ರಾಮನಗರ: ಸಿದ್ದರಾಮಯ್ಯ (Siddaramaiah) ಐದು ವರ್ಷ ಸಿಎಂ ಆಗಲು ಹೋರಾಟ ಮಾಡಬೇಕೆಂಬ ಯತೀಂದ್ರ (Yatindra) ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಯಾಕೆ ಚರ್ಚೆ ಮಾಡಿದರು ಅಂತ ಅವರನ್ನೇ ಕೇಳಿ. ಅವರು ರೀತಿ ಹೇಳುವ ಅವಶ್ಯಕತೆ ಇಲ್ಲ ಎಂದರು.
ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದ (Pakistan) ರೀತಿ ದಿವಾಳಿಯಾಗುತ್ತದೆಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ದೇಶ ಬಲಿಷ್ಠವಾಗಿದೆ. ಈ ದೇಶಕ್ಕೆ ಭದ್ರ ಬುನಾದಿ ಹಾಕಿರುವುದು ಕಾಂಗ್ರೆಸ್. ನೆಹರು ನಮಗೆ ಗಟ್ಟಿ ತಳಪಾಯ ಕೊಟ್ಟಿದ್ದಾರೆ. ಆದಾದ ಬಳಿಕ ಬಂದ ಪ್ರಧಾನಿಗಳು ಅವರ ಶಕ್ತಿಅನುಸಾರ ಕೆಲಸ ಮಾಡಿದ್ದಾರೆ. ಅದನ್ನು ಹೊರತು ಪಡಿಸಿ ಬೇರೆ ವಿಚಾರಗಳಿಗೆ ಮಾತನಾಡಲ್ಲ. ಯತೀಂದ್ರ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ ಎಂದು ತಿಳಿಸಿದರು. ಇದನ್ನೂ ಓದಿ: ಡಿವೋರ್ಸ್ ಕೊಡು ಇಲ್ಲದಿದ್ರೆ ಅಶ್ಲೀಲ ವೀಡಿಯೋ ವೈರಲ್ ಮಾಡ್ತೀನಿ- ಪತ್ನಿಗೆ ಬ್ಲ್ಯಾಕ್‍ಮೇಲ್
ಕರಸೇವಕರ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಬಂಧಿತ ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಗಳಿವೆ. ಕೋರ್ಟ್ ಆದೇಶದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದರು.
ಕಾನೂನಿನ ಪ್ರಕಾರ ಪೊಲೀಸರು ಕೆಲಸ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ 20 ಸಾವಿರ ಮಂದಿಯನ್ನ ರೌಡಿಶೀಟರ್ ನಿಂದ ತೆಗೆಸಿದ್ದರು. ಬಳಿಕ ಪಕ್ಷದ ಶಾಲು ಹಾಕಿ ಬಿಜೆಪಿಗೆ ಸೇರಿಸಿಕೊಂಡಿದ್ದರು. ಇದು ಬಿಜೆಪಿಯವರು ಕೊಟ್ಟಿದ್ದ ಆಡಳಿತ ಎಂದು ವ್ಯಂಗ್ಯವಾಡಿದರು.
ಗೋಧ್ರಾ ರೀತಿ ಮತ್ತೊಂದು ದುರಂತ ಸಂಭವಿಸುತ್ತದೆಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಹರಿಪ್ರಸಾದ್ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದವರು. ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಹಾಗಾಗಿ ಅವರಿಗೆ ಮಾಹಿತಿ ಇರಬಹುದು. ನೀವು ಅದರ ಬಗ್ಗೆ ಅವರನ್ನೇ ಕೇಳಿ ಎಂದರು.
ನವದೆಹಲಿ: ಸಂಸತ್‍ನಲ್ಲಿ (Security breach in Lok Sabha) ದಾಂಧಲೆ ಎಬ್ಬಿಸಿದ್ದವರ ಆತಂಕಕಾರಿ ಪ್ರವರಗಳು, ಪ್ಲಾನ್‍ಗಳು ಈಗ ಒಂದೊಂದೇ ಬಯಲಾಗ್ತಿವೆ.
ಸಂಚುಕೋರರು ತಮ್ಮ ಸಂದೇಶಗಳನ್ನು ಸರ್ಕಾರಕ್ಕೆ ತಲುಪಿಸಲು ಹಲವು ಪ್ಲಾನ್‍ಗಳನ್ನು ಮಾಡಿದ್ರು. ಮೊದಲು ಮೈಗೆ ಫೈರ್ ಪ್ರೂಫ್ ಜೆಲ್ (Fire Proof Gel) ಲೇಪಿಸಿಕೊಂಡು ಸಂಸತ್ ಮುಂದೆ ಬೆಂಕಿ ಹಚ್ಚಿಕೊಳ್ಳಲು ಯೋಜಿಸಿದ್ರು. ಇದಕ್ಕಾಗಿ ಆನ್‍ಲೈನ್‍ನಲ್ಲಿ ಜೆಲ್ ಖರೀದಿ ಸಾಧ್ಯವಾಗದ ಕಾರಣ ಅದನ್ನು ಕೈಬಿಟ್ರು ಎನ್ನಲಾಗಿದೆ. ಈಗಿರುವ ರಾಜಕೀಯ ಪಕ್ಷಗಳ ಸಿದ್ದಾಂತಗಳು ಹೊಂದಿಕೆಯಾಗದ ಕಾರಣ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಬಗ್ಗೆಯೂ ಸಂಚುಕೊರರು ಚಿಂತನೆ ನಡೆಸಿದ್ರು.
ಒಟ್ಟಿನಲ್ಲಿ ಸಂಸತ್ ದಾಳಿ ಪ್ರಕರಣದಲ್ಲಿ ರಾಜಕೀಯ ಮುಂದುವರಿದಿದೆ. ಈ ಪ್ರಕರಣದಲ್ಲಿ ಪ್ರತಾಪ್‍ಸಿಂಹರನ್ನು ಸಿಲುಕಿಸುವ ಷಡ್ಯಂತ್ರ್ಯವನ್ನು ಕಾಂಗ್ರೆಸ್ ನಡೆಸಿದೆ ಎಂದು ಬಿಜೆಪಿಯ ಲೆಹರ್ ಸಿಂಗ್ ಆರೋಪಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸುವ ಪ್ರಯತ್ನಗಳು ನಡೆದಿವೆ. ಇದರ ಭಾಗವಾಗಿಯೇ ಪ್ರತಾಪ್ ಸಿಂಹರನ್ನು ಸಿಲುಕಿಸುವ ಸಂಚು ನಡೆದಿದೆ ಎಂದು ಆಪಾದಿಸಿದ್ದಾರೆ. ರಾಜ್ಯದಲ್ಲಿ ನಗರ ನಕ್ಸಲರನ್ನು ಸರ್ಕಾರ ಪೋಷಿಸುತ್ತಿದೆ ಎಂಬ ಆರೋಪವನ್ನು ಲೆಹರ್ ಸಿಂಗ್ ಮಾಡಿದ್ದಾರೆ. ಆದರೆ ಈ ಆರೋಪವನ್ನು ಸಿಎಂ ತಳ್ಳಿ ಹಾಕಿದ್ದಾರೆ.
ಬೆಂಗಳೂರು: ತುಷ್ಟೀಕರಣದ ಉತ್ತುಂಗಕ್ಕೆ ತಲುಪಿರುವ ಸಿದ್ದರಾಮಯ್ಯ (Siddaramaiah) ಸಾಹೇಬರು ನಾಳೆ ಯತೀಂದ್ರ (Yatindra) ಅವರಿಗೆ ಟಿಪ್ಪು(Tippu) ಎಂದು ನಾಮಕರಣ ಮಾಡಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಹೇಳಿದೆ.
ಪೋಸ್ಟ್‌ನಲ್ಲಿ ಏನಿದೆ?
ಲೋಕಸಭಾ ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ 10 ಸಾವಿರ ಕೋಟಿ ರೂ. ಕೊಡುತ್ತಿರುವ ಸಿದ್ದರಾಮಯ್ಯನವರು ಇನ್ನೂ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು – ಮೈಸೂರಿನಲ್ಲಿ ಟಿಪ್ಪು ವಿಮಾನ ನಿಲ್ದಾಣ, ವಿಧಾನಸೌಧಕ್ಕೆ ಟಿಪ್ಪು ಸೌಧವೆಂದು ಮರು ನಾಮಕರಣ, ಮೈಸೂರು ವಿವಿಗೆ ಟಿಪ್ಪು ಹೆಸರು, ಟಿಪ್ಪುವಿನ 108 ಅಡಿ ಪ್ರತಿಮೆ, ಟಿಪ್ಪು ಮದ್ಯದ ಬಾಟಲಿ, ಬಿಎಂಟಿಸಿ/ಕೆಎಸ್‌ಆರ್‌ಟಿಸಿಗೆ ಟಿಪ್ಪು ಸಾರಿಗೆ ಎಂಬ ಹೆಸರು. ಇದನ್ನೂ ಓದಿ: ಟಿಪ್ಪುವಿನ ಹೆಸರನ್ನು ಶೌಚಾಲಯಗಳಿಗೆ ಇಡಬೇಕು: ಯತ್ನಾಳ್
ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಅವರು ಮಾಜಿ ಮುಖ್ಯಮಂತ್ರಿಗಳು. ಅವರಿಗೊಂದು ಘನತೆ ಇದೆ. ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ದಿನಬೆಳಗಾದರೆ ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ಸರಿಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ, ಯತೀಂದ್ರ ಅವರ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕುರಿತು ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಣ್ಣ ಹಾಗೂ ವಿಜಯೇಂದ್ರ ಅವರು ಈಗ ಪಾರ್ಟ್ನರ್‌ಗಳು. ಅವರ ಮಧ್ಯೆಯೇ ಗೊಂದಲ ಇರುವಾಗ ನಾನು ಹೇಗೆ ಪ್ರತಿಕ್ರಿಯೆ ನೀಡಲಿ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪಕ್ಷದ ಅಧ್ಯಕ್ಷರಾಗಿದ್ದವರು. ಅವರು ಆ ಸ್ಥಾನಗಳಿಗೆ ತಕ್ಕಂತೆ ಗೌರವ ಉಳಿಸಿಕೊಳ್ಳಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ಅವರ ತಂದೆಯವರು ಅನೇಕ ಬಾರಿ ಈ ಬಗ್ಗೆ ಸಲಹೆ ನೀಡಿದ್ದಾರೆ ಎಂಬ ವಿಚಾರ ಕೇಳಿದೆ. ದೇವೇಗೌಡರು, ಯಡಿಯೂರಪ್ಪ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಸದಾನಂದಗೌಡರು, ಬಸವರಾಜ ಬೊಮ್ಮಾಯಿ ಅವರು ಕೂಡ ಮಾಜಿ ಮುಖ್ಯಮಂತ್ರಿಗಳು. ಅವರು ಇವರಂತೆ ಸುಮ್ಮನೆ ಮಾತನಾಡುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯತ್ನಾಳ್ ವಿರುದ್ಧ ಒಳಸಂಚು ಮಾಡಿ ವಿಪಕ್ಷ ನಾಯಕ ಸ್ಥಾನ ತಪ್ಪಿಸಿದರು: ಜಯಮೃತ್ಯುಂಜಯ ಸ್ವಾಮೀಜಿ
ದೇವರು, ಜನ ಕೊಟ್ಟ ಅವಕಾಶ, ಬೆಂಬಲಿಗರ ಸಹಾಯ, ತಂದೆ-ತಾಯಿ ಆಶೀರ್ವಾದ, ತಮ್ಮದೇ ಆದ ಹೋರಾಟದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಆ ಸ್ಥಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ಮನಸ್ಸಿಗೆ ಬಂದಂತೆ ಈ ರೀತಿ ಮಾತನಾಡಿದರೆ ಪ್ರಯೋಜನವಿಲ್ಲ. ಮಾಜಿ ಮುಖ್ಯಮಂತ್ರಿ ಮಾತು, ವರ್ತನೆ ಎಂದರೆ ನಾವು ಹೆದರಿ ಗಡಗಡ ನಡುಗುವಂತೆ ಇರಬೇಕು. ನಮ್ಮ ಮಾಜಿ ಶಾಸಕ ಯತೀಂದ್ರ (Yathindra Siddaramaiah) ಅವರು ತಮ್ಮ ತಂದೆಗಾಗಿ ಸ್ಥಾನ ತ್ಯಾಗ ಮಾಡಿದವರು. ನಾವು ಹಾಗೂ ನಮ್ಮ ಪಕ್ಷದ ಹೈಕಮಾಂಡ್ ಅವರನ್ನು ಎಂಎಲ್‌ಸಿ ಮಾಡುತ್ತೇವೆ ಎಂದರೂ ಅದನ್ನು ಬೇಡ ಎಂದವರು. ಆತ ತಂದೆಯ ಕ್ಷೇತ್ರದಲ್ಲಿ ಕೆಡಿಪಿ ಸದಸ್ಯನಾಗಿ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ನೂರಾರು ಕೆಲಸಗಳಿರುತ್ತವೆ. ನಮ್ಮ ಕ್ಷೇತ್ರದಲ್ಲೂ ಅಧಿಕಾರಿಗಳ ವರ್ಗಾವಣೆ ಅರ್ಜಿ ಇಟ್ಟುಕೊಂಡು ಅನೇಕರು ಬರುತ್ತಾರೆ. ಹಾಗೆಂದು ಯತೀಂದ್ರ ಅವರು ವರ್ಗಾವಣೆ ಮಾಡಿದ್ದಾರೆ ಎಂದು ಅರ್ಥವಲ್ಲ. ಅವರು ಶಾಸಕರಲ್ಲದಿದ್ದರೂ ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದಾರೆ. ಅದನ್ನು ನೋಡಿ ಖುಷಿಪಡಬೇಕು. ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಈ ಮೂರು ದಿನ ಕರೆಂಟ್ ಬಿಲ್ ಕಟ್ಟೋಕೆ ಆಗಲ್ಲ – ನವೆಂಬರ್ ಅಂತ್ಯಕ್ಕೆ ವಿದ್ಯುತ್ ದರ ಏರಿಕೆ ಸಾಧ್ಯತೆ?
ವಿಧಾನಮಂಡಲ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಈ ವಿಚಾರ ಪ್ರಸ್ತಾಪ ಮಾಡಲೇಬೇಕು. ಈ ವಿಚಾರದ ಜೊತೆಗೆ ಅವರು ಇದುವರೆಗೂ ಜನತೆಗೆ ಕೊಟ್ಟ ಮಾತನ್ನು ಬಿಚ್ಚಿಟ್ಟು ಚರ್ಚೆ ಮಾಡಲಿ. ಪಕ್ಷದ ಅಧ್ಯಕ್ಷರಾಗಿ ಅವರಿಗೆ ವಿಚಾರ ಪ್ರಸ್ತಾಪಿಸುವ ಹಕ್ಕಿದೆ. ಅದನ್ನು ನಾನೇಕೆ ಕಿತ್ತುಕೊಳ್ಳಲಿ, ಬೇಡ ಎನ್ನಲಿ ಎಂದು ಹೇಳಿದರು. ಇನ್ನು ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್‌ನಿಂದ ಅಮಾನತು ಬಗ್ಗೆ ಮಾತನಾಡಿದ ಅವರು, ಇದು ಅವರ ಪಕ್ಷದ ವಿಚಾರ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಜಿ.ಟಿ ದೇವೇಗೌಡರ ಭೇಟಿ ವಿಶೇಷ ಏನಿಲ್ಲ. ಎಲ್ಲಾ ಪಕ್ಷದ ಶಾಸಕರು ಕೆಲಸದ ವಿಚಾರವಾಗಿ ನನ್ನನ್ನು ಭೇಟಿ ಮಾಡುತ್ತಾರೆ. ನನಗೆ ಅನೇಕ ಸ್ನೇಹಿತರಿದ್ದಾರೆ. ಅವರ ಜೊತೆ ಊಟ, ಚರ್ಚೆ ಮಾಡುತ್ತೇವೆ. ಕುಮಾರಸ್ವಾಮಿ ಅವರು ಕೂಡ 40 ಜನ ಕಾಂಗ್ರೆಸ್ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಏನು ಬಿಜೆಪಿಯ ವಕ್ತಾರರೇ? ಎಂದು ಕಿಡಿಕಾರಿದರು. ಇದನ್ನೂ ಓದಿ: ಜಮೀರ್ ಒಬ್ಬ ಮತಾಂಧ, ಮುಸ್ಲಿಂ ಭೂತ ಹಿಡಿದಿದೆ: ಮುತಾಲಿಕ್ ಕಿಡಿ
ಅಶೋಕ್ (R Ashok) ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೌದು, ನನಗೆ ಬಹಳ ಸಂತೋಷವಾಗಿದೆ. ಅವರು ಹಿರಿಯರಲ್ಲವೇ? ಅವರು ಸೋತಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ. ರಾಜಕೀಯದಲ್ಲಿ ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡಬೇಕು. ಎಂತೆಂಥವರೇ ಸೋತಿದ್ದಾರೆ, ಗೆದ್ದಿದ್ದಾರೆ. ನಾನು, ದೇವೇಗೌಡರು, ಕುಮಾರಸ್ವಾಮಿ ಅವರು ಸೋತಿಲ್ಲವೇ? ಚುನಾವಣೆಗೆ ನಿಂತವರೆಲ್ಲಾ ಗೆಲ್ಲಲು ಸಾಧ್ಯವೇ? ಎಂದರು. ಇದನ್ನೂ ಓದಿ: ನನ್ನ ಧರಧರನೇ ಎಳೆದೊಯ್ದು ಠಾಣೆಯಲ್ಲಿ ಕೂರಿಸಿದ್ದರು- ಎಮರ್ಜೆನ್ಸಿ ನೆನಪು ಮೆಲುಕು ಹಾಕಿದ ಸಿಎಂ
ಈಗ ರಾಜಕೀಯ ಪಂದ್ಯ ರೋಚಕವಾಗಿದೆ ಎಂದು ಅನಿಸುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ಏನೇನೋ ದೊಡ್ಡ ಸ್ಕೀಮು, ತಂತ್ರ, ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲವೂ ನಡೆಯಲಿ ಬಿಡಿ. ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ ಎಂದು ತಿಳಿಸಿದರು. ಅಶೋಕಣ್ಣ ತಮ್ಮ ಅನುಭವದ ಭಂಡಾರದ ಮೂಲಕ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದೆ ಎಂದಿದ್ದಾರೆ. ಅಶೋಕಣ್ಣ ಏಳು ಬಾರಿ ಗೆದ್ದಿದ್ದು, ಹಿರಿಯ ನಾಯಕರಿದ್ದಾರೆ. ಅವರಿಗೆ ದೊಡ್ಡ ಸ್ಥಾನ ಸಿಕ್ಕಿದೆ. ವಿರೋಧ ಪಕ್ಷದ ಸ್ಥಾನ ಎಂದರೆ ಸಂವಿಧಾನದ ಮೂಲಕ ಕೊಟ್ಟಿರುವ ಸ್ಥಾನ. ಅವರಿಗೆ ಈ ಸ್ಥಾನ ಸಿಕ್ಕಿರುವುದು ಸಂತೋಷ. ಆ ಪಕ್ಷದಲ್ಲಿ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಹಳ ಸಮರ್ಥವಾಗಿ ನಿರ್ವಹಿಸಲಿ. ಅವರ ಅನುಭವದ ಭಂಡಾರದ ಮೂಲಕ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿ. ನಮ್ಮ ತಪ್ಪುಗಳನ್ನು ತಿದ್ದುವ ಕೆಲಸ ಮಾಡಲಿ. ಬಿಜೆಪಿ (BJP) ಕೊನೆಗೂ ವಿರೋಧ ಪಕ್ಷದ ನಾಯಕ (Opposition Leader) ಆಯ್ಕೆ ಮಾಡಿರುವುದು ಸಂತೋಷದ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ, ಮೆಟ್ರೋ ಸ್ಟೇಷನ್‍ಗೂ ಕೇಸರಿ ಬಣ್ಣ- ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ
ಬೆಂಗಳೂರು: ಯತೀಂದ್ರ (Yathindra )ಅವರು ವರ್ಗಾವಣೆ ವಿಚಾರವಾಗಿ ಮಾತಾಡಿಲ್ಲ. ಸಿಎಸ್‍ಆರ್ ಫಂಡ್ (ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್) ಬಗ್ಗೆ ಮಾತಾಡಿರುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರ ಯತೀಂದ್ರ ಅವರ ವೈರಲ್ ಆದ ವೀಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ನಾನು ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದೇನೆ ಎಂದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಪುತ್ರನ ಎಡವಟ್ಟು – ಯತೀಂದ್ರ ಹೇಳಿದ ಮಹದೇವ್ ಯಾರು?
ಪತ್ರಕರ್ತರ ಪ್ರಶ್ನೆಗೆ, ಐದು ಹೆಸರು ಎಂದರೆ ವರ್ಗ ಏನಯ್ಯ? ಅದು ಸಿಎಸ್‍ಆರ್ ಲಿಸ್ಟ್. ಶಾಲೆ ಕಟ್ಟಡಗಳನ್ನು ಸಿಎಸ್‍ಆರ್ ಫಂಡ್‍ನಿಂದ ರಿಪೇರಿ ಮಾಡಿಸಲಾಲಾಗುತ್ತಿದೆ. ಈ ಬಗ್ಗೆ ಯತೀಂದ್ರ ಅವರು ಹೇಳಿದ್ದಾರೆ. ಕುಮಾರಸ್ವಾಮಿ ರಾಜಕೀಯವಾಗಿ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಬುಧವಾರ ಯತೀಂದ್ರ ಅವರು ವರುಣ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಅವರು ತಂದೆಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್‍ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡ್ತೀವಿ ಅಂತ ಕುಮಾರಸ್ವಾಮಿ ಹೇಳಿದ್ದರೆ ನಾವು ಖಂಡಿತಾ ಬರುತ್ತಿದ್ದೆವು: ಎಸ್‌ಟಿಎಸ್
ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಚಿಕ್ಕಮ್ಮತಾಯಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮ ಆದಿನಾಡು ಚಿಕ್ಕಮ್ಮತಾಯಿ ಈ ಹಿಂದೆ ಸಿದ್ದರಾಮಯ್ಯಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ನುಡಿದಿತ್ತು. ದೇವಿಯ ಮಾತಿಗೋ ಅಥವಾ ರಾಜಕೀಯ ಕಾರಣಕ್ಕೋ ಗೊತ್ತಿಲ್ಲ ಈಗ ಸಿದ್ದರಾಮಯ್ಯ ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ದೇವಿ ಹೇಳಿದ್ದೇನು?
ಜನವರಿ ತಿಂಗಳಿನಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಆದಿನಾಡು ಚಿಕ್ಕಮ್ಮತಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಅರ್ಚಕ ಲಿಂಗಣ್ಣ ಮೈ ಮೇಲೆ ಚಿಕ್ಕಮ್ಮತಾಯಿ ಬಂದು ಸಿದ್ದರಾಮಯ್ಯ ಸ್ಪರ್ಧೆಯ ವಿಚಾರವಾಗಿ ಮಾತನಾಡಿತ್ತು.
ಕಾಂಗ್ರೆಸ್ (Congress) ಟಿಕೆಟ್ ಪಟ್ಟಿ ಶನಿವಾರ ಪ್ರಕಟವಾಗಿದ್ದು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನೀಡಿದೆ. ಆದರೆ ಸಿದ್ದರಾಮಯ್ಯ ಅವರು ನಾನು ಎರಡು ಕಡೆ ಸ್ಪರ್ಧೆ ಮಾಡುವಂತೆ ಕುಟುಂಬಸ್ಥರು ಹೇಳುತ್ತಿದ್ದಾರೆ. ಹೀಗಾಗಿ ನಾನು ಕೋಲಾರದಲ್ಲೂ ಟಿಕೆಟ್ ಕೇಳಿದ್ದೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ನಿರ್ಧಾರದ ಹಿಂದೆ ಆದಿನಾಡು ಚಿಕ್ಕಮ್ಮತಾಯಿ ಅಂದು ನುಡಿದ ಮಾತೇ ಕಾರಣ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ವಿಚಾರ ಬಂದಾಗ ಪತ್ನಿ, ಪುತ್ರನ ಜೊತೆ ಕೇಳಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಎರಡು ಕಡೆ ಟಿಕೆಟ್ ಕೇಳಿದ್ದು ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಎಂಬ ಕುತೂಹಲ ಹೆಚ್ಚಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ಸೋಲು ಅನುಭವಿಸಿದ್ದರೆ, ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದರು.
ಒಂದೂವರೆ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್‌ಗೆ ಬಹುಮತ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಆಸೆಯಲ್ಲಿ ಇದ್ದಾರೆ. ಈ ಕಾರಣಕ್ಕೆ ಬಾದಾಮಿ ಬೆಂಗಳೂರು ಹಾಗೂ ಮೈಸೂರಿನಿಂದ ದೂರವಾಗುತ್ತದೆ ಎಂಬ ಕಾರಣ ನೀಡಿ ವರುಣಾದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಹೀಗಾಗಿ ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಪುತ್ರ ಹಾಗೂ ಹಾಲಿ ಶಾಸಕ ಯತೀಂದ್ರ ಹೇಳಿದ್ದಾರೆ.
Live TV
[brid partner=56869869 player=32851 video=960834 autoplay=true]
– ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ? – ವರುಣಾದಲ್ಲಿ ಯತೀಂದ್ರ ಸ್ಪರ್ಧೆ ಇಲ್ಲ?
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮುಂದಿನ ಚುನಾವಣೆಯಲ್ಲಿ(Election) ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಸಿದ್ದರಾಮಯ್ಯ ತಮ್ಮ ಕರ್ಮಭೂಮಿ ವರುಣಾ(Varuna) ಕ್ಷೇತ್ರದಲ್ಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಹೌದು. ಕಳೆದ ಬಾರಿ ಪುತ್ರ ಯತೀಂದ್ರನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಬಾದಾಮಿಯಿಂದ(Badami) ಸ್ಪರ್ಧಿಸಿ ಗೆದ್ದಿದ್ದರು. ಹೀಗಾಗಿ ಈ ಬಾರಿಯೂ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರಾ ಅಥವಾ ವರುಣಾದಲ್ಲೇ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ಆಪ್ತರ ಜೊತೆಗಿನ ಮತುಕತೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು
ಮೈಸೂರಿನ(Mysuru) ಆಪ್ತರ ಜೊತೆ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಆಪ್ತರು, ನೀವು ಎಲ್ಲಿಂದ ಸ್ಪರ್ಧೆ ಮಾಡುತ್ತೀರಿ ಎನ್ನುವುದನ್ನು ಈಗಲೇ ದೃಢಪಡಿಸಿಕೊಳ್ಳಿ. ಕೊನೆ ಕ್ಷಣದಲ್ಲಿ ಗೊಂದಲ ಬೇಡ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಎರಡು ತಿಂಗಳಲ್ಲಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಉತ್ತರಕ್ಕೆ, ಎಲ್ಲೂ ಕ್ಷೇತ್ರ ಹುಡುಕಿಕೊಂಡು ಹೋಗೋದು ಬೇಡ ವರುಣಾದಿಂದಲೇ ಸ್ಪರ್ಧೆ ಮಾಡಿ ಎಂದಿದ್ದಾರೆ.
ವರುಣಾ ಬಗ್ಗೆಯೂ ಯೋಚನೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ಸಾರ್ ಯೋಚನೆ ಮಾಡಬೇಡಿ. ನೀವು ವರುಣಾದಿಂದ ಸ್ಪರ್ಧೆ ಮಾಡಿ. ಡಾಕ್ಟರ್ ಬಾದಾಮಿಯಿಂದ ಸ್ಪರ್ಧೆ ಮಾಡಲಿ. ನೀವು ವರುಣಾದಿಂದ ಸ್ಪರ್ಧೆ ಮಾಡಿದರೆ ಗೆಲುವು ಸುಲಭ. ಯಾವ ರಿಸ್ಕ್ ಇರಲ್ಲ. ರಾಜ್ಯದ ಬೇರೆ ಕ್ಷೇತ್ರಗಳಿಗೆ ಓಡಾಡಬಹುದು. ಡಾಕ್ಟರ್ ಬಾದಾಮಿಯಿಂದ ಸ್ಪರ್ಧೆ ಮಾಡಿದರೆ ನಿಮಗೂ ಪ್ರಚಾರಕ್ಕೆ ಹೋಗಲು ಸಮಯವೂ ಸಿಗುತ್ತದೆ ಎಂದಿದ್ದಾರೆ.
ಆಪ್ತರ ಈ ಮಾತಿಗೆ, ಈ ವಿಷಯದಲ್ಲಿ ಸ್ಪಷ್ಟವಾಗಿದ್ದೇನೆ. ನಾನು ವರುಣಾದಿಂದ ಸ್ಪರ್ಧೆ ಮಾಡಿದರೆ ಯತೀಂದ್ರ ಬೇರೆ ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಅವನು ಕ್ಷೇತ್ರ ನೋಡಿಕೊಂಡು ವರುಣಾದಲ್ಲೇ ಇರುತ್ತಾನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಬಲಿಗರು, ಯತೀಂದ್ರ ಅವರಿಗೆ ಅವಕಾಶ ಇರುತ್ತಲ್ಲ ಎಂದಾಗ ಸಿದ್ದರಾಮಯ್ಯ, ವರುಣಾ ನನ್ನ ಕ್ಷೇತ್ರ ಇದು ನನ್ನ ಕೊನೆಯ ಚುನಾವಣೆ. ನೋಡೋಣ ಏನೇನು ಆಗುತ್ತೆ ಅಂತ. ಬಟ್ ಒಂದಂತು ಕ್ಲಿಯರ್ ನಾನು ವರುಣಾದಿಂದ ಸ್ಪರ್ಧೆ ಮಾಡಿದರೆ ಯತೀಂದ್ರನೇ ಕ್ಷೇತ್ರ ನೋಡಿಕೊಳ್ಳುತ್ತಾನೆ. ಬೇರೆ ಕಡೆಯಿಂದ ಸ್ಪರ್ಧೆ ಮಾಡಲ್ಲ. ರಾಜ್ಯದ ಬೇರೆ ಬೇರೆ ಕಡೆ ಪ್ರಚಾರಕ್ಕೆ ತೆರಳಲು ನನಗೂ ಅನುಕೂಲವಾಗುತ್ತದೆ. ಯಾವುದಕ್ಕೂ ಇನ್ನು ಸಮಯವಿದೆ ಎಂದು ಹೇಳಿದ್ದಾರೆ.
ಮೈಸೂರಿನ ಆಪ್ತರ ಮುಂದೆ ಮಾತನಾಡಿರುವ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡುವ ಸುಳಿವು ಬಿಟ್ಟುಕೊಟ್ಟಿದ್ದು, ಕೊನೆಯ ಚುನಾಬಣೆಗೆ ತವರು ಜಿಲ್ಲೆಯ ಕರ್ಮಭೂಮಿ ವರುಣಾ ಕ್ಷೇತ್ರದ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಪ್ತರ ಮುಂದೆ ಮನಸ್ಸಿನ ಭಾವನೆ ಬಿಚ್ಚಿಟ್ಟ ಸಿದ್ದರಾಮಯ್ಯ ವರುಣಾ ಪ್ತೀತಿಯನ್ನು ಮುಕ್ತವಾಗಿ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಗುರುವಾರ ಮಡಿಕೇರಿ ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಹಿಂದೂ ಸಂಘಟನೆಯವರು ಮೊಟ್ಟೆ ಒಡೆದು ಅಗೌರವ ತೋರಿದ್ದರು. ಈ ಘಟನೆಗೆ ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ, ಜೆಡಿಎಸ್ ಕೂಡಾ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಹಿನ್ನೆಲೆ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಫೋಟಕ ಹೇಳಿಯೊಂದನ್ನು ನೀಡಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯತೀಂದ್ರ, ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕೆ ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಜೀವಬೆದರಿಕೆಯಿದೆ. ಹಿಂದೂ ಸಂಘಟನೆಗಳಿಂದಲೇ ಬೆದರಿಕೆಗಳು ಬಂದಿವೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ವಿರೋಧ ಪಕ್ಷದ ನಾಯಕರುಗಳಿಗೆ ಭದ್ರತೆ ಕೊಡಲು ವಿಫಲವಾಗಿದೆ. ಇನ್ನು ಜನರಿಗೆ ಹೇಗೆ ಭದ್ರತೆ ಕೊಡುತ್ತಾರೋ ಗೊತ್ತಿಲ್ಲ. ಜೊತೆಗೆ ಮೊಟ್ಟೆ ಒಡೆಸಿ ಹೇಡಿ ಕೃತ್ಯ ಮಾಡಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ
ಬಿಜೆಪಿ ಸರ್ಕಾರ ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಬಗ್ಗೆ ಗಮನ ಹರಿಸಬೇಕು. ಅದು ಬಿಟ್ಟು ವಿರೋಧ ಪಕ್ಷಗಳು ನೀಡುವ ಸಣ್ಣ ಪುಟ್ಟ ಹೇಳಿಕೆಗಳನ್ನು ಹಿಡಿದುಕೊಂಡು, ಅನಗತ್ಯ ಗೊಂದಲ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿದೆ ಎಂದರು.
ಟೆರರಿಸ್ಟ್‌ಗಳು ಕೂಡಾ ದೇಶ ಪ್ರೇಮಿಗಳೇ ಆಗಿರುತ್ತಾರೆ. ಆದರೆ ಅವರು ಹಿಡಿಯುವ ದಾರಿ ತಪ್ಪಲ್ವಾ? ಅದರಂತೆಯೇ ಸಾವರ್ಕರ್ ಕೂಡಾ ದೇಶ ಪ್ರೇಮಿಯೇ ಆಗಿರಬಹುದು. ಆದರೆ ಆ ದೇಶ ಪ್ರೇಮವನ್ನು ವ್ಯಕ್ತಪಡಿಸುವುದಕ್ಕೋಸ್ಕರ ಹಿಂದೂಯೇತರ ಪ್ರಜೆಗಳನ್ನು ದೇಶದ ಭಾಗವಾಗಿರಬಾರದು, ಅವರು 2ನೇ ದರ್ಜೆಯ ಪ್ರಜೆಗಳಾಗಿರಬೇಕು ಹಾಗೂ ಅವರನ್ನು ದ್ವೇಷಿಸುವುದು ಈ ದೇಶಕ್ಕೆ ಮಾರಕ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ – 20 ಕಡೆಗಳಲ್ಲಿ ಶೋಧ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಲಿಂಗಾಯತ, ಒಕ್ಕಲಿಗ ಜಾತಿ ಲೆಕ್ಕಾಚಾರ ಹಾಗೂ ಡಿಕೆಶಿ ಜೆಡಿಎಸ್ ಬಾವುಟ ಹಿಡಿದ ವಿಷಯದ ಬಗ್ಗೆ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಮಾತನಾಡುತ್ತಾ ಕುಳಿತ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ರ ಯತೀಂದ್ರ ಅವರು ಅಸಮಾಧಾನವನ್ನು ಹೊರ ಹಾಕಿ ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ಆಪ್ತರೇ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ವಿಡಿಯೋವನ್ನ ಲೀಕ್ ಮಾಡಿಸಿದ್ದರು. ಆದರೆ ಆ ವಿಡಿಯೋ ಸಿದ್ದರಾಮಯ್ಯ ಪಾಲಿಗೆ ಮತ್ತಷ್ಟು ನೆಗೆಟಿವ್ ಆಗುತ್ತಿದೆ ಅನ್ನೋದು ಪುತ್ರ ಯತೀಂದ್ರರ ಆಕ್ಷೇಪವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸೋಮವಾರ ಈ ಸಂಬಂಧ ಸಿದ್ದರಾಮಯ್ಯ ಜೊತೆ ಯತೀಂದ್ರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರ ವಿರುದ್ಧ ಮಾತನಾಡಬೇಡಿ ಅಂತ ಹೇಳಿದ್ದೆ. ಆಗ ನಿನಗೆ ರಾಜಕೀಯ ಗೊತ್ತಾಗಲ್ಲ ಸುಮ್ನಿರು ಅಂತ ನನಗೆ ಬೈದಿದ್ದೀರಿ. ಆ ಬಳಿಕ ಏನಾಯಿತು, ಅದೇ ವಿಷಯದಿಂದಾಗಿ ಅದೇ ಸಮುದಾಯಗಳ ಸಿಟ್ಟು ನಿಮ್ಮ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಈಗ ಮತ್ತೆ ಅದೇ ರೀತಿಯ ತಪ್ಪು ಮಾಡುತ್ತಿದ್ದೀರಿ. ನಾಲ್ಕು ಗೋಡೆಯ ಮಧ್ಯೆ ಆಪ್ತರ ಮುಂದೆ ಮಾತನಾಡಿದ್ದನ್ನ ವಿಡಿಯೋ ಮಾಡಿ ಬಹಿರಂಗಪಡಿಸೋ ಅವಶ್ಯಕತೆ ಏನಿತ್ತು ಎಂದು ಅಪ್ಪನ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಅಪ್ಪನ ಜೊತೆಗಿರುವವರೇ ದಿಕ್ಕು ತಪ್ಪಿಸುತ್ತಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಪುತ್ರ ಯತೀಂದ್ರ ಅವರು ಸಿದ್ದರಾಮಯ್ಯಗೆ ತಿಳಿಸಿದ್ದಾರೆ. ಮಗನ ರಾಜಕೀಯ ಗುಣಾಕಾರ, ಭಾಗಕಾರ ಕಂಡ ಸಿದ್ದರಾಮಯ್ಯ ಅವರು, ಪುತ್ರನ ಮಾತಿಗೆ ಮರು ಮಾತನಾಡದೆ ಸೈಲೆಂಟಾಗಿದ್ದಾರೆ. ಈ ಮೂಲಕ ಆಪ್ತರೇ ಅಪ್ಪನನ್ನ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನ ಅರಿತ ಡಾ.ಯತೀಂದ್ರ, ಅಪ್ಪನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಡಿಯೋದ ತಪ್ಪು ವ್ಯಾಖ್ಯಾನ ನೀಡಿ ಬಿಜೆಪಿ ವಿಕೃತಾನಂದ: ಸಿದ್ದರಾಮಯ್ಯ
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬುದ್ಧಿ ಹೇಳಿದ್ದ ಮಗನನ್ನ ಗದರಿದ್ದ ಸಿದ್ದರಾಮಯ್ಯ ರಾಜಕೀಯವಾಗಿ ಎಡವಿದ್ದರೂ ಈಗ ಬುದ್ಧಿ ಹೇಳಿದ ಮಗನಿಗೆ ಸಿದ್ದರಾಮಯ್ಯರ ಮೌನವೇ ಉತ್ತರವಾಗಿರುವುದು ಕುತೂಹಲ ಮೂಡಿಸಿದೆ.