Tag: ಮ್ಯೂಸಿಕ್

  • ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಕಲ್ಲು ತೂರಾಟ

    ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಕಲ್ಲು ತೂರಾಟ

    ಭೋಪಾಲ್: ದಲಿತ ವ್ಯಕ್ತಿಯೊಬ್ಬರ ಮದುವೆ ಸಮಾರಂಭದ ಮೆರವಣಿಗೆ ವೇಳೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು, ಮೂವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರಾಜ್‍ಗಢ ಜಿಲ್ಲೆಯಲ್ಲಿ ನಡೆದಿದೆ.

    ರಾತ್ರಿ 11 ಗಂಟೆ ಸುಮಾರಿಗೆ ಜಿರಾಪುರದ ಮಸೀದಿಯೊಂದರ ಹೊರಗೆ ಮೆರವಣಿಗೆ ಸಾಗುತ್ತಿದ್ದಾಗ ಮ್ಯೂಸಿಕ್ ನಿಲ್ಲಿಸುವಂತೆ ಕೆಲವು ದುಷ್ಕರ್ಮಿಗಳು ರಂಪಾಟ ಮಾಡಿದ್ದಾರೆ. ಹೀಗಾಗಿ ಕೆಲಕಾಲ ಮ್ಯೂಸಿಕ್ ನಿಲ್ಲಿಸಲಾಗಿತ್ತು. ಆದರೆ ಕೆಲವು ನಿಮಿಷಗಳ ಬಳಿಕ ಮತ್ತೆ ಮ್ಯೂಸಿಕ್ ಪ್ಲೇ ಮಾಡಿದಾಗ, ಅನೇಕ ಮಂದಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ್ರೆ ತಾನೇ ಕೊಟ್ಟ ಭರವಸೆ ಈಡೇರಿಸುವುದು: ಬಿ.ಸಿ.ಪಾಟೀಲ್

    MARRIAGE

    ಈ ಕುರಿತಂತೆ ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಅಂಕಿತ್ ಮಾಳವಿಯಾ, ಮಸೀದಿ ಮುಂದೆ ಮದುವೆ ಮೆರವಣಿಗೆ ಹೋಗುವಾಗ ಮ್ಯೂಸಿಕ್ ನಿಲ್ಲಿಸುವಂತೆ ಹೇಳಿದರು. ಕೊಂಚ ನಿಮಿಷಗಳ ನಂತರ ಮತ್ತೆ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ವರ, ಬ್ಯಾಂಡ್ ಬಾರಿಸುವವರು ಮತ್ತು ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ – 1,000 ರೂ. ದಾಟಿದ LPG ಸಿಲಿಂಡರ್ ದರ

    ಮಸೀದಿ ಎದುರಿಗೆ ಯಾವುದೇ ಮ್ಯೂಸಿಕ್ ಹಾಕಬಾರದು ಎಂಬ ಸಂಪ್ರದಾಯವಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದರು. ಹೀಗಾಗಿ ಮಸೀದಿಯಿಂದ ಮುಂದೆ ಹೋಗಿ ಮ್ಯೂಸಿಕ್ ಹಾಕಿದೆವು. ಈ ವೇಳೆ ತೊಂದರೆ ನಮಗೆ ನೀಡಿದ್ದಾರೆ ಎಂದಿದ್ದಾರೆ. ಸದ್ಯ ಘಟನೆ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿರಾಪುರ ಪೊಲೀಸ್ ಠಾಣೆಯ ಪ್ರಭಾತ್ ಗೌಡ್ ಹೇಳಿದ್ದಾರೆ.

  • ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿ ಬಲಿ

    ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿ ಬಲಿ

    ಭುವನೇಶ್ವರ: ನೆರೆ ಮನೆಯವರ ಮದುವೆ ಕಾರ್ಯಕ್ರಮದ ಪ್ರಯುಕ್ತ ಡಿಜೆ ಮ್ಯೂಸಿಕ್ ನುಡಿಸಿದ್ದ ಪರಿಣಾಮ ಕೋಳಿ ಫಾರಂ ಒಂದರಲ್ಲಿ 63 ಕೋಳಿಗಳು ಬಲಿಯಾದ ವಿಚಿತ್ರ ಘಟನೆ ಒಡಿಶಾದ ಬಾಲಸೋರ್ ಎಂಬಲ್ಲಿ ನಡೆದಿದೆ. ನೆರೆಮನೆಯವರು ಮದುವೆ ಮನೆಯ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

    ಕರದಂಗಡಿ ಗ್ರಾಮ ನಿವಾಸಿ ಕೋಳಿ ಫಾರಂ ಮಾಲಿಕ ರಂಜಿತ್ ಪರಿದಾ ಎಂಬುವವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಡಿಜೆ ಮ್ಯೂಸಿಕ್ ಬಾರಿಸುತ್ತಿದ್ದರಿಂದ ಕೋಳಿಗಳು ಹೃದಯಾಘಾತಗೊಂಡು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ  ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು

    ರಂಜಿತ್ ಪ್ರಕಾರ ಭಾನುವಾರ ರಾತ್ರಿ 11:30ರ ಸುಮಾರಿಗೆ ಡಿಜೆ ಬ್ಯಾಂಡ್ ಅವರ ಜಮೀನಿನ ಮುಂದೆ ಸಾಗಿದೆ. ಡಿಜೆ ಅವರ ಫಾರ್ಮ್ ಸಮೀಪಿಸುತ್ತಿದ್ದಂತೆ ಕೋಳಿಗಳು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದವು. ವಾಲ್ಯೂಮ್ ಕಡಿಮೆ ಮಾಡುವಂತೆ ಡಿಜೆಗೆ ರಂಜಿತ್ ವಿನಂತಿಸಿದರು. ಆದರೂ ಅವರು ಕೇಳದೆ ಹೋದಾಗ ತಮ್ಮ 63 ಕೋಳಿಗಳು ಸಾವನ್ನಪ್ಪಿದೆ ಎಂದು ಹೇಳಿಕೆ ನೀಡಿದ್ದಾರೆ.

    ಕೋಳಿಗಳು ಕುಸಿದುಬಿದ್ದಾಗ ಅವುಗಳನ್ನು ಬದುಕಿಸಲು ಕೋಳಿ ಫಾರಂ ಮಾಲಿಕರು ವ್ಯರ್ಥ ಪ್ರಯತ್ನ ಮಾಡಿದ್ದಾರೆ. ನಂತರ ಅವರು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿದಾಗ ಅವುಗಳು ಅತಿಯಾದ ಶಬ್ದದಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿವೆ ಎಂದಿದ್ದಾರೆ.

    ರಂಜಿತ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಉದ್ಯೋಗ ಸಿಗದಿದ್ದಾಗ 2019ರಲ್ಲಿ 2 ಲಕ್ಷ ರೂ. ಸಾಲ ಪಡೆದು ಬ್ರೈಲರ್ ಫಾರ್ಮ್ ಆರಂಭಿಸಿದ್ದರು. ಮೊದಲಿಗೆ ನೆರೆಮನೆಯ ರಾಮಚಂದ್ರನ ಬಳಿ ಪರಿಹಾರ ಕೇಳಲು ಹೋಗಿದ್ದಾಗ ಅವರು ನಿರಾಕರಿಸಿದ್ದರು. ಬೇರೆ ದಾರಿ ತೋಚದಿದ್ದಾಗ ರಂಜಿತ್ ರಾಮಚಂದ್ರನ ವಿರುದ್ಧ ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗೆ ನಿಷೇಧವಿಲ್ಲ- ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

    ಈ ಆರೋಪವನ್ನು ಪರಿಶೀಲಿಸಿ ಎರಡೂ ಕಡೆಯವರಿಗೆ ನ್ಯಾಯಸಮ್ಮತ ಪರಿಹಾರ ನೀಡಲಾಗುವುದು ಎಂದು ಬಾಲಸೋರ್ ಪೊಲೀಸ್ ಎಸ್ಪಿ ಸುಧಾಂಶು ಮಿಶ್ರಾ ಹೇಳಿದ್ದಾರೆ. ಆದರೆ ರಾಮಚಂದ್ರ ಈ ಆರೋಪವನ್ನು ವ್ಯಂಗ್ಯ ಮಾಡಿದ್ದಾರೆ. ಲಕ್ಷಗಟ್ಟಲೆ ಕೋಳಿಗಳನ್ನು ಅತಿಯಾದ ಶಬ್ದದ ಹಾರ್ನ್‍ಗಳಿರುವ ರಸ್ತೆಯಲ್ಲಿ ಸಾಗಿಸಲಾಗುತ್ತದೆ. ಆಗ ಸಾಯದೇ ಇರುವ ಕೋಳಿಗಳು ಡಿಜೆ ಮ್ಯೂಸಿಕ್‍ನಿಂದ ಸಾಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅವರು ನನ್ನ ಬಳಿ ಬಂದು ಮನವಿ ಮಾಡಿದಾಗ ಡಿಜೆ ಧ್ವನಿಯನ್ನು ಕಡಿಮೆ ಮಾಡಿದ್ದೆ ಎಂದಿದ್ದಾರೆ.

  • ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ

    ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ

    ಬೆಂಗಳೂರು: ಇತ್ತೀಚೆಗಷ್ಟೇ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿದ ಬಳಿಕ ಕ್ಷಮೆ ಕೇಳಿದ್ದ ಹಂಸಲೇಖ ಅವರು ತಮ್ಮ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ತಮ್ಮ ಆರೋಗ್ಯ ಕ್ಷೇಮವಾಗಿದ್ದು, ಯಾರು ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ರೀತಿಯ ಭದ್ರತೆಯನ್ನು ನೀಡಿದೆ ಹಾಗೂ ಲಕ್ಷಾಂತರ ಅಭಿಮಾನಿಗಳು ನನಗೆ ಧೈರ್ಯ ತುಂಬಿದ್ದಾರೆ ಎಂದು ನಾದ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಕೇಳಲಿದೆ ಜೆಸಿಬಿ ಸದ್ದು – ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವು

    ಪೋಸ್ಟ್‌ನಲ್ಲಿ ಏನಿದೆ?
    ಪೂಜ್ಯ ಕರ್ನಾಟಕವೇ.. ನಾನು ಆರೋಗ್ಯವಾಗಿದ್ದೇನೆ. ನನಗೆ ಆರೋಗ್ಯ ತಪ್ಪಿದೆ ಎಂದು ಇಡೀ ಕರ್ನಾಟಕದಿಂದ ಕರೆಗಳು ಬರುತ್ತಿವೆ. ಎಲ್ಲರೂ ಆರೋಗ್ಯದ ಕುರಿತು ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿಯನ್ನು ಪಡೆಯೋಕೆ ನಾನು ತುಂಬಾನೇ ಸವೆದಿದ್ದೀನಿ. ಸಹಿಸಿದ್ದೀನಿ. ಇದರ ಸುಖ ಇವತ್ತು ಅನುಭವಿಸುತ್ತಿದ್ದೀನಿ.

    ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆಯನ್ನು ಕೊಟ್ಟಿದೆ. ಇಡೀ ಕರ್ನಾಟಕದ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರವಾಗಿ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸಿದ್ದಾರೆ. ಇದನ್ನೂ ಓದಿ: ಇಳಕಲ್ ಸೀರೆಯುಟ್ಟು ಹಾಟ್ ಪೋಸ್ ಕೊಟ್ಟ ರಾಗಿಣಿ

    ಅಭಿಮಾನ ಆವೇಶವಾಗಬಾರದು, ಆವೇಶ ಅವಗಢಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತಿರಬೇಕು. ಹಾಡು ಕೇಳಿಸುತ್ತದೆ. ಹಾಡು ಮುಟ್ಟುಸುತ್ತದೆ ಎಂದು ಹಂಸಲೇಖ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ.

  • ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

    ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

    ಬೆಂಗಳೂರು: ಕನ್ನಡಿಗರ ನೆಚ್ಚಿನ ಮ್ಯೂಸಿಕ್ ಚಾನೆಲ್, ನಿಮ್ಮ ಪಬ್ಲಿಕ್ ಮ್ಯೂಸಿಕ್ ಇಂದಿಗೆ ಏಳು ವರ್ಷದ ಸಂಭ್ರಮ. ಕಳೆದ ಎರಡು ವರ್ಷಗಳ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಡಿದವರಿಗೆ ನಾವು 7ನೇ ವರ್ಷದ ವಿಶೇಷ ‘ಸಪ್ತಸ್ವರ’ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದೇವೆ.

    Public Music

    ಪಬ್ಲಿಕ್ ಟಿವಿ ಕಚೇರಿಯಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್, ರೈಟ್ ಮ್ಯಾನ್ ಸಂಸ್ಥೆಯ ನಿರ್ದೇಶಕ, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್ ನಾಯ್ಡ್, ಅಶ್ವಿನಿ ಆಡಿಯೋ ಕಂಪನಿಯ ಮಾಲೀಕ ರಾಮ್ ಪ್ರಸಾದ್, ರೈಟ್ ಮ್ಯಾನ್ ಮೀಡಿಯಾ ಸಿಒಒ ಮತ್ತು ಮಾರ್ಕೆಟಿಂಗ್ ಹೆಡ್ ಹರೀಶ್ ಕುಮಾರ್ ದೀಪ ಬೆಳಗಿಸಿ ಶುಭ ಕೋರಿದರು. ಇದನ್ನೂ ಓದಿ: ಸಂತೋಷ್ ಆನಂದ್ ರಾಮ್ ಕಚೇರಿಗೆ ಪುನೀತ್, ಜಗ್ಗೇಶ್ ಭೇಟಿ

    Public Music

    ಸಪ್ತಸ್ವರ ಕಾರ್ಯಕ್ರಮ:
    ಕಳೆದೆರೆಡು ವರ್ಷಗಳಿಂದ, ಕೊರೊನಾ ವೈರಸ್‍ನಿಂದ, ಹಸಿವಿನಿಂದ ಪರದಾಡಿದ ಒಡಲುಳೆಷ್ಟೋ? ಹನಿ ಆಕ್ಸಿಜನ್‍ಗಾಗಿ ಅಂಗಲಾಚಿದ ಸ್ವರಗಳೆಷ್ಟೋ? ಕೊನೆಗೆ ಮಣ್ಣು ಸೇರಲು ಜಾಗ ತಡಕಿದ ಹೃದಯಗಳೆಷ್ಟೋ? 2ವರ್ಷಗಳಲ್ಲಿ ಅತೀ ಹೆಚ್ಚು ಕಿವಿ ಕೇಳಿದ ಸ್ವರ, ಸಂಕಟ. ಈ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ನಾವಿದ್ದೇವೆ ಎಂದು ಸಹಾಯಾಸ್ತ ಚಾಚಿದವರಿಗೆ 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದೇವೆ. ಇದನ್ನೂ ಓದಿ: ಬಟರ್ ಚಿಕನ್ ಗೋಲ್ ಗಪ್ಪ ಫೋಟೋ ವೈರಲ್ – ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?

    Public Music

    ಸಂಗೀತಕ್ಕೆ ಹೇಗೆ ಏಳು ಸ್ವರ ಮುಖ್ಯವೋ ಹಾಗೆ ಕೊರೊನಾ ಸಮಯದಲ್ಲಿ ನೆರವಾದ ಏಳು ಸ್ವರಗಳು ಈ ಜಗತ್ತಿಗೆ ಅಷ್ಟೆ ಮುಖ್ಯವಾಗಿದೆ. ಸಪ್ತಸ್ವರ ಕಾರ್ಯಕ್ರಮದಲ್ಲಿ ಹೆಚ್.ಆರ್ ರಂಗನಾಥ್ ಅವರು ಕೊರೊನಾ ಸಮಯದಲ್ಲಿ ನೆರವಾದ ಏಳು ವಿಭಾಗದ ಗಣ್ಯರ ಜೊತೆ ಮಾತನಾಡಿ ಅವರನ್ನು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    75 ಸಾವಿರ ಜನರ ಹೊಟ್ಟೆ ತುಂಬಿಸಿದ ಬುಹುಭಾಷಾ ನಟಿ ಪ್ರಣಿತಾ, ರಾಜಕೀಯ ವಿಭಾಗದಿಂದ ಆರೋಗ್ಯ ಸಚಿವ ಸುಧಾಕರ್, ಆರೋಗ್ಯ ಇಲಾಖೆಯಿಂದ ನಾರಾಯಣ ನೇತ್ರಾಲಯ ಚೇರ್‍ಮ್ಯಾನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಕೆ.ಭುಜಂಗ ಶೆಟ್ಟಿ, ಶಿಕ್ಷಣ ವಿಭಾಗದಿಂದ ರೇವಾ ಯೂನಿವರ್ಸಿಟಿಯ ಕುಲಪತಿಗಳಾದ ಡಾ. ಪಿ ಶ್ಯಾಮರಾಜು, ಹಾಗೂ ಎನ್‍ಜಿಓ ವಿಭಾಗದಿಂದ ಚಿಂತಕ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ, ಪೊಲೀಸ್ ಇಲಾಖೆಯಿಂದ ನಗರ ಶಸಸ್ತ್ರ ಮೀಸಲು ಪಡೆ ಮುಖ್ಯಪೇದೆ ಎಸ್.ಕುಮಾರಸ್ವಾಮಿ ಹಾಗೂ ಕೊನೆಯ ಸ್ವರವಾಗಿ ಡಿ.ಎಸ್ ಮ್ಯಾಕ್ಸ್ ಪ್ರಾಪಟ್ರೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್.ಪಿ ದಯಾನಂದ್‍ರಂತಹ ಸಾಧಕರನ್ನು ಗೌರವಿಸಲಾಯಿತು.

  • ಪಬ್ಲಿಕ್ ಮ್ಯೂಸಿಕ್‍ಗೆ ಏಳು ವಸಂತಗಳ ಸಂಭ್ರಮ

    ಪಬ್ಲಿಕ್ ಮ್ಯೂಸಿಕ್‍ಗೆ ಏಳು ವಸಂತಗಳ ಸಂಭ್ರಮ

    – ಕೋವಿಡ್ ಕಾಲದಲ್ಲಿ ಮಿಡಿದವರಿಗೆ ಅರ್ಪಣೆಯಾಗಲಿದ ಸಪ್ತಸ್ವರ
    – ಬೆಳಗ್ಗೆ 10:30ಕ್ಕೆ ನೇರಪ್ರಸಾರ

    ಬೆಂಗಳೂರು: ಕನ್ನಡಿಗರ ನೆಚ್ಚಿನ ಮ್ಯೂಸಿಕ್ ಚಾನೆಲ್, ನಿಮ್ಮ ಪಬ್ಲಿಕ್ ಮ್ಯೂಸಿಕ್ ಇಂದಿಗೆ ಏಳು ವಸಂತಗಳನ್ನು ಪೂರೈಸಲಿದೆ. ಕಳೆದ ಎರಡು ವರ್ಷಗಳ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಡಿದವರಿಗೆ ನಾವು 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡುತ್ತಿದ್ದೇವೆ.

    ಸಂಗೀತದ ತೇರನ್ನು ಸ.ರಿ.ಗ.ಮ.ಪ.ದ.ನಿ, ಏಳು ಸ್ವರಗಳು ಎಳೆದೋಯ್ಯತ್ತವೆ. ಈ ಏಳು ಸ್ವರಗಳಂತೆ, ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್, ಪಬ್ಲಿಕ್ ಮ್ಯೂಸಿಕ್ ಏಳು ಹೆಜ್ಜೆಗಳನ್ನು ಪೂರೈಸಿದೆ.

    ಕಳೆದೆರೆಡು ವರ್ಷಗಳಿಂದ, ಕೊರೊನಾ ವೈರಸ್‍ನಿಂದ, ಹಸಿವಿನಿಂದ ಪರದಾಡಿದ ಒಡಲುಳೆಷ್ಟೋ? ಹನಿ ಆಕ್ಸಿಜನ್‍ಗಾಗಿ ಅಂಗಲಾಚಿದ ಸ್ವರಗಳೆಷ್ಟೋ? ಕೊನೆಗೆ ಮಣ್ಣು ಸೇರಲು ಜಾಗ ತಡಕಿದ ಹೃದಯಗಳೆಷ್ಟೋ? 2ವರ್ಷಗಳಲ್ಲಿ ಅತೀ ಹೆಚ್ಚು ಕಿವಿ ಕೇಳಿದ ಸ್ವರ, ಸಂಕಟ. ಈ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ನಾವಿದ್ದೇವೆ ಎಂದು ಸಹಾಯಾಸ್ತ ಚಾಚಿದವರಿಗೆ 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡುತ್ತಿದ್ದೇವೆ.

    ಸಂಗೀತಕ್ಕೆ ಹೇಗೆ ಏಳು ಸ್ವರ ಮುಖ್ಯವೋ ಹಾಗೆ ಕೊರೊನಾ ಸಮಯದಲ್ಲಿ ನೆರವಾದ ಏಳು ಸ್ವರಗಳು ಈ ಜಗತ್ತಿಗೆ ಅಷ್ಟೇ ಮುಖ್ಯವಾಗಿದೆ. ಬೆಳಗ್ಗೆ 10:30ರ ಸಪ್ತಸ್ವರ ಕಾರ್ಯಕ್ರಮದಲ್ಲಿ ಹೆಚ್.ಆರ್ ರಂಗನಾಥ್ ಜೊತೆ ಅತಿಥಿಗಳಾಗಿ ಕೊರೊನಾ ಸಮಯದಲ್ಲಿ ನೆರವಾದ ಏಳು ವಿಭಾಗದ ಗಣ್ಯರು ಜೊತೆಯಲ್ಲಿರುತ್ತಾರೆ.

    75 ಸಾವಿರ ಜನರ ಹೊಟ್ಟೆ ತುಂಬಿಸಿದ ಬುಹುಭಾಷಾ ನಟಿ ಪ್ರಣಿತಾ, ರಾಜಕೀಯ ವಿಭಾಗದಿಂದ ಆರೋಗ್ಯ ಸಚಿವ ಸುಧಾಕರ್, ಆರೋಗ್ಯ ಇಲಾಖೆಯಿಂದ ನಾರಾಯಣ ನೇತ್ರಾಲಯ ಚೇರ್‌ಮ್ಯಾನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಕೆ.ಭುಜಂಗ ಶೆಟ್ಟಿ, ಶಿಕ್ಷಣ ವಿಭಾಗದಿಂದ ರೇವಾ ಯೂನಿವರ್ಸಿಟಿಯ ಕುಲಪತಿಗಳಾದ ಡಾ. ಪಿ ಶ್ಯಾಮರಾಜು, ಹಾಗೂ ಎನ್‍ಜಿಓ ವಿಭಾಗದಿಂದ ಚಿಂತಕ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ, ಪೊಲೀಸ್ ಇಲಾಖೆಯಿಂದ ನಗರ ಶಸಸ್ತ್ರ ಮೀಸಲು ಪಡೆ ಮುಖ್ಯಪೇದೆ ಎಸ್.ಕುಮಾರಸ್ವಾಮಿ ಹಾಗೂ ಕೊನೆಯ ಸ್ವರವಾಗಿ ಡಿ.ಎಸ್ ಮ್ಯಾಕ್ಸ್ ಪ್ರಾಪಟ್ರೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್.ಪಿ ದಯಾನಂದ್‍ರಂತಹ ಸಾಧಕರನ್ನು ಗೌರವಿಸಲಾಗುತ್ತದೆ.

  • ಒಡತಿಯೊಂದಿಗೆ ಯೋಗ ಮಾಡಿದ ಕ್ಯೂಟ್ ಶ್ವಾನ – ವೀಡಿಯೋ ವೈರಲ್

    ಒಡತಿಯೊಂದಿಗೆ ಯೋಗ ಮಾಡಿದ ಕ್ಯೂಟ್ ಶ್ವಾನ – ವೀಡಿಯೋ ವೈರಲ್

    ಶ್ವಾನವೊಂದು ತನ್ನ ಒಡತಿಯೊಂದಿಗೆ ಯೋಗಾಭ್ಯಾಸ ಮಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಮನಗೆಲ್ಲುತ್ತಿದೆ.

    ವೀಡಿಯೋದಲ್ಲಿ ಶ್ವಾನವು ತನ್ನ ಒಡತಿ ಜೊತೆ ಯೋಗಾಸನದ ಮ್ಯಾಟ್ ಹಾಸಿಕೊಂಡು ಅವರ ಪಕ್ಕದಲ್ಲಿ ನಿಂತು ಯೋಗ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಮೇರಿ ಹಾಗೂ ಸೀಕ್ರೆಟ್ ಎಂಬವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ಸರಳ ಬೆಳಗಿನ ಡೊಗಾ. ಸೀಕ್ರೆಟ್(ಶ್ವಾನ) ಕೊನೆಯದಾಗಿ ಪೋಸ್ ನೀಡಿದೆ. ಮೊದಲಿಗೆ ಒಂದು ಬದಿಯಲ್ಲಿ ಇನ್ನೊಂದಕ್ಕೆ ಸುತ್ತಿಕೊಳ್ಳದೆ ತನ್ನ ಪಂಜಗಳನ್ನು ಹಿಡಿದಿಡಲು ಕಷ್ಟಪಟ್ಟಿತು. ಆದರೆ ಸಮತೋಲನವನ್ನು ಹೇಗೆ ಉಳಿಸಿಕೊಳ್ಳಬೇಕೆಂದು ಇದೀಗ ಶ್ವಾನ ಕಲಿತುಕೊಂಡಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Mary & Secret (@my_aussie_gal)

    ವೀಡಿಯೋದಲ್ಲಿ 6 ವರ್ಷದ ಸೀಕ್ರೆಟ್, ಮಕ್ಕಳಂತೆ ಯೋಗಾಸನದ ಭಂಗಿಗಳನ್ನು ತೋರಿಸಿದೆ. ಕೋಬ್ರಾ ಪೋಸ್, ಡೌನ್‍ವಾರ್ಡ್ ಡಾಗ್, ಮೂರು ಕಾಲಿನಲ್ಲಿ ನಿಂತುಕೊಂಡು ಯೋಗ ಮಾಡಿದೆ. ಅಲ್ಲದೆ ಮೆಲೋಡಿ ಪಿಯಾನೋ ಮ್ಯೂಸಿಕ್‍ನನ್ನು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವುದವುದನ್ನು ಕೇಳಬಹುದಾಗಿದೆ.

    ಅಮೆರಿಕದ ಮಾಜಿ ವೃತ್ತಿಪರ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್‍ರವರು ಕೂಡ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಯವರೆಗೂ ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ 4 ಮಿಲಿಯನ್ ವ್ಯೂಸ್ ಬಂದಿದೆ.

  • ಮತ್ತೊಂದು ಜನ್ಮ ಇದ್ರೆ ಅದು ಕನ್ನಡನಾಡಿನಲ್ಲಿ: ಎಸ್‍ಪಿಬಿ

    ಮತ್ತೊಂದು ಜನ್ಮ ಇದ್ರೆ ಅದು ಕನ್ನಡನಾಡಿನಲ್ಲಿ: ಎಸ್‍ಪಿಬಿ

    ನ್ನಡಕ್ಕೂ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಬಿಡಿಸಲಾಗದ ನಂಟು. ಎಷ್ಟರ ಮಟ್ಟಿಗೆ ಎಂದರೇ ಮತ್ತೊಂದು ಜನ್ಮ ಇದ್ದರೇ ಅದು ಕನ್ನಡನಾಡಿನಲ್ಲಿ ಆಗಲಿ ಎಂದು ಎದೆ ತುಂಬಿ ಹೇಳುವಷ್ಟು.

    ಎಸ್‍ಪಿಬಿ ಕನ್ನಡದಲ್ಲಿ ಗಾನಯಾನ ಆರಂಭಿಸಿದ್ದು ನಕ್ಕರೇ ಅದೇ ಸ್ವರ್ಗ ಚಿತ್ರದ ಕನಸಿದೋ ನನಸಿದೋ ಹಾಡಿನ ಮೂಲಕ. 1966ರಲ್ಲಿ ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮನ್ನ ಸಿನಿಮಾದಲ್ಲಿ ಮೊದಲ ಹಾಡು ಹಾಡಿದ ಬಳಿಕ ಎರಡನೇ ಹಾಡಿಗೆ ಧ್ವನಿಯಾಗಿದ್ದು ಕನ್ನಡದಲ್ಲಿಯೇ ಎಂಬುದು ವಿಶೇಷ.

    ಕನ್ನಡದಲ್ಲಿ ಅವರು ಕೊನೆಯದಾಗಿ ಹಾಡಿದ್ದು ಇದೇ ಫೆಬ್ರವರಿಯಲ್ಲಿ. ಪಿಆರ್‍ಕೆ ಪ್ರೊಡಕ್ಷನ್ಸ್‍ನ ಮಾಯಾಬಜಾರ್-2016 ಚಿತ್ರದ ನಿಮಗೂ ಗೊತ್ತು ನಮಗೂ ಗೊತ್ತು. ಕಾಲ ಎಂದೋ ಎಕ್ಕುಟ್ಟಿ ಹೋಯ್ತು ಎಂಬ ಹಾಡಿಗೆ. ಈ ಹಾಡಿಗೆ ಅಪ್ಪು ಡ್ಯಾನ್ಸ್ ಮಾಡಿದ್ದರು.  ಇದನ್ನೂ ಓದಿ: ನಿರ್ದೇಶಕರು ಮಾತ್ರವಲ್ಲ ನಟರಿಂದಲೂ ಎಸ್‍ಪಿಬಿ ಹಾಡಿಗೆ ಪಟ್ಟು

     

     

    ಈ ಅವಧಿಯಲ್ಲಿ 4 ಸಾವಿರಕ್ಕೂ ಹೆಚ್ಚು ಕನ್ನಡದ ಹಾಡುಗಳಿಗೆ ಎಸ್‍ಪಿಬಿ ಧ್ವನಿ ಆಗಿದ್ದರು. ಅನಂತನಾಗ್, ವಿಷ್ಣುವರ್ಧನ್, ಶ್ರೀನಾಥ್, ಶಂಕರ್‌ನಾಗ್‌, ರವಿಚಂದ್ರನ್ ಅವರ ಧ್ವನಿಗೆ ತಕ್ಕಂತೆ ಹಾಡುಗಳನ್ನು ಹಾಡುತ್ತಾ ಇದ್ದಿದ್ದು ಬಾಲುಗಾರು ವೈಶಿಷ್ಟ್ಯ. ಪಂಚಾಂಕ್ಷರಿ ಗವಾಯಿ ಸಿನಿಮಾದ ಹಾಡಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿತ್ತು.

    ಕರುನಾಡಿನೊಂದಿಗೆ ಎಸ್‍ಪಿಬಿ ಅವರದ್ದು ಅವಿನಾಭಾವ ಸಂಬಂಧ. ಹಳೆ ಮೈಸೂರು ಸೀಮೆಯೇ ಆಗಲಿ. ಹುಬ್ಬಳಿ ಸೀಮೆ ಆಗಲಿ, ಕರಾವಳಿ ಭಾಗ ಆಗಲಿ.. ಹೀಗೆ ಎಲ್ಲಾ ಕಡೆಯೂ ಎಸ್‍ಪಿಬಿಗೆ ಓಡಾಡಿ ಗೊತ್ತು. ಕಿರುತೆರೆಯ ರಿಯಾಲಿಟಿ ಶೋ ಸಲುವಾಗಿ ಕರ್ನಾಟಕದ ಬಹುತೇಕ ಕಡೆ ಪ್ರೋಗ್ರಾಂಗಳನ್ನು ನೀಡಿದ್ರು. ಎಸ್‍ಪಿಬಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಜನ ಕಿಕ್ಕಿರಿದು ಸೇರುತ್ತಿದ್ರು. ಎಸ್‍ಪಿಬಿ ತಾವು ಭಾಗವಹಿಸ್ತಿದ್ದ ಕಾರ್ಯಕ್ರಮ, ಪ್ರಶಸ್ತಿ ಸಮಾರಂಭ, ಸಂದರ್ಶನಗಳಲ್ಲಿ ಕನ್ನಡ ಭಾಷೆಯನ್ನು, ಕನ್ನಡಿಗರನ್ನು ಹೊಗಳದೇ ತಮ್ಮ ಮಾತುಗಳನ್ನು ನಿಲ್ಲಿಸ್ತಿರಲಿಲ್ಲ.

    ತೆಲುಗು, ತಮಿಳು ಕಾರ್ಯಕ್ರಮದಲ್ಲೂ ಭಾಗಿಯಾದಾಗಲೂ ಕನ್ನಡವನ್ನು ಹಾಡಿ ಹೊಗಳ್ತಿದ್ದರು. ಕನ್ನಡ ಅಂದ್ರೆ ಎಸ್‍ಪಿಬಿಗೆ ಬಲು ಪ್ರೀತಿ. ಇದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ 2016ರಲ್ಲಿ 22ನೇ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸುವ ವೇಳೆ, ಇನ್ನೊಂದು ಜನ್ಮವಿದ್ರೆ ಕರ್ನಾಟಕದಲ್ಲೇ ಹುಟ್ಟಲು ಬಯಸುತ್ತೇನೆ ಅಂತ ಹೇಳಿದ್ದರು. ಕನ್ನಡಿಗರು ಕೊಟ್ಟ ಪ್ರೀತಿ ಯಾರಿಂದಲೂ ಸಿಕ್ಕಿಲ್ಲ ಅಂತ ಹೇಳಿದ್ರು. 2018ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಹಾಡಿದಾಗ ಒನ್ಸ್‍ಮೋರ್ ಎಂಬ ಕೂಗು ಹಬ್ಬಿತ್ತು. ಆಗ ಏತಕ್ಕಾಗಿ ನನ್ನನ್ನು ಇಷ್ಟೊಂದು ಪ್ರೀತಿಸ್ತೀರಾ..? ಮರಳಿ ನಿಮಗೇನು ಕೊಡಲಿ ನಾನು ಎನ್ನುತ್ತಾ ಭಾವುಕರಾಗಿದ್ದರು.

  • ನಂಬರ್‌ಗಳನ್ನು ಟೈಪ್ ಮಾಡಿದ್ರೆ ಘಾನಾ ಅಂತ್ಯಕ್ರಿಯೆ ಮ್ಯೂಸಿಕ್ ಬರುತ್ತೆ

    ನಂಬರ್‌ಗಳನ್ನು ಟೈಪ್ ಮಾಡಿದ್ರೆ ಘಾನಾ ಅಂತ್ಯಕ್ರಿಯೆ ಮ್ಯೂಸಿಕ್ ಬರುತ್ತೆ

    – ವಿಡಿಯೋ ನೋಡಿ, ನೀವು ಟ್ರೈ ಮಾಡಿ

    ನವದೆಹಲಿ: ಇಂಟರ್ನೆಟ್‍ನಲ್ಲಿ ನಾವು ಅನೇಕ ಆಸಕ್ತಿದಾಯಕ ವಿಷಯಗಳನ್ನ ತಿಳಿದುಕೊಳ್ಳಬಹುದಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ನಮಗೆ ಮಾಹಿತಿಯೊಂದಿಗೆ ಮನರಂಜನೆಯನ್ನೂ ನೀಡುತ್ತವೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಅನೇಕರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸೃಜನಾತ್ಮಕ ವಿಡಿಯೋಳು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಈ ಪೈಕಿ ಘಾನಾ ಪಾಲ್ಬಿಯರ್ಸ್ ಅಂತ್ಯಕ್ರಿಯೆಯ ನೃತ್ಯ ಮಾಡುವ ವಿಡಿಯೋಗಳನ್ನು ಅನೇಕ ಟ್ರೋಲ್ ಪೇಜ್‍ಗಳು ಬಳಸಿದ್ದವು.

    @zhukeyev.n

    Лайк если знаешь этот трек 😉 #рекомендации #тикток #врек #хочуврек #рекамендация #рек #топ #вреки #танцы

    ♬ номер смерти – zhukeyev.n

    ಅಂತ್ಯಕ್ರಿಯೆ ವಿಡಿಯೋಗಳು ಹಳೆಯದಾಗಿದ್ದರೂ ಕೊರೊನಾ ವೈರಸ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದಾಗ ಅವುಗಳು ಮತ್ತೆ ವೈರಲ್ ಆಗಿದ್ದವು. ಅದರಲ್ಲೂ ಮ್ಯೂಸಿಕ್ ಮತ್ತು ನೃತ್ಯವು ನೆಟ್ಟಿಗರ ಮನಸ್ಸಿಗೆ ತಟ್ಟಿದ್ದವು. ಒಂದೇ ರೀತಿಯಾಗಿ ಬಹಳಷ್ಟು ಮ್ಯೂಸಿಕ್‍ಗಳನ್ನು ರೆಡಿ ಮಾಡಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವು ಕೂಡ ಅನೇಕ ನೆಟ್ಟಿಗರ ಮನ ಗೆದ್ದಿದ್ದವು.

    ಘಾನಾ ಅಂತ್ಯಕ್ರಿಯೆ ವಿಡಿಯೋದಲ್ಲಿ ಕೇಳಿ ಬರುವ ಮ್ಯೂಸಿಕ್ ಅನ್ನು ನಿಮ್ಮ ನೀವೇ ನುಡಿಸಿ ಮೊಬೈಲ್‍ನಲ್ಲಿ ಆನಂದಿಸಬಹುದು. ಹೌದು… ನಿಮ್ಮ ಮೊಬೈಲ್ ಕೀಪ್ಯಾಡ್ ಸೌಂಡ್ ಇಟ್ಟುಕೊಂಡು ನಂಬರ್ ಡೈಲ್ ಮಾಡಿದರೆ ಘಾನಾ ಅಂತ್ಯಕ್ರಿಯೆಯೆ ಮೆರವಣಿಗೆಯ ಮ್ಯೂಸಿಕ್ ಕೇಳಿ ಬರುತ್ತದೆ. ಇಂತಹ ಪ್ರಯೋಗದ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನೀವು ಒಮ್ಮೆ ಟ್ರೈ ಮಾಡಿ ನೋಡಿ.

    https://www.tiktok.com/@euneeew/video/6837078126640516354

  • ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಬಗ್ಗೆ ಮೆಲೋಡಿ ಕಿಂಗ್, ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿದ್ದು, ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಅರ್ಜುನ್ ಜನ್ಯ, ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಸಂದೇಶ ರವಾನಿಸಿದ್ದರು. ವಿಡಿಯೋ ನೋಡಿದ ಬಳಿಕ ಮಾತನಾಡಿದ ರಾಜೇಶ್ ಕೃಷ್ಣನ್, ಇಷ್ಟೆಲ್ಲ ಸಾಧನೆ ಮಾಡಿದ್ದರೂ ಅರ್ಜುನ್ ಜನ್ಯ ಬೆಳೆಯವ ಹುಡುಗ. ಇನ್ನು ಸಾಕಷ್ಟು ಸಾಧನೆ ಮಾಡುವುದು ಬಾಕಿ ಉಳಿದಿದೆ. ಆದಷ್ಟು ಬೇಗ ಗುಣಮುಖರಾಗಿ ಈ ವೇದಿಕೆಗೆ ಬರಲಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

    ಅರ್ಜುನ್ ಜನ್ಯ ವಿಡಿಯೋ ಸಂದೇಶ: ಕಾರಣಾಂತರಗಳಿಂದ ಆರೋಗ್ಯ ತಪ್ಪಿತ್ತು. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸರಿಗಮಪ ವೇದಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ವೇದಿಕೆಗೆ ಬರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಹೀಗೆ ಇರಲಿ. ನನಗೋಸ್ಕರ ಮತ್ತು ನನ್ನ ಕುಟುಂಬಕ್ಕಾಗಿ ಬಹಳಷ್ಟು ಪ್ರಾರ್ಥನೆ ಮಾಡಿದ್ದೀರಿ. ಎಲ್ಲರಿಗೂ ನನ್ನ ಧನ್ಯವಾದಗಳು. ಶೀಘ್ರದಲ್ಲಿಯೇ ಎಲ್ಲರನ್ನು ಭೇಟಿಯಾಗುತ್ತೇನೆ. ಆಯ್ ಆ್ಯಮ್ ಓಕೆ, ನಥಿಂಗ್ ಡೋಂಟ್ ವರಿ ಎಂದು ವಿಡಿಯೋ ಸಂದೇಶವನ್ನು ಅರ್ಜುನ್ ಜನ್ಯ ಕಳುಹಿಸಿದ್ದಾರೆ.

    ಅರ್ಜುನ್ ಜನ್ಯರಿಗೆ ಚಿಕಿತ್ಸೆ ನೀಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಹೃದ್ರೋಗ ತಜ್ಞ ಡಾ. ಆದಿತ್ಯ ಉಡುಪ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾದಾಗ ಇಸಿಜಿ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಸಿಜಿ ಮಾಡಿಸಿದಾಗ ಸ್ವಲ್ಪ ಏರುಪೇರಾಗಿರುವ ವಿಷಯ ತಿಳಿಯಿತು. ಇಸಿಜಿಯಲ್ಲಿ ವ್ಯತ್ಯಾಸ ಕಾಣುತ್ತಿದ್ದಂತೆ ಆ್ಯಂಜಿಯೋಗ್ರಾಮ ಮಾಡಿದಾಗ ಹೃದಯ ಶೇ.99ರಷ್ಟು ಬ್ಯಾಕ್ ಆಗಿತ್ತು. ಕೂಡಲೇ ಕುಟುಂಬಸ್ಥರ ಅನುಮತಿ ಪಡೆದು ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎಂದು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.

    ಫೆಬ್ರವರಿ 28ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ವೈದ್ಯರು ಎರಡು ತಿಂಗಳು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಸಿನಿಮಾ ಮತ್ತು ಸಂಗೀತ ಕಾರ್ಯಕ್ರಮಗಳಿಂದ ದೂರ ಉಳಿದುಕೊಂಡಿದ್ದಾರೆ.

  • ಪಬ್ಲಿಕ್ ಮ್ಯೂಸಿಕ್‍ಗೆ 5ನೇ ವರ್ಷದ ಸಂಭ್ರಮ

    ಪಬ್ಲಿಕ್ ಮ್ಯೂಸಿಕ್‍ಗೆ 5ನೇ ವರ್ಷದ ಸಂಭ್ರಮ

    ಬೆಂಗಳೂರು: ಸೆಪ್ಟೆಂಬರ್ 28, 2014 ರಂದು ಆ ದಿನವನ್ನ ಖಂಡಿತಾ ಮರೆಯಲು ಸಾಧ್ಯವೇ ಇಲ್ಲ. ಪಬ್ಲಿಕ್ ಟಿವಿಯ ಒಂದು ಕುಡಿ ‘ಪಬ್ಲಿಕ್ ಮ್ಯೂಸಿಕ್’ ನಿಮ್ಮೆಲ್ಲರ ಸಮ್ಮುಖದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರ ಮೂಲಕ ಕನ್ನಡಿಗರಿಗೆ ಅರ್ಪಣೆಯಾದ ವರ್ಷವದು. ಆ ಮಧುರ ನೆನಪಿಗೆ ಹಾಗೂ ಆ ಕೂಸಿಗೆ ಇವತ್ತು ಐದರ ವಸಂತ.

    ಈ ಐದು ವರ್ಷದ ಮ್ಯೂಸಿಕಲ್ ಜರ್ನಿ ನಮಗೆಲ್ಲ ಅತ್ಯದ್ಭುತ ಅನುಭವದ ಜೊತೆಗೆ ಏಳುಬೀಳುಗಳನ್ನು ತೋರಿಸಿಕೊಟ್ಟಿದೆ. ಆದರೂ ಅದ್ಯಾವುದಕ್ಕು ನಾವು ಅಂಜದೆ ಅಳುಕದೆ ಮಾಧ್ಯಮ ಕ್ಷೇತ್ರದಲ್ಲಿ ಮುನ್ನುಗ್ಗಲು ಕಾರಣರಾದವರು ನೀವು. ಆರಂಭದಿಂದಲು ಪಬ್ಲಿಕ್ ಮ್ಯೂಸಿಕ್ ವಿಭಿನ್ನ ರೀತಿಯ ಪ್ರಯತ್ನಕ್ಕೆ ಸಾಕ್ಷಿಯಾಗುವ ಮೂಲಕ ಬೆಂಬಲ ನೀಡಿ ನಮ್ಮ ಏಳಿಗೆಗೆ ಸಾಕ್ಷಿಯಾಗಿದ್ದೀರಿ.

    ನಿಮ್ಮ ನಮ್ಮ ನಡುವಿನ ಭಾಂದವ್ಯ ಈ ಐದು ವರ್ಷಗಳಲ್ಲೂ ಮುಂದುವರಿಯಲು ಕಾರಣ ಅಂದ್ರೆ ಅದು ಪ್ರತಿ ದಿನ ಪ್ರಸಾರವಾಗುವ ಪಬ್ಲಿಕ್ ಮ್ಯೂಸಿಕ್‍ನ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕಾರ್ಯಕ್ರಮಗಳು. ಪ್ರತಿ ದಿನ ಪ್ರಸಾರವಾಗುವ ಲೈವ್ ಶೋಗಳಾದ ಕಿಕ್ ಸ್ಟಾರ್ಟ್ ಹಾಗೂ ಚುರುಮುರಿ ಕಾರ್ಯಕ್ರಮಗಳು. ಇವುಗಳ ಜೊತೆಗೆ ಈ ಹಿಂದೆ ಪ್ರಸಾರವಾಗುತ್ತಿದ್ದ ಪಬ್ಲಿಕ್ ಮ್ಯೂಸಿಕ್‍ನ ಶೋಗಳಾದ, ಜಾಲಿ ರೈಡ್, ಹೈ ಫೈ ಶೋಗಳು ನಿಮ್ಮೆಲ್ಲರ ಮೆಚ್ಚುಗೆ ಪಡೆದಿರುವ ಜೊತೆಗೆ ಅಭೂತಪೂರ್ವ ಯಶಸ್ಸು ತಂದು ಕೊಡುವ ಮೂಲಕ ಹೊಸ ಹೊಸ ಕಾರ್ಯಕ್ರಮಗಳಿಗೆ ಸ್ಪೂರ್ತಿದಾಯಕವಾದವು.

    ಇವುಗಳ ಜೊತೆಗೆ ಹೊಸ ಹಾಡುಗಳ ಮೂಲಕ ನಿಮ್ಮ ಮನಸಿಗೆ ಹತ್ತಿರವಾದ ಸ್ಯಾಂಡಲ್‍ವುಡ್ ನಾನ್ ಸ್ಟಾಪ್, ಎವರ್‍ಗ್ರೀನ್ ಸಾಂಗ್ಸ್, ನಿಮ್ಮನ್ನು ಕುಳಿತಲ್ಲಿಯೇ ಹಾಡುಗಳ ಜರ್ನಿಗೆ ಕರೆದುಕೊಂಡುವ ಹೋಗುವ ಮ್ಯೂಸಿಕ್ ಸಫಾರಿ, 90ರ ದಶಕದ ಎವರ್ ಗ್ರೀನ್ ಹಾಡುಗಳ ಮ್ಯೂಸಿಕ್ ಬಾಕ್ಸ್, ಅಲ್ಲದೆ ನೀವು ವಾಟ್ಸಪ್ ಮೂಲಕ ಕಳುಹಿಸುವ ನಿಮ್ಮ ಅಚ್ಚುಮೆಚ್ಚಿನ ಹಾರ್ಟ್ ಫೇವರೇಟ್ ಸಾಂಗ್, ಮ್ಯೂಸಿಕ್ ಎಕ್ಸ್‍ಪ್ರೆಸ್, ಸ್ಟಾರ್ ವಾರ್ಸ್, ಜಸ್ಟ್ ಚಿಲ್, ಟಾಪ್ 12 ಹಾಡುಗಳು, ಫಿಲ್ಮ್ ಫ್ಯಾಕ್ಟರಿ ಇವೆಲ್ಲಾ ಜನಮನಗೆದ್ದ ಕಾರ್ಯಕ್ರಮಗಳು. ಇದಕ್ಕೆ ನಿಮ್ಮಿಂದ್ದ ಸಿಕ್ಕಿದ್ದು ಔಟ್ ಆಫ್ ಔಟ್ ಮಾರ್ಕ್.

    ಪಬ್ಲಿಕ್ ಮ್ಯೂಸಿಕ್ ಈ ಐದು ವರ್ಷದ ಜರ್ನಿಯಲ್ಲಿ ಪ್ರತಿ ವರ್ಷವು ಹಲವು ಕಾರ್ಯಕ್ರಮಗಳನ್ನ ನೀವು ನೋಡಿ ಮೆಚ್ಚಿದ್ದೀರಿ ಮೊದಲ ವರ್ಷದ ಮ್ಯೂಸಿಕ್ “ದರ್ಬಾರ್” “ಹರುಷ ಎರಡು ವರುಷ”ದ ಜೊತೆಗೆ ಮ್ಯೂಸಿಕ್ ಮ್ಯಾರಥಾನ್, “ಮೂರು ವರ್ಷ ಪ್ಲಸ್” ಜೊತೆಗೆ ಹ್ಯಾಟ್ರಿಕ್ ಹಾಡುಗಳು, “ಮ್ಯೂಸಿಕ್ ಮ್ಯಾಜಿಕ್ ಸೆಲೆಬ್ರೇಷನ್ ನಾಲ್ಕು” ನಂತಹ ವಿಭಿನ್ನ ಪ್ರಯತ್ನಕ್ಕೆ ಬೆನ್ನು ತಟ್ಟಿ ನಮ್ಮನ್ನ ಮುನ್ನಡೆಸಿದ್ದೀರಿ ಕೂಡ. ಇದೇ ಸಂತಸದಲ್ಲಿ ಪಬ್ಲಿಕ್ ಮ್ಯೂಸಿಕ್ ಐದನೇ ವರ್ಷದ ವಾರ್ಷಿಕೋತ್ಸವವನ್ನ ಆಚರಿಸಿಕೊಂಡು ನಿಮಗೊಂದು ವಂದನೆ ಹೇಳಲು ಬಯಸಿದೆ.

    ಇಂದು ಇಡೀ ದಿನ ಮಸ್ತ್ ಮಜಾ ನೀಡೋ ಲೈವ್ ಶೋಗಳ ಜೊತೆಗೆ ಸೆಲೆಬ್ರೆಟೀಸ್‍ಗಳ ಜೊತೆಗೆ ಮಾತು ಹರಟೆ ಕಾರ್ಯಕ್ರಮವೂ ಕೂಡ ನಿಮಗಾಗಿ ನಿಮ್ಮ ಮನರಂಜನೆಗಾಗಿ ನೀಡಲಾಗುತ್ತಿದ್ದು ನಿಮ್ಮ ಗೆಲುವನ್ನು ನಿಮಗಾಗಿಯೇ ಅರ್ಪಿಸುತ್ತಿದ್ದೇವೆ. ನಮ್ಮ ಧ್ಯೇಯ ಒಂದೇ “ಅತೀ ಹೆಚ್ಚು ಹಾಡುಗಳು ನಿಮ್ಮ ಇಷ್ಟದ ಹಾಡುಗಳು” ಅದು ನಿಮ್ಮ ಪಬ್ಲಿಕ್ ಮ್ಯೂಸಿಕ್ ನಲ್ಲಿ ಮಾತ್ರ.

    ಒಟ್ಟಿನಲ್ಲಿ ಹೇಗೆ ಐದನೇ ವರ್ಷದ ಸಂಗೀತ ಪಯಣದಲ್ಲಿ ಸಾಗಿ ಬಂದೆವೋ ಗೊತ್ತಿಲ್ಲ. ಒಳ್ಳೆಯ ಹಾಡುಗಳನ್ನು ನಿಮಗೆ ಕೇಳಿಸುತ್ತೇವೆ ಅಂತ ನಿಮಗೆ ಕೊಟ್ಟಿರುವ ಆಣೆಯನ್ನು ಉಳಿಸಿಕೊಂಡು ಮುಂದಿನ ದಿನಮಾನಗಳಲ್ಲೂ ನಿಮ್ಮೆಲ್ಲರ ಬೆಂಬಲವನ್ನ ನಿರೀಕ್ಷೆ ಮಾಡುತ್ತ ಮುಂದಿನ ವರ್ಷಕ್ಕೆ ಅಡಿ ಇಡುತ್ತಿದ್ದೇವೆ. ಇದಕ್ಕೆ ಇಡೀ ಪಬ್ಲಿಕ್ ಮ್ಯೂಸಿಕ್ ಟೀಂ ರೆಡಿಯಾಗಿದೆ. ನಮ್ಮನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.