Tag: ಯಗಚಿ ಜಲಾಶಯ

  • ತುಂಬುವ ಹಂತದಲ್ಲಿದೆ ಯಗಚಿ ಜಲಾಶಯ- ಸ್ಥಳೀಯರಲ್ಲಿ ಮನವಿ

    ತುಂಬುವ ಹಂತದಲ್ಲಿದೆ ಯಗಚಿ ಜಲಾಶಯ- ಸ್ಥಳೀಯರಲ್ಲಿ ಮನವಿ

    ಹಾಸನ: ಯಗಚಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ತುಂಬುವ ಹಂತದಲ್ಲಿದೆ.

    ಮೂಡಿಗೆರೆ, ಬೇಲೂರು ಮತ್ತು ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿರುವ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಯಗಚಿ ನದಿಗೆ ನೀರು ಬಿಡುವ ಸಂಭವವಿದೆ.

    ಅಣೆಕಟ್ಟೆಯ ಕೆಳಭಾಗದ, ನದಿಪ್ರದೇಶದಲ್ಲಿ ಇರುವ ಜನರು ತಮ್ಮ ಜನಜಾನುವಾರು, ಆಸ್ತಿಪಾಸ್ತಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿಕೊಳ್ಳಲು ಯಗಚಿ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚ್‍ಟಿ.ದಿನೇಶ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ

     

  • ನನ್ನ ಇಲಾಖೆಯಲ್ಲಿ ಲಂಚ ನಡೆಯಲ್ಲ, ಇದ್ದರೆ ಹೇಳಿ ಬಲಿ ಹಾಕ್ತೀನಿ: ರೇವಣ್ಣ

    ನನ್ನ ಇಲಾಖೆಯಲ್ಲಿ ಲಂಚ ನಡೆಯಲ್ಲ, ಇದ್ದರೆ ಹೇಳಿ ಬಲಿ ಹಾಕ್ತೀನಿ: ರೇವಣ್ಣ

    ಬೆಂಗಳೂರು: ನನ್ನ ಇಲಾಖೆಯಲ್ಲಿ ಯಾವುದೇ ಲಂಚ ಕೊಡುಕೊಳ್ಳುವಿಕೆ ನಡೆಯುದಿಲ್ಲ. ಯಾವುದಾದರು ಅಂತಹ ಪ್ರಕರಣ ಇದ್ದರೆ ಹೇಳಿ, ಅವರಿಗೆ ಬಲಿ ಹಾಕುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಹೇಮಾವತಿ ಮತ್ತು ಯಗಚಿ ನೀರಾವರಿ ಯೋಜನೆಯ ಸಭೆ ಬಳಿಕ ಮಾತನಾಡಿದ ಸಚಿವರು, ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆಗೆ ಯಾವುದೇ ಲಂಚ ಪ್ರಕ್ರಿಯೆ ನಡೆದಿಲ್ಲ. ಒಂದು ವೇಳೆ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಪಾಂಡವಪುರ, ಕೆ.ಆರ್.ಪೇಟೆ ನಾಗಮಂಗಲ ನಾಲೆಗಳಿಗೆ ನೀರು ಬಿಡಲು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಜುಲೈ 30 ರೊಳಗೆ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ ಎಂದರು.

    ತಮ್ಮ ಮನೆ ನವೀಕರಣ ವಿಚಾರಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವುದೇ ವಾಸ್ತುವಿಗಾಗಿ ಮನೆ ನವೀಕರಣ ಮಾಡಿಲ್ಲ. ನಾನು ಹೊಲದಲ್ಲಿ ಮಲಗುವುದಕ್ಕೂ ಸಿದ್ಧ. ನಾವೇನು ಫೈಸ್ಟಾರ್ ಹೋಟೆಲ್‍ನಲ್ಲಿ ಇರಬೇಕು ಅಂತಾ ಇಲ್ಲ ಎಂದು ಹೇಳಿದರು.

  • ಯಗಚಿ ನೀರು ಹಾಸನಕ್ಕೆ ವಿರೋಧಿಸಿ ಚಿಕ್ಕಮಗಳೂರು ಬಂದ್

    ಯಗಚಿ ನೀರು ಹಾಸನಕ್ಕೆ ವಿರೋಧಿಸಿ ಚಿಕ್ಕಮಗಳೂರು ಬಂದ್

    ಚಿಕ್ಕಮಗಳೂರು: ಯಗಚಿ ಜಲಾಶಯದ ನೀರನ್ನು ಹಾಸನಕ್ಕೆ ಹರಿಯಬಿಡ್ತಿರೋದನ್ನ ವಿರೋಧಿಸಿ ಚಿಕ್ಕಮಗಳೂರಿನ ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ಇಂದು ಚಿಕ್ಕಮಗಳೂರು ಬಂದ್‍ಗೆ ಕರೆ ನೀಡಿವೆ.

    ಬಂದ್‍ಗೆ ಬೆಳಗ್ಗಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವರ್ತಕರು ಕೂಡ ಸ್ವಯಂಪ್ರೇರಿತರಾಗಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್‍ಗೆ ಬೆಂಬಲ ನೀಡಿವೆ. ವಿವಿಧ ಕನ್ನಡಪರ ಸಂಘಟನೆಗಳು ಚಿಕ್ಕಮಗಳೂರಿನ ವಾಹನ ಹಾಗೂ ಆಟೋಗಳನ್ನ ಬಂದ್ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಬಹುತೇಕ ಆಟೋಗಳು ಸಂಚಾರ ಸ್ಥಗಿತಗೊಳಿಸಿವೆ. ಜನಸಾಮಾನ್ಯರು ಕೂಡ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡಪರ ಸಂಘಟಕರು ಉರುಳು ಸೇವೆ ಕೈಗೊಂಡಿದ್ದರು. ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್‍ಗೆ ಮುತ್ತಿಗೆ ಹಾಕಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಿಕ್ಕಮಗಳೂರು ಡಿಪೋ ಗಾಡಿಗಳು ರಸ್ತೆಗಿಳಿಯದಂತೆ ಆಗ್ರಹಿಸಿದ್ರು. ಇದರಿಂದ ಬಸ್ ಸ್ಟ್ಯಾಂಡ್‍ನಲ್ಲಿದ್ದ ಕೆಲ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.