Tag: ಯಮುನಾ ಶ್ರೀನಿಧಿ

  • ‌’ಬಿಗ್‌ ಬಾಸ್’ ಎಲಿಮಿನೇಷನ್‌ ಬಳಿಕ ಮತ್ತೆ ಕಿರುತೆರೆಯಲ್ಲಿ ಯಮುನಾ ಬ್ಯುಸಿ

    ‌’ಬಿಗ್‌ ಬಾಸ್’ ಎಲಿಮಿನೇಷನ್‌ ಬಳಿಕ ಮತ್ತೆ ಕಿರುತೆರೆಯಲ್ಲಿ ಯಮುನಾ ಬ್ಯುಸಿ

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇನ್ನೂ ದೊಡ್ಮನೆ ಆಟದಿಂದ ಮೊದಲ ವಾರವೇ ಔಟ್ ಆಗಿದ್ದ ಯಮುನಾ ಶ್ರೀನಿಧಿ ಅವರು ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾಲಿವುಡ್ ನಟಿ

    ‘ಬಿಗ್ ಬಾಸ್ ಕನ್ನಡ 11’ರ ಬಳಿಕ ಯಮುನಾ (Yamuna Srinidhi) ಅವರು ಮತ್ತೆ ಕಿರುತೆರೆಗೆ ಮರಳಿದ್ದಾರೆ. ‘ಅವನು ಮತ್ತು ಶ್ರಾವಣಿ’ ಸೀರಿಯಲ್‌ಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೌಪರ್ಣಿಕಾ ಪಾತ್ರದಲ್ಲಿ ಖಡಕ್ ಆಗಿ ಯಮುನಾ ನಟಿಸುತ್ತಿದ್ದಾರೆ.

    ಇನ್ನೂ ಈ ಹಿಂದೆ ಕಮಲಿ, ಅಶ್ವಿನಿ ನಕ್ಷತ್ರ, ಕನ್ಯಾಕುಮಾರಿ ಸೇರಿದಂತೆ ಸೀರಿಯಲ್‌ಗಳಲ್ಲಿ ಯಮುನಾ ನಟಿಸಿದ್ದಾರೆ. ಸೀರಿಯಲ್ ಅಷ್ಟೇ ಅಲ್ಲ, ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

  • BBK 11: ಬಿಗ್ ಬಾಸ್ ಮನೆಯಿಂದ ಯಮುನಾ ಔಟ್

    BBK 11: ಬಿಗ್ ಬಾಸ್ ಮನೆಯಿಂದ ಯಮುನಾ ಔಟ್

    ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ವಾರದ ಎಲಿಮಿನೇಷನ್ ನಲ್ಲಿ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ನಟಿಯ ಎಲಿಮಿನೇಷನ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

    ಮೊದಲ ವಾರವೇ ಯಮುನಾ ಎಲಿಮಿನೇಷನ್ ಆಗುತ್ತೆ ಎಂಬುದನ್ನು ಯಾರು ಊಹಿಸಿರಲಿಲ್ಲ. ವಯಸ್ಸು 45 ದಾಟಿದರೂ ಗಟ್ಟಿಗಿತ್ತಿ ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಿದ್ದರು. ಇದೀಗ ಅವರು ಔಟ್ ಎನ್ನುತ್ತಿದ್ದಂತೆ ಮನೆ ಮಂದಿಗೂ ಅಚ್ಚರಿ‌ ಮೂಡಿಸಿದೆ.

    ಇನ್ನೂ ನವರಾತ್ರಿ‌ ಹಬ್ಬದ ಸಂದರ್ಭವಿರುವ ಕಾರಣ, ಎಲಿಮಿನೇಷನ್ ಇರೋದಿಲ್ಲ ಎಂದೇ ಅನೇಕರು ಭಾವಿಸಿದ್ದರು. ಆದರೆ ಈಗ ಯಮುನಾ ಅವರ ದೊಡ್ಮನೆ ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ.

    ಇನ್ನೂ ಯಮುನಾ ಅವರು ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಪರಿಚಿತರಾಗಿದ್ದರು.‌ಆ ನಂತರ ಹಲವು ಸಿನಿಮಾಗಳಲ್ಲಿ ಪೋಷಕ‌ ಪಾತ್ರಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಭರತನಾಟ್ಯ ಕಲಾವಿದೆಯಾಗಿ ಕೂಡ ಸೈ ಎನಿಸಿಕೊಂಡಿದ್ದಾರೆ.

  • ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

    ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಶುರುವಾಗಿ 1 ವಾರ ಕಳೆದಿದೆ. 17 ಸ್ಪರ್ಧಿಗಳ ಆಟ ಕೂಡ ಜೋರಾಗಿದೆ. ಹೀಗಿರುವಾಗ ದೊಡ್ಮನೆಯ ಮೊದಲ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿಯೇ ಔಟ್ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:‘ನಿದ್ರಾದೇವಿ Next Door’ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿ

    ರೂಲ್ಸ್ ಪ್ರಕಾರ, ವಾರಾಂತ್ಯದ ಕಡೆಯ ಪಂಚಾಯಿತಿಯಲ್ಲಿ ಯಾರಾದರೂ ಒಬ್ಬ ಸ್ಪರ್ಧಿಯ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಅದರಂತೆ ದೊಡ್ಮನೆಯ ಮೊದಲ ವಾರ ಯಾರು ಊಹಿಸಿರದ ವ್ಯಕ್ತಿ ಯಮುನಾ ಶ್ರೀನಿಧಿ (Yamuna Srinidhi)  ಔಟ್ ಆಗಿದ್ದಾರೆ ಎನ್ನಲಾಗಿದೆ. ಅತೀ ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.

    ಶನಿವಾರ (ಸೆ.5) ಸಂಚಿಕೆಯಲ್ಲಿ ಭವ್ಯಾ, ಗೌತಮಿ ಜಾದವ್, ಮಾನಸಾ ಸೇಫ್ ಆಗಿದ್ದಾರೆ. ಗಟ್ಟಿ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಯಮುನಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಭಾನುವಾರದ (ಸೆ.6) ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

  • BBK 11: ವಿಶೇಷ ಅಧಿಕಾರದೊಂದಿಗೆ ಸ್ವರ್ಗದ ಮನೆಗೆ ಕಾಲಿಟ್ಟ ಭವ್ಯಾ, ಯಮುನಾ

    BBK 11: ವಿಶೇಷ ಅಧಿಕಾರದೊಂದಿಗೆ ಸ್ವರ್ಗದ ಮನೆಗೆ ಕಾಲಿಟ್ಟ ಭವ್ಯಾ, ಯಮುನಾ

    ಬಿಗ್ ಬಾಸ್ ಮನೆಗೆ ಭವ್ಯಾ (Bhavya Gowda) ಮತ್ತು ಯಮುನಾ (Yamuna Srinidhi) ಕಾಲಿಟ್ಟಿದ್ದಾರೆ. ಮೊದಲ ಇಬ್ಬರೂ ಸ್ವರ್ಧಿಗಳಾಗಿರುವ ಭವ್ಯಾ ಮತ್ತು ಯಮುನಾಗೆ ದೊಡ್ಮನೆಯ ಸ್ವರ್ಗಕ್ಕೆ ಎಂಟ್ರಿ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಡೆಲಿವರಿ ಬಳಿಕ ಮಗನ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್

    ಭವ್ಯಾ ಮೊದಲ ಸ್ವರ್ಧಿಯಾಗಿದ್ರೆ, ಎರಡನೇ ಸ್ವರ್ಧಿಯಾಗಿ ಬಿಗ್ ಬಾಸ್‌ಗೆ (Bigg Boss Kannada 11) ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎರಡು ಸ್ಪರ್ಧಿಗಳಾಗಿರುವ ಕಾರಣ ಇಬ್ಬರೂ ಸೀದಾ ದೊಡ್ಮನೆಯ ಸ್ವರ್ಗಕ್ಕೆ ಕಾಲಿಡಲು ಅವಕಾಶ ನೀಡಲಾಗಿದೆ. ಭವ್ಯಾ ಮತ್ತು ಯಮುನಾ ಅವರು ಬಿಗ್ ಬಾಸ್ ಮನೆಯ ಅದ್ಧೂರಿತನ ನೋಡಿ ಸಂಭ್ರಮಿಸಿದ್ದಾರೆ.

    ಜೊತೆಗೆ ಇಬ್ಬರಿಗೂ ವಿಶೇಷ ಅಧಿಕಾರವನ್ನು ಕೊಟ್ಟಿದ್ದಾರೆ. ಬರುವ ಸ್ಪರ್ಧಿಗಳು ನಡೆ, ನುಡಿ ನೋಡಿ ಅವರು ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಎಂದು ಅಭಿಪ್ರಾಯ ತಿಳಿಸಬೇಕು. ಇನ್ನೂ ಇಬ್ಬರೂ ಕೂಡ ಗಟ್ಟಿ ಸ್ಪರ್ಧಿಗಳಾಗಿದ್ದು, ದೊಡ್ಮನೆಯ ಆಟ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಅಂದಹಾಗೆ, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಅಧಿಕೃತವಾಗಿ ಇನ್ನೂ ಅನಾವರಣ ಆಗಬೇಕಿದೆ.

  • ದರ್ಶನ್ ನಿರಪರಾಧಿಯಾಗಿ ಹೊರ ಬರಲಿ, ನ್ಯಾಯದ ಬಗ್ಗೆ ನಂಬಿಕೆಯಿದೆ: ನಟಿ ಯಮುನಾ

    ದರ್ಶನ್ ನಿರಪರಾಧಿಯಾಗಿ ಹೊರ ಬರಲಿ, ನ್ಯಾಯದ ಬಗ್ಗೆ ನಂಬಿಕೆಯಿದೆ: ನಟಿ ಯಮುನಾ

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಪ್ರಕರಣದ ಕುರಿತು ನಟಿ ಯಮುನಾ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ (Darshan) ನಿರಪರಾಧಿಯಾಗಿ ಹೊರಗೆ ಬರಲಿ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ಈ ಘಟನೆ ಅವರಿಂದ ಆಗಿದೆ ಅಂದರೆ ನಂಬೋಕೆ ಆಗುತ್ತಿಲ್ಲ. ನಿರಪರಾಧಿಯಾಗಿ ಹೊರ ಬಂದರೆ ಸಾಕು. ಏನೇ ಇದ್ರೂ ನ್ಯಾಯದ ಕುರಿತು ನಂಬಿಕೆ ಇದೆ ಎಂದು ನಟಿ ಯಮುನಾ ಶ್ರೀನಿಧಿ ಮಾತನಾಡಿದ್ದಾರೆ. ಸದ್ಯ ದರ್ಶನ್ ಅವರು ವಿಚಾರಣೆಯಲ್ಲಿದ್ದಾರೆ ಆರೋಪಿ ಸ್ಥಾನದಲ್ಲಿದ್ದಾರೆ. ಎಲ್ಲರೂ ಅವರವರ ಕೆಲಸ ಮಾಡ್ತಿದ್ದಾರೆ. ನನ್ನ ಅಭಿಪ್ರಾಯ ಇಲ್ಲಿ ಶೂನ್ಯ. ರೇಣುಕಾಸ್ವಾಮಿ ಕೊಲೆ ಯಾರೇ ಮಾಡಿದ್ರೂ ಅದು ತಪ್ಪೇ. ನ್ಯಾಯಾಲಯದಿಂದ ಅಧಿಕೃತ ತೀರ್ಪು ಬಂದ್ಮೇಲೆ ಇವರೇ ಮಾಡಿದ್ದು ಎಂದು ನಂಬುತ್ತೇನೆ. ಎಲ್ಲದಕ್ಕಿಂತ ದೊಡ್ಡದು ನ್ಯಾಯಾಲಯ, ಅದಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಈ ಕೃತ್ಯ ನಡೆಯಬಾರದಿತ್ತು. ಆದರೆ ನಡೆದಿದೆ. ಅದರ ಬಗ್ಗೆ ನೋವಿದೆ ಎಂದು ನಟಿ ಯಮುನಾ (Actress Yamuna Srinidhi) ಮಾತನಾಡಿದ್ದಾರೆ.

    ನಾನು ‘ತಾರಕ್’ (Tarak Film) ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದೇನೆ. ಮಲೇಷಿಯಾದಲ್ಲಿ ಶೂಟಿಂಗ್ ಇತ್ತು. ಸೆಟ್‌ನಲ್ಲಿ ತುಂಬಾ ಚೆನ್ನಾಗಿರುತ್ತಿದ್ದ ವ್ಯಕ್ತಿತ್ವ ದರ್ಶನ್ ಅವರದ್ದು, ತಾನು ದೊಡ್ಡ ಸ್ಟಾರ್ ಅಂತ ಎಂದಿಗೂ ಧಿಮಾಕು ತೋರಿಸಿಲ್ಲ. ಈ ಘಟನೆ ನಡೆಯೋಕೂ ಮುನ್ನ 15 ದಿನದ ಹಿಂದೆ ಮೈಸೂರಿನಲ್ಲಿ ದರ್ಶನ್‌ರನ್ನು ಭೇಟಿಯಾಗಿದ್ದೆ. 7 ವರ್ಷದ ಬಳಿಕವೂ ಗುರುತಿಸಿ ಮಾತನಾಡಿಸಿದರು ಅವರು ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, 2017ರಲ್ಲಿ ದರ್ಶನ್ ನಟನೆಯ ‘ತಾರಕ್’ ಸಿನಿಮಾದಲ್ಲಿ ಯುಮುನಾ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಸೇರಿದಂತೆ ಹಲವು ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸಿದ್ದಾರೆ.