Tag: ಮ್ಯಾರಥಾನ್

  • ಮ್ಯಾರಥಾನ್‌ನಲ್ಲಿ ಕುಸಿದು ಬಿದ್ದ ವ್ಯಕ್ತಿ – ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಸತೀಶ್ ಸೈಲ್

    ಮ್ಯಾರಥಾನ್‌ನಲ್ಲಿ ಕುಸಿದು ಬಿದ್ದ ವ್ಯಕ್ತಿ – ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಸತೀಶ್ ಸೈಲ್

    ಕಾರವಾರ: ಮ್ಯಾರಥಾನ್ ವೇಳೆ ಕುಸಿದು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿ ಶಾಸಕ ಸತೀಶ್ ಸೈಲ್ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತು ನಿಯಂತ್ರಣ ಜಾಗೃತಿಗಾಗಿ ಮ್ಯಾರಥಾನ್ ಆಯೋಜಿಸಲಾಗಿತ್ತು. ನಗರದ ಮಾಲಾದೇವಿ ಮೈದಾನದ ಬಳಿ ನೌಕಾದಳ ಉದ್ಯೋಗಿ ಗುರುಚರಣ್ ಕುಸಿದು ಬಿದ್ದರು.

    ತಕ್ಷಣ ಅವರನ್ನು ಅಂಬುಲೆನ್ಸ್ನಲ್ಲಿ ಶಾಸಕ ಸೈಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರನ್ನ ಕರೆಸಿ ಚಿಕಿತ್ಸೆಗೆ ಸಹಕರಿಸಿದರು. ಚಿಕಿತ್ಸೆ ನಂತರ ವ್ಯಕ್ತಿ ಚೇತರಿಸಿಕೊಂಡರು.

  • ಗದಗ | ಮಾದಕ ವ್ಯಸನ ಮುಕ್ತ, ಫಿಟ್ನೆಸ್‌ಗಾಗಿ ಜನಜಾಗೃತಿ ಮ್ಯಾರಥಾನ್

    ಗದಗ | ಮಾದಕ ವ್ಯಸನ ಮುಕ್ತ, ಫಿಟ್ನೆಸ್‌ಗಾಗಿ ಜನಜಾಗೃತಿ ಮ್ಯಾರಥಾನ್

    ಗದಗ: ಕರ್ನಾಟಕ ರಾಜ್ಯ ಹಾಗೂ ಗದಗ (Gadag) ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಪೊಲೀಸ್ ಇಲಾಖೆ ಹಾಗೂ ಎಸ್‌ಬಿಐ (SBI) ನೇತೃತ್ವದಲ್ಲಿ ಜನಜಾಗೃತಿ ಮ್ಯಾರಥಾನ್ ನಡೆಯಿತು.

    ನಗರದ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಸೀನಿಯರ್ ಹಾಗೂ ಜೂನಿಯರ್ 2 ತಂಡ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ 5 ಕಿ.ಮೀ ಹಾಗೂ 10 ಕಿ.ಮೀ ಮ್ಯಾರಥಾನ್ ನಡೆಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ಇಬ್ಬರು ಸಜೀವ ದಹನ

    ನಗರದ ಕೆ.ಸಿ ರಾಣಿ ರೋಡ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬನ್ನಿ ಕಟ್ಟಿ, ಕಾರ್ಯಪ್ಪ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಸ್ಟೇಡಿಯಂ ತಲುಪಿದರು. ಕರ್ನಾಟಕ ಮಾದಕ ವ್ಯಸನ ಮುಕ್ತವಾಗಬೇಕು. ಎಲ್ಲರೂ ಫಿಟ್ ಆಗಿರಬೇಕು ಎಂಬ ಜನಜಾಗೃತಿ ಮೂಡಿಸುವುದು ಮ್ಯಾರಥಾನ್ ಉದ್ದೇಶವಾಗಿತ್ತು. ಇದನ್ನೂ ಓದಿ: ಕನ್ನಡಕ್ಕೆ ಬಾಲಿವುಡ್‌ ಡೈರೆಕ್ಟರ್- ಸುಜಯ್ ಶಾಸ್ತ್ರಿ ನಿರ್ದೇಶನದ ‘8’ ಸಿನಿಮಾದಲ್ಲಿ ಅನುರಾಗ್ ಕಶ್ಯಪ್

    ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕ್ರೀಡಾ ಇಲಾಖೆ, ಎನ್‌ಎಸ್‌ಎಸ್, ಎನ್.ಸಿ.ಸಿ, ಆರ್.ಡಿ.ಪಿ.ಆರ್. ಯೂನಿವರ್ಸಿಟಿ, ಮೆಡಿಕಲ್, ಇಂಜನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: Ramanagara| ಊರಹಬ್ಬದ ದಿನವೇ ಗ್ರಾಮಕ್ಕೆ 4 ಕಾಡಾನೆಗಳ ಎಂಟ್ರಿ – ದಿಕ್ಕಾಪಾಲಾಗಿ ಓಡಿದ ಜನ

  • ತಮಾಷೆಯಲ್ಲ – 52ನೇ ವಯಸ್ಸಿನಲ್ಲಿ ಮಹಿಳೆಯ ಮಿಂಚಿನ ಓಟ; ಗಿನ್ನಿಸ್‌ ರೆಕಾರ್ಡ್‌ಗೆ ವೇಯ್ಟಿಂಗ್‌

    ತಮಾಷೆಯಲ್ಲ – 52ನೇ ವಯಸ್ಸಿನಲ್ಲಿ ಮಹಿಳೆಯ ಮಿಂಚಿನ ಓಟ; ಗಿನ್ನಿಸ್‌ ರೆಕಾರ್ಡ್‌ಗೆ ವೇಯ್ಟಿಂಗ್‌

    ಬ್ಯಾಂಕಾಕ್‌: ಸೊಂಟದ ಗಾಯದಿಂದ (Hip Injury) ದೇಹ ದಣಿವಾಗಿತ್ತು, ಬಿಸಲಿನ ತಾಪಕ್ಕೆ ಕಾಲಿನ ಬೂಟು ಕರಗಿಹೋಗಿತ್ತು. ಆದರೂ ಉತ್ಸಾಹ ಕುಗ್ಗಲಿಲ್ಲ, ವಯಸ್ಸು ದೇಹಕ್ಕೆ ಆಗಿದೆಯೇ ಹೊರತು ಮನಸ್ಸಿಗಲ್ಲ, ಉತ್ಸಾಹ ಬಿಡದ ಛಲಕ್ಕೆ ವಯಸ್ಸು ಅಡ್ಡ ಬರುವುದಿಲ್ಲ ಎಂಬುದನ್ನ ಥಾಯ್‌ಲ್ಯಾಂಡ್‌ನ ಮಹಿಳೆಯೊಬ್ಬರು (Thailand Women) ತೋರಿಸಿಕೊಟ್ಟಿದ್ದಾರೆ.

    ಹೌದು. 52 ವರ್ಷ ವಯಸ್ಸಿನ ಮಹಿಳೆ ನಟಾಲಿ ಡೌ ಅಲ್ಟ್ರಾಮ್ಯಾರಥಾನ್‌ನಲ್ಲಿ (Ultramarathon) 12 ದಿನಗಳಲ್ಲಿ ಬರೋಬ್ಬರಿ 1,000 ಕಿಮೀ ಓಟ ಪೂರೈಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಥಾಯ್‌ಲ್ಯಾಂಡ್‌ನಿಂದ ಆರಂಭಗೊಂಡ ಮ್ಯಾರಥಾನ್‌ ಮಲೇಷ್ಯಾ ಮತ್ತು ಸಿಂಗಾಪುರ ಸೇರಿ ಒಟ್ಟು 12 ದಿನಗಳಲ್ಲಿ 1,000 ಸಾವಿರ ಕಿಮೀ ಓಡಿ ಸಾಧನೆ ಮಾಡಿದ್ದಾರೆ.

    ಸೊಂಟದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನಟಾಲಿ ಡೌ ಬಿಸಿಲಿನ ತಾಪಕ್ಕೂ ಜಗ್ಗದೇ ಅಲ್ಟ್ರಾ ಮ್ಯಾರಥಾನ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇದೀಗ ಗಿನ್ನಿಸ್‌ ರೆಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಸೋಲಿನಿಂದಾಗಿ ಜನರ ಮೇಲೆ ಸರ್ಕಾರ ಸೇಡು; ಇಂಧನ ದರ ಇಳಿಸುವವರೆಗೂ ಬಿಜೆಪಿ ಹೋರಾಟ- ಆರ್.ಅಶೋಕ್

    ಡೌ ಅವರ ಮ್ಯಾರಥಾನ್‌ ಓಟವು ಸುಲಭವಾಗಿರಲಿಲ್ಲ. ಓಟದ ಪ್ರದೇಶದಲ್ಲಿ 35 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪ ಇತ್ತು. ತಾಪಮಾನ ಹೆಚ್ಚಳಕ್ಕೆ ಆಕೆಯ ಬೂಟುಗಳು ಕರಗಿದ್ದವು. ಅಲ್ಲದೇ ಮ್ಯಾರಥಾನ್‌ ಆರಂಭಿಸಿದ ಮೊದಲ ದಿನವೇ ಸೊಂಟದ ಗಾಯದ ಸಮಸ್ಯೆಗೆ ತುತ್ತಾಗಿದ್ದಳು, ಇದ್ಯಾವುದನ್ನೂ ಲೆಕ್ಕಿಸದೇ ಚಿರ ಯುವತಿಯಂತೆ ಓಟ ಮುಂದುವರಿಸಿದ ಡೌ ಪ್ರತಿದಿನ 84 ಕಿಮೀ ಓಟದ ಮೂಲಕ 12 ದಿನಗಳಲ್ಲಿ 1,000 ಕಿಮೀ ಪೂರೈಸಿದ್ದಾರೆ. ಮಹಿಳೆಯ ಈ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

  • ಬೆಂಗಳೂರಿನಲ್ಲಿ ಐಸಿಎಸ್‌ಐ ವಾಕಥಾನ್

    ಬೆಂಗಳೂರಿನಲ್ಲಿ ಐಸಿಎಸ್‌ಐ ವಾಕಥಾನ್

    ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ಕಂಪನಿಗಳ ಕಾರ್ಯದರ್ಶಿಗಳ ಸಂಸ್ಥೆ ವಾಕಥಾನ್ (Walkathon) ಅನ್ನು ಆಯೋಜನೆ ಮಾಡಿದೆ. ರಾಜಾಜಿನಗರದ ಇಂಡಸ್ಟ್ರೀಯಲ್ ಏರಿಯಾದ ಐಸಿಎಸ್‌ಐ (ICSI) ಕಚೇರಿಯಿಂದ ಈ ವಾಕಥಾನ್ ಆರಂಭವಾಯಿತು.

    ರನ್ ಫರ್ ಕಾರ್ಪೋರೇಟ್ ಎಕ್ಸಲೆನ್ಸ್ ಘೋಷವ್ಯಾಕ್ಯದೊಂದಿದೆ ಕಂಪನಿಯ ಸಿಬ್ಬಂದಿ, ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಸೇರಿ 500ಕ್ಕೂ ಹೆಚ್ಚು ಜನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೂಲಕ, ವಿಜಯನಗರ, ದೀಪಾಂಜಲಿ ನಗರ ಸೇರಿ ಹಲವು ರಸ್ತೆಗಳಲ್ಲಿ ಓಡಿದರು. ಇದನ್ನೂ ಓದಿ: ನವರಾತ್ರಿ 2023: ಶೈಲಪುತ್ರಿಯ ಮಹತ್ವವೇನು?

    ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಿಬ್ಬಂದಿಯನ್ನು ಹುರಿದುಂಬಿಸಿದರು. ಆರೋಗ್ಯದ ಕಾಳಜಿ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ರಂಗನಾಥ್ ಅವರು ಸಿಬ್ಬಂದಿಗೆ ಸಲಹೆಯನ್ನು ನೀಡಿದರು. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ವರ್ಷದ ವಿದ್ಯಾರ್ಥಿ ಮ್ಯಾರಥಾನ್‌ನಲ್ಲಿ ಓಡಿದ ಬಳಿಕ ಹೃದಯಾಘಾತದಿಂದ ಸಾವು

    20 ವರ್ಷದ ವಿದ್ಯಾರ್ಥಿ ಮ್ಯಾರಥಾನ್‌ನಲ್ಲಿ ಓಡಿದ ಬಳಿಕ ಹೃದಯಾಘಾತದಿಂದ ಸಾವು

    ಚೆನ್ನೈ: ಮ್ಯಾರಥಾನ್‌ನಲ್ಲಿ (Marathon) ಭಾಗವಹಿಸಿದ 20 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಆಘಾತಕಾರಿ ಘಟನೆ ಭಾನುವಾರ ತಮಿಳುನಾಡಿನ (Tamil Nadu) ಮಧುರೈನಲ್ಲಿ (Madurai) ನಡೆದಿದೆ.

    ಮೃತನನ್ನು ಕಲ್ಲಕುರಿಚಿಯ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಭಾನುವಾರ ನಡೆದ ಉತಿರಂ 2023 ರಕ್ತದಾನ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಬ್ರಮಣಿಯನ್ ಹಾಗೂ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ ಪಿ ಮೂರ್ತಿ ಅವರು ಚಾಲನೆ ನೀಡಿದ್ದರು.

    ಮುಂಜಾನೆ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಬಳಿಕ ವಿದ್ಯಾರ್ಥಿ 1 ಗಂಟೆಗಳ ಕಾಲ ಆರೋಗ್ಯವಾಗಿಯೇ ಇದ್ದಂತೆ ಕಾಣಿಸುತ್ತಿದ್ದ ಎಂದು ಆತನ ಸಹಪಾಠಿಗಳು ತಿಳಿಸಿದ್ದಾರೆ. ಬಳಿಕ ಆತ ಮೂರ್ಛೆ ಹೋಗಿದ್ದು, ತಕ್ಷಣ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

    ಆಸ್ಪತ್ರೆಯ ಅಧಿಕಾರಿಗಳು ವಿದ್ಯಾರ್ಥಿಯನ್ನು 8:45ರ ಸುಮಾರಿಗೆ ತುರ್ತು ವಿಭಾಗಕ್ಕೆ ದಾಖಲಿಸಿದ್ದಾರೆ. ಅಲ್ಲಿ ಆತನಿಗೆ ಕೃತಕ ಉಸಿರಾಟದ ಬೆಂಬಲ ನೀಡಲಾಗಿದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಬೆಳಗ್ಗೆ 10:10ರ ಸುಮಾರಿಗೆ ಆತ ಹೃದಯ ಸ್ಥಂಭನಕ್ಕೆ ಒಳಗಾಗಿದ್ದಾನೆ. ಆತನನ್ನು ವೈದ್ಯರು ಬದುಕಿಸಲು ಪ್ರಯತ್ನಿಸಿದರೂ ಬೆಳಗ್ಗೆ 10:45ಕ್ಕೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದಿನೇಶ್ ಕುಮಾರ್ ಮಧುರೈನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುಸಿದು ಬಿದ್ದ ಜಿಮ್ ಛಾವಣಿ- 10 ಮಂದಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುನೀತ್ ರಾಜ್‍ಕುಮಾರ್ ನೆನಪಿಗೋಸ್ಕರ ಮ್ಯಾರಥಾನ್

    ಪುನೀತ್ ರಾಜ್‍ಕುಮಾರ್ ನೆನಪಿಗೋಸ್ಕರ ಮ್ಯಾರಥಾನ್

    ಬೆಂಗಳೂರು(ಆನೇಕಲ್): ಯುವರತ್ನ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಈಗಾಗಲೇ ಮೂರು ತಿಂಗಳು ಕಳೆದಿದೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅದೇ ರೀತಿ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಇಂದು ಪುನೀತ್ ರಾಜ್‍ಕುಮಾರ್ ಅವರ ನೆನಪಿಗೋಸ್ಕರ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು.

    ಚಿಕ್ಕ ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲಾ ರೀತಿಯ ವ್ಯಕ್ತಿಗಳು ಸಹ ಮ್ಯಾರಥಾನ್‍ನಲ್ಲಿ ಪಾಲ್ಗೊಂಡು 5 ಕಿಲೋಮೀಟರ್ ಓಡುವ ಮೂಲಕ ಪುನೀತ್ ಅವರನ್ನು ಸ್ಮರಿಸಿದ್ದಾರೆ. ಫ್ಯಾಟ್ ಟು ಫಿಟ್ ಜಿಮ್ ಸೆಂಟರ್ ವತಿಯಿಂದ ಈ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಪುನೀತ್ ರಾಜ್‍ಕುಮಾರ್ ಪ್ರೇರಣೆಯಿಂದ ಇಲ್ಲಿಗೆ ಬರುವಬರುವವರಿಗೆ ಫಿಟ್ನೆಸ್ ಬಗ್ಗೆ ಸಲಹೇ ನೀಡುತ್ತಿದ್ದಾರೆ. ಆದರೆ ಇದೀಗ ಅವರ ಅಗಲಿಕೆ ಸಾಕಷ್ಟು ನೋವನ್ನು ರಾಜ್ಯದ ಜನತೆಗೆ ನೀಡಿದ್ದು ಅವರ ಫಿಟ್ನೆಸ್‌ಗೆ ಪ್ರೇರಣೆಗೊಂಡು ಈ ಮ್ಯಾರಥಾನ್ ಆಯೋಜಿನೆ ಮಾಡಲಾಗಿದೆ. ಇದನ್ನೂ ಓದಿ:  ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !

  • ಮೈಕೊರೆಯೋ ಚಳಿಯಲ್ಲಿ ಮಂಜಿನ ನಗರಿ ಮಂದಿಯ ಸೈಕ್ಲಿಂಗ್, ಮ್ಯಾರಥಾನ್

    ಮೈಕೊರೆಯೋ ಚಳಿಯಲ್ಲಿ ಮಂಜಿನ ನಗರಿ ಮಂದಿಯ ಸೈಕ್ಲಿಂಗ್, ಮ್ಯಾರಥಾನ್

    ಮಡಿಕೇರಿ: ಮಂಜಿನ ನಗರಿ ಹಾಗೂ ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ಮೈಕೊರೆಯುವ ಚಳಿಯಲ್ಲಿ ನೂರಾರು ಮಂದಿ ಬಹಳ ಉತ್ಸಾಹದಿಂದ ಸೈಕ್ಲಿಂಗ್, ಮ್ಯಾರಥಾನ್‍ನಲ್ಲಿ ಭಾಗಿಯಾಗಿ ಖುಷಿಪಟ್ಟರು.

    ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಆಯೋಜಿಸಲಾಗಿತ್ತು. ನಗರದ ಕಾರ್ಯಪ್ಪ ವೃತ್ತದಿಂದ ಕೋಟೆ ಆವರಣದವರೆಗೆ 5 ಕಿ.ಮೀ ಸೈಕ್ಲಿಂಗ್, ಮ್ಯಾರಥಾನ್‍ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪನ್ನೇಕರ್ ಚಾಲನೆ ನೀಡಿದರು.

    ಮೈಕೊರೆಯುವ ಚಳಿಯ ನಡುವೆಯೂ ಸೈಕ್ಲಿಂಗ್ ಮತ್ತು ಮ್ಯಾರಥಾನ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ಡಿಸಿ, ಎಸ್‌ಪಿ ಇಬ್ಬರೂ ಖುದ್ದು ಸೈಕ್ಲಿಂಗ್ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೊಡಗು ಪ್ರಾಕೃತಿಕ ವಿಕೋಪ ನಡುವೆಯೂ ಕೊಡಗು ಪ್ರವಾಸೋದ್ಯಮ ಸೇಫ್ ಎನ್ನುವ ಸಂದೇಶ ಸಾರಿದರು. ಅಲ್ಲದೆ ಕೊಡಗಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುವಂತೆ ಕರೆಯಿತ್ತರು.

  • ಸ್ಫರ್ಧೆಯಲ್ಲಿ ಭಾಗವಹಿಸಿದ ವಿಕಲಚೇತನ ವ್ಯಕ್ತಿಯ ಡ್ಯಾನ್ಸ್ ವಿಡಿಯೋ ವೈರಲ್!

    ಸ್ಫರ್ಧೆಯಲ್ಲಿ ಭಾಗವಹಿಸಿದ ವಿಕಲಚೇತನ ವ್ಯಕ್ತಿಯ ಡ್ಯಾನ್ಸ್ ವಿಡಿಯೋ ವೈರಲ್!

    ಪುಣೆ: ಒಂದು ಕಾಲನ್ನು ಹೊಂದಿರುವ ವಿಕಲ ಚೇತನ ವ್ಯಕ್ತಿಯೊಬ್ಬರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ನಂತರ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಭಾನುವಾರ ಪುಣೆಯಲ್ಲಿ ಆಫ್ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿಕಲಚೇತನ ಜಾವೇದ್ ರಂಜಾನ್ ಚೌಧರಿ ಪಾಲ್ಗೊಂಡು ನಂತರ ಸಖತ್ ಸ್ಟೆಪ್ ಹಾಕಿದ್ದಾರೆ.

    ಮೂಲತಃ ಮಹಾರಾಷ್ಟ್ರದ ಬುಲ್‍ಧನ್ ಜಿಲ್ಲೆಯ ಲೋನಾರ್ ನವರಾದ ಜಾವೇದ್ ವೀಲ್‍ಚೇರ್ ಬಾಸ್ಕೆಟ್‍ಬಾಲ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನರು ನನಗೆ ಮಾಡಲು ಸಾಧ್ಯವಿಲ್ಲ ಎಂದಿದ್ದನ್ನು ನಾನು ಮಾಡಿ ತೋರಿಸಿದ್ದೇನೆ. ಬೈಕ್ ಸಾಹಸಗಳನ್ನು ಸಹ ಮಾಡುತ್ತೇನೆ ಎಂದು ಜಾವೇದ್ ಸಂತಸ ವ್ಯಕ್ತಪಡಿಸಿದ್ದಾರೆ.

    2015 ರಲ್ಲಿ ಬೈಕ್ ಅಪಘಾತದಲ್ಲಿ ನಾನು ಒಂದು ಕಾಲನ್ನು ಕಳೆದುಕೊಂಡಿದ್ದೇನೆ. ಬಾಸ್ಕೆಟ್ ಬಾಲ್, ಸ್ವಿಮ್ಮಿಂಗ್ ಹೊರತುಪಡಿಸಿ, ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ಯಾರೂ ವಿದ್ಯಾವಂತರಾಗಿಲ್ಲ, ನಾನೇ ಕುಟುಂಬಕ್ಕೆ ಮೊದಲ ಪದವೀಧರರಾಗಿದ್ದೇನೆ ಎಂದು ಜಾವೇದ್ ಹೇಳಿದ್ದಾರೆ.

    ಈ ಆಫ್ ಮ್ಯಾರಥಾನ್ ನಲ್ಲಿ 21 ಕಿ.ಮೀ, 10 ಕಿ.ಮೀ ಮತ್ತು 6 ಕಿ.ಮೀ. ಎಂದು ಮೂರು ವಿಭಿನ್ನ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಸುಮಾರು 2500 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಾವೇದ್‍ಗೂ ಸೇರಿದಂತೆ ಪ್ರತಿ ಸ್ಪರ್ಧಿಗಳಿಗೂ ಪದಕಗಳನ್ನು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ವಚ್ಛ ಭಾರತ್ ಪ್ರಮಾಣಪತ್ರವನ್ನು ಈ ವೇಳೆ ನೀಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv