Tag: ಮ್ಯಾನೇಜರ್

  • ನಿಜಕ್ಕೂ ರಶ್ಮಿಕಾಗೆ ಮ್ಯಾನೇಜರ್ ಮೋಸ ಮಾಡಿದ್ನಾ?: ಸತ್ಯ ಬಿಚ್ಚಿಟ್ಟ ನಟಿ

    ನಿಜಕ್ಕೂ ರಶ್ಮಿಕಾಗೆ ಮ್ಯಾನೇಜರ್ ಮೋಸ ಮಾಡಿದ್ನಾ?: ಸತ್ಯ ಬಿಚ್ಚಿಟ್ಟ ನಟಿ

    ಶ್ಮಿಕಾ ಮಂದಣ್ಣ (Rashmika Mandanna) ವಾರದಿಂದ ಇದೊಂದು ಸುದ್ದಿಯಿಂದ ಲೈಮ್‌ಲೈಟಿನಲ್ಲಿದ್ದರು. ಹಲವು ವರ್ಷಗಳಿಂದ ಇವರ ಬಳಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೋಸ (Cheating)  ಮಾಡಿದ್ದಾನೆ ಎನ್ನುವುದು ಸುದ್ದಿಯ ಸಾರವಾಗಿತ್ತು. ಸುಮಾರು ಎಂಬತ್ತು ಲಕ್ಷ ರೂಪಾಯಿ ಲಪಟಾಸಿದ್ದಕ್ಕೆ ಮ್ಯಾನೇಜರ್‌ನನ್ನು ಕಿತ್ತು ಬಿಸಾಕಿದ್ದಾರೆ ರಶ್ಮಿಕಾ ಅನ್ನೋ ಸುದ್ದಿ ಹರಿದಾಡುತ್ತಿತ್ತು.

    ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳುತ್ತಿರುವ ರಶ್ಮಿಕಾ ಈಗ ಸಿಕ್ಕಾಪಟ್ಟೆ ಬಿಜಿ ಬಿಜಿ. ಇದನ್ನೆಲ್ಲ ನೋಡಿಕೊಳ್ಳಲು ಒಂದೊಂದಕ್ಕೆ ಒಬ್ಬೊಬ್ಬ ಕೆಲಸಗಾರರು ಇದ್ದಾರೆ. ಹೈದ್ರಾಬಾದ್, ಮುಂಬೈಗೆ ರಶ್ಮಿಕಾ ಓಡಾಡುತ್ತಿದ್ದಾರೆ. ಈ ನಡುವೆ ಇದೊಂದು ಸಮಾಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿತು. ರಶ್ಮಿಕಾ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭರ್ತಿ ಎಂಬತ್ತು ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ. ಅಂದರೆ ನುಂಗಿ ಹಾಕಿದ್ದಾನೆ. ಅದಕ್ಕಾಗಿ ಅವನನ್ನು ಕಿತ್ತು ಹಾಕಿದ್ದಾರೆ ರಶ್ಮಿಕಾ. ಇದು ಎಲ್ಲ ಮಾಧ್ಯಮದಲ್ಲಿ ಸುದ್ದಿಯಾಯಿತು. ಪೊಲೀಸು, ಕೇಸು, ಕೋರ್ಟು ಇತ್ಯಾದಿಯನ್ನು ಪಕ್ಕಕ್ಕಿಟ್ಟು ರಶ್ಮಿಕಾ ತಣ್ಣಗೆ ಕೆಲಸ ಮುಗಿಸಿದ್ದಾರೆ ಎಂದು ಹೇಳಲಾಗಿತ್ತು.

    ಅಯ್ಯೋ.. ಕೇಳಿದ್ದರೆ ರಶ್ಮಿಕಾ ಸಾಲ ಕೊಡುತ್ತಿರಲಿಲ್ಲಾವಾ? ಅಷ್ಟು ನಂಬಿಕೆ ಇಟ್ಟಿದ್ದ ಹುಡುಗಿಗೆ ಹೀಗೆ ಮಾಡೋದಾ? ಅವನ್ಯಾವನೋ ಪಕ್ಕಾ ಕಳ್ಳನೇ ಇರಬೇಕು. ಹೀಗಂತ ಎಲ್ಲರೂ ಮಾತಾಡಿಕೊಂಡರು. ಅದನ್ನೇ ನಿಜ ಎಂದು ನಂಬಿದ್ದರು. ಆದರೆ ಅದೇ ರಶ್ಮಿಕಾ ಆಪ್ತರು ಇನ್ನೊಂದು ರೀತಿ ವಿಷಯ ಬಿಚ್ಚಿಟ್ಟಿದ್ದರು. ಮ್ಯಾನೇಜರ್ ನಮ್ಮಲ್ಲಿ ಇದ್ದದ್ದು ನಿಜ. ಆದರೆ ಆತ ಯಾವುದೇ ಮೋಸ ಮಾಡಿಲ್ಲ. ಎಂಬತ್ತು ಲಕ್ಷದ ಕತೆಯಂತೂ ಸುಳ್ಳೆ ಸುಳ್ಳು. ಆತನ ಅವಧಿ ಮುಗಿದಿತ್ತು. ಜೊತೆಗೆ ಆತ ಇನ್ನೇನೊ ಹೊಸ ಕೆಲಸ ಕಂಡುಕೊಂಡಿದ್ದ. ಈ ಕಾರಣಕ್ಕೆ ಇಬ್ಬರೂ ಮಾತಾಡಿ ದೂರವಾಗಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಹೀಗಾಗಿ ಎರಡರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವಲ್ಲ? ಮಾಧ್ಯಮಕ್ಕೆ ಸಿಕ್ಕ ಮಾಹಿತಿ ಸುಳ್ಳಾ? ಎಲ್ಲವೂ ಬರೀ ಪ್ರಶ್ನೆಗಳೇ. ಇದಕ್ಕೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ  (Reaction)ಕೊಟ್ಟಿರಲಿಲ್ಲ. ಇದೀಗ ಎಂಬತ್ತು ಲಕ್ಷ ರೂಪಾಯಿ ಮೋಸ ಮತ್ತು ಮ್ಯಾನೇಜರ್ ಕುರಿತಾಗಿ ಸ್ವತಃ ರಶ್ಮಿಕಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಮ್ಯಾನೇಜರ್ ಮೋಸ ಮಾಡಿದ್ದಾರೆ ಎನ್ನುವುದು ಸುಳ್ಳು. ಸ್ವತಂತ್ರವಾಗಿ ಕೆಲಸ ಮಾಡಲು ಮ್ಯಾನೇಜರ್ ಬಯಸಿದ್ದರು. ಸೌಹಾರ್ದಯುತವಾಗಿ ಇಬ್ಬರೂ ಬೇರ್ಪಟ್ಟಿದ್ದೇವೆ. ಹಬ್ಬಿರುವ ಸುದ್ದಿ ಸುಳ್ಳು. ನಾವು ಚೆನ್ನಾಗಿಯೇ ಇದ್ದೇವೆ. ಯಾವುದೇ ಮೋಸ ಆಗಿಲ್ಲ ಮತ್ತು ಮಾಡಿಲ್ಲ ಎನ್ನುವ ಅರ್ಥದಲ್ಲಿ ರಶ್ಮಿಕಾ ಪೋಸ್ಟ್ ಮಾಡಿದ್ದಾರೆ.

  • ಮ್ಯಾನೇಜರ್ ನಿಂದಲೇ ರಶ್ಮಿಕಾ ಮಂದಣ್ಣಗೆ ಮಹಾಮೋಸ

    ಮ್ಯಾನೇಜರ್ ನಿಂದಲೇ ರಶ್ಮಿಕಾ ಮಂದಣ್ಣಗೆ ಮಹಾಮೋಸ

    ನ್ನಡದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಅವರ ಮ್ಯಾನೇಜರ್ ನಿಂದಲೇ ಮೋಸವಾದ (Cheating) ಸುದ್ದಿ ಬೆಳಕಿಗೆ ಬಂದಿದೆ. ರಶ್ಮಿಕಾ ಜೊತೆ ಮೊದಲಿನಿಂದಲೂ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬ ಹಣಕಾಸಿನ ವಿಷಯದಲ್ಲಿ ರಶ್ಮಿಕಾಗೆ ಮೋಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

    ರಶ್ಮಿಕಾ ಮಂದಣ್ಣರ ಎಲ್ಲ ವ್ಯವಹಾರಗಳನ್ನು ಇದೇ ಮ್ಯಾನೇಜರ್ (Manager) ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಪ್ರವಾಸ, ಶೂಟಿಂಗ್ ಡೇಟ್, ಸಂಭಾವನೆ ಹೀಗೆ ನಟಿಯ ಸಿನಿಮಾ ಸಂಬಂಧಿ ಬಹುತೇಕ ಕೆಲಸಗಳು ಈ ಮ್ಯಾನೇಜರ್ ಮುಖಾಂತರವೇ ಆಗುತ್ತಿತ್ತು. ಅಂತಹ ವ್ಯಕ್ತಿಯೇ ರಶ್ಮಿಕಾಗೆ ಬರೋಬ್ಬರಿ 80 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ‘ಜೋಶ್’ ನಟಿ ಸ್ನೇಹಾ ಆಚಾರ್ಯ

    ರಶ್ಮಿಕಾಗೆ ಮ್ಯಾನೇಜರ್ ಮೋಸ ಮಾಡಿದ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದ್ದರೂ, ರಶ್ಮಿಕಾ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ರಶ್ಮಿಕಾರ  ಆಪ್ತರೇ ಹೇಳುವಂತೆ ಈಗಾಗಲೇ ಮ್ಯಾನೇಜರ್ ನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮ್ಯಾನೇಜರ್ ಗೆ ಗೇಟ್ ಪಾಸ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ರಶ್ಮಿಕಾ ಮ್ಯಾನೇಜರ್ ಯಾರು? ಎಂಬತ್ತು ಲಕ್ಷ ರೂಪಾಯಿಯನ್ನು ಆತ ಹೇಗೆ ವಂಚಿಸಿದ. ಮೋಸಕ್ಕೆ ಕಾರಣವೇನು ಹೀಗೆ ಹಲವಾರು ಪ್ರಶ್ನೆಗಳು ಮೂಡಿದ್ದರೂ, ಅನೇಕ ರೀತಿಯಲ್ಲಿ ಈ ಕುರಿತು ಚರ್ಚೆ ಆಗುತ್ತಿದ್ದರೆ ರಶ್ಮಿಕಾ ಮಾತ್ರ ದಿವ್ಯ ಮೌನ ತಾಳಿದ್ದಾರೆ.

  • ನಟಿ ಸಮಂತಾ ಆರೋಗ್ಯ ಹೇಗಿದೆ? ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದ ಮ್ಯಾನೇಜರ್

    ನಟಿ ಸಮಂತಾ ಆರೋಗ್ಯ ಹೇಗಿದೆ? ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದ ಮ್ಯಾನೇಜರ್

    ಮಿಳಿನ ಖ್ಯಾತ ನಟಿ ಸಮಂತಾ (Samantha) ಅವರ ಆರೋಗ್ಯದ ಕುರಿತು ವಾರದಿಂದ ನಾನಾ ರೀತಿಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವರು ಅನಾರೋಗ್ಯದಿಂದ ಇರುವ ಕಾರಣಕ್ಕಾಗಿಯೇ ಸಾರ್ವಜನಿಕವಾಗಿ ಸಮಂತಾ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು. ಆರೋಗ್ಯ ಏರುಪೇರಿನ ಹಿನ್ನೆಲೆಯಲ್ಲಿ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ನಡುವೆ ಅಮೆರಿಕಾಗೆ ಅವರು ಹಾರಲಿದ್ದಾರೆ ಎನ್ನುವ ಮಾಹಿತಿಯೂ ಇತ್ತು.

    ಅಂದಹಾಗೆ ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಮಂತಾ ಚರ್ಮ ರೋಗದಿಂದ ನರಳುತ್ತಿದ್ದಾರೆ ಎಂದಾಗಿತ್ತು. ಅಮೆರಿಕಾಗೆ (America) ತೆರಳಿ, ಅವರು ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೆಲ್ಲವಕ್ಕೂ ಸಮಂತಾ ಮ್ಯಾನೇಜರ್ ಉತ್ತರಿಸಿದ್ದಾರೆ. ಹರಿದಾಡುತ್ತಿರುವುದು ಗಾಸಿಪ್ ಎಂದು ಹೇಳಿದ್ದಾರೆ. ಸಮಂತಾ ಆರೋಗ್ಯವಾಗಿದ್ದು (Health), ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

    ಸಮಂತಾ ಆರೋಗ್ಯವಾಗಿದ್ದಾರೆ, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಹೇಳಿರುವ ಮ್ಯಾನೇಜರ್ (Manager), ಸಮಂತಾ ಅಮೆರಿಕಾಗೆ ಚಿಕಿತ್ಸೆಗಾಗಿ ತೆರಳುತ್ತಿರುವ ವಿಚಾರವನ್ನು ಮಾತ್ರ ಹೇಳಿಲ್ಲ. ಆ ಕುರಿತು ಅವರು ಪ್ರತಿಕ್ರಿಯೆ ಕೂಡ ನೀಡಿಲ್ಲ. ಆದರೆ, ಸಮಂತಾಗೆ ಏನೂ ಆಗಿಲ್ಲ. ಈ ರೀತಿಯಲ್ಲಿ ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸಮಂತಾ ತಿಳಿಸಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    ಪುಷ್ಪಾ (Pushpa) ಸಿನಿಮಾದ ನಂತರ ಸಮಂತ್ ಸಖತ್ ಬ್ಯುಸಿ ಆಗಿ ಹೋದರು. ಸದ್ಯ ಅವರು ಪ್ರಮುಖವಾಗಿ ನಟಿಸಿರುವ ಎರಡು ಚಿತ್ರಗಳು ಶೂಟಿಂಗ್ ಮುಗಿಸಿವೆ. ಯಶೋಧಾ (Yashodha) ಮತ್ತು ಶಾಕುಂತಲೆ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಎರಡೂ ಸಿನಿಮಾಗಳ ಕುತೂಹಲ ಮೂಡಿಸಿದ್ದು, ಸದ್ಯದಲ್ಲೇ ಬಿಡುಗಡೆ ಆಗುವ ಕುರಿತು ಸುದ್ದಿಯಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಪಾ ಮ್ಯಾನೇಜರ್, ಗ್ರಾಹಕರು ಸೇರಿ ಯುವತಿ ಮೇಲೆ ಅತ್ಯಾಚಾರ – ಪೊಲೀಸರಿಗೆ ನೋಟಿಸ್

    ಸ್ಪಾ ಮ್ಯಾನೇಜರ್, ಗ್ರಾಹಕರು ಸೇರಿ ಯುವತಿ ಮೇಲೆ ಅತ್ಯಾಚಾರ – ಪೊಲೀಸರಿಗೆ ನೋಟಿಸ್

    ನವದೆಹಲಿ: ಪಿತಾಂಪುರದಲ್ಲಿರುವ ಸ್ಪಾವೊಂದರ ಮ್ಯಾನೇಜರ್ ಮತ್ತು ಗ್ರಾಹಕರು 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಘಟನೆಯ ಕುರಿತು ದೆಹಲಿ ಪೊಲೀಸರು ಮತ್ತು ದೆಹಲಿ ಮುನ್ಸಿಪಲ್ ಕಾಪೋರೇಷನ್(ಎಂಸಿಡಿ)ಗೆ ನೋಟಿಸ್ ನೀಡಿದ್ದಾರೆ. ಈ ಕುರಿತು ಸಂತ್ರಸ್ತೆ ಮಾತನಾಡಿದ್ದು, ನಾನು ಕೆಲಸ ಮಾಡುತ್ತಿದ್ದ ಪಿತಾಂಪುರದ ದಿ ಓಷನ್ ಸ್ಪಾದಲ್ಲಿ ಈ ಘಟನೆ ನಡೆದಿದೆ. ಸ್ಪಾ ಮ್ಯಾನೇಜರ್ ನನ್ನನ್ನು ಕ್ಲೈಂಟ್‍ಗೆ ಪರಿಚಯಿಸಿದನು. ನಂತರ ನನಗೆ ಅಮಲು ಬೆರೆಸಿದ ಪಾನೀಯವನ್ನು ಕೊಟ್ಟು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ವಿವರಿಸಿದಳು. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ 

    ಘಟನೆಯ ಕುರಿತು ಪೊಲೀಸರಿಗೆ ನಾನು ತಿಳಿಸುತ್ತೇನೆ ಎಂದು ನಾನು ಪ್ರಯತ್ನಿಸಿದಾಗ ಸ್ಪಾ ಮಾಲೀಕರು ನಾನು ಮೌನವಾಗಿರಲು ಲಂಚ ನೀಡಲು ಪ್ರಯತ್ನಿಸಿದರು. ಆದರೆ ನಾನು ಮಹಿಳಾ ಆಯೋಗಕ್ಕೆ ದೂರು ಕೊಟ್ಟೆ. ಆಯೋಗವು ಈ ವಿಷಯವನ್ನು ತಕ್ಷಣವೇ ಗಮನಕ್ಕೆ ತೆಗೆದುಕೊಂಡಿತು. ಎಂಸಿಡಿ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತು. ಅವರಿಂದ ಕ್ರಮ-ತೆಗೆದುಕೊಂಡು ವರದಿ ಕೇಳಿದೆ. ದೆಹಲಿ ಪೊಲೀಸರಿಗೆ ಕಳುಹಿಸಿದ ನೋಟಿಸ್‍ನಲ್ಲಿ, ಸ್ವಾತಿ ಮಲಿವಾಲ್ ಅವರು ಎಫ್‍ಐಆರ್‍ನ ಪ್ರತಿಯನ್ನು ಮತ್ತು ಈ ವಿಷಯದಲ್ಲಿ ಬಂಧಿತ ಆರೋಪಿಗಳ ವಿವರಗಳನ್ನು ಕೋರಿದ್ದಾರೆ.

    ಇದಲ್ಲದೆ, ಸ್ಪಾಗೆ ಮಾನ್ಯವಾದ ಪರವಾನಗಿ ಇದೆಯೇ ಎಂದು ಆಯೋಗವು ಅಧಿಕಾರಿಗಳಿಂದ ವಿಚಾರಣೆ ನಡೆಸಿತು. ಎಲ್ಲ ವಿವರಗಳನ್ನು ಮಹಿಳಾ ಸಮಿತಿಯು ಆಗಸ್ಟ್ 8 ರೊಳಗೆ ನೀಡುವಂತೆ ಕೇಳಿದೆ. ಸ್ವಾತಿ ಮಲಿವಾಲ್ ಮಾತನಾಡಿದ ಅವರು, ದೆಹಲಿಯಾದ್ಯಂತ ಸ್ಪಾಗಳ ನೆಪದಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ. ಆರೋಪಿಗಳು ಹುಡುಗಿಯರ ಬಾಯಿ ಮುಚ್ಚಿಸಲು ಬೆದರಿಕೆ ಮತ್ತು ಬ್ಲ್ಯಾಕ್‍ಮೇಲ್ ಮಾಡುವುದರಿಂದ ಈ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು

    ಅಕ್ರಮ ಸ್ಪಾಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ಏಕೆ ವಿಫಲರಾಗಿದ್ದಾರೆ ಎಂದು ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ಬೆದರಿಕೆಯೊಡ್ಡಿದ ಆರೋಪದಡಿ ಹಿರಿಯ ಮ್ಯಾನೇಜರ್ ಮತ್ತು ಎಂಬಿಎ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

    ಮೇ 3 ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನು ಜೆನ್‍ಪ್ಯಾಕ್ಟ್‍ನ ಹಿರಿಯ ವ್ಯವಸ್ಥಾಪಕ ಲವ್ ಬಗ್ಗಾ ಎಂದು ಗುರುತಿಸಲಾಗಿದೆ. ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ತನಗೆ ಕಿರುಕುಳ ನೀಡುವುದರ ಜೊತೆಗೆ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದು, ಈ ಕುರಿತಂತೆ ಟ್ವೀಟ್ ಕೂಡ ಮಾಡಿದ್ದರು. ಇದನ್ನೂ ಓದಿ: ಕತ್ತು, ಮರ್ಮಾಂಗ ಹಿಸುಕಿ ಕೊಲೆಗೈದು ದತ್ತುಮಗನ ಶವ ಚೀಲದಲ್ಲಿ ತುಂಬಿ ಕಥೆ ಕಟ್ಟಿದ್ಳು!

    ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ ನಂತರ ಆರೋಪಿ ಬಗ್ಗೆ ಮಾಹಿತಿ ಕಲೆಹಾಕಲು ಪ್ರಾರಂಭಿಸಿದರು. ಮೊದಲಿಗೆ ಮೆಟ್ರೋ ನಿಲ್ದಾಣಕ್ಕೆ ವ್ಯಕ್ತಿ ಆಗಮಿಸಿದ್ದನ್ನು ಸಿಸಿಟಿವಿ ದೃಶ್ಯದಲ್ಲಿ ಗಮನಿಸಿದ ಪೊಲೀಸರು, ಬಳಿಕ ಆರೋಪಿ ಪ್ರಯಾಣಿಸಲು ಬಳಸುತ್ತಿದ್ದ ಮೆಟ್ರೋ ಕಾರ್ಡ್‍ನಿಂದ ಆತನ ವಿವರವನ್ನು ಸಂಗ್ರಹಿಸಿದ್ದಾರೆ.

    CNG CRIME

    ಮೂರು ತಿಂಗಳ ತನಿಖೆಯ ನಂತರ ಪ್ರಮುಖ ಆರೋಪಿಯನ್ನು 38 ವರ್ಷದ ಲುವ್ ಬಗ್ಗಾ ಎಂದು ಗುರುತಿಸಿದ ಪೊಲೀಸರು ಆತನನ್ನು ದೆಹಲಿಯ ಪಾಂಡವ್ ನಗರದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ ಮತ್ತು ಪ್ರಕರಣದ ಎರಡನೇ ಆರೋಪಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ವಿದ್ಯಾರ್ಥಿಯಾಗಿರುವ 24 ವರ್ಷದ ಶಿವ ಓಂ ಗುಪ್ತಾ ಎಂದು ಗುರುತಿಸಿ ಬಂಧಿಸಿದ್ದಾರೆ. ಇದನ್ನೂ ಓದಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ತನಿಖೆಯ ವೇಳೆ ಇಬ್ಬರು ಆರೋಪಿಗಳು ಯಾವುದೇ ಕ್ರಿಮಿನಲ್ ದಾಖಲೆ ಹೊಂದಿಲ್ಲ ಎಂದು ತಿಳಿದುಬಂದಿದೆ. ಜೆನ್‍ಪ್ಯಾಕ್ಟ್‍ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿರುವ ಲವ್ ಬಗ್ಗಾ ಅವರಿಗೆ ಮದುವೆಯಾಗಿದ್ದು, ಮಗು ಕೂಡ ಇದೆ.

    Live Tv
    [brid partner=56869869 player=32851 video=960834 autoplay=true]

  • ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ- ಐವರ ಬಂಧನ

    ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ- ಐವರ ಬಂಧನ

    ಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಸುತ್ತಿರುವ ದೂರಿನ ಮೇಲೆ ಹುಬ್ಬಳ್ಳಿಯ ಶಹರ ಪೊಲೀಸರು ನಗರದ ಜಯಲಕ್ಷ್ಮಿ ಲಾಡ್ಜ್ ಮೇಲೆ ದಾಳಿ ನಡೆಸಿ, ಲಾಡ್ಜ್ ಮಾಲೀಕ, ಮ್ಯಾನೇಜರ್ ಸೇರಿ ಐವರನ್ನು ಬಂಧಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಕಂಫರ್ಟ್ ಜಯಲಕ್ಷ್ಮೀ ಲಾಡ್ಜ್‌ನಲ್ಲಿ ಗ್ರಾಹಕರಿಂದ ಹಣ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಇನ್ಸ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಮಾಲೀಕ, ಮ್ಯಾನೇಜರ್, ಆಟೋ ಚಾಲಕ ಹಾಗೂ ಇತರರನ್ನು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ವೈದ್ಯರ ಬದಲಾಗಿ ರೋಗಿಗೆ ಇಂಜೆಕ್ಷನ್ ನೀಡಿದ ಸೆಕ್ಯೂರಿಟಿ ಗಾರ್ಡ್

    ಲಾಡ್ಜ್ ಮಾಲೀಕನ ಜೊತೆ ಶಾಮೀಲಾಗಿ ಆಟೋ ಚಾಲಕ ಗಿರಾಕಿಗಳನ್ನು ಕರೆದುಕೊಂಡು ಬರುತ್ತಿದ್ದನೆಂದು ತಿಳಿದುಬಂದಿದ್ದು, ಈ ಸಮಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಪೊಲೀಸರು, ದಂಧೆ ನಡೆಸುವ ಮ್ಯಾನೇಜರ್ ಮತ್ತು ಗಿರಾಕಿಗಳನ್ನು ತಂದು ಕೊಡುವ ಆಸಾಮಿ ಸಮೇತ ಎಲ್ಲರನ್ನೂ ಬಂಧಿಸಿದ್ದಾರೆ. ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

    ಈ ಘಟನೆಯ ಕುರಿತಂತೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ವೇಶ್ಯಾವಾಟಿಕೆ ದಂಧೆ – ಲಾಡ್ಜ್ ಮೇಲೆ ಪೊಲೀಸರ ದಾಳಿ

    ವೇಶ್ಯಾವಾಟಿಕೆ ದಂಧೆ – ಲಾಡ್ಜ್ ಮೇಲೆ ಪೊಲೀಸರ ದಾಳಿ

    – ಮೂವರು ಮಹಿಳೆಯರ ರಕ್ಷಣೆ, ಮೂವರು ವ್ಯಕ್ತಿಗಳ ಬಂಧನ

    ಯಾದಗಿರಿ: ಲಾಡ್ಜ್ ನಲ್ಲಿ  ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹಿನ್ನೆಲೆ ಯಾದಗಿರಿ ಮಹದೇವ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

    ಯಾದಗಿರಿ ನಗರದ ಗಂಜ್ ಏರಿಯಾದಲ್ಲಿರುವ ಲಾಡ್ಜ್ ಇದಾಗಿದ್ದು, ಕಳೆದ ಹಲವಾರು ದಿನಗಳಿಂದ ಈ ಲಾಡ್ಜ್ ನಲ್ಲಿ ಸ್ಥಳೀಯ ಮಹಿಳೆಯರನ್ನು ಬಳಸಿಕೊಂಡು, ಲಾಡ್ಜ್ ಮ್ಯಾನೇಜರ್ ನಾಗರಾಜ್ ಸೂಗೂರು ಎಂಬಾತ ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಇನ್ನೂ ದಾಳಿಯಲ್ಲಿ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿರುವ ಪೊಲೀಸರು, ಲಾಡ್ಜ್ ಮ್ಯಾನೇಜರ್ ಸೇರಿ ಒಟ್ಟು ಮೂವರು ಗ್ರಾಹಕರನ್ನು ಬಂಧಿಸಿದ್ದಾರೆ. ಅಲ್ಲದೇ ದಾಳಿ ವೇಳೆ ಓರ್ವ ಗ್ರಾಹಕ ಪರಾರಿಯಾಗಿದ್ದಾನೆ.

    ಎಸ್ಪಿ ವೇದಮೂರ್ತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ, ಸಿಪಿಐ ಸೋಮಶೇಖರ್ ಕೆಂಚರೆಡ್ಡಿ ನೇತೃತ್ವದಲ್ಲಿ, ಯಾದಗಿರಿ ಮಹಿಳಾಠಾಣಾ ಪಿಎಸ್ ರಾಘವೇಂದ್ರ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ:ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನೀವೇನು ಯೋಚಿಸ್ತೀರಿ? ಅನುರಾಗ್ ಕಶ್ಯಪ್ ಗೆ ಪುತ್ರಿಯ ಪ್ರಶ್ನೆ

  • ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಆತ್ಮಹತ್ಯೆ

    ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಆತ್ಮಹತ್ಯೆ

    ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಮಿಕಾ ಸಿಂಗ್ ಅವರ ಮ್ಯಾನೇಜರ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮುಂಬೈನ ಅಂಧೇರಿಯಲ್ಲಿ ಸೌಮ್ಯ ಖಾನ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಿಕಾ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಸೌಮ್ಯ ಅವರ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

    ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದು ಬಂದಿಲ್ಲ. ಅಲ್ಲದೆ ಆಕೆ ಯಾವುದೇ ಡೆತ್‍ನೋಟ್ ಕೂಡ ಬರೆದಿಲ್ಲ. ಹಾಗಾಗಿ ನಾವು ತನಿಖೆ ನಡೆಸುತ್ತಿದ್ದೇವೆ. ಸೌಮ್ಯ ಸಾವಿನ ಹಿಂದೆ ಯಾರೊದೊ ಕೈವಾಡ ಇರುವಂತೆ ಕಾಣುತ್ತಿಲ್ಲ. ಸದ್ಯ ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

     

    View this post on Instagram

     

    A post shared by Zoheb Khan (@official_zohebkhan) on

    ವರ್ಸೋವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಠಾಕೂರ್ ಮಾತನಾಡಿ, ಮಿಕಾ ಸಿಂಗ್ ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೊದಲ ಮಹಡಿಯಲ್ಲಿ ಸ್ಟುಡಿಯೋದಲ್ಲಿ ಸೌಮ್ಯ ವಾಸಿಸುತ್ತಿದ್ದಳು. ಅಂತ್ಯ ಸಂಸ್ಕಾರಕ್ಕಾಗಿ ಸೌಮ್ಯಳ ಮೃತದೇಹವನ್ನು ಪಂಜಾಬ್‍ನಲ್ಲಿರುವ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಅಲ್ಲಿ ಸೌಮ್ಯಳ ಅಂತ್ಯ ಸಂಸ್ಕಾರ ನಡೆದಿದೆ. ಸೌಮ್ಯಳಿಗೆ ತಂದೆ-ತಾಯಿ ಇಲ್ಲ ಹಾಗೂ ಪಂಜಾಬ್‍ನಲ್ಲಿ ಆಕೆಯ ಅಜ್ಜಿ-ತಾತ ಇದ್ದಾರೆ ಎಂದು ಹೇಳಿದ್ದಾರೆ.

    ಸೌಮ್ಯ ಸಾವಿನಿಂದ ಮನನೊಂದ ಗಾಯಕ ಮಿಕಾ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಆಕೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ನಮ್ಮ ಪ್ರೀತಿಯ ಸೌಮ್ಯ ನಮ್ಮನ್ನು ಬಿಟ್ಟು ಹೋಗಿದ್ದಾಳೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ. ಆಕೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ನೆನಪುಗಳನ್ನು ಬಿಟ್ಟು ಹೋಗಿದ್ದಾಳೆ. ದೇವರು ಆಕೆಯ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಬರೆಯುವ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಹೆಚ್ಚಿನ ಹಣ ಕಟ್ ಮಾಡ್ತಾರೆ, ಕೇಳಿದ್ರೆ ಉತ್ತರ ಕೊಡಲ್ಲ- ಶೋರೂಂನಲ್ಲಿ ಡಿಶುಂ ಡಿಶುಂ

    ಹೆಚ್ಚಿನ ಹಣ ಕಟ್ ಮಾಡ್ತಾರೆ, ಕೇಳಿದ್ರೆ ಉತ್ತರ ಕೊಡಲ್ಲ- ಶೋರೂಂನಲ್ಲಿ ಡಿಶುಂ ಡಿಶುಂ

    ಬೆಂಗಳೂರು: ಯಾಕಪ್ಪ ಹೆಚ್ಚಿನ ಹಣ ತೆಗೆದುಕೊಂಡಿದ್ದೀಯಾ ಎಂದು ಪ್ರಶ್ನೆ ಮಾಡಿದ ಕಾರಿನ ಮಾಲೀಕರಿಗೆ ನಿಂದಿಸಿದ ಕಾರ್ ಶೋರೊಂ ಮ್ಯಾನೇಜರ್ ಒಬ್ಬರಿಗೆ ಥಳಿಸಿರುವ ಘಟನೆ ಎಚ್‍ಎಎಲ್‍ನ ಕುಂದಲಹಳ್ಳಿಯ ನಂದಿ ಟೊಯೋಟದಲ್ಲಿ ನಡೆದಿದೆ.

    ರೀಟೈಲ್ ಫೈನಾನ್ಸ್ ಇಂಚಾರ್ಜ್ ನಂದಿ ಟೊಯೋಟ ಶೋರೂಂ ನಲ್ಲಿ ಶಿವಕುಮಾರ್ ಕಾರು ಖರೀದಿ ಮಾಡಿದ್ದರು. ಕಾರು ಖರೀದಿ ಮಾಡಿ ಒಂದು ವರ್ಷದ ಬಳಿಕ ತನ್ನ ಸ್ನೇಹಿತ ಪುನಿತ್‍ನ ಜೊತೆಯಲ್ಲಿ ನಂದಿ ಟೊಯೋಟ ಶೋರೂಂಗೆ ಹೋಗಿದ್ದಾರೆ. ಸವಿರ್ಸ್‍ಗೆ ಕಾರನ್ನು ಕೊಟ್ಟು ಒಂದು ದಿನದ ಬಳಿಕ ಕಾರನ್ನು ವಾಪಸ್ ಪಡೆಯಲು ಬಂದಿದ್ದಾರೆ. ಆಗ ಶೋರೂಂ ಅವರು ಬಿಲ್ ಅನ್ನು ಕೊಟ್ಟಿದ್ದಾರೆ. ಆದರೆ ಮೊದಲು ಹೇಳಿದ ಬಿಲ್‍ನ ಮೊತ್ತವೇ ಬೇರೆ, ಬಳಿಕ ಹೆಚ್ಚಾಗಿ ಪ್ರೊಸೆಸಿಂಗ್ ಫೀ ಎಂದು ಬರೆದು ಜಾಸ್ತಿ ಹಣ ಕೇಳಿದ್ದಾರೆ.

    ಪ್ರೊಷೆಸಿಂಗ್ ಫೀ ಬಗ್ಗೆ ಶೋ ರೂಂನ ಮ್ಯಾನೇಜರ್ ನ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಈ ಸಮಯದಲ್ಲಿ ಮ್ಯಾನೇಜರ್ ಗುರುನಾಥ್, ಶಿವಕುಮಾರ್ ಮತ್ತು ಪುನೀತ್‍ಗೆ ಕೊಲೆ ಬೆದರಿಕೆ ಹಾಕಿದ್ದು, ಅಲ್ಲದೇ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಪುನಿತ್ ಮತ್ತು ಶಿವಕುಮಾರ್ ಮ್ಯಾನೇಜರ್ ಗುರುನಾಥ್‍ಗೆ ಚೆನ್ನಾಗಿ ಥಳಿಸಿದ್ದು, ಗಲಾಟೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ಎಟಿಎಂ ಒಡೆದು ಹಣ ದೋಚಲು ಖದೀಮರ ಸ್ಕೆಚ್ – ಹೈದರಾಬಾದಿನಲ್ಲಿ ಅಲರ್ಟ್

    ಚಿಕ್ಕಬಳ್ಳಾಪುರದಲ್ಲಿ ಎಟಿಎಂ ಒಡೆದು ಹಣ ದೋಚಲು ಖದೀಮರ ಸ್ಕೆಚ್ – ಹೈದರಾಬಾದಿನಲ್ಲಿ ಅಲರ್ಟ್

    – ಕಳ್ಳರನ್ನು ರೆಡ್ ಹ್ಯಾಂಡಾಗಿ ಹಿಡಿದ ಮ್ಯಾನೇಜರ್

    ಚಿಕ್ಕಬಳ್ಳಾಪುರ: ಎಟಿಎಂ ಒಡೆದು ಹಣ ದೋಚಲು ಯತ್ನಿಸಿದ ಇಬ್ಬರು ಖದೀಮರು ರೆಡ್ ಹ್ಯಾಂಡಾಗಿ ಮ್ಯಾನೇಜರ್ ಕೈಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೊಟೆ ಕ್ರಾಸ್‍ನಲ್ಲಿ ನಡೆದಿದೆ.

    ಜಂಗಮಕೋಟೆ ಕ್ರಾಸ್‍ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಸೆಂಟರ್‍ಗೆ ರಾತ್ರಿ 10.30ರ ವೇಳೆ ನುಗ್ಗಿದ ಖದೀಮರು, ಮೊದಲು ಸಿಸಿಟಿವಿ ಒಡೆದು ಹಾಕಿ, ತದನಂತರ ಎಟಿಎಂ ಒಡೆದು ಹಣ ದೋಚಲು ಪ್ರಯತ್ನಿಸಿದ್ದರು. ಆದರೆ ಖದೀಮರ ಕೃತ್ಯ ದೂರದ ಹೈದರಾಬಾದಿನಲ್ಲಿ ಮಾನಿಟರಿಂಗ್ ಮಾಡುತ್ತಿದ್ದ ಬ್ಯಾಂಕ್‍ನ ಮಾನಿಟಿರಿಂಗ್ ಡಿಪಾರ್ಟಮೆಂಟ್‍ಗೆ ತಿಳಿದಿದ್ದು, ಮಾಹಿತಿ ಸಿಕ್ಕಿ ಕೂಡಲೇ ಸ್ಥಳೀಯ ಬ್ಯಾಂಕಿನ ಮ್ಯಾನೇಜರ್ ಸೌರಬ್ ಸಿನ್ಹಾರಿಗೆ ತಿಳಿಸಲಾಯಿತು.

    ಕೂಡಲೇ ರಾತ್ರಿ 11 ಗಂಟೆ ಸುಮಾರಿಗೆ ಎಟಿಎಂ ಬಳಿ ಬಂದು ದೂರದಿಂದ ನೋಡಿದ ಮ್ಯಾನೇಜರಿಗೆ ಇಬ್ಬರು ಖದೀಮರು ಮುಖಕ್ಕೆ ಮಾಸ್ಕ್ ಧರಿಸಿ ಎಟಿಎಂ ಒಡೆಯುತ್ತಿರುವ ಶಬ್ದ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಮ್ಯಾನೇಜರ್ ಸ್ಥಳೀಯರ ಸಹಾಯ ಪಡೆದು ಇಬ್ಬರು ಖದೀಮರನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

    ಬಂಧಿತರು ಬೆಂಗಳೂರು ಮೂಲದ ಮಹಮದ್ ಇರ್ಫಾನ್ ಖಾನ್ ಹಾಗೂ ಶಾಬಾಜ್ ಖಾನ್ ಎಂದು ಗುರುತಿಸಲಾಗಿದೆ. ಸದ್ಯ ಬಂಧಿತರನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.