Tag: ಯಜಮಾನ

  • ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ ‘ಯಜಮಾನ’ ಚಿತ್ರದ ಶೂಟಿಂಗ್ ಸ್ಥಳಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ.

    ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಕೆಲ ಸಮಯ ಚಿತ್ರತಂಡದೊಂದಿಗೆ ಕಾಲ ಕಳೆದ ವಿಜಯಲಕ್ಷ್ಮೀ ಅವರು ದರ್ಶನ್ ರೊಂದಿಗೆ ಮಾತುಕತೆ ನಡೆಸಿ ಬಳಿಕ ಅಲ್ಲಿಂದ ತೆರಳಿದ್ದಾರೆ.

    ಈ ಹಿಂದೆಯೂ ಹಲವು ಬಾರಿ ದರ್ಶನ್  ಅಭಿನಯದ ಸಿನಿಮಾಗಳ ಚಿತ್ರೀಕರಣದ ವೇಳೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆದರೆ ಕೆಲ ವರ್ಷಗಳ ಗ್ಯಾಪ್ ಬಳಿಕ ಪತಿಯ ಸಿನಿಮಾ ಚಿತ್ರೀಕರಣದ ವೇಳೆ ವಿಜಯಲಕ್ಷ್ಮೀ ಕಾಣಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ಪರಸ್ಪರ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸತತ ಎರಡ್ಮೂರು ತಿಂಗಳಿನಿಂದ ಯಜಮಾನ ಸಿನಿಮಾ ಚಿತ್ರೀಕರಣದಲ್ಲಿ ಭಾಗಹಿಸುತ್ತಿರುವ ದರ್ಶನ್ ನಿರಂತರ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಅಂತಿಮ ಹಂತ ತಲುಪಿದೆ. ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ ಹೇಗಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಇದೆ. ದರ್ಶನ್ ರೊಂದಿಗೆ ರಶ್ಮಿಕಾ ಮಂದಣ್ಣ ಜೋಡಿಯನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ್ಶನ್ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ಮಾಡಿಲ್ಲ: ನಿರ್ಮಾಪಕಿ ಶೈಲಜಾ ನಾಗ್

    ದರ್ಶನ್ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ಮಾಡಿಲ್ಲ: ನಿರ್ಮಾಪಕಿ ಶೈಲಜಾ ನಾಗ್

    ಬೆಂಗಳೂರು: ‘ಯಜಮಾನ’ ಚಿತ್ರದ ಚಿತ್ರೀಕರಣದ ವೇಳೆ ಚಾಲೆಜಿಂಗ್ ಸ್ಟಾರ್ ದರ್ಶನ್ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ನಡೆಸಿಲ್ಲ ಎಂದು ನಿರ್ಮಾಪಕಿ ಶೈಲಜಾ ನಾಗ್ ಹೇಳಿದ್ದಾರೆ.

    ಯಜಮಾನ ಸಿನಿಮಾ ಚಿತ್ರೀಕರಣದ ವೇಳೆ ಸಹ ಕಲಾವಿದ ಶಿವಶಂಕರ್ ಎಂಬವರು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ಚಿತ್ರತಂಡ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಶೂಟಿಂಗ್ ರೆಕಾರ್ಡ್ ಮಾಡಿದ್ದಕ್ಕೆ ದರ್ಶನ್ ಹೊಡೆದಿದ್ದಾರೆ ಎನ್ನುವ ವಿಚಾರಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಖಾಸಗಿ ಸ್ಟುಡಿಯೋವೊಂದರಲ್ಲಿ ಹಾಡಿನ ಚಿತ್ರೀಕರಣವೊಂದು ಮಾಡುತ್ತಿದ್ದೇವು. ಈ ಚಿತ್ರದ ಹಾಡಿಗಾಗಿ 450ಕ್ಕೂ ಹೆಚ್ಚು ನೃತ್ಯಗಾರರು ಹಾಗೂ ಸಹ ಕಲಾವಿದರು ಬಂದಿದ್ದಾರೆ. ಅದರಲ್ಲಿ ಒಬ್ಬ ಸಹ ಕಲಾವಿದ ಬೆಳಗ್ಗೆಯಿಂದ ಎರಡು ಬಾರಿ ಮೊಬೈಲ್‍ನಲ್ಲಿ ಚಿತ್ರೀಕರಣವನ್ನು ಸೆರೆಹಿಡಿದಿದ್ದ. ಹೀಗೆ ಸಹ ಕಲಾವಿದ ಮೊಬೈಲಿನಲ್ಲಿ ಚಿತ್ರೀಕರಿಸುವಾಗ ಚಿತ್ರತಂಡದಲ್ಲಿ ಆತನನ್ನು ಎಚ್ಚರಿಸಿದ್ದರು. ಈ ರೀತಿ ಮಾಡಬೇಡ ನಿನ್ನನ್ನು ಹಣ ನೀಡಿ ಅಭಿನಯಕ್ಕೆ ಕರೆಸಿಕೊಂಡಿದ್ದೇವೆ. ನೀನು ಈ ರೀತಿ ಮಾಡಬೇಡ ಎಂದು ಹೇಳಿದರೂ ಆತ ಪದೇ ಪದೇ ಈ ರೀತಿ ಮಾಡುತ್ತಿದ್ದನು ಎಂದು ವಿವರಿಸಿದರು.

    ಆ ಸಹ ಕಲಾವಿದನನ್ನು ಪದೇ ಪದೇ ಎಚ್ಚರಿಸಿದ್ದರೂ ಈ ರೀತಿ ಮಾಡಿದ್ದನ್ನು ನೋಡಿ ಗಂಭೀರವಾಗಿ ಆತನನ್ನು ಎಚ್ಚರಿಸಿದ್ದೇವು. ನಮ್ಮ ತಂಡದಲ್ಲಿ ಯಾರೇ ಇರಲಿ ನಾವು ಅವರನ್ನು ಮೊಬೈಲಿನಲ್ಲಿ ಚಿತ್ರೀಕರಿಸಬೇಡಿ ಎಂದು ಎಚ್ಚರಿಸುತ್ತೇವೆ. ಚಿತ್ರಮಂದಿರದಲ್ಲಿ ತೋರಿಸುವ ಸಲುವಾಗಿ ನಾವು ಹಾಡನ್ನು ಚಿತ್ರೀಕರಿಸುತ್ತಿದ್ದೇವೆ. ಆದರೆ ಸಹ ಕಲಾವಿದ ಈ ರೀತಿ ಮಾಡುವುದರಿಂದ ಎಲ್ಲರೂ ತಮ್ಮ ಮೊಬೈಲಿನಲ್ಲೇ ಹಾಡನ್ನು ನೋಡಿದರೆ, ನಾವು ಚಿತ್ರೀಕರಣ ಮಾಡುವುದು ಯಾವುದೇ ಉಪಯೋಗವಿರುದಿಲ್ಲ. ಹಾಗಾಗಿ ನಾವು ಅದನ್ನು ವಿರೋಧಿಸಿದ್ದೇವು. ಆತನನ್ನು ತಡೆದದ್ದೇ ತಪ್ಪು ಎಂದರೆ ಅದೇ ತಪ್ಪಾಗುತ್ತದೆ ಎಂದು ತಿಳಿಸಿದರು.

    ನಮ್ಮ ಚಿತ್ರತಂಡದಲ್ಲಿರುವ ಎಲ್ಲರೂ ಆತನನ್ನು ಎಚ್ಚರಿಸಿದ್ದರು. ಸ್ಟುಡಿಯೋಗೆ ಬಾಡಿಗೆ ಕಟ್ಟಿ, ಸೆಟ್ ಹಾಕಿ ಹಾಡಿನ ಚಿತ್ರೀಕರಣ ಮಾಡುವಾಗ ಆತ ನಮ್ಮದೇ ಚಿತ್ರವನ್ನು ಚಿತ್ರೀಕರಣ ಮಾಡಿದರೆ ನಾವು ಅದನ್ನು ಪ್ರಶ್ನಿಸಲೇ ಬೇಕಾಗುತ್ತದೆ. ಹಾಗಾಗಿ ಚಿತ್ರತಂಡದಲ್ಲಿರುವವರು ಎಲ್ಲರೂ ಆತನನ್ನು ಪ್ರಶ್ನಿಸಿದ್ದಾರೆ. ಸದ್ಯ ಈಗ ಯಾವುದೇ ಸಮಸ್ಯೆಯಿಲ್ಲದೇ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ದರ್ಶನ್ ಅವರೇ ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ದರ್ಶನ್ ಆ ಸಹ ಕಲಾವಿದನನ್ನು, “ಅಪ್ಪ, ನೀನು ಮೊಬೈಲ್ ಇಳಿಸು. ಎಲ್ಲರು ಬೆಳಗ್ಗೆಯಿಂದಲೂ ಎರಡು ಬಾರಿ ನಿನ್ನನ್ನು ಎಚ್ಚರಿಸುತ್ತಿದ್ದಾರೆ. ಈ ರೀತಿ ಮಾಡಬೇಡ” ಎಂದು ದರ್ಶನ್ ಹೇಳಿದರೆ ಹೊರತು ಆತನ ಮೇಲೆ ಹಲ್ಲೆ ಮಾಡಿಲ್ಲ ಎಂದು ಯಜಮಾನ ನಿರ್ಮಾಪಕಿ ಹಲ್ಲೆ ನಡೆದಿದೆ ಎನ್ನಲಾದ ಸುದ್ದಿಗೆ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೂಟಿಂಗ್ ಮುಗಿಸಿಕೊಂಡ ಯಜಮಾನ!

    ಶೂಟಿಂಗ್ ಮುಗಿಸಿಕೊಂಡ ಯಜಮಾನ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂಚೂರೂ ಗ್ಯಾಪು ಕೊಡದಂತೆ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಎರಡ್ಮೂರು ತಿಂಗಳ ಕಾಲ ಸತತವಾಗಿ ಈ ಚಿತ್ರಕ್ಕಾಗಿ ಸಮಯ ಮೀಸಲಿಟ್ಟಿದ್ದ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಇದೀಗ ಸಮಾಪ್ತಿಗೊಂಡಿದೆ.

    ಮೈಸೂರಿನಲ್ಲಿಯೇ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ಚಾಲೂ ಆಗಿತ್ತು. ಆ ನಂತರದಲ್ಲಿ ಮಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಚಿತ್ರೀಕರಣ ನಡೆದು ಇದೀಗ ಮೈಸೂರಿನಲ್ಲಿಯೇ ಅಂತಿಮ ಹಂತ ತಲುಪಿದೆ.

    ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದುಕೊಂಡಿದೆ. ಇದು ಇಡೀ ಚಿತ್ರದ ಆಂತರ್ಯದಂಥಾ ಹಾಡಂತೆ. ಅದನ್ನು ವಿಶೇಷವಾಗಿ ರೂಪಿಸಬೇಕೆಂಬ ಮಹದಾಸೆಯಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಅದಕ್ಕಾಗಿ ಈಗಾಗಲೇ ಚಿತ್ರತಂಡ ತಯಾರಿ ಆರಂಭಿಸಿದೆ. ಹಾಡು ಯಾವಾಗ ರೆಡಿಯಾದರೂ ಬಂದು ನಟಿಸೋ ಭರವಸೆಯನ್ನೂ ದರ್ಶನ್ ಕೊಟ್ಟಿದ್ದಾರಂತೆ.

    ಈ ಹಾಡಿನ ಜೊತೆಜೊತೆಗೇ ಉಳಿದ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಚಿತ್ರ ತಂಡ ತೀರ್ಮಾನಿಸಿದೆ. ದರ್ಶನ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರಂತೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ಕು ಹೇಗಿದೆ ಎಂಬುದರಿಂದ ಹಿಡಿದು ಅಭಿಮಾನಿಗಳಲ್ಲಿರೋ ಕುತೂಹಲ ಒಂದೆರಡಲ್ಲ. ಅದೆಲ್ಲವೂ ಆದಷ್ಟು ಬೇಗನೆ ತಣಿಯಲಿದೆ. ಯಾಕೆಂದರೆ ಮಿಂಚಿನ ವೇಗದಲ್ಲಿ ಎಲ್ಲ ಮುಗಿಸಿಕೊಂಡು ಚಿತ್ರವನ್ನು ಬಿಡುಗಡೆ ಮಾಡಲು ಬಿ ಸುರೇಶ್ ತೀರ್ಮಾನಿಸಿದ್ದಾರೆ.

  • ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಯಜಮಾನ ಚಿತ್ರಕ್ಕೆ ಬ್ರೇಕ್!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಯಜಮಾನ ಚಿತ್ರಕ್ಕೆ ಬ್ರೇಕ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಚಿತ್ರದ ಚಿತ್ರಿಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

    ಈ ಹಿಂದೆ ಚಿತ್ರೀಕರಣದ ಸಮಯದಲ್ಲಿ ದರ್ಶನ್ ಕೈಗೆ ಗಾಯ ಮಾಡಿಕೊಂಡಿದ್ದರು. ಆದರೆ ಈಗ ಅದರ ನೋವು ಕಾಣಿಸಿಕೊಂಡಿದೆ. ಹಾಗಾಗಿ ದರ್ಶನ್ ಹಾಗೂ ಚಿತ್ರತಂಡ ಮೇ 2ರಿಂದ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ದರ್ಶನ್ ಅವರಿಗೆ ಈ ಹಳೆಯ ಗಾಯದ ನೋವು ಕಾಣಿಸಿಕೊಂಡಿದೆ. ಇದರ ಜೊತೆಯಲ್ಲಿ ದರ್ಶನ್ ಅವರ ಕಾಲು ಕೂಡ ಟ್ವಿಸ್ಟ್ ಆಗಿದೆ ಎಂದು ಹೇಳಲಾಗಿದೆ.

    ಇತ್ತೀಚೆಗೆ ನಡೆದ ವಿನೋದ್ ಪ್ರಭಾಕರ್ ಸಿನಿಮಾದ ಮೂಹರ್ತದಲ್ಲೂ ದರ್ಶನ್ ಆಗಮಿಸಿದ್ದರು. ಈ ವೇಳೆ ಅವರ ಕೈಗೆ ಪೆಟ್ಟಾಗಿರುವುದು ತಿಳಿದು ಬಂದಿದೆ.

  • ಬಯಲಾಯ್ತು `ಯಜಮಾನ’ದಲ್ಲಿ ದರ್ಶನ್ ಪಾತ್ರದ ಮಹಾರಹಸ್ಯ !

    ಬಯಲಾಯ್ತು `ಯಜಮಾನ’ದಲ್ಲಿ ದರ್ಶನ್ ಪಾತ್ರದ ಮಹಾರಹಸ್ಯ !

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಮಹಾರಹಸ್ಯ ರಿವೀಲ್ ಆಗಿದ್ದು, ಯಜಮಾನ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ಗಾಂಧಿನಗರದಲ್ಲೊಂದು ಸುದ್ದಿ ಹರಿದಾಡುತ್ತಿದೆ.

    ಕುರುಕ್ಷೇತ್ರ ಮುಗಿಸಿಕೊಂಡು ದರ್ಶನ್ ನೇರವಾಗಿ ಯಜಮಾನನ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಅದ್ದೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾದ ಶೂಟಿಂಗ್ ಕೊನೆಯ ಹಂತ ತಲುಪುತ್ತಿದೆ. ಸದ್ಯಕ್ಕೆ ದರ್ಶನ್ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

    ನಿರ್ದೇಶಕ ಪೋನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಗೆ ಇಬ್ಬರು ನಾಯಕಿಯರು ಸಾಥ್ ನೀಡುತ್ತಿದ್ದಾರೆ. ಆದರೆ ಚಿತ್ರತಂಡ ಇದುವರೆಗೂ ದರ್ಶನ್ ಪಾತ್ರದ ಬಗ್ಗೆ ಮಾತ್ರ ರಿವೀಲ್ ಮಾಡಿರಲಿಲ್ಲ. ಇದೀಗ ಯಜಮಾನ ಸಿನಿಮಾದಲ್ಲಿ ದರ್ಶನ್ ಪಾತ್ರದ ಕುರಿತಾಗಿ ಸುಳಿವು ಸಿಕ್ಕಿದೆ.

    ದರ್ಶನ್ ಬೃಂದಾವನ ಸಿನಿಮಾದಲ್ಲಿ ಮಾಡ್ರನ್ ಶ್ರೀಕೃಷ್ಣನಾಗಿ ಕಮಾಲ್ ಮಾಡಿದ್ದರು. ಈಗ ಯಜಮಾನ ಸಿನಿಮಾದಲ್ಲಿ ಮುರಾರಿ ಅವತಾರವೆತ್ತಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಕ್ಲೀನ್ ಶೇವ್ ಲುಕ್‍ನಲ್ಲಿ ಯಜಮಾನ ಸೆಟ್‍ ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಶ್ರೀಕೃಷ್ಣನಾಗಿರಬಹುದು ಎಂಬ ಅನುಮಾನ ಮೂಡಿಸಿದೆ.

    ಸಂಗೊಳ್ಳಿ ರಾಯಣ್ಣ ಸಿನಿಮಾ ನಂತರ ದಚ್ಚು ದುರ್ಯೋಧನನ ಪಾತ್ರ ನಿರ್ವಹಿಸುತ್ತಾರೆ ಅನ್ನೋ ಸುದ್ದಿ ಕೇಳಿದ ಕೂಡಲೇ ಗಂಡೆದೆಯ ಗಂಡು ಜಗ್ಗುದಾದನಿಗೆ ಜೈಕಾರ ಹಾಕಿದ್ದರು. ಟೀಸರ್ ರಿಲೀಸ್ ಆದ ಮೇಲೆ ದುಯೋರ್ಧನನ ದೃಶ್ಯ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಇದೀಗ ಯಜಮಾನ ಶ್ರೀಕೃಷ್ಣನಾಗಿದ್ದಾರೆ ಎಂಬ ಸುದ್ದಿ ತಿಳಿದ ಮೇಲೆ ಸಿನಿಮಾ ಹೇಗಿರಬಹುದು? ಯಾವ್ ಆ್ಯಂಗಲ್‍ನಲ್ಲಿ ಯಜಮಾನ ಸಿನಿಮಾದ ಚಿತ್ರಕತೆ ಹೆಣೆದಿರಬಹುದು ಅಂತ ಅಭಿಮಾನಿಗಳು ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರೆ.

  • ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಹೊಗಳಿದ ಶಂಕರ್ ಅಶ್ವಥ್

    ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಹೊಗಳಿದ ಶಂಕರ್ ಅಶ್ವಥ್

    ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಶಂಕರ್ ಅಶ್ವಥ್ ಹೊಗಳಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಸಿನಿಮಾದಲ್ಲಿ ಅವಕಾಶ ಸಿಗದೇ ಕ್ಯಾಬ್ ಓಡಿಸುತ್ತಿದ್ದ ಶಂಕರ್ ಅಶ್ವಥ್ ಅವರಿಗೆ ದರ್ಶನ್ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದರು. ದರ್ಶನ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವಥ್ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ದರ್ಶನ್ ಜೊತೆ ಕಾಲ ಕಳೆದ ಅಶ್ವಥ್ ಚಾಲೆಂಜಿಂಗ್ ಸ್ಟಾರ್ ನನ್ನು ಹೊಗಳಿದ್ದಾರೆ. ಸದ್ಯ ಅವರು ದರ್ಶನ್ ಹಾಗೂ ಚಿತ್ರತಂಡದ ಜೊತೆ ಇರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಒಬ್ಬ ಮೇರು ನಟ ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದರೂ ನಾನು ಎಲ್ಲರಂತೆ ಸಾಮಾನ್ಯ ಎಂದು ನಿರೂಪಿಸಿ ಇನ್ನೂ ಎತ್ತರಕ್ಕೆ ಬೆಳೆದ ವ್ಯಕ್ತಿ ಶ್ರೀಯುತ ದರ್ಶನ್ ಅವರು ಎಂದು ಶಂಕರ್ ಅಶ್ವಥ್ ಚಾಲೆಂಜಿಂಗ್ ಸ್ಟಾರ್ ಬಗ್ಗೆ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ನಿಜಕ್ಕೂ ನಾನು ಊಬರ್ ಕ್ಯಾಬ್ ಚಾಲಕನಾಗಿದ್ದು, ಬಹಳ ಹೆಮ್ಮೆಯನ್ನು ತಂದಿದೆ. ಕಾರಣ ನೀವೆಲ್ಲಾ ಸ್ಪಂದಿಸಿದ್ದು. ಜನ ನನ್ನನ್ನು ಈಗ ಕಾಣುವ ರೀತಿ, ಗೌರವಿಸುತ್ತಿರುವುದನ್ನು ಕಂಡರೆ ಯಾವ ಜನ್ಮದ ಪುಣ್ಯವೋ? ಎಲ್ಲರಿಗೂ ಧನ್ಯವಾದಗಳು ಎಂದು ಶಂಕರ್ ಫೇಸ್‍ಬುಕ್ ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಈ ಚಿತ್ರದ ನಂತರ ಶಂಕರ್ ಅಶ್ವಥ್ ಅವರಿಗೆ ಬೇರೆ ಬೇರೆ ಸಿನಿಮಾದ ಅವಕಾಶಗಳು ಸಿಕ್ಕಿದ್ದು, ದರ್ಶನ್ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ. ಅಲ್ಲದೇ ದರ್ಶನ್ ಜೊತೆಯಿರುವ 3 ಫೋಟೋವನ್ನು ಫೇಸ್‍ಬುಕ್ ಪೋಸ್ಟ್ ಮಾಡುವ ಮೂಲಕ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ಸದ್ಯ ದರ್ಶನ್ ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಬಿ ಸುರೇಶ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ಪಿ. ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

  • ಯಜಮಾನ್ರು ರೆಸ್ಟ್ ತಗೋತಿದಾರೆ!

    ಯಜಮಾನ್ರು ರೆಸ್ಟ್ ತಗೋತಿದಾರೆ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಬಿಡುವಿಲ್ಲದೆ ಚಿತ್ರೀಕರಣ ನಡೆಸುತ್ತಿದೆ. ಮೈಸೂರಿನಲ್ಲಿ ಕಲಾ ನಿರ್ದೇಶಕ ಶಶಿಧರ ಅಡಪ ಅವರು ನಿರ್ಮಿಸುತ್ತಿರುವ ವಿಶೇಷ ಸೆಟ್ ನಲ್ಲಿ ಮನಕಲಕುವ ದೃಶ್ಯಗಳನ್ನು ನಿರ್ದೇಶಕ ಪೊನ್ನು ಕುಮಾರ್ ಚಿತ್ರೀಕರಿಸಿಕೊಂಡಿದ್ದಾರೆ.

    ಮಾರುಕಟ್ಟೆ ಸೆಟ್ ನಿರ್ಮಿಸಿ ಅಲ್ಲಿ ವಾರಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಇದೇ ಜಾಗದಲ್ಲಿ ಮಾರುಕಟ್ಟೆ ಸೆಟ್ ತೆಗೆದು ಬೇರೆ ಬಗೆಯ ಸೆಟ್ ನಿರ್ಮಿಸಬೇಕಿರುವುದರಿಂದ ಕಲಾವಿದರಿಗೆ ಒಂಚೂರು ರಿಲ್ಯಾಕ್ಸ್ ಪಡೆಯಲು ಅವಕಾಶ ಸಿಕ್ಕಂತಾಗಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಬೆಂಗಳೂರಿನ ಕಡೆ ಆಗಮಿಸಿದ್ದಾರಂತೆ. ಮೈಸೂರಿನಲ್ಲಿ ಕೆಂಡದಂಥಾ ಉರಿಬಿಸಿಲಿನಲ್ಲೂ ಗ್ಯಾಪು ತೆಗೆದುಕೊಳ್ಳದೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ದರ್ಶನ್ ಅವರಿಗೆ ಬಲು ಆಯಾಸವಾಗಿತ್ತಂತೆ. ಸಿಕ್ಕ ಸಣ್ಣ ಗ್ಯಾಪ್ ಕೂಡಾ ದರ್ಶನ್ ಅವರ ಪಾಲಿಗೆ ನಿಟ್ಟುಸಿರು ಬಿಡುವಂತಾಗಿದ್ದು ಬೆಂಗಳೂರಿಗೆ ಬಂದು ತಂಪು ತಂಪು ಕೂಲ್ ಕೂಲ್ ಎನ್ನುತ್ತಿದ್ದಾರಂತೆ. ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!

    ಸಾಮಾನ್ಯವಾಗಿ ಒಂದು ಸಿನಿಮಾ ಆದ ನಂತರ ಸಾಕಷ್ಟು ಗ್ಯಾಪ್ ತೆಗೆದುಕೊಂಡು ಮತ್ತೊಂದು ಸಿನಿಮಾವನ್ನು ಒಪ್ಪಿಕೊಳ್ಳೋದು ದರ್ಶನ್ ಅವರ ರೀತಿಯಾಗಿತ್ತು. ಆದರೆ ಚಕ್ರವರ್ತಿ ಸಿನಿಮಾದ ನಂತರ ವರ್ಷಕ್ಕೆರಡು ಸಿನಿಮಾದಲ್ಲಿ ನಟಿಸಬೇಕು ಅಂತಾ ತೀರ್ಮಾನಿಸಿರೋದರಿಂದ ಒಂದರ ಹಿಂದೆ ಒಂದು ಸಿನಿಮಾ ಬಂದರೂ ಸಮಯ ತೆಗೆದುಕೊಳ್ಳದೇ ಹೊಸಾ ಸಿನಿಮಾಗಳನ್ನು ಒಪ್ಪಿಕೊಂಡು ಶೂಟಿಂಗ್ ಗೆ ಹಾಜರಾಗುತ್ತಿದ್ದಾರೆ. ಚಕ್ರವರ್ತಿ ರಿಲೀಸಾದ ಬೆನ್ನಿಗೇ ತಾರಕ್ ಮುಗಿಸಿದ್ದ ದರ್ಶನ್ ನಂತರ ಕುರುಕ್ಷೇತ್ರದ ಚಿತ್ರೀಕರಣಕ್ಕೆ ಹೊರಟು ನಿಂತಿದ್ದರು. ಈಗ ಕುರುಕ್ಷೇತ್ರದಂಥಾ ಮೆಗಾ ಪ್ರಾಜೆಕ್ಟ್ ಮುಗಿಸಿ ಒಂಚೂರೂ ಸುಧಾರಿಸಿಕೊಳ್ಳದೇ ಇಮೀಡಿಯೆಟ್ಟಾಗಿ ಯಜಮಾನ ಸೆಟ್ ಗೆ ಹಾಜರಾದರು. ಇದೇ ಸ್ಪೀಡಿನಲ್ಲಿಯೇ ಮುಂದುವರೆದರೆ ದರ್ಶನ್ ಅವರ ಅಭಿಮಾನಿಗಳಿಗೆ ವರ್ಷಕ್ಕೆರಡು ಸಿನಿಮಾ ಕೊಡುಗೆಯಾಗೋದರಲ್ಲಿ ಯಾವ ಡೌಟೂ ಇಲ್ಲ. ಇದನ್ನೂ ಓದಿ: Exclusive: ನೋಡಿದಿರಾ ‘ಯಜಮಾನ’ನ ವೈಭೋಗವ!

  • Exclusive: ನೋಡಿದಿರಾ ‘ಯಜಮಾನ’ನ ವೈಭೋಗವ!

    Exclusive: ನೋಡಿದಿರಾ ‘ಯಜಮಾನ’ನ ವೈಭೋಗವ!

    ಬೆಂಗಳೂರು: ದರ್ಶನ್ ಅವರ 50ನೇ ಚಿತ್ರ ಯಜಮಾನ ಆರಂಭವಾಗಿದೆ. ಬಿ.ಸುರೇಶ ಮತ್ತು ಶೈಲಜಾ ನಾಗ್ ಅವರ ಮೀಡಿಯಾ ಹೌಸ್ ನಿರ್ಮಾಣ. ಪೊನ್ನುಕುಮಾರ್ ನಿರ್ದೇಶಕ. ಮೈಸೂರಲ್ಲಿ ಶೂಟಿಂಗ್ ನಡೀತಿದೆ. ಇಷ್ಟು ವಿಚಾರಗಳನ್ನು ಬಿಟ್ಟು ಬೇರೇನೋ ಸುದ್ದಿ ಹೊರಗೆ ಬರುತ್ತಲೇ ಇಲ್ಲ. ಚಿತ್ರತಂಡದ ಕಣ್ತಪ್ಪಿಸಿ ಸಣ್ಣ ಫೋಟೋ ಕೂಡಾ ಹೊರಬರಲು ಸಾಧ್ಯವಾಗುತ್ತಿಲ್ಲ.

    ಆದರೂ ನಾವಿಲ್ಲಿ ಒಂದು ಫೋಟೋ ಪ್ರಕಟಿಸಿದ್ದೇವೆ. ಇದು ಹಳ್ಳಿ ಮಾರುಕಟ್ಟೆ ಬೀದಿಯನ್ನು ಮರುಸೃಷ್ಟಿಸಿರುವಂಥಾ ಸೆಟ್. ಹತ್ತನೇ ತಾರೀಕಿನ ಹೊತ್ತಿಗೆ ಈ ಸೆಟ್ಟನ್ನು ತೆರವುಗೊಳಿಸಿ ಮತ್ತೊಂದು ಸೆಟ್ ಕೂರಿಸುತ್ತಾರಂತೆ. ಮೇಲ್ನೋಟಕ್ಕೆ ಈ ಸಂತೆ ಬೀದಿಯ ಚಿತ್ರಣವನ್ನು ನೋಡಿದರೆ ಈ ಕಾಲಕ್ಕೆ ಹೊಂದುವಂತೆ ಕಾಣುತ್ತಿಲ್ಲ. ಬದಲಾಗಿ ಒಂದೆರಡು ತಲೆಮಾರಿನ ಹಿಂದಿನ ಚಿತ್ರಣವನ್ನು ನೀಡುತ್ತಿದೆ. ಅದು ಹೌದಾದರೆ, ಯಜಮಾನ ಸಿನಿಮಾ ಎರಡು ಜನರೇಷನ್ನಿನ ಕತೆ ಆಗಿರಲೂ ಬಹುದು ಎಂಬ ಅನುಮಾನ ಮೂಡುತ್ತಿದೆ. ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!

    ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಅವರ ತಂಡ ಈ ಸೆಟ್ ಅನ್ನು ರೂಪಿಸಿದೆ. ಅಂದಹಾಗೆ ಈ ಸೆಟ್ ಅನ್ನು ನೋಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್, ನಿರ್ದೇಶಕ ಎಂ.ಡಿ. ಶ್ರೀಧರ್ ಸೇರಿದಂತೆ ದರ್ಶನ್ ಅವರ ಆಪ್ತರು, ಸಿನಿಮಾ ತಂತ್ರಜ್ಞರು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.