Tag: ಮ್ಯಾನೆಜರ್

  • ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್ ಇಲ್ಲದ್ದಕ್ಕೆ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್

    ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್ ಇಲ್ಲದ್ದಕ್ಕೆ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್

    – ಪಿಸ್ತೂಲು ತೋರಿಸಿ ಅತ್ಯಾಚಾರ

    ಜೈಪುರ್ : ಸ್ಟಾರ್ ಹೋಟೆಲ್‍ವೊಂದರಲ್ಲಿ ತಂಗಿದ್ದ ಐವರು ಹೋಟೆಲ್ ಮಹಿಳಾ ಸಿಬ್ಬಂದಿಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.

    ಆರೋಪಿಗಳನ್ನು ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೀರ್ ಮತ್ತು ಪ್ರಿನ್ಸ್ ತಿವಾರಿ ಎಂದು ಗುರುತಿಸಲಾಗಿದೆ. ಐವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಭಯಾನಕ ಸತ್ಯವನ್ನು ಆರೋಪಿಗಳು ಪೊಲೀಸರ ಎದುರು ಬಾಯಿಬಿಟ್ಟಿದ್ದಾರೆ.

    ಈ ಐವರು ಆರೋಪಿಗಳು ತ್ರಿಸ್ಟಾರ್ ಹೋಟೆಲ್‍ವೊಂದಕ್ಕೆ ಬಂದು ಉಳಿದಿದ್ದಾರೆ. ರೂಮ್ ಕೀಯನ್ನು ತೆಗೆದುಕೊಂಡು ರೂಂಗೆ ಹೋಗಿದ್ದಾರೆ. ಕೆಲವೇ ಕ್ಷಣದಲ್ಲಿ ಮತ್ತೆ ಬಂದು ಸೆಕ್ಸ್ ವರ್ಕರ್‍ಗಳನ್ನು ರೂಮ್‍ಗೆ ಕಳುಹಿಸುವಂತೆ ಹೇಳಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದಾರೆ.

    ಸಿಟ್ಟಿಗೆದ್ದ ಆರೋಪಿಗಳು ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆ ಕಡೆಗೆ ಹೋಗಿದ್ದಾರೆ. ಇಬ್ಬರು ಒಳಗೆ ಹೋಗಿದ್ದಾರೆ. ಮೂವರು ಹೊರಗೆ ಕಾವಲು ಕಾಯಲು ನಿಂತಿದ್ದಾರೆ. ಒಳಗೆ ಹೋದ ಆರೋಪಿಗಳು ಮಹಿಳಾ ಸಿಬ್ಬಂದಿಗೆ ಪಿಸ್ತೂಲು ತೋರಿಸಿ, ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ.

    ಕೂಡಲೇ ಎಚ್ಚೆತ್ತ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರ ವಿಶೇಷ ತಂಡ ಸ್ಥಳಕ್ಕೆ ಬಂದು ಮಹಿಳಾ ಸಿಬ್ಬಂದಿಯನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಐವರು ಒಬ್ಬ ಬಿಸಿನೆಸ್‍ಮ್ಯಾನ್‍ನನ್ನು ಕೊಲೆ ಮಾಡುವ ಉದ್ದೇಶದಿಂದ ಹೋಟೆಲ್‍ಗೆ ಬಂದು ಉಳಿದುಕೊಂಡಿದ್ದರು. ಇವರ ಟಾರ್ಗೆಟ್‍ನಲ್ಲಿರುವ ಬಿಸಿನೆಸ್ ಮ್ಯಾನ್‍ಗೆ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಕೊಲೆ ಮಾಡುವವರಾಗಿದ್ದರು ಎಂದು ತಿಳಿದು ಬಂದಿದೆ. ಈ ಐವರು ಆರೋಪಿಗಳಲ್ಲಿ ಒಬ್ಬನಾದ ನರೇಶ್ ಈಗಾಗಲೇ ಒಂದು ಕೊಲೆ ಆರೋಪವನ್ನು ಹೊತ್ತಿದ್ದು, ಪೆರೋಲ್ ಮೇಲೆ ಜೈಲಿನಿಂದ ಹೊರಗಡೆ ಬಂದಿದ್ದ.

  • ಮುಟ್ಟು, ಸೆಕ್ಸ್ ಬಗ್ಗೆ ಮಾತಾಡಿ ಕಿರುಕುಳ ನೀಡ್ತಿದ್ದ ಕಂಪೆನಿ ಮ್ಯಾನೆಜರ್ ಅರೆಸ್ಟ್!

    ಮುಟ್ಟು, ಸೆಕ್ಸ್ ಬಗ್ಗೆ ಮಾತಾಡಿ ಕಿರುಕುಳ ನೀಡ್ತಿದ್ದ ಕಂಪೆನಿ ಮ್ಯಾನೆಜರ್ ಅರೆಸ್ಟ್!

    ನವದೆಹಲಿ: 18ರ ವರ್ಷದ ಯುವತಿ ಬಳಿ ಮುಟ್ಟು ಹಾಗೂ ಸೆಕ್ಸ್ ಬಗ್ಗೆ ಮಾತನಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದ ದೆಹಲಿಯ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಯುವತಿ ಉತ್ತರ ದೆಹಲಿಯ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದಳು. ಯುವತಿ ಏಪ್ರೆಲ್ ತಿಂಗಳಿನಲ್ಲಿ ಇಂಟರ್ನ್‍ಶಿಪ್‍ಗಾಗಿ ಕಂಪೆನಿಗೆ ಸೇರಿದ್ದಳು. ಆಗ ಅಲ್ಲಿನ ಮ್ಯಾನೆಜರ್ ಆಕೆ ಜೊತೆ ಮುಟ್ಟು ಹಾಗೂ ಸೆಕ್ಸ್ ಬಗ್ಗೆ ಮಾತನಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದನು.

    ನಾನು 2015ರಿಂದ ಆಶ್ರಯ ಮನೆಯಲೇ ವಾಸಿಸುತ್ತಿದ್ದೇನೆ. ನನ್ನ ಕೇರ್ ಟೇಕರ್ ನನಗೆ ಇಂಟರ್ನ್‍ಶಿಪ್‍ಗಾಗಿ ಕಂಪೆನಿಗೆ ಕಳುಹಿಸಿದ್ದರು. ಆದರೆ ಆ ಕಂಪೆನಿಯಲ್ಲಿ ಮ್ಯಾನೆಜರ್ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದನು. ಮುಟ್ಟು ಹಾಗೂ ಸೆಕ್ಸ್ ಬಗ್ಗೆ ಮಾತನಾಡುತ್ತಿದ್ದ. ಹಲವು ಬಾರಿ ಆತ ನನ್ನ ಹಿಬ್ಬಂದಿಗೆ ಹೊಡೆಯುತ್ತಿದ್ದನು ಎಂದು ಯುವತಿ ದೂರಿದ್ದಾಳೆ.

    ನನ್ನ ಕೆಲಸ ಎಲ್ಲಿ ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ನಾನು ಈ ಬಗ್ಗೆ ದೂರು ನೀಡಿರಲಿಲ್ಲ. ಆದರೆ ಆತ ಹೆಚ್ಚು ಕಿರುಕುಳ ನೀಡಲು ಶುರು ಮಾಡಿದ್ದಾಗ ನಾನು ನನ್ನ ಸ್ನೇಹಿತರ ಬಳಿ ಹಾಗೂ ಕೌನ್ಸಿಲರ್ ಬಳಿ ಹೇಳಿದೆ. ಆಗ ಅವರು ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಈ ಘಟನೆ ನಡೆಯುವಾಗ ಯುವತಿ ಅಪ್ರಾಪ್ತೆಯಾಗಿದ್ದಳು. ಹಾಗಾಗಿ ನಾವು ಮ್ಯಾನೆಜರ್ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಆ ಮ್ಯಾನೆಜರ್ ನನ್ನು ನಾವು ಬಂಧಿಸಿದ್ದೇವೆ ಎಂದು ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv