Tag: ಯಮಹಾ ಆರ್‌ಡಿ 350

  • ಅಣ್ಣನ ಬೈಕ್ ಓಡಿಸಿ ಭಾವುಕರಾದ ಧ್ರುವ ಸರ್ಜಾ

    ಅಣ್ಣನ ಬೈಕ್ ಓಡಿಸಿ ಭಾವುಕರಾದ ಧ್ರುವ ಸರ್ಜಾ

    – ಹಲವು ವರ್ಷಗಳಿಂದ ಗ್ಯಾರೇಜ್‌ನಲ್ಲಿ ಚಿರು ಬೈಕ್ ರೆಡಿ ಮಾಡಿಸಿ ರೈಡ್
    – ಅಣ್ಣನ ನೆಚ್ಚಿನ ಗಾಡಿ ಮುಟ್ಟಿ ಧ್ರುವ ಭಾವುಕ

    ಧ್ರುವ ಸರ್ಜಾ (Dhruva Sarja) ಹಾಗೂ ಚಿರಂಜೀವಿ ಸರ್ಜಾ (Chiranjeevi Sarja) ಸ್ಟಾರ್‌ ಬ್ರದರ್ಸ್ ಸ್ನೇಹಿತರಂತಿದ್ದ ಸಹೋದರರು. ಆದರೆ 2020 ಜೂನ್ 7 ಕ್ಕೆ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾದರು. ಸದಾ ಸಹೋದರನ ನೆನಪಲ್ಲೇ ಇರುವ ಧ್ರುವ ಸರ್ಜಾ, ಆಗಾಗ ಅಣ್ಣನ ವಸ್ತುಗಳ ಜೊತೆ ಕಾಲ ಕಳೆಯುತ್ತಾ ಅದರ ಜೊತೆ ಭಾವುಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಇದೀಗ ಅಣ್ಣನ ಇಷ್ಟದ ಬೈಕ್‌ನ್ನ ರೆಡಿಮಾಡಿಸಿ ಅದನ್ನ ರಸ್ತೆಗೆ ತಂದು ರೈಡ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ಬಳಿಕ ಏಕಾಂಗಿಯಾಗಿರುವ ಧ್ರುವ ಸರ್ಜಾ ಅಣ್ಣನ ನೆನಪಲ್ಲೇ ಸಮಯ ಕಳೆಯುತ್ತಾರೆ. ಫಾರ್ಮ್‌ಹೌಸ್‌ನಲ್ಲಿ ಚಿರುಗೆ ಸಮಾಧಿಯನ್ನ ಕಟ್ಟಿ ಅಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ ಧ್ರುವ.

    ಚಿರು ಇಷ್ಟದ ಯಮಹಾ ಆರ್‌ಡಿ 350 (Yamaha RD 350) ಬೈಕ್‌ನಲ್ಲಿ ಅಣ್ಣ-ತಮ್ಮ ಜಾಲಿ ರೈಡ್ ಹೋಗುತ್ತಿದ್ದರು. ಕಾಲೇಜಿಗೆ ಹೋಗ್ತಿದ್ರು, ಸಿನಿಮಾ ಥಿಯೇಟರ್‌ಗೂ ಹೋಗುತ್ತಿದ್ದರು. ಮೈಸೂರಿಂದ ಬೆಂಗಳೂರಿಗೂ ಪ್ರಯಾಣ ಮಾಡುತ್ತಿದ್ದರು. ಮುಂದೆ ಚಿರು ಖ್ಯಾತ ನಟನಾಗಿ ಎಷ್ಟೇ ಹಣ ಸಂಪಾದಿಸಿದ್ರೂ ಈ ಬೈಕ್‌ನ್ನ ಕೊಟ್ಟಿರಲಿಲ್ಲ. ಹೀಗೆ ಈ ಬೈಕ್ ಜೊತೆ ನಂಟು ಬೆಳೆಸಿಕೊಂಡಿದ್ದ ಚಿರು ಎಲ್ಲವನ್ನೂ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಅಣ್ಣನ ಇಷ್ಟದ ಈ ಬೈಕ್‌ನ್ನ ಹಾಗೇ ಉಳಿಸಿಕೊಂಡ ಧ್ರುವ ಸರ್ಜಾ ಅದನ್ನ ಮತ್ತೆ ಸಂಪೂರ್ಣ ರೆಡಿ ಮಾಡಿಸಿ ತಂದೆಯನ್ನ ಹಿಂದೆ ಕೂರಿಸಿಕೊಂಡು ಮನೆಯ ಮುಂದಿನ ರಸ್ತೆಯಲ್ಲಿ ರೈಡ್ ಮಾಡಿದ್ದಾರೆ. ಅಗಲಿದ ಮಗನ ಇಷ್ಟದ ಬೈಕ್‌ನ್ನ ತಂದೆಯೂ ಓಡಿಸಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    ಅಣ್ಣನ ಫೇವರಿಟ್ ಗಾಡಿ ಬಗ್ಗೆ ಧ್ರುವ ಭಾವುಕರಾಗಿದ್ದಾರೆ. ಸಹೋದರ ಚಿರು ಕುರಿತ ಪ್ರತಿಯೊಂದು ನೆನಪನ್ನು ತನ್ನೊಟ್ಟಿಗೆ ಧ್ರುವ ಇರಿಸಿಕೊಂಡಿದ್ದಾರೆ.

    ಯಮಹಾ ಆರ್‌ಡಿ 350 ಮಾಡೆಲ್ ಬೈಕ್ ಹೊಂದುವುದು ಚಿರು ಅವರ ಬಾಲ್ಯದ ಕನಸಾಗಿತ್ತು. ತಮ್ಮ ಚಿಕ್ಕಪ್ಪ ಕಿಶೋರ್ (ಅರ್ಜುನ್ ಸರ್ಜಾ ಸಹೋದರ) ಅವರ ಬಳಿಯೂ ಈ ಮಾಡೆಲ್‌ನ ಬೈಕ್ ಇತ್ತು. ಅವರು ಈ ಗಾಡಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅದು ಚಿರು ಅವರನ್ನು ಆಕರ್ಷಿಸಿತ್ತು. ನಂತರ ಅವರ ಚಿಕ್ಕಪ್ಪ ತಮ್ಮ ಗಾಡಿಯನ್ನು ಮಾರಿದ್ದರು. ಇದನ್ನೂ ಓದಿ: ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

    ಆ ಮಾಡೆಲ್ ಗಾಡಿಯನ್ನು ಹೊಂದಬೇಕು ಎಂದು ಚಿರು ಬಾಲ್ಯದಿಂದಲೂ ಆಸೆ ಪಟ್ಟಿದ್ದರು. ಸತತ ಹುಡುಕಾಟದ ಬಳಿಕ ಕೊನೆಗೂ ಬೈಕ್‌ನ್ನು ವ್ಯಕ್ತಿಯೊಬ್ಬರಿಂದ ಖರೀದಿಸಿದ್ದರು.