Tag: ಮ್ಯಾಟ್ರಿಮೋನಿಯಲ್

  • ವರದಕ್ಷಿಣೆಗಾಗಿ ಮದುವೆಯಾಗಿ ಹಣ ಸಿಕ್ಕ ಮೇಲೆ ಮಹಿಳೆಗೆ ಮೋಸ ಮಾಡಿ ಪರಾರಿಯಾಗ್ತಿದ್ದ ವ್ಯಕ್ತಿ ಅರೆಸ್ಟ್

    ವರದಕ್ಷಿಣೆಗಾಗಿ ಮದುವೆಯಾಗಿ ಹಣ ಸಿಕ್ಕ ಮೇಲೆ ಮಹಿಳೆಗೆ ಮೋಸ ಮಾಡಿ ಪರಾರಿಯಾಗ್ತಿದ್ದ ವ್ಯಕ್ತಿ ಅರೆಸ್ಟ್

    ಲಕ್ನೋ: ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ (Matrimonial Site) ನಕಲಿ ಪ್ರೊಪೈಲ್‍ಗಳನ್ನು ಸೃಷ್ಟಿಸಿ ವರದಕ್ಷಿಣೆಗಾಗಿ (Dowry) ಮಹಿಳೆಯರನ್ನು ಬಲೆಗೆ ಬೀಳಿಸಿ ನಂತರ ಅವರನ್ನು ವಂಚಿಸುತ್ತಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಸಂಜಯ್ ಸಿಂಗ್ ಅಲಿಯಾಸ್ ಹರಿಓಂ ದುಬೆ (38) ಬಂಧಿತ ವ್ಯಕ್ತಿ. ಈತ ಮೂಲತಃ ಬಿಹಾರನವನಾಗಿದ್ದು, ಶಾದಿ ಡಾಟ್ ಕಾಮ್‍ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ತಾನು ಎಂಜಿನಿಯರ್ ಎಂದು ಹೇಳಿಕೊಂಡಿದ್ದ. ಹೀಗೆ ಅನೇಕರನ್ನು ಮದುವೆ ಆಗಿದ್ದ. ಅದಾದ ಬಳಿಕ ವರದಕ್ಷಿಣೆಯಾಗಿ ಕಾರು, ನಗದು (Money), ಆಭರಣಗಳನ್ನು ಪಡೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ. ಹೀಗೆ ಅನೇಕರಿಗೆ ಮಾಡಿದ್ದ.  ಅದಾದ ಬಳಿಕ ತಲೆ ಮರೆಸಿಕೊಂಡಿದ್ದ.

    ಘಟನೆಗೆ ಸಂಬಂಧಿಸಿ ಪ್ರತಾಪಘಢ ನಿವಾಸಿ ಮಹಿಳೆಯೊಬ್ಬರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸಂಜಯ್‌ನನ್ನು ಭೇಟಿಯಾಗಿದ್ದೆ. ನಂತರ ಅವನನ್ನೆ ಮದುವೆಯಾದೆ. ಆದರೆ ಮದುವೆಯಾದ ಕೂಡಲೇ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ ವರದಕ್ಷಿಣೆಯನ್ನು ನೀಡಲಾಗಿತ್ತು.

    ಅದಾದ ಬಳಿಕ ಸಂಜಯ್ ತನ್ನನ್ನು ಬಿಹಾರಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾಗ ಆತ ವರದಕ್ಷಿಣೆಯಾಗಿ ನೀಡಿದ್ದ 1 ಲಕ್ಷ ರೂ. ನಗದು, ಚಿನ್ನಾಭರಣ ಹಾಗೂ ಕಾರಿನೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ ಈಗಾಗಲೇ ಸಂಜಯ್‍ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಲಕ್ನೋ ಪೊಲೀಸರು ಆಶಿಯಾನಾ ಅಂಡರ್‌ಪಾಸ್‍ನಲ್ಲಿ ಆರೋಪಿ ಸಂಜಯ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    Live Tv
    [brid partner=56869869 player=32851 video=960834 autoplay=true]

  • ಮೂರನೇ ಮದ್ವೆಯಾಗಲು ಹೊರಟ ಪತಿಗೆ ಗೂಸ ಕೊಟ್ಟ ಪತ್ನಿಯರು

    ಮೂರನೇ ಮದ್ವೆಯಾಗಲು ಹೊರಟ ಪತಿಗೆ ಗೂಸ ಕೊಟ್ಟ ಪತ್ನಿಯರು

    ಚೆನ್ನೈ: ಮೂರನೇ ಮದುವೆಯಾಗಲು ಹೋದ 26 ವರ್ಷದ ಗಂಡನನ್ನು ಹಿಡಿದು ಪತ್ನಿಯರಿಬ್ಬರು ಥಳಿಸಿರುವ ಘಟನೆ ತೆಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿದೆ.

    2016 ರಲ್ಲಿ ಮೊದಲನೇ ಮದುವೆಯಾದ ಈತ ಮದುವೆ ನಂತರ ತನ್ನ ಮೊದಲ ಹೆಂಡತಿಗೆ ಹೊಡೆಯುವುದು. ಕೆಟ್ಟ ಪದಗಳಿಂದ ನಿಂದಿಸುವುದನ್ನು ಮಾಡುತ್ತಿದ್ದನು. ದಿನ ಪತಿ ಕೊಡುತ್ತಿದ್ದ ಚಿತ್ರ ಹಿಂಸೆಯನ್ನು ಸಹಿಸಲಾಗಿದೆ ಆಕೆ ಅವನನ್ನು ಬಿಟ್ಟು ತನ್ನ ತವರು ಮನೆ ಸೇರಿದ್ದಳು.

    ಮೊದಲ ಹೆಂಡತಿ ಪೋಷಕರ ಮನೆ ಸೇರಿದ ನಂತರ 2019 ರಲ್ಲಿ ನನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಆಗಲೇ ಮದುವೆಯಾಗಿ ವಿಚ್ಛೇದವಾಗಿದ್ದ 26 ವರ್ಷದ ಯುವತಿಯನ್ನು ಮ್ಯಾಟ್ರಿಮೋನಿಯಲ್ ಭೇಟಿ ಆಗಿ ವಿವಾಹವಾಗಿದ್ದಾನೆ. ನಂತರ ಎರಡನೇ ಹೆಂಡತಿಗೂ ದಿನ ವರದಕ್ಷಿಣೆ ವಿಚಾರವಾಗಿ ನಿಂದಿಸುವುದು ಮತ್ತು ಹೊಡೆಯುವುದು ಮಾಡಿದ್ದಾನೆ. ಇದರಿಂದ ಬೇಸತ್ತ ಯುವತಿ ಆತನನ್ನು ಬಿಟ್ಟು ಆಕೆಯೂ ಹೆತ್ತವರ ಮನೆ ಸೇರಿದ್ದಾಳೆ.

    ಕಳೆದ ವಾರ ಈ ಪತಿರಾಯ ಮೂರನೇ ಮದುವೆಯಾಗಲು ಮ್ಯಾಟ್ರಿಮೋನಿಯಲ್‍ನಲ್ಲಿ ಯುವತಿಯನ್ನು ಹುಡುಕುತ್ತಿದ್ದಾನೆ ಎಂಬ ವಿಚಾರ ಈ ಇಬ್ಬರು ಹೆಂಡತಿಯರಿಗೆ ತಿಳಿದು ಬಂದಿದೆ. ಈ ವಿಚಾರವಾಗಿ ಪತಿಯನ್ನು ಭೇಟಿಯಾಗಲು ಇಬ್ಬರು ಅವನು ಕೆಲಸ ಮಾಡುತ್ತಿದ್ದ ಕೊಯಮತ್ತೂರಿನ ರಾಸಿಪಾಲಯಂನ ಅವನ ಕಂಪನಿ ಬಳಿ ಬಂದಿದ್ದಾರೆ. ಆದರೆ ಆ ಕಂಪನಿಯವರು ಅವರಿಗೆ ಒಳಗೆ ಹೋಗಲು ಅನುಮತಿ ನೀಡಿಲ್ಲ.

    ಇದರಿಂದ ಕೋಪಗೊಂಡ ಪತ್ನಿಯರು ಕಂಪನಿಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಂತರ ಕಂಪನಿಯಿಂದ ಹೊರಬಂದ ಪತಿಯನ್ನು ಗೇಟಿನ ಬಳಿ ಹಿಡಿದುಕೊಂಡು ಇಬ್ಬರು ಥಳಿಸಿದ್ದಾರೆ. ಈ ಸಂಬಂಧ ಇಬ್ಬರು ಮಾಜಿ ಪತ್ನಿಯರು ತಮ್ಮ ಮಾಜಿ ಗಂಡನ ಮೇಲೆ ಸುಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

    ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

    ಬೆಂಗಳೂರು: ಬಾಹುಬಲಿ ಭಾಗ- 2 ರಿಲೀಸ್ ಆದ ಬಳಿಕ ಡಾರ್ಲಿಂಗ್ ಪ್ರಭಾಸ್ ಯಾವಾಗ ಮದುವೆ ಆಗ್ತಾರೆ ಅನ್ನೋದೇ ದೊಡ್ಡ ಸುದ್ದಿಯಾಗ್ಬಿಟ್ಟಿದೆ. ಇತ್ತ ಬಾಹುಬಲಿಗೊಂದು ಹುಡುಗಿ ಹುಡುಕಿಕೊಡಿ ಅಂತಾ ರಾಣಾ ದಗ್ಗುಬಾಟಿ ಮ್ಯಾಟ್ರಿಮೋನಿಯಲ್ ಜಾಹೀರಾತು ಕೊಟ್ಟಿದ್ದಾರೆ.

    36 ವರ್ಷದ ಗೌರವಾನ್ವಿತ ಕುಟುಂಬದ ಸೇನಾನಾಯಕ. ಮನೆ ಕೆಲಸದಲ್ಲಿ ಎಲ್ಲಾ ರೀತಿಯ ಸಹಾಯ ಮಾಡುತ್ತಾನೆ. ಮದುವೆಯ ಸಂಬಂಧ ಕಂಡುಬಂದರೆ ಬೆಟ್ಟವನ್ನೂ ಹತ್ತುವ ಸಮರ್ಥ. ಮೇಕ್ ಅಪ್ ಮಾಡುವುದು ಚೆನ್ನಾಗಿ ಗೊತ್ತು. ವಧುವಿಗೂ ಮೇಕ್ ಅಪ್ ಮಾಡಬಲ್ಲ ಎಂದು ಗೆಳೆಯನ ಗುಣಗಾನ ಮಾಡಿದ್ದಾರೆ.


    ವರ ಗುಡ್ಡ, ಬೆಟ್ಟ ಹತ್ತಿ ಓಡಿ ಬರುವಷ್ಟು ವಧುವಿಗೆ ಸೌಂದರ್ಯವಿರಬೇಕು. ಶತ್ರುಗಳನ್ನು ಹೊಡೆದೋಡಿಸುವ ಸೇನಾ ಸಾಮರ್ಥ್ಯವಿರಬೇಕು. ತನ್ನ ಅತ್ತೆ ವನವಾಸಕ್ಕೆ ಕಳಿಸಿದ್ರೂ ಆಕೆಯನ್ನ ಗೌರವಿಸಬೇಕು. ಮನೆಗೆಲಸದ ಜತೆಗೆ ಮಿಲಿಟರಿ ತರಬೇತಿ ಹೊಂದಿರಬೇಕು ಎಂದು ಬೇಡಿಕೆಗಳ ಪಟ್ಟಿ ಮಾಡಿದ್ದಾರೆ. ಈ ಜಾಹೀರಾತನ್ನು ರಾಣಾ 2016ರಲ್ಲೇ ಪೋಸ್ಟ್ ಮಾಡಿದ್ದಾರೆ.

    ಈ ಮೂಲಕ ಆನ್ ಸ್ಕ್ರೀನ್ ನಲ್ಲಿ ಎದುರು ಬದುರಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿ ಪ್ರೇಕ್ಷಕರನ್ನು ಸೂರೆ ಮಾಡಿದ್ದ ಬಾಹುಬಲಿ ನಟರಾದ ಪ್ರಭಾಸ್ ಮತ್ತು ರಾಣಾ ದಗ್ಗುಬಾತಿ ಆಫ್ ಸ್ಕ್ರೀನ್ ನಲ್ಲಿ ಬೆಸ್ಟ್ ಫ್ರೆಂಡ್ಸ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ ರಾಣಾ ನಿಜ ಜೀವನದಲ್ಲಿ ಪ್ರಭಾಸ್ ಗೊಂದು ಹೆಣ್ಣು ಕೊಡಿ ಎಂದು ಟ್ವಿಟರ್ ನಲ್ಲಿ ತಮಾಷೆಯ ಜಾಹೀರಾತು ನೀಡಿರುವುದನ್ನು ಓದಿ ಅಭಿಮಾನಿಗಳು ನಗುತ್ತಿದ್ದಾರೆ.