Tag: ಯಂತ್ರ

  • ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ ಬಾಲಕ- ಯಂತ್ರಕ್ಕೆ ಸಿಲುಕಿ ತುಂಡು ತುಂಡಾದ ದೇಹ

    ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ ಬಾಲಕ- ಯಂತ್ರಕ್ಕೆ ಸಿಲುಕಿ ತುಂಡು ತುಂಡಾದ ದೇಹ

    – ಕಟರ್ ಬಳಸಿ ದೇಹದ ಭಾಗಗಳನ್ನ ಹೊರ ತೆಗೆದ ಸಿಬ್ಬಂದಿ

    ಜೈಪುರ: ಹಿಟ್ಟಿನ ಗಿರಣಿಯ ಯಂತ್ರದೊಳಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಭಯಾನಕ ಘಟನೆ ಜೈಪುರದ ನಾಹರಗಢ ರಸ್ತೆಯ ಖಂಡೇಲಾವಾಲ ಫ್ಲೋರ್ ಮಿಲ್ ನಲ್ಲಿ ನಡೆದಿದೆ.

    16 ವರ್ಷದ ಅಮಿತ್ ಸಾವನ್ನಪ್ಪಿದ ಬಾಲಕ. ಅಮಿತ್ ಗಿರಣಿಯಲ್ಲಿ ಗೋಧಿಯನ್ನ ಯಂತ್ರಕ್ಕೆ ಹಾಕಿ ಹಿಟ್ಟು ಮಾಡುವ ಕೆಲಸ ಮಾಡುತ್ತಿದ್ದನು. ಈ ವೇಳೆ ಮೇಲಿನಿಂದ ಗೋಧಿ ಚೀಲ ಎಳೆಯುವಾಗ ಆಯತಪ್ಪಿ ಗಿರಣಿಯ ಯಂತ್ರದ ಮಧ್ಯೆ ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಅಮಿತ್ ದೇಹ ತುಂಡು ತುಂಡಾಗಿದೆ.

    ಅಮಿತ್ ದೇಹಕ್ಕೆ ಯಂತ್ರಕ್ಕೆ ಸಿಲುಕಿದ ಪರಿಣಾಮ ಕೈ, ಕಾಲು, ದೇಹ, ತಲೆ ಮತ್ತು ಕಾಲುಗಳ ಪ್ರತ್ಯೇಕಗೊಂಡಿದ್ದವು. ಕೈಗಳು ಕಟ್ ಆಗಿ ಹೊರ ಬಂದಿದ್ರೆ ಅರ್ಧ ದೇಹ ಯಂತ್ರದಲ್ಲಿಯೇ ಸಿಲುಕಿಕೊಂಡಿತ್ತು. ಇಡೀ ಗಿರಣಿ ಅಮಿತ್ ರಕ್ತದಿಂದ ಕೆಂಪು ಕೆಂಪು ಆಗಿತ್ತು. ಕೊನೆಗೆ ಗ್ಯಾಸ್ ಕಟರ್ ಬಳಸಿ ಯಂತ್ರಗಳನ್ನ ತುಂಡರಿಸಿ ಅಮಿತ್ ದೇಹವನ್ನ ಹೊರ ತೆಗೆಯಲಾಗಿದೆ.

    ಮಗ ಎರಡು ತಿಂಗಳಿನಿಂದ ಗಿರಣಿಯಲ್ಲಿ ಮಗ ಕೆಲಸ ಮಾಡುತ್ತಿದ್ದನು. ಆತನ ತಂದೆ ದೆಹಲಿಯಲ್ಲಿ ಕೂಲಿ ಕೆಲಸ ಮಾಡ್ತಾರೆ. ಅವನೇ ಕೆಲಸ ಮಾಡೋದಾಗಿ ಹೇಳಿ ಇಲ್ಲಿ ಸೇರಿಕೊಂಡಿದ್ದನು ಎಂದು ಅಮಿತ್ ತಾಯಿ ರೇಖಾ ಹೇಳಿದ್ದಾರೆ. ಮೃತ ಅಮಿತ್ ತಂದೆ ಘಟನೆ ಸಂಬಂಧ ಪೊಲೀಸರು ಗಿರಣಿ ಮಾಲೀಕ ರಮೇಶ್ ಮತ್ತು ತರುಣ್ ಕೂಲ್ವಾಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಬೆಂಗಳೂರು: ಸರ್ಕಾರಿ ಕಚೇರಿ, ಶಾಲೆ, ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಕಡ್ಡಾಯಗೊಳಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ.

    ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‍ಗಳನ್ನು ಕಸದೊಂದಿಗೆ ಎಸೆಯುವುದರಿಂದ ಸಾಕಷ್ಟು ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇನ್ನು ಸಾರ್ವಜನಿಕ ಕಟ್ಟಡಗಳಲ್ಲಿ ಶೌಚಾಲಯಕ್ಕೆ ಎಸೆಯುವುದರಿಂದ ತ್ಯಾಜ್ಯ ನೀರು ಹರಿಯುವ ಒಳಚರಂಡಿಗಳು ಕಟ್ಟಿಕೊಳ್ಳುತ್ತವೆ. ಇದರಿಂದಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಸುಡುವ ಇನ್ಸಿನರೇಟರ್ ಯಂತ್ರವನ್ನು ಕಡ್ಡಾಯಗೊಳಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ.

    ಮುಂದಿನ ಬಜೆಟ್‍ನಲ್ಲಿ ಅಗತ್ಯ ಹಣ ತೆಗೆದಿರಿಸುವಂತೆ ಮನವಿ ಮಾಡಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವತಿಯಿಂದ ಸಾಮಾಜಿಕ ಕಾರ್ಯಕರ್ತ ಎಸ್. ಅಮರೇಶ್ ಪತ್ರ ಬರೆದಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಇರುವ ಮಹಿಳಾ ಕಾಲೇಜುಗಳು, ಐಟಿಬಿಟಿ ಕಂಪನಿ, ಗಾರ್ಮೆಂಟ್ಸ್, ಪಿಜಿಗಳು ಹಾಗೂ ಕಾರ್ಖಾನೆಗಳಲ್ಲಿ ಇನ್ಸಿನರೇಟರ್ (incinerators) ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕ್ರಮ ಜಾರಿ ಮಾಡಲು ಮನವಿ ಮಾಡಲಾಗಿದೆ.

    ಈ ಯಂತ್ರದೊಳಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಹಾಕಿದಾಗ, ಇವು ಸುಟ್ಟು ಭಸ್ಮವಾಗುತ್ತವೆ. ಇದರಿಂದ ವಾಯು ಮಾಲಿನ್ಯವಾಗುವುದಿಲ್ಲ. ವಾಸನೆಯೂ ಬರುವುದಿಲ್ಲ. ಅತ್ಯಾಧುನಿಕ ಇನ್ಸಿನರೇಟರ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಮರೇಶ್, ಇತರೆ ಕಸದೊಂದಿಗೆ ಸ್ಯಾನಿಟರಿ ವೇಸ್ಟ್ ಕೂಡ ಮಿಶ್ರವಾಗುತ್ತಿದೆ. ಇದನ್ನು ವಿಂಗಡಿಸಲಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಉದ್ಯೋಗ ಮಾಡುವ ಜಾಗದಲ್ಲಿ, ಶಾಲಾ ಕಾಲೇಜುಗಳಲ್ಲಿ ಪರಿಹಾರ ಕಂಡುಕೊಳ್ಳಲು ಈ ಇನ್ಸಿನೇಟರ್ ಬಳಸುವಂತೆ ಮಾಡಲು ಮನವಿ ಮಾಡಲಾಗಿದೆ ಎಂದರು.

  • ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

    ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನಿಗೆ ಯಂತ್ರ ತಗುಲಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ತಾಲೂಕಿನ ಗೊಲ್ಲರಹೊಸಹಳ್ಳಿ ಗ್ರಾಮದ ಚನ್ನಕೇಶವ (40) ಮೃತ ಕಾರ್ಮಿಕ. ಹಲವು ವರ್ಷಗಳಿಂದ ಕಾರ್ಖಾನೆಯ ಮೆಕ್ಯಾನಿಕಲ್ ವಿಭಾಗದಲ್ಲಿ (ಪಿಟ್ಟರ್) ಕಾರ್ಮಿಕನಾಗಿ ಚನ್ನಕೇಶವ ಕೆಲಸ ಮಾಡಿಕೊಂಡು ಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದರು. ಎಂದಿನಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯಂತ್ರ ತಗುಲಿ ಈ ಘಟನೆ ಸಂಭವಿಸಿದೆ.

    ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟಿರುವ ಕಾರ್ಮಿಕರಿಗೆ ಕಾರ್ಖಾನೆಯ ಆಡಳಿತ ಮಂಡಳಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತ ಮುಖಂಡ ಉಮೇಶ್ ನೇತೃತ್ವದಲ್ಲಿ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆ ಮಾಡಿದರು.

  • ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಕೋಲಾರ: ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಕೈ ಅರ್ಧ ತುಂಡಾದ ಘಟನೆ ಕೋಲಾರದ ನತಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ನಹಾರ್ಸ್ ಎಂಜಿನಿಯರಿಂಗ್ ಇಂಡಿಯಾ ಕಂಪನಿಯಲ್ಲಿಂದು ಈ ಘಟನೆ ನಡೆದಿದೆ. ಹೈದರ್ ಎಂಬ ಕಾರ್ಮಿಕನ ಕೈ ತುಂಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸೂಕ್ತ ಚಿಕಿತ್ಸೆ ಹಾಗೂ ಭದ್ರತೆ ನೀಡದ ಆರೋಪ ಕೇಳಿಬಂದಿದೆ. ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಭದ್ರತೆ ಹಾಗೂ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದರು. ಗಾಯಾಳುಗೆ ಸೂಕ್ತ ಪರಿಹಾರ ನೀಡುವಂತೆ, ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‍ಐ ನೀಡುವಂತೆ ಆಗ್ರಹ ಮಾಡಿದರು.

    ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಇಂದಿರಾ ಕ್ಯಾಂಟೀನ್‍ನಲ್ಲಿ ಹಸಿ ಕಸದಿಂದ ರಸವನ್ನು ತೆಗೆಯುವ ಯಂತ್ರ ಅಳವಡಿಕೆ

    ಇಂದಿರಾ ಕ್ಯಾಂಟೀನ್‍ನಲ್ಲಿ ಹಸಿ ಕಸದಿಂದ ರಸವನ್ನು ತೆಗೆಯುವ ಯಂತ್ರ ಅಳವಡಿಕೆ

    ರಾಮನಗರ: ಹಸಿ ಕಸವನ್ನು ಬಳಸಿಕೊಂಡು ರಸವನ್ನು ತಯಾರಿಸುವಂತಹ ಯಂತ್ರವನ್ನು ಇದೀಗ ರಾಮನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ಫುಡ್ ವೇಸ್ಟ್ ಡೈಜೆಸ್ಟರ್ ಎಂಬ ಯಂತ್ರವನ್ನು ಇದೀಗ ಇಂದಿರಾ ಕ್ಯಾಂಟೀನ್‍ನಲ್ಲಿ ಅಳವಡಿಸಲಾಗಿದೆ.

    ಮಾನವನ ಜೀರ್ಣಾಂಗ ವ್ಯವಸ್ಥೆಯಂತೆ ಈ ಯಂತ್ರ ಹಸಿಕಸವನ್ನ ಜೀರ್ಣ ಮಾಡಿ ನೀರನ್ನು ಹೊರ ಹಾಕುತ್ತಿದೆ. ಈ ಹಸಿ ಕಸದ ನೀರು ವಿಟಮಿನ್ ಹಾಗೂ ಪ್ರೊಟಿನ್‍ನಿಂದ ಕೂಡಿದ್ದು ಸಸ್ಯಗಳಿಗೆ ಹಾಕಿದರೆ ಉತ್ತಮವಾಗಿ ಬೆಳೆಯಲಿವೆ. ಅಲ್ಲದೇ ಪ್ರಾಣಿಗಳಿಗೆ ಈ ನೀರನ್ನು ಕುಡಿಸಿದರೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.

    ಇದೀಗ ಪ್ರಾಯೋಗಿಕವಾಗಿ 9 ಲಕ್ಷ ವೆಚ್ಚದ ಈ ಯಂತ್ರವನ್ನು ರಾಮನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲೂ ಸಹ ಅಳವಡಿಸುವ ಪ್ರಯತ್ನವನ್ನು ನಡೆಸಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಬಿಬಿಎಂಪಿ ಜಲ್ಲಿ ಸಮಮಾಡುವ ಯಂತ್ರಕ್ಕೆ ಬಾಲಕ ಬಲಿ!

    ಬಿಬಿಎಂಪಿ ಜಲ್ಲಿ ಸಮಮಾಡುವ ಯಂತ್ರಕ್ಕೆ ಬಾಲಕ ಬಲಿ!

    ಬೆಂಗಳೂರು: ಬಿಬಿಎಂಪಿಯ ಜಲ್ಲಿಕಲ್ಲು ಸಮಮಾಡುವ ಯಂತ್ರ ಹರಿದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೆಮ್ಮಿಗೆಪುರ ವಾರ್ಡ್ 198 ರಲ್ಲಿನ ರಸ್ತೆಗೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ 11 ವರ್ಷದ ಮನು ಎಂಬ ಬಾಲಕ ಸೈಕಲ್ ತುಳಿಯುತ್ತಾ ಬಂದಿದ್ದಾನೆ. ಆದ್ರೆ ಇದನ್ನು ಗಮನಿಸದ ಚಾಲಕ, ಬಾಲಕನ ಮೇಲೆ ಜಲ್ಲಿ ಸಮ ಮಾಡುವ ಯಂತ್ರವನ್ನ ಹರಿಸಿದ್ದಾನೆ.

    ಪರಿಣಾಮ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸುಬ್ರಹ್ಮಣ್ಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.