Tag: ಯಡಿಯೂರಪ್ಪ

  • ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ.. ಈ ಬಚ್ಚಾನಿಂದ ಕಲಿಯಬೇಕಿಲ್ಲ: ಯತ್ನಾಳ್

    ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ.. ಈ ಬಚ್ಚಾನಿಂದ ಕಲಿಯಬೇಕಿಲ್ಲ: ಯತ್ನಾಳ್

    – ಅಣ್ಣ ಕೇಂದ್ರ ಮಂತ್ರಿಯಾಗಲಿ, ನಿಮ್ಮ ಅಪ್ಪ ರಾಷ್ಟ್ರಪತಿಯಾಗಲಿ ಎಂದು ಟಾಂಗ್

    ಬೆಂಗಳೂರು: ವಿಜಯೇಂದ್ರ (Vijayendra) ಚಡ್ಡಿ ಹಾಕೋ ಮುನ್ನ ನಾನು ಸಂಘಟನೆ ಮಾಡಿದ್ದೇನೆ. ವಿಜಯೇಂದ್ರ ಬಚ್ಚಾ, ನಾವು ಅವನಿಂದ ಕಲಿಯಬೇಕಿಲ್ಲ ಎಂದು ಮತ್ತೊಮ್ಮೆ ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ.. ತಪ್ಪು ಹೊರಿಸೋದು ಬೇಡ: ವಿಜಯೇಂದ್ರ

    ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಹೊರಗೆ ಬಂದಿದೆ. ವಿಜಯೇಂದ್ರ ಯಾಕೆ ಸರ್ಕಸ್ ಮಾಡ್ತಿದ್ದೀರಾ ಚುನಾವಣೆ ಅಂತ. ರಾಧಾಮೋಹನ್‌ಗೆ ಹೇಳಿ ರಾಜ್ಯಾಧ್ಯಕ್ಷ ನೀವೇ ಅಂತ ಕೈ ಎತ್ತಿಸಿಕೊಳ್ಳಿ. ಸಂಸದ ಸುಧಾಕರ್ ಮಾತ್ರವಲ್ಲ. ರಾಜ್ಯದ ಹಿರಿಯ ನಾಯಕರಿಗೆ ಜಿಲ್ಲಾ ಅಧ್ಯಕ್ಷ ಆಯ್ಕೆ ಬಗ್ಗೆ ಅಸಮಾಧಾನ ಇದೆ. ಇದೇನು ಪ್ರೈವೇಟ್ ಕಂಪನಿನಾ. ಎಲ್ಲ ನೀವೇ ಮಾಡಿಕೊಳ್ಳೋದಾದ್ರೆ ಮಾಡಿಕೊಳ್ಳಿ. ಅಣ್ಣ ಕೇಂದ್ರ ಮಂತ್ರಿಯಾಗಲಿ, ನಿಮ್ಮ ಅಪ್ಪ ರಾಷ್ಟ್ರಪತಿ ಆಗಲಿ ಅಂತ ಕಿಡಿಕಾರಿದರು.

    ಹೈಕಮಾಂಡ್ ನಾಯಕರೇ ಅಧ್ಯಕ್ಷ ಘೋಷಣೆ ಮಾಡಲಿ. ಚುನಾವಣೆ ಯಾಕೆ ಬೇಕು? ವಿಜಯೇಂದ್ರ ಚಡ್ಡ ಹಾಕೋ ಮುನ್ನ ಸಂಘಟನೆ ಮಾಡಿದ್ದೇವೆ. ಈ ಬಚ್ಚಾನಿಂದ ನಾವು ಕಲಿಯಬೇಕಿಲ್ಲ. ನಮಗೆ ಯಾವುದೇ ಭಯ ಇಲ್ಲ. ಪಕ್ಷದಿಂದ ತೆಗೆದು ಹಾಕ್ತೀರಾ ಹಾಕಲಿ. ನಾವು ಹೆದರೊಲ್ಲ ಎಂದು ಸವಾಲು ಹಾಕಿದರು. ಇದನ್ನೂ ಓದಿ: 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿದ ಬಿಜೆಪಿ – ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

    ನಿನ್ನೆ ಮಾಡಿರೋ ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಯಡಿಯೂರಪ್ಪ-ರಾಘವೇಂದ್ರ ಬಿಟ್ಟು ಇನ್ಯಾರಿಗೂ ಅಧ್ಯಕ್ಷರ ಸ್ಥಾನ ಪಟ್ಟಿ ಇಷ್ಟ ಆಗಿಲ್ಲ. ಹೀಗೆ ಆದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ. ಮಾಜಿ ಕೆಜೆಪಿ ಒಳಗೆ ಇರೋರಿಗೆ, ಹೊಗಳು ಭಟ್ಟರಿಗೆ, ಅಡ್ಜೆಸ್ಟ್ಮೆಂಟ್ ಮಾಡೋರಿಗೆ ಸ್ಥಾನಮಾನ ಕೊಡ್ತಿದ್ದಾರೆ. ಉಸ್ತುವಾರಿ ರಾಧಾಮೋಹನ್ ದಾಸ್ ಕೂಡಾ ಪಕ್ಷಪಾತವಾಗಿದ್ದಾರೆ. ಹುಲಿ ಅಂತ ತಂದು ಕೂರಿಸಿದ್ರೆ ಅದು ಹುಲಿ ಆಗೊಲ್ಲ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

    ನಾಳೆ ಸಭೆ ಮಾಡ್ತಿದ್ದೇವೆ. ಸಭೆ ಎರಡು ಹಂತದಲ್ಲಿ ಆಗುತ್ತದೆ. ತಟಸ್ಥ ಪರಿವರ್ತನೆ ಆಗಿ ನಿಷ್ಠಾವಂತ ಆಗಿದೆ. ನಾಳೆ ಕೂತು ಚರ್ಚೆ ಮಾಡ್ತೀವಿ. ಈ ಅಧ್ಯಕ್ಷರನ್ನ ಒಪ್ಪೋಕೆ ಸಾಧ್ಯವಿಲ್ಲ ಎಂದು ವಿಜಯೇಂದ್ರ ಬದಲಾವಣೆಗೆ ಒತ್ತಾಯ ಮಾಡಿದರು. ಇದನ್ನೂ ಓದಿ: ವಿಜಯೇಂದ್ರ ಇದ್ರೆ ಬಿಜೆಪಿಗೆ ಭವಿಷ್ಯ ಇಲ್ಲ: ಸಂಸದ ಸುಧಾಕರ್

    ನಮ್ಮಲ್ಲಿ ಯಾರು ಅಭ್ಯರ್ಥಿ ಅನ್ನೋದು ಫೈನಲ್ ಮಾಡಿಲ್ಲ. ರಾಮುಲು ಸೇರಿ ಎಲ್ಲವೂ ಅಸಮಾಧಾನ ಇದ್ದಾರೆ. ಅವರ ಹಿಂದೆ ಇರೋ ಚೇಲಾಗಳು ಜಾಸ್ತಿ ಆಗಿದ್ದಾರೆ. ಬಹಳ ದಿನ ಅನ್ಯಾಯ, ಸರ್ವಾಧಿಕಾರಿ ಇರೋ ಮನೋಭಾವನೆ ಇರೋ ನಾಯಕನ ಅಂತ್ಯ ಆಗುತ್ತದೆ. ಯಡಿಯೂರಪ್ಪ ಒಬ್ಬನೇ ಲಿಂಗಾಯತ ನಾಯಕ ಅಂತ ಹೈಕಮಾಂಡ್ ತಿಳಿದುಕೊಂಡಿದೆ. ಹೀಗಾಗಿ ಇನ್ನು ಏನು ನಿರ್ಧಾರ ಮಾಡಿಲ್ಲ ಅಂತ ಹೈಕಮಾಂಡ್ ವಿರುದ್ಧವೂ ಬೇಸರ ಹೊರ ಹಾಕಿದರು.

  • ಕೈ ನಾಯಕರಿಗೆ ನೀಡಿದ್ರೆ ಮಾತ್ರ ರಾಜಕೀಯ ಪ್ರೇರಿತ: ಬಿಎಸ್‌ವೈಗೆ ನೀಡಿದ ನೋಟಿಸ್‌ ಏನು ಎಂದ ಅಶೋಕ್‌

    ಕೈ ನಾಯಕರಿಗೆ ನೀಡಿದ್ರೆ ಮಾತ್ರ ರಾಜಕೀಯ ಪ್ರೇರಿತ: ಬಿಎಸ್‌ವೈಗೆ ನೀಡಿದ ನೋಟಿಸ್‌ ಏನು ಎಂದ ಅಶೋಕ್‌

    ಬೆಂಗಳೂರು : ಮುಡಾ ಪ್ರಕರಣದಲ್ಲಿ (MUDA Case) ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ (Byrathi Suresh) ಅವರಿಗೆ ಜಾರಿ ನಿರ್ದೇಶನಾಲಯ (ED) ನೀಡಿರುವ ನೋಟಿಸ್‌ನಲ್ಲಿ ವಿಶೇಷತೆಯೂ ಇಲ್ಲ. ರಾಜಕೀಯ ಪ್ರೇರಿತವೂ ಅಲ್ಲ ಎಂದು ವಿಪಕ್ಷ ನಾಯಕ ಅಶೋಕ್ (Ashok) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ (Yediyurappa) ಸಿಎಂ ಆಗಿದ್ದಾಗ ಸಿಬಿಐ, ಲೋಕಾಯುಕ್ತ, ಇಡಿ ನೋಟಿಸ್‌ ಕೊಟ್ಟಿತ್ತು.ಆಗ ಯಾಕೆ ಸುದ್ದಿ ಆಗಲಿಲ್ಲ. ಈಗ ಯಾಕೆ ಸುದ್ದಿ ಆಗ್ತಿದೆ ಅಂತ ಪ್ರಶ್ನೆ ಮಾಡಿದರು.

    ಇಡಿ ನೋಟಿಸ್‌ ರಾಜಕೀಯ ಪ್ರೇರಿತ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ಅವರೇನು ಸತ್ಯ ಹರಿಶ್ಚಂದ್ರರಾ? ಯಡಿಯೂರಪ್ಪ, ಜನಾರ್ದನ ರೆಡ್ಡಿಗೆ ಹಿಂದೆ  ನೋಟಿಸ್‌ ಕೊಟ್ಟಾಗ ರಾಜಕೀಯ ಪ್ರೇರಿತ ಅಲ್ಲವಾ? ಸಿಎಂ, ಡಿಕೆ ಶಿವಕುಮಾರ್‌,  ಕಾಂಗ್ರೆಸ್ ಮೇಲೆ ಕೊಟ್ಟರೆ ಮಾತ್ರ ರಾಜಕೀಯ ಪ್ರೇರಿತನಾ ಅಂತ ಪ್ರಶ್ನೆ ಮಾಡಿದರು.

     

    ಕಾಂಗ್ರೆಸ್‌ನವರಿಗೆ ನೋಟಿಸ್‌ ಕೊಟ್ಟರೆ ಅದು ರಾಜಕೀಯ ಪ್ರೇರಿತ ಅಂತ ಪುಸ್ತಕ ತಂದು ಬಿಡಿ ಅಂತ ಲೇವಡಿ ಮಾಡಿದರು. ಸಿಬಿಐ ಮತ್ತು ಇಡಿ ಅವತ್ತು ಇತ್ತು. ಇವತ್ತು ಇದೆ. ಏನು ಬದಲಾವಣೆ ಆಗಿಲ್ಲ ಅಂತ ಡಿಕೆಶಿಗೆ ಅಶೋಕ್ ತಿರುಗೇಟು ಕೊಟ್ಟರು.  ಇದನ್ನೂ ಓದಿ: MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

    ಇಡಿ ಕಾನೂನಾತ್ಮಕ ಸಂಸ್ಥೆಯಾಗಿದೆ. ಲ್ಯಾಂಡ್ ಕನ್ವರ್ಷನ್, 50:50 ಅನುಪಾತದಲ್ಲಿ ಸೈಟ್ ನೀಡಿದ್ದು ಅಧಿಕಾರಿಗಳು. ಲೋಕಾಯುಕ್ತ ರಿಪೋರ್ಟ್ ಕೂಡಾ ಅಧಿಕಾರಿಗಳು ಅಂತಾನೇ ರಿಪೋರ್ಟ್ ಕೊಡೋದು‌. ಈ ಸರ್ಕಾರದಲ್ಲಿ ವಾಲ್ಮೀಕಿ ಹಗರಣದಲ್ಲಿ ಎಸ್‌ಐಟಿ ಏನು ಮಾಡಿತ್ತು? ತನಿಖೆ ನಡೆಸಿ ಕ್ಲೀನ್ ಚಿಟ್ ಕೊಟ್ಟರು‌. ಮುಡಾ ಪ್ರಕರಣಕ್ಕೂ ಕ್ಲೀನ್ ಚಿಟ್ ಕೊಡ್ತಾರೆ ಅಂತ ಭವಿಷ್ಯ ನುಡಿದರು.

    ಲೋಕಾಯುಕ್ತ ಪೊಲೀಸರು ಸಿಎಂ ಅಡಿಯಲ್ಲಿ ಬರುತ್ತಾರೆ. ಪಾಪ ಅವರಿಗೆ ಪ್ರಮೋಷನ್ ಬೇಕು. ಪ್ರಮೋಷನ್ ಬೇಕಾಗಿರುವವರು ಹೇಗೆ ಅವರ ವಿರುದ್ದ ತನಿಖೆ ಮಾಡುತ್ತಾರೆ? ನಾನು ಅವರ ಮೇಲೆ ಆರೋಪ ಮಾಡುವದಿಲ್ಲ.  ವರದಿಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಕೊಡ್ತಾರೆ ಅಂತ ಲೋಕಾಯುಕ್ತ ತನಿಖೆಗೆ ವಿರೋಧ ಮಾಡಿದರು.

     

  • ಪುತ್ರನ ಬೆನ್ನಿಗೆ ನಿಂತು ರೆಬಲ್ಸ್‌ಗೆ ಟಕ್ಕರ್ ಕೊಟ್ಟ ಬಿಎಸ್‍ವೈ

    ಪುತ್ರನ ಬೆನ್ನಿಗೆ ನಿಂತು ರೆಬಲ್ಸ್‌ಗೆ ಟಕ್ಕರ್ ಕೊಟ್ಟ ಬಿಎಸ್‍ವೈ

    ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಸಮೀಪದಲ್ಲಿರುವಾಗಲೇ ಮಾಜಿ ಸಿಎಂ ಯಡಿಯೂರಪ್ಪ (B.S. Yediyurappa) ಹಾಗೂ ವಿಜಯೆಂದ್ರ (B.Y Vijayendra) ಅವರು ಪಕ್ಷದ ಪರಾಜಿತರು ಹಾಗೂ ಮಾಜಿ ಶಾಸಕರ ಸಭೆ ನಡೆಸಿ ಒಗ್ಗಟ್ಟಿನ ಜಪ ಮಾಡಿದ್ದಾರೆ.

    ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ 130ಕ್ಕೂ ಹೆಚ್ಚು ಪರಾಜಿತರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ಸುಳಿವನ್ನೂ ಕೊಡಲಾಗಿದೆ. ಸಭೆಯಲ್ಲಿ ಒಗ್ಗಟ್ಟಿನಿಂದ ಪಕ್ಷ ಸಂಘಟಿಸುವ ಪಣ ತೊಟ್ಟಿದ್ದು, ಈ ಮೂಲಕ ಮಾಜಿಗಳು ಹಾಗೂ ಪರಾಜಿತರ ವಿಶ್ವಾಸಗಳಿಸುವ ಕಸರತ್ತು ನಡೆಸಿದ್ದಾರೆ. ಈ ಮೂಲಕ ಮುಂದಿನ ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಸೂಕ್ತ ತಯಾರಿಗೂ ಮುಂದಾಗಿದ್ದಾರೆ.


    ಸಭೆಯಲ್ಲಿ ಪಕ್ಷದ ಒಳಗಿನ ವಿಚಾರಗಳೂ ಚರ್ಚೆಯಾಗಿದ್ದು, ಯತ್ನಾಳ್ ವಿರುದ್ಧ ಇನ್ನೂ ಶಿಸ್ತು ಕ್ರಮ ಆಗದ ಬಗ್ಗೆ ರೇಣುಕಾಚಾರ್ಯ ಆಕ್ಷೇಪಿಸಿದರು. ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಮಾತಾಡುವ ಯತ್ನಾಳ್ ವಿರುದ್ಧ ಕ್ರಮಕ್ಕೆ ಮತ್ತೆ ಹೈಕಮಾಂಡ್ ಮೇಲೆ ಒತ್ತಡ ತರಬೇಕೆಂಬ ಸಲಹೆ ಕೊಟ್ಟರು. ಇದೇ ವೇಳೆ, ಯಡಿಯೂರಪ್ಪ ಉತ್ಸವವನ್ನು ತಾವೇ ಹಣ ಹಾಕಿ ದಾವಣೆಗೆರೆಯಲ್ಲಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

    ಸಭೆಯಲ್ಲಿ ಭಿನ್ನರ ಬಗ್ಗೆ ಮಾತಾಡದಂತೆ ಪಕ್ಷದ ನಾಯಕರಿಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಯತ್ನಾಳ್ ತಂಡದ ವಿಚಾರದಲ್ಲಿ ಯಾರೂ ಬಹಿರಂಗವಾಗಿ ಮಾತಾಡಬಾರದು. ಒಬ್ಬಿಬ್ಬರು ಹಗುರವಾಗಿ ಮಾತಾಡ್ತಾರೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಎಲ್ಲವೂ ಹೈಕಮಾಂಡ್ ಗಮನದಲ್ಲಿದೆ. ಯಾರಿಗೆ ಏನು ಮಾಡ್ಬೇಕು ಎಂದು ವರಿಷ್ಠರಿಗೆ ಗೊತ್ತಿದೆ ಎಂದು ತಾಕೀತು ಮಾಡಿದ್ದಾರೆ.

  • ಬಿಎಸ್‌ವೈ ಹೆಸರಲ್ಲಿ ನಡೆಯುವುದು ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ: ಈಶ್ವರಪ್ಪ

    ಬಿಎಸ್‌ವೈ ಹೆಸರಲ್ಲಿ ನಡೆಯುವುದು ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ: ಈಶ್ವರಪ್ಪ

    – ರಥಸಪ್ತಮಿ ದಿನದಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆ

    ಬಾಗಲಕೋಟೆ: ಯಡಿಯೂರಪ್ಪ (Yediyurappa) ಹೆಸರಲ್ಲಿ ನಡೆಯುವ ಉತ್ಸವ ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಘಟನೆ ಉಳಿಯತ್ತದೆ ಮತ್ತೆ ಬಿಜೆಪಿ (BJP) ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರತಿ ವರ್ಷವೂ ಯಡಿಯೂರಪ್ಪನವರ ಹುಟ್ಟು ಹಬ್ಬ ಆಚರಣೆಗೆ ಮಾಡದ ಸಮಾವೇಶ ಈಗ ಯಾಕೆ ಎಂದು ಪ್ರಶ್ನಿಸಿದರು. ಹೀಗೆ ಗುಂಪುಗಾರಿಕೆ ನಡೆಯುವ ಕೆಲಸವನ್ನು ಯಡಿಯೂರಪ್ಪ ನಿಲ್ಲಿಸಬೇಕು ಎಂದರು.

    ಬಿಜೆಪಿಯಲ್ಲಿ (BJP) ಇರುವ ಗುಂಪುಗಾರಿಕೆ ಮುಂದೆ ಸರಿ ಹೋಗುತ್ತದೆ. ಈಗ ಯಾರ್ಯಾರು ಏನು ಬೇಕಾದ್ರೂ ಹಾರಾಡಬಹುದು. ಬಿಜೆಪಿ ಪಕ್ಷಕ್ಕಾಗಿ ತಪಸ್ಸು ಮಾಡಿ ಕಟ್ಟಿದವರಿಗೆ ಬೆಲೆ ಇದೆ. ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುವುದಿಲ್ಲ. ವರಿಷ್ಠರು ಅದನ್ನು ಸರಿಯಾಗಿ ಚಿವುಟಿ ಹಾಕುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹೆಬ್ಬಾಳ್ಕರ್‌ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ರಾ?

     

    ರೇಣುಕಾಚಾರ್ಯ (Renukcharya) ಬಣದ ಗುಂಪು ಸಮಾವೇಶ ಮಾಡುತ್ತಿದೆ. ಅದಕ್ಕೆ ಬಿಎಸ್‌ವೈ ಅವರ ಒಪ್ಪಿಗೆ ಇದೆ ಇಲ್ವೋ ಗೊತ್ತಿಲ್ಲ. ಆದರೆ ಗುಂಪುಗಾರಿಕೆ ಆಗುವುದಕ್ಕೆ ಬಿಎಸ್‌ವೈ ಒಪ್ಪಿಗೆ ಕೊಡುತ್ತಾರೆ ಎನ್ನುವುದು ನನಗೇನು ಅನಿಸುವುದಿಲ್ಲ ಎಂದರು.

    ಕಾಂಗ್ರೆಸ್‌ನಲ್ಲಿ (Congress) ಒಳ ಒಳಗೆ ಬಡಿದಾಟವಿದೆ. ಯಾವಾಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಅಂತಾ ಕಾಯ್ತಿದ್ದಾರೆ. ನಾಯಕರು ಸುಮ್ಮನೆ ಸಿದ್ದರಾಮಯ್ಯ ಬೆನ್ನಿಗೆ ನಾವಿದ್ದೇವೆ ಎನ್ನುತ್ತಾರೆ. ಸಿಎಂ ಬೆಂಬಲಕ್ಕೆ ಯಾರೆಲ್ಲ ನಿಂತಿದ್ದಾರೋ ಅವರೆಲ್ಲ ಸಿಎಂ ಖುರ್ಚಿ ಮೇಲೆ ಸಿಎಂ ಆಗಲು ಟವೆಲ್ ಹಾಕಿದ್ದಾರೆ. ರಥಸಪ್ತಮಿ ದಿನದಿಂದ ರಾಜ್ಯದಲ್ಲಿ ಏನೇನು ರಾಜಕೀಯ ಬದಲಾವಣೆ ಆಗುತ್ತದೆ ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು.

     

    ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅಂಬೇಡ್ಕರ್ ಜೀವಂತವಾಗಿದ್ದಾಗ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಪಮಾನ ಮಾಡಿತ್ತು. ಅಂಬೇಡ್ಕರ್‌ ಅವರು ಚುನಾವಣೆಗೆ ನಿಂತಾಗ ಕಾಂಗ್ರೆಸ್‌ ಅವರನ್ನು ಸೋಲಿಸಿತ್ತು. ಅವರು ಸಾವನ್ನಪ್ಪಿದಾಗ ದೆಹಲಿಯಲ್ಲಿ ಜಾಗವನ್ನು ಕಾಂಗ್ರೆಸ್ ಕೊಡಲಿಲ್ಲ. ಕೇಂದ್ರ ಮಂತ್ರಿಮಂಡಲದಲ್ಲಿ ಅವರು ರಾಜೀನಾಮೆ ನೀಡಲು ಮುಂದಾದಾಗ ಕೊಟ್ಟರೆ ಕೊಡಲಿ ಎಂದು ಹೇಳಿ ಸುಮ್ಮನಾಗಿದ್ದರು ಎಂದರು.

  • ನೋಟಿಸ್‌ಗೆ ಬಗ್ಗದ ಯತ್ನಾಳ್ ? – ಬಿಎಸ್‌ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಲಿಂಗಾಯತ ಸಮಾವೇಶಕ್ಕೆ ತಯಾರಿ

    ನೋಟಿಸ್‌ಗೆ ಬಗ್ಗದ ಯತ್ನಾಳ್ ? – ಬಿಎಸ್‌ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಲಿಂಗಾಯತ ಸಮಾವೇಶಕ್ಕೆ ತಯಾರಿ

    ನವದೆಹಲಿ: ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲು ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಮುಂದೆ ಹಾಜರಾದ ಬಳಿಕ ಕೊಂಚ ಮೌನವಾದಂತೆ ಕಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತೆರೆಮರೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಕುಟುಂಬಕ್ಕೆ ಸೆಡ್ಡು ಹೊಡೆಯಲು ಲಿಂಗಾಯತ ಸಮಾವೇಶ (Lingayat Samavesha) ಮಾಡಲು ಚಿಂತನೆ ನಡೆಸಿದ್ದಾರೆ.

    ವಕ್ಫ್ ಹೋರಾಟದ (Waqf Protest) ನೆಪದಲ್ಲಿ ದೆಹಲಿಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನರ ಗುಂಪು ವಿವಿಧ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಈ ನಡುವೆಯೇ ಯತ್ನಾಳ್ ಅವರು ಶಿಸ್ತು ಸಮಿತಿ ಮುಂದೆ ಹಾಜರಾಗಿ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿ ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದು ಭರವಸೆ ನೀಡಿ ಬಂದಿದ್ದರು.

    ಈ ಭರವಸೆ ಬೆನ್ನಲ್ಲೇ ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ಯತ್ನಾಳ್ ಮತ್ತು ಅವರ ಟೀಂ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತ ಸಮಾವೇಶ ಮಾಡಲು ತಯಾರಿ ಆರಂಭಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜಿ.ಎಂ ಜಿದ್ದೇಶ್ವರ್ (GM Siddeshwara) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಶಿಕಾರಿಪುರ ಅಥವಾ ಸೊರಬದಲ್ಲಿ ಲಿಂಗಾಯತ ಸಮಾವೇಶ ನಡೆಸಿ ಸಾದರ ಮತ್ತು ಪಂಚಮಸಾಲಿ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶ‌ನಕ್ಕೆ ಚಿಂತನೆ ನಡೆಸಿದ್ದಾರೆ.

    ವಿಧಾನಸಭೆ ಕಲಾದ ಬಳಿಕ ಸಮಾವೇಶ ನಡೆಸಬಹುದು ಎನ್ನಲಾಗಿದ್ದು, ಪಕ್ಷದ ವೇದಿಕೆಯಲ್ಲಿ ಈ ಕಾರ್ಯಕ್ರಮ ಮಾಡದೇ ಖಾಸಗಿಯಾಗಿ ಮಾಡುವ ಮೂಲಕ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ತೊಡೆ ತಟ್ಟಲು ಸಿದ್ಧತೆ ಮಾಡಿಕೊಂಡಿದ್ದು ಇದು ಮತ್ತೊಂದು ಹಂತದ ಆತಂರಿಕ‌ ಕಲಹಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.

     

  • ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ನವದೆಹಲಿ: ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಕುಟುಂಬದ ವಿರುದ್ಧ ನಿರ್ಣಾಯಕ ಸಂಘರ್ಷಕ್ಕೆ ಇಳಿದಿರುವ ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಇಂದು ಕೇಂದ್ರ ಶಿಸ್ತು ಸಮಿತಿ ಮುಂದೆ ಹಾಜರಾಗಿದ್ದರು.

    ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಭೇಟಿಯಾದ ಯತ್ನಾಳ್ ಅವರು ವಿಜಯೇಂದ್ರ (Vijayendra) ಮತ್ತು ಯಡಿಯೂರಪ್ಪ ವಿರುದ್ಧ ಆರು ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪಾಠಕ್ ಕೇಳಿದ ಪ್ರಶ್ನೆಗಳಿಗೆ ಸುದೀರ್ಘ ಉತ್ತರವನ್ನು ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ವಿಚಾರಣೆ ಮುಗಿಸಿ ನಗುನಗುತ್ತಾ ಹೊರಬಂದ ಯತ್ನಾಳ್, ನಿಮಗೆ ಉತ್ತಮ ಭವಿಷ್ಯವಿದೆ. ಸ್ವಲ್ಪ ತಾಳ್ಮೆಯಲ್ಲಿ ಇರಬೇಕು. ಪಕ್ಷದ ವಿಚಾರ ಹೊರಗೆ ಮಾತನಾಡಬೇಡಿ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಇದರ ಜೊತೆ ವಕ್ಫ್ ಹೋರಾಟ ಮುಂದುವರೆಸುವಂತೆ ಸೂಚನೆಯೂ ಸಿಕ್ಕಿದೆ ಎಂದರು. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ?

    ಶಿಸ್ತು ಸಮಿತಿ ಮುಂದೆ ಯತ್ನಾಳ್‌ ಹೇಳಿದ್ದೇನು?
    ನಾನು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದು ಕೆಲವರ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದೇನೆ. ವಂಶ ಪಾರಂಪರ್ಯ, ಭ್ರಷ್ಟಾಚಾರದ ವಿರುದ್ಧ ಪಕ್ಷವಿದೆ. ನಾನು ಪಕ್ಷದ ನೀತಿ, ಮೋದಿ ಅವರ ಮಾದರಿ ಅನುಸರಿಸಿದ್ದೇನೆ.

     

    ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸೀಮಿತ ನಾಯಕರ ಗುಂಪನ್ನು ಕಟ್ಟಿಕೊಂಡಿದ್ದಾರೆ. ಮೂರು ಉಪ ಚುನಾವಣೆ ಸೋಲಿಗೆ ಗುಂಪುಗಾರಿಕೆಯೂ ಕಾರಣ. ಸರ್ಕಾರದ ಜೊತೆ ವಿಜಯೇಂದ್ರ ಅಡ್ಜೆಸ್ಟ್‌ಮೆಂಟ್‌ ಮಾಡಿಕೊಂಡಿದ್ದಾರೆ. ನಾನು ಹಿಂದುತ್ವವನ್ನು ಸಮರ್ಥಿಸಿಕೊಂಡಿದ್ದೇನೆ.ಇದು ಪಕ್ಷ ವಿರೋಧಿಯೇ?

     

  • ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್

    ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್

    ನವದೆಹಲಿ: ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿಳಿಸಿದರು.

    ಬಿಜೆಪಿ ಬಣ ಫೈಟ್ ನಡುವೆ ಯತ್ನಾಳ್ ನೇತೃತ್ವದ ಟೀಂ ದೆಹಲಿಯಲ್ಲಿ ಬೀಡುಬಿಟ್ಟಿದೆ. ನಿನ್ನೆ ರಾತ್ರಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಯತ್ನಾಳ್ ತಂಡ ಭೇಟಿಯಾಗಿದೆ. ಪಕ್ಷದ ಬೆಳವಣಿಗೆಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಕೆಳಗಿಳಿಸಲು ಆಗಲ್ಲ, ಒಂದು ಸಾರಿ ಅಧ್ಯಕ್ಷರಾದ್ರೆ ಎಲ್ರೂ ಒಪ್ಪಿಕೊಳ್ಳಲೇಬೇಕು: ಯತ್ನಾಳ್‌ಗೆ ಶ್ರೀರಾಮುಲು ಟಾಂಗ್

    ಭೇಟಿಗೂ ಮುನ್ನ ಪ್ರತಿಕ್ರಿಯೆ ನೀಡಿದ ಯತ್ನಾಳ್, ಆರು ಪೇಜ್ ಉತ್ತರ ತಯಾರು ಮಾಡಿದ್ದೇನೆ. ಅದನ್ನು ನೀಡುತ್ತೇನೆ. ಜೊತೆಗೆ ವಿವರಣೆ ಕೊಡುತ್ತೇನೆ. ಪಕ್ಷದಲ್ಲಿ ತಟಸ್ಥ ನಿಲುವು ಹೊಂದಿರುವ ನಾಯಕರು ಇದ್ದಾರೆ. ಅವರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ. ಅವರು ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದು ಹೇಳಿದರು.

    ಭ್ರಷ್ಟಾಚಾರ ಕುಟುಂಬದ ಕಪಿಮುಷ್ಠಿಯಿಂದ ಹೊರ ಬರಬೇಕು ಎನ್ನುವ ಭಾವನೆ ಎಲ್ಲರಲ್ಲಿ ಇದೆ. ಯಾವ ಕಡೆಗೂ ವಾಲದ ರಾಷ್ಟ್ರೀಯ ನಾಯಕರನ್ನು ಕಳುಹಿಸಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕು. ವಿಜಯೇಂದ್ರ ಅವರು ಟೀಂ ಮಾಡಿಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು ಹೇಗೆ ತುಳಿಯುವ ಕೆಲಸ ಮಾಡಿದ್ದಾರೆ. ಹೊಂದಾಣಿಕೆ ರಾಜಕೀಯ, ಕುಟುಂಬ ರಾಜಕೀಯ, ಹಿಂದುತ್ವದಲ್ಲಿ ಹೇಗೆ ರಾಜೀ ಆಗಿದೆ ಇರಬೇಕು ಎಂಬ ಎಲ್ಲವನ್ನು ಪತ್ರದಲ್ಲಿ ಬರೆದಿದ್ದೇನೆ. ನಿಷ್ಠಾವಂತ ನಾಯಕರನ್ನು ಬೆಂಗಳೂರಿಗೆ ಕಳುಹಿಸಿದರೆ ಉಳಿದ ದಾಖಲೆ ಕೊಡುತ್ತೇನೆ ಎಂದು ಹೇಳುತ್ತೇನೆ ಎಂದರು. ಇದನ್ನೂ ಓದಿ: ಮುಡಾದಲ್ಲಿ 700 ಕೋಟಿ ಅವ್ಯವಹಾರ – ಬಡವರ ಸೈಟು ಶ್ರೀಮಂತರ ಪಾಲು: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ

    ನಿನ್ನೆ ನಡೆದ ಸಂಸದರ ಸಭೆಯಲ್ಲಿ ಯಾರೂ ನನ್ನ ವಿರುದ್ಧ ಮಾತನಾಡಿಲ್ಲ. ನನ್ನ ಉಚ್ಚಾಟನೆ ಮಾಡಿ ಎಂದು ಯಾರೂ ಹೇಳಿಲ್ಲ. ಎಲ್ಲರೂ ಪಕ್ಷದ ಪರವಾಗಿ ಮಾತನಾಡಿದ್ದಾರೆ. ನಾನು ಯಾರ ವಿರುದ್ಧವೂ ಮಾತನಾಡಿಲ್ಲ. ಕೇವಲ ಬಿಎಸ್‌ವೈ ಕುಟುಂಬದ ವಿರುದ್ಧ ಮಾತನಾಡಿದ್ದೇನೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದೆ ಎಂದು ತಿಳಿಸಿದರು.

    ವಿಜಯೇಂದ್ರ ಅವರಿಂದ ವಕ್ಫ್ ಜನಾಂದೋಲನ ಕುರಿತು ಮಾತನಾಡಿ, ಪಾಪಾ ಅವರು ಹೋಗಿ ಜನರ ಕಷ್ಟ ನೋಡಲಿ. ರೈತರು, ಜನರ ಕಷ್ಟವನ್ನು ಅರಿಯುವ ಕೆಲಸ ಮಾಡಲಿ. ನಾವು ಈಗಾಗಲೇ ದಾಖಲೆ ನೀಡಿದ್ದೇವೆ. ನಾವು ಹೊಂದಾಣಿಕೆ ಮಾಡಿಕೊಳ್ಳದೆ ಕೆಲಸ ಮಾಡಿದ್ದೇವೆ. ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ನೀಡಿದ್ದೇವೆ ಎಂದರು.

  • ಭ್ರಷ್ಟಾಚಾರ ಕೇಸ್‌ – ರಾಜ್ಯಪಾಲರ ಅಂಗಳದಲ್ಲಿ ಬಿಎಸ್‌ವೈ ಭವಿಷ್ಯ

    ಭ್ರಷ್ಟಾಚಾರ ಕೇಸ್‌ – ರಾಜ್ಯಪಾಲರ ಅಂಗಳದಲ್ಲಿ ಬಿಎಸ್‌ವೈ ಭವಿಷ್ಯ

    ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪಗೆ (Yediyurappa) ಮತ್ತೊಂದು ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ವಿರುದ್ದದ ಭ್ರಷ್ಟಾಚಾರ (Corruption) ಆರೋಪ ಪ್ರಕರಣದ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ಕೋರಿ ರಾಜ್ಯಪಾಲರಿಗೆ ಸರ್ಕಾರ ನಿರ್ಣಯ ರವಾನಿಸಿದೆ.

    ಸಾಮಾಜಿಕ ಕಾರ್ಯಕರ್ತ ಟಿಜಿ ಅಬ್ರಾಹಂ ದೂರಿನ ಮೇಲೆ ಕ್ರಮಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು ಕಳೆದ ವಾರ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿತ್ತು. ಇಂದು (ನ.03) ರಾಜ್ಯಪಾಲರ ಅನುಮತಿಗಾಗಿ ಸರ್ಕಾರ ನಿರ್ಣಯವನ್ನು ಶಿಫಾರಸು ಮಾಡಿದೆ.

    2020 ನವೆಂಬರ್ 19 ರಂದು ಟಿಜೆ ಅಬ್ರಹಾಂ (TJ Abraham) ಎಸಿಬಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಯಡಿಯೂರಪ್ಪ- ವಿಜಯೇಂದ್ರ (BY Vijayendra) ವಿರುದ್ದ ದೂರು ನೀಡಿದ್ದರು. ಬಿಡಿಎ ಫ್ಲಾಟ್ ಕಟ್ಟುವ ವಿಚಾರಕ್ಕೆ ರಾಮಲಿಂಗಂ ಕಂಪನಿಯಿಂದ 12 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

    ತನಿಖೆ – ವಿಚಾರಣೆ ನಡೆಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಅನುಮತಿಯನ್ನು ನಿರಾಕರಿಸಿದ್ದರು. ಈ ವಿಷಯ ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಿತ್ತು. ರಾಜ್ಯಪಾಲರ ನಿರ್ಣಯ ಪುನಃ ಪರಿಶೀಲನೆಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಇದನ್ನೂ ಓದಿ: MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ


    ಅಬ್ರಹಾಂ ನೀಡಿದ ದೂರಿನಲ್ಲಿ ಏನಿತ್ತು?
    ಕೋಲ್ಕತ್ತಾ ಮೂಲದ ಶೆಲ್ ಕಂಪನಿಗಳಲ್ಲಿ ಬಿಎಸ್‍ವೈ ಕುಟುಂಬಸ್ಥರು ಹೂಡಿಕೆ ಮಾಡಿದ್ದಾರೆ. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಜೊತೆ ವಿಜಯೇಂದ್ರ, ಶಶಿಧರ ಮರಡಿ ಲಿಂಕ್ ಇದೆ. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಫಂಡ್ ರಿಲೀಸ್ ಮಾಡಲು ಸಿಎಂ ಆಪ್ತರು ಒತ್ತಡ ಹಾಕಿದ್ದಾರೆ. ಸರ್ಕಾರ ವಿವಿಧ ಇಲಾಖೆ ಯೋಜನೆಗಳಲ್ಲಿ ಒತ್ತಡ ಹಾಕಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

    ದೂರಿಗೆ ಪೂರಕವಾಗಿ ವಾಟ್ಸಪ್ ಚಾಟ್ ಸಲ್ಲಿಕೆಯಾಗಿದ್ದು, 2020ರ ಅಕ್ಟೋಬರ್ 19 ರಂದು ಶಶಿಧರ್, ಚಂದ್ರಕಾಂತ್ ಅವರಲ್ಲಿ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಯಾವಾಗ ತಮ್ಮ ಬ್ಯಾಲೆನ್ಸ್ ಕ್ಲೀಯರ್ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.  ಮಧ್ಯಾಹ್ನ 2:36ಕ್ಕೆ ಮೆಸೇಜ್ ಮಾಡಿ ಕೇಳಿರುವ ಸಾಕ್ಷಿಗಳಿದೆ. ಅದಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಣ ನೀಡುತ್ತೇನೆ ಎಂದು ಚಂದ್ರಕಾಂತ್ ಹೇಳಿದ್ದಾರೆ. ಈ ಚಾಟ್‍ನಲ್ಲಿ ಶಶಿಧರ್ ಅವರಿಗೆ 3 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ದಾಖಲೆ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

    ಆರೋಪಿಗಳು ಯಾರು?
    ಎ1 – ಸಿಎಂ ಬಿ.ಎಸ್ ಯಡಿಯೂರಪ್ಪ, ಎ2 – ಬಿ.ವೈ ವಿಜಯೇಂದ್ರ, ಎ3 – ಶಶಿಧರ್ ಮರಡಿ, ಎ4 – ಸಂಜಯ್ ಶ್ರೀ, ಎ5 – ಚಂದ್ರಕಾಂತ್ ರಾಮಲಿಂಗಂ, ಎ6 – ಎಸ್.ಟಿ ಸೋಮಶೇಖರ್, ಎ7 – ಡಾ. ಜಿಸಿ ಪ್ರಕಾಶ್ ಐಎಎಸ್, ಎ8 – ಕೆ ರವಿ, ಎ9 – ವಿರೂಪಾಕ್ಷಪ್ಪ ಯಮಕನಮರಡಿ.

     

  • ಬಿಎಸ್‌ವೈಗೆ ಮತ್ತೊಂದು ಸಂಕಷ್ಟ- 2020ರ ಕೇಸ್‌ಗೆ ಮತ್ತೆ ಜೀವ

    ಬಿಎಸ್‌ವೈಗೆ ಮತ್ತೊಂದು ಸಂಕಷ್ಟ- 2020ರ ಕೇಸ್‌ಗೆ ಮತ್ತೆ ಜೀವ

    ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪಗೆ (Yediyurappa) ಮತ್ತೊಂದು ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ವಿರುದ್ದದ ಭ್ರಷ್ಟಾಚಾರ ಆರೋಪ ಪ್ರಕರಣದ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಿದ್ದರಾಮಯ್ಯ (Siddaramaiah) ಸಂಪುಟ ತೀರ್ಮಾನಿಸಿದೆ.

    2020 ನವೆಂಬರ್ 19 ರಂದು ಟಿಜೆ ಅಬ್ರಹಾಂ (TJ Abraham) ಎಸಿಬಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಯಡಿಯೂರಪ್ಪ- ವಿಜಯೇಂದ್ರ (BY Vijayendra) ವಿರುದ್ದ ದೂರು ನೀಡಿದ್ದರು. ಬಿಡಿಎ ಫ್ಲಾಟ್ ಕಟ್ಟುವ ವಿಚಾರಕ್ಕೆ ರಾಮಲಿಂಗಂ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆ ಅಂತ ಆರೋಪಿಸಿದ್ದರು. ಇದನ್ನೂ ಓದಿ: ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

     

    ತನಿಖೆ – ವಿಚಾರಣೆ ನಡೆಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಅನುಮತಿಯನ್ನು ನಿರಾಕರಿಸಿದ್ದರು. ಈ ವಿಷಯ ಇಂದು ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಿದ್ದು, ರಾಜ್ಯಪಾಲರ ನಿರ್ಣಯ ಪುನಃ ಪರಿಶೀಲನೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಲಾಗಿದೆ.

    ಈ ಮಧ್ಯೆ ಪೋಕ್ಸೋ ಪ್ರಕರಣದಲ್ಲಿ ಬಿಎಸ್‌ವೈಗೆ ಮಧ್ಯಂತರ ರಕ್ಷಣೆ ತೆರವಿಗೆ ಹೈಕೋರ್ಟ್ ಒಪ್ಪಿಲ್ಲ. ಮಧ್ಯಂತರ ರಕ್ಷಣೆ ತೆರವು ಮಾಡಬೇಕು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊಫೆಸರ್ ರವಿ ವರ್ಮಕುಮಾರ್ ವಾದ ಮಾಡಿದ್ದಾರೆ. ಇದಕ್ಕೆ ಪ್ರತಿವಾದ ಮಾಡಲು ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಕಾಲಾವಕಾಶ ಕೇಳಿದ್ದರಿಂದ ಡಿಸೆಂಬರ್ 2ರ ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿಕೆಯಾಗಿದೆ.

     

    ಅಬ್ರಹಾಂ ನೀಡಿದ ದೂರಿನಲ್ಲಿ ಏನಿತ್ತು?
    ಕೋಲ್ಕತ್ತಾ ಮೂಲದ ಶೆಲ್ ಕಂಪನಿಗಳಲ್ಲಿ ಬಿಎಸ್‍ವೈ ಕುಟುಂಬಸ್ಥರು ಹೂಡಿಕೆ ಮಾಡಿದ್ದಾರೆ. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಜೊತೆ ವಿಜಯೇಂದ್ರ, ಶಶಿಧರ ಮರಡಿ ಲಿಂಕ್ ಇದೆ. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಫಂಡ್ ರಿಲೀಸ್ ಮಾಡಲು ಸಿಎಂ ಆಪ್ತರು ಒತ್ತಡ ಹಾಕಿದ್ದಾರೆ. ಸರ್ಕಾರ ವಿವಿಧ ಇಲಾಖೆ ಯೋಜನೆಗಳಲ್ಲಿ ಒತ್ತಡ ಹಾಕಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

    ದೂರಿಗೆ ಪೂರಕವಾಗಿ ವಾಟ್ಸಪ್ ಚಾಟ್ ಸಲ್ಲಿಕೆಯಾಗಿದ್ದು, 2020ರ ಅಕ್ಟೋಬರ್ 19 ರಂದು ಶಶಿಧರ್, ಚಂದ್ರಕಾಂತ್ ಅವರಲ್ಲಿ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಯಾವಾಗ ತಮ್ಮ ಬ್ಯಾಲೆನ್ಸ್ ಕ್ಲೀಯರ್ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.  ಮಧ್ಯಾಹ್ನ 2:36ಕ್ಕೆ ಮೆಸೇಜ್ ಮಾಡಿ ಕೇಳಿರುವ ಸಾಕ್ಷಿಗಳಿದೆ. ಅದಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಣ ನೀಡುತ್ತೇನೆ ಎಂದು ಚಂದ್ರಕಾಂತ್ ಹೇಳಿದ್ದಾರೆ. ಈ ಚಾಟ್‍ನಲ್ಲಿ ಶಶಿಧರ್ ಅವರಿಗೆ 3 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ದಾಖಲೆ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

    ಆರೋಪಿಗಳು ಯಾರು?
    ಎ1 – ಸಿಎಂ ಬಿ.ಎಸ್ ಯಡಿಯೂರಪ್ಪ, ಎ2 – ಬಿ.ವೈ ವಿಜಯೇಂದ್ರ, ಎ3 – ಶಶಿಧರ್ ಮರಡಿ, ಎ4 – ಸಂಜಯ್ ಶ್ರೀ, ಎ5 – ಚಂದ್ರಕಾಂತ್ ರಾಮಲಿಂಗಂ, ಎ6 – ಎಸ್.ಟಿ ಸೋಮಶೇಖರ್, ಎ7 – ಡಾ. ಜಿಸಿ ಪ್ರಕಾಶ್ ಐಎಎಸ್, ಎ8 – ಕೆ ರವಿ, ಎ9 – ವಿರೂಪಾಕ್ಷಪ್ಪ ಯಮಕನಮರಡಿ.

  • ವಕ್ಫ್ ವಿವಾದದ ವಿರುದ್ಧ ಬಿಜೆಪಿಯಿಂದ ಎರಡು ಹಂತಗಳಲ್ಲಿ ಹೋರಾಟ: ವಿಜಯೇಂದ್ರ

    ವಕ್ಫ್ ವಿವಾದದ ವಿರುದ್ಧ ಬಿಜೆಪಿಯಿಂದ ಎರಡು ಹಂತಗಳಲ್ಲಿ ಹೋರಾಟ: ವಿಜಯೇಂದ್ರ

    ಬೆಂಗಳೂರು: ರೈತರ ಪರ ಯಾರೇ ಹೋರಾಟ ಮಾಡಿದರು ನಮ್ಮ ಬೆಂಬಲ ಇರಲಿದೆ, ಎಂದು ವಕ್ಫ್ ವಿಚಾರವಾಗಿ ಬಿಜೆಪಿ (BJP) ರೆಬಲ್ ಟೀಂ ಮಾಡ್ತಿರೋ ವಕ್ಫ್ ಅಭಿಯಾನದ ವಿಚಾರಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಹೇಳಿಕೆ ನೀಡಿದ್ದಾರೆ.

    ಯತ್ನಾಳ್ ಟೀಂ ವಕ್ಫ್ ಅಭಿಯಾನ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದೊಂದು ವಾರದಿಂದ ವಕ್ಫ್ ಹೋರಾಟದ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ.ಬಿಜೆಪಿ ಎರಡು ಹಂತದಲ್ಲಿ ಹೋರಾಟ ಮಾಡಲು ನಿರ್ಧಾರ ಆಗಿದೆ. ಬೆಳಗಾವಿ ಅಧಿವೇಶನದಲ್ಲಿ ರೈತರನ್ನ ಸೇರಿಸಿ ದೊಡ್ಡ ಪ್ರತಿಭಟನೆ ಮಾಡ್ತೀವಿ. ಎರಡು ಹಂತದ ಹೋರಾಟಕ್ಕೆ 3 ತಂಡಗಳು ರಚನೆ ಆಗಿವೆ ಎಂದು ತಿಳಿಸಿದರು. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್‌ – ಮೂವರು ಆರೋಪಿಗಳು ಅಂದರ್

    ಯತ್ನಾಳ್ ಗುಂಪು ಬಿಜೆಪಿ ಗುಂಪು ಎಂದು ಗೊಂದಲ ಆಗೋದಿಲ್ಲವಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರೈತರ ಪರ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ಹೋರಾಟ ಮಾಡೋಕೆ ಯಾಕೆ ಮುಜುಗರ ಪಡಬೇಕು. ವಕ್ಫ್ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾಗಿದೆ. ಮಠಗಳು, ಮಾನ್ಯಗಳ ಜಮೀನು, ದೇವಾಲಯದ ಜಮೀನು ಕಿತ್ತುಕೊಳ್ಳುತ್ತಿರುವುದರಿಂದ ರೈತರು ಆತಂಕದಲ್ಲಿ ಇದ್ದಾರೆ. ಹೀಗಾಗಿ ಸರ್ಕಾರ ಸ್ಪಷ್ಟ ಉತ್ತರ ಕೊಡೋವರೆಗೂ ನಾವು ಹೋರಾಟ ಮಾಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: ಶಾಸಕರ ಖರೀದಿಗೆ 2,000 ಕೋಟಿ ಬೇಕು, ಎಸ್‍ಐಟಿಗೆ ಹೇಳಿ ಸಿಎಂ ಸೀಜ್ ಮಾಡಿಸಲಿ: ಅಪ್ಪಚ್ಚು ರಂಜನ್ ವ್ಯಂಗ್ಯ

    ಹೋರಾಟವನ್ನ ಬಿಜೆಪಿ ಗಟ್ಟಿಯಾಗಿ ತೆಗೆದುಕೊಂಡಿದೆ. ನಮ್ಮ ಹೋರಾಟದಲ್ಲಿ ಯತ್ನಾಳ್, ಜಾರಕಿಹೋಳಿ, ಎಲ್ಲಾ ಶಾಸಕರು, ಸಂಸದರು ಇರುತ್ತಾರೆ. ರೈತರ ಪರ ಯಾರೇ ಹೋರಾಟ ಮಾಡಿದ್ರು ನನ್ನ ಸಂಪೂರ್ಣ ಬೆಂಬಲ ಇದೆ. ರೈತರ ಪರವಾಗಿ ಧ್ವನಿ ಎತ್ತಿದ ಪಕ್ಷ ಬಿಜೆಪಿ. ಯಡಿಯೂರಪ್ಪ ಅವರು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಆಡಳಿತ ಮಾಡಿದ್ದಾರೆ. ರೈತರ ಪರ ಬಿಜೆಪಿ ಹಿಂದೆ ಬಿಳೋದಿಲ್ಲ, ಯಾವಾಗಲು ಇರುತ್ತದೆ. ನಮ್ಮ ಹೋರಾಟ ಹೇಗೆ ಇರಲಿದೆ ಎಂದು ಈಗಾಗಲೇ ಹಿರಿಯರ ತಂಡ ರಚನೆ ಆಗಿದೆ. ಒಂದೆರಡು ದಿನಗಳಲ್ಲಿ ಹೋರಾಟದ ಬಗ್ಗೆ ತಿಳಿಸುತ್ತೇವೆ ಎಂದರು. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್