Tag: ಯಥರ್ವ್ ಯಶ್

  • ಅಪ್ಪನ ಸ್ಟೈಲ್ ಕಾಪಿ ಮಾಡಿದ ಮಗ: ಜೂನಿಯರ್ ಯಶ್ ಫೋಟೋ ವೈರಲ್

    ಅಪ್ಪನ ಸ್ಟೈಲ್ ಕಾಪಿ ಮಾಡಿದ ಮಗ: ಜೂನಿಯರ್ ಯಶ್ ಫೋಟೋ ವೈರಲ್

    ನ್ಯಾಷನಲ್ ಸ್ಟಾರ್ ಯಶ್‌ಗೆ ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ `ಕೆಜಿಎಫ್ 2′ ಸಿನಿಮಾ ಬಿಡುಗಡೆಯಾದ ನಂತರ ಯಶ್ ಹವಾ ಹೆಚ್ಚಾಗಿದೆ. ಯಶ್‌ನಂತೆ ಅವರ ಮಕ್ಕಳು ಐರಾ ಹಾಗೂ ಯಥರ್ವ್ನನ್ನು ಫ್ಯಾನ್ಸ್ ಇಷ್ಟಪಡುತ್ತಾರೆ. ಸದ್ಯ ರಾಧಿಕಾ ಶೇರ್‌ ಮಾಡಿರುವ ಮಗನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ಅಪ್ಪನಂತೆ ಮಗ ಎನ್ನುತ್ತಿದ್ದಾರೆ.

    ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಒಂದು ಸ್ಟೋರಿ ಹಾಕಿಕೊಂಡಿದ್ದಾರೆ. ಅದರಲ್ಲಿ ಯಥರ್ವ್ ಬೀಚ್‌ನ ದಡದಲ್ಲಿ ಕಡಲಿಗೆ ಮುಖ ಮಾಡಿ ನಿಂತಿದ್ದು, ಅದಕ್ಕೆ ರಾಧಿಕಾ ಎಲ್ಲೋ ನೋಡಿದ ಹಾಗಿದೆ ಅಲ್ಲವಾ ಎಂದು ಕ್ಯಾಪ್ಷನ್ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಾ ವಿಶೇಷತೆ ಎಂದರೆ, ಯಥರ್ವ್ ಯಶ್ ರೀತಿಯಲ್ಲಿ ಪೋಸ್ ಕೊಟ್ಟಿರೋದು ಈ ಫೋಟೋ ನೋಡಿದರೆ ನಮಗೆ ಕೆಜಿಎಫ್ ಸಿನಿಮಾ ನೆನಪಾಗುತ್ತದೆ. `ಕೆಜಿಎಫ್’ ಅಭಿಮಾನಿಗಳಿಗೆ ತಕ್ಷಣ ರಾಕಿಭಾಯ್ ಪೋಸ್ ಕಣ್ಣು ಮುಂದೆ ಬರುತ್ತದೆ. ಇದನ್ನೂ ಓದಿ: ವೈಟ್ ಡ್ರೆಸ್‌ನಲ್ಲಿ ಮಿಂಚಿದ ಬಹುಭಾಷಾ ನಟಿ ಪ್ರಿಯಾಮಣಿ

    ರಾಕಿಭಾಯ್ ಕೂಡ ಕೆಜಿಎಫ್ ಸಿನಿಮಾದಲ್ಲಿ ಕಡಲ ತೀರದಲ್ಲಿ ನಿಂತಿರುವ ಪೋಸ್ ಇದೆ. ಸಿನಿಮಾದಲ್ಲಿ ಬಾಲ್ಯದಲ್ಲಿ ಒಮ್ಮೆ ನಂತರ ಮೊದಲ ಪಾರ್ಟ್ ಹಾಗೂ ಚಾಪ್ಟರ್ 2ನಲ್ಲಿ ಸಹ ಇದೇ ಪೋಸ್ ಇದೆ. ತಂದೆಯಂತೆ ಮಗ ಯಥರ್ವ್ ಪೋಸ್ ಕೊಟ್ಟಿದ್ದಾನೆ. ಅವರಿಗೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ದಿನದಿಂದ ದಿನಕ್ಕೆ ಅವರ ಹೆಸರು ಬೆಳೆಯುತ್ತಲೇ ಇದೆ. ಇನ್ನು `ಕೆಜಿಎಫ್ 2′ ಸಕ್ಸಸ್ ನಂತರ ಯಶ್ ಮಕ್ಕಳು ಹಾಗೂ ಕುಟುಂಬ ಅಂತ ಫುಲ್ ಬ್ಯುಸಿ ಇದ್ದಾರೆ.

    Live Tv

  • ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

    ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ತನ್ನ ಮಗನಿಗೆ ಬರೋಬ್ಬರಿ 10 ತಿಂಗಳ ಬಳಿಕ ಇದೀಗ ನಾಮಕರಣ ಮಾಡಿದ್ದಾರೆ.

    ಯಶ್ ಮತ್ತು ರಾಧಿಕಾ ತಮ್ಮ ಮುದ್ದು ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಂಭ್ರಮದ ವಿಡಿಯೋವನ್ನು ಯಶ್ ಮತ್ತು ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾಮಕರಣದ ಕಾರ್ಯಕ್ರಮವನ್ನು ಯಶ್ ಸರಳವಾಗಿ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಎರಡು ಕುಟುಂಬದರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

    ವಿಡಿಯೋ ಕೊನೆಯಲ್ಲಿ ಯಶ್ ಮಗಳು ಐರಾ ಸಹೋದರನ ಹೆಸರನ್ನು ಹೇಳಿದ್ದಾಳೆ. ಈ ವಿಡಿಯೋಗೆ ಯಶ್ “ನಮ್ಮನ್ನ ಸಂಪೂರ್ಣಗೊಳಿಸಿದವನು. ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ನಟಿ ರಾಧಿಕಾ ಪಂಡಿತ್ ಕೊನೆಗೂ ಜೂನಿಯರ್‌ಗೆ ಹೆಸರು ಫಿಕ್ಸ್ ಆಗಿದ್ದು, ಶೀಘ್ರವೇ ನಾಮಕರಣ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದರು.

    ಕಳೆದ ವರ್ಷದ ಅಕ್ಟೋಬರ್ 30ರಂದು ರಾಧಿಕಾ ಪಂಡಿತ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಶ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 30 ರಂದು ಯಶ್ ಮತ್ತು ರಾಧಿಕಾ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದರು.