Tag: ಯರಗೋಳ್‌

  • ಕೋಲಾರದಲ್ಲಿ 16 ವರ್ಷಗಳ ಬಳಿಕ ಪೂರ್ಣಗೊಂಡ ಹೊಸ ಜಲಾಶಯ

    ಕೋಲಾರದಲ್ಲಿ 16 ವರ್ಷಗಳ ಬಳಿಕ ಪೂರ್ಣಗೊಂಡ ಹೊಸ ಜಲಾಶಯ

    ಕೋಲಾರ: 16 ವರ್ಷಗಳ ಬಳಿಕ ಯರಗೋಳ್ (Yuragol) ಬಳಿ ಜಲಾಶಯವೊಂದರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುಂದರವಾದ ಬೆಟ್ಟಗುಡ್ಡಗಳ ನಡುವೆ ಹರಿದು ತಮಿಳುನಾಡು (Tamil Nadu) ಸೇರುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ (Dam) ನಿರ್ಮಾಣ ಮಾಡಿ ಕೋಲಾರ, ಮಾಲೂರು ಸೇರಿದಂತೆ 42 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು 2006ರಲ್ಲಿ ರೂಪಿಸಲಾಗಿತ್ತು. ಆದರೆ ಕಾಮಗಾರಿ ವಿಳಂಬವಾಗಿದ್ದು, 16 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದೆ.

    ಈ ಬೆನ್ನಲ್ಲೇ ಯರಗೋಳ್ ಜಲಾಶಯದ ಸುತ್ತಲೂ ಹಸಿರ ಸುಂದರ ವಾತಾವರಣ, ಜಲಾಶಯ ಹಾಗೂ ನೀರು ಬಯಲು ಸೀಮೆ ಜನರನ್ನು ಕೈಬೀಸಿ ಕರೆಯುತ್ತಿದೆ. ಯರಗೋಳ್ ಡ್ಯಾಂ ಕೋಲಾರ ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ ದೂರವಿದ್ದು ತಮಿಳುನಾಡು ಹಾಗೂ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿದೆ. ಹಾಗಾಗಿ ಕೇವಲ ಕೋಲಾರ ಜಿಲ್ಲೆಯ ಜನರಷ್ಟೇ ಅಲ್ಲಾ ಗಡಿ ಭಾಗದಿಂದ ಹೊರ ರಾಜ್ಯದ ಜನರು ಕೂಡಾ ಬಂದು ಡ್ಯಾಂ ನೋಡಿ ಖುಷಿ ಪಡುವಂತಹ ಸ್ಥಳವಾಗಿದೆ. ಇದನ್ನೂ ಓದಿ: Kanpur| ಖಾಸಗಿ ಆಸ್ಪತ್ರೆ ನಿರ್ದೇಶಕನಿಂದ 22 ವರ್ಷದ ನರ್ಸ್ ಮೇಲೆ ಅತ್ಯಾಚಾರ

    ಸುಂದರ ವಾತಾವರಣದಲ್ಲಿ ಕುಟುಂಬ ಸಮೇತರಾಗಿ ಬಂದು ಕೆಲ ಸಮಯ ಇಲ್ಲಿ ಕಳೆದು ಖುಷಿಪಟ್ಟು ಹೋಗುವಂತಿದೆ. ಹಾಗಾಗಿ ಇಲ್ಲಿ ಅರಣ್ಯ ಇಲಾಖೆ ಪ್ರವಾಸಿಗರನ್ನು ಆಕರ್ಷಿಸಲು ಹಲವು ಯೋಜನೆಗಳನ್ನು ಸಿದ್ಧ ಮಾಡಿದೆ. ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೇ ಸುಂದರ ತಾಣವಾಗಿಸಲು ಮುಂದಾಗಿದೆ. ಇದನ್ನೂ ಓದಿ: ಚಾಮರಾಜನಗರ| ‘ಮಿಸ್ಟರ್‌ ಬಿಆರ್‌ಟಿ’ ಎಂದೇ ಹೆಸರಾಗಿದ್ದ ವಕ್ರದಂತ ಹೊಂದಿದ್ದ ಕಾಡಾನೆ ಸಾವು

  • ಎಲ್ಲವೂ ಸರಿಯಾಗಿ‌ ನಡೆದ್ರೆ 9 ತಿಂಗಳಲ್ಲಿ ಮಕ್ಕಳಾಗುತ್ತೆ, ನರಗಳ ದೌರ್ಬಲ್ಯ ಇದ್ರೆ ವಿಳಂಬವಾಗುತ್ತೆ: ರಮೇಶ್‌ ಕುಮಾರ್‌

    ಎಲ್ಲವೂ ಸರಿಯಾಗಿ‌ ನಡೆದ್ರೆ 9 ತಿಂಗಳಲ್ಲಿ ಮಕ್ಕಳಾಗುತ್ತೆ, ನರಗಳ ದೌರ್ಬಲ್ಯ ಇದ್ರೆ ವಿಳಂಬವಾಗುತ್ತೆ: ರಮೇಶ್‌ ಕುಮಾರ್‌

    ಕೋಲಾರ : ಜಿಲ್ಲೆಯ ಬಹು ನಿರೀಕ್ಷೆಯ ಯರಗೋಳ್ ಜಲಾಶಯಕ್ಕೆ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ಬಾಗಿನ ಅರ್ಪಿಸಿದರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಗ್ರಾಮದ ಬಳಿ ಇರುವ ಜಲಾಶಯ ಇದಾಗಿದ್ದು, ಕಳೆದೊಂದು ವಾರದಿಂದ ಸುರಿದ ಮಳೆಗೆ ಜಲಾಶಯ ಭರ್ತಿಯಾಗಿ ಹರಿಯುತ್ತಿದೆ.

    ಕಳೆದ ಮೂರು ದಿನಗಳಿಂದ ಭರ್ತಿಯಾಗಿ ಹರಿಯುತ್ತಿರುವ ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿದ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಶ್ರೀನಿವಾಸಪುರ ಶಾಸಕ ಕೆ.ಅರ್. ರಮೇಶ್ ಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಪರಿಷತ್ ಸದಸ್ಯರಾದ ನಜೀರ್‌ಅಹ್ಮದ್, ಅನಿಲ್ ಕುಮಾರ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿ ಬಾಗಿನ ಅರ್ಪಿಸಿದರು.

    ಡ್ಯಾಂನಲ್ಲಿ ನೀರು ಶೇಖರಣೆಯಾದರೂ ಸಾರ್ವಜನಿಕರ ಬಳಕೆಗೆ ಈ ಯೋಜನೆಯ ಲಾಭ ಸಿಗುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಮೊದಲು ಮಾತುಕತೆ, ನಿಶ್ಚಿತಾರ್ಥ, ಮದುವೆ ಎಲ್ಲವು ಸರಿಯಾದರೆ 9 ತಿಂಗಳಲ್ಲಿ ಮಕ್ಕಳಾಗುತ್ತದೆ ಎಂದು ತಮ್ಮದೇ ದಾಟಿಯಲ್ಲಿ ಉತ್ತರಿಸಿದರು. ಇದನ್ನೂ ಓದಿ: ಫಸ್ಟ್‌ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ

    ಈ ವೇಳೆ ಯೋಜನೆಗೆ ಚಾಲನೆ ಸಿಕ್ಕಿ 14 ವರ್ಷ ಆಗಿದೆ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಒಮ್ಮೊಮ್ಮೆ ನರಗಳ ದೌರ್ಬಲ್ಯ ಇದ್ದಾಗ, ಮಕ್ಕಳಾಗುವುದು ವಿಳಂಬವಾಗುತ್ತೆ ಎಂದು ಮಾಧ್ಯಮಗಳ ವಿರುದ್ಧ ಇದ್ದ ಬೇಸರವನ್ನು  ಪ್ರದರ್ಶನ ಮಾಡಿದರು.

    ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ಅಘೋಷಿತ ಭಗೀರಥ ಹೇಳಿಕೆಗೆ ಟಾಂಗ್ ನೀಡಿದ ಅವರು, ಕೆಆರ್‌ಎಸ್, ಎತ್ತಿನಹೊಳೆ, ಯರಗೋಳ, ಹೆಚೆ.ಎನ್.ವ್ಯಾಲಿ, ಕೆ.ಸಿ.ವ್ಯಾಲಿ, ಹೆಚ್ ಎಎಲ್, ಎಚ್‌ಎಂಟಿ ಎಲ್ಲವೂ ಕುಮಾರಸ್ವಾಮಿಯದ್ದೇ. ನಾವು ಕುಮಾರಸ್ವಾಮಿ ಕೃಪೆಯಿಂದ ಬದುಕುತ್ತಿದ್ದೇವೆ. ನನ್ನ ಭಗೀರಥ ಅಂತಾರೆ, ಮಹಾನ್ ನಾಯಕ, ನರಿ, ಶಕುನಿ ಅಂತಾರೆ ನೀವು ಏನಾದರು ಹೆಸರು ಕೊಡಿ ಎಂದ ರಮೇಶ್ ಕುಮಾರ್ ಯೋಜನೆ ವಿಳಂಬ ವಿಚಾರವಾಗಿ ನಿನ್ನೆ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಫಸ್ಟ್‌ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ

    ಫಸ್ಟ್‌ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ

    ಕೋಲಾರ: ಕಳೆದ ಐದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಯರಗೋಳ ಡ್ಯಾಂ ಭರ್ತಿಯಾಗಿದೆ.

    ಬಂಗಾರಪೇಟೆ ತಾಲೂಕಿನ ಯರಗೋಳ ಡ್ಯಾಂ, ಸುಮಾರು 100 ಅಡಿ ಎತ್ತರವಿದ್ದು ಈಗ ಸಂಪೂರ್ಣ ಭರ್ತಿಯಾಗಿದೆ. ಬಯಲುಸೀಮೆ ಏಕೈಕ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

    ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಸೇರಿ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಈ ಯರಗೋಳ್ ಯೋಜನೆ ಸಹಕಾರಿಯಾಗಲಿದೆ. ಇದನ್ನೂ ಓದಿ: ರಸ್ತೆಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ್

    ಇತ್ತೀಚೆಗೆ ಬಂದ ಮಳೆಗೆ ಕಳೆದ 14 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಲಾಶಯ ಇಂದು ತುಂಬಿರುವುದು ಜಿಲ್ಲೆಯ ಜನರಲ್ಲಿ ಖುಷಿ ತಂದುಕೊಟ್ಟಿದೆ. ಸುಮಾರು 315 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]