Tag: ಯದುವೀರ್

  • ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ: ಯದುವೀರ್ ಒಡೆಯರ್

    ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ: ಯದುವೀರ್ ಒಡೆಯರ್

    ಮಂಡ್ಯ: ಅಮ್ಯೂಸ್ಮೆಂಟ್ ಪಾರ್ಕ್ ಮಾಡಲು ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಸ್ಥಳಗಳು ಇವೆ, ಕೆಆರ್‌ಎಸ್‌ನಲ್ಲಿ (KRS) ಅಮ್ಯೂಸ್ಮೆಂಟ್ ಪಾರ್ಕ್ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಸಂಸದ ಯದುವೀರ್ ಒಡೆಯರ್‌ (Yaduveer Wodeyar) ಹೇಳಿದ್ದಾರೆ.

    ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ನಾನು ಅಭಿವೃದ್ಧಿಗೆ ವಿರೋಧಿ ಅಲ್ಲ. ಅಭಿವೃದ್ಧಿಯೂ ಬೇಕು, ಆದರೆ ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ (KRS Amusement park) ಹೆಸರಿನಲ್ಲಿ ಬೇಡ. ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಜಾಗಗಳು ಇವೆ. ಕೆಆರ್‌ಎಸ್ ಹೊರತುಪಡಿಸಿ ಸೂಕ್ತ ಜಾಗದಲ್ಲಿ ರೈತರ ಅಭಿಪ್ರಾಯಗಳನ್ನು ಪರಿಗಣಿಸಿ, ಅಮ್ಯೂಸ್ಮೆಂಟ್ ಪಾರ್ಕ್ ಮಾಡುವುದು ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು

    ಕೆಆರ್‌ಎಸ್ ನಿರ್ಮಾಣವಾಗಿ 100 ವರ್ಷಗಳು ತುಂಬುತ್ತಿವೆ. ಹೀಗಾಗಿ ಡ್ಯಾಂ ಸೇಫ್ಟಿಗೆ ನಾವೆಲ್ಲರೂ ಮೊದಲ ಆದ್ಯತೆ ಕೊಡಬೇಕಿದೆ. ಕೆಆರ್‌ಎಸ್ ಸುತ್ತಮುತ್ತಲು ನೈಸರ್ಗಿಕವಾದ ಪ್ರಕೃತಿ ತುಂಬಾ ಚೆನ್ನಾಗಿ ಇದೆ. ಸದ್ಯ ಈಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಕೆಆರ್‌ಎಸ್‌ಗೆ ಬರುತ್ತಾರೆ. ಅವರಿಗೆ ಮೂಲಭೂತ ಸೌಕರ್ಯ ನೀಡಿದರೆ ಸಾಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂಗೆ ಮಾನಸಿಕ ಸ್ಥಿತಿ ಸರಿ ಇಲ್ಲ: ಅಶೋಕ್

    ಇನ್ನೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧಾರ್ಮಿಕ ಆಚರಣೆಗಳಿಗೆ ನಮ್ಮ ವಿರೋಧ ಇಲ್ಲ. ಆದರೆ 100 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಮಾಡೋದು ಸರಿಯಲ್ಲ. ನಾನು ಅಮ್ಯೂಸ್ಮೆಂಟ್ ಪಾರ್ಕ್ ಸೇರಿ, 100 ಕೋಟಿ ರೂ. ಅಂದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ 100 ಕೋಟಿ ರೂ. ಕಾವೇರಿ ಆರತಿ ಅಂದ್ರೆ ಹೇಗೆ? ನಾವು ಎಲ್ಲಿಯೂ ಸಹ 100 ಕೋಟಿ ರೂ. ವೆಚ್ಚದ ಆರತಿಯನ್ನು ನೋಡಿಲ್ಲ. ಬಿಜೆಪಿ ಬೇಕಿದ್ದರೆ ಕಾವೇರಿ ಆರತಿಯನ್ನ ಫ್ರೀಯಾಗಿ ಮಾಡಿಕೊಡುತ್ತೆ ಎಂದು ಟಕ್ಕರ್ ನೀಡಿದ್ದಾರೆ.

  • ಬಿಜೆಪಿ ಅಭ್ಯರ್ಥಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ- ಯದುವೀರ್ ಬಗ್ಗೆ ಯತೀಂದ್ರ ವ್ಯಂಗ್ಯ

    ಬಿಜೆಪಿ ಅಭ್ಯರ್ಥಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ- ಯದುವೀರ್ ಬಗ್ಗೆ ಯತೀಂದ್ರ ವ್ಯಂಗ್ಯ

    ಮೈಸೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಈಗಾಗಲೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅಂತೆಯೇ ಮೈಸೂರು ಪ್ರಚಾರ ಕಣದಲ್ಲಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿ ಯದುವೀರ್ (Yaduveer Krishnadatta Chamaraja Wadiyar) ವಿರುದ್ಧ ಟೀಕೆ ಮಾಡಿದ್ದಾರೆ.

    ಪ್ರಚಾರ ಭಾಷಣದಲ್ಲಿ ಯತೀಂದ್ರ (Dr. Yathindra Siddaramaiah) ಅವರು, ಬಿಜೆಪಿ ಅಭ್ಯರ್ಥಿ ರಾಜ ಮನೆತನದವರು. ದಂತದ ಗೋಪುರದಲ್ಲಿ ಇದ್ದಂತವರು. ಅವರಿಗೆ ಯಾವತ್ತೂ ಜನರ ಮಧ್ಯೆ ಇದ್ದು ಗೊತ್ತಿಲ್ಲ. ಅವರಿಗೆ ಜನರ ಸಮಸ್ಯೆಗಳು ಏನೂ ಅಂತ ಗೊತ್ತಿಲ್ಲ. ನೀವ್ಯಾರು ಅರಮನೆ ಮುಂದೆ ಹೋಗಿ ನಿಂತುಕೊಳ್ಳಲು ಆಗಲ್ಲ. ಕಾರ್ಯಕರ್ತರೇ ಹೋಗಿ ಭೇಟಿ ಮಾಡೊಕೆ ಆಗಲ್ಲ. ಇನ್ನು ಜನಸಾಮಾನ್ಯರು ಭೇಟಿ ಮಾಡಲು ಸಾಧ್ಯವಾ ಎಂದು ಪ್ರಶ್ನಿಸುವ ಮೂಲಕ ಟೀಕಿಸಿದ್ದಾರೆ.

    ಅಂದು ಬಿಜೆಪಿ ಅಭ್ಯರ್ಥಿ ಯಾರು ಎಂದು ಗೊತ್ತಿಲ್ಲ ಅಂತಾ ಕಾಂಗ್ರೆಸ್ (Congress) ಸಚಿವ ಕೆ.ವೆಂಕಟೇಶ್ ಹೇಳಿದ್ದರು. ಇಂದು ಬಿಜೆಪಿ ಅಭ್ಯರ್ಥಿಗಿಂತಲೂ ನಮ್ಮ ಅಭ್ಯರ್ಥಿ ಎಂ.ಲಕ್ಷ್ಮಣ್ (M. Laxman) ಉತ್ತಮ ಎಂದು ಸಿಎಂ ಪುತ್ರ ಹೇಳಿದರು. ಇದನ್ನೂ ಓದಿ: ಪ್ರಚಾರಕ್ಕೆ ಮೋದಿ ಫೋಟೋ ಬಳಸಲು ಈಶ್ವರಪ್ಪರಿಂದ ಕೋರ್ಟ್‍ಗೆ ಕೆವಿಯಟ್ ಸಲ್ಲಿಕೆ

  • ರಾಜವಂಶದವರು ಜನರ ಕೈಗೆ ಸಿಗ್ತಾರಾ? ಎದೆ ಮುಟ್ಟಿಕೊಂಡು ಸಿಗ್ತಾರೆ ಎನಿಸಿದ್ರೆ ಮತ ಹಾಕಿ: ಪೊನ್ನಣ್ಣ

    ರಾಜವಂಶದವರು ಜನರ ಕೈಗೆ ಸಿಗ್ತಾರಾ? ಎದೆ ಮುಟ್ಟಿಕೊಂಡು ಸಿಗ್ತಾರೆ ಎನಿಸಿದ್ರೆ ಮತ ಹಾಕಿ: ಪೊನ್ನಣ್ಣ

    – ಪ್ರತಾಪ್ ಸಿಂಹ ಹಲವಾರು ಕೆಲಸ ಮಾಡ್ತಿದ್ರು

    ಮಡಿಕೇರಿ: ಜನಸಾಮಾನ್ಯರಿಗೆ ಯದುವೀರ್ (Yaduveer Wadiyar) ಸಿಗ್ತಾರಾ? ರಾಜವಂಶದಿಂದ ಬಂದವರು ಜನರ ಕೈಗೆ ಸಿಗ್ತಾರೆ ಎಂಬ ಪ್ರಶ್ನೆಗೆ ಯಾರದರೂ ತಮ್ಮ ಎದೆ ಮುಟ್ಟಿಕೊಂಡು ಹೌದು ಎಂಬ ಉತ್ತರ ಸಿಕ್ಕರೆ ಮತ ಹಾಕಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ (A.S Ponnanna) ಹೇಳಿದ್ದಾರೆ.

    ಕೊಡಗಿನ ವಿರಾಜಪೇಟೆಯಲ್ಲಿ ಮಾತಾನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಆಯ್ಕೆಯಾಗಿ ಬಂದ ವ್ಯಕ್ತಿ ಪ್ರತಾಪ್ ಸಿಂಹ (Pratap Simha) ಹಲವಾರು ಕೆಲಸ ಮಾಡ್ತಾ ಇದ್ದರು. ಅವರಿಗೆ ಕಾರಣವೇ ನೀಡದೇ ವಿನಾಕಾರಣ ಎತ್ತಿ ದೂರ ಹಾಕಿದ್ದಾರೆ. ಆಸಕ್ತಿ ಇಲ್ಲದೇ ಇದ್ದವರನ್ನು ರಾಜಕೀಯಕ್ಕೆ ಕರೆತರುವ ಕೆಲಸ ಮಾಡಿದ್ದಾರೆ ಎಂದು ಸಂಸದರ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಇಲ್ಲಿ ಎಲ್ಲಾ ಜಾತಿಗೂ ಗೆಲುವು! ಎಲ್ಲಾ ಜಾತಿಗೂ ಸೋಲು!

    ಸ್ಥಳೀಯವಾಗಿ 24/7 ಜನರೊಂದಿಗೆ ಇದ್ದರೂ ಅವರ ನಿರೀಕ್ಷೆಗಳನ್ನು ಮುಟ್ಟಲು ಸಾದ್ಯವಾಗುತ್ತಿಲ್ಲ. ಜನರು ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು ಎಂದು ಬಯಸುತ್ತಾರೆ. ಆ ನಿರೀಕ್ಷೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬುದು ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ. ಈ ಕೆಲಸ ರಾಜಮನೆತನದಿಂದ ಬಂದವರ ಬಳಿ ಆಗುತ್ತಾ? ಈ ರೀತಿ ಜನ ಆಲೋಚಿಸುತ್ತಿದ್ದಾರೆ. ಯಾರು ಜನಸಾಮಾನ್ಯರ ಕೈಗೆ ಸಿಗ್ತಾರೆ, ಯಾರು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ಈಗ ಅವರ ಬಾಯಿಯಲ್ಲೇ ಬರುತ್ತಿದೆ. ಏಸಿ ರೂಮ್‍ನಲ್ಲಿ ಇದ್ದವರು ಪೊಲೀಸ್ ಠಾಣೆಗೆ ಬರುತ್ತಾರಾ? ಜನರಿಗೆ ಸಮಸ್ಯೆಯಾಗುವಾಗ ಅವರು ಬರುತ್ತಾರಾ? ಎಂದು, ಬಿಜೆಪಿ ಅಭ್ಯರ್ಥಿ ಯದುವೀರ್ ಹೆಸರು ಹೇಳದೆ ಟೀಕಿಸಿದ್ದಾರೆ.

    ರಾಷ್ಟ್ರೀಯ ನಾಯಕರು ಅವರನ್ನು ಆಯ್ಕೆ ಮಾಡಿಕೊಂಡಿರುವುದೇ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆಯನ್ನು ಕೇಳಬೇಕು. ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಪ್ರಶ್ನೆ ಇಷ್ಟೇ, ಜನಸಾಮಾನ್ಯರಿಗೆ ಯದುವೀರ್ ಸಿಗ್ತಾರಾ? ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಇದನ್ನು ಕೆಲ ತಿಂಗಳ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ. ಈಗ ರಾಜಕೀಯ ಆಸಕ್ತಿ ಇಲ್ಲದೇ ಇರುವವರನ್ನು ಜನಸಾಮಾನ್ಯರ ಮೇಲೆ ಯಾಕೆ ಹೇರುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ

  • ಈಶ್ವರಪ್ಪ ಮಗನನ್ನು ಎಂಎಲ್‍ಸಿ ಮಾಡುವ ಚರ್ಚೆಯಾಗ್ತಿದೆ: ಬಿಎಸ್‍ವೈ

    ಈಶ್ವರಪ್ಪ ಮಗನನ್ನು ಎಂಎಲ್‍ಸಿ ಮಾಡುವ ಚರ್ಚೆಯಾಗ್ತಿದೆ: ಬಿಎಸ್‍ವೈ

    ಬೆಂಗಳೂರು: ಈಶ್ವರಪ್ಪ ಅವರ ಜೊತೆ ಮಾತಾಡುತ್ತೇನೆ, ಅವರೂ ಸರಿ ಹೋಗುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಶ್ವರಪ್ಪ (K.S Eshwarappa) ಅವರ ಮಗ ಕಾಂತೇಶ್‍ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಮಗನಿಗೆ ಎಂಎಲ್‍ಸಿ ಮಾಡುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧವೂ ಯಶಸ್ವಿಯಾಗಿಲ್ಲ, ಅವರಿಂದಲೂ ಟಿಕೆಟ್ ತಗೊಂಡು ಬರೋದಕ್ಕೆ ಆಗಿಲ್ಲ: ಕರಂದ್ಲಾಜೆ

    ಯದುವೀರ್ ಸ್ಪರ್ಧೆ ವಿಚಾರವಾಗಿ, ಅವರು ಸ್ಪರ್ಧೆಯಿಂದ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. ಅವರು ಕೂಡಾ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಓಡಾಡಲು ಒಪ್ಪಿಕೊಂಡಿದ್ದಾರೆ. ಅವರ ಸ್ಪರ್ಧೆಯಿಂದ ದೊಡ್ಡ ಬಲ ಬಂದಿದೆ ಎಂದಿದ್ದಾರೆ.

    ಇದೇ ವೇಳೆ ಪ್ರತಾಪಸಿಂಹಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪತ್ರಕರ್ತರಲ್ಲಿ, ಯಾವುದೇ ಪ್ರಶ್ನೆ ಕೇಳಬೇಡಿ, ಎಲ್ಲರೂ ಸಮಾಧಾನಗೊಂಡಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

  • ಅಂಜನಾದ್ರಿ ಪರ್ವತಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ದಂಪತಿ ಭೇಟಿ

    ಅಂಜನಾದ್ರಿ ಪರ್ವತಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ದಂಪತಿ ಭೇಟಿ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಮೈಸೂರು ಮಹಾರಾಜರಾದ ಯದುವೀರ್ ಒಡೆಯರ್ ಮತ್ತು ಶ್ರೀಮತಿ ತ್ರಿಶಿಕಾ ಕುಮಾರಿಯವರು ಭೇಟಿ ನೀಡಿದ್ದರು.

    ಹನುಮ ಹುಟ್ಟಿದ ಸ್ಥಳ ಎಂದೇ ಹೆಸರುವಾಸಿಯಾಗಿರುವ ಅಂಜನಾದ್ರಿ ಪರ್ವತಕ್ಕೆ ದಂಪತಿ ಸಮೇತ ಆಗಮಿಸಿದ ಯದುವೀರ್ ಅವರು ಹನುಮನಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯದುವೀರ್ ಕುಟುಂಬ ಹಂಪಿ ಪ್ರವಾಸಕ್ಕೆ ಆಗಮಿಸಿದ ಹಿನ್ನಲೆ ಅಂಜನಾದ್ರಿ ಬೆಟ್ಟದ ೫೭೫ ಮೆಟ್ಟಿಲೇರಿ ಹನುಮನ ದರ್ಶನ ಪಡೆದರು.  ಇದನ್ನೂ ಓದಿ: ಡಿಸಿ ಕಚೇರಿ ಆವರಣದಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹನುಮ ಹುಟ್ಟಿದ ಸ್ಥಳಕ್ಕೆ ಎರಡನೇ ಬಾರಿ ಬರುತ್ತಿದ್ದೇನೆ. ಎಲ್ಲರಿಗೂ ಒಳ್ಳೆದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಇದೊಂದು ಅದ್ಭುತವಾದಂತಹ ಜಾಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ SSLC ಸಪ್ಲಿಮೆಂಟರಿ ಎಕ್ಸಾಂ – ಆಗಸ್ಟ್ ಮೊದಲ ವಾರದಲ್ಲಿ ರಿಸಲ್ಟ್

    Live Tv

  • ಪ್ರಧಾನಿಯೊಂದಿಗೆ ಭಾಗವಹಿಸಿದ್ದು ಸಂತಸ ತರಿಸಿದೆ: ಯದುವೀರ್

    ಪ್ರಧಾನಿಯೊಂದಿಗೆ ಭಾಗವಹಿಸಿದ್ದು ಸಂತಸ ತರಿಸಿದೆ: ಯದುವೀರ್

    ಮೈಸೂರು: ನಮ್ಮ ದೇಶದ ಪ್ರತಿಯೊಬ್ಬರ ಪ್ರತಿನಿಧಿಯಾಗಿರುವಂತಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅರಮನೆ ಆವರಣದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ಬಹಳ ಸಂತೋಷವಾಯಿತು ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಮೈಸೂರು ಆಸ್ಥಾನದ ಒಡೆಯರ ಕಾಲದಿಂದಲೂ ಯೋಗಾಭ್ಯಾಸ ನಡೆಯುತ್ತಿದೆ. ಮೈಸೂರು ಆಸ್ಥಾನದಲ್ಲಿ ಯೋಗ ಮುಂದುವರೆಯುವುದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣ ರಾಜ ಒಡೆಯರ್ ನೀಡುತ್ತಿದ್ದರು. ಈ ಕಾರ್ಯಕ್ರಮ ಆ ಪರಂಪರೆಯ ಪ್ರತಿಬಿಂಬ ಎಂದೇ ಹೇಳಬಹುದು. ವಿಶೇಷವೆಂದರೆ 2 ವರ್ಷಗಳ ನಂತರ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸಂತೋಷಕರವಾದ ವಿಚಾರವಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ

    ದಿನನಿತ್ಯ ಯೋಗಾಭ್ಯಾಸ ಮಾಡಿ, ಯೋಗಾಭ್ಯಾಸ ಶಾರೀಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಕೂಡ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಯೋಗಾಭ್ಯಾಸ ಮುಂದುವರೆದರೆ ಇಡೀ ಸಮಾಜವೇ ಆರೋಗ್ಯಕರವಾಗಿರುತ್ತದೆ. ಜೀವನದ ಪ್ರಮುಖ ಅಂಶಗಳಲ್ಲಿ ಯೋಗಾಭ್ಯಾಸ ಕೂಡ ಒಂದಾಗಿದೆ ಎಂದು ಯುವಕರಿಗೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ:  ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದ ಪೂಜೆ ಸಲ್ಲಿಸಿದ ಪ್ರಧಾನಿ – ಬೆಟ್ಟದಲ್ಲಿ ಹಬ್ಬದ ಸಡಗರ

    Live Tv

  • ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್

    ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್

    ಮೈಸೂರು: ನಾಡಿನೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಮೈಸೂರು ಅರಮನೆಯಲ್ಲಿ ರಾಜ ಪರಂಪರೆಯ ಆಯುಧಗಳಿಗೆ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ.

    ಈಗಾಗಲೇ ಬೆಳಗ್ಗೆ 5.30ರಿಂದ ಅರಮನೆಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿದ್ದು, ಬೆಳಗ್ಗೆ 7.45ಕ್ಕೆ ರಾಜರ ಆಯುಧಗಳನ್ನು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನಿಸಲಾಗಿತ್ತು. ಆನೆ, ಕುದುರೆ, ಹಸು, ಪಟ್ಟದ ಕತ್ತಿ, ಪಲ್ಲಕ್ಕಿ ಸೇರಿ ಎಲ್ಲಾ ರೀತಿಯ ಆಯುಧಗಳಿಗೆ ಪೂಜೆ ಮಾಡಲಾಯಿತು. ಇದೇ ವೇಳೆ ಮಹಿಳೆಯರ ಜೊತೆಗೆ ರಾಜಪರಿವಾರದವರು ಸೇರಿ ಪೂರ್ಣಕುಂಭವನ್ನು ಹೊತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:  ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ

    ಕೋಡಿ ಸೋಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಅರಮನೆ ಕಲ್ಯಾಣಮಂಟಪಕ್ಕೆ ಆಗಮನಿಸಿ, ಬೆಳಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ ಈಟಿ ಸೇರಿ ರಾಜಮನೆತನದ ಆಯುಧಗಳಿಗೆ ಯದುವೀರ ಕೃಷದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ ರಾಜಪರಿವಾರದ ಆನೆ, ಕುದುರೆ, ಹಸು, ಪಲ್ಲಕ್ಕಿ, ಕಾರುಗಳಿಗೂ ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ:  ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    ಮುಂಜಾನೆಯಿಂದ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ನೆರವೇರಿಸುತ್ತಿದ್ದು, ಖಾಸ್ ಆಯುಧಗಳ ಪೂಜೆಗೆ ಸಿದ್ದತೆ ನಡೆಸಲಾಗುತ್ತಿದೆ. ಅರಮನೆ ಆನೆ, ಬಾಗಿಲ ಮುಂದೆ ಪಲ್ಲಕ್ಕಿ, ಪಟ್ಟದ ಹಸು, ಪಟ್ಟದ ಒಂಟೆಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಅದರಲ್ಲಿಯೂ ಪಲ್ಲಕ್ಕಿಯಲ್ಲಿ ಯುದ್ದ ಸಲಕರಣೆಗಳನ್ನು ಹೊತ್ತು ತರಲಾಗಿದೆ. ಅರಮನೆ ಮುಂಭಾಗ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ ಅರಮನೆಯಲ್ಲಿ ಯದುವೀರ್ ರಿಂದ ಆಯುಧಗಳಿಗೆ ಪೂಜೆ ನೆರವೇರಿಸಲಿದ್ದಾರೆ. ಕೊರೊನಾ ಕಾರಣದಿಂದಾಗಿಅರಮನೆ ಆಚರಣೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮಾತ್ರವಲ್ಲದೇ ಬಂಧುಗಳು ಹಾಗೂ ನೆಂಟರಿಗೂ ಪ್ರವೇಷ ನಿರ್ಬಂಧ ಹೇರಲಾಗಿದೆ.

  • ರಥ ಸಪ್ತಮಿ – ಕೋಟೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಯದುವೀರ್

    ರಥ ಸಪ್ತಮಿ – ಕೋಟೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಯದುವೀರ್

    ಮೈಸೂರು: ಇಂದು ರಥ ಸಪ್ತಮಿ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಉತ್ಸವ ಮೂರ್ತಿಗೆ ರಾಜವಂಶಸ್ಥ ಯದುವೀರ್ ವಿಶೇಷ ಪೂಜೆ ಸಲ್ಲಿಸಿದರು.

    ಕೋಟೆ ಆಂಜನೇಯ ದೇವಾಲಯ ಮುಂಭಾಗ ಮೈಸೂರು ಯೋಗ ಒಕ್ಕೂಟ ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ನೂರಾರು ಯೋಗ ಪಟುಗಳು ಭಾಗವಹಿಸಿ 108 ಸೂರ್ಯ ವಂದನೆ ಮಾಡಿದರು.

    ಈ ಸಂದರ್ಭದಲ್ಲಿ ಭಗವಾನ್ ಸೂರ್ಯ ನಾರಾಯಣ ಭಾವ ಚಿತ್ರವನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

  • ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ್ ಬೆಂಬಲ

    ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ್ ಬೆಂಬಲ

    ಮಂಡ್ಯ: ರೈತರ ಪಾಲಿಗೆ ಜೀವ ನಾಡಿಯಾಗಿದ್ದ ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಯದುವೀರ್ ಫೇಸ್‍ಬುಕ್‍ನಲ್ಲಿ, ರೈತರು ಬೆಳೆದಿರುವ ಕಬ್ಬನ್ನು ಮಾರಾಟ ಮಾಡಲು ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ ಎಂದು ಕಾರ್ಖಾನೆ ಖಾಸಗೀಕರಣಕ್ಕೆ ಬೆಂಬಲ ನೀಡಿ ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಮಂಡ್ಯ ಜಿಲ್ಲೆಯು ಕಬ್ಬುಬೆಳೆ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಸಮಾನವಾಗಿದೆ. ಮೈಶುಗರ್ ಕಾರ್ಖಾನೆಯ ಪರಂಪರೆಯ ದೃಷ್ಟಿಯಿಂದ ಖಾಸಗೀಕರಣಕ್ಕೆ ನಿರಂತರ ಪ್ರತಿರೋಧ ವ್ಯಕ್ತವಾಗುತ್ತಿರುವುದು ಅರ್ಥವಾಗುವಂತಹದ್ದಾಗಿದೆ. ಆದರೆ ಪ್ರತಿರೋಧವು ಕಳವಳಕ್ಕೆ ಕಾರಣವಾಗಿದೆ. ಏಕೆಂದರೆ ಮಂಡ್ಯ ಜಿಲ್ಲೆಯ ರೈತರು ಬೆಳೆದಿರುವ ಕಬ್ಬನ್ನು ಮಾರಾಟ ಮಾಡಲು ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ ಎಂದಿದ್ದಾರೆ.

    “ಕಾರ್ಖಾನೆಯನ್ನು ನಡೆಸುವಲ್ಲಿ ಸರ್ಕಾರದ ವೈಫಲ್ಯ ಮತ್ತು ಸಂಪೂರ್ಣ ಖಾಸಗೀಕರಣದ ವಿರುದ್ಧ ಸಾರ್ವಜನಿಕರ ಭಾವನೆಯ ನಡುವೆ ನಮಗೆ ಇರುವ ಒಂದು ಆಯ್ಕೆಯೆಂದರೆ, ಕಾರ್ಯಾಚರಣೆ ಮತ್ತು ನಿರ್ವಹಣೆ (operations and maintenance) ವ್ಯವಸ್ಥೆಯಡಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ನಡೆಸುವುದು. ಈ ಮಧ್ಯಮ ವ್ಯವಸ್ಥೆಯು ಖಾಸಗೀಕರಣದ ವಿರುದ್ಧ ಸಾರ್ವಜನಿಕರಿಗಿರುವ ಭಾವನೆಯನ್ನು ತೃಪ್ತಿಪಡಿಸುವುದಲ್ಲದೆ ಕಾರ್ಖಾನೆಯು ಮತ್ತೊಮ್ಮೆ ಸಮೃದ್ಧಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಯಾವುದೇ ಸಂಕಷ್ಟಗಳನ್ನು ಎದುರಿಸಬೇಕಾಗಿರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

    ಮೈಶುಗರ್ ಕಾರ್ಖಾನೆಯನ್ನು ಮೈಸೂರಿನ ಮಹಾರಾಜರು ಸ್ಥಾಪಿಸಿರುವ ಸಕ್ಕರೆ ಕಾರ್ಖಾನೆಯಾಗಿದೆ. ಹೀಗಾಗಿ ರೈತರ ಕಷ್ಟಕ್ಕೆ ಯದುವೀರ್ ಸ್ಪಂದಿಸಿದ್ದು, ಕಾರ್ಖಾನೆ ಖಾಸಗೀಕರಣಕ್ಕೆ ಬೆಂಬಲ ಸೂಚಿಸಿದ್ದಾರೆ.

  • ಎನ್‍ಕೌಂಟರ್ ಸಮಾಧಾನ ತಂದಿದೆ- ಪೊಲೀಸರ ಬೆಂಬಲಕ್ಕೆ ನಿಂತ ಯದುವೀರ್

    ಎನ್‍ಕೌಂಟರ್ ಸಮಾಧಾನ ತಂದಿದೆ- ಪೊಲೀಸರ ಬೆಂಬಲಕ್ಕೆ ನಿಂತ ಯದುವೀರ್

    ಮೈಸೂರು: ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ನಡೆಸಿದ ಪೊಲೀಸರನ್ನು ಟೀಕಿಸುವುದು ಸರಿಯಲ್ಲ ಎಂದು ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

    ಅತ್ಯಾಚಾರಿಗಳನ್ನು ಹೈದರಾಬಾದ್ ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದ ಬಗ್ಗೆ ಬಹುತೇಕರು ಹರ್ಷ ವ್ಯಕ್ತಪಡಿಸುತ್ತಿದ್ದರೆ ಕೆಲವರು ಈ ಎನ್‍ಕೌಂಟರ್ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ವಿಚಾರದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅತ್ಯಾಚಾರದ ಪ್ರಕರಣಗಳು ಯಾರಿಗೂ ಸಂತೋಷ ತರಲ್ಲ. ಈಗ ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ನಡೆದಿರುವುದು ಸಮಾಧಾನ ತಂದಿದೆ ಎಂದು ಹೇಳುವ ಮೂಲಕ ಪೊಲೀಸರ ಪರ ಧ್ವನಿ ಎತ್ತಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

    ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮರುಸೃಷ್ಟಿ ವೇಳೆ ಈ ಘಟನೆ ನಡೆದಿದೆ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾದಾಗ ಪೊಲೀಸರು ಸಹಜವಾಗಿಯೇ ಆ ಸಂದರ್ಭದಲ್ಲಿ ಅವರು ಎನ್‍ಕೌಂಟರ್ ಮಾಡಿದ್ದಾರೆ. ಇದರಲ್ಲಿ ತಪ್ಪು ಹುಡುಕುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವು ಬಗೆಹರಿಯಬೇಕು ಎಂಬ ಆಸೆ ಇದೆ. ಈಗ ಆಗಿರುವ ಎನ್‍ಕೌಂಟರ್ ಕೂಡ ಕಾನೂನು ಪ್ರಕಾರ ಆಗಿದ್ದರೆ ಅದರಲ್ಲಿ ತಪ್ಪಿಲ್ಲ. ಅತ್ಯಾಚಾರದಂಥ ಪ್ರಕರಣಗಳಲ್ಲಿ ಕಾನೂನು ಬದಲಾವಣೆಗಿಂತ ತ್ವರಿತವಾಗಿ ಕಾನೂನಿನ ಮೂಲಕ ಶಿಕ್ಷೆಯಾಗಬೇಕು. ಇದು ಎಲ್ಲ ಜನರ ಭಾವನೆ ಎಂದು ಹೇಳಿದರು. ಇದನ್ನೂ ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ

    ಎನ್‍ಕೌಂಟರ್ ಮಾಡಿರುವುದು ತಪ್ಪು ಎಂದವರ ವಿರುದ್ಧ ಮೈಸೂರಿನ ಅಗ್ರಹಾರದ ವೃತ್ತದಲ್ಲಿ ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಮನೇಕಾ ಗಾಂಧಿ, ಕಾರ್ತಿ ಚಿದಂಬರಂ, ಕೇಜ್ರಿವಾಲ್ ವಿರುದ್ಧ ಪ್ರತಿಭಟಿಸಿ ಧಿಕ್ಕಾರ ಕೂಗಿದರು. ಈ ಮೂಲಕ ಹೈದರಾಬಾದ್ ಪೊಲೀಸರ ಕ್ರಮ ಸರಿಯಾಗಿಯೇ ಇದೆ ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್