Tag: ಯಥರ್ವ

  • ಮಕ್ಕಳ ಸೈನ್ಯದೊಂದಿಗೆ ರಾಧಿಕಾ ಪಂಡಿತ್: ಗೋವಾದಲ್ಲಿ ಯಶ್ ಮಕ್ಕಳು

    ಮಕ್ಕಳ ಸೈನ್ಯದೊಂದಿಗೆ ರಾಧಿಕಾ ಪಂಡಿತ್: ಗೋವಾದಲ್ಲಿ ಯಶ್ ಮಕ್ಕಳು

    ರಾಧಿಕಾ ಪಂಡಿತ್ ನೇತೃತ್ವದಲ್ಲಿ ಮಕ್ಕಳ ದರ್ಬಾರ್ ನಡೆದಿದೆ. ತಮ್ಮ ಮಕ್ಕಳಾದ ಆರ್ಯಾ ಮತ್ತು ಯಥರ್ವ ಜೊತೆ ಇತರ ಮಕ್ಕಳೊಂದಿಗೆ ರಾಧಿಕಾ ಸಮಯ ಕಳೆದಿದ್ದಾರೆ. ಆ ಫೋಟೋಗಳನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿ, ಮಕ್ಕಳ ದರ್ಬಾರ್, ಮಕ್ಕಳ ಪಾರ್ಟಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಮಕ್ಕಳ ಜೊತೆ ಆಟವಾಡುತ್ತಿರುವ ಇತರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಮಕ್ಕಳ ಜೊತೆ ಅವರು ಗೋವಾದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ಆ ಸಮಯದ ಕ್ಷಣವನ್ನು ಅವರು ಫೋಟೋಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ.  ಆ ಸಂಭ್ರಮವನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಬೀಚ್ ದಂಡೆಯಲ್ಲಿ ಆಟ ಆಡುತ್ತಿರುವುದನ್ನು ಮತ್ತು ಜೋಕಾಲಿಯಲ್ಲಿ ಜೀಕುತ್ತಿರುವುದನ್ನು ಅವರು ಪೋಸ್ಟ್ ಮಾಡಿದ್ದಾರೆ. ಮಕ್ಕಳ ಪಾರ್ಟಿ ಹೇಗಿತ್ತು ಎನ್ನುವುದನ್ನು ಅವರು ಫೋಟೋಗಳ ಮೂಲಕವೇ ವಿವರಿಸುತ್ತಾ ಹೋಗಿದ್ದಾರೆ. ಇದನ್ನೂ ಓದಿ : ಮುಂದಿನ ಚಿತ್ರಕ್ಕಾಗಿ ತೂಕ ಇಳಿಸ್ಕೊತಿರೋ ಯಶ್- ಗಡ್ಡಕ್ಕೂ ಬೀಳಲಿದೆಯಾ ಕತ್ತರಿ?

    ಮೊನ್ನೆಯಷ್ಟೇ ಪತಿ ಯಶ್ ಅವರ ಜೊತೆ ಮಕ್ಕಳನ್ನೂ ಕರೆದುಕೊಂಡು ಹೋಗಿ ಕನಕಪುರ ಸಮೀಪದ ಮಿನಿ ಪಕ್ಷಿಗಳ ಧಾಮದಲ್ಲಿ ಕೆಲ ಕ್ಷಣಗಳನ್ನು ರಾಧಿಕಾ ಕಳೆದಿದ್ದರು. ಗಿಣಿಗಳ ಜೊತೆ ಆಟವಾಡುವ ಫೋಟೋಗಳನ್ನು ಅವರು ಶೇರ್ ಮಾಡಿದ್ದರು. ಇದೀಗ ಗೋವಾದಲ್ಲಿ ಮಕ್ಕಳೊಂದಿಗೆ ಕಳೆದ ಕ್ಷಣಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಮಕ್ಕಳ ಪಾಲಕರು ಸಮಯವನ್ನು ಹೇಗೆ ಕೊಡಬೇಕು ಎಂದು ವಿವರಿಸಿದ್ದಾರೆ.

    Live Tv

  • ಜೂ.ರಾಖಿಭಾಯ್ ಮೊದಲ ಹುಟ್ಟುಹಬ್ಬ- ರಾಧಿಕಾ ಭಾವನಾತ್ಮಕ ಶುಭಾಶಯ

    ಜೂ.ರಾಖಿಭಾಯ್ ಮೊದಲ ಹುಟ್ಟುಹಬ್ಬ- ರಾಧಿಕಾ ಭಾವನಾತ್ಮಕ ಶುಭಾಶಯ

    ಬೆಂಗಳೂರು: ಜೂನಿಯರ್ ರಾಖಿಭಾಯ್ ಯಥರ್ವ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರವಾಗಿದ್ದು, ನಟಿ ರಾಧಿಕಾ ಪಂಡಿತ್ ವಿಶೇಷವಾಗಿ ಹಾಗೂ ಭಾವನಾತ್ಮಕವಾಗಿ ಶುಭಾಶಯ ತಿಳಿಸಿದ್ದಾರೆ.

    ಕಳೆದ ವರ್ಷ ಅಕ್ಟೋಬರ್ 30ರಂದು ಯಥರ್ವ್ ಜನಿಸಿದ್ದು, ಯಶ್ ದಂಪತಿಗಳಿಗೆ ಇದೊಂದು ಅತ್ಯಂತ ಸಂತೋಷದ ಕ್ಷಣವಾಗಿತ್ತು. ಇದಾದ ಬೆನ್ನಲ್ಲೇ ಯಥರ್ವ್ ನಾಮಕರಣ ಸಮಾರಂಭವನ್ನು ಸಹ ರಾಖಿಭಾಯ್ ದಂಪತಿ ಸರಳ ಹಾಗೂ ಸುಂದರವಾಗಿ ಮಾಡಿದ್ದರು. ಈ ವೇಳೆ ಎರಡೂ ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದ್ದರು. ಇದೀಗ ಯಥರ್ವ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾನೆ.

    ಯಶ್ ಬಿಡುವಿದ್ದಾಗಲೆಲ್ಲ ಐರಾ ಹಾಗೂ ಯಥರ್ವ್ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಇತ್ತೀಚೆಗೆ ಮಗ ಆಟವಾಡುತ್ತಿದ್ದ ವೀಡಿಯೋ ಹಾಗೂ ‘ಜಾನಿ ಜಾನಿ ಎಸ್ ಪಪ್ಪಾ’ ಹೇಳಿಕೊಟ್ಟಿದ್ದ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಮಗಳು ಐಸ್ ಕ್ರೀಮ್ ವಿಚಾರದಲ್ಲಿ ಚಮಕ್ ಕೊಟ್ಟಿದ್ದನ್ನು ಸಹ ರಾಖಿ ಭಾಯ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದರು.

     

    View this post on Instagram

     

    Lockdown diaries : One Johnny and Another (a rather impatient one) ???? #radhikapandit #nimmaRP

    A post shared by Radhika Pandit (@iamradhikapandit) on

    ಇದೀಗ ಮಗನಿಗೆ ಭಾವನಾತ್ಮಕವಾಗಿ ಶುಭಾಶಯ ತಿಳಿಸಿರುವ ರಾಧಿಕಾ ಪಂಡಿತ್, ಯಥರ್ವ್ ಹುಟ್ಟಿದ ಕ್ಷಣ, ತಂದೆ ಯಶ್ ನೋಡಿ ಖುಷಿಪಟ್ಟಿದ್ದು, ಆಟವಾಡುತ್ತಿದ್ದಿದ್ದು, ದಂಪತಿ ಇಬ್ಬರೂ ಮುದ್ದಾಡುತ್ತಿರುವುದು, ಐರಾ, ಯಥರ್ವ್ ಇಬ್ಬರನ್ನೂ ಎತ್ತಿಕೊಂಡಿರುವ ಫೋಟೋ ಹಾಗೂ ಈ ಯಥರ್ವ್ ಫೋಟೋಗಳನ್ನು ಸೇರಿಸಿ ಕೊಲಾಜ್ ಮಾಡಿರುವ ಫೋಟೋವನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

    ಭಾವನಾತ್ಮಕ ಸಾಲುಗಳನ್ನು ಬರೆದಿರುವ ರಾಧಿಕಾ ಪಂಡಿತ್, ಯಾವಾಗಲೂ ಶಾಶ್ವತವಾಗಿ ನನ್ನ ಬೇಬಿ ಬಾಯ್ ಆಗಿರುವ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ಲವ್ ಯೂ ಎಂದು ಬರೆದುಕೊಂಡಿದ್ದಾರೆ. ಸ್ಯಾಂಡಲ್‍ವುಡ್ ಸಿಂಡ್ರೆಲಾರ ಈ ಪೋಸ್ಟ್‍ಗೆ ಅವರ ಅಭಿಮಾನಿಗಳು ಸಹ ಕಮೆಂಟ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ.

     

    View this post on Instagram

     

    Happy birthday to the one who will always, forever be my baby boy. Love u ❤

    A post shared by Radhika Pandit (@iamradhikapandit) on

    ಕಳೆದ ವರ್ಷದ ಅಕ್ಟೋಬರ್ 30ರಂದು ರಾಧಿಕಾ ಪಂಡಿತ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಶ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 30 ರಂದು ಯಶ್ ಮತ್ತು ರಾಧಿಕಾ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದರು.