Tag: ಯಮುನಾ

  • BBK 11:ಹೊಸ ಸೀಸನ್, ಹೊಸ ಮನೆಗೆ 17 ಹೊಸ ಕಂಟೆಸ್ಟೆಂಟ್ಸ್- ಯಾರಿಗೆ ಸ್ವರ್ಗ, ನರಕ?

    BBK 11:ಹೊಸ ಸೀಸನ್, ಹೊಸ ಮನೆಗೆ 17 ಹೊಸ ಕಂಟೆಸ್ಟೆಂಟ್ಸ್- ಯಾರಿಗೆ ಸ್ವರ್ಗ, ನರಕ?

    ಟಿವಿ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಶುಭಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಇಂದು ಸಂಜೆ 6 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11) ಗ್ರ‍್ಯಾಂಡ್ ಓಪನಿಂಗ್ ಆರಂಭವಾಗುತ್ತಿದೆ. ಸದ್ಯ ಸುದೀಪ್ (Kichcha Sudeep) ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟಿರುವ ಪ್ರೋಮೋವನ್ನು ವಾಹಿನಿ ರಿವೀಲ್ ಮಾಡಿದೆ.

    ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗುವ ಎಲ್ಲಾ ಕಂಟೆಸ್ಟೆಂಟ್ಸ್‌ಗಳು ಗ್ರ‍್ಯಾಂಡ್ ಫಿನಾಲೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸೀಸನ್, ಹೊಸ ಮನೆ, ಹೊಸ ಕಂಟೆಸ್ಟೆಂಟ್ಸ್, ಹೊಸ ಆಟ ಇನ್ನೇನು ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ:BBK 11: ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್

    ಇದೆಲ್ಲದರ ನಡುವೆ ಸುದೀಪ್ ಸನ್‌ಗ್ಲಾಸ್ ಧರಿಸಿ ‘ಬಿಗ್ ಬಾಸ್’ ವೇದಿಕೆ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳ ಡ್ಯಾನ್ಸ್‌ನ ಸಣ್ಣ ಝಲಕ್ ಶೇರ್ ಮಾಡಿದ್ದಾರೆ. ಮುಖ ತೋರಿಸದೇ ಇದ್ದರೂ ಡ್ಯಾನ್ಸ್ ಸಣ್ಣ ತುಣುಕು ಎಲ್ಲರ ಗಮನ ಸೆಳೆಯುತ್ತಿದೆ.

    ಇನ್ನೂ ನಿನ್ನೆ ಬಿಗ್ ಬಾಸ್ ಶೋಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಅದರ ಪ್ರಸಾರ ಇಂದು (ಸೆ.29) ಸಂಜೆ 6 ಗಂಟೆಗೆ ವಾಹಿನಿಯಲ್ಲಿ ಮೂಡಿ ಬರಲಿದೆ. ಇನ್ನೂ ಸ್ಪರ್ಧಿಗಳ ಪಕ್ಕಾ ಲಿಸ್ಟ್ ಕೂಡ ಸಿಕ್ಕಿದೆ.

    ಮೋಕ್ಷಿತಾ ಪೈ(Mokshitha Pai), ಭವ್ಯಾ ಗೌಡ (Bhavya Gowda), ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶೀಶಿರ್, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಇನ್ನೇನಿದ್ರೂ ಥೀಮ್ ಪ್ರಕಾರ, ಸ್ವರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ ಕಾದುನೋಡಬೇಕಿದೆ.

  • ಭಾರತ್ ಲಾಕ್‍ಡೌನ್ – ನಿರ್ಮಲಳಾದ ಯಮುನಾ

    ಭಾರತ್ ಲಾಕ್‍ಡೌನ್ – ನಿರ್ಮಲಳಾದ ಯಮುನಾ

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್‍ಸಿಆರ್ ಪ್ರದೇಶ ಸಂಪೂರ್ಣ ಸ್ತಬ್ಧವಾಗಿದ್ದು, ಈಗ ಪ್ರಕೃತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ವಾಹನಗಳ ದಟ್ಟಣೆ ಇಳಿಮುಖವಾದ ಬಳಿಕ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಇಳಿಕೆಯಾಗಿ ಶುದ್ಧ ಗಾಳಿಯಾಗಿ ಬದಲಾಗಿತ್ತು.

    ಈಗ ದೆಹಲಿಯ ಹೊರ ವಲಯದಲ್ಲಿರುವ ಕಾರ್ಖಾನೆಗಳು, ಕೈಗಾರಿಕೆಗಳು ಬಂದ್ ಆಗಿರುವ ಕಾರಣ ಯಮುನಾ ನದಿಯೂ ಶುದ್ಧವಾಗುತ್ತಿದೆ. ನದಿಯ ಮಾಲಿನ್ಯ ಪ್ರಮಾಣ ನಿಯಂತ್ರಣವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

    ಕೈಗಾರಿಕೆಗಳಿಂದ ನದಿಗೆ ಬಿಡಲಾಗುತ್ತಿದ್ದ ತಾಜ್ಯದ ಪ್ರಮಾಣ ಇಳಿಕೆಯಾದ ಕಾರಣ ನದಿಯಲ್ಲಿನ ನೀರು ಶುದ್ಧವಾಗಿದೆ. ನೀರಿನಲ್ಲಿನಲ್ಲಿದ್ದ ವಿಷಕಾರಿ ಅಂಶಗಳ ಪ್ರಮಾಣ ಕಡಿಮೆಯಾಗಿದೆ ಎಂದು ಜಲ ಮಂಡಳಿ ಉಪಾಧ್ಯಕ್ಷ ರಾಘವ್ ಚಾಧ್ ತಿಳಿಸಿದ್ದಾರೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆದ್ದರಿಂದ ದೆಹಲಿ ಸಂಪೂರ್ಣ ಬಂದ್ ಆಗಿದ್ದು, ನದಿ ನೀರು ಮತ್ತು ಗಾಳಿಯ ಗುಣಮಟ್ಟದಲ್ಲಿ ಮಾಲಿನ್ಯ ಇಳಿಕೆಯಾಗಿದೆ. ಆದರೆ ಈ ಬೆಳವಣಿಗೆ ತಾತ್ಕಾಲಿಕ, ಯಾಕೆಂದರೆ ಲಾಕ್‍ಡೌನ್ ತೆರವುಗೊಳಿಸದ ಬಳಿಕ ಮತ್ತೆ ಹಳೆ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

    ಆಮ್ ಅದ್ಮಿ ಯಮುನಾ ನದಿ ಸ್ವಚ್ಛಗೊಳಿಸುವ ಭರವಸೆ ನೀಡಿದ್ದರು. ಈಗ ಅದನ್ನು ಮುಂದುವರಿಸಲು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಮತ್ತೊಂದು ಶಾಕ್: ಉಗ್ರರನ್ನು ಛೂ ಬಿಡೋ ಪಾಕಿಗೆ ನದಿ ನೀರು ಕೊಡಲ್ಲ!

    ಮತ್ತೊಂದು ಶಾಕ್: ಉಗ್ರರನ್ನು ಛೂ ಬಿಡೋ ಪಾಕಿಗೆ ನದಿ ನೀರು ಕೊಡಲ್ಲ!

    ನವದೆಹಲಿ: ಈಗಾಗಲೇ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಕಿತ್ತೆಸೆದು ಅಲ್ಲಿಂದ ದೇಶಕ್ಕೆ ರಫ್ತಾಗುತ್ತಿದ್ದ ಉತ್ಪನ್ನಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಏರಿಸಿದ್ದ ಭಾರತ ಈಗ ನದಿ ನೀರಿನ ಹರಿವನ್ನು ನಿಲ್ಲಿಸುವ ಮೂಲಕ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.

    ಹೌದು. ಭಾರತದ ಮೇಲೆ ಉಗ್ರರನ್ನು ಛೂ ಬಿಟ್ಟು ಪರೋಕ್ಷವಾಗಿ ಯುದ್ಧ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕೆಂಬ ಜನಾಗ್ರಹ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ನದಿ ನೀರನ್ನು ಬಿಡದಿರುವ ಕಠಿಣ ತೀರ್ಮಾನವನ್ನು ತೆಗೆದುಕೊಂಡಿದೆ. ಇದನ್ನು ಓದಿ:  ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಭಾರತದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಹರಿಯುತ್ತಿರುವ ಮೂರು ನದಿಗಳ ನೀರನ್ನು ಯಮುನಾ ನದಿಗೆ ತಿರುಗಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದ್ದಾರೆ.

    ಈಗಾಗಲೇ ಯಮುನಾ ನದಿಯ ಪುನಶ್ಚೇತನಕ್ಕೆ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಮೂರು ನದಿಗಳು ಭಾರತಕ್ಕೆ, ಮೂರು ನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಆದರೆ ಭಾರತ ಉದಾರ ಮನಸ್ಸಿನಿಂದ ನಿರಂತರವಾಗಿ ಪಾಕಿಸ್ತಾನಕ್ಕೆ ನೀರನ್ನು ನೀಡುತ್ತಲೇ ಇದೆ. ಆದರೆ ಈಗ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಸಂಗ್ರಹಿಸಿ ನೀರಾವರಿ ಯೋಜನೆಯ ಮೂಲಕ ಜಮ್ಮು ಕಾಶ್ಮೀರ ಮತ್ತು ಪಂಜಾಬ್‍ಗೆ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಪಂಜಾಬಿನ ಪಠಾಣ್‍ಕೋಟ್ ಜಿಲ್ಲೆಯ ಶಾಪಕುರ್ಕಿಂಡಿಯಲ್ಲಿ ರವಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣವಾಗುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ರವಿ ನದಿ ವ್ಯಾಪ್ತಿಯ ರಾಜ್ಯಗಳಿಗೆ ಈ ನೀರನ್ನು ಹರಿಸಲಾಗುತ್ತದೆ. ಈ ಯೋಜನೆಗಳು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲ್ಪಟ್ಟಿವೆ ಎಂದು ಗಡ್ಕರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

    2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಸರ್ಕಾರ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಭಾರತದತ್ತ ತಿರುಗಿಸಲು ಯೋಜನೆ ರೂಪಿಸಿತ್ತು. ಇಂಡಸ್ ನದಿ ನೀರಿನ ಒಪ್ಪಂದದ ಪ್ರಕಾರ ರಾವಿ, ಸಟ್ಲೇಜ್, ಬೀಯಾಸ್ ನದಿ ನೀರಿನ ಬಳಕೆ ಭಾರತಕ್ಕೆ ಮೀಸಲಾಗಿದ್ದರೆ, ಜೇಲಂ, ಚೀನಾಬ್ ಮತ್ತು ಇಂಡಸ್ ನದಿ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100 ರೂ.ಗಾಗಿ ಯಮುನಾ ನದಿಗೆ ಹಾರಿ ಪ್ರಾಣಬಿಟ್ಟರು!

    100 ರೂ.ಗಾಗಿ ಯಮುನಾ ನದಿಗೆ ಹಾರಿ ಪ್ರಾಣಬಿಟ್ಟರು!

    ಚಂಡೀಗಢ್: ಸ್ನೇಹಿತನೊಂದಿಗೆ ಕೇವಲ 100 ರೂ. ಬೆಟ್ ಕಟ್ಟಿ, ಯಮುನಾ ನದಿಗೆ ಹಾರಿ ಯುವಕರಿಬ್ಬರು ಮೃತಪಟ್ಟ ಘಟನೆ ಹರಿಯಾಣದ ಬಲ್ಲಭಗಢ್ (ವಲ್ಲಭಗಢ್) ನಡೆದಿದೆ.

    ಕೃಷ್ಣ ಹಾಗೂ ರಾಹುಲ್ ಮೃತಪಟ್ಟ ಯುವಕರು. ಗುರುವಾರ ಸಂಜೆ ಇಬ್ಬರು ಸ್ನೇಹಿತ ಕಟ್ಟಿದ್ದ ಬೆಟ್‍ನಿಂದಾಗಿ, ರಭಸವಾಗಿ ಹರಿಯುತ್ತಿದ್ದ ಯಮುನಾ ನದಿಗೆ ಹಾರಿದ್ದರು. ನದಿಯ ರಭಸಕ್ಕೆ ಮೇಲೆ ಏಳಲು ಆಗದೆ ಮುಳುಗಿ, ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು.

    ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ, ಎನ್‌ಡಿಆರ್‌ಎಫ್‌ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಎನ್‍ಡಿಆರ್‍ಎಫ್ ತಂಡ ಯುವಕರ ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಗುರುವಾರ ರಾತ್ರಿ ಕಾರ್ಯಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.

    ಶುಕ್ರವಾರ ರಾಹುಲ್ ಮೃತದೇಹವು ಪಲ್ವಲ್ ಎಂಬಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews