Tag: ಮ್ಯಾಪ್

  • ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಸಿಗಲಿದೆ ಗೂಗಲ್ ಸ್ಟ್ರೀಟ್ ವ್ಯೂ ಸೇವೆ

    ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಸಿಗಲಿದೆ ಗೂಗಲ್ ಸ್ಟ್ರೀಟ್ ವ್ಯೂ ಸೇವೆ

    ನವದೆಹಲಿ: ನಗರಗಳ ರಸ್ತೆಗಳ ಚಿತ್ರಗಳನ್ನು ನೋಡಲು ಹಾಗೂ ನ್ಯಾವಿಗೇಟ್ ಮಾಡುವ ಸಾಮರ್ಥ್ಯವಿರುವ ಫೀಚರ್ ಅನ್ನು ಗೂಗಲ್ ಬುಧವಾರದಿಂದ ಭಾರತದಲ್ಲೂ ಪ್ರಾರಂಭಿಸಿದೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 10 ನಗರಗಳಲ್ಲಿ ಗೂಗಲ್ ಈ ಫೀಚರ್ ಸಿಗಲಿದೆ.

    ಗೂಗಲ್ ಮ್ಯಾಪ್‌ನ ಅತ್ಯಂತ ಉಪಯುಕ್ತವಾಗಿರುವ ಈ ಫೀಚರ್ 2016ರಲ್ಲೇ ಭಾರತದಲ್ಲೂ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಸರ್ಕಾರ ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಾರಂಭಿಸಲು ಬಿಟ್ಟಿರಲಿಲ್ಲ. ಆದರೆ ಇದೀಗ ಈ ಫೀಚರ್ ಕೊನೆಗೂ ಭಾರತಕ್ಕೂ ಲಗ್ಗೆಯಿಟ್ಟಿದೆ.

    ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹಮದ್‌ನಗರ ಮತ್ತು ಅಮೃತಸರ ನಗರಗಳಲ್ಲಿ ಈ ಫೀಚರ್  ಆರಂಭಿಕ ಹಂತದಲ್ಲಿ ಸಿಗಲಿದ್ದು, ಶೀಘ್ರವೇ ಭಾರತದಾದ್ಯಂತ ಈ ಸೇವೆ ಲಭ್ಯವಾಗಲಿದೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಇದರ ಕೆಲಸವೇನು?
    ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಬಹು ಉಪಯುಕ್ತವಾಗಲಿದೆ. ನಾವು ನೋಡಬಯಸುವ ಸ್ಥಳ ಮುಂಚಿತವಾಗಿಯೇ ಹೇಗೆ ಕಾಣಿಸುತ್ತದೆ ಎಂಬುದನ್ನು ನಾವು ರಸ್ತೆಯ ಮಟ್ಟದಿಂದಲೇ ನೋಡಬಹುದು. ಮಾತ್ರವಲ್ಲದೇ ಅದು ತೋರಿಸುವ ಒಂದೇ ಫೋಟೋ 360 ಡಿಗ್ರಿ ಆಂಗಲ್‌ನಿಂದಲೂ(ಪನರೊಮಾ) ವೀಕ್ಷಿಸಬಹುದು.

    ಗೂಗಲ್ ಈ ಬಗ್ಗೆ ಬುಧವಾರ ನವದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಜೆನೆಸಿಸ್ ಹಾಗೂ ಟೆಕ್ ಮಹೀಂದ್ರಾ ಸಹಯೋಗದೊಂದಿಗೆ ಸ್ಟ್ರೀಟ್ ವ್ಯೂ ಅನ್ನು ಭಾರತಕ್ಕೂ ತರುವುದಾಗಿ ಘೋಷಿಸಿತು. ಆರಂಭದಲ್ಲಿ 1,50,000 ಕಿ.ಮೀ ರಸ್ತೆಗಳನ್ನು ಒಳಗೊಂಡ 10 ನಗರಗಳಲ್ಲಿ ಈ ಫೀಚರ್‌ಗೆ ಚಾಲನೆ ನೀಡುವುದಾಗಿ ತಿಳಿಸಿತು. ಈ ವರ್ಷದ ಅಂತ್ಯದ ವೇಳೆಗೆ ದೇಶದ 50 ನಗರಗಳಲ್ಲಿ ಈ ಫೀಚರ್ ಅನ್ನು ವಿಸ್ತರಿಸುವ ಗುರಿಯನ್ನು ಗೂಗಲ್ ಹೊಂದಿದೆ. ಇದನ್ನೂ ಓದಿ: 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    ವೀಕ್ಷಣೆ ಮಾಡುವುದು ಹೇಗೆ?
    ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ವೀಕ್ಷಣೆ ಮಾಡಲು ಮೊದಲು ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು. ನೀವು ವೀಕ್ಷಿಸಲು ಬಯಸುವ ಪ್ರದೇಶದ ಹೆಸರನ್ನು ನಮೂದಿಸಿ, ಹುಡುಕಿ. ನೀವು ವೀಕ್ಷಿಸಲು ಬಯಸುವ ಪ್ರದೇಶವನ್ನು ಟ್ಯಾಪ್ ಮಾಡಿ ಹಾಗೂ ಸ್ಥಳೀಯ ಕಟ್ಟಡ, ಹೋಟೆಲ್, ರಸ್ತೆ ಇನ್ನಿತರ ಫೋಟೋಗಳನ್ನು ಸುಲಭವಾಗಿ ನೋಡಬಹುದು.

    ಫೋಟೋಗಳನ್ನು 360 ಡಿಗ್ರಿ ಆಂಗಲ್‌ನಲ್ಲೂ ವೀಕ್ಷಿಸಲು ಸಾಧ್ಯವಿದ್ದು, ಸ್ಟ್ರೀನ್‌ನಲ್ಲಿ ತೋರುವ ಎಡ, ಬಲ, ಮೇಲೆ ಕೆಳಗೆ, ಬಟನ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಸಂಪೂರ್ಣ ಚಿತ್ರವನ್ನು ವೀಕ್ಷಿಸಬಹುದು.

    Live Tv
    [brid partner=56869869 player=32851 video=960834 autoplay=true]

  • ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರದಿಂದ ಮ್ಯಾಪ್ ಸಿದ್ಧ

    ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರದಿಂದ ಮ್ಯಾಪ್ ಸಿದ್ಧ

    ಬಳ್ಳಾರಿ: ವಿಜಯನಗರ ಜಿಲ್ಲಾ ರಚನೆಗೆ ಬೇಡಿಕೆ ಜೋರಾಗುತ್ತಿದೆ. ಇನ್ನೊಂದೆಡೆ ಅಖಂಡ ಬಳ್ಳಾರಿ ಜಿಲ್ಲೆಗೆ ಆಗ್ರಹಿಸಿ ಹೋರಾಟಗಳು ಸಹ ತೀವ್ರಗೊಂಡಿವೆ. ಈ ಮಧ್ಯೆ ಬಳ್ಳಾರಿ ಜಿಲ್ಲೆಯಿಂದ 6 ತಾಲೂಕುಗಳನ್ನು ಬೇರ್ಪಡಿಸಿ ರಾಜ್ಯ ಸರ್ಕಾರವು ಜಿಲ್ಲೆ ವಿಭಜಿಸಿ ಮ್ಯಾಪ ಸಿದ್ಧಪಡಿಸಿದೆ.

    ಭೌಗೋಳಿಕವಾಗಿ ಜಿಲ್ಲೆ ಬೇರ್ಪಡಿಸಿ ಮ್ಯಾಪ ಸಿದ್ಧಪಡಿಸಲಾಗಿದ್ದು, ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟರು, ಹರಪನಹಳ್ಳಿ ಸೇರ್ಪಡೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಬಳ್ಳಾರಿ, ಸಿರಗುಪ್ಪ, ಕೂಡ್ಲಿಗಿ, ಸಂಡೂರು, ಕುರಗೋಡ್ ತಾಲೂಕುಗಳು ಉಳಿಯಲಿವೆ. ಜಿಲ್ಲೆ ವಿಭಜನೆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ವರದಿ ತರೆಸಿಕೊಂಡಿರುವ ಸರ್ಕಾರ ಜಿಲ್ಲೆಯನ್ನು ಬೇರ್ಪಡಿಸಿ ಮ್ಯಾಪ್ ಸಿದ್ಧತೆ ಮಾಡಿದೆ.

    ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಬಳ್ಳಾರಿ ಜಿಲ್ಲಾ ಪ್ರತಿನಿಧಿಗಳ ಸಭೆ ನಂತರ ನೂತನ ಜಿಲ್ಲೆಯ ಮ್ಯಾಪ್‍ಗೆ ಅಂಗೀಕಾರ ಸಿಗುವ ಸಾಧ್ಯತೆಯಿದೆ. ಒಂದೆಡೆ ಅಖಂಡ ಬಳ್ಳಾರಿ ಜಿಲ್ಲೆ ಉಳಿಯಬೇಕೆಂದು ಶಾಸಕ ಸೋಮಶೇಖರ್ ರೆಡ್ಡಿ, ಕುರಣಾಕರರೆಡ್ಡಿ, ಸಚಿವ ಶ್ರೀರಾಮುಲು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಅನರ್ಹ ಶಾಸಕ ಆನಂದಸಿಂಗ್, ಕೆಸಿ ಕೊಂಡಯ್ಯ. ಅಲ್ಲಂ ವೀರಭದ್ರಪ್ಪ ಅವರು ವಿಜಯನಗರ ಜಿಲ್ಲೆಯ ರಚನೆ ಆಗಲೇಬೇಕೆಂದು ಸಿಎಂ ಬಿಎಸ್ ವೈ ಮೇಲೆ ಒತ್ತಡ ಹೇರುತ್ತಿದ್ದಾರೆ.

    ಜಿಲ್ಲೆ ವಿಭಜನೆ ಬಗ್ಗೆ ಗೊಂದಲ ಉಂಟಾಗಿದ್ದರಿಂದ ಸಿಎಂ ಯಡಿಯೂರಪ್ಪ ಅವರು ಬಳ್ಳಾರಿ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈ ವೇಳೆ ಜಿಲ್ಲೆ ವಿಭಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

  • ಉಗ್ರನ ಜೇಬಿನಲ್ಲಿ ಮ್ಯಾಪ್ – ಮೇ 23 ರಂದು ಭಾರೀ ದಾಳಿಗೆ ಸ್ಕೆಚ್!

    ಉಗ್ರನ ಜೇಬಿನಲ್ಲಿ ಮ್ಯಾಪ್ – ಮೇ 23 ರಂದು ಭಾರೀ ದಾಳಿಗೆ ಸ್ಕೆಚ್!

    ಶ್ರೀನಗರ: ಕಳೆದ ಗುರುವಾರ ಶೋಪಿಯಾನ್‍ನಲ್ಲಿ ಯೋಧರ ಗುಂಡಿನ ದಾಳಿಗೆ ಹತನಾದ ಉಗ್ರನ ಜೇಬಿನಲ್ಲಿ ಸಿಕ್ಕ ಮ್ಯಾಪ್ ಒಂದು ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ನಡೆಯಬೇಕಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.

    ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನವನ್ನೇ ಗುರಿಯಾಗಿಸಿಕೊಂಡು ಭಯೋತ್ಪಾದಕರು ಹಲವಾರು ದಾಳಿಯನ್ನು ಕಾಶ್ಮೀರದಲ್ಲಿ ಮಾಡಲಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿತ್ತು.

    ಈ ಮಾಹಿತಿಗೆ ಪೂರಕ ಎಂಬಂತೆ ಗುರುವಾರ ಸೇನೆಯ ಗುಂಡಿನ ದಾಳಿಗೆ ಬಲಿಯದ ಉಗ್ರನ ಜೇಬಿನಲ್ಲಿ ನಕ್ಷೆ ದೊರಕಿದೆ. ಈ ಮ್ಯಾಪ್‍ನ ಪ್ರಕಾರ ಶ್ರೀನಗರ ಮತ್ತು ಅವಂತಿಪೋರದಲ್ಲಿರುವ ಭಾರತೀಯ ವಾಯುಪಡೆಯ ನಲೆಗಳ ಮೇಲೆ ಮೇ 23 ರಂದು ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

    ಮೇ 14 ರಂದು ನಡೆದ ಸಭೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ರಿಯಾಜ್ ನೈಕೂ, ಜೈಶ್-ಇ- ಮೊಹಮ್ಮದ್ ಉಗ್ರಸಂಘಟನೆಯ ಇಬ್ಬರು ಉಗ್ರರು ಮತ್ತು ಲಷ್ಕರ್-ಇ-ತೊಯ್ಬಾ ಸಂಘಟನೆಯ ರಿಯಾಜ್ ದಾರ್ ಎಂಬ ನಾಲ್ಕು ಉಗ್ರರು ಸೇರಿಕೊಂಡು ವಾಯು ನೆಲೆಗಳ ಮೇಲೆ ದಾಳಿ ಮಾಡಲು ಸಂಚು ಮಾಡಿದ್ದರು ಎಂದು ತಿಳಿದುಬಂದಿದೆ.

    ಪುಲ್ವಾಮ ಮತ್ತು ಶೋಪಿಯಾನ್‍ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಉಗ್ರರನ್ನು ಕೊಲ್ಲಲಾಗಿತ್ತು. ಆ ಸಮಯದಲ್ಲಿ ಈ ಮಾಹಿತಿಯು ಹೊರಬಂದಿದೆ. ಈ ಗುಂಡಿನ ಕಾಳಗದಲ್ಲಿ 2 ಜನ ಭಾರತೀಯ ಯೋಧರು ವೀರಮರಣ ಅಪ್ಪಿದ್ದರು.