Tag: ಯರ್ಥವ್

  • ರಾಧಿಕಾ ಪಂಡಿತ್ ಪಾಲಿನ ಸಾಂತಾ ಯಾರು?

    ರಾಧಿಕಾ ಪಂಡಿತ್ ಪಾಲಿನ ಸಾಂತಾ ಯಾರು?

    ಬೆಂಗಳೂರು: ಸ್ಯಾಂಡಲ್‍ವುಡ್‍ ಸೆಲೆಬ್ರೆಟಿಗಳು ಮನೆಯಲ್ಲಿ ಕ್ರಿಸ್‍ಮಸ್ ಸಂಭ್ರಮದಿಂದ ಆಚರಣೆ ಮಾಡಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಪಾಲಿನ ಸಾಂತಾ ಯಾರು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ರಾಧಿಕಾ ಪಂಡಿತ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಅವರ ಫ್ಯಾಮಿಲಿ ಫೋಟೋವನ್ನು ಶೇರ್ ಮಾಡಿದ್ದಾರೆ. ಯಶ್, ರಾಧಿಕಾ ಪಂಡಿತ್, ಐರಾ, ಯಥರ್ವ ಫೋಟೋದಲ್ಲಿ ಇದ್ದಾರೆ. ನಮ್ಮನೆಯ ಸಾಂತಾ ಹಸಿರು ಬಣ್ಣದ ಬಟ್ಟೆಯನ್ನು ಹಾಕಿದ್ದಾನೆ. ವೇರಿ ಮೇರಿ ಕ್ರಿಸ್‍ಮಸ್ ಎಂದು ಬರೆದುಕೊಂಡು ಚಂದದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

     

    View this post on Instagram

     

    A post shared by Radhika Pandit (@iamradhikapandit)

    ಫೋಟೋದಲ್ಲಿ ರಾಧಿಕಾ ಪಂಡಿತ್ ಅವರು ಕೆಂಪು ಬಣ್ಣದ ಗೌನ್, ಯಶ್ ನೀಲಿ ಬಣ್ಣದ ಬಟ್ಟೆಯನ್ನು ತೊಟ್ಟಿದ್ದಾರೆ. ಐರಾ ಮೆರೂನ್ ಬಣ್ಣ ಫ್ರಾಕ್ ಧರಿಸಿದ್ದಾಳೆ. ರಾಧಿಕಾ ಅವರ ಮನೆಯ ಸಾಂತಾ ಯರ್ಥವ್ ಹಸಿರು ಬಣ್ಣದ ಬಟ್ಟೆಯನ್ನು ತೊಟ್ಟಿದ್ದಾನೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ರಾಕಿಂಗ್ ಕುಟುಂಬ, ಮುದ್ದಾದ ಫ್ಯಾಮಿಲಿ ಫೋಟೋ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಸ್‍ಮಸ್ ಸಂಭ್ರಮ – ಗೋಲ್ಡನ್ ಸ್ಟಾರ್ ಪುತ್ರನಿಗೆ ಸರ್‌ಪ್ರೈಸ್ ಕೊಟ್ಟ ಸಾಂತಾ

    ರಾಧಿಕಾ ಪಂಡಿತ್ ಅವರು ನಿನ್ನೆ ಕೂಡ ಕ್ರಿಸ್‍ಮಸ್ ಆಚರಣೆಯ ಫೋಟೋವನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ತಮ್ಮ ಮುದ್ದು ಮಕ್ಕಳು ಐರಾ ಮತ್ತು ಯಥರ್ವ್ ಕ್ರಿಸ್‍ಮಸ್ ಟ್ರೀ ಮುಂದೆ ನಿಂತುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ರಾಧಿಕಾ ಜೊತೆಗೆ ಇಬ್ಬರು ಮಕ್ಕಳು ಮುದ್ದಾಗಿ ಕಾಣಿಸಿಕೊಂಡಿದ್ದರು. ಇದೀಗ ಇವರ ಕುಟುಂಬದ ನಾಲ್ವರು ಒಂದೇ ಪ್ರೇಮ್‍ನಲ್ಲಿರುವ ಮುದ್ದಾದ ಫೋಟೋವನ್ನು ಶೇರ್ ಮಾಡಿ ತಮ್ಮ ಪಾಲಿನ ಕ್ರಿಸ್‍ಮಸ್ ಯಾರೆಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು