Tag: ಮ್ಯೂಸಿಕ್

  • ಬೈಕ್‍ನಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಬಿತ್ತು ದಂಡ

    ಬೈಕ್‍ನಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಬಿತ್ತು ದಂಡ

    ನವದೆಹಲಿ: ಬೈಕ್‍ನಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಸವಾರನಿಗೆ ದೆಹಲಿಯ ತಿಲಕ್ ನಗರ ಸಂಚಾರಿ ಪೊಲೀಸರು ದಂಡ ಹಾಕಿದ್ದಾರೆ.

    ರಾಘವ್ ಸ್ವಾತಿ ಪ್ರುತಿ ಎಂಬವರ ತಮ್ಮ ಹೊಸ ಹಾರ್ಲೆ ಡೇವಿಡ್‍ಸನ್ ಬೈಕಿನಲ್ಲಿ ಮ್ಯೂಸಿಕ್ ಹಾಕಿಕೊಂಡು ಬೈಕ್ ಚಲಾಯಿಸಿದ್ದಾರೆ ಎಂದು ಅವರನ್ನು ಬೈಕ್ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ದಂಡ ವಿಧಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿರುವ ರಾಘವ್, ನಾನು ನನ್ನ ಹೊಸ ಬೈಕಿನಲ್ಲಿ ತಿಲಕ್ ನಗರದಲ್ಲಿ ಬರುತ್ತಿದ್ದೆ. ಆಗ ಸಂಚಾರಿ ಪೊಲೀಸರು ನನ್ನನ್ನು ಆಡ್ಡ ಹಾಕಿದರು. ನಂತರ ದಾಖಲೆ ತೋರಿಸಲು ಹೇಳಿದರು ನಾನು ತೋರಿಸಿದೆ. ಆದರೆ ಅವರು ನೀನು ಬೈಕ್‍ಗೆ ಮ್ಯೂಸಿಕ್ ಪ್ಲೇಯರ್ ಹಾಕಿಸಿದ್ದೀಯ ಇದು ಕಾನೂನುಬಾಹಿರ ನೀನು ಪೊಲೀಸ್ ಠಾಣೆ ಬಾ ಎಂದು ಕರೆದುಕೊಂಡು ಹೋದರು.

    https://www.facebook.com/raghavinder.pruthi/posts/2706060389417603

    ನಾನು ಪೊಲೀಸರ ಮಾತಿನಂತೆ ಠಾಣೆಗೆ ಹೋದೆ ಅಲ್ಲಿ ನಾನು ಮ್ಯೂಸಿಕ್ ಪ್ಲೇಯರ್ ಅನ್ನು ಬೈಕ್ ಕಂಪನಿಯವರೆ ಹಾಕಿದ್ದಾರೆ. ನಾನು ಹಾಕಿಸಿಲ್ಲ ಎಂದು ಹೇಳಿದರು ಕೇಳದ ತಿಲಕ್ ನಗರ ಠಾಣೆಯ ಎಸಿಪಿ ಮತ್ತು ಎಸ್‍ಐ ನೀನು ಅಕ್ರಮವಾಗಿ ಬೈಕ್ ಓಡಿಸುತ್ತಿದ್ದೀಯ ಎಂದು ನನ್ನ ಮೇಲೆ ಕಿರುಚಾಡಿದರು. ನಾನು ಬೈಕ್ ಓಡಿಸುವಾಗ ಕಡಿಮೆ ಸೌಂಡ್ ಇಟ್ಟು ಓಡಿಸುತ್ತಿದ್ದೆ. ಆದರೆ ಪೊಲೀಸರು ಜಾಸ್ತಿ ಸೌಂಡ್ ಕೊಡಲು ಹೇಳಿ ಅದನ್ನು ವಿಡಿಯೋ ಮಾಡಿದರು. ನೀನು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದೀಯ ಎಂದು ದಂಡ ಹಾಕಿದರು ಎಂದು ಬರೆದುಕೊಂಡಿದ್ದಾರೆ.

    ತಮ್ಮ ಹಾರ್ಲೆ ಡೇವಿಡ್‍ಸನ್ ಬೈಕಿನಲ್ಲಿ ಮ್ಯೂಸಿಕ್ ಪ್ಲೇ ಮಾಡಿದಕ್ಕೆ ರಾಘವ್ ಅವರಿಗೆ ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆಯಡಿ ದೆಹಲಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

  • ಪತಿಯ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಪತ್ನಿ

    ಪತಿಯ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಪತ್ನಿ

    ನವದೆಹಲಿ: ವಿವಾಹ ಸಮಾರಂಭವೊಂದರಲ್ಲಿ ಡಿಜೆ ಮ್ಯೂಸಿಕ್ ಗಲಾಟೆಯಿಂದಾಗಿ ಪತಿಯ ಜೀವವನ್ನು ಉಳಿಸಲು ಹೋಗಿ ಗುಂಡೇಟು ತಿಂದು ಪತ್ನಿ ಮೃತಪಟ್ಟಿರುವ ಘಟನೆ ದೆಹಲಿಯ ಮಂಗೊಲ್ಪುರಿ ಪ್ರದೇಶದಲ್ಲಿ ನಡೆದಿದೆ.

    ಸುನಿತಾ ರಾಣಿ ಮೃತ ದುರ್ದೈವಿ. ಈ ಘಟನೆ ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಸಂದೀಪ್ ಮತ್ತು ಆತನ ಸಹೋದರ ಆಕಾಶ್ ಇಬ್ಬರು ಆರೋಪಿಗಳನ್ನು ಶನಿವಾರ ಚಂಡೀಗಢದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸುನಿತಾ ರಾಣಿ ಮತ್ತು ಸಾಜನ್ ರಹಿ ಮದುವೆಯಾಗಿದ್ದು, ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಸುನಿತಾ ಸಂಬಂಧಿಯ ಮದುವೆಗೆಂದು ಮಂಗೊಲ್ಪುರಿಯಲ್ಲಿ ರಾಮಲೀಲಾ ಮೈದಾನಕ್ಕೆ ಹೋಗಿದ್ದರು. ಮದುವೆ ಸಂದರ್ಭದಲ್ಲಿ ಸುನಿತಾ ಪತಿ ಸಾಜನ್ ಅವರು ಡಿಜೆ ಸಂದೀಪ್ ಜೊತೆ ಮ್ಯೂಸಿಕ್‍ಗೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ.

    ಸ್ವಲ್ಪ ಸಮಯದ ನಂತರ ಸಂದೀಪ್ ಮತ್ತು ಸಹೋದರ ಆಕಾಶ್ ಇಬ್ಬರು ಸುನಿತಾ ಮತ್ತು ಸಾಜನ್ ಊಟ ಮಾಡುತ್ತಿದ್ದ ಟೇಬಲ್ ಬಳಿ ಬಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಮಧ್ಯೆ ಒಬ್ಬ ಗನ್ ತೆಗೆದುಕೊಂಡು ಅದನ್ನು ಸಾಜನ್‍ಗೆ ಗುರಿಯಿಟ್ಟಿದ್ದಾನೆ. ಅಷ್ಟರಲ್ಲಿ ಸುನಿತಾ ಮಧ್ಯಪ್ರವೇಶಿಸಿದ್ದಾಳೆ. ಇದರಿಂದಾಗಿ ಪತಿಗೆ ಬೀಳುವ ಗುಂಡು ಸುನಿತಾಗೆ ಬಿದ್ದಿದೆ ಎಂದು ಸುನೀತಾ ಸಹೋದರ ವಿಷ್ಣು ಕುಮಾರ್ ಹೇಳಿದ್ದಾರೆ.

    ತಕ್ಷಣ ಸುನಿತಾರನ್ನು ಜೈಪುರ ಗೋಲ್ಡನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುನಿತಾ ಮೃತಪಟ್ಟಿದ್ದಾರೆ. ದಂಪತಿ ಶಾಹದಾರಾ ನಿವಾಸಿಗಳಾಗಿದ್ದು, ಮೃತ ಸುನಿತಾ ಗೃಹಿಣಿಯಾಗಿದ್ದಾರೆ. ಸಾಜನ್ ಆಸ್ತಿಯ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಡಿಸಿಪಿ ಸೆಜು ಪಿ ಕರುವಿಲ್ಲಾ ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನೇಕ ಬಾರಿ ಅವರನ್ನು ಬಂಧಿಸಲು ಹೋದಾಗ ಪರಾರಿಯಾಗುತ್ತಿದ್ದರು. ಅವರಿಗಾಗಿ ತಂಡಗಳನ್ನು ಕೂಡ ರಚಿಸಲಾಗಿತ್ತು. ಈಗ ಚಂಡೀಗಢದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರಿಗಮಪ ಸೀಸನ್ 15 ಚಾಂಪಿಯನ್ ಕೀರ್ತನ್ ಹೊಳ್ಳ

    ಸರಿಗಮಪ ಸೀಸನ್ 15 ಚಾಂಪಿಯನ್ ಕೀರ್ತನ್ ಹೊಳ್ಳ

    ಬೆಂಗಳೂರು: ಜೀ ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಚಾಂಪಿಯನ್ ಆಗಿ ಕೀರ್ತನ್ ಹೊಳ್ಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಶನಿವಾರ ಬೆಂಗಳೂರಿನ ಕೋರಮಂಗಲದ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಕೀರ್ತನ್ ಹೊಳ್ಳಗೆ ಗ್ರಾಮೀಣ ಪ್ರತಿಭೆ ಹನುಮಂತ ಹಾಗೂ ಸಾದ್ವಿನಿ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಕೀರ್ತನ್ ಹೊಳ್ಳ ಚಾಂಪಿಯನ್ ಆಗಿದ್ದು, ಹನುಮಂತ ರನ್ನರ್ ಅಪ್ ಆಗಿದ್ದಾರೆ.

    ನಿಹಾಲ್ ತಾವ್ರೂ, ವಿಜೇತ, ಹನುಮಂತ, ಕೀರ್ತನ್ ಹೊಳ್ಳ, ಋತ್ವಿಕ್ ಮತ್ತು ಸಾದ್ವಿನಿ ಫೈನಲ್ ತಲುಪಿದ್ದರು. ಕ್ಲಾಸಿಕಲ್ ಟ್ರೇನೆಡ್ ಕೀರ್ತನ್ ಹೊಳ್ಳ 15ನೇ ಆವೃತ್ತಿಯ ವಿನ್ನರ್ ಎಂದು ನಾದಬ್ರಹ್ಮ ಹಂಸಲೇಖ ಘೋಷಣೆ ಮಾಡಿದರು. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮತ್ತು ಕಂಚಿನ ಕಂಠದ ವಿಜಯ್ ಪ್ರಕಾಶ್ ರಿಯಾಲಿಟಿ ಶೋದ ತೀರ್ಪುಗಾರರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv