Tag: ಯಜುವೇಂದ್ರ ಚಹಲ್

  • ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದ್ಯಾ? ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

    ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್‍ಗೆ ಮುಂದಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪ್ರಮುಖ ಕಾರಣ ಇವರಿಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಪೋಸ್ಟ್. ಇದನ್ನೂ ಓದಿ: ನಾನು ರೊನಾಲ್ಡೊ ಆಡುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಖರೀದಿಸುತ್ತೇನೆ: ಎಲೋನ್ ಮಸ್ಕ್

    ಹೌದು. ಚಹಲ್ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.

    ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಇತ್ತ ಚಹಲ್ ಏಷ್ಯಾ ಕಪ್ ಟೂರ್ನಿಗಾಗಿ ಸಿದ್ಧತೆಯಲ್ಲಿದ್ದಾರೆ. ಏಷ್ಯಾಕಪ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗುತ್ತಿದ್ದು, ಆಗಸ್ಟ್ 28 ರಂದು ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್​ಸಿಬಿ ಪರ ಮಾತ್ರ ಆಡುತ್ತೇನೆ ಎಂದಿದ್ದ ಚಹಲ್ ಐಪಿಎಲ್ ಭವಿಷ್ಯವೇನು?

    ಆರ್​ಸಿಬಿ ಪರ ಮಾತ್ರ ಆಡುತ್ತೇನೆ ಎಂದಿದ್ದ ಚಹಲ್ ಐಪಿಎಲ್ ಭವಿಷ್ಯವೇನು?

    ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದ ಯಜುವೇಂದ್ರ ಚಹಲ್ ಈ ಹಿಂದೆ ನಾನು ಆರ್​ಸಿಬಿ ಪರ ಮಾತ್ರ ಐಪಿಎಲ್ ಆಡಲು ಬಯಸುತ್ತೇನೆ ಎಂದಿದ್ದರು. ಆದರೆ ಇದೀಗ ಆರ್​ಸಿಬಿ ತಂಡ ಚಹಲ್‍ರನ್ನು ಮೆಗಾ ಹರಾಜಿಗೆ ಬಿಟ್ಟುಕೊಟ್ಟಿದೆ. ಇದರಿಂದಾಗಿ ಚಹಲ್ ಮುಂದಿನ ಐಪಿಎಲ್‍ನಲ್ಲಿ ಬೇರೆ ತಂಡದ ಪರ ಆಡುವರೇ? ಅಥವಾ ಐಪಿಎಲ್‍ನಿಂದ ದೂರ ಉಳಿಯಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

    2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಹಲ್ ಆರ್​ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿ ಟೀಂ ಇಂಡಿಯಾಗೂ ಎಂಟ್ರಿಕೊಟ್ಟಿದ್ದರು. ಐಪಿಎಲ್‍ನಲ್ಲಿ ಆರ್​ಸಿಬಿ ಪರ ಮಿಂಚುಹರಿಸಿದ ಚಹಲ್ ಒಟ್ಟು 113 ಪಂದ್ಯಗಳಿಂದ 139 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಗುರುತಿಸಿಕೊಳ್ಳುವುದರೊಂದಿಗೆ ಕೊಹ್ಲಿಯ ನಂಬಿಕೆಯ ಬೌಲರ್ ಆಗಿದ್ದರು. ಇದನ್ನೂ ಓದಿ: ಕನ್ನಡಿಗ ಮಯಾಂಕ್ ಶತಕ – ಸುಸ್ಥಿತಿಯಲ್ಲಿ ಟೀಂ ಇಂಡಿಯಾ

    ಆರ್​ಸಿಬಿ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಚಹಲ್ ಈ ಹಿಂದೆ ನಾನು ಆರ್​ಸಿಬಿ ಪರ ಮಾತ್ರ ಐಪಿಎಲ್ ಆಡಲು ಬಯಸುತ್ತೇನೆ ಎಂದಿದ್ದರು. ಆದರೆ ಇದೀಗ 15ನೇ ಆವೃತ್ತಿಗೂ ಮುನ್ನ ಐಪಿಎಲ್ ತಂಡಗಳು ರಿಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚಹಲ್‍ರನ್ನು ಹರಾಜಿಗೆ ಬಿಟ್ಟುಕೊಟ್ಟಿದೆ. ಈ ಮೂಲಕ ಚಹಲ್ ಹರಾಜಿನಲ್ಲಿ ಬೇರೆ ತಂಡ ಖರೀದಿಸಿದರೆ ಆ ತಂಡದ ಪರ ಕಣಕ್ಕಿಳಿಯುವರೇ? ಅಥವಾ ಐಪಿಎಲ್‍ನಿಂದ ದೂರ ಉಳಿಯಲಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ನಡುವೆ ಮತ್ತೆ ಆರ್​ಸಿಬಿ ತಂಡ ಚಹಲ್‍ರನ್ನು ಖರೀದಿಸಿ ಅವರ ಆಸೆಯನ್ನು ಪೂರೈಸುವುದೇ ಎಂಬ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಏನೇ ಆದರೂ ಈ ಬಗ್ಗೆ ಸ್ಪಷ್ಟತೆಗಾಗಿ ಜನವರಿಯಲ್ಲಿ ನಡೆಯಲಿರುವ ಹರಾಜಿನವರೆಗೆ ಕಾಯಲೇಬೇಕು. ಇದನ್ನೂ ಓದಿ: ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ

  • ಕನ್ನಡಿಗ ಗೌತಮ್, ಚಹಲ್‍ಗೆ ಕೊರೊನಾ

    ಕನ್ನಡಿಗ ಗೌತಮ್, ಚಹಲ್‍ಗೆ ಕೊರೊನಾ

    ಕೊಲಂಬೋ: ನಿಗದಿತ ಓವರ್‍ ಗಳ ಕ್ರಿಕೆಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತ ತಂಡಕ್ಕೆ ಕೊರೊನಾ ಆಘಾತ ನೀಡಿದೆ. ಇದೀಗ ಕನ್ನಡಿಗ ಕೃಷ್ಣಪ್ಪ ಗೌತಮ್ ಮತ್ತು ಯಜುವೇಂದ್ರ ಚಹಲ್‍ಗೆ ಕೊರೊನಾ ದೃಢಪಟ್ಟಿದೆ.

    ಶ್ರೀಲಂಕಾ ನಡುವಿನ 2ನೇ ಟಿ20 ಪಂದ್ಯಕ್ಕೂ ಮುನ್ನ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ಬಳಿಕ ಅವರ ಸಂಪರ್ಕಹೊಂದಿದ್ದ 8 ಮಂದಿ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಅವರಲ್ಲಿ ಇಬ್ಬರು ಆಟಗಾರರಾದ ಗೌತಮ್ ಮತ್ತು ಚಹಲ್‍ಗೆ ಕೊರೊನಾ ಪಾಸಿಟಿವ್ ಆಗಿದೆ.

    ಈಗಾಗಲೇ ಟಿ20 ಮತ್ತು ಏಕದಿನ ಸರಣಿ ಮುಗಿಸಿಕೊಂಡು ಭಾರತ ತಂಡ ಇಂದು ತವರಿಗೆ ಆಗಮಿಸುವ ನಿರೀಕ್ಷೆ ಇದ್ದು, ಕೊರೊನಾ ಪಾಸಿಟಿವ್ ಬಂದ ಆಟಗಾರರು ಐಸೋಲೇಷನ್ ನಲ್ಲಿ ಅಲ್ಲೇ ಉಳಿದುಕೊಳ್ಳುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಪದಕ ಖಚಿತ – ಸೆಮಿಗೆ ಲವ್ಲೀನಾ ಎಂಟ್ರಿ

    ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದರೆ, ಟಿ20 ಸರಣಿಯನ್ನು 1-2 ಅಂತರದಲ್ಲಿ ಸೋತು ಮಿಶ್ರ ಫಲ ಅನುಭವಿಸಿದೆ.

  • ಆರ್​ಸಿಬಿ ಬಿಟ್ಟರೆ ಈ ತಂಡದಲ್ಲಿ ಆಡುವ ಬಯಕೆ ಇದೆ ಎಂದ ಚಹಲ್

    ಆರ್​ಸಿಬಿ ಬಿಟ್ಟರೆ ಈ ತಂಡದಲ್ಲಿ ಆಡುವ ಬಯಕೆ ಇದೆ ಎಂದ ಚಹಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇರದೇ ಇದ್ದಿದ್ದರೆ ಈ ತಂಡದಲ್ಲಿ ಆಡುತ್ತಿದ್ದೆ ಎಂದು ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.

    ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಚಹಲ್, ನಾನು ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ಪರ ಆಡದೇ ಇದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದೆ ಎಂದು ತಮ್ಮ ಬಯಕೆಯನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಕ್ರಿಸ್ ಗೇಲ್ ಮುಂದೆ ಮೋಡಿ ಮಾಡದ ಚಹಲ್ ಬಾಡಿ

    ಸಿಎಸ್‍ಕೆ ತಂಡದಲ್ಲಿ ಧೋನಿ ನಾಯಕರಾಗಿದ್ದಾರೆ ಅವರ ನಾಯಕತ್ವದಲ್ಲಿ ಆಡಲು ಬಯಸುತ್ತೇನೆ. ಚೆನ್ನೈ ತಂಡ ಮೂರು ಬಾರಿ ಚಾಂಪಿಯನ್ ಆಗಿದೆ. ಹಾಗೆ ತಂಡದಲ್ಲಿ ಸ್ಪಿನ್ನರ್‍ ಗೆ ಹೆಚ್ಚಿನ ಮಹತ್ವ ಇದೆ ಹಾಗಾಗಿ ಆಡಲು ನಾನು ಇಷ್ಟ ಪಡುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    2011ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್‍ಗೆ ಪಾರ್ದಾಪಣೆ ಮಾಡಿದ ಚಹಲ್ ನಂತರ 2014ರಲ್ಲಿ ಆರ್​ಸಿಬಿ ತಂಡಕ್ಕೆ ಸೇರಿಕೊಂಡರು. ಆ ಬಳಿಕ ಆರ್​ಸಿಬಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಚಹಲ್ ಐಪಿಎಲ್‍ನಲ್ಲಿ ಈ ವರೆಗೆ ಒಟ್ಟು 106 ಪಂದ್ಯಗಳನ್ನು ಆಡಿ 125 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ:ಕೊಹ್ಲಿ, ವಿಲಿಯಮ್ಸನ್ ನಡುವಿನ ನಾಯಕತ್ವ ವಿಭಿನ್ನತೆ ನೋಡಲು ಕಾತುರ-ಬ್ರೆಟ್ ಲೀ

    ಭಾರತ ತಂಡದ ಪರ ಚಹಲ್ ಒಟ್ಟು 54 ಏಕದಿನ ಪಂದ್ಯದಿಂದ 92 ವಿಕೆಟ್, 42 ಟಿ20 ಪಂದ್ಯದಿಂದ 62 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಚಹಲ್ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತದ ಇನ್ನೊಂದು ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಿ ಆಯ್ಕೆ ಆಗುವ ನಿರೀಕ್ಷೆ ಇದೆ.

  • ಕ್ರಿಸ್ ಗೇಲ್ ಮುಂದೆ ಮೋಡಿ ಮಾಡದ ಚಹಲ್ ಬಾಡಿ

    ಕ್ರಿಸ್ ಗೇಲ್ ಮುಂದೆ ಮೋಡಿ ಮಾಡದ ಚಹಲ್ ಬಾಡಿ

    ಅಹಮದಾಬಾದ್: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆಟಗಾರರು ಆನ್ ಫೀಲ್ಡ್ ನಲ್ಲಿ ಎಷ್ಟು ಮನರಂಜನೆ ನೀಡುತ್ತಾರೋ ಅಷ್ಟೇ ಆಫ್ ಫೀಲ್ಡ್ ನಲ್ಲೂ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇದೀಗ ಕ್ರಿಸ್ ಗೇಲ್ ಮತ್ತು ಯಜುವೇಂದ್ರ ಚಹಲ್ ಮೈದಾನದಲ್ಲಿ ಕ್ರಿಕೆಟ್ ಬಿಟ್ಟು ದೇಹದಾರ್ಢ್ಯ ಸ್ಪರ್ಧೆಗಿಳಿದಿದ್ದಾರೆ.

    ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಕ್ರಿಸ್ ಗೇಲ್ ಸದಾ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆರ್​ಸಿಬಿ ತಂಡದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಜೊತೆ ಮೈದಾನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಗಿಳಿಯುವ ಮೂಲಕ ಸುದ್ದಿಯಾಗಿದ್ದಾರೆ.

    ಗೇಲ್ ಮತ್ತು ಚಹಾಲ್ ಹಲವು ವರ್ಷಗಳ ಕಾಲ ಜೊತೆಯಾಗಿ ಆರ್​ಸಿಬಿ ತಂಡದ ಪರ ಆಡುತ್ತಿದ್ದರು. ಈ ವೇಳೆ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿರು. ಆದರೆ ಇದೀಗ ಗೇಲ್ ಆರ್‍ಸಿಬಿ ತಂಡವನ್ನು ಬಿಟ್ಟು ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದರೂ ಕೂಡ ಆರ್​ಸಿಬಿ ಆಟಗಾರ ಚಹಾಲ್ ಜೊತೆ ಆ ಸ್ನೇಹವನ್ನು ಹಾಗೆ ಉಳಿಸಿಕೊಂಡಿದ್ದಾರೆ. ಹಾಗಾಗಿ ತಮಾಷೆಗಾಗಿ ಆರ್​ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ಬಳಿಕ ಬಾಡಿ ಬಿಲ್ಡಿಂಗ್ ಮಾಡಿದ್ದಾರೆ. ಇದರಲ್ಲೂ ಕೂಡ ಗೇಲ್ ಅವರ ದೈತ್ಯ ದೇಹದ ಮುಂದೆ ಚಹಲ್ ಮೋಡಿ ಮಾಡಲಾಗದೇ ಸೋತಿದ್ದಾರೆ.

     

    View this post on Instagram

     

    A post shared by Punjab Kings (@punjabkingsipl)

    ಈ ಮೊದಲು ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯದಲ್ಲಿ ಚಹಲ್ ಅವರ ಓವರ್‍ ನಲ್ಲಿ ಗೇಲ್ ಎರಡು ಭರ್ಜರಿ ಸಿಕ್ಸರ್ ಹೊಡೆದು ಮೈದಾನದಲ್ಲೇ ಚಹಾಲ್‍ಗೆ ಚಮಕ್ ಕೊಟ್ಟಿದ್ದರು. ಪಂದ್ಯ ಮುಗಿದ ಬಳಿಕ ಚಹಾಲ್ ಗೇಲ್‍ಗೆ ಬಾಡಿ ಬಿಡ್ಡಿಂಗ್‍ನಲ್ಲಿ ಚಮಕ್ ನೀಡಲು ಹೋದಂತೆ ಪೋಸ್ ನೀಡಿದ್ದಾರೆ.

    ಗೇಲ್ ತನ್ನ 41ನೇ ವಯಸ್ಸಿನಲ್ಲೂ ಕೂಡ ದೇಹವನ್ನು ದಷ್ಟಪುಷ್ಟವಾಗಿ ಬೆಳೆಸಿಕೊಂಡು ಫಿಟ್ ಆಗಿ ಕಾಣುತ್ತಿದ್ದರೆ. ಚಹಲ್ ಸಣ್ಣಗಿನ ಮೈಕಟ್ಟನ್ನು ಹೊಂದಿ ಸ್ಪಿನ್ ಜಾದೂ ಮಾಡುತ್ತಿದ್ದಾರೆ.

  • ಜಡೇಜಾ ಬದಲು ಚಹಲ್‌ ಆಟ – ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾ ನಡೆ

    ಜಡೇಜಾ ಬದಲು ಚಹಲ್‌ ಆಟ – ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾ ನಡೆ

    – ವಿರೋಧ ವ್ಯಕ್ತಪಡಿಸಿದ ಆಸೀಸ್‌ ಕೋಚ್‌
    – ಗಾಯಗೊಂಡಿದ್ದರೂ 9 ರನ್‌ ಸೇರಿಸಿದ್ದ ಜಡೇಜಾ

    ಕ್ಯಾನ್ಪೆರಾ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಜಡೇಜಾ ಅವರ ಬದಲಿಗೆ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಮಿಚೆಲ್‌ ಸ್ಟಾರ್ಕ್‌ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರಿನ ಎರಡನೇ ಎಸೆತ ಬೌನ್ಸರ್‌ ಆಗಿತ್ತು. ಈ ಎಸೆತ ಜಡೇಜಾ ಹೆಲ್ಮೆಟ್‌ಗೆ ಬಡಿದು ಬ್ಯಾಕ್‌ವರ್ಡ್‌ ಪಾಯಿಂಟ್‌ಗೆ ಹೋಯಿತು. ಜಡೇಜಾ ಈ ಎಸೆತದಲ್ಲಿ ಒಂದು ರನ್‌ ಓಡಿದರೂ ಅಂಗಣಕ್ಕೆ ವೈದ್ಯಾಧಿಕಾರಿ ಬಂದು ಕನ್ಕಷನ್‌ ಪರೀಕ್ಷೆ ನಡೆಸಿರಲಿಲ್ಲ.

    ನಂತರದ ಎಸೆತದಲ್ಲಿ ವಾಷಿಂಗ್ಟನ್‌ ಸುಂದರ್‌ ಔಟಾದ ಕಾರಣ ಮತ್ತೆ ಜಡೇಜಾ ಸ್ಟ್ರೈಕ್‌ಗೆ ಬಂದರು. 4 ಮತ್ತು 5ನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಜಡೇಜಾ ಕೊನೆಯ ಎಸೆತದಲ್ಲಿ 1 ರನ್‌ ತೆಗೆಯುವ ಮೂಲಕ ತಂಡದ ಮೊತ್ತವನ್ನು 160ಕ್ಕೆ ತಂದು ನಿಲ್ಲಿಸಿದರು.

    ಇನ್ನಿಂಗ್ಸ್‌ ಬ್ರೇಕ್‌ ಸಂದರ್ಭದಲ್ಲಿ ಭಾರತ ತಂಡ ಜಡೇಜಾ ಅವರಿಗೆ ಗಂಭೀರವಾದ ಗಾಯವಾದ ಕಾರಣ ಅವರ ಬದಲು ಯಜುವೇಂದ್ರ ಚಹಲ್‌ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

    ಟೀಮ್‌ ಇಂಡಿಯಾ ಕನ್ಕಷನ್‌ ಸಬ್‌ ತೆಗೆದುಕೊಳ್ಳುತ್ತಿರುವುದಾಗಿ ಮ್ಯಾಚ್‌ ರೆಫ್ರಿ ಡೇವಿಡ್‌ ಬೂನ್‌ ಗಮನಕ್ಕೆ ತಂದಿದೆ. ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್ ಮತ್ತು ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ಗೆ ತಿಳಿಸಿದಾಗ ಲ್ಯಾಂಗರ್‌ ಅಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಡೇವಿಡ್‌ ಬೂನ್‌ ಎದುರು ವಾದಕ್ಕಿಳಿದ ಲ್ಯಾಂಗರ್‌ ಇದು ಸರಿಯಾದ ನಿರ್ಧಾರ ಅಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಐಸಿಸಿ ನಿಯಮಗಳನ್ನು ಪಾಲನೆ ಮಾಡಬೇಕಾದ ಕಾರಣ ರೆಫ್ರಿ ಡೇವಿನ್‌ ಬೂನ್‌ ಬದಲಿ ಆಟಗಾರನನ್ನು ಆಡಿಸಲು ಒಪ್ಪಿಗೆ ನೀಡಿದರು.  ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಚರ್ಚೆ ಏನು?
    ರವೀಂದ್ರ ಜಡೇಜಾ ಆಲ್‌ರೌಂಡರ್‌ ಆಟಗಾರನಾಗಿದ್ದು ಗಾಯಗೊಂಡ ಅವರ ಬದಲು ಚಹಲ್‌ ಅವರನ್ನು ಆಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಅಷ್ಟೇ ಅಲ್ಲದೇ ಜಡೇಜಾ ಗಂಭೀರವಾಗಿ ಗಾಯಗೊಂಡಿದ್ದರೆ ಅರ್ಧದಲ್ಲೇ ಕ್ರೀಡಾಂಗಣವನ್ನು ತೊರೆಯಬೇಕಿತ್ತು. ಆದರೆ ನಂತರ 9 ರನ್‌ ಹೊಡೆದಿದ್ದಾರೆ. ಹೀಗಿರುವಾಗ ಗಾಯದ ಬಗ್ಗೆಯೇ ಅನುಮಾನ ಎದ್ದಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

    ಈ ಹಿಂದೆ ಜಡೇಜಾ ಅವರನ್ನು ಟೀಕೆ ಮಾಡಿ ಸುದ್ದಿಯಾಗಿದ್ದ ವೀಕ್ಷಕ ವಿವರಣೆಗಾರ ಸಂಜಯ್‌ ಮಾಂಜ್ರೇಕರ್‌, ಈ ಪಂದ್ಯದ ವೇಳೆ ಭಾರತ ತಂಡ ಕನ್ಕಷನ್‌ ಸಬ್‌ಸ್ಟಿಟ್ಯೂಟ್‌ ನಿಯಮದ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎಂದು ಹೇಳಿ ಬಿಸಿ  ಚರ್ಚೆಗೆ ತುಪ್ಪ ಸುರಿದರು. ಅಷ್ಟೇ ಅಲ್ಲದೇ ಐಸಿಸಿ ಈ ನಿಯಮದ ದುರ್ಬಳಕೆ ಆಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

    ಈ ಸಂದರ್ಭದಲ್ಲಿ ಕಾಮೆಂಟೇಟರ್‌ ಹರ್ಷ ಭೋಗ್ಲೆ, ಕೆಲ ಪ್ರಕರಣಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತಡವಾಗಿ ಕನ್ಕಷನ್‌ ಗುಣಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಳೆದ ವರ್ಷ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾ ತಂಡ ಇದೇ ರೀತಿ ತಡವಾಗಿ ಕನ್ಕಷನ್‌ ಸಬ್‌ ತೆಗೆದುಕೊಂಡ ಉದಾಹರಣೆ ಇದೆ ಎಂದು ಹೇಳಿ ಟೀಂ ಇಂಡಿಯಾ ನಡೆಯನ್ನು ಸಮರ್ಥಿಸಿಕೊಂಡರು.

    ಐಸಿಸಿ ನಿಯಮ ಏನು?
    ಬ್ಯಾಟಿಂಗ್‌ ವೇಳೆ ಚೆಂಡು ಬ್ಯಾಟ್ಸ್‌ಮನ್‌ನ ಹೆಲ್ಮೆಟ್‌ಗೆ ಬಡಿದರೆ ಆವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಬದಲಿ ಆಟಗಾರನನ್ನು ಆಡಿಸಬಹದು ಎಂದು ಐಸಿಸಿ 2019ರ ಜುಲೈನಲ್ಲಿ ನಿಯಮವನ್ನು ತಂದಿತ್ತು. ಈ ರೀತಿ ಆಡುವ 11ರ ಬಳಗಕ್ಕೆ ಬದಲಿ ಆಟಗಾರನಾಗಿ ಸೇರುವ ಆಟಗಾರನಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮಾಡುವ ಅವಕಾಶವನ್ನು ನೀಡಲಾಗುತ್ತದೆ.

    ಈ ಪಂದ್ಯದಲ್ಲಿ ಜಡೇಜಾ ಔಟಾಗದೇ 44 ರನ್‌(23 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಚಹಲ್‌ 4 ಓವರ್‌ ಎಸೆದು 25 ರನ್‌ ನೀಡಿ 3 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

     

  • ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಐಪಿಎಲ್ 2020ರ ಡೆಬ್ಯು ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಿಂಚಿದ್ದಾರೆ. ಪಂದ್ಯದ ಬಳಿಕ ಪ್ರಶಸ್ತಿ ಪಡೆಯುತ್ತಿದ್ದಂತೆ ಚಹಲ್ ಭಾವಿ ಪತ್ನಿ ಧನಶ್ರೀ ಟಿವಿ ಎದುರೇ ಸಂತೋಷದಿಂದ ಕುಣಿದು ಡ್ಯಾನ್ಸ್ ಮಾಡಿದ್ದಾರೆ.

    ಸನ್‍ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲೂ ಮಿಂಚಿನ ಬೌಲಿಂಗ್ ದಾಳಿ ಮಾಡಿದ್ದ ಚಹಲ್ ಎರಡು ಎಸೆತಗಳಲ್ಲಿ ಎದುರಾಳಿ ತಂಡದ ಪ್ರಮುಖ 2 ವಿಕೆಟ್‍ಗಳನ್ನು ಉರುಳಿಸಿ ಪಂದ್ಯಕ್ಕೆ ತಿರುವು ನೀಡಿದ್ದರು. ಅವರ ಉತ್ತಮ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಇದನ್ನೂ ಓದಿ: ಸಿಎಸ್‍ಕೆಗೆ ಮೊದಲ ಸೋಲು – ಕ್ರೀಸ್‌‍ನಲ್ಲಿದ್ದೂ ಮೋಡಿ ಮಾಡದ ಧೋನಿ, ಡುʼಪ್ಲೆಸಿಸ್ ಅಬ್ಬರ ವ್ಯರ್ಥ 

    ಮನೆಯಲ್ಲಿಯೇ ಪಂದ್ಯವನ್ನು ಕುಳಿತು ವೀಕ್ಷಣೆ ಮಾಡುತ್ತಿದ್ದ ಚಹಲ್ ಭಾವಿ ಪತ್ನಿ ಧನಶ್ರೀ, ಟಿವಿ ಎದುರೇ ಸಂತೋಷದಿಂದ ಸಂಭ್ರಮಿಸಿದ್ರು. ಈ ಸಂದರ್ಭದ ವಿಡಿಯೋ, ಫೋಟೋಗಳನ್ನು ಧನಶ್ರೀ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಷಣ ನನಗೆ ಬಹಳ ವಿಶೇಷ ಕ್ಷಣವಾಗಿದ್ದು, ನಿಮಗೆ ಯಾವಾಗಲೂ ನನ್ನ ಬೆಂಬಲ, ಪ್ರೀತಿ ಲಭಿಸುತ್ತೆ. ದಿನದ ಕೊನೆಯಲ್ಲಿ ಇದು ಒಂದು ಪಂದ್ಯ, ಕೊನೆ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ಆದರೆ ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ಕಾರಣ ಮೊದಲ ಪಂದ್ಯ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಪ್ರೇಯಸಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಚಹಲ್, ಸೋ ಕ್ಯೂಟ್ ಲವ್. ಥ್ಯಾಂಕ್ಸ್ ಎಂದು ಹೇಳಿದ್ದಾರೆ.

     

    View this post on Instagram

     

    Hook step at it best ???? hidden talent @yuzi_chahal23 ❤️

    A post shared by Dhanashree Verma (@dhanashree9) on

    ಅಂದಹಾಗೇ ಚಹಲ್ ಹಾಗೂ ಧನುಶ್ರೀ ಅವರ ನಿಶ್ಚಿತಾರ್ಥ ಎರಡು ಕುಟುಂಬಗಳ ಸಮ್ಮುಖದಲ್ಲಿ ಆಗಸ್ಟ್ 8 ರಂದು ನಡೆದಿತ್ತು. ಈ ವಿಚಾರವನ್ನು ಸ್ವತಃ ಚಹಲ್ ತಮ್ಮ ಇನ್‍ಸ್ಟಾದಲ್ಲಿ ಘೋಷಿಸಿದ್ದರು. ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದಾರೆ. ಅಲ್ಲದೇ ಡಾಕ್ಟರ್, ಕೊರಿಯೋಗ್ರಾಫರ್, ಯೂಟ್ಯೂಬರ್ ಮತ್ತು ಧನಶ್ರೀ ವರ್ಮಾ ಕಂಪನಿಯ ಸ್ಥಾಪಕಿ ಎಂದು ಇನ್‍ಸ್ಟಾಗ್ರಾಂ ಧನಶ್ರೀ ಬರೆದುಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕ ಭಾವಿ ಪತಿ ಚಹಲ್ ಆಡಿದ ಮೊದಲ ಪಂದ್ಯವನ್ನು ಧನಶ್ರೀ ವಿಕ್ಷೀಸಿದ್ದರು. ಇದನ್ನೂ ಓದಿ: ತೀರ್ಪು ಬದಲಿಸಿದ ಅಂಪೈರ್ ಜೊತೆಗೆ ಧೋನಿ ವಾದ- ಸಾಕ್ಷಿ ಗರಂ

     

    View this post on Instagram

     

    08.08.20 ❤️ Love ????

    A post shared by Dhanashree Verma (@dhanashree9) on

    ಉಳಿದಂತೆ ನಾಳೆ ಆರ್‌ಸಿಬಿ ತಂಡ ಕಿಂಗ್ಸ್ ಇಲೆವೆನ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಮಯಾಂಕ್ ಸ್ಫೋಟಕ ಆಟದ ನಡುವೆಯೂ ಕಿಂಗ್ಸ್ ಇಲೆವೆನ್ ತಂಡ ಗೆಲುವಿನೊಂದಿಗೆ ಕಮ್‍ಬ್ಯಾಕ್ ಮಾಡಲು ಸಿದ್ಧವಾಗುತ್ತಿದೆ. ಇತ್ತ ಟೂರ್ನಿಯನ್ನು ಆರ್‌ಸಿಬಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.

  • ಮುದ್ದಾಗಿ ಕಾಣುತ್ತಿರುವೆ ರೋಹಿತ್ ಬಾಯ್- ಹಿಟ್‍ಮ್ಯಾನ್ ಕಾಲೆಳೆದ ಚಹಲ್

    ಮುದ್ದಾಗಿ ಕಾಣುತ್ತಿರುವೆ ರೋಹಿತ್ ಬಾಯ್- ಹಿಟ್‍ಮ್ಯಾನ್ ಕಾಲೆಳೆದ ಚಹಲ್

    ನವದೆಹಲಿ: ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅದರಲ್ಲೂ ಲಾಕ್‍ಡೌನ್ ಆದಾಗಿನಿಂದ ಚಹಲ್ ಹಲವಾರು ಇನ್‍ಸ್ಟಾಗ್ರಾಮ್ ಲೈವ್ ಚಾಟಿಂಗ್ ಮಾಡಿದ್ದಾರೆ ಹಾಗೂ ಸಂದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ಕಾಮೆಂಟ್‍ಗಳ ಮೂಲಕ ಸಹ ಆಟಗಾರರ ಕಾಲೆಳೆದಿದ್ದಾರೆ.

    ಭಾರತೀಯ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿನ ತಮಾಷೆಯ ಕ್ರಿಕೆಟಿಗರಲ್ಲಿ ಒಬ್ಬರಾದ ಚಹಲ್ ಟೀಂ ಇಂಡಿಯಾ ಓಪನರ್ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಈ ಇಬ್ಬರೂ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರರ ಕಾಲು ಎಳೆಯುತ್ತಲೇ ಇರುತ್ತಾರೆ.

    ಯಜುವೇಂದ್ರ ಚಹಲ್ ಬುಧವಾರ ರೋಹಿತ್ ಶರ್ಮಾ ಹಾಗೂ ಅವರಂತೆ ಕಾಣುವ ಯುವತಿಯ ಫೋಟೋವನ್ನು ಸೇರಿಸಿ ಟ್ವಿಟ್ ಮಾಡಿದ್ದಾರೆ. ಜೊತೆಗೆ “ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದಿರಾ ರೋಹಿತ್ ಶರ್ಮಾ ಬಾಯ್” ಎಂದು ಬರೆದುಕೊಂಡು ತಮಾಷೆ ಮಾಡಿದ್ದಾರೆ.

    ಹಿಟ್‍ಮ್ಯಾನ್ ಈವರೆಗೂ ಚಹಲ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರು ಕೂಡ ಚಹಲ್ ಅವರ ಕಾಲು ಎಳೆಯುವ ಅವಕಾಶವನ್ನು ಬಿಡುವುದಿಲ್ಲ. ಹೀಗಾಗಿ ಇಬ್ಬರ ತಮಾಷೆಯನ್ನು ಮುಂದುವರಿಯಲಿದೆ ಎಂದು ನೆಟ್ಟಿಗರು ಕಾಯುತ್ತಿದ್ದಾರೆ.

  • ‘ಸಿಕ್ಸರ್ ಹೊಡೆದ ಚೆಂಡನ್ನು ಬ್ಯಾಟ್ಸ್‌ಮನ್ ತೆಗೆದುಕೊಂಡು ಬರಲಿ’

    ‘ಸಿಕ್ಸರ್ ಹೊಡೆದ ಚೆಂಡನ್ನು ಬ್ಯಾಟ್ಸ್‌ಮನ್ ತೆಗೆದುಕೊಂಡು ಬರಲಿ’

    ಮುಂಬೈ: ಕೊರೊನಾ ಎಫೆಕ್ಟ್ ನಿಂದ ಹಲವು ಕ್ರೀಡಾ ಚಟುವಟಿಕೆಗಳನ್ನು ಮುಂದೂಡಲಾಗಿದೆ. ಆಟಗಾರರು ಕೂಡ ಮನೆಯಲ್ಲೇ ಇರುವುದರಿಂದ ಮತ್ತೆ ಕ್ರೀಡಾ ಚಟುವಟಿಕೆಗಳು ಆರಂಭವಾದರೆ ಫಾರ್ಮ್‍ಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಟೀಂ ಇಂಡಿಯಾ ಆಟಗಾರ ಚಹಲ್ ಹೇಳಿದ್ದಾರೆ.

    ಆಟಗಾರರು ಬಹುಬೇಗ ಫಾರ್ಮ್‍ಗೆ ಮರಳಬೇಕಾದರೆ ಯಾವುದೇ ಟೂರ್ನಿಗೂ ಮುನ್ನ ಐಪಿಎಲ್ ನಿರ್ವಹಿಸಿದರೆ ಅದು ಸಹಕಾರಿಯಾಗುತ್ತದೆ ಎಂದು ಚಹಲ್ ಅಭಿಪ್ರಾಯಪಟ್ಟಿದ್ದಾರೆ.

    ಇದೇ ವೇಳೆ ಚೆಂಡನ್ನು ಶೈನ್ ಮಾಡಲು ಆಟಗಾರರು ಬಳಸುವ ವಿಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಚಹಲ್, ಚೆಂಡು ಹಳೆಯದಾದಂತೆ ಶೈನ್ ಉಳಿಸಿಕೊಳ್ಳಲಿದ್ದಾರೆ ಬೌಲರ್ ಗಳಿಂದ ಸ್ವಿಂಗ್ ಮಾಡಲು ಸಾಧ್ಯವಿಲ್ಲ. ಆಗ ವಿಕೆಟ್ ಪಡೆಯುವುದು ಕೂಡ ಕಷ್ಟಸಾಧ್ಯವಾಗುತ್ತದೆ. ಉಳಿದಂತೆ ಬ್ಯಾಟ್ಸ್ ಮನ್ ಸಿಕ್ಸರ್ ಸಿಡಿಸಿದರೆ ಆತನೇ ಆ ಚೆಂಡನ್ನು ಮತ್ತೆ ತಂಡುಕೊಡುವಂತೆ ಬೇಕು ಎಂಬ ನಿಯಮ ಜಾರಿ ಮಾಡುವ ಅಗತ್ಯವಿದೆ ಎಂದು ಚಹಲ್ ತಮಾಷೆಯಾಗಿ ಹೇಳಿದ್ದಾರೆ.

    ಕೊರೊನಾ ಕಾರಣದಿಂದ ಅಕ್ಟೋಬರ್ ನಲ್ಲಿ ಆರಂಭವಾಗಬೇಕಿರುವ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಅನುಮಾನ ಉಂಟಾಗುತ್ತಿದೆ. ಈಗಾಗಲೇ ಐಸಿಸಿ ಸಭೆ ನಡೆಸಿ ವಿಶ್ವಕಪ್ ಆಯೋಜನೆ ಕುರಿತು ಚರ್ಚೆ ನಡೆಸಿದರು ಆ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಅಲ್ಲದೇ ಕೊರೊನಾ ತೀವ್ರತೆ ಇದೇ ರೀತಿ ಮುಂದುವರಿದರೆ ಟಿ20 ವಿಶ್ವಕಪ್ 2021ರ ಫೆಬ್ರವರಿ-ಮಾರ್ಚ್ ನಲ್ಲಿ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಈ ಚಿಂತನೆಗೆ ಪ್ರಮುಖ ಕಾರಣ ಅಕ್ಟೋಬರ್ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಖಾಲಿ ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೆ ಟೂರ್ನಿ ಆಯೋಜಿಸಲು ಐಸಿಸಿ ಸಿದ್ಧವಿಲ್ಲ ಎನ್ನಲಾಗಿದೆ.

  • ನಮ್ಮ ಬೆಂಗಳೂರು ಕುಟುಂಬ ರೆಡಿನಾ- ಕನ್ನಡದಲ್ಲೇ ಚಹಲ್ ಟ್ವೀಟ್

    ನಮ್ಮ ಬೆಂಗಳೂರು ಕುಟುಂಬ ರೆಡಿನಾ- ಕನ್ನಡದಲ್ಲೇ ಚಹಲ್ ಟ್ವೀಟ್

    – ಕನ್ನಡಿಗರ ಮನ ಗೆದ್ದ ಆರ್‌ಸಿಬಿ ತಂಡದ ಸ್ಪಿನ್ನರ್

    ಬೆಂಗಳೂರು: ಕ್ರಿಕೆಟ್ ಹಬ್ಬವೆಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರಿಮಿಯರ್ ಲೀಗ್‍ನ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗರ ಮನ ಗೆಲ್ಲಲು ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಬಳಸುತ್ತಿದೆ. ಇದೇ ಮಾದರಿಯಲ್ಲೇ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಕನ್ನಡದಲ್ಲೇ ಟ್ವೀಟ್ ಮಾಡಿ ಕನ್ನಡಿಗರ ಮನ ಗೆದ್ದಿದಾರೆ.

    ತಾವು ಬೌಲಿಂಗ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಚಹಲ್, ‘ನಮ್ಮ ಬೆಂಗಳೂರು ಕುಟುಂಬ ರೆಡಿನಾ’ ಎಂದು ಬರೆದುಕೊಂಡಿದ್ದಾರೆ. ಚಹಲ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ‘ಫಿದಾ ಆಗೋದೇ ಗುರು ನಮ್ಮ ಕನ್ನಡ ಟ್ವಿಟ್ ನೋಡಿ. ಬೇರೆ ರಾಜ್ಯದವರು ನಮ್ಮ ಕನ್ನಡ ಪದಬಳಕೆ ಮಾಡಿದಾಗ ಅದರಲ್ಲಿ ಸಿಗುವ ಮಜಾನೇ ಬೇರೆ. ಲವ್ ಯೂ ಬ್ರೋ. ಜೈ ಆರ್‌ಸಿಬಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

    ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್‍ಗೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 3ರಂದು ಚೆನ್ನೈಗೆ ಆಗಮಿಸಿ, ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನ ಚಿದಂಬರಂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ. ಈ ಬೆನ್ನಲ್ಲೇ ಆರ್‌ಸಿಬಿ ತಂಡವು ಅಭ್ಯಾಸಕ್ಕೆ ಸಿದ್ಧತೆ ನಡೆಸಿದೆ. ಹೀಗಾಗಿ ಚಹಾಲ್ ನಮ್ಮ ಬೆಂಗಳೂರು ಕುಟುಂಬ ರೆಡಿನಾ ಎಂದು ಕೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

    ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಚಾಂಪಿಯನ್‍ಶಿಪ್ ಆಗಿದೆ. ಆದರೆ ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

    2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ 2008ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ. ಇದನ್ನೂ ಓದಿ: ಐಪಿಎಲ್ ನಗದು ಬಹುಮಾನದಲ್ಲಿ ಶೇ.50ರಷ್ಟು ಕಡಿತ- ಬಿಸಿಸಿಐ ಹೇಳಿದ್ದೇನು?

    ಕಳೆದ ಆವೃತ್ತಿಯಲ್ಲಿ ಕೇಳಿ ಬಂದ ‘ಈ ಸಲ ಕಪ್ ನಮ್ದೆ’ ಘೋಷಣೆ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. 12 ಆವೃತ್ತಿಯಿಂದ ಒಂದೇ ಒಂದು ಬಾರಿಯೂ ಚಾಂಪಿಯನ್ ಆಗದಿದ್ದರೂ ಅಭಿಮಾನಿಗಳಿಗೆ ಆರ್‌ಸಿಬಿ ಮೇಲಿನ ಅಭಿಮಾನ ಕೊಂಚವೂ ಕೂಡ ಕಡಿಮೆಯಾಗಿಲ್ಲ. ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂಬ ವಿಶ್ವಾಸ ಅಭಿಮಾನಗಳಲ್ಲಿದೆ.