Tag: ಯಲಹಂಕ ಫ್ಲೈಓವರ್

  • ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡದೇ ರಾಹುಲ್, ಸೋನಿಯಾ ಗಾಂಧಿ ಹೆಸರಿಡಬೇಕಾ?- ಸಿಸಿ ಪಾಟೀಲ್

    ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡದೇ ರಾಹುಲ್, ಸೋನಿಯಾ ಗಾಂಧಿ ಹೆಸರಿಡಬೇಕಾ?- ಸಿಸಿ ಪಾಟೀಲ್

    ಗದಗ: ಬೆಂಗಳೂರಿನ ಯಲಹಂಕ ಫ್ಲೈಓವರ್‌ಗೆ ವೀರ ಸಾವರ್ಕರ್ ಅವರ ಹೆಸರಿಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಚಿವ ಸಿ.ಸಿ.ಪಾಟೀಲ್ ಸಿಡಿಮಿಡಿಗೊಂಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಸಚಿವರು, ಫ್ಲೈಓವರಿಗೆ ವೀರ ಸಾವರ್ಕರ್ ಹೆಸರಿಡದೇ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್‍ನವರು ಮೊದಲು ತಿಳಿಯಲಿ. ಸಾವರ್ಕರ್ ಅವರ ಬಗ್ಗೆ ಮಾತಾಡುವಂತ ಯೋಗ್ಯತೆ ಯಾವೋಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲಾ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ಸಿಗರಿಗೆ ತ್ಯಾಗ ಬಲಿದಾನ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಕಮಾನ್ಯ ತಿಲಕ್ ಅವರು ಗೊತ್ತಿಲ್ಲಾ. ವೀರ ಸಾವರ್ಕರ್ ಬಿಜೆಪಿಯವರಾ? ಅವಾಗ ಬಿಜೆಪಿ ಇತ್ತಾ ಅಂತ ಪ್ರಶ್ನಿಸಿದರು.

    ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್, ಇಂದಿರಾ ಗಾಂಧಿ ರೋಡ್, ಆಯೋಜನೆ ಈ ಯೋಜನೆ ಅಂತೆಲ್ಲಾ ಇದೆ. ಎಲ್ಲಾದರೂ ನರೇಂದ್ರ ಮೋದಿ ರೋಡ್, ಬಿ.ಎಸ್.ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಇವರೇ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ? ಕಾಂಗ್ರೆಸ್ಸಿಗರು ಹೇಳೋದು ಆಚಾರ ತಿನ್ನೋದು ಬದನೆಕಾಯಿ ಎಂದು ಗುಡುಗಿದರು.

    ಬಿಜೆಪಿ ಪಕ್ಷದಲ್ಲಿ ಎದ್ದಿರುವ ಬಂಡಾಯದ ವಿಚಾರವಾಗಿ ಮಾತನಾಡಿದ ಸಚಿವರು, ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಬಾಧಿತ, ಸುಭದ್ರವಿದೆ. ಹಲವಾರು ಹಿರಿಯ ಶಾಸಕರು ನಮ್ಮಲ್ಲಿ ಭಿನ್ನಮತ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ನಾಯಕರು ಸಹ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದಾರೆ. ನಮ್ಮ ಬಗ್ಗೆ ಯಾರು ಏನೂ ಚಿಂತೆ ಮಾಡುವ ಅಗತ್ಯವಿಲ್ಲ, ಸರ್ಕಾರ ಸುಭದ್ರವಾಗಿರುತ್ತದೆ. ಮುಂದಿನ ಅವಧಿಗೆ ಪಕ್ಷವನ್ನು ಬಿಎಸ್‍ವೈ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.

    ಕಪ್ಪತ್ತಗುಡ್ಡದಲ್ಲಿ ಸರ್ಕಾರ ಮೈನಿಂಗ್ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಆರೋಪಕ್ಕೆ ಸಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಕಪ್ಪತ್ತಗುಡ್ಡ ರಕ್ಷಣೆ ಸರ್ಕಾರದ ಹೊಣೆ. ನಾನು ಮೂಲತಃ ಬೆಳಗಾವಿ ಜಿಲ್ಲೆಯವನು. ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸತೀಶ್ ಜಾರಕಿಹೊಳಿ ಆಧಾರ ರಹಿತ ಆರೋಪ ಮಾಡಿದರೆ ಅವರ ಮೇಲೆ ಬ್ಲಾಕ್ ಆಂಡ್ ವೈಟ್ ಅಲಿಗೇಷನ್ ಸಾಕಷ್ಟಿವೆ. ಸಮಯ ಸಂದರ್ಭ ಬಂದಾಗ ಮುಂದಿನ ದಿನಗಳಲ್ಲಿ ಎಲ್ಲಾ ಪುಟಗಳನ್ನ ತೆರೆದಿಡುತ್ತೇನೆ ಎಂದು ಟಾಂಗ್ ಕೊಟ್ಟರು.

    ಮುಂಬೈ-ಗದಗ ಎಕ್ಸ್‍ಪ್ರೆಸ್ ರೈಲು ಬರಲಿದೆ. ರಾಜ್ಯದ ಜನ ಮುಂಬೈ ನಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು ಮುಂಬೈ ಕನ್ನಡಿಗರನ್ನ ಅನಿವಾರ್ಯವಾಗಿ ಕರೆಸಿಕೊಳ್ಳಬೇಕಿದೆ. ಎಷ್ಟು ಜನ ಮುಂಬೈನಿಂದ ಬರುತ್ತಾರೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ನಂತರ 7 ದಿನ ಸರ್ಕಾರದ ನಿಯಮಗಳ ಪ್ರಕಾರ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.

    ಮುಂಬೈನಿಂದ ಗದಗ ಜಿಲ್ಲೆಗೆ ನಿರೀಕ್ಷೆ ಮೀರಿ ಜನ ಬಂದರೂ ಕ್ವಾರಂಟೈನ್ ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲ ಆಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್ ಸಾಲದಿದ್ದರೆ, ಕೊರತೆ ಕಂಡುಬಂದರೆ ಮುಂದೆ ತಾಲೂಕ ಕೇಂದ್ರಗಳಿಗೂ ಕಳಿಸುತ್ತೆವೆ ಎಂದು ತಿಳಿಸಿದರು.

  • ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನೇ ಇಡುತ್ತೇವೆ: ಭೀಮಾಶಂಕರ ಪಾಟೀಲ್ ಸವಾಲು

    ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನೇ ಇಡುತ್ತೇವೆ: ಭೀಮಾಶಂಕರ ಪಾಟೀಲ್ ಸವಾಲು

     – ‘ತಾಕತ್ತಿದ್ದರೆ ತಡೆದು ನೋಡಿ’

    ದಾವಣಗೆರೆ: ಬೆಂಗಳೂರಿನ ಯಲಹಂಕ ಫ್ಲೈಓವರಿಗೆ ಸಾವರ್ಕರ್ ನಾಮಕರಣ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಕತ್ತಿದ್ದರೆ ತಡೆದು ನೋಡಿ ಎಂದು ದಾವಣಗೆರೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ವಿರೋಧಿ ಪಕ್ಷಗಳಿಗೆ ಸವಾಲೆಸೆದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಹೆಸರು ಕೇಳಿದರೆ ಏಕೆ ಚೇಳು ಕಡಿದಂತೆ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಈಗಿನ ಕಾಂಗ್ರೆಸ್ ನಾಯಕರಿಗೆ ಸಾವರ್ಕರ್ ಹೆಸರು ಕೇಳಿದರೆ ಇಷ್ಟೋಂದು ಹೆದರಿಕೆ ಆಗುತ್ತೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನಾಯಕರು ಇನ್ನೆಷ್ಟು ಹೆದರಿರಬೇಡ ಎಂದರು.

    ಸಾರ್ವಕರ್ ರಂತಹ ದೇಶ ಭಕ್ತ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ನಾಡು-ನುಡಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಸಾವರ್ಕರ್ ನಾಮಕರಣದ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬೇಡ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಅಧಿಕೃತವಾಗಿ ಪರವಾನಗಿ ಪಡೆದು ಫ್ಲೈಓವರಿಗೆ ಸಾವರ್ಕರ್ ಹೆಸರು ನಾಮಕರಣ ಮಾಡುತ್ತೇವೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟ ನಿಲುವನ್ನು ಸ್ಪಷ್ಟಪಡಿಸಿದರು.

    ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳ ಹೆಸರು ಬಿಜೆಪಿ ಅಧಿಕಾರ ಅವಧಿಯಲ್ಲಿ ಮರುನಾಮಕರಣಗೊಂಡಿದ್ದು, ಇಂದಿರಾ ಕ್ಯಾಂಟೀನ್‍ಗೆ ಅಕ್ಕಮಹಾದೇವಿ ಹೆಸರು ಸೂಚಿಸಿದ್ದೇವು. ಆದರೆ ಸಿದ್ದರಾಮಯ್ಯ ಅರು ಹಠಕ್ಕೆ ಬಿದ್ದವರಂತೆ ಇಂದಿರಾ ಅವರ ಹೆಸರು ನಾಮಕರಣ ಮಾಡಿದರು. ಆದರೂ ನಾವು ವಿರೋಧ ಮಾಡಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ವಿನಾಕಾರಣ ವಿವಾದ ಎಬ್ಬಿಸುತ್ತಿದ್ದಾರೆ. ಸ್ವಾತಂತ್ರ ವೀರನಿಗೆ ವಿರೋಧ ಪಕ್ಷಗಳು ಅಪಮಾನ ಮಾಡುತ್ತಿದ್ದಾರೆ ಎಂದರು.

    ಸಾರ್ವಕರ್ ಮುಂದಾಳತ್ವ ಹೋರಾಟ ಕಾಂಗ್ರೆಸ್ ಪೂರ್ವಜರಿಗೆ ಇರಲಿಲ್ಲ. ಸಾವರ್ಕರ್ ಹೆಸರು ಇಟ್ಟ ತಕ್ಷಣ ಸಿದ್ದರಾಮಯ್ಯ ನವರಿಗೆ ಚೇಳು ಕಡಿದಂತಾಗುತ್ತದೆ. ಹೋರಾಟಗಾರರನ್ನು ಅಪಮಾನ ಮಾಡುವ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಸಾವರ್ಕರ್ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ತಾಖತ್ ಇದ್ದವರು ಎದುರು ಬರಬಹುದು ಎಂದು ಸವಾಲು ಎಸೆದರು.