Tag: ಮ್ಯಾಗಿ

  • ಹುಡುಗರ ಸಾಮರ್ಥ್ಯನ  2 ನಿಮಿಷದ ಮ್ಯಾಗಿಗೆ ಹೋಲಿಸಿದ್ದ ನಟಿಗೆ, ತೆಲುಗು ನಟ ಅಡಿವಿ ಶೇಷ್ ಕೊಟ್ಟ ಟಾಂಗ್ ಇನ್ನೂ ಭಯಂಕರ

    ಹುಡುಗರ ಸಾಮರ್ಥ್ಯನ 2 ನಿಮಿಷದ ಮ್ಯಾಗಿಗೆ ಹೋಲಿಸಿದ್ದ ನಟಿಗೆ, ತೆಲುಗು ನಟ ಅಡಿವಿ ಶೇಷ್ ಕೊಟ್ಟ ಟಾಂಗ್ ಇನ್ನೂ ಭಯಂಕರ

    ನ್ನಡದಲ್ಲಿ ಸೂರ್ಯಕಾಂತಿ ಸೇರಿದಂತೆ ಹಲವು ಸಿನಿಮಾಗಳನ್ನು ಮಾಡಿರುವ ನಟಿ ರೆಜಿನಾ (Regina) ಮೊನ್ನೆಯಷ್ಟೇ ತಮ್ಮ ಸಿನಿಮಾದ ಪ್ರಚಾರದಲ್ಲಿ ಪೋಲಿ ತಮಾಷೆ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೆಜಿನಾ ‘ ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷದಲ್ಲೇ ಮುಗಿಯತ್ತೆ’ ಎಂದು ಹೇಳಿದ್ದರು. ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅದರಲ್ಲೂ ಪಡ್ಡೆಗಳು ಈ ವಿಡಿಯೋವನ್ನು ಟ್ರೋಲ್ ಕೂಡ ಮಾಡಿದ್ದರು.

    ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತೆಲುಗು ನಟ ಅಡಿವಿ ಶೇಷ್ (Adivi Shesh) ಪ್ರತ್ಯುತ್ತರ ಕೊಟ್ಟಿದ್ದು, ಅದು ಇನ್ನೂ ಅಚ್ಚರಿ ಮೂಡಿಸುವಂತಿದೆ. ಹುಡುಗರ ಸಾಮರ್ಥ್ಯವನ್ನು 2 ನಿಮಿಷದಲ್ಲೇ ಮುಗಿಯುವ ಮ್ಯಾಗಿಗೆ ರೆಜಿನಾ ಹೋಲಿಸಿದರೆ, ಅಡಿವಿ ಶೇಷ್ ‘ನನಗೆ ಸ್ಟಾಮಿನಾ ಜಾಸ್ತಿ’ ಎಂದು ಹೇಳಿದ್ದಾರೆ. ಇವರ ಮಾತು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ. ಅಲ್ಲದೇ, ರೆಜಿನಾಗೆ ಟ್ಯಾಗ್ ಮಾಡುವ ಮೂಲಕ ಟ್ರೋಲ್ ಮಾಡಲಾಗುತ್ತಿದೆ. ಇದನ್ನೂ ಓದಿ:ಚಂದನವನದ ‘ಐಶೂ’ ಅಮೂಲ್ಯ ಬರ್ತ್‌ಡೇ: ಮತ್ತೆ ಸಿನಿಮಾ ಮಾಡುವಂತೆ ಫ್ಯಾನ್ಸ್ ಮನವಿ

    ರೆಜಿನಾ ನಟನೆಯ ಶಾಕಿನಿ ಡಾಕಿನಿ (Shakini Dakini) ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಚಾರವನ್ನು ಕೋ ಸ್ಟಾರ್ ಜೊತೆ ನಡೆಸಿದ್ದಾರೆ ನಟಿ. ಈ ಸಂದರ್ಭದಲ್ಲಿ ಹಲವು ಟಿವಿ ಸಂದರ್ಶನಗಳಲ್ಲೂ ರೆಜಿನಾ ಮಾತನಾಡಿದ್ದಾರೆ. ಆಗ ನಿರೂಪಕ ‘ 2 ನಿಮಿಷದಲ್ಲಿ ಮ್ಯಾಗಿ (Maggi) ರೆಡಿ ಆಗತ್ತೆ, ಹುಡುಗಿಯರ ಮೇಕಪ್ ಮುಗಿಯಲ್ಲ’ ಎಂದು ಹೇಳುತ್ತಾರೆ. ತಕ್ಷಣವೇ ರೆಜಿನಾ ಕೂಡ ಮ್ಯಾಗಿ ಬಗ್ಗೆ ನನ್ನ ಹತ್ತಿರವೂ ಒಂದು ಜೋಕ್ ಇದೆ ಎಂದು ಹೇಳುತ್ತಾ, ‘ಮ್ಯಾಗಿಗೆ ಹುಡುಗರ ಸಾಮರ್ಥ್ಯವನ್ನು ಹೋಲಿಕೆ ಮಾಡಿ ಹೇಳುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ನ್ನಡದ ‘ಸೂರ್ಯಕಾಂತಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರೆಜಿನಾ ಕಸೆಂದ್ರ (Regina Cassandra), ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಎರಡೇ ಎರಡು ನಿಮಿಷದಲ್ಲಿ ಮುಗಿದು ಹೋಗುವ ಮ್ಯಾಗಿಗೆ ಹೋಲಿಸಿದ್ದಾರೆ. ಹುಡುಗರು ಮತ್ತು ಮ್ಯಾಗಿ ಎರಡೂ ಒಂದೇ, ಎರಡೇ ನಿಮಿಷದಲ್ಲಿ ಮುಗಿದು ಬಿಡುತ್ತೆ ಎಂದು ಜೋಕ್ ಮಾಡುವ ಮೂಲಕ ಟ್ರೋಲ್ ಆಗಿದ್ದಾರೆ. ಈ ಮಾತು ಪಡ್ಡೆಗಳನ್ನು ರೊಚ್ಚಿಗೇಳುವಂತೆ ಮಾಡಿದ್ದು, ರೆಜಿನಾ ಬಗ್ಗೆ ಸಲ್ಲದ ಕಾಮೆಂಟ್‍ಗಳನ್ನು ಬರೆಯುತ್ತಿದ್ದಾರೆ.

    ಸದ್ಯ ರೆಜಿನಾ ಶಾಕಿನಿ ಡಾಕಿನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಕೋ ಸ್ಟಾರ್ ನಿವೇತಾ ಥಾಮಸ್ ಜೊತೆ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ರೆಜಿನಾ ಹುಡುಗರ ಸೆಕ್ಸ್ (Sex) ಸಾಮರ್ಥ್ಯವನ್ನು ಅಳೆದಿದ್ದಾರೆ. ಅದು ಎರಡೇ ನಿಮಿಷದಲ್ಲಿ ಮುಗಿಯುವಂಥದ್ದು ಎಂದು ಹೇಳುವ ಮೂಲಕ ಇಡೀ ಸಂದರ್ಶನದ ಮೂಡ್ ಅನ್ನು ಮತ್ತೊಂದು ದಿಕ್ಕಿಗೆ ತಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಸಂದರ್ಶನದಲ್ಲಿ ನಿರೂಪಕರು ಒಂದು ಜೋಕ್ ಹೇಳ್ತಾ, ಮ್ಯಾಗಿ ಎರಡೇ ನಿಮಷದಲ್ಲಿ ರೆಡಿಯಾದರೂ, ಹುಡುಗಿಯರ ಮೇಕಪ್ ಮಾತ್ರ ಬೇಗ ಆಗುವುದೇ ಇಲ್ಲ ಎಂದು ಹೇಳುತ್ತಾರೆ. ಮ್ಯಾಗಿ (Maggie) ಬಗ್ಗೆ ನನಗೂ ಒಂದು ಜೋಕ್ ಗೊತ್ತು ಎನ್ನುವ ರೆಜಿನಾ, ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿದು ಹೋಗತ್ತೆ, ಹಾಗೆ ಹುಡುಗರದ್ದು (Boys) ಕೂಡ ಎರಡೇ ನಿಮಿಷ ಎಂದು ಜೋಕ್ ಕಟ್ ಮಾಡುತ್ತಾರೆ. ಇದು ನಿರೂಪಕನಿಗೆ ಮೊದ ಮೊದಲು ಗೊತ್ತೇ ಆಗುವುದಿಲ್ಲ. ಅಷ್ಟಕ್ಕೆ ಸುಮ್ಮನಿರದ ರೆಜಿನಾ, ನಿಮಗೆ ಜೋಕ್ ಅರ್ಥ ಆಗಲಿಲ್ಲವಾ? ಅಂತಾರೆ. ತಡವಾಗಿ ಅರ್ಥ ಮಾಡಿಕೊಂಡ ನಿರೂಪಕ, ಅಯ್ಯ.. ಈ ವಿಷಯವೇ ಬೇಡ ಎಂದು ಬೇರೆ ಪ್ರಶ್ನೆ ಮಾಡುತ್ತಾನೆ.

    ರೆಜಿನಾ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ಚೇತನ್ ನಟನೆಯ ‘ಸೂರ್ಯಕಾಂತಿ’ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಚೇತನ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು.

    Live Tv
    [brid partner=56869869 player=32851 video=960834 autoplay=true]

  • ಮ್ಯಾಗಿ, ನೂಡಲ್ಸ್ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ – ಹಾಲಿನ ದರವೂ ಹೆಚ್ಚಳ

    ಮ್ಯಾಗಿ, ನೂಡಲ್ಸ್ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ – ಹಾಲಿನ ದರವೂ ಹೆಚ್ಚಳ

    ನವದೆಹಲಿ: 137 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಹಾಗೂ ಎಲ್‍ಪಿಜಿ ದರ ಏರಿಕೆಯ ಬೆನ್ನಲ್ಲೇ ಇದೀಗ ಪ್ಯಾಕೆಟ್ ಹಾಲಿನ ದರ ಹಾಗೂ ಮ್ಯಾಗಿ ನೂಡಲ್ಸ್‌ಗಳ ಬೆಲೆಯೂ ಏರಿಕೆಯಾಗಿದೆ.

    ಮಾರ್ಚ್ 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ. ಅಂತೆಯೇ ಗೃಹ ಬಳಕೆಯ ಸಿಲಿಂಡರ್ ದರ 50 ರೂ. ಏರಿಕೆಯಾಗಿದೆ. ಈ ಬೆನ್ನಲ್ಲೇ ಸಹಕಾರಿ ಹಾಲು ಒಕ್ಕೂಟಗಳಾದ ಅಮುಲ್, ಮದರ್ ಡೈರಿ ಮತ್ತು ಪರಾಗ್ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದ್ದು, ಪ್ಯಾಕೆಟ್ ಹಾಲಿನ ದರ ಪ್ರತಿ ಲೀಟರ್‌ 2 ರೂ.ಗೆ ಹೆಚ್ಚಿಸಿವೆ. ಮಧ್ಯಪ್ರದೇಶದ ಸಾಂಚಿ ಹಾಲಿನ ಸಹಕಾರಿಯು ಇದೇ ಕ್ರಮವನ್ನು ಅನುಸರಿಸಿದ್ದು, ಪ್ರತಿ ಲೀ. ಹಾಲಿಗೆ 5 ರೂ. ಹೆಚ್ಚಿಸಿದೆ. ಇದನ್ನೂ ಓದಿ: 2 ನಿಮಿಷದಲ್ಲಿ ಮಾಡುವ ಮ್ಯಾಗಿ ಇನ್ಮುಂದೆ ಸಖತ್ ದುಬಾರಿ! 

    ಮ್ಯಾಗಿ – ನೂಡಲ್ಸ್ ಸಹ ದುಬಾರಿ
    ಮ್ಯಾಗಿ ತಯಾರಕ ನೆಸ್ಲೆ ಸಂಸ್ಥೆಯು ಮಾರ್ಚ್ ಆರಂಭದಲ್ಲೇ ಘೋಷಿಸಿದಂತೆ ಮ್ಯಾಗಿ ಮತ್ತು ನೂಡಲ್ಸ್‍ನ ಪ್ರತಿ ಸಣ್ಣ ಪ್ಯಾಕೆಟ್‍ಗಳಿಗೆ 2 ರೂ., ಸಾಧಾರಣ ಹಾಗೂ ದೊಡ್ಡಪ್ಯಾಕ್‍ಗೆ 3 ರೂ.ಗಳನ್ನು ಹೆಚ್ಚಿಸಿದೆ. ಅದೇ ರೀತಿ ನೆಸ್ಕೆಫೆ ಕ್ಲಾಸಿಕ್, ಬ್ರೂ ಮತ್ತು ತಾಜ್ ಮಹಲ್ ಟೀ ಬೆಲೆಯನ್ನೂ ಕೂಡ ಹೆಚ್ಚಿಸಲಾಗಿದೆ.

  • 2 ನಿಮಿಷದಲ್ಲಿ ಮಾಡುವ ಮ್ಯಾಗಿ ಇನ್ಮುಂದೆ ಸಖತ್ ದುಬಾರಿ!

    2 ನಿಮಿಷದಲ್ಲಿ ಮಾಡುವ ಮ್ಯಾಗಿ ಇನ್ಮುಂದೆ ಸಖತ್ ದುಬಾರಿ!

    ನವದೆಹಲಿ: ಈಗಾಗಲೇ ದಿನ ನಿತ್ಯ ಬಳಕೆಯಾಗುವ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಈಗ ಮ್ಯಾಗಿ ಸರದಿಯಾಗಿದೆ. ಮ್ಯಾಗಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಫಟಾಫಟ್ ಅಂತಾ ಮಾಡುವ ಈ ಮ್ಯಾಗಿಯ (Maggi) ಬೆಲೆ ಹೆಚ್ಚಳವಾಗಲಿದೆ ಎನ್ನುವ ಸುದ್ದಿಯೊಂದು ಹೊರ ಬಿದ್ದಿದೆ.

    ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮ್ಯಾಗಿ ಬೆಲೆ ಕೂಡ ಹೆಚ್ಚಳವಾಗಿದೆ. ನೆಸ್ಲೆ (Nestle) ಇಂಡಿಯಾ ಮ್ಯಾಗಿ ಬೆಲೆಯನ್ನು ಶೇ.9ರಿಂದ 16ರಷ್ಟು ಹೆಚ್ಚಿಸಿದೆ. ನೆಸ್ಲೆ ಕಂಪನಿಯು ಹಾಲು ಮತ್ತು ಕಾಫಿ ಪುಡಿಯ ಬೆಲೆಗಳನ್ನು ಕೂಡ ಹೆಚ್ಚಿಸಿದೆ. ಇಷ್ಟು ದಿನ 70 ಗ್ರಾಂ ಮ್ಯಾಗಿ ಪ್ಯಾಕೆಟ್‍ಗೆ 12 ರೂ. ಇದ್ದುದು ಇನ್ನು ಮುಂದೆ 14 ರೂ. ಆಗಲಿದೆ. 140 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್ ಬೆಲೆ 3 ರೂ. ಹೆಚ್ಚಳವಾಗಲಿದೆ. 560 ಗ್ರಾಂ ಮ್ಯಾಗಿ ಪ್ಯಾಕ್‍ಗೆ 96 ರೂ. ಇದ್ದುದು 105 ರೂ. ಆಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಇದನ್ನೂ ಓದಿ: ಮಗು ಹುಟ್ಟಿದ ಸಂಭ್ರಮದ ಮಧ್ಯೆ ಬೇರ್ಪಟ್ಟ ಎಲೋನ್ ಮಸ್ಕ್ ಜೋಡಿ

    ಹೆಚ್‍ಯುಎಲ್ ಬ್ರೂ ಕಾಫಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್‍ನ ಬೆಲೆಯನ್ನು ಶೇ. 3ರಿಂದ 4ರಷ್ಟು ಹೆಚ್ಚಿಸಿದೆ. ನೆಸ್‍ಕೆಫೆ ಕ್ಲಾಸಿಕ್ ಕಾಫಿ ಪುಡಿಯ ಬೆಲೆ ಶೇ. 3.7ರಷ್ಟು ಏರಿಕೆಯಾಗಿದೆ. ಬ್ರೂ ಸಣ್ಣ ಕಾಫಿ ಪ್ಯಾಕೆಟ್‍ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ತಾಜ್ ಮಹಲ್ ಚಹಾದ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ. ಬ್ರೂಕ್ ಬಾಂಡ್‍ನ ಚಹಾ ಪುಡಿಯ ಬೆಲೆಗಳು ಶೇ. 1.5ರಿಂದ 14ಕ್ಕೆ ಏರಿಕೆಯಾಗಿವೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಕಂಪನಿಗಳು ಕಾಫಿ, ಟೀ ಪುಡಿಯ ಬೆಲೆಯನ್ನು ಹೆಚ್ಚಿಸಿವೆ. ಇದನ್ನೂ ಓದಿ: ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಿ- ನೆಟ್ಟಿಗರ ಆಗ್ರಹ

    ಮ್ಯಾಗಿ, ಕಾಫಿ, ಟೀ (ಚಹಾ) ಬೆಲೆ ಕೂಡ ಹೆಚ್ಚಳವಾಗಲಿದೆ. ಹಿಂದೂಸ್ತಾನ್ ಯೂನಿಲಿವರ್ (ಹೆಚ್‍ಯುಎಲ್) ಮತ್ತು ನೆಸ್ಲೆ ತಮ್ಮ ಅನೇಕ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ಮ್ಯಾಗಿ, ಕಾಫಿ, ಟೀ ಪುಡಿಯ ಬೆಲೆಯೂ ಶೇ. 9ರಿಂದ 16ರಷ್ಟು ಹೆಚ್ಚಳವಾಗಲಿದೆ.

  • ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿ – ವೀಡಿಯೋ ವೈರಲ್

    ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿ – ವೀಡಿಯೋ ವೈರಲ್

    ಲಕ್ನೋ: ಗಾಜಿಯಾಬಾದ್ ಬೀದಿ ಬದಿ ವ್ಯಾಪಾರಿಯೊಬ್ಬ ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿಸಿಸುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    A post shared by Hanshul Anand (@bhukkad_dilli_ke)

    ಕೆಲವು ಜನರು ಮ್ಯಾಗಿಯನ್ನು ಸಾಕಷ್ಟು ತರಕಾರಿಗಳೊಂದಿಗೆ ಇಷ್ಟಪಟ್ಟರೆ, ಇತರರು ಇದರ ಸೂಪ್ ಅನ್ನು ಇಷ್ಟಪಡುತ್ತಾರೆ. ಆದಾಗ್ಯೂ ಕಳೆದ ಕೆಲವು ತಿಂಗಳುಗಳಲ್ಲಿ ನಾವು ಸಾಮಾಜಿಕ ಜಾಲತಾಣದಲ್ಲಿ ತಿಂಡಿಯ ಬಗ್ಗೆ ಸಾಕಷ್ಟು ವಿವಿಧ ಪ್ರಯೋಗಗಳನ್ನು ನೋಡಿದ್ದೇವೆ. ಫ್ಯಾಂಟಾ ಮ್ಯಾಗಿಯಿಂದ ಮ್ಯಾಗಿ ಮಿಲ್ಕ್‌ ಶೇಕ್‌ನವರೆಗೂ ಕೆಲವು ಸೂಪರ್ ಪ್ರಯೋಗಗಳು ನಡೆದಿವೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಬೀದಿ ಬದಿ ವ್ಯಾಪಾರಿ ಪ್ಯಾನ್‍ಗೆ ಸ್ವಲ್ಪ ಎಣ್ಣೆ ಮತ್ತು ತರಕಾರಿಗಳನ್ನು ಸೇರಿಸಿದ್ದಾನೆ. ಮುಂದೆ, ಅವನು ಸ್ವಲ್ಪ ಉಪ್ಪು ಮತ್ತು ಅದಕ್ಕೆ ಬೇಕಾದ ಕೆಲವು ಮಸಾಲೆಗಳನ್ನು ಸೇರಿಸಿದ್ದು, ಈ ಮಿಶ್ರಣಕ್ಕೆ ಕೋಕಾ-ಕೋಲಾದ ಸಣ್ಣ ಬಾಟಲಿಯನ್ನು ಹಾಕಿದ್ದಾನೆ. ನಂತರ ಅವನು ನೂಡಲ್ಸ್ ಮತ್ತು ಮ್ಯಾಗಿ ಮಸಾಲವನ್ನು ಸೇರಿಸಿದ್ದು, ಈ ಮಿಶ್ರಣವನ್ನು ಮತ್ತಷ್ಟು ಬೇಯಿಸಲು ಪ್ಯಾನ್ ಅನ್ನು ಮುಚ್ಚಿದ್ದಾನೆ. ಇದನ್ನೂ ಓದಿ:  ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವು 2 ಲಕ್ಷಕ್ಕೂ ಅಧಿಕ ವಿಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೋಗೆ ಕೋಕಾ-ಕೋಲಾದೊಂದಿಗೆ ಮ್ಯಾಗಿ ಗಾಜಿಯಾಬಾದ್‍ನ ಸಾಗರ್ ಪಿಜ್ಜಾ ಅಂಗಡಿಯಲ್ಲಿ ಲಭ್ಯವಿದೆ ಎಂದು ಬರೆದುಕೊಂಡಿದ್ದು, ಸಾಕಷ್ಟು ನೆಟ್ಟಿಗರು ಕಾಮೆಂಟ್ ಬಾಕ್ಸ್ ಮೂಲಕ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

  • ಮ್ಯಾಗಿಯಿಂದ ಲಡ್ಡು – ಫೋಟೋ ವೈರಲ್

    ಮ್ಯಾಗಿಯಿಂದ ಲಡ್ಡು – ಫೋಟೋ ವೈರಲ್

    ಮ್ಯಾಗಿ ಬಳಸಿಕೊಂಡು ಹಲವಾರು ರೀತಿಯ ಹೊಸ ಹೊಸ ಅಡುಗೆ ಪ್ರಯೋಗಗಳನ್ನು ಅನೇಕ ಮಂದಿ ಮಾಡಿರುವುದನ್ನು ನೋಡಿದ್ದೇವೆ. ಆದರೆ ಇದೀಗ ಯಾರೋ ಮ್ಯಾಗಿಯಿಂದ ಲಡ್ಡು ತಯಾರಿಸಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಹೌದು, ಇತ್ತೀಚೆಗೆ ಮ್ಯಾಗಿಯಿಂದ ತಯಾರಿಸಿದ ಲಡ್ಡು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ಲಡ್ಡು ನೋಡಲು ಸಿಹಿ ಖಾದ್ಯದಂತೆ ಕಾಣಿಸುತ್ತಿದ್ದು, ಯಾರೋ ಮ್ಯಾಗಿಯಿಂದ ಲಡ್ಡು ತಯರಿಸಿದ್ದಾರೆ ಎಂದು ಟ್ವಿಟ್ಟರ್‍ನಲ್ಲಿ ಕ್ಯಾಪ್ಷನ್ ಹಾಕಿದ್ದಾರೆ.

    ಈ ಮ್ಯಾಗಿ ಲಡ್ಡುಗಳನ್ನು ಬೆಲ್ಲದ ಪಾಕದಿಂದ ಉಂಡೆ ಕಟ್ಟಿದಂತೆ ಕಾಣಿಸುತ್ತಿದ್ದು, ಲಡ್ಡು ಮೇಲೆ ಗೋಡಂಬಿಯನ್ನು ಇಟ್ಟು, ತಟ್ಟೆ ಮೇಲೆ ಇರಿಸಿರುವುದನ್ನು ನೋಡಬಹುದಾಗಿದೆ.

  • ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ನವದೆಹಲಿ: ಮ್ಯಾಗಿ ಅಂದರೆ ಯಾರಿಗಿಷ್ಟ ಇಲ್ಲಾ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮ್ಯಾಗಿ ಎಲ್ಲರಿಗೂ ಅಚ್ಚು-ಮೆಚ್ಚು. 2 ನಿಮಿಷದಲ್ಲಿ ತಯಾರಾಗುವ ಬಿಸಿ ಬಿಸಿಯಾದ ಮ್ಯಾಗಿಯನ್ನು ನೋಡಿದವರು ಯಾರು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಸದ್ಯ ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.

    ನಿಮ್ಮ ನೆಚ್ಚಿನ ಮ್ಯಾಗಿ ಇದೀಗ ಮದುವೆ ಮನೆಯ ಊಟದ ಮೆನು ಲಿಸ್ಟ್‍ಗಳಲ್ಲಿ ಕೂಡ ಒಂದಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ದೇಶದಲ್ಲಿ ಹರಡಿದ್ದಾಗ ಎಷ್ಟೋ ಮಂದಿ ಲಾಕ್ ಡೌನ್ ಸಮಯದಲ್ಲಿ ಮ್ಯಾಗಿಯನ್ನೇ ಆಹಾರವಾಗಿ ಅವಲಂಬಿಸಿದ್ದರು.

    ಇತ್ತೀಚೆಗೆ ಪತ್ರಕರ್ತೆ ಸೌಮ್ಯ ಲೇಖನಿ ಎಂಬವರು ತಮ್ಮ ಸೋದರ ಸಂಬಂಧಿ ವಿವಾಹ ಮಹೋತ್ಸವಕ್ಕೆ ಹೋಗಿದ್ದಾಗ, ಅಲ್ಲಿನ ಫುಡ್ ಕೌಂಟರ್‍ನಲ್ಲಿ ಮ್ಯಾಗಿ ಕೂಡ ಇರುವುದನ್ನು ಕಂಡು ಮೊಬೈಲ್ ನಲ್ಲಿ ಫೋಟೋವನ್ನು ಸೆರೆಹಿಡಿದಿದ್ದಾರೆ. ಅಲ್ಲದೆ ಕ್ಯಾಪ್ಷನ್‍ನಲ್ಲಿ ನನ್ನ ಸೋದರ ಸಂಬಂಧಿ ಯೋಚಿಸಿರುವ ರೀತಿ ಮತ್ತು ಅವರ ಮದುವೆಯಲ್ಲಿ ಮ್ಯಾಗಿ ಕೌಂಟರ್ ಏರ್ಪಡಿಸಿರುವುದಕ್ಕಾಗಿ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇನ್ನೂ ಫೋಟೋದಲ್ಲಿ ಮರದ ರ್ಯಾಕ್‍ಗಳಲ್ಲಿ ಮ್ಯಾಗಿ ಪ್ಯಾಕೆಟ್‍ಗಳನ್ನು ಇಟ್ಟುಕೊಂಡು, ಸ್ವಲ್ಪ ಮ್ಯಾಗಿಯನ್ನು ಒಲೆ ಮೇಲೆ ಬಾಣಸಿಗ ಬೇಯಿಸುತ್ತಿರುವುದನ್ನು ಕಂಡು ಬಂದಿದೆ. ಈ ಫೋಟೋ ಟ್ವೀಟರ್ ನಲ್ಲಿ ವೈರಲ್ ಆಗುತ್ತಿದ್ದಂತೆಯೇ 1 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಗಳು ಬಂದಿದೆ.