮಾಡುತ್ತಿದ್ದ ಯುವಕರು ಯಶವಂತಪುರದಿಂದ ಆರ್‌ಎಂಸಿ ಯಾರ್ಡ್ ರೋಡ್ ಕಡೆಗೆ ಡ್ರೈವ್‌ ಮಾಡಿಕೊಂಡು ಬರುತ್ತಿದ್ದರು. ಮದ್ಯ ಸೇವಿಸಿ ಬೈಕ್ ಚಲಾಯಿಸುತ್ತಿದ್ದದ್ದು ಮಾತ್ರವಲ್ಲದೇ ಹೆಲ್ಮೆಟ್ ಸಹ ಧರಿಸಿರಲಿಲ್ಲ. ಕೊನೆಗೆ ಬೈಕ್ ನಿಯಂತ್ರಣಕ್ಕೆ ಸಿಗದೇ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರು ಬೈಕ್‌ನಿಂದ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಓಲಾ ಬೈಕ್ ನಿಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ಮನವಿ

    ಮೋಹನ್ ಮತ್ತು ನಿಖಿಲ್ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ಇಬ್ಬರ ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯಶವಂತಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಯನ್ನ ಕೊಲೆ ಮಾಡಿ, ಮಾತೇ ಆಡ್ತಿಲ್ಲ ಅಂತಾ ಗೋಳಾಡ್ತಿದ್ದ ಪತಿ – ಖತರ್ನಾಕ್‌ ಸಿಕ್ಕಿ ಬಿದ್ದದ್ದು ಹೇಗೆ?

    ಪತ್ನಿಯನ್ನ ಕೊಲೆ ಮಾಡಿ, ಮಾತೇ ಆಡ್ತಿಲ್ಲ ಅಂತಾ ಗೋಳಾಡ್ತಿದ್ದ ಪತಿ – ಖತರ್ನಾಕ್‌ ಸಿಕ್ಕಿ ಬಿದ್ದದ್ದು ಹೇಗೆ?

    ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿ ಆಕೆ ಮಾತೇ ಆಡ್ತಿಲ್ಲ ಅಂತಾ ಗೋಳಾಡುತ್ತಿದ್ದ ಪತಿ, ನಂತರ ಪೊಲೀಸರಿಗೆ ತಗಲಾಕಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ (Yeshwantpur Police) ನಡೆದಿದೆ.

    ಪ್ರಿಯಾ ಕೊಲೆಯಾದ ಮಹಿಳೆ (Women), ಶರತ್‌ ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯನ್ನ ಕೊಲೆಗೈದ ಶರತ್‌ ನಂತರ ಪತ್ನಿ ಮಾತನಾಡ್ತಿಲ್ಲ ಅಂತಾ ಗೋಳಾಡುತ್ತಾ ಮೃತದೇಹವನ್ನ ಆಸ್ಪತ್ರೆಗೆ (Hospital) ಹೊತ್ತೊಯ್ದಿದ್ದಾನೆ. ಗಂಡನ ಗೋಳಾಟ ಕಂಡು ವೈದ್ಯರು ಮೊದಲು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ತಪಾಸಣೆ ನಡೆಸಿದ ಬಳಿಕ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪತ್ನಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಕಣ್ಣೀರು ಹಾಕಿ ಪತಿ ಶರತ್‌ ಹೈಡ್ರಾಮ ಮಾಡಿದ್ದಾನೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಯಶವಂತಪುರ ಪೊಲೀಸರು ಮೊದಲು ಇದನ್ನ ಅನುಮಾನಾಸ್ಪದ ಸಾವು ಎಂದು ಕೇಸ್‌ ದಾಖಲಿಸಿದ್ದರು. ಬಳಿಕ ತನಿಖೆಯಲ್ಲಿ ಗಂಡನ ಅಸಲಿ ಮುಖವಾಡ ಬಯಲಾಗಿದೆ. ಪತ್ನಿಯನ್ನ ತಾನೇ ಕೊಲೆ ಮಾಡಿ ಶವದೊಂದಿಗೆ ಆಸ್ಪತ್ರೆಗೆ ಬಂದು ನಾಟಕವಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬ್ರಿಜ್‌ಭೂಷಣ್‌ ಬಂಧನಕ್ಕೆ ಜೂನ್‌ 9 ಗಡುವು – ಕುಸ್ತಿಪಟುಗಳ ಪ್ರತಿಭಟನೆಗೆ ರೈತಸಂಘ ಬೆಂಬಲ

    ಗಂಡ-ಹೆಂಡತಿ ನಡುವೆ ನಡೆದಿದ್ದೇನು?
    ಶರತ್‌ ಎಂಬಾತ ಮೊದಲೇ ಮದುವೆಯಾಗಿದ್ದರೂ ಪ್ರಿಯಾಳನ್ನ 2ನೇ ಮದುವೆಯಾಗಿದ್ದ. ಪ್ರಿಯಾ ಮೊದಲ ಪತ್ನಿ ಮನೆಗೆ ಹೋಗ್ತೀಯಾ ಅಂತಾ ಪದೇ ಪದೇ ಜಗಳವಾಡುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇಬ್ಬರ ನಡುವೆ ವಾಗ್ವಾದ ಶುರುವಾಗಿ ಶರತ್‌ ಪ್ರಿಯಾಳಿಗೆ ಥಳಿಸಿದ್ದಾನೆ. ಹೊಡೆದ ರಭಸಕ್ಕೆ ಕೆಳಗೆ ಬಿದ್ದು ಪ್ರಿಯಾ ಮೃತಪಟ್ಟಿದ್ದಾಳೆ. ನಂತರ ಶರತ್‌ ಈ ಪ್ರಕರಣವನ್ನ ಮುಚ್ಚಿಡಲು ಆಸ್ಪತ್ರೆಗೆ ಕರೆದೊಯ್ದು ನಾಟಕವಾಡಿದ್ದಾನೆ. ಎರಡು ದಿನಗಳ ಬಳಿಕ ಅಸಲಿ ಸಂಗತಿ ಬಯಲಾಗಿದೆ.

    ಶರತ್‌ ಹೈಡ್ರಾಮ ಕಂಡು ಮೊದಲೇ ಪೊಲೀಸರು ಅನುಮಾನಗೊಂಡಿದ್ದರು. ಮೃತದೇಹವನ್ನ ವೈದ್ಯರಿಂದ ಪರಿಶೀಲನೆ ನಡೆಸಿದಾಗ ಕುತ್ತಿಗೆ ಬಳಿ ಪಕ್ಕೆಲುಬು ಮುರಿದಿರುವುದು ಕಂಡುಬಂದಿತ್ತು. ಪ್ರಿಯಾ ಮೇಲೆ ಹಲ್ಲೆಯಾಗಿರುವುದಾಗಿಯೂ ವೈದ್ಯರು ತಿಳಿಸಿದ್ದರು. ಇದರಿಂದ ಕೊಲೆ ಮಾಡಿರುವುದು ಸ್ಪಷ್ಟವಾಗಿ ಯಶವಂತಪುರ ಪೊಲೀಸರು ಆರೋಪಿ ಶರತ್‌ನನ್ನ ಬಂಧಿಸಿ ಕೊಲೆ ಕೇಸ್‌ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.