Tag: ಯಲಹಂಕ ಪೊಲೀಸ್‌

  • ಒಂದೂವರೆ ಕೋಟಿ, 50 ಗ್ರಾಂ ಚಿನ್ನಾಭರಣ ದೋಚಿದ ʻಸರ್ಕಾರಿ ಅಧಿಕಾರಿಗಳುʼ

    ಒಂದೂವರೆ ಕೋಟಿ, 50 ಗ್ರಾಂ ಚಿನ್ನಾಭರಣ ದೋಚಿದ ʻಸರ್ಕಾರಿ ಅಧಿಕಾರಿಗಳುʼ

    ಬೆಂಗಳೂರು: ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಬಂದು ಮನೆಯಲ್ಲಿದ್ದ ಒಂದೂವರೆ ಕೋಟಿ ರೂ. ಹಣ ಹಾಗೂ 50 ಗ್ರಾಂನ ಚಿನ್ನಾಭರಣಗಳನ್ನು ಖದೀಮರು ಲಪಟಾಯಿಸಿರುವ ಘಟನೆ ಬೆಂಗಳೂರಿನ (Bengaluru) ಯಲಹಂಕದಲ್ಲಿ ನಡೆದಿದೆ.

    ಯಲಹಂಕ (Yalahanka) ನಿವಾಸಿ ಗಿರಿರಾಜು ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು, ನಾವು ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

    ಬಳಿಕ ನಿಮ್ಮ ಮನೆಯಲ್ಲಿ ಹಣ ಇದೆ ಎಂದು ಗಿರಿರಾಜು ಮನೆಯವರ ಹೇಳಿದ್ದರು. ಹಣ ಎಲ್ಲಿದೆ ಎಂದು ಕೇಳಿದ್ದರು. ಜಮೀನು ಖರೀದಿಗಾಗಿ ಗಿರಿರಾಜು ಅವರು ಒಂದೂವರೆ ಕೋಟಿ ರೂ. ಹಣವನ್ನು ತಂದು ಮನೆಯಲ್ಲಿಟ್ಟಿದ್ದರು. ಅಡುಗೆ ಮನೆಯಲ್ಲಿಟ್ಟಿದ್ದ ಹಣವನ್ನು ಖದೀಮರು ತೆಗೆದುಕೊಂಡಿದ್ದರು.

    ಮನೆಯವರ ಬಳಿ ಗಿರಿರಾಜು ಎಲ್ಲಿದ್ದಾರೆ ಎಂದು ಕೇಳಿದ್ದರು. ಅವರು ಇಲ್ಲ ಎಂದಾಗ ಹಣದ ಬ್ಯಾಗ್ ಮತ್ತು 50 ಗ್ರಾಂ ಚಿನ್ನಾಭರಣವನ್ನು ದೋಚಿ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.


    ಇದೀಗ ಘಟನೆ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸುತ್ತಿದ್ದಾರೆ.

  • ಮಾದಕ ವ್ಯಸನಿಗಳಿಂದ ಸಿಲಿಕಾನ್ ಸಿಟಿಯ ಸ್ಮಶಾನದಲ್ಲಿ ಗಾಂಜಾ ಕೃಷಿ!

    ಮಾದಕ ವ್ಯಸನಿಗಳಿಂದ ಸಿಲಿಕಾನ್ ಸಿಟಿಯ ಸ್ಮಶಾನದಲ್ಲಿ ಗಾಂಜಾ ಕೃಷಿ!

    ಬೆಂಗಳೂರು: ಮಾದಕ ವ್ಯಸನಿಗಳು ಬೆಂಗಳೂರಲ್ಲಿ ಗಾಂಜಾ ಕೃಷಿ (Ganja Farming In Bengaluru) ನಡೆಸಿದ್ದಾರೆ. ಅದೂ ನರಪಿಳ್ಳೆಯೂ ಸುಳಿಯದಂತ ಸ್ಮಶಾನದಲ್ಲಿ.. ನಿರ್ಜನ ಪ್ರದೇಶದಲ್ಲಿರೊ ಸ್ಮಶಾನವನ್ನೇ ಗಾಂಜಾ (Ganja) ಸೇದುವ ಅಡ್ಡವನ್ನಾಗಿ ಮಾಡ್ಕೊಂಡು ಜಾಂಜಾ ಕೃಷಿ ಮಾಡಿರುವ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

    ಗಾಂಜಾ ಖರೀದಿ ಕಷ್ಟ ಅಂತ ಸ್ಮಶಾನದಲ್ಲಿ ಗಾಂಜಾ ಕೃಷಿ ಮಾಡ್ತಿದ್ದಾರ ವ್ಯಸನಿಗಳು? ಇದು ಯಾವುದೋ ದೂರದ ಊರಿನ ಸ್ಟೋರಿಯಲ್ಲ. ಸಿಲಿಕಾನ್ ಸಿಟಿಯದ್ದೇ ಕಥೆ. ಯಾವ ಏರಿಯಾಗೆ ಹೋದ್ರು, ಗಾಂಜ ಘಾಟು ಇದ್ದೇ ಇದೆ. ಪೊಲೀಸರು (Bengaluru Police), ಸರ್ಕಾರ ಗಾಂಜಾ ನಿರ್ಮೂಲನೆಗೆ ಪಣ ತೊಟ್ಟು ನಿಂತಿದೆ. ಆದ್ರೂ ಗಾಂಜಾ ಘಾಟು ಮಾತ್ರ ಕಮ್ಮಿಯಾಗಿಲ್ಲ. ನಿನ್ನೆ ಮೊನ್ನೆ ರಿಲೀಸ್ ಆದ ಭೀಮಾ ಸಿನಿಮಾದ‌ ಕಥಾವಸ್ತುವು ಇದೇ ವಿಷಯಕ್ಕೆ ಸಂಬಂಧಿಸಿದ್ದೇ ಆಗಿದೆ.

    ಹೊರ ರಾಜ್ಯಗಳಿಂದ ನಗರಕ್ಕೆ ಗಾಂಜಾ ಸಪ್ಲೈ ಆಗುತ್ತೆ. ಪೆಡ್ಲರ್ ಗಳಿಂದ ಬರೋ ಗಾಂಜವನ್ನ ವ್ಯಸನಿಗಳಿಗೆ ತಲುಪಿಸೋದು ಒಂದು ಸವಾಲಿನ ಕೆಲಸ. ಇದೇ ಕಾರಣಕ್ಕೆ ಕೆಲವೊಂದಷ್ಟು ಜನ ಗಾಂಜಾ ಕೃಷಿಗೆ ಮುಂದಾಗಿದ್ದಾರೆ ಅನ್ನೋ ಅನುಮಾನ ಮೂಡಿದೆ. ಯಲಹಂಕ ಬಳಿಯ ಅಟ್ಟೂರು ಸ್ಮಶಾನದಲ್ಲಿ ಸದ್ದಿಲ್ಲದೇ ಗಾಂಜಾ ಕೃಷಿ ನಡೆದಿದ್ಯಾ ಅನ್ನೋ ಅನುಮಾನ ಅಲ್ಲಿನ ಗಾಂಜಾ ಗಿಡಗಳನ್ನ ಮೋಡಿದ್ರೆ ಮೂಡುತ್ತೆ. ಆಗೊಮ್ಮೆ ಈಗೊಮ್ಮೆ ಬರೋ‌ ರುದ್ರಭೂಮಿ ಗಾಂಜಾವ್ಯಸನಿಗಳ ಅಡ್ಡೆಯಾಗಿದೆ ಅನ್ನೋದಕ್ಕೆ ಇಲ್ಲಿನ ಗಾಂಜ ಗಿಡಗಳೇ ಸಾಕ್ಷಿ. ಸ್ಮಶಾನದ ಎರಡು ರೌಂಡ್ ಹಾಕಿದ್ರೆ ಹತ್ತಾರು ಗಾಂಜಾ ಗಿಡಗಳ ಘಾಟು ಮೂಗಿ ರಾಚುತ್ತೆ. ಇನ್ನೂ ಸ್ಮಶಾನದ ಮೂಲೆ ಮೂಲೆ ಪರೀಕ್ಷೆ ಮಾಡಿದ್ರೆ ಅದೆಷ್ಟು ಗಾಂಜಾ ಗಿಡಗಳು ಕಾಣುತ್ತೋ ಗೊತ್ತಿಲ್ಲ. ಇನ್ನೂ ಸ್ಮಶಾನದಲ್ಲಿ ಗಾಂಜಾ ಸೇದುವಾಗ ಉದುರಿರೋ ಬೀಜದಿಂದ ಗಿಡ ಬೆಳದಿದ್ಯೋ ಇಲ್ಲ ಸ್ಮಶಾನ ಯಾರೂ ಬರೋಲ್ಲ ಅಂತ ಬೇಕೆಂದೇ ಗಾಂಜಾ ಕೃಷಿ ಮಾಡಿದ್ದಾರೊ‌ ಗೊತ್ತಿಲ್ಲ.

    ಯಾವಾಗ ʻಪಬ್ಲಿಕ್ ಟಿವಿʼಯಲ್ಲಿ ಈ ಬಗ್ಗೆ ವರದಿ ಬಿತ್ತರವಾಯ್ತೊ ಯಲಹಂಕ ಎಸಿಪಿ ನರಸಿಂಹಮೂರ್ತಿ ಹಾಗೂ ಇನ್ಸ್‌ಪೆಕ್ಟರ್‌ ಸುಧಾಕರ್ ರೆಡ್ಡಿ ಸ್ಮಶಾನಕ್ಕೆ ಭೇಟಿ ನೀಡಿ ಗಾಂಜಾ ಗಿಡಗಳನ್ನ ಸೀಜ್ ಮಾಡಿದ್ದಾರೆ. ಎನ್‌ಡಿಪಿಎಸ್‌ ಆಕ್ಟ್‌ ಅಡಿ ಕೇಸ್ ದಾಖಲು ಮಾಡಲಾಗಿದ್ದು, ಇನ್ನಾದ್ರು ಪೊಲೀಸರು ಈ ಗಾಂಜಾ ಕೃಷಿಗೆ ಮುಕ್ತಿ ನೀಡಿ ಗಾಂಜಾ ಕೃಷಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ.

  • ಬೆಂಗ್ಳೂರಿನಲ್ಲಿ ತಾಯಿ-ಮಗ ಸಾವು; ಪತಿಯ ಅಗಲಿಕೆ ನೋವಿನಿಂದ ಪತ್ನಿ ಆತ್ಮಹತ್ಯೆ!

    ಬೆಂಗ್ಳೂರಿನಲ್ಲಿ ತಾಯಿ-ಮಗ ಸಾವು; ಪತಿಯ ಅಗಲಿಕೆ ನೋವಿನಿಂದ ಪತ್ನಿ ಆತ್ಮಹತ್ಯೆ!

    ಬೆಂಗಳೂರು: ಸುಂದರ ಸುಖ ಸಂಸಾರಕ್ಕೆ ಅದ್ಯಾರ ಕಣ್ಣು ಬಿತ್ತೊ ಏನೊ, ಕೈ ತುಂಬ ದುಡಿಯುತ್ತಿದ್ದ ಕುಟುಂಬ. ಚೆಂದದ ಮಕ್ಕಳು, ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಾಗ.. ಮನೆಯ ಯಜಮಾನನ ಹಠಾತ್ ಸಾವು, ಹೆಂಡ್ತಿ ಮಗನನ್ನ ಖಿನ್ನತೆಗೆ ತಳ್ಳಿ ಸಾವಿನ ಲೋಕಕ್ಕೆ ಕೊಂಡಿಯ್ದಿದೆ.

    ಗಂಡ-ಹೆಂಡತಿ, ಇಬ್ಬರು ಮಕ್ಕಳು, ಚಿಕ್ಕದಾದ ಚೊಕ್ಕ ಸಂಸಾರ. ಕೋಲಾರ (Kolara) ಮೂಲದ ರಮ್ಯಾ ಹಾಗೂ ಆಂಧ್ರ ಪ್ರದೇಶದ ಪುಲಿವರ್ತಿ ಗ್ರಾಮದ ಶ್ರೀಧರ್, ವಿವಾಹವಾಗಿ ಹಲವು ವರ್ಷಗಳಿಂದ ಬೆಂಗಳೂರಿನ ಯಲಹಂಕದಲ್ಲಿ (Yelahanka) ವಾಸವಾಗಿದ್ರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದರು, ಒಳ್ಳೆಯ ವಿದ್ಯಾಭ್ಯಾಸ ಸಹ ಮಾಡುತ್ತಿದ್ದರು. ಪತಿ ಶ್ರೀಧರ್ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿ ಕೈತುಂಬ ಸಂಬಳ ಬರ್ತಾ ಇತ್ತು. ಎಲ್ಲವು ಚೆನ್ನಾಗಿಯೇ ಇತ್ತು ಎನ್ನುವಾಗ ವಿಧಿ ಅನ್ನೋದು ಇವರ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನೇ ತಂದೊಡ್ಡಿದೆ.

    ಕಳೆದ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶ್ರೀಧರ್, ಖಾಸಗಿ ಆಸ್ಪತ್ರೆಯಲ್ಲಿ (Hospital) ಮೃತಪಟ್ಟಿದ್ದರು. ಗಂಡನ ಅಕಾಲಿಕ ಮರಣದಿಂದ ಪತ್ನಿ ರಮ್ಯಾಗೆ ಜೀವನ ನಿರ್ವಹಣೆ ಮಾಡೋದು ಸಂಕಷ್ಟದ ಹಂತ ತಲುಪಿತ್ತು. ಕುಟುಂಬಕ್ಕೆ ವರಮಾನವಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೂ ಕೊಡಲಿಪೆಟ್ಟು ಬಿದ್ದಿತ್ತು. ಮಗಳ ಕೋರ್ಸನ್ನು ಕೂಡ ಬದಲಾವಣೆ ಮಾಡಿದ್ದರು. ಆದ್ರೆ ಪತಿಯಿಲ್ಲದೇ ರಮ್ಯಾ ಕೊರಗ್ತಾ ಇದ್ರೆ ವಿದ್ಯಾಭ್ಯಾಸ ಹಾಗು ಮನೆಯ ಸಂಕಷ್ಟ ಕಂಡ ಮಗ ಭಾರ್ಗವ್ ಕೂಡ ಬಹಳಷ್ಟು ನೊಂದಿದ್ದ. ಇದನ್ನೂ ಓದಿ: ವಾಲ್ಮೀಕಿ ನಿಗಮದಂತೆ ಪ್ರವಾಸೋದ್ಯಮ ಇಲಾಖೆಯಲ್ಲೂ ಗೋಲ್ಮಾಲ್‌ – 2.47 ಕೋಟಿ ರೂ. ಅಕ್ರಮ ಹಣ ವರ್ಗಾವಣೆ

    ಹೀಗೆ ನೊಂದುಕೊಂಡೆ ಜೀವನ ಮಾಡ್ತಾ ಇದ್ದ ಕುಟುಂಬ ಕೊನೆಗೆ ಕಟು ನಿರ್ಧಾರಕ್ಕೆ ಬಂದುಬಿಟ್ಟಿತ್ತು. ತಾವು ವಾಸಮಾಡಿಕೊಂಡಿದ್ದ ಯಲಹಂಕ ಗ್ಯಾಲರಿಯ ಅಪಾರ್ಟ್ ಮೆಂಟ್ ನಲ್ಲಿ ಮಗ ಭಾರ್ಗವ್ ಜೊತೆ ತಾಯಿ ರಮ್ಯಾ ಆತ್ಮಹತ್ಯೆ ಶರಣಾಗಿದ್ರು. ಇನ್ನು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ನಿನ್ನೆ ದಿನ ಮಗಳು ಪಿಜಿಯಿಂದ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೊಕ್​!

    ಬೆಂಗಳೂರಿನ ಯಲಹಂಕದ ಆರ್‌ಎನ್‌ಜೆಡ್‌ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಮಗ ಭಾರ್ಗವ್ ಪುಲಿವರ್ತ (13), ತಾಯಿ ರಮ್ಯಾ ಜಿ. (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮೊದಲಿಗೆ 13 ವರ್ಷದ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಡಿಸಿಪಿ ಹೇಳಿದ್ದೇನು?

    ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗ ಡಿಸಿಪಿ ವಿ.ಜೆ ಸಜೀತ್, ಯಲಹಂಕದ ಆರ್‌ಎನ್‌ಜೆಡ್ ಅಪಾರ್ಟ್ಮೆಂಟ್‌ನಲ್ಲಿ ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹಗಳು ಪತ್ತೆಯಾಗಿವೆ. ನಿನ್ನೆ ಮೃತದೇಹ ಸಿಕ್ಕ ಬಳಿಕ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದಾರೆ. ರಮ್ಯಾ ಅವರ ಪತಿ ಶ್ರೀಧರ್ ಪುಲಿವರ್ತ 3 ತಿಂಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಪತಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ರಮ್ಯಾ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅನಂತ್‌ ಅಂಬಾನಿ ವಿವಾಹ ಮಹೋತ್ಸವದಲ್ಲಿ ಮೋದಿ ಭಾಗಿ – ನವ ಜೋಡಿಗೆ ಆಶೀರ್ವದಿಸಿದ ಪ್ರಧಾನಿ! 

  • ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ – ಬೇಸತ್ತ ಯುವತಿ ಬೈಕ್‌ನಿಂದ ಜಂಪ್‌

    ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ – ಬೇಸತ್ತ ಯುವತಿ ಬೈಕ್‌ನಿಂದ ಜಂಪ್‌

    ಬೆಂಗಳೂರು: ರ‍್ಯಾಪಿಡೋ (Rapido) ಬೈಕ್‌ ಸವಾರನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದಿರುವ ಘಟನೆ ಯಲಹಂಕದ ಹೊರವಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಯಲಹಂಕ ಉಪನಗರ ನಾಗೇನಹಳ್ಳಿ ಠಾಣಾ (Yelahanka Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ದೊಡ್ಡಗೌಡರ ಕೋಟೆಗೆ ಇಂದು ಯುಪಿ ಸಿಎಂ ಎಂಟ್ರಿ – ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

    ಏನಿದು ಘಟನೆ?
    ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿ ಕೆಲಸ ಮಾಡ್ತಿದ್ದ ಯುವತಿ ಇದೇ ತಿಂಗಳ ಏಪ್ರಿಲ್‌ 21 ರಂದು ಯಲಹಂಕದಿಂದ ಇಂದಿರಾನಗರಕ್ಕೆ ತೆರಳಲು ರ‍್ಯಾಪಿಡೋ ಬುಕ್‌ ಮಾಡಿದ್ದಾಳೆ. ಬೈಕ್‌ (Rapido Bike) ಸವಾರ ಓಟಿಪಿ ಪಡೆಯುವ ನೆಪದಲ್ಲಿ ಮೊಬೈಲ್‌ ಕಸಿದಿದ್ದಾನೆ. ಬಳಿಕ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಚಲಿಸುತ್ತಿದ್ದ ಬೈಕ್‌ನಿಂದ ಜಿಗಿದಿದ್ದಾಳೆ. ಇದನ್ನೂ ಓದಿ: ಇಂದಿರಾ ಗಾಂಧಿಯ ಪ್ರತಿರೂಪ ಎಂದಿದ್ದಕ್ಕೆ ಮಹಿಳೆಗೆ ಪ್ರೀತಿಯ ಅಪ್ಪುಗೆ ನೀಡಿದ ಪ್ರಿಯಾಂಕಾ

    ನಂತರ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇರೆಗೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಆಂಧ್ರಪ್ರದೇಶ ಮೂಲದ ದೀಪಕ್‌ ರಾವ್‌ನನ್ನ ಬಂಧಿಸಿದ್ದಾರೆ. ಯಲಹಂಕ ಉಪನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.